Author: AIN Author

ಗದಗ: ಇಂದು ಪ್ಯಾನ್​ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ. ಇವರ ಬರ್ತ್​​ಡೇ ಅಭಿಮಾನಿಗಳು ಲೋಹದ ಕಟೌಟ್ ಹಾಕುವಾಗ ದುರಂತವೊಂದು ನಡೆದು ಹೋಗಿದೆ. ವಿದ್ಯುತ್ ವೈರ್ ತಗುಲಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಅದು ಈ ದಾರುಣ ಘಟನೆ ನಡೆದಿದ್ದು, ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಅನ್ನೋ ಗ್ರಾಮದಲ್ಲಿ. ಸೂರಣಗಿ ಗ್ರಾಮದ ಹನುಮಂತ ಹರಿಜನ್​ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಮೃತ ದುರ್ದೈವಿಗಳು. ಈ ಸುದ್ದಿ ತಿಳಿಯುತ್ತಿದ್ದಂತೆ ರಾಕಿಂಗ್​ ಸ್ಟಾರ್​ ಕೂಡ ವಿದೇಶದಿಂದ ಗದಗಕ್ಕೆ ಭೇಟಿ ನೀಡಿ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಟ ಯಶ್ ಜನ್ಮದಿನ ಆಚರಿಸಲು 25 ಅಡಿ ದೊಡ್ಡ ಲೋಹದ ಕಟೌಟ್ ನಿಲ್ಲಿಸಲು ಹೋಗಿ ಜೀವ ತೆತ್ತಿದ್ದಾರೆ. ಈ ಅತಿಯಾದ ಅಭಿಮಾನದ ಪರಾಕಾಷ್ಠೆ ಜೀವವನ್ನೇ ಬಲಿ ಪಡೆದಿದೆ. ಮೂವರು ಯಶ್​ ಅಭಿಮಾನಿಗಳು ಕೂಲಿ ಕಾರ್ಮಿಕರ ಮಕ್ಕಳು. ಹನುಮಂತಪ್ಪ ಹರಿಜನ್​ಗೆ 21 ವರ್ಷ. ತಂದೆ ಮಜ್ಜೂರಪ್ಪ ಕೂಲಿ ಕಾರ್ಮಿಕ. ಇವರು ನಾಲ್ವರು…

Read More

ಬೆಂಗಳೂರು:- ಕರ್ನಾಟಕದ ಹಲವೆಡೆ ನಾಳೆ ಮಳೆ ಸಾಧ್ಯತೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ನಾಳೆ ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಕೋಲಾರ, ಚಿಕ್ಕಬಳ್ಳಾಪುರ, ವಿಜಯನಗರ, ಮಂಡ್ಯ ಜಿಲ್ಲೆಯಲ್ಲಿ ಇಂದು ಸಾಧಾರಣ ಮಳೆಯಾಗಿದ್ದು, ನಾಳೆಯೂ ಇದು ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರು ನಗರದ ಸುತ್ತಮುತ್ತ ಮೋಡ ಕವಿದ ವಾತಾವರಣ ಇದ್ದು, ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರೀ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದ್ದು, 6.3 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಕಳೆದ ಬಾರಿ 6 ಮಿ.ಮೀ ಮಳೆಯಯಾಗಿತ್ತು. ಅರೆಬಿಕ್ ಸಮುದ್ರದಲ್ಲಿ ಸುಳಿಗಾಳಿ ಬೀಸಿದ ಪರಿಣಾಮ ಇಂದು ಮತ್ತೆ ನಾಳೆ ಹಗುರ ಮಳೆಯಾಗಲಿದೆ. ಈ ತಿಂಗಳು ವಾಡಿಕೆಗಿಂತ ಶೇಕಡ 70ರಷ್ಟು ಹೆಚ್ಚು ಮಳೆ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ 7.3 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು…

Read More

ದಾಸರಹಳ್ಳಿ‌: ಬಿಎಂಟಿಸಿ ಬಸ್ ಹಾಗೂ ಬ್ಯೆಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಟಿ.ದಾಸರಹಳ್ಳಿ‌ಯ ಚಿಕ್ಕಸಂದ್ರ ಬಳಿ ಜರುಗಿದೆ. ಹಿಂಬದಿಯಿಂದ ಬ್ಯೆಕ್ ಸವಾರ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಯಶವಂತಪುರ ಕಡೆ ಹೋಗುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದು ಬಳಿಕ ಬಸ್ ಡ್ರ್ಯೆವರ್ ಗೆ ಅವಾಜ್ ಹಾಕಿದ್ದಾನೆ. ಬ್ಯೆಕ್ ಸವಾರ ರವಿಕಾಂತ್ ಎಂದು ಹೇಳಲಾಗಿದೆ. ಅಲ್ಲದೇ ನಾನು ಲೋಕಲ್ ಎಂದು ಬೈಕ್ ಸವಾರ ಅವಾಜ್ ಹಾಕಿದ್ದಾನೆ. ಬಸ್ ಡ್ರ್ಯೆವರ್ ಕಂಡಕ್ಟರ್ ಜೊತೆಗೆ ಬ್ಯೆಕ್ ಸವಾರ ವಾದ ಮಾಡಿದ್ದಾನೆ. ಇಬ್ಬರ ಗಲಾಟೆಯಿಂದಾಗಿ ಟ್ರಾಪಿಕ್ ಜಾಮ್ ಉಂಟಾಗಿದೆ. ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಹುಬ್ಬಳ್ಳಿ:- ರಾಜಕಾರಣಕ್ಕಾಗಿ ಶ್ರೀರಾಮನನ್ನು ತೆಗೆದುಕೊಳ್ಳುವ ನೀಚ ಬುದ್ದಿ ನಮಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್‌ನವರು ನಿಜವಾದ ಹಿಂದೂಗಳು. ನಾವು ಯಾವತ್ತೂ ಕೂಡ‌ ರಾಜಕಾರಣಕ್ಕೆ ಹಿಂದುತ್ವ ಮತ್ತು ಶ್ರೀರಾಮನನ್ನು ತೆಗೆದುಕೊಂಡು ಬಂದಿಲ್ಲ. ದೇಶದಲ್ಲಿ ಲಕ್ಷಾಂತರ ರಾಮನ ದೇವಸ್ಥಾನಗಳಿವೆ. ಬಿಜೆಪಿಯವರು ಮತಕ್ಕಾಗಿ ಶ್ರೀರಾಮನನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ನವರು ಯಾವತ್ತಿಗೂ ದೇವರನ್ನು ಹಾಗೂ ಹಿಂದುತ್ವವನ್ನು ರಾಜಕಾರಣದಲ್ಲಿ ಬಳಸಿಕೊಂಡಿಲ್ಲ. ಬಿಜೆಪಿಯವರಿಗೆ ಸದ್ಯ ಏನೂ ಬಂಡವಾಳ ಇಲ್ಲ. ಹೀಗಾಗಿ ಧರ್ಮವನ್ನು ತರುತ್ತಾರೆ. ಶ್ರೀ ರಾಮನನ್ನು ತರುತ್ತಾರೆ. ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಈ ವಿಚಾರದಲ್ಲಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರು ರಾಜಕಾರಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಯವರು ಪುಕ್ಸಟ್ಟೆಯಾಗಿ ಅಧಿಕಾರಕ್ಕೆ ಬಂದವರು, ಪುಕ್ಸಟ್ಟೆಯಾಗಿ ಏನೂ ಕೊಡಲಿಲ್ಲ. ಬಿಜೆಪಿಯವರು ಕೆಲಸ ಮಾಡಲ್ಲ, ಕೆಲಸ ಮಾಡುವವರಿಗೂ ಬಿಡಲ್ಲ. ಬಿಜೆಪಿಯವರ ಮಾತಿಗೆ ಕಿಮ್ಮತ್ತಿಲ್ಲ ಎಂದು…

Read More

ಬೆಂಗಳೂರು:- ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ ಸತ್ಯವತಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಸತ್ಯವತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ರಾಮಚಂದ್ರನ್ ಆರ್. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದ ತನಕ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಜಿ. ಸತ್ಯವತಿ ಅವರನ್ನು ವರ್ಗಾವಣೆ ಮಾಡಲಾಗಿದ್ದರೂ ಹುದ್ದೆಯನ್ನು ತೋರಿಸಿಲ್ಲ. ಸದ್ಯ ರಾಮಚಂದ್ರನ್ ಆರ್. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಬಿಎಂಟಿಸಿ ಎಂಡಿಯಾಗಿ ನೇಮಕ ಮಾಡಲಾಗಿದೆ.

Read More

ಅಥಣಿ : ತಾಲೂಕಿನ ಶಿರೂರ ಗ್ರಾಮದಲ್ಲಿ ಪುಂಡರ ಅಟ್ಟಹಾಸ ತೋರಿದ್ದಾರೆ ರೈತರು ಬೆಳೆದ ನಾಲ್ಕು ಎಕರೆ ಬೆಳೆ ನಾಶ ಪಡಿಸಿ ತಿನ್ನೋ ಅನ್ನಕ್ಕೆ ಕಣ್ಣ ಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರೂರ ಗ್ರಾಮದ ರೈತ ನಾಮದೇವ ಕೃಷ್ಣ ಹಜಾರೆ ಸೇರಿದ ನಾಲ್ಕು ಎಕರೆ ಯಲ್ಲಿ ಬೆಳೆದ ಬೆಳೆ ನಾಶ ಪಡಿಸಿದ್ದಾರೆ ಬೆಳೆ ಕಳೆದುಕೊಂಡ ರೈತ ಅಥಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು  ನ್ಯಾಯಕ್ಕಾಗಿ ಮನವಿ ಮಾಡಿದ್ದಾನೆ. ಹೊಲದ ವಿಚಾರಕ್ಕೆ ಸಂಬಂಧಿಕರ ಮದ್ಯ ತಂಟೆ ತಕರಾರು ಸಾಮಾನ್ಯವಾಗಿ ನಡೆಯುತ್ತಲೆ ಇತ್ತು ಒಮ್ಮೆಲೆ ಹತ್ತಾರು ಜನ ಬಂದು ಲಾಂಗ್,ಮಚ್ಚು, ಹಿಡಿದು ದಬ್ಬಾಳಿಕೆ ಮಾಡಿ ಸಮೃದ್ಧವಾಗಿ ಬೆಳೆದ ಬೆಳೆ ನಶಾಪಡಿಸಿ  ದುಶಕೃತ್ಯ ಎಸಗಿರೋದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತಿದೆ ಈ ಕುರಿತಂತೆ ಅಥಣಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ

Read More

ಬೆಂಗಳೂರು:- ಪಿಯುಸಿ ಪಾಸಾದ ಎಲ್ಲಾ ವರ್ಗದ ವಿದ್ಯಾರ್ಥಿಯಾಗಿದ್ದರೆ ನಿಮಗೆಲ್ಲರಿಗೂ ಸಿಹಿ ಸುದ್ದಿ ಬಂದಿದೆ. ಸರ್ಕಾರವು ಈಗ ಎಲ್ಲರಿಗೂ 48,000 ರೂಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೊಡಲಾಗುತ್ತದೆ. ವಾರ್ಷಿಕ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. SC ST ಮತ್ತು OBC ವಿದ್ಯಾರ್ಥಿಗಳ ವಿದ್ಯಾರ್ಥಿವೇತನ 2024 ಅನ್ನು ನಿಮಗಾಗಿ ಪ್ರಾರಂಭಿಸಲಾಗಿದೆ. ನಿಮ್ಮ ಉನ್ನತ ಶಿಕ್ಷಣಕ್ಕಾಗಿ ನಿಮಗೆ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಇದರಿಂದ ನೀವು ಸುಲಭವಾಗಿ ಉನ್ನತ ಶಿಕ್ಷಣವನ್ನು ಪಡೆಯಬಹುದು ಆದರೆ ನಿಮ್ಮ ನಿರಂತರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು. SC, ST ಮತ್ತು OBC ವಿದ್ಯಾರ್ಥಿಗಳು 2024 ರ ಪ್ರಯೋಜನವನ್ನು SC, ST, OBC ಅಥವಾ EWS ವರ್ಗದ ಪ್ರತಿ ಅರ್ಹ ವಿದ್ಯಾರ್ಥಿಗೆ ಒದಗಿಸಲಾಗುತ್ತದೆ. ಈ ವಿದ್ಯಾರ್ಥಿವೇತನದ ಅಡಿಯಲ್ಲಿ, ನೀವು ವಾರ್ಷಿಕವಾಗಿ ₹ 48,000 ವಿದ್ಯಾರ್ಥಿವೇತನವನ್ನು ನೀಡಬಹುದು. ನಿಮ್ಮ ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬೆಳವಣಿಗೆಯನ್ನು ಮಾತ್ರವಲ್ಲದೆ ಖಚಿತಪಡಿಸಿಕೊಳ್ಳಲು…

Read More

ಕೆಲವರು ಹೆಚ್ಚು ಬುದ್ದಿವಂತರಾಗಿದ್ದರೂ ಕಡಿಮೆ ಆತ್ಮಾಭಿಮಾನ ಅಥವಾ ಸ್ವಾಭಿಮಾನವನ್ನು ಹೊಂದಿರುತ್ತಾರೆ. ಹಾಗೆಯೇ ನೀವು ಹೆಚ್ಚು ಬುದ್ದಿವಂತ ವ್ಯಕ್ತಿಯಾಗಿರಬಹುದು ಆದರೆ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇಲ್ಲದೇ ಹೋಗಬಹುದು. ಅಂಥ ವ್ಯಕ್ತಿಗಳು ಸಾಮಾನ್ಯವಾಗಿ ತೋರುವ ನಡವಳಿಕೆಗಳು ಯಾವುವು ಅನ್ನೋದನ್ನು ತಿಳಿಯೋಣ. 1) ನಿಮ್ಮ ಯಶಸ್ಸಿಗೆ ಅದೃಷ್ಟವನ್ನು ನಂಬುತ್ತೀರಿ ನೀವು ಗುರಿಯನ್ನು ಸಾಧಿಸಿದಾಗ, ನಿಮ್ಮ ಯಶಸ್ಸಿಗೆ ಅದೃಷ್ಟ ಕಾರಣ ಎಂದುಕೊಳ್ಳುತ್ತೀರಾ? ಅದಕ್ಕಾಗಿ ನೀವು ಸಾಕಷ್ಟು ಸಮಯ ಮತ್ತು ಶ್ರಮವನ್ನು ಹಾಕಿರಬಹುದು. ಆದರೆ ನೀವು ಅದೃಷ್ಟವನ್ನೋ ಅಥವಾ ಮತ್ಯಾವುದನ್ನೋ ಹೆಚ್ಚಾಗಿ ನಂಬುತ್ತೀರಿ. ಪರಿಣಾಮವಾಗಿ, ನೀವು ನಿರಂತರವಾಗಿ ನಿಮ್ಮ ಸಾಮರ್ಥ್ಯಗಳನ್ನು ಕಡಿಮೆ ಅಂದಾಜು ಮಾಡುತ್ತೀರಿ. ನಿಮ್ಮ ಸುತ್ತಲಿರುವ ಜನರು ನಿಮ್ಮ ಸಾಮರ್ಥ್ಯಗಳ ಬಗ್ಗೆ ಹೆಚ್ಚು ಮಾತನಾಡುವಾಗಲೂ, ನೀವು ಸಂದೇಹ ಪಡುತ್ತೀರಿ. 2) ನೀವು ಯಾವಾಗಲೂ ಎರಡನೇ ಆಯ್ಕೆಯನ್ನು ಊಹಿಸುತ್ತೀರಿ ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯುವುದು ಎಂದು ನಿಮಗೆ ತಿಳಿದಿರುತ್ತದೆ. ಆದಾಗ್ಯೂ, ನಿಮಗೆ ಮತ್ತಷ್ಟು ಯೋಚಿಸಲು ಅವಕಾಶ ಮಾಡಿಕೊಟ್ಟರೆ, ನೀವು ಎರಡನೇ ಆಯ್ಕೆಯನ್ನು ಊಹಿಸಲು ಪ್ರಾರಂಭಿಸುತ್ತೀರಿ. ನಿಮ್ಮ…

Read More

ಮಲೆ: ಪ್ರಧಾನಿ ಮೋದಿ ಅವರ ಲಕ್ಷದ್ವೀಪ ಭೇಟಿ ಕುರಿತು ಮಾಲ್ಡೀವ್ಸ್‌ (Maldives) ಸಚಿವರು ನೀಡಿದ್ದ ಹೇಳಿಕೆ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಸಚಿವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಅವರನ್ನು ಅಮಾನತುಗೊಳಿಸಿ ಮಾಲ್ಡೀವ್ಸ್‌ ಸರ್ಕಾರ ಆದೇಶ ಹೊರಡಿಸಿದೆ. ಸಚಿವರಾದ ಮರಿಯಮ್ ಶಿಯುನಾ (Mariyam Shiuna), ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನೆರೆಯ ಭಾರತವನ್ನು ಅವಮಾನಿಸುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಕ್ಕೆ ಈ ಬೆಳವಣಿಗೆ ನಡೆದಿದೆ. ಸರ್ಕಾರಿ ಹುದ್ದೆಗಳಲ್ಲಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್ ಮಾಡಿದವರನ್ನು ಈಗ ಅಮಾನತುಗೊಳಿಸಲಾಗಿದೆ ಎಂದು ಅಮಾನತುಗೊಂಡವರ ಹೆಸರನ್ನು ಬಹಿರಂಗಪಡಿಸದೆ ಹೇಳಿಕೆಯಲ್ಲಿ ತಿಳಿಸಲಾಗಿದೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi ) ಅವರು ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ್ದರು. ಬೀಚ್‌ನಲ್ಲಿ ತಾವು ಕಳೆದ ಸುಂದರ ಕ್ಷಣಗಳ ವೀಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದರು. ಮೋದಿ ಭೇಟಿ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದ ಮಾಲ್ಡೀವ್ಸ್‌ ಸಚಿವರು,…

Read More

ದೊಡ್ಡಬಳ್ಳಾಪುರ: ಲಿಟ್ಲ್‌ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಪಠ್ಯದ ಜೊತೆಗೆ ಯೋಗ, ಕ್ರೀಡೆ, ಕರಾಟೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತೆ ಎಂದು ಶಾಲೆಯ ಕಾರ್ಯದರ್ಶಿ ಕೆ.ಜಿ ಶ್ರೀನಿವಾಸ ಮೂರ್ತಿ ತಿಳಿಸಿದರು. ಭಾನುವಾರ ಶಾಲಾ ವಾರ್ಷಿಕೋತ್ಸವ ಆಯೋಜನೆ ಮಾಡಿ ಮಾತನಾಡಿದ ಇವರು 2006 ರಲ್ಲಿ ಸಾಧನ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಲಿಟ್ಲ್‌ ಮಾಸ್ಟರ್ ಪಬ್ಲಿಕ್ ಶಾಲೆ ಆರಂಭವಾಗಿದೆ. 1 ರಿಂದ 10 ನೇ ತರಗತಿವರೆಗೆ 1041 ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ 18 ವರ್ಷಗಳಿಂದ ಗ್ರಾಮೀಣ ,ಅರೆ ನಗರ ಭಾಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಪ್ರತಿ ವರ್ಷ ನಮ್ಮ ಶಾಲೆಯಲ್ಲಿ 100% ಪಲಿತಾಂಶ ಬರುತ್ತಿದೆ ಎಂದು ಹೇಳಿದರು. ಇದೆ ವೇಳೆ ಜೂನಿಯರ್ ಪುನೀತ್ ರಾಜ್ ಕುಮಾರ್ ಎಂದೆ ಹೆಸರು ವಾಸಿಯಾಗಿರುವ ಸಕಲೇಷಪುರದ ಅಪ್ಪು ಮಾತನಾಡಿ ಡಾ.ಪುನೀತ್ ರಾಜ್ ಕುಮಾರ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.ಪೋಷಕರನ್ನು ಅನಾಥಶ್ರಮಕ್ಕೆ ಕಳುಹಿಸಬೇಡಿ,ಶಿಕ್ಷಣದ ಜೊತೆ ಮಾನವೀಯ ಗುಣಗಳು,ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ…

Read More