Author: AIN Author

ಡ್ರೈ ಫ್ರೂಟ್ಸ್ ನಲ್ಲಿ ಅತ್ಯಂತ ರುಚಿಕರ ಡ್ರೈ ಫ್ರೂಟ್ಸ್ ಕೂಡ ಗೋಡಂಬಿ. ಜನರು ಗೋಡಂಬಿಯನ್ನು ಒಂದಾದ್ಮೇಲೆ ಒಂದರಂತೆ 15 -20 ತಿನ್ನುತ್ತಾರೆ. ಅದಕ್ಕಿಂತ ಹೆಚ್ಚು ತಿನ್ನುವ ಜನರೂ ಇದ್ದಾರೆ. ಒಂದು ರುಚಿ ಹಾಗೂ ಇನ್ನೊಂದು ಆರೋಗ್ಯಕ್ಕೆ ಒಳ್ಳೆಯದು ಅಂತಾ ನಾವು ತಿನ್ನುತ್ತೇವೆ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಾಗಿರುವ ಇದನ್ನು ಅತಿ ಹೆಚ್ಚು ತಿನ್ನೋದು ಕೂಡ ಒಳ್ಳೆಯದಲ್ಲ.  ಗೋಡಂಬಿ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು ಹೊಟ್ಟೆಯ ಸಮಸ್ಯೆಗಳು : ಗೋಡಂಬಿಗಳಲ್ಲಿ (Cashew) ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಅವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದರೆ ಗೋಡಂಬಿಯನ್ನು ಅಧಿಕವಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಉಂಟಾಗಬಹುದು. ಬೊಜ್ಜು: ನೀವು ತೂಕ ಇಳಿಸಿಕೊಳ್ಳಲು (Weight loss) ಪ್ರಯತ್ನಿಸುತ್ತಿದ್ದಾರೆ, ಅಥವಾ ಡಯೆಟ್ ನಲ್ಲಿದ್ದರೆ (Diet) ತಪ್ಪಿಯೂ ಗೋಡಂಬಿ ಬೀಜಗಳನ್ನು ಸೇವಿಸಬೇಡಿ. ಇದರಲ್ಲಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ . ಅಲರ್ಜಿಗಳು:ಅನೇಕ ಜನರು ಗೋಡಂಬಿ ಅಲರ್ಜಿಯನ್ನು ಹೊಂದಿರುತ್ತಾರೆ. ಗೋಡಂಬಿ ತಿಂದ ನಂತರ ಉಸಿರಾಟದ ಸಮಸ್ಯೆ , ತುರಿಕೆ, ವಾಂತಿ…

Read More

ಅಫ್ಗಾನಿಸ್ತಾನ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಗೆ ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಅವಕಾಶ ಮಾಡಿರುವುದು ಇತ್ತೀಚಿನ ಒಂದು ನಿದರ್ಶನ. 2002ರ ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮುಖಭಂಗ ಅನುಭವಿಸಿದ ನಂತರ ಸುಮಾರು 14 ತಿಂಗಳ ಕಾಲ ಇವರಿಬ್ಬರು ತಂಡದಿಂದ ಹೊರಗಿದ್ದರು. ನಂತರ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಯಿತು. ಅವರು ಗಾಯಾಳಾದಾಗ, ಸೂರ್ಯಕುಮಾರ್ ಯಾದವ್ ಅವರಿಗೆ (ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತು ಹೊರಗಡೆ ದಕ್ಷಿಣ ಆಫ್ರಿಕಾ ವಿರುದ್ಧ) ತಂಡದ ನೇತೃತ್ವ ವಹಿಸಲಾಯಿತು. ಈಗ ಹಾರ್ದಿಕ್ ಮತ್ತು ಸೂರ್ಯ ಅವರಿಬ್ಬರೂ ಗಾಯಾಳಾಗಿ ತಂಡಕ್ಕೆ ಲಭ್ಯರಿಲ್ಲ. ಋತುರಾಜ್ ಗಾಯಕವಾಡ ಅವರಿಗೆ ಬೆರಳಿನ ಗಾಯವಾಗಿದೆ. ಆದರೆ ಇತರ ಆಟಗಾರರಿದ್ದರೂ, ಈ ಇಬ್ಬರು ಏಕದಿನ ಮಾದರಿಯ ಅನುಭವಿಗಳನ್ನು ತಂಡಕ್ಕೆ ಮರಳಿ ಕರೆತರಲಾಗಿದೆ. ರೋಹಿತ್ ಮತ್ತು ಕೊಹ್ಲಿ ಅವರಿಗೂ ಕೊನೆಯದಾಗಿ ಆಡಬೇಕೆಂಬ ಬಯಕೆಯಿರುವುದು ಸಹಜ. ಅಜಿತ್‌ ಅಗರಕರ್ ನೇತೃತ್ವದ ಆಯ್ಕೆ ಸಮಿತಿ ಅವರಿಗೆ ಅವಕಾಶ ನೀಡಿದೆ. ಈ ಸರಣಿಯಲ್ಲಿ ಮತ್ತು ಐಪಿಎಲ್‌ನಲ್ಲಿ…

Read More

ಬೆಂಗಳೂರು:- ಕಾಂಗ್ರೆಸ್ ನ ಗಿಮಿಕ್‌ ಗ್ಯಾರಂಟಿ ನಂಬಲು ಯಾರೂ ಸಿದ್ಧರಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸರಕಾರದ ಗಿಮಿಕ್‌ ಗ್ಯಾರಂಟಿಯನ್ನು ನಂಬಲು ಯಾರೂ ಸಿದ್ಧರಿಲ್ಲ ಎಂಬುದು ಪಂಚರಾಜ್ಯಗಳ ಚುನಾವಣ ಫ‌ಲಿತಾಂಶದಿಂದ ಸಾಬೀತಾಗಿದ್ದು, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದನ್ನು ತಡೆಯಲು ಯಾವ ದುಷ್ಟ ಶಕ್ತಿಗಳಿಗೂ ಸಾಧ್ಯವಿಲ್ಲ ಎಂದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ರಾಜ್ಯದ ಮತದಾರರು ಸಜ್ಜಾಗಿದ್ದಾರೆ. ರಾಜ್ಯದ ಎಲ್ಲ 28 ಸ್ಥಾನಗಳನ್ನೂ ಗೆಲ್ಲಲಿದೆ. ಇದಕ್ಕಾಗಿ ಎಲ್ಲರೂ ಶ್ರಮಿಸುವುದಾಗಿ ತಿಳಿಸಿದರು. ಕೋಟ್ಯಂತರ ಹಿಂದೂಗಳು ಭಗವಾನ್‌ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಎದುರು ನೋಡುತ್ತಿದ್ದು, ಮನೆಮನೆಗಳಲ್ಲಿ ಹಬ್ಬದ ವಾತಾವರಣವಿದೆ. ಆದರೆ ಭಗವಾನ್‌ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದ ಕಾಂಗ್ರೆಸ್‌ ಪಕ್ಷದವರು ವಿಧಿ ಇಲ್ಲದೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲು ಸುತ್ತೋಲೆ ಹೊರಡಿಸಿದೆ. ಇದು ರಾಮಭಕ್ತರಿಗೆ ಸಂದ ಜಯ ಎಂದು ತಿಳಿಸಿದರು.

Read More

ಹೈದರಾಬಾದ್:- ಮಕರ ಸಂಕ್ರಾಂತಿಗಾಗಿ ದೇಶವು ಸಜ್ಜಾಗುತ್ತಿದ್ದಂತೆ, ಆಂಧ್ರಪ್ರದೇಶದ ಗ್ರಾಮಾಂತರವು ಉತ್ಸಾಹಭರಿತ ಸಿದ್ಧತೆಗಳೊಂದಿಗೆ, ವಿಶೇಷವಾಗಿ ಆಚರಣೆಯ ಅವಿಭಾಜ್ಯ ಸಾಂಪ್ರದಾಯಿಕ ಕಾಕ್‌ಫೈಟ್‌ಗಳಿಗೆ ಸಜ್ಜಾಗಿದೆ. ಆದಾಗ್ಯೂ, ಒಂದು ವೈರಾಣು ರೋಗವು ಕೋಳಿಗಳ ಮೇಲೆ ಪರಿಣಾಮ ಬೀರುವುದರಿಂದ ಅನಿರೀಕ್ಷಿತ ಸವಾಲು ಉಂಟಾಗುತ್ತದೆ, ಇದರಿಂದಾಗಿ ಅನೇಕ ಸ್ಪರ್ಧಿಗಳು ಕಳಪೆ ರೂಪದಲ್ಲಿರುತ್ತಾರೆ. ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಕೋಳಿಗಳಿಗೆ ವಯಾಗ್ರ, ಶಿಲಾಜಿತ್ ಮತ್ತು ಸ್ಟೀರಾಯ್ಡ್ ತುಂಬಿದ ಆಹಾರವನ್ನು ನೀಡುವುದು ಸೇರಿದಂತೆ ಅಸಾಂಪ್ರದಾಯಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ಆಚರಣೆಯ ಪ್ರಮುಖ ಭಾಗವೆಂದರೆ ಕೋಳಿ ಅಂಕ ಅಥವಾ ಕೋಳಿ ಕಾದಾಟ. ಆಂಧ್ರ ಪ್ರದೇಶ ರಾಜ್ಯದ ಒಳನಾಡಿನಲ್ಲಿ ಈಗಾಗಲೇ ಸಾವಿರಾರು ಅಕ್ರಮ ಕೋಳುಅಂಕ ಅಖಾಡಗಳು ಹುಟ್ಟಿಕೊಂಡಿವೆ, ಅಲ್ಲಿ ತರಬೇತಿ ಪಡೆದ ಹುಂಜಗಳು ಸಾಯುವವರೆಗೂ ಹೋರಾಟ ನಡೆಸುತ್ತವೆ. ಆಂಧ್ರಪ್ರದೇಶದಲ್ಲಿ ಕೋಳಿಗಳಿಗೆ ‘ರಾಣಿಖೇತ್‌’ ಎನ್ನುವ ವೈರಲ್‌ ಕಾಯಿಲೆ ವ್ಯಾಪಕವಾಗಿದೆ. ಹಾಗಾಗಿ ಕೋಳಿ ಅಂಕದ ಚಾಂಪಿಯನ್‌ಗಳಿಗೆ ಈ ಬಾರಿ ತಮ್ಮ ಮೇಲಿನ ನಿರೀಕ್ಷೆಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಈ ವೈರಲ್‌ ಕಾಯಿಲೆಯಿಂದಾಗಿ, ಕೋಳಿ ಅಂಕದ ಕೋಳಿ ಮಾಲೀಕರಿಗೆ…

Read More

ಚೀನಾ: ಭಾರತ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಗರಿಮೆಗೆ ಪಾತ್ರವಾಗಿದೆ. ವಿಶ್ವಸಂಸ್ಥೆಯ ಎಕಾನಾಮಿಕ್ಸ್ & ಸೋಷಿಯಲ್ ವೆಲ್‍ಫೇರ್ ರಿಪೋರ್ಟ್ ಪ್ರಕಾರ, ಈ ವರ್ಷ ದೇಶದ ಬೆಳವಣಿಗೆ ದರ 6.2 ಪರ್ಸೆಂಟ್ ಇರಲಿದೆ. ಉತ್ಪತ್ತಿ, ತಯಾರಿ ವಲಯದಲ್ಲಿ ಭಾರತ (India) ವೇಗವಾಗಿ ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ದೇಶದ ಆರ್ಥಿಕತೆ 7.3ರಷ್ಟು ಬೆಳವಣಿಗೆ ಕಾಣಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ವಿಶೇಷ ಅಂದ್ರೆ ಮೋದಿ (Narendra Modi) ನಾಯಕತ್ವದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಸಿ ಸಾಧಿಸಿದೆ ಎಂದು ಚೀನಾ (China) ಪತ್ರಿಕೆಗಳು ಹೊಗಳಿವೆ. https://ainlivenews.com/there-is-no-better-savings-than-this-save-50-rupees-a-day-and-make-30-lakhs-yours/ ಮೋದಿ ಆಡಳಿತದಲ್ಲಿ ಭಾರತ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿಸಿ ಸಾಧಿಸಿದೆ ಎಂದು ಚೀನಾ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ವಸಾಹತು ನೆರಳಿನಿಂದ ಹೊರಬಂದಿದೆ. ವಿದೇಶಾಂಗ ನೀತಿ ಚನ್ನಾಗಿದೆ.  ಅಮೆರಿಕಾ, ರಷ್ಯಾ, ಜಪಾನ್‍ನಂತಹ ದೇಶಗಳ ಜೊತೆ ಭಾರತದ ವೈಖರಿ ಶ್ಲಾಘನಾರ್ಹ ಎಂದು ಚೀನಾದ ಪತ್ರಿಕೆ ಹೊಗಳಿದೆ. ಇನ್ನು ಹಿಂಡನ್‍ಬರ್ಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್…

Read More

ಪ್ರಸಕ್ತ ಸಾಲಿನಲ್ಲಿ ಯುವಜನರ ಆಲೋಚನೆ ಬದಲಾಗಿದೆ. ಹನಿಮೂನ್ ಪ್ರಸಿದ್ಧಿ ಸ್ಥಳಗಳಲ್ಲಿ ಜನರ ಸಂಖ್ಯೆ ಹೆಚ್ಚು. ಇದ್ರಿಂದ ಒಬ್ಬರನ್ನೊಬ್ಬರು ಅರಿಯೋದು ಕಷ್ಟ ಎನ್ನುವ ಸತ್ಯವನ್ನು ಯುವಜನತೆ ಅರಿತಿದ್ದಾರೆ. ಯುವಜನರ ಹನಿಮೂನ್ ಸ್ಫಾಟ್ ಈಗ ಬದಲಾಗಿದೆ. ನಾಡಿನಿಂದ ಕಾಡಿಗೆ ಹೋಗಲು ಯುವಜೋಡಿ ಹೆಚ್ಚು ಇಷ್ಟಪಡ್ತಿದ್ದಾರೆ. ಭಾರತ ಪ್ರವಾಸೋದ್ಯಮ 2022 ಮಾಹಿತಿ ವರದಿಯಲ್ಲೂ ಇದೇ ವಿಷ್ಯವನ್ನು ಉಲ್ಲೇಖಿಸಲಾಗಿದೆ. ಈಗ ಹೆಚ್ಚಿನ ಜನರು ಪ್ರವಾಸೋದ್ಯಮ ಕ್ಕಾಗಿ ಪ್ರಕೃತಿಯ ನಡುವೆ ಹೋಗಲು ಬಯಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಾಡು ಜನರ ಅತ್ಯುತ್ತಮ ಹನಿಮೂನ್ ಜಾಗವಾಗಲು ಕಾರಣವೇನು ಎಂಬ ವರದಿ ಇಲ್ಲಿದೆ. ಕಾಡು ಹನಿಮೂನ್ ಸ್ಪಾಟ್ ಆಗಲು ಇದೇ ಕಾರಣಗಳು! * ಶಾಂತ ವಾತಾವಣ *ಜಂಗಲ್ ಸಫಾರಿಗೆ ಹೆಚ್ಚಿದ ಕ್ರೇಜ್ *ರೆಸಾರ್ಟ್ ನಲ್ಲಿ ಹೊಸ ಜೀವನದ ಆನಂದ *ಸೆಲೆಬ್ರಿಟಿಗಳಿಂದ ಪ್ರೇರಣೆ ಶಾಂತ ವಾತಾವಣ : ಶುದ್ಧ ವಾತಾವರಣ ಹಾಗೂ ಶಾಂತ ಸ್ಥಳವನ್ನು ಅರಸುವ ಜೋಡಿ ಕಾಡಿನತ್ತ ಮುಖ ಮಾಡ್ತಾರೆ. ಕಾಡಿನ ವಾತಾವರಣ ಶಾಂತವಾಗಿರುವ ಕಾರಣ ಅವರು ಗುಣಮಟ್ಟದ ಸಮಯವನ್ನು ಕಳೆಯಬಹುದು.…

Read More

ಗದಗ:- ಗದಗದಿಂದ ನಟ ಯಶ್ ವಾಪಸ್ ಆಗುವಾಗ ಮತ್ತೊಂದು ಅವಘಡ ಸಂಭವಿಸಿದೆ. ಕಟೌಟ್‌ ನಿಲ್ಲಿಸೋ ವೇಳೆ ಕರೆಂಟ್‌ ಶಾಕ್‌ನಿಂದ ಮೂವರು ಯಶ್ ಅಭಿಮಾನಿಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಲು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಆಗಮಿಸಿ ವಾಪಸ್ ತೆರಳುವ ವೇಳೆ ಮತ್ತೊಂದು ದುರ್ಘಟನೆ ನಡೆದಿದೆ. ಅವರ ಹಿಂದಿದ್ದ ಪೊಲೀಸ್ ವಾಹನ ಹಾಗೂ ಸ್ಕೂಟಿ ನಡುವೆ ಡಿಕ್ಕಿ ಹೊಡೆದಿದ್ದರಿಂದಾಗಿ ಸ್ಕೂಟಿ ಪೇರ್ ಪಾರ್ಟ್ಸ್ ಪುಡಿಪುಡಿಯಾಗಿವೆ. ಸ್ಕೂಟಿ ಮೇಲೆ ಯಶ್ ನೋಡಲು ಯುವಕನು ಬಂದಿದ್ದ ಎನ್ನಲಾಗಿದೆ, ರಸ್ತೆ ಕ್ರಾಸ್ ಮಾಡುವ ವೇಳೆ ಈ ಗದಗನ ತೇಜಾ ನಗರದ ಬಳಿ ಈ ದುರ್ಘಟನೆ ನಡೆದಿದೆ.ಈಗ ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಭಾರತದಲ್ಲಿ ಜನವರಿ 13 ರಂದು ಪ್ರಾರಂಭವಾಯಿತು ಮತ್ತು ಆರಂಭದಲ್ಲಿ ಜನವರಿ 18 ರಂದು ಮುಕ್ತಾಯಗೊಳ್ಳಬೇಕಿತ್ತು, ಆದರೆ ಈಗ ಜನವರಿ 19 ಅಂದ್ರೆ ಇಂದಿನವರೆಗೆ ವಿಸ್ತರಿಸಲಾಗಿದೆ. ವೈವಿಧ್ಯಮಯ ಶ್ರೇಣಿಯ ರಿಯಾಯಿತಿ ಉತ್ಪನ್ನಗಳು, ವ್ಯಾಪಿಸಿರುವ ಫ್ಯಾಷನ್ ವಸ್ತುಗಳು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಜನಪ್ರಿಯ ಮನೆ ಉಪಕರಣಗಳನ್ನು ಮಾರಾಟದಲ್ಲಿ ನೀಡಲಾಗುತ್ತದೆ. ಈ ಹಿಂದೆ, ನಾವು ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಸೌಂಡ್‌ಬಾರ್‌ಗಳು ಮತ್ತು ಹೆಚ್ಚಿನವುಗಳಲ್ಲಿ ಕೆಲವು ಉತ್ತಮ ಡೀಲ್‌ಗಳನ್ನು ಹೈಲೈಟ್ ಮಾಡಿದ್ದೇವೆ, ಇವೆಲ್ಲವೂ ಅವುಗಳ ಮಾರುಕಟ್ಟೆ ಬೆಲೆಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆ ಬೆಲೆಯಲ್ಲಿ ನೀಡಲಾಗಿದೆ. ಈಗ ನಾವು 4K ರೆಸಲ್ಯೂಶನ್ ಹೊಂದಿರುವ ಸ್ಮಾರ್ಟ್ ಟೆಲಿವಿಷನ್‌ಗಳಲ್ಲಿ ಕೆಲವು ಉತ್ತಮ ಡೀಲ್‌ಗಳನ್ನು ಪಟ್ಟಿ ಮಾಡುತ್ತೇವೆ. ನಾವು ಟಿವಿ ಡೀಲ್‌ಗಳನ್ನು ಚರ್ಚಿಸುವ ಮೊದಲು, ಕಡಿಮೆ ಮಾರಾಟದ ಬೆಲೆಗಳ ಜೊತೆಗೆ, ಗ್ರಾಹಕರು ಪೂರಕ ಬ್ಯಾಂಕ್ ಕೊಡುಗೆಗಳ ಲಾಭವನ್ನು ಪಡೆಯಬಹುದು ಎಂಬುದನ್ನು ಗಮನಿಸಿ. ಉದಾಹರಣೆಗೆ, SBI ಕಾರ್ಡುದಾರರು ಕ್ರೆಡಿಟ್ ಮತ್ತು EMI ವಹಿವಾಟುಗಳ ಮೇಲೆ…

Read More

ಸ್ನೇಹ, ಪ್ರೀತಿ, ಸಂಬಂಧ ಏನೇ ಇರಬಹುದು, ತಾಯಿ ಮಗುವಿನ ಸಂಬಂಧವೇ ಇರಬಹುದು ಎಲ್ಲಾ ಸಂಬಂಧದಲ್ಲೂ ಮುತ್ತು ಅಥವಾ ಕಿಸ್ ಸಂಬಂಧ ಬೆಸೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಜೊತೆ ಜೊತೆಗೆ ಇಬ್ಬರ ಬಾಂದವ್ಯ ಕೂಡ ವೃದ್ಧಿಯಾಗುತ್ತದೆ.  ಕಿಸ್ ಮಾಡುವುದರಿಂದ ನಿಮ್ಮ ಹೃದಯ ಬಡಿತವನ್ನು ಆರೋಗ್ಯಕರ ರೀತಿಯಲ್ಲಿ ಪುನರುಜ್ಜೀವನ ಗೊಳಿಸುತ್ತದೆ ಅದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು  ವಿಜ್ಞಾನ ತಿಳಿಸಿದೆ.  “ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ – ರಕ್ತವು ಉತ್ತಮ, ಘನ ಶೈಲಿಯಲ್ಲಿ ಹರಿಯುತ್ತದೆ ಮತ್ತು ನಿಮ್ಮ ಎಲ್ಲಾ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆಯಾಗುತ್ತದೆ.  ಕ್ಯಾಲೋರಿಗಳ ದಹನ ಚುಂಬನದ ಮೂಲಕ ದೇಹದಲ್ಲಿ ಹೆಚ್ಚಿನ ಕ್ಯಾಲೋರಿಗಳನ್ನೂ ದಹಿಸಬಹುದು. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ, ನಿಮ್ಮ ದೇಹದ ಅನಗತ್ಯ ಕ್ಯಾಲೋರಿಗಳನ್ನು ದಹಿಸಲು ಚುಂಬನ ನೆರವಾಗುತ್ತದೆ. ಎಷ್ಟು ಎಂದರೆ ಒಂದು ನಿಮಿಷಕ್ಕೆ ಸುಮಾರು ಆರು ಕ್ಯಾಲೋರಿಗಳಷ್ಟು. ವ್ಯಾಯಾಮಶಾಲೆಯಲ್ಲಿ ಕಠಿಣ ಪರಿಶ್ರಮದ ಕೆಲಸದ ಮೂಲಕ ನಾವು ಬಳಸಿಕೊಳ್ಳಬಹುದಾದ ಕ್ಯಾಲೋರಿಗಳು ಎಂದರೆ…

Read More

ಆಧಾರ್ ಕಾರ್ಡ್ ವಿತರಿಸುವ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಎಐ) ಜನರಿಗೆ ಪಿವಿಸಿ ಆಧಾರ್ ಕಾರ್ಡ್ ಗಳನ್ನು ಆನ್ ಲೈನ್ ನಲ್ಲಿ ಕೇವಲ 50ರೂ. ಶುಲ್ಕಕ್ಕೆ ಲಭ್ಯವಾಗುವಂತೆ ಮಾಡಿದೆ. ಪಿವಿಸಿ ಆಧಾರ್ ಕಾರ್ಡ್ ಗಳನ್ನು ಪಾಲಿವಿನೈಲ್ ಕ್ಲೋರೈಡ್ ಬಳಸಿ ಮಾಡಲಾಗಿದೆ. ಇದು ಸುರಕ್ಷಿತ ಕ್ಯುಆರ್ ಕೋಡ್, ಹೊಲೊಗ್ರಾಮ್, ಹೆಸರು, ಫೋಟೋ, ಜನ್ಮದಿನಾಂಕ ಹಾಗೂ ಇತರ ಪ್ರಮುಖ ಮಾಹಿತಿಯನ್ನು ಒಳಗೊಂಡಿದೆ. ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಮಾಡುವ ಪ್ರಕ್ರಿಯೆ ಕೂಡ ಸರಳವಾಗಿದ್ದು, ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಇದನ್ನು ಪೂರ್ಣಗೊಳಿಸಬಹುದು. ಪಿವಿಸಿ ಕಾರ್ಡ್ (PVC card) ಆರ್ಡರ್ ಮಾಡೋದು ಹೇಗೆ? ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪಿವಿಸಿ ಕಾರ್ಡ್ ಆರ್ಡರ್ ಮಾಡಬಹುದು. *ಯುಐಡಿಎಐ ಅಧಿಕೃತ ವೆಬ್ ಸೈಟ್ https://uidai.gov.in/ ಭೇಟಿ ನೀಡಿ. *ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಆಯ್ಕೆ ಮಾಡಿ. *12 ಅಂಕೆಗಳ ಆಧಾರ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ನಮೂದಿಸಿ. *ನಿಮ್ಮ ನೋಂದಾಯಿತ ಮೊಬೈಲ್…

Read More