Author: AIN Author

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ ದೇಶದ ಗಣ್ಯರಿಗೆ ಶ್ರೀ ರಾಮತೀರ್ಥ ಟ್ರಸ್ಟ್ ಆಹ್ವಾನ ನೀಡುತ್ತಿದೆ. ಈ ಮಧ್ಯೆ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಗೆ ಆಹ್ವಾನ ನೀಡಿದರು. ಜನವರಿ 22 ರಂದು, ಅಯೋಧ್ಯೆಯಲ್ಲಿ (Ayodhya) ಹೊಸದಾಗಿ ನಿರ್ಮಿಸಲಾದ ಭವ್ಯವಾದ ಶ್ರೀರಾಮ ಮಂದಿರದಲ್ಲಿ (Ram mandir) ಭಗವಾನ್ ರಾಮಲಲ್ಲಾನ ಪ್ರತಿಷ್ಠಾಪನೆ ಆಗಲಿದೆ. ಈ ಉತ್ಸವದಲ್ಲಿ ಭಾಗವಹಿಸಲು ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರಿಗೆ ಆಹ್ವಾನ ನೀಡಿದರು. ಜನವರಿ 22 ರಂದು ನಡೆಯುವ ಐತಿಹಾಸಿಕ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳಿಗೆ ಆಹ್ವಾನ ನೀಡಿದರು.

Read More

ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 30ನೇ ಎಸಿಎಂಎಂ ಕೋರ್ಟ್‌ ನಾಳೆಗೆ ಮುಂದೂಡಿದೆ. https://ainlivenews.com/karaway-president-narayana-gowda-is-back-in-police-custody-after-being-released-from-jail/ 2017 ರಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕರವೇ (KaRaVe) ಅಧ್ಯಕ್ಷ ನಾರಾಯಣಗೌಡ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 30ನೇ ಎಸಿಎಂಎಂ ಕೋರ್ಟ್‌ ನಾಳೆಗೆ ಮುಂದೂಡಿದೆ. ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಾರಾಯಣಗೌಡ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ಆರೋಪಿಗೆ 2017 ರಲ್ಲಿ ಜಾಮೀನು‌ ಸಿಕ್ಕಿದೆ. ಜಾಮೀನು ಪಡೆದ ಬಳಿಕ ರೆಗ್ಯುಲರ್ ಡೇಟ್​ಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ನ್ಯಾಯಾಲಯದ ಅರಿವಿಲ್ಲವೇ? ಈಗ ಗೊತ್ತಾಗಿಲ್ಲ, ಅರಿವಿರಲಿಲ್ಲ ಅಂತ ಹೇಳುವುದು ಸರಿಯಲ್ಲ. ಹೀಗಾಗಿ ಜಾಮೀನು ನಿರಾಕರಿಸುವಂತೆ‌ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪ ವ್ಯಕ್ತಪಡಿಸಿದೆ.

Read More

ಮಂಡ್ಯ:  8 ವರ್ಷ ಪ್ರೀತಿಸಿ ಎಲ್ಲ ರೀತಿಯಲ್ಲಿ ಬಳಸಿಕೊಂಡು ಯುವಕನೊಬ್ಬ ಯುವತಿಗೆ ವಂಚಿಸಿದ ಆರೋಪವೊಂದು ಕೇಳಿ ಬಂದಿದೆ. ಅನ್ಯಜಾತಿ ನೆಪವೊಡ್ಡಿ ಪ್ರಿಯತಗೆ ಕೈ ಕೊಟ್ಟಿದ್ದಾನೆ ಪ್ರಿಯಕರ. ಕೈ ಕೊಟ್ಟ ಪ್ರಿಯಕರನಿಗಾಗಿ ಮನೆ ಮುಂದೆಯೇ ಯುವತಿ ಕುಳಿತಿದ್ದಾಳೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಬಳ್ಳಗೆರೆ ಗ್ರಾಮದ ಮಂಜು.ಬಿ.ಆರ್ ಎಂಬಾತನೇ ಯುವತಿಯನ್ನ ನಂಬಿಸಿ ವಂಚನೆ ಮಾಡಿರುವ ಯುವಕನಾಗಿದ್ದಾನೆ.  ನಂಜನಗೂಡಿನ ಮಹದೇಶ್ವರ ಲೇಔಟ್ ನ ರಮಶ್ರೀ ನಂಬಿ ಮೋಸ ಹೋದ ಯುವತಿಯಾಗಿದ್ದು, ಕಳೆದ ಎಂಟು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದರಂತೆ. ಮದುವೆಯಾಗುವಂತೆ ಒತ್ತಾಯಿಸಿದ ಪ್ರಿಯತಮೆಯಿಂದ ಅಂತರ ಕಾಯ್ದುಕೊಳ್ಳಲು ಪ್ರಿಯಕರ ಮುಂದಾಗಿದ್ದಾನೆ. ಬೇರೆ ಬೇರೆ ಕಾರಣ ಹೇಳಿಕೊಂಡು ಮದುವೆ ಮುಂದೆ ಆಗುವುದಾಗಿ ಭರವಸೆ ನೀಡಿದ್ದನಂತೆ ಯುವಕ.  https://ainlivenews.com/another-road-rage-in-silicon-city-young-woman-stunned-by-youth/ ಇದೀಗ ಪ್ರಿಯಕರ ಮಂಜು ಪ್ರೀತಿಸಿದಾಕೆ ಬಿಟ್ಟು ಮತ್ತೊಂದು ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿದ್ದಾನೆ. ವಿಷಯ ತಿಳಿದ ಪ್ರಿಯತಮೆ ಇದೀಗ ಪ್ರಿಯಕರನೊಂದಿಗೆ ಮದುವೆಗೆ ಪಟ್ಟು ಹಿಡಿದಿದ್ದಾಳೆ. ಪ್ರಿಯಕರ ಮಂಜನ ಮನೆ ಮುಂದೆ ಕುಳಿತು ಮದುವೆ ಆಗುವಂತೆ ಆಗ್ರಹಿಸಿದ್ದಾಳೆ.…

Read More

ಬೆಂಗಳೂರು : ಬರ, ಪ್ರವಾಹ ಇದ್ದಾಗ ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದರೆ ರೈತರ ಪಾಲಿಗೆ ಸರ್ಕಾರ ಸತ್ತಂತೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಧರಣಿ ಮಾಡಿದ್ದೇವೆ, ಈಗ ರಾಜ್ಯಪಾಲರಿಗೂ ದೂರು ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. https://ainlivenews.com/big-shock-for-property-tax-arrears-owners-no-property-cannot-be-sold/ 18 ಸಾವಿರ ಕೋಟಿ ನಷ್ಟ ಆಗಿದೆ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ಕೇವಲ 105 ಕೋಟಿ ರೂ. ಬಿಡುಗಡೆ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ತಕ್ಷಣ ಪರಿಹಾರ ಕೊಡೋದಾಗಿ ಹೇಳಿದ್ದರು. ಆದರೆ, ಇನ್ನೂ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಪೂರ್ತಿ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಕೂಡ ವಿಫಲವಾಗಿವೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆಯಿಲ್ಲ. ರೈತರು ಸತ್ತರೂ ಇವರಿಗೆ ಚಿಂತೆ ಇಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರ ಬಹಳ ದಿನ ಇರಲ್ಲ ಎಂದು ಬಸವರಾಜ…

Read More

ಬೆಂಗಳೂರು: ನೀವೇನಾದ್ರು ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ….ಒಂದು ವೇಳೆ ಟ್ಯಾಕ್ಸ್ ಏನಾದರೂ ಬಾಕಿ ಉಳಿಸಿಕೊಂಡಿದ್ರೆ ಈ ಕೂಡಲೇ ಪಾವತಿಸಿಬಿಡಿ.ಇಲ್ಲಾ ಅಂದರೆ ನಿಮ್ಮ ಆಸ್ತಿ ಮಾರಾಟ ಮಾಡೋಕೆ ಆಗಲ್ವಾಂತೆ ಹೌದು .ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿರುದ್ದ ಕಠಿಣ ಅಸ್ರ ಪ್ರಯೋಗಿಸಲು ಪಾಲಿಕೆ,ಮುಂದಾಗ್ತಿದೆ. ಹಾಗಾದ್ರೆ ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಮಾಡಿರೋ ಹೊಸ ಹೇಗಿರಲಿದೆ ಅನ್ನೋ ರಿಪೋರ್ಟ್ ಇಲ್ಲಿದೆ ಆಸ್ತಿ ತೆರಿಗೆ ಬಿಬಿಎಂಪಿಯ ಪ್ರಮುಖ ಆದಾಯ ಮೂಲ..ಇವರು ಕಟ್ಟುವ ಆಸ್ತಿ ತೆರಿಗೆಯಿಂದ್ಲೇ ಬೆಂಗಳೂರಿ ಉದ್ದಾರ ಆಗೋದು. ಆದ್ರೆ ಆಸ್ತಿ ತೆರಿಗೆ ಕಟ್ಟೋದಕ್ಕೆ ಮಾತ್ರ ಜನ ಹಿಂದೇಟು ಹಾಕ್ತಿದ್ದಾರೆ. ಬರಬೇಕಾದ ಟ್ಯಾಕ್ಸ್ ವಸೂಲಿ ಮಾಡೋದಕ್ಕೆ ಅಂತೂ ಪಾಲಿಕೆಗೆ ತಲೆನೋವಾಗಿದೆ. .ಪ್ರತಿವರ್ಷ ನಿಗದಿತ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಯೋಜನೆ ರೂಪಿಸಿದ್ರೂ ನಿರೀಕ್ಷಿತ ತೆರಿಗೆ ಮಾತ್ರ ಖಾಜಾನೆಗೆ ಬಂದು ಸೇರುತ್ತಿಲ್ಲ..ಪ್ರಸ್ತುತ ವರ್ಷದಲ್ಲಿ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಪಾಲಿಕೆ ಹೊಂದಿತ್ತು.ಆದರೆ ಸಂಗ್ರಹವಾಗಿರೋದು ಮಾತ್ರ 2400 ಕೋಟಿ ..ಗುರಿ ತಲುಪಲು ಇನ್ನೂ ಕೋಟಿ…

Read More

ಬೀದರ್:‌ ಜೈಲಿನಿಂದ ಹೊರ ಬಂದ ಮುಖಂಡ ನಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಹೌದು ಪಿಸ್ತೂಲ್ ತೋರಿಸಿ ಹಣ ವಸೂಲಿ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜಿಲ್ಲಾ ಪಂಚಾಯತ ಮಾಜಿ ಸದಸ್ಯನಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿರುವ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಗ್ರಾಮದಲ್ಲಿ ನಡೆದಿದೆ. ಪಿಸ್ತೂಲ್ ಹಿಡಿದ ಹಣ ವಸೂಲಿ ಮಾಡಿದ ಹಿನ್ನಲೆ ಪೊಲಿಸರು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು. https://ainlivenews.com/another-road-rage-in-silicon-city-young-woman-stunned-by-youth/ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಗುಂಡುರಡ್ಡಿ ಜಾಮೀನು ಮೇಲೆ ಹೊರ ಬಂದ ತಕ್ಷಣ ಅವರ ಅಭಿಮಾನಿ ಬಳಗದಿಂದ ಹಾಲಿನ ಅಭಿಷೇಕ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಗ್ರಾಮದ ಮಂದಿರದಲ್ಲಿ ಎರಡು ನೂರು ಲೀಟರ್ ಹಾಲಿನಿಂದ ಅಭಿಷೇಕ್ ಮಾಡಿ ಹಾರ ಹಾಕಿ ಗುಂಡುರೆಡ್ಡಿ ಅಭಿಮಾನಿ ಬಳಗ ಸಂತಸಪಟ್ಟಿದೆ.

Read More

ಬೆಂಗಳೂರು: ಜನವರಿ 16ರಿಂದ ನಾಲ್ಕು ದಿನಗಳ ಕಾಲ ಪೀಣ್ಯ ಫ್ಲೈಓವರ್  ಬಂದ್ ಆಗಲಿದೆ ಕಾರಣವೇನೇಂದರೆ ಲೋಡ್ ಟೆಸ್ಟಿಂಗ್ ಮಾಡುವ ಸಲುವಾಗಿ ಪೀಣ್ಯ ಫ್ಲೈಓವರ್  ಬಂದ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ ಹಾಗೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. 15 ಮೀಟರ್ ಅಗಲದ, 4.2 ಕಿಮೀ ಉದ್ದದ ಮೇಲ್ಸೇತುವೆ ಪೀಣ್ಯದಲ್ಲಿ ಪ್ರಾರಂಭವಾಗಿ ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. 2022ರಲ್ಲಿ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್‌ನ ಕೇಬಲ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ಹೆವಿ ವೆಹಿಕಲ್‌ಗಳ ಓಡಾಟಕ್ಕೆ ಬ್ರೇಕ್ ಹಾಕಲಾಗಿತ್ತು. https://ainlivenews.com/2023-24-class-5th-8th-9th-class-public-exam-schedule-announced/ ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11 ಗಂಟೆಯವರೆಗೆ ಈ ಫ್ಲೈಓವರ್ ಕ್ಲೋಸ್ ಆಗಲಿದೆ. ಈ ಹಿನ್ನೆಲೆ ಎಲ್ಲಾ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದರಿಂದಾಗಿ ಮುಂದಿನ ವಾರ ತುಮಕೂರು ರಸ್ತೆಯಲ್ಲಿ ಬೃಹತ್ ವಾಹನ ದಟ್ಟಣೆ ಉಂಟಾಗಲಿದೆ ಎಂದು ವರದಿಗಳು ತಿಳಿಸಿವೆ. ಈ ಫ್ಲೈಓವರ್ 23…

Read More

ಬೆಂಗಳೂರು: ಸಿಗ್ನಲ್ ಗಳಲ್ಲಿ ರೂಲ್ಸ್ ಬ್ರೇಕ್ ಮಾಡೋರೆ ಇನ್ಮುಂದೆ ಎಚ್ಚರವಾಗಿರಬೇಕಿದೆ. ನಿಮ್ಮ ವಾಹನಗಳ ಮೇಲೆ ಸಂಚಾರಿ ಪೊಲೀಸರು ಹದ್ದಿನ ಕಣ್ಣಿಡಲು ಮುಂದಾಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ವಾಹನದ ಮೇಲೆ ಕೇಸ್ ಬೀಳೋದು ಪಕ್ಕಾ. https://ainlivenews.com/2023-24-class-5th-8th-9th-class-public-exam-schedule-announced/ ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಗೆ ಬಿಗ್ ಶಾಕ್‌ ಕಾದಿದ್ದು  ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ಡಿಎಲ್ ಕ್ಯಾನ್ಸಲ್ ಮಾಡಲು ಟ್ರಾಫಿಕ್‌ ಪೊಲೀಸರು ಯೋಚನೆ ಮಾಡುತ್ತಿದ್ದಾರೆ ಯಾಕಂದೆ ಅವರಿಗೂ ಕೂಡ ಇದರ ಬಗ್ಗೆ ವಾರ್ನಿಂಗ್‌ ಕೊಟ್ಟೂ ಕೊಟ್ಟೂ ಸಾಕಾಗಿರುತ್ತದೆ ಹಾಗಾಗಿ ಈ ದಾರಿಯನ್ನು ಹಿಡಿದಿದ್ದಾರೆ. ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ 711 ಜನರ ಡ್ರೈವಿಂಗ್ ಲೈಸೆನ್ಸ್ ಅಮಾನತು 2974 ಡ್ರೈವಿಂಗ್ ಲೈಸೆನ್ಸ್ ಅಮಾನತಿಗೆ ಸಂಚಾರಿ ಪೊಲೀಸರು ಸಾರಿಗೆ ಕಚೇರಿ ಕಳುಹಿಸಿದ್ರು ಈ ಪೈಕಿ 711 ಡ್ರೈವಿಂಗ್ ಲೈಸೆನ್ಸ್ ಅಮಾನತ್ತು ಉಳಿದ 2263 ಮಂದಿಯ ಡ್ರೈವಿಂಗ್ ಲೈಸೆನ್ಸ್ ಅಮಾನತ್ತುಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ

Read More

ಹುಬ್ಬಳ್ಳಿ : ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ರೋಗಿಗಳಿಗೆ ಗುಣಮಟ್ಟ ಚಿಕಿತ್ಸೆ ನೀಡುತ್ತಿರುವ ಅಪೊಲೋ ಆಸ್ಪತ್ರೆಯು, ಮೂತ್ರಶಾಸದ ಆರೈಕೆಯಲ್ಲಿ (ಯುರೋಲೊಜಿಕೇರ್) ದೇಶದಲ್ಲಿ ಮೊದಲ ಬಾರಿಗೆ ಮೋಸೆಸ್ ೨.೦ ತಂತ್ರಜ್ಞಾನವನ್ನು ಪ್ರಾರಂಭಿಸಿದೆ. ಪ್ರಾಯೋಗಿಕವಾಗಿ ಶೇಷಾದ್ರಿಪುರಂನ ಅಪೊಲೋ ಆಸ್ಪತ್ರೆಯಲ್ಲಿ ಈ ಸೇವೆ ಪರಿಚಯಿಸಲಾಗಿದೆ. ಮಧುಮೇಹ, ಅಧಿಕರಕ್ತದೊತ್ತಡ, ಹೃದಯ ತೊಂದರೆ ಹಾಗೂ ಮೂತ್ರಪಿಂಡದಲ್ಲಿ ಕಲ್ಲು ಸೇರಿ ಇತರೆ ಸಮಸ್ಯೆಗಳಿಗೆ ಸುಧಾರಿತ ಲೇಸರ್ ತಂತ್ರ ಜ್ಞಾನ ಮೂಲಕ ಚಿಕಿತ್ಸೆ ನೀಡಲು ಇದು ಸಹಾಯವಾಗುತ್ತದೆ. ಸಂಪೂರ್ಣವಾಗಿ ರಕ್ತರ ಹಿತ ಮತ್ತು ನೋವು ರಹಿತ ಶಸ್ತ್ರ ಚಿಕಿತ್ಸೆಯೂ ಸಿಗಲಿದೆ. ಕೇವಲ ಒಂದು ಗಂಟೆಯಲ್ಲಿ ಮೂತ್ರಪಿಂಡದಲ್ಲಿರುವ ಕಲ್ಲು ಮತ್ತು ಪ್ರಾಸ್ಟೇಟ್ ಅನ್ನು ಅತ್ಯಂತ ನಿಖರತೆಯಿಂದ ತೆಗೆದು ಹಾಕಲು ತಂತ್ರಜ್ಞಾನ ನೆರವು ಆಗಲಿದೆ. ಹೆಚ್ಚುದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವುದನ್ನು ತಪ್ಪಿಸಲು ಹಾಗೂ ಶಸ್ತ್ರ ಚಿಕಿತ್ಸೆ ಬಳಿಕ ವೇಗವಾಗಿ ಚೇತರಿಸಿಕೊಳ್ಳಲು ಅನುಕೂಲವಾಗಲಿದೆ ಈ ಮೂಲಕ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಸಾಲಿನಲ್ಲಿ ವಿಶ್ವದಲ್ಲೇ ೩ನೇರಾಷ್ಟ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ. ಮೋಸಸ್ ತಂತ್ರಜ್ಞಾನವನ್ನು ಕಲ್ಲುಗಳಿಗೆ ಚಿಕಿತ್ಸೆ…

Read More

ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ ಮಧುರ ಸ್ವಭಾವದವರೂ ಆಗಿದ್ದು ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಿಷ್ಣಾತರು. ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಪ್ರವರ್ಧಮಾನಕ್ಕೆ ಬಂತು. ಉತ್ತರ ಕರ್ನಾಟಕದ ಜನಮಾನಸದಲ್ಲಿ ಬಹಳವಾಗಿ ಮಹತ್ವ ಪಡೆಯಿತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೋಸೋರ ನಗರದಲ್ಲಿ ನಿರಂತರ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳವರ ದೇವ ಸದೃಶ…

Read More