Author: AIN Author

ಸ್ಯಾಂಡವುಲ್‌ನಲ್ಲಿ ದಿಯಾ ಅನ್ನುವ ಸಿನಿಮಾ ಬಂದಿತ್ತು. ಈ ಚಿತ್ರದ ನಾಯಕ ಪೃಥ್ವಿ ಅಂಬಾರ್ ಅದ್ಭುತವಾಗಿಯೇ ಅಭಿನಯಿಸಿದ್ದರು. ಇದೀಗ ಅಂತಹದ್ದೆ ಪ್ರೇಮಕಥೆಯ ಹೊತ್ತುಬಂದಿರುವ ಜೂನಿ ಕ್ಯಾರೆಕ್ಟರ್ ಟೀಸರ್ ಅನಾವರಣಗೊಂಡಿದೆ. ಜೂನಿ ಕ್ಯಾರೆಕ್ಟರ್ ಟೀಸರ್ ದಿಯಾ ಸಿನಿಮಾ ಫ್ಲೇವರ್ ಕೊಡುತ್ತಿದೆ. ಚೇಫ್ ಅವತಾರದಲ್ಲಿ ಪೃಥ್ವಿ ಕಾಣಿಸಿಕೊಂಡಿದ್ದಾರೆ. ಸಖತ್ ಇಂಪ್ರೆಸಿವ್ ಆಗಿದೆ ಕ್ಯಾರೆಕ್ಟರ್ ಟೀಸರ್.. ‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ಜೂನಿ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್ ನಲ್ಲಿ ನಿರ್ದೇಶಕರ ಕೋರ್ಸ್ ಮುಗಿಸಿರುವ ಅವರೀಗ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್ ಜೂನಿ ಸಿನಿಮಾದಲ್ಲಿ ನಾಯಕಿ ರಿಷಿಕಾ ನಾಯಕ್ ನಟಿಸಿದ್ದಾರೆ. ‘ಜೂನಿ’ ರೋಮ್ಯಾಂಟಿಕ್ ಕಥಾಹಂದರದ ಸಿನಿಮಾ. ದಿಯಾ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆ ಪ್ರೀತಿ ಆಗುತ್ತಾ? ಎಂಬ ಕಥೆಯ ಎಳೆ ಇಟ್ಕೊಂಡು ಚಿತ್ರ ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್…

Read More

ಹಾಸನ:- ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬಿಟ್ಟಗೊಂಡನಹಳ್ಳಿಯಲ್ಲಿ ಪತ್ನಿ ಮೃತಪಟ್ಟಿದ್ದಾಳೆಂದು ತಿಳಿದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ. 32 ವರ್ಷದ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ಪತ್ನಿ ಬಿಂದುಳನ್ನು ಕೊಲೆ ಮಾಡಬೇಕೆಂದೆ ಪ್ರಶಾಂತ್, ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಪತ್ನಿ ಸತ್ತಿದ್ದಾಳೆಂದು ತಿಳಿದು ಪ್ರಶಾಂತ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ರೆ, ಹಲ್ಲೆಗೊಳಗಾದ ಪತ್ನಿ ಬಿಂದು ಇನ್ನೂ ಜೀವಂತವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗೌರಿಕೊಪ್ಪಲು ಗ್ರಾಮದ ನಿವಾಸಿಯಾಗಿರುವ ಪ್ರಶಾಂತ್, 2 ವರ್ಷಗಳ ಹಿಂದೆ ಬಿಟ್ಟಗೊಂಡನಹಳ್ಳಿಯ ಬಿಂದು ಜೊತೆ ವಿವಾಹವಾಗಿದ್ದ. ಬಳಿಕ ಕೌಟುಂಬಿಕ ಕಲಹದಿಂದಾಗಿ ಬಿಂದು ತವರು ಮನೆ ಸೇರಿದ್ದಳು. ಇದರಿಂದ ಕೋಪಗೊಂಡಿದ್ದ ಪ್ರಶಾಂತ್, ಬಿಂದು ಇದ್ದ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಬಿಂದು ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿದ್ದರಿಂದ ಬಿಂದು ಮೃತಪಟ್ಟಿದ್ದಾಳೆಂದು ಭಾವಿಸಿ ಆಕೆ ಮನೆಯಲ್ಲೇ ಪ್ರಶಾಂತ್ ನೇಣಿಗೆ ಶರಣಾಗಿದ್ದಾನೆ. ಆದ್ರೆ, ಹಲ್ಲೆಯಿಂದ ಗಂಭೀರ ಗಾಯಗೊಂಡ…

Read More

ಬೆಂಗಳೂರು:- ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್​ಗೆ ಕೊರೋನಾ ಪಾಸಿಟಿವ್ ಬಂದಿದ್ದು, ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭು ಶಂಕರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಕೊವಿಡ್‌ ಪಾಸಿಟಿವ್ ದೃಢಪಟ್ಟಿರುವುದರಿಂದ ಥಾವರ್‌ಚಂದ್ ಗೆಹ್ಲೋಟ್‌ ಅವರು ರಾಜಭವನದಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಹೀಗಾಗಿ ಮುಂದಿನ ದಿನಾಂಕದವರೆಗೆ ರಾಜ್ಯಪಾಲರ ನಿಗದಿತ ಕಾರ್ಯಕ್ರಮ ರದ್ದು ಮಾಡಲಾಗಿದೆ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಚಿತ್ರವು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಪಡೆಯುವಲ್ಲಿ ಯಶಸ್ವಿಯಾಗಿದ್ದು, ವೀಕ್ಷಕರಿಂದ ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡದುಕೊಳ್ಳುವಲ್ಲಿ ಚಿತ್ರ ಮುಂಚೂಣಿಯಲ್ಲಿದೆ. ಶತಕೋಟಿ ಗಳಸಿದ ಖುಷಿಗೆ ಚಿತ್ರತಂಡ ಇತ್ತೀಚಿಗೆ ಸೆಲೆಬ್ರಿಟಿಗಳಿಗಾಗಿ ಪಾರ್ಟಿ ಆಯೋಜಿಸಿ ಸಂಭ್ರಮಿಸಿತ್ತು. ಇದರ ಬೆನ್ನಲ್ಲೇ ನಟ ದರ್ಶನ್​ ಕಾರ್ಯಕ್ರಮದ ನಿಮಿತ್ತ ದುಬೈಗೆ ತೆರಳಿದ್ದರು. ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅವರು ಕಾಟೇರ ಸಕ್ಸಸ್​ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ ಎಂದು ಟ್ವೀಟ್ ಮಾಡುವ​ ಮೂಲಕ ವಿರೋಧಿಗಳಿಗೆ ಟಾಂಗ್​ ಕೊಟ್ಟಿದ್ದಾರೆ.

Read More

ಚೆನ್ನೈ:- ಕೇಂದ್ರದಲ್ಲಿ ಮಾತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಬರಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬರುವುದಂತೂ ಖಚಿತ. 400 ಅಥವಾ 450 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿಯಲಿದೆ ಎಂಬುದಷ್ಟೇ ಮುಂದಿರುವ ಪ್ರಶ್ನೆ ಎಂದು ಅವರು ಹೇಳಿದ್ದಾರೆ. ಬಿಜೆಪಿ ಗೆಲುವಿಗೆ ತಮಿಳುನಾಡಿನ ಕೊಡುಗೆ ಎಷ್ಟು? ದೇಶದ ವಿವಿಧ ಭಾಗಗಳ ಪಾಲುದಾರಿಕೆ ಏನು ಎಂಬುದು ಈಗಿನ ಚರ್ಚೆಯ ವಿಷಯ ಎಂದು ಅವರು ಹೇಳಿದ್ದಾರೆ. 2024 ಬಿಜೆಪಿ ಪಾಲಿಗೆ ಐತಿಹಾಸಿಕ ವರ್ಷ ಆಗಿರಲಿದೆ. ಸ್ಥಿರ ಸರ್ಕಾರ ಹಾಗೂ ದೃಢವಾದ ಪ್ರಧಾನಿಯನ್ನು ಜನರು ಬಯಸುತ್ತಿದ್ದಾರೆ. ದೇಶಕ್ಕೆ ಬಲಿಷ್ಠ ಪ್ರಧಾನಿ ಬೇಕಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯು ರಾಜ್ಯಗಳನ್ನು ಅವಲಂಬಿಸಿಲ್ಲ. ಹಾಗಾಗಿ ತಮಿಳುನಾಡಿನಲ್ಲೂ ಬಿಜೆಪಿ ಗಮನಾರ್ಹ ಸಾಧನೆ ಮಾಡಲಿದ್ದು, ರಾಜ್ಯದಿಂದ ಬಿಜೆಪಿ ಅಭ್ಯರ್ಥಿಗಳು ಗೆದ್ದು ಇತಿಹಾಸ ರಚಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

Read More

ಹುಬ್ಬಳ್ಳಿ:- ರಾಮಮಂದಿರ ನಿರ್ಮಾಣದ ಕ್ರೆಡಿಟ್‌ ಪಡೆಯಲು ಕಾಂಗ್ರೆಸ್ಸಿಗರ ಯತ್ನ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದ್ದ ಕಾಂಗ್ರೆಸ್ಸಿಗರು ಈಗ ರಾಮಮಂದಿರದ ಯಶಸ್ಸಿನ ಪಾಲು ಪಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದರು. ರಾಮ ಕಾಲ್ಪನಿಕ. ರಾಮಾಯಣ ನಡೆದಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ. ಶ್ರೀರಾಮ ಜನ್ಮ ಭೂಮಿ ಕುರಿತು ನಿರ್ಣಯ ಕೈಗೊಳ್ಳಬಾರದೆಂದು ಕಾಂಗ್ರೆಸ್ಸಿಗರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈಗ ಎಲ್ಲವೂ ಬಗೆಹರಿದು, ರಾಮಮಂದಿರ ನಿರ್ಮಾಣವಾಗಿದೆ. ಇದರ ಕ್ರೆಡಿಟ್‌ ಪಡೆಯಲು ಕಾಂಗ್ರೆಸ್ಸಿಗರು ಹೊರಟಿದ್ದಾರೆ. ಜನರ ದಾರಿ ತಪ್ಪಿಸಲು ಹೊರಟಿದ್ದಾರೆ. ಜನರು ಬುದ್ಧಿವಂತರಿದ್ದು, ಎಲ್ಲವೂ ಗೊತ್ತಾಗುತ್ತದೆ’ ಎಂದು ಹೇಳಿದರು. ‘ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ್ದು. ರಾಜ್ಯದ ಕಾಂಗ್ರೆಸ್‌ ಸರ್ಕಾರ ಇದುವರೆಗೆ ಒಂದು ಕಾಳು ಅಕ್ಕಿ ಕೊಟ್ಟಿಲ್ಲ. ಚುನಾವಣೆ ವೇಳೆ 10 ಕೆ.ಜಿ. ಅಕ್ಕಿ ಕೊಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಆದರೆ, ಇದುವರೆಗೆ ಕೊಟ್ಟಿಲ್ಲ’ ಎಂದು ಟೀಕಿಸಿದರು.

Read More

ಸಾಮಾನ್ಯವಾಗಿ ಬಿರಿಯಾನಿಗಳಲ್ಲಿ ನಾವು ಹೆಚ್ಚಾಗಿ ಬಳಸುವುದು ಲವಂಗ . ಲವಂಗ ಬರೀ ರುಚಿಗೆ ಮಾತ್ರ ಅಲ್ಲ, ಇದರಿಂದ ಹಲವಾರು ಪ್ರಯೋಜನಗಳಿದೆ. ಲವಂಗದಲ್ಲಿ ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಹೈಡ್ರೋಕ್ಲೋರಿಕ್ ಆಮ್ಲ, ಮ್ಯಾಂಗನೀಶ್ ಮತ್ತು ಜೀವಸತ್ವಗಳು ಇವೆ ಅನೇಕ ಜನರಿಗೆ, ಕೆಮ್ಮು ಒಂದು ಸಮಸ್ಯೆಯಾಗಿದೆ. ಕೆಮ್ಮು ಹೆಚ್ಚಾದಾಗ.. ಚಹಾದಲ್ಲಿ ಶುಂಠಿಯ ಬದಲು ಲವಂಗವನ್ನು ಸೇರಿಸಲಾಗುತ್ತದೆ ಮತ್ತು ಕುಡಿಯುವುದರಿಂದ ಮುಕ್ತಿ ಸಿಗುತ್ತದೆ. ಅಂತೆಯೇ, ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಲವಂಗವನ್ನು ಹುರಿದು ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರೆಸಿದರೆ ಜೀರ್ಣವಾಗುತ್ತದೆ. ಮೂರು ಲೀಟರ್ ನೀರಿಗೆ ನಾಲ್ಕು ಗ್ರಾಂ ಲವಂಗವನ್ನು ಸೇರಿಸಿ ಮತ್ತು ನೀರು ಅರ್ಧಕ್ಕೆ ಹೋಗುವವರೆಗೆ ಕುದಿಸಿ ಕುಡಿಯಿರಿ. ಆರು ಲವಂಗವನ್ನು ಒಂದು ಕಪ್ ನೀರಿನೊಂದಿಗೆ ಬೆರೆಸಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಚಮಚಕ್ಕೆ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡರೆ, “ಅಸ್ತಮಾ” ಕಡಿಮೆಯಾಗುತ್ತದೆ. ತಲೆನೋವನ್ನು ಕಡಿಮೆ ಮಾಡಲು ಹಾಲಿನಲ್ಲಿ ಲವಂಗದ ಪುಡಿ ಮತ್ತು ಉಪ್ಪನ್ನು ಸೇರಿಸಿ ಹಣೆಯ ಮೇಲೆ ಪ್ಯಾಕ್ ಮಾಡಲಾಗುತ್ತದೆ, ಇದನ್ನು ಪಾಕವಿಧಾನಗಳಲ್ಲಿ ಬಳಸುವುದರಿಂದ…

Read More

ಶೀತ ಮತ್ತು ಕೆಮ್ಮು ವಿಶೇಷವಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿದೆ. ನೆಗಡಿ ತಾಳಲಾರದೆ ಕೆಲವರು ಆಯಂಟಿಬಯೋಟಿಕ್ಸ್ ಮೊರೆ ಹೋಗುತ್ತಾರೆ. ಆದರೆ ಆಯಂಟಿಬಯೋಟಿಕ್‌ಗಳನ್ನು ಸೇವಿಸುವುದರಿಂದ ಶೀತ ಮತ್ತು ಕೆಮ್ಮು ಹೋಗಲಾಡಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆಮದ್ದು ತುಂಬಾ ಉಪಯುಕ್ತವಾಗಿವೆ. ಕೆಮ್ಮು, ಗಂಟಲು ನೋವು ಮತ್ತು ಎದೆಯಲ್ಲಿ ಕಫ ಶೇಖರಣೆಯಂತಹ ಸಮಸ್ಯೆಗಳು ತೀವ್ರವಾಗಿರುತ್ತವೆ. ಈ ಸಮಸ್ಯೆಗಳನ್ನು ಪರಿಹರಿಸಲು ಮನೆಮದ್ದುಗಳನ್ನು ಅನುಸರಿಸುವುದು ಸೂಕ್ತ. ಜೇನು-ನಿಂಬೆ ಚಹಾ ನೆಗಡಿ ಮತ್ತು ಕೆಮ್ಮಿಗೆ ದಿನಕ್ಕೆ 3 ಬಾರಿ ಜೇನುತುಪ್ಪ ಮತ್ತು ನಿಂಬೆ ಚಹಾವನ್ನು ಸೇವಿಸಿದರೆ, ನೀವು ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಬಿಸಿ ನೀರಿನಲ್ಲಿ 2 ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಕುಡಿಯಿರಿ. ಜೇನುತುಪ್ಪವು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ನಿಂಬೆಯಲ್ಲಿ ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅರಿಶಿನ-ಹಾಲು ಅರಿಶಿನವು ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇವು ಗಂಟಲು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು…

Read More

ಬೆಂಗಳೂರು:- ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಲು ನೀವು RTO ಗೆ ಭೇಟಿ ನೀಡಬೇಕಾಗಿಲ್ಲ. ಆರ್‌ಟಿಒ ಕಚೇರಿಯ ಹೊಸ ನಿಯಮಗಳು, ಕಾನೂನುಗಳು ಮತ್ತು ಕಲಿಕಾ ಪರವಾನಗಿಗಳ ಭಯದಿಂದಾಗಿ ಕೇಂದ್ರ ಸಾರಿಗೆ ಸಚಿವಾಲಯವು ನಿಯಮಗಳನ್ನು ಜಾರಿಗೆ ತರಲು ಪ್ರಾರಂಭಿಸಿದೆ. ಆದ್ದರಿಂದ, ಅದನ್ನು ಕಡಿತಗೊಳಿಸುವ ಮೊದಲು ನಿಮ್ಮ ಚಲನ್ ಅನ್ನು ಪಾವತಿಸಿ. ನಿಮ್ಮ ಡ್ರೈವಿಂಗ್ ಲೈಸೆನ್ಸ್ (DL) ಗಾಗಿ ನಿಮ್ಮ ಮನೆಯಲ್ಲಿ ಕುಳಿತು 10 ನಿಮಿಷಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ಮೊದಲು ನೀವು ರಸ್ತೆ ಸಾರಿಗೆಯ ಅಧಿಕೃತ ವೆಬ್‌ಸೈಟ್ https://parivahan.gov.in/parivahan/ ಗೆ ಹೋಗಬೇಕು ಮತ್ತು ನೀವು ಮೊದಲು ಕಲಿಕೆಯ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಕಲಿಕೆಗೆ ಅರ್ಜಿ ಸಲ್ಲಿಸಿದ ನಂತರ, ನೀವು ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆಯನ್ನು ನೀಡಬೇಕಾದ ಅದೇ ದಿನಾಂಕದಂದು ನೀವು ಪಡೆಯುತ್ತೀರಿ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನಿಮ್ಮ ಕಲಿಕೆಯ ಪರವಾನಗಿಯನ್ನು ತಯಾರಿಸಲಾಗುತ್ತದೆ. ನಂತರ ನೀವು ಆರು ತಿಂಗಳೊಳಗೆ ನಿಮ್ಮ ಶಾಶ್ವತ ಚಾಲನಾ ಪರವಾನಗಿಯನ್ನು ಮಾಡಬಹುದು. ಆಧಾರ್ ಕಾರ್ಡ್ ಪಾಸ್ಪೋರ್ಟ್ ಸೈಟ್ ಫೋಟೋ 8ನೇ…

Read More

ಜಪಾನ್: ಕಳೆದ ವಾರವಷ್ಟೇ ಪ್ರಬಲ ಭೂಕಂಪಕ್ಕೆ ತುತ್ತಾಗಿದ್ದ ಜಪಾನ್‌ನಲ್ಲಿ ಇದೀಗ ಮತ್ತೊಮ್ಮೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6ರಷ್ಟು ದಾಖಲಾಗಿದೆ. ಜಪಾನ್‌ನ ಕೇಂದ್ರ ಭಾಗದಲ್ಲೇ ಭೂಕಂಪದ ಕೇಂದ್ರ ಪತ್ತೆಯಾಗಿದೆ. ಜಪಾನ್‌ ದೇಶದ ಸಾಗರ ತೀರಗಳಲ್ಲೂ ಭೂಕಂಪದ ಅನುಭವ ಆಗಿದೆ ಎಂದು ಅಲ್ಲಿನ ಭೂಗರ್ಭ ಸಂಶೋಧನಾ ಇಲಾಖೆ ಮಾಹಿತಿ ನೀಡಿದೆ. https://ainlivenews.com/eating-too-much-cashew-nuts-is-not-good-for-your-health/ ಆದರೆ, ಸದ್ಯದ ಮಟ್ಟಿಗೆ ಸುನಾಮಿ ಸಂಭವಿಸುವ ಯಾವುದೇ ಮುನ್ನೆಚ್ಚರಿಕೆಯನ್ನೂ ನೀಡಲಾಗಿಲ್ಲ. ಆದರೆ, ಜಪಾನ್ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಸದ್ಯ ಭೂಕಂಪದಿಂದಾಗಿ ಆಗಿರಬಹುದಾದ ಅನಾಹುತಗಳನ್ನು ಪರಿಶೀಲಿಸಲು ಹಾಗೂ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವತ್ತ ಗಮನ ಕೇಂದ್ರೀಕರಿಸಿದೆ.

Read More