Author: AIN Author

ಜೊತೆ ಜೊತೆಯಲಿ’ (Jothe Jotheyali) ನಟಿ ಮೇಘಾ ಶೆಟ್ಟಿ (Megha Shetty) ಮತ್ತೆ ಗ್ಲ್ಯಾಮರಸ್ ಆಗಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ನೀಲಿ ಬಣ್ಣದ ಉಡುಗೆಯಲ್ಲಿ ನಟಿ ಕಂಗೊಳಿಸಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ಕೈವಾ’ ನಟಿ ಮೇಘಾ, ನೀಲಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಮೇಘಾ ಸೌಂದರ್ಯವನ್ನು ಹಾಲಿವುಡ್ ನಟಿಯರಿಗೆ ಹೋಲಿಸಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಅನಿರುದ್ಧಗೆ ಹೀರೋಯಿನ್‌ ಆಗಿ ಮೇಘಾ ಶೆಟ್ಟಿ ಮಿಂಚಿದ್ದರು. ಈ ಸೀರಿಯಲ್ ಪ್ರಸಾರವಾದ ಕೆಲವೇ ದಿನಗಳಲ್ಲಿ ಅನು ಪಾತ್ರಧಾರಿ ಮೇಘಾ ಕೂಡ ಹಿಟ್ ಆದರು ಬಳಿಕ ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ಜೋಡಿಯಾಗಿ ‘ತ್ರಿಬಲ್ ರೈಡಿಂಗ್’, ಡಾರ್ಲಿಂಗ್ ಕೃಷ್ಣಗೆ (Darling Krishna) ನಾಯಕಿಯಾಗಿ ‘ದಿಲ್‌ಪಸಂದ್’, ಧನ್ವೀರ್ ಜೊತೆ ‘ಕೈವಾ’ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಟಿಸಿದ್ದರು. ಇದೀಗ ದೊಡ್ಮನೆ ಕುಡಿ ವಿನಯ್…

Read More

ವೀರ್ಯ ಸಂಬಂಧಿ ಸಮಸ್ಯೆಗಳು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತವೆ. ಈ ಕಾರಣದಿಂದಾಗಿ, ಗರ್ಭಧರಿಸುವಲ್ಲಿ ಕಷ್ಟವಾಗಬಹುದು. ಲೈಂಗಿಕ ಜೀವನದ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ವೀರ್ಯವು ಆರೋಗ್ಯಕರ ವಾಗಿರುವುದು ಬಹಳ ಮುಖ್ಯ. ಕಳಪೆ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮುಂತಾದ ಹಲವು ಕಾರಣಗಳಿಂದ ವೀರ್ಯದ ಗುಣಮಟ್ಟವು ಕಳಪೆಯಾಗಿರಬಹುದು. ಆಗಾಗ, ಕೆಲವು ಪುರುಷರ ತಪ್ಪು ಅಭ್ಯಾಸಗಳಿಂದಾಗಿ, ಅವರ ವೀರ್ಯ ಅಥವಾ ವೀರ್ಯದಲ್ಲಿನ ಇಳಿಕೆ, ಕಳಪೆ ಗುಣಮಟ್ಟದಂತಹ ಸಮಸ್ಯೆ ಇರುತ್ತದೆ. ನೀವು ಪ್ರತಿದಿನ ಮಾಡುವ ತಪ್ಪುಗಳು ನಿಮ್ಮ ವೀರ್ಯದ ಮೇಲೆ ಪರಿಣಾಮ ಬೀರುತ್ತವೆ ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುವ ಅನಾರೋಗ್ಯಕರ ಅಭ್ಯಾಸಗಳು ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸಬೇಡಿ ನಿಮಗೆ ಬಿಗಿಯಾದ ಜೀನ್ಸ್, ಪ್ಯಾಂಟ್ ಧರಿಸುವ ಅಭ್ಯಾಸವಿದ್ದರೆ, ನಿಮ್ಮ ಫ್ಯಾಶನ್ ಶೈಲಿಯನ್ನು ಬದಲಿಸಿ. ಅಧ್ಯಯನವೊಂದರ ಪ್ರಕಾರ, ಸ್ಲಿಮ್ ಫಿಟ್ ಪ್ಯಾಂಟ್, ಜೀನ್ಸ್ ಅನ್ನು ನಿರಂತರವಾಗಿ ಧರಿಸುವುದು ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ವೃಷಣಗಳು ದೇಹಕ್ಕೆ ಹತ್ತಿರವಾಗುತ್ತವೆ, ಅದು ಬೆಚ್ಚಗಿರುತ್ತದೆ. ಇದು ವೀರ್ಯಕ್ಕೆ ಒಳ್ಳೆಯದಲ್ಲ.…

Read More

ಬೆಂಗಳೂರು: ರಾಮಮಂದಿರ (Ram Mandir) ಉದ್ಘಾಟನೆ ಮತ್ತು ರಾಮನ ಮೂರ್ತಿಯ ಪ್ರತಿಷ್ಠಾಪನೆಯ ವಿಶೇಷ ಸಂದರ್ಭದಲ್ಲಿ ನಾವಿದ್ದೇವೆ. ಕಾಂಗ್ರೆಸ್ (Congress) ಮುಖಂಡರಿಗೆ ಆಹ್ವಾನ ಇದ್ದರೂ ತಾವು ಹೋಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದು ಅತ್ಯಂತ ದುರ್ದೈವದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಹೇಳಿಕೆ ನೀಡಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ 2024ರ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಕಾಂಗ್ರೆಸ್ ಪಕ್ಷದ ನಿಲುವನ್ನು ನಾನು ಖಂಡಿಸುತ್ತೇನೆ ಎಂದು ತಿಳಿಸಿದರು. https://ainlivenews.com/are-you-going-to-lakshadweep-book-tickets-with-this-code-and-get-discount/ ರಾಮರಾಜ್ಯ, ರಾಮನ ಕನಸು ನನಸು ಆಗಬೇಕಿದೆ. ಆದರೆ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರು ಯಾಕಾಗಿ ರಾಮಮಂದಿರ ಉದ್ಘಾಟನೆಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಲಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು…

Read More

ಬೀಜಿಂಗ್: ಪ್ರಧಾನಿ ಮೋದಿ ವಿರುದ್ಧ ಹಾಗೂ ಭಾರತದ ವಿರುದ್ಧ ತಮ್ಮ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ ನಡುವೆಯೇ ಭಾರತದಲ್ಲಿ ಮಾಲ್ಡೀವ್ಸ್‌ ವಿರುದ್ಧ ಬೃಹತ್ ಬಹಿಷ್ಕಾರ ಅಭಿಯಾನ ಆರಂಭವಾಗಿದೆ. ಈ ನಡುವೆ ಹೆಚ್ಚಿನ ಪ್ರವಾಸಿಗರನ್ನು ದ್ವೀಪ ರಾಷ್ಟ್ರಕ್ಕೆ ಕಳುಹಿಸುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮಂಗಳವಾರ ಚೀನಾಗೆ ಮನವಿ ಮಾಡಿದ್ದಾರೆ. 2023 ರಲ್ಲಿ ಮಾಲ್ಡೀವ್ಸ್‌ ದ್ವೀಪಸಮೂಹಕ್ಕೆ ಭಾರತವೇ ಅಗ್ರ ಪ್ರವಾಸಿ ಮಾರುಕಟ್ಟೆಯಾಗಿದ್ದು, ಆದರೆ ಮೂವರು ಸಚಿವರ ಹೇಳಿಕೆಗಳ ಬಳಿಕ ಭಾರತದಲ್ಲಿ #BoycottMaldives ಅಭಿಯಾನ ಜೋರಾಗಿದೆ. ಅನೇಕರು ಮಾಲ್ಡೀವ್ಸ್‌ ಪ್ರವಾಸ ಕ್ಯಾನ್ಸಲ್‌ ಮಾಡಿರೋದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. https://ainlivenews.com/cancellation-of-dog-meat-consumption-bill-passed-in-the-south-korean-parliament/ ಇನ್ನು, ಪ್ರಸ್ತುತ ಚೀನಾಕ್ಕೆ 5 ದಿನಗಳ ಭೇಟಿಯಲ್ಲಿರೋ ಮೊಹಮ್ಮದ್ ಮುಯಿಝು ಚೀನಾ ಪರವಾಗಿದ್ದು, ಭಾರತ ವಿರೋಧಿಯಾಗಿದ್ದಾರೆ. ಮಂಗಳವಾರದಂದು ಫುಜಿಯಾನ್ ಪ್ರಾಂತ್ಯದಲ್ಲಿ ಮಾಲ್ಡೀವ್ಸ್ ಬ್ಯುಸಿನೆಸ್ ಫೋರಮ್‌ಗೆ ನೀಡಿದ ಭಾಷಣದಲ್ಲಿ ಮುಯಿಝು ತನ್ನ ಭೇಟಿಯ ಎರಡನೇ ದಿನದಂದು ಚೀನಾವನ್ನು ದ್ವೀಪ ರಾಷ್ಟ್ರದ “ಹತ್ತಿರದ” ಮಿತ್ರ ಎಂದು ಕರೆದರು. ಚೀನಾ ನಮ್ಮ ಹತ್ತಿರದ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು…

Read More

ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟ ನೀಡಿದ ಬಳಿಕ ಗೂಗಲ್‌ ಸರ್ಚ್‌ನಲ್ಲಿ ಹಾಗೂ ಟ್ರಾವೆಲ್‌ ಪೋರ್ಟಲ್‌ಗಳಲ್ಲಿ ಲಕ್ಷದ್ವೀಪದ್ದೇ ಹೆಚ್ಚು ಸುದ್ದಿ. ಈ ಹಿನ್ನೆಲೆ ಮಾಲ್ಡೀವ್ಸ್‌ ಬದಲು ಲಕ್ಷದ್ವೀಪ ಹಾಗೂ ಭಾರತದ ಇತರೆ ಬೀಚ್, ದ್ವೀಪಗಳಿಗೆ ಹೋಗಲು ಅನೇಕ ಭಾರತೀಯರು ಮುಂದಾಗ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಲಕ್ಷದ್ವೀಪ ವಿಮಾನ ಟಿಕೆಟ್‌ಗಳಿಗೆ ಪೇಟಿಎಂ ಡಿಸ್ಕೌಂಟ್‌ ಅನ್ನೂ ಘೋಷಿಸಿದೆ. Paytm ‘FLYLAKSHA’ ಎಂಬ ಪ್ರೋಮೋ ಕೋಡ್ ಬಳಸಿದ್ರೆ ಲಕ್ಷದ್ವೀಪಕ್ಕೆ ವಿಮಾನ ಟಿಕೆಟ್‌ಗಳ ಮೇಲೆ 10 ಪ್ರತಿಶತ ರಿಯಾಯಿತಿಯನ್ನು ಪೇಟಿಎಂ ಘೋಷಿಸಿದೆ. ಪೇಟಿಎಂನಲ್ಲಿ ಲಕ್ಷದ್ವೀಪಕ್ಕೆ ಪ್ರಯಾಣಕ್ಕಾಗಿ ಹುಡುಕಾಟಗಳು 50 ಪಟ್ಟು ಹೆಚ್ಚಾದ ನಂತರ ಈ ನಿರ್ಧಾರ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಅಗತ್ತಿ ದ್ವೀಪದಲ್ಲಿರುವ ಲಕ್ಷದ್ವೀಪದ ಏಕೈಕ ವಿಮಾನ ನಿಲ್ದಾಣಕ್ಕೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರವೇಶಿಸಬಹುದು. ಏರ್ ಇಂಡಿಯಾ ಈ ಈ ಪ್ರದೇಶಕ್ಕೆ ವಿಮಾನಗಳನ್ನು ನಿರ್ವಹಿಸುತ್ತದೆ. ಇನ್ನು, ಡಿಸ್ಕೌಂಟ್‌ ಮಾತ್ರವಲ್ಲದೆ, ಕ್ಯಾನ್ಸಲ್‌ (ರದ್ದತಿ) ಶುಲ್ಕವನ್ನು ಭರಿಸದೆಯೇ ತಮ್ಮ ಪ್ರಯಾಣದ ಯೋಜನೆಗಳನ್ನು ಮಾರ್ಪಡಿಸಲು ಬಳಕೆದಾರರಿಗೆ ಅವಕಾಶ…

Read More

ಕಿವಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ರಕ್ತಹೀನತೆ, ವಿಟಮಿನ್ ಬಿ ಕೊರತೆ, ವೈರಲ್ ಸೋಂಕುಗಳನ್ನು ಗುಣಪಡಿಸಲು ಸಹಕಾರಿ. ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕಗಳ ಜೊತೆಗೆ ವಿಟಮಿನ್ ಬಿ6, ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ನೀರು, ರಂಜಕ, ಮೆಗ್ನೀಸಿಯಮ್, ತಾಮ್ರ, ಸತು,  ಬೀಟಾ ಕ್ಯಾರೋಟಿನ್ ಇತ್ಯಾದಿಗಳು ಇದ್ರಲ್ಲಿವೆ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಯಾವುದನ್ನೂ ಅತಿಯಾಗಿ ಸೇವನೆ ಮಾಡಬಾರದು. ಅದ್ರಲ್ಲಿ ಕಿವಿ ಕೂಡ ಒಂದು. ಕಿವಿ ಹಣ್ಣನ್ನು ಅತಿಯಾಗಿ ಸೇವನೆ ಮಾಡಿದ್ರೆ ಆರೋಗ್ಯ ಸುಧಾರಿಸುವ ಬದಲು ಹಾಳಾಗುತ್ತದೆ. ಅತಿಯಾದ ಕಿವಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಅಲರ್ಜಿ: ವರದಿಯೊಂದರ ಪ್ರಕಾರ  ದಿನದಲ್ಲಿ ಹೆಚ್ಚು ಕಿವಿ ಹಣ್ಣು ಸೇವಿಸಿದರೆ ಕೆಲವು ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಚರ್ಮದ ಮೇಲೆ ಗುಳ್ಳೆ, ಊತ ಅಥವಾ ಉರಿಯೂತ, ಬಾಯಿಯಲ್ಲಿ ಕಿರಿಕಿರಿ ಕಾಣಿಸಿಕೊಳ್ಳಬಹುದು. ಅನೇಕ ಜನರಲ್ಲಿ ಕಿವಿ ಹಣ್ಣಿನ ಅತಿಯಾದ ಸೇವನೆಯಿಂದ ಓರಲ್ ಅಲರ್ಜಿ ಸಿಂಡ್ರೋಮ್ ಕಾಡುವ ಅಪಾಯವಿದೆ. ಇದರಲ್ಲಿ ಬಾಯಿ, ತುಟಿ ಮತ್ತು ನಾಲಿಗೆಯಲ್ಲಿ ಊತ ಕಂಡುಬರುತ್ತದೆ. ಕಿಡ್ನಿ ಸಮಸ್ಯೆ…

Read More

ಸೂರ್ಯೋದಯ: 06:53, ಸೂರ್ಯಾಸ್ತ : 05:55 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯಂ, ಶುಕ್ಲ ಪಕ್ಷ, ದಕ್ಷಿಣಾಯನಮ್, ಹೇಮಂತ ಋತು, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ10:30 ತನಕ ಅಮೃತಕಾಲ: ಬೆ.9:31 ನಿಂದ ಬೆ.10:58 ಅಭಿಜಿತ್ ಮುಹುರ್ತ: ಮ.12:02 ನಿಂದ ಮ.12:46 ತನಕ ಮೇಷ: ರಾಜಕಾರಣಿಗಳಿಗೆ ಉತ್ತಮ ಸ್ಥಾನ ದೊರೆಯುತ್ತದೆ,ನಿಮ್ಮ ಜನ್ಮಸ್ಥಳದಲ್ಲಿನ ಮನೆಯನ್ನು ನವೀಕರಿಸುವ ಯೋಚನೆ, ನಿಮ್ಮ ಪತ್ನಿಯೋಡನೆ ಪಾಲುಗಾರಿಕೆ ವ್ಯಾಪಾರದಲ್ಲಿ ಉತ್ತಮ ಆದಾಯ, ಬಾಕಿ ಇದ್ದ ಹಣ ಕೈ ಸೇರುವುದು, ಸ್ತ್ರೀಯರಿಗೆ ಉದ್ಯೋಗದಲ್ಲಿ ತೊಂದರೆ, ಇರುವ ಉದ್ಯೋಗ ಬದಲಿಸಬೇಡಿ, ಪಿ.ಜಿ ನಡೆಸುವವರಿಗೆ ಉತ್ತಮ ಆದಾಯ, ಶಾಲಾ-ಕಾಲೇಜು ಭೋಧನಾ ಸಂಸ್ಥೆ ಗಳನ್ನು ನಡೆಸುವವರಿಗೆ ಕೊಂಚ ಆತಂಕದ ಪರಿಸ್ಥಿತಿ ಎದುರಿಸಬೇಕಾದಿತು, ಹಣ್ಣು-ತರಕಾರಿ ವ್ಯಾಪಾರಸ್ಥರಿಗೆ ಧನಲಾಭವಿದೆ,ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ,ಗಂಡ ಹೆಂಡತಿ ಮಧುರ ಪ್ರೇಮ ಜೇನುಗೂಡು ಕುಟುಂಬ ಯಾರ ಮಾತಿಗೂ ಕಿವಿಗೊಡಬೇಡಿ, ಇಷ್ಟಪಟ್ಟವರ ಜೊತೆ ಮದುವೆ…

Read More

ದೇವನಹಳ್ಳಿ:- ದೇವನಹಳ್ಳಿಯಂದ ದೆಹಲಿಗೆ ತೆರಳುವಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ‌ ಹಾಗೂ ಆಹಾರ ಸಚಿವರಿಂದ ರಾಮಕೋಟಿ ಜಪ ಮಾಡಲಾಗಿದೆ. ಎಐಸಿಸಿ ಸಭೆಗೆ ತೆರಳುವಾಗ ರಾಮಕೋಟಿ ಜಪ ಮಾಡಿದ್ದಾರೆ. ಮುನಿಯಪ್ಪ ಅವರು, ಪ್ರತಿದಿನ ರಾಮಕೋಟಿ ರಾಮನಾಮ ಬರೆಯುತ್ತಿದ್ದು, ಒಂದ್ಕಡೆ ಅಯೋದ್ಯೆ ರಾಮಮಂದಿರ ಈಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆರೋಪ ಪ್ರತ್ಯಾರೋಪದ ವಿಷಯವಾಗಿದೆ. ಇನ್ನೊಂದ್ಕಡೆ ಕಾಂಗ್ರೆಸ್ ಸಚಿವರಿಂದಲೇ ರಾಮನಾಮ ಜಪ ಮಾಡಲಾಗುತ್ತಿದೆ. ಅಯೋದ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಟಾಪನೆ ಕಾರ್ಯ ಜನವರಿ 22ಕ್ಕೆ ನೆರವೇರಲಿದೆ.ಕಾಂಗ್ರೆಸ್ಸಿನ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ ನೀಡಲಾಗಿತ್ತು. ಕಾರಣಾಂತರಗಳಿಂದ ಕಾಂಗ್ರೆಸ್ ನಾಯಕರು ಆಯೊದ್ಯೆ ಕಾರ್ಯಕ್ರಮಕ್ಕೆ ತೆರಳುತ್ತಿಲ್ಲ. ಸಿದ್ದರಾಮಯ್ಯ ಬೇರೆ ಅಯೊದ್ಯೆ ರಾಮಮಂದಿರ ಕಾರ್ಯಕ್ರಮವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೆ.ಹೆಚ್.ಮುನಿಯಪ್ಪರವರ ರಾಮನಾಮ‌ ಜಪ ಕುತೂಹಲ ಕೆರಲಿಸಿದೆ..

Read More

ಭೋಪಾಲ್:- ಅನ್ನಪೂರ್ಣಿ ಚಿತ್ರದಲ್ಲಿ ಶ್ರೀರಾಮನ ಕುರಿತಾದ ಡೈಲಾಗ್​ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುಯಾಗಿದ್ದು, ನಟಿ ನಯನತಾರಾ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಲವ್​ ಜಿಹಾದ್​ಗೆ ಪ್ರೇರೆಪಿಸಿದ್ದಾರೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕ, ನಿರ್ದೇಶಕ, ನಯನತಾರಾ ಸೇರಿದಂತೆ ಏಳು ಮಂದಿ ವಿರುದ್ಧ ಮಧ್ಯಪ್ರದೇಶದ ಜಬಲ್​ಪುರದ ಒಮ್ಟಿ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಸೇವಾ ಪರಿಷತ್ತಿನ ಮುಖಂಡರೊಬ್ಬರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಲವ್​ ಜಿಹಾದ್​ಗೆ ಪ್ರೇರಣೆ ನೀಡಿದ ಆರೋಪದ ಮೇಲೆ ನಟಿ ನಯನತಾರಾ, ನಿರ್ದೇಶಕ ನೀಲೇಶ್ ಕೃಷ್ಣನ್, ನೆಟ್​ಫ್ಲಿಕ್ಸ್​ ಇಂಡಿಯಾದ ಕಂಟೆಂಟ್ ಹೆಡ್ ಮೋನಿಕಾ ಶೆರ್ಗಿಲ್, ಸಿನಿಮಾದ ನಿರ್ಮಾಪಕ ಹೀಗೆ ಒಟ್ಟು ಏಳು ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹಿಂದೂ ಸೇವಾ ಪರಿಷತ್ತಿನ ಮುಖಂಡರೊಬ್ಬರು ತಿಳಿಸಿದ್ದಾರೆ.

Read More

ಹಾಸನ: ಜಿಲ್ಲೆಯಲ್ಲಿ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾ ಪಂಚಾಯತ್ ಕಛೇರಿ ಎದುರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಇದೆ ವೇಳೆ ಸಂಘದ ಅಧ್ಯಕ್ಷೆ ಮಮತಾ ಮಾತನಾಡಿ, ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋ ತ್ಸಾಹಧನವು ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದ ರಿಂದ ಅವರಿಗೆ ವೇತನ ಸಂಪೂರ್ಣವಾಗಿ ಸಿಗದೆ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿ ರುವ ಹಾಗೂ ಇತರ ವೇತನ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ, ಮೊಬೈಲ್ ಆಧಾರಿತ ಕೆಲಸ ನೀಡುವುದನ್ನು ಕೈಬಿಡುವಂತೆ, ಎನ್‌ಸಿಡಿ, ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಲೆ ಪ್ರೋತ್ಸಾಹಧನ ನೀಡದಿರುವ ಮತ್ತು ಆಶಾಗಳನ್ನು ತಮ್ಮದಲ್ಲದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳು ತ್ತಿರುವುದು ಇತರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವರು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ ಎಂದರು. ಆರ್.ಸಿ.ಹೆಚ್.(ಆಶಾ ನಿಧಿ) ಪೋರ್ಟಲ್‌ನಲ್ಲಿ ಇರುವ ಅಗಣಿತ ಸಮಸ್ಯೆಗಳ ಕಾರಣಗಳಿಂದ ಮಾಡಿದ ಹಲವಾರು ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ. ಕೆಲವು ಕಾಂಪೋನೆಂಟ್‌ಗಳಿಗೆ…

Read More