Author: AIN Author

ಬೆಂಗಳೂರು: ಗ್ಯಾರಂಟಿ ಯೋಜನೆ ಅನುಷ್ಠಾನ ನೆಪದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಾಲೀಮು ಆರಂಭಿಸಿದೆ.ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ತಲುಪವ ದೃಷ್ಟಿಯಿಂದ,ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಕಮಿಟಿ ರಚನೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಮಾಡಿದ್ದು,ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ರೀತಿ ಆಗಿದೆ ಎಂದಿದ್ದಾರೆ. ಯೆಸ್,ಲೋಕಸಭೆ ಚುನಾವಣೆಗೆ ಗ್ಯಾರಂಟಿ ಅಸ್ತ್ರ ಮುಖಾಂತರ ಚುನಾವಣಾ ಅಖಾಡಕ್ಕೆ ಇಳಿಯಲು ಕಾಂಗ್ರೆಸ್ ನಿರ್ಧಾರ ಮಾಡಿದೆ.ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿದ್ದರೂ,ಜನಾಭಿಪ್ರಾಯ ಪಡೆಯಲು ಕಾಂಗ್ರೆಸ್ ವಿಫಲವಾಗಿದೆ. ಈ ಹಿನ್ನಲೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ತಲುಪುವ ದೃಷ್ಠಿಯಿಂದ,ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲು ಕಮಿಟಿ ರಚನೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಈ ಮೂಲಕ ಗ್ಯಾರಂಟಿ ಯೋಜನೆಯನ್ನ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಲು ಕೈ ಪಡೆ ತೀರ್ಮಾನ ಮಾಡಿದೆ.ರಾಜ್ಯಾಧ್ಯಂತ ಸುಮಾರು ಸುಮಾರು 5000 ಕಾಂಗ್ರೆಸ್ ಕಾರ್ಯಕರ್ತರು ಈ ಕಮಿಟಿಯಲ್ಲಿ ಇರಲಿದ್ದಾರೆ.ಕಮಿಟಿಗೆ ಸರ್ಕಾರದಿಂದಲೇ ಖರ್ಚು-ವೆಚ್ಚ ಭರಿಸಲಾಗುತ್ತಿದೆ.ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳು ಕೆಂಡಕಾರಿದೆ. https://ainlivenews.com/nayantaras-annapoorni-movie-removed-from-netfix/ ಇನ್ನು…

Read More

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಲಾರಿ ಮಾಲೀಕರು ತಿರುಗಿಬಿದ್ದಿದ್ದಾರೆ.ಕೇಂದ್ರ ಸರ್ಕಾರ ಜಾರಿ ಮಾಡಿರೋ ಹಿಟ್ ಆಂಡ್ ರನ್ ಕಾಯ್ದೆ ಜಾರಿ ಖಂಡಿಸಿ ರಾಜ್ಯದಲ್ಲಿ ಜನವರಿ 17 ರ ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಮಾಡಿದ್ದಾರೆ.ಇಂದು ದಕ್ಷಿಣ ಭಾರತ ಲಾರಿ ಮಾಲೀಕರ ಸಂಘ ಬೆಂಗಳೂರಿನಲ್ಲಿ ಮೀಟಿಂಗ್ ನಡೆಸಿ ಹೋರಾಟ ರೂಪರೇಷ್ಗಳನ್ನ ಸಿದ್ದಪಡಿಸಿದ್ದಾರೆ. ಹಾಗಾದರೆ ಲಾರಿ ಮುಷ್ಕರದಿಂದ ಏನಿರುತ್ತೆ .. ಏನಿರಲ್ಲ.. ಅಂತ ನೋಡಿಕೊಂಡು ಬರೋಣ ಬನ್ನಿ.. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದಲ್ಲ ಒಂದು ವಿವಾದಿತ ಕಾನೂನುಗಳನ್ನ ಜಾರಿ ಮಾಡ್ತಾನೆ ಇದೆ.ಆರಂಭದಲ್ಲೇ ರೈತ ವಿರೋಧಿ ಕಾನೂನುಗಳನ್ನ ಜಾರಿ ದೇಶವ್ಯಾಪ್ತಿ ಟೀಕೆಗೆ ಗುರಿಯಾದ ಮೋದಿ ಸರ್ಕಾರ ಸರ್ಕಾರ ಇದೀಗ ಚಾಲಕ ವಿರೋಧಿ ಕಾನೂನನ್ನ ಜಾರಿ ಮಾಡಲು ಸಿದ್ದತೆ ನಡೆಸಿದೆ.ಕಾಯ್ದೆ ಜಾರಿ ಮುನ್ನವೇ ದೇಶವ್ಯಾಪ್ತಿ  ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಉತ್ತರ ಭಾರತದಲ್ಲಿ  ಹಿಟ್ ಆಂಡ್ ರನ್ ಕಾಯ್ದೆಯ ವಿರುದ್ದ ಯಶಸ್ವಿಯಾಗಿ ಹೋರಾಟ ನಡೆದಿದೆ. ಇದೀಗ ದಕ್ಷಿಣ ಭಾರತದಲ್ಲಿ ಲಾರಿ…

Read More

ರಿಲಯನ್ಸ್ ಜಿಯೋದಿಂದ (Reliance Jio) ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳನ್ನು (JioTV Premium Plans) ಪರಿಚಯಿಸಲಾಗುತ್ತಿದೆ. ಜಿಯೋ ಪ್ರೀಪೇಯ್ಡ್ ಬಳಕೆದಾರರು ಈಗ ಜಿಯೋಟಿವಿ ಪ್ರೀಮಿಯಂ ಪ್ಲ್ಯಾನ್‌ಗಳ ಜೊತೆಗೆ ನಿರಂತರ ಮನರಂಜನೆ ಆನಂದಿಸಬಹುದು. ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲ್ಯಾನ್‌ಗಳು ಇರಲಿದ್ದು, ಇದರ ಮೂಲಕ ಅನಿಯಮಿತ ಡೇಟಾ, ಧ್ವನಿ, ಎಸ್‌ಎಂಎಸ್‌ ಹಾಗೂ 14 ಪ್ರಮುಖ OTT (ಓವರ್ ದಿ ಟಾಪ್)ಗಳಿಗೆ ಚಂದಾದಾರಿಕೆ ಪಡೆಯಬಹುದು. 1,000 ರೂ. ಮೌಲ್ಯದ ಒಟಿಟಿ ಚಂದಾದಾರಿಕೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೇ ಇದು ಲಭ್ಯವಾಗಲಿದೆ. ಪ್ಲ್ಯಾನ್‌ಗಳು ತಿಂಗಳಿಗೆ 398 ರೂ.ನೊಂದಿಗೆ ಆರಂಭವಾಗುತ್ತದೆ. ಅಂದ ಹಾಗೆ ಈ 14 OTT ಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಟೆಂಟ್ ಲಭ್ಯವಾಗುತ್ತದೆ. ಡಿಜಿಟಲ್ ಟಿವಿ, ಕ್ರೀಡಾ, ಒರಿಜಿನಲ್ಸ್, ಟೀವಿ ಶೋಗಳು ಮುಂತಾದವು ದೊರೆಯುತ್ತವೆ. ಪ್ರೀಪೇಯ್ಡ್ ಸೆಗ್ಮೆಂಟ್‌ನಲ್ಲಿ ವಾರ್ಷಿಕ ಪ್ಲ್ಯಾನ್‌ ಖರೀದಿ ಮಾಡುವಂಥ ಗ್ರಾಹಕರಿಗಾಗಿಯೇ ಒನ್ ಕ್ಲಿಕ್ ಕಾಲ್ ಸೆಂಟರ್ ಬೆಂಬಲ ಸಹ ದೊರೆಯುತ್ತದೆ. ಯಾವ್ಯಾವ ಆ್ಯಪ್‌ಗಳು ದೊರೆಯುತ್ತವೆ? ರಾಷ್ಟ್ರೀಯ ಆ್ಯಪ್‌ಗಳು: ಜಿಯೋಸಿನಿಮಾ (JioCinema)…

Read More

ಜನವರಿ 25 ರಿಂದ ಆರಂಭವಾಗಲಿದೆ. ಈ ನಡುವೆ ಆಂಗ್ಲರ ತಂಡದ ಮಾಜಿ ಆಲ್ ರೌಂಡರ್ ಮೊಯೀನ್ ಅಲಿ ಭಾರತ ತಂಡದ ಸರ್ವಶ್ರೇಷ್ಠ ಟಾಪ್ 5 ಆಟಗಾರರನ್ನು ಆಯ್ಕೆ ಮಾಡಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಅಗ್ರಸ್ಥಾನ ನೀಡಿದ್ದಾರೆ. 2014ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದ ಮೊಯಿನ್ ಅಲಿ, 3 ಸ್ವರೂಪದ ಕ್ರಿಕೆಟ್ ನಲ್ಲೂ ತಮ್ಮ ಆಲ್ ರೌಂಡರ್ ಪ್ರದರ್ಶನದಿಂದ ಬಹುಮೌಲ್ಯ ಆಟಗಾರರಾಗಿದ್ದರು ಎಂ.ಎಸ್.ಧೋನಿಯೇ ನಂಬರ್ 1 ಆಟಗಾರ. ಆದರೆ ಆತ ಎಂತಹ ಆಟಗಾರ ಎಂಬುದನ್ನು ಬಹುತೇಕ ಜನರು ಮರೆತು ಹೋಗಿದ್ದಾರೆ. ನಾಯಕನಾಗಿ ಟೀಮ್ ಇಂಡಿಯಾಗೆ ಎಲ್ಲ ಟ್ರೋಫಿಯನ್ನು ಅವರು ಗೆದ್ದು ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಗೆ ಎರಡನೇ ಸ್ಥಾನ ನೀಡುತ್ತೇನೆ ಎಂದರು. ತಮ್ಮ ವೃತ್ತಿ ಜೀವನದಲ್ಲಿ ನೈಜ ಆಟವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಸುನೀಲ್ ಗವಾಸ್ಕರ್ ಕೂಡ ಉತ್ತಮ ಆಟಗಾರರಾಗಿದ್ದರು. ಆದರೆ ಅವರು ನಾನು ಕ್ರಿಕೆಟ್ ಜೀವನ ಆರಂಭಿಸುವುದಕ್ಕೆ ಮುನ್ನವೇ ವೃತ್ತಿ ಜೀವನ ಮುಗಿಸಿದ್ದರು. ಆದ್ದರಿಂದ ನಾನು ಅವರ ಆಟವನ್ನು ಸಾಕಷ್ಟು ನೋಡಿಲ್ಲ.…

Read More

ಮೊಹಾಲಿ: ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 (T20) ಸರಣಿಯ ಮೊದಲ ಪಂದ್ಯದಲ್ಲಿ ಭಾರತ (India) 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಅಫ್ಘಾನಿಸ್ತಾನ ವಿರುದ್ಧದ ಅಜೇಯ ಗೆಲುವಿನ ಸಾಧನೆ ಮುಂದುವರಿದಿದೆ. ಅಫ್ಘಾನಿಸ್ತಾನ ವಿರುದ್ಧ ಇದು ಭಾರತದ ಐದನೇ ಗೆಲುವು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಸರಣಿಯ ಎರಡನೇ ಪಂದ್ಯ ಜನವರಿ 14ರಂದು ಇಂದೋರ್‌ನಲ್ಲಿ ನಡೆಯಲಿದೆ. ಮೊಹಾಲಿಯಲ್ಲಿ ಕೊರೆಯುವ ಚಳಿ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದು ಭಾರತದ ವಿರುದ್ಧ ಅಫ್ಘಾನಿಸ್ತಾನ ಅತ್ಯಧಿಕ ಮೊತ್ತವಾಗಿದೆ. 159 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ 17.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲುವು ಸಾಧಿಸಿತು. https://ainlivenews.com/nayantaras-annapoorni-movie-removed-from-netfix/ ಮೊದಲು ಬ್ಯಾಟ್ ಮಾಡಿದ ಆಫ್ಘನ್ ತಂಡಕ್ಕೆ ಮೊಹಮ್ಮದ್ ನಬಿ 27 ಬಾಲ್‌ನಲ್ಲಿ…

Read More

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾರತ ತಂಡದಲ್ಲಿರಿಷಭ್‌ ಪಂತ್‌ʼಗೆ   ಅವಕಾಶ ನೀಡಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ. ಜೂನ್‌ ತಿಂಗಳಲ್ಲಿ 2024ರ ಟಿ20 ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದ್ದು  ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಯುಎಸ್‌ಎ, ಕೆನಡಾ, ಐರ್ಲೆಂಡ್‌ ಹಾಗೂ ಪಾಕಿಸ್ತಾನ ವಿರುದ್ಧ ಗುಂಪು ಹಂತದ ಪಂದ್ಯಗಳಲ್ಲಿ ಕಾದಾಟ ನಡೆಸಲಿದೆ.  ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ರಿಷಭ್‌ ಪಂತ್‌ಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಆ ಮೂಲಕ ವಿಕೆಟ್‌ ಕೀಪರ್‌ ಆಯ್ಕೆಗೆ ಪರಿಗಣಿಸಲು ಚರ್ಚೆ ನಡೆಸಬೇಕೆಂದು ತಿಳಿಸಿದ್ದಾರೆ. 2022ರ ಡಿಸೆಂಬರ್‌ 30 ರಂದು ಭೀಕರ ಕಾರು ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಂತ್‌, ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಐಪಿಎಲ್‌ ಟೂರ್ನಿಯ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಎದುರು ನೋಡುತ್ತಿದ್ದಾರೆ. ಕೆಎಲ್‌ ರಾಹುಲ್‌ ಅವರನ್ನು ವಿಕೆಟ್‌ ಕೀಪರ್‌ ಆಗಿ ನೋಡುವುದಕ್ಕೂ ಮುನ್ನ ನಾನು ರಿಷಭ್‌ ಪಂತ್‌ ಅವರು…

Read More

ಕಠ್ಮಂಡು: ನೇಪಾಳದ (Nepal) ನೆಲದಲ್ಲಿ ಕ್ರಿಕೆಟ್ (Cricket) ಬೆಳೆಸಿ ದೇಶದ ಕೀರ್ತಿ ಹೆಚ್ಚಿಸಿದ್ದ ಕ್ರಿಕೆಟಿಗ ಸಂದೀಪ್ ಲಮಿಚಾನೆ (24) (Sandeep Lamichhane) ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 17 ವರ್ಷದ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ 2023ರ ಅಕ್ಟೋಬರ್‍ನಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣ ಸಾಬೀತಾದ ಹಿನ್ನೆಲೆ ಕಠ್ಮಂಡು ಜಿಲ್ಲಾ ನ್ಯಾಯಾಲಯ (Court) 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 3 ಲಕ್ಷ ರೂ. ದಂಡ ವಿಧಿಸಿದ್ದು, 2 ಲಕ್ಷ ರೂ.ಗಳನ್ನು ಸಂತ್ರಸ್ಥೆಗೆ ಪರಿಹಾರ ನೀಡುವಂತೆ ಆದೇಶಿಸಿದೆ. 2022ರ ಆಗಸ್ಟ್‌ನಲ್ಲಿ ಕಠ್ಮುಂಡುವಿನ ಹೋಟೆಲ್ ಒಂದರಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು 18 ವರ್ಷದ ಯುವತಿಯೊಬ್ಬಳು ಸಂದೀಪ್ ಮಿಚಾನೆ ವಿರುದ್ಧ ದೂರು ದಾಖಲಿಸಿದ್ದರು. ಆರೋಪಗಳ ಹೊರತಾಗಿಯೂ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಅವರು ತಮ್ಮ ತಂಡಕ್ಕಾಗಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದ್ದರು. https://ainlivenews.com/nayantaras-annapoorni-movie-removed-from-netfix/ ಕಳೆದ ನವೆಂಬರ್‍ನಲ್ಲಿ ನಡೆದ ಟಿ20 ಏಷ್ಯಾ ಫೈನಲ್‍ನಲ್ಲಿ ಒಮಾನ್ ವಿರುದ್ಧ ನೇಪಾಳ ಪರ ಕೊನೆ ಬಾರಿಗೆ ಆಡಿದ್ದರು. ಇದೀಗ 2023ರ…

Read More

ಮಿಸ್ ಮ್ಯಾಚ್ ಜೋಡಿ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮಿ (Mahalakshmi) ಅವರ ಪತಿ ರವೀಂದರ್ (Ravindran Chandrasekhar) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.  ಎರಡು ದಿನಗಳಿಂದ ಈ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ರವೀಂದರ್, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಎದೆನೋವು ಕೂಡ ಇರುವುದರಿಂದ ಉಸಿರಾಡೋಕೆ ಕಷ್ಟವಾಗುತ್ತಿದೆ ಎನ್ನುವುದು ಅವರ ಆಪ್ತರು ನೀಡಿದ ಮಾಹಿತಿ. ಉಸಿರಾದ ತೊಂದರೆ ಇರುವ ಕಾರಣಕ್ಕಾಗಿಯೇ ಆಕ್ಸಿಜನ್ ಮಾಸ್ಕ್ ಸಮೇತ ಇರುವ ಫೋಟೋ ಹರಿದಾಡುತ್ತಿದೆ. https://ainlivenews.com/nayantaras-annapoorni-movie-removed-from-netfix/ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ರವೀಂದರ್ ಇತ್ತೀಚೆಗಷ್ಟೇ ಜೈಲಿಗೂ ಹೋಗಿ ಬಂದಿದ್ದರು. ಜೊತೆಗೆ ಬಿಗ್ ಬಾಸ್ ಶೋ ಕುರಿತಂತೆ ಅವರು ಯೂಟ್ಯೂಬ್ ವೊಂದರಲ್ಲಿ ವಿಮರ್ಶೆ ಮಾಡುತ್ತಿದ್ದರು. ಈ ಯೂಟ್ಯೂಬ್ ಮೂಲಕವೇ ಅವರ ಅನಾರೋಗ್ಯದ ಗುಟ್ಟು ಬಯಲಾಗಿದೆ.

Read More

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ಬಿಗ್ ಬಾಸ್ ಅಖಾಡಕ್ಕೆ ಇಳಿದಿದ್ದಾರೆ. ಹಿಂದಿ ಬಿಗ್ ಬಾಸ್ ಅನ್ನು ವೀಕ್ಷಿಸುತ್ತಿರುವ ಕಂಗನಾ, ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಖಂಡೆ ಪರ ಬ್ಯಾಟಿಂಗ್ ಬೀಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಟಿ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ (Vicky Jain) ದಂಪತಿ ಇದ್ದಾರೆ. ಟಾಸ್ಕ್ ವಿಚಾರವಾಗಿ ಗಂಡ ಹೆಂಡತಿ ಮಧ್ಯಯೇ ಸಾಕಷ್ಟು ಕಿತ್ತಾಟ ನಡೆದಿದೆ. ಡಿವೋರ್ಸ್ ವಿಚಾರವೂ ಪ್ರಸ್ತಾಪವಾಗಿದೆ. ಸಹಜವಾಗಿಯೇ ಅವರ ಕುಟುಂಬ ಆತಂಕದಲ್ಲಿದೆ. ಈ ಕುರಿತಾಗಿ ಅಂಕಿತಾ ಅತ್ತೆಗೆ ಧೈರ್ಯ ತುಂಬಿರುವ ಕಂಗನಾ, ಯಾವುದೇ ಕಾರಣಕ್ಕೂ ಇಬ್ಬರನ್ನೂ ದೂರವಾಗುವುದಕ್ಕೆ ಬಿಡೋದಿಲ್ಲ. ಬಿಗ್ ಬಾಸ್ ಅದೊಂದು ಗೇಮ್ ಅಷ್ಟೇ. ಮನೆ ಮುರಿಯುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಕಂಗನಾ ಹೇಳಿದ್ದಾರೆ. ಈ ಬಾರಿ ಬಿಗ್ ಬಾಸ್ ಟ್ರೋಫಿ ಅಂಕಿತಾಗೆ ಬರಬೇಕು ಎಂದು ಹಾರೈಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮತ್ತೆ ಸುದ್ದಿ ಆಗುತ್ತಿದ್ದಾರೆ ಅಂಕಿತಾ ಲೋಖಂಡೆ (Ankita Lokhande) ಹಾಗೂ ವಿಕ್ಕಿ ದಂಪತಿ.…

Read More

ನೋಯ್ಡಾ: ಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಜ.22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆಯಾಗಲಿದ್ದು, ಅದೇ ದಿನ ರಾಮಲಲ್ಲಾ (ಬಾಲ ರಾಮ) ಗರ್ಭಗುಡಿಯಲ್ಲಿ ಆಸೀನರಾಗಲಿದ್ದಾರೆ. ರಾಮಮಂದಿರದ ಮೊದಲ ಮಹಡಿ ಸಂಪೂರ್ಣವಾಗಿ ಸಿದ್ಧವಾಗಿದ್ದು,  ಉತ್ತರ ಪ್ರದೇಶ ಸರ್ಕಾರ ಶೀಘ್ರದಲ್ಲೇ ನೋಯ್ಡಾದಿಂದ ಅಯೋಧ್ಯೆಗೆ (Noida To Ayodhya) ಡೈರೆಕ್ಟ್ ಬಸ್‌ಗಳನ್ನು ಓಡಿಸಲು ಯೋಜಿಸುತ್ತಿದೆ. ಈ ಸಂಬಂಧ UPSRTC ನೊಯ್ಡಾ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಎನ್‌ಪಿ ಸಿಂಗ್ ಪ್ರತಿಕ್ರಿಯಿಸಿ, ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (UPSRTC) ನೋಯ್ಡಾ ಡಿಪೋ ಶೀಘ್ರದಲ್ಲೇ ಅಯೋಧ್ಯೆಗೆ ಡೈರೆಕ್ಟ್‌ ಬಸ್‌ಗಳನ್ನು ಪ್ರಾರಂಭಿಸಲಿದೆ. ಸದ್ಯ ನೋಯ್ಡಾ ಡಿಪೋದಿಂದ ಅಯೋಧ್ಯೆಗೆ ನೇರ ಬಸ್‌ಗಳಿಲ್ಲ. ಸಿಎನ್‌ಜಿ ಬಸ್‌ಗಳು ಒಂದೇ ಬಾರಿಗೆ ಅಷ್ಟು ದೂರ ಕ್ರಮಿಸಲು ಸಾಧ್ಯವಿಲ್ಲ. ಫುಲ್ ಟ್ಯಾಂಕ್‌ನಲ್ಲಿ ಸಿಎನ್‌ಜಿ ಬಸ್ 500 ಕಿ.ಮೀ ವರೆಗೆ ಕ್ರಮಿಸುತ್ತದೆ. ನೋಯ್ಡಾದಿಂದ ಅಯೋಧ್ಯೆಗೆ ಸುಮಾರು 650 ಕಿಮೀ ದೂರವಿದೆ. ಈ ಸಂದರ್ಭದಲ್ಲಿ ನೋಯ್ಡಾ ಡಿಪೋ ಲಕ್ನೋದಲ್ಲಿ ಸಿಎನ್‌ಜಿ (ಗ್ಯಾಸ್) ತುಂಬುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.…

Read More