Author: AIN Author

ಚಳಿಗಾಲದಲ್ಲಿ ಪ್ರತಿಯೊಬ್ಬರೂ ಬೆಚ್ಚನೆಯ ಚಹಾ, ಕಾಫಿ, ಸಮೋಸ, ಪಕೋಡ ತಿನ್ನಲು ಇಷ್ಟಪಡುತ್ತಾರೆ. ಕೆಲವೊಮ್ಮೆ ಇವುಗಳನ್ನು ಮಿತಿಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಆದರೆ ಚಳಿಗಾಲದಲ್ಲಿ ನಿರಂತರವಾಗಿ ಇಂತಹ ಕರಿದ ಆಹಾರವನ್ನು ತಿನ್ನುವುದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ನಾವು ಕೆಲವೊಂದು ಟಿಪ್ಸ್‌ ಹೇಳುತ್ತೇವೆ ಕೇಳಿ! ದೇಹ ಮತ್ತು ಮನಸ್ಸನ್ನು ಹೊಂದಲು ಕ್ಯಾಲೋರಿ ಸೇವನೆಯನ್ನು ಪರಿಶೀಲಿಸುವುದು ಮುಖ್ಯವಾಗಿದೆ. ವಿಟಮಿನ್ ಸಿ, ಡಿ, ಒಮೆಗಾ -3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಆಹಾರಗಳು ಮತ್ತು ಹಗುರವಾದ ಊಟವು ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ. ಚಳಿಗಾಲದ ಉದ್ದಕ್ಕೂ, ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವುದು ನಮಗೆ ಮುಖ್ಯವಾಗಿದೆ, ಅನಾರೋಗ್ಯವನ್ನು ವಿರೋಧಿಸಲು ದೇಹದ ನೈಸರ್ಗಿಕ ಕಾರ್ಯವಿಧಾನ. ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುವ ವಿಟಮಿನ್ ಸಿ ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಮತ್ತು ಆಯಾಸ ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹೆಚ್ಚುವರಿ ಪ್ರಯೋಜನವನ್ನು ಹೊಂದಿದೆ. * ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳು: ಗೋಧಿ ಮತ್ತು ಅಕ್ಕಿಯ…

Read More

ಬೆಳಗಾವಿ:- ಮಾದಿಗರ ಆಸ್ಮಿತೆಗೆ ಧಕ್ಕೆ ಯಾಗದಂತೆ ತಿಮ್ಮಾಪೂರರವರಿಗೆ ಉಪ ಮಖ್ಯಮಂತ್ರಿ ಸ್ಥಾನ ನೀಡಿ ಸಾಮಾಜಿಕ ನ್ಯಾಯ ನೀಡಲು ಪಕ್ಷದ ಹೈಕಮಾಂಡಕ್ಕೆ ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಆರ್.ಬಿ. ತಿಮ್ಮಾಪೂರರವರು ಉತ್ತರ ಕರ್ನಾಟಕದ ದಲಿತ ಸಮುದಾಯದ (ಎಡ ಗೈ ಪ್ರಬಲ ನಾಯಕರಾಗಿದ್ದು ಸಮುದಾಯವನ್ನು ಸಂಘಟಿಸಿ ಮಾದಿಗ ಸಮುದಾಯವನ್ನು ಒಟ್ಟು ಗೂಡಿಸಿ ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿ ತನದಿಂದ ಬೆಂಬಲವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಸಮುದಾಯದ ಆಶಯವನ್ನು ಈಡೇರಿಸಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕೇಂದು ಮಾದಿಗ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಪಿರಪ್ಪ ಮ್ಯಾಗೇರಿ ಶ್ರೀಮತಿ ಇಂದಿರಾಗಾಂಧಿ ಹಾಗೂ ದೇವರಾಜ ಅರಸರ ಕಾಲದಿಂದಲೂ ಕಾಂಗ್ರೇಸ್ ಪಕ್ಷ ಸಾಮಾಜಿಕ ನ್ಯಾಯವನ್ನು ನೀಡುತ್ತಾ ಬಂದಿದ್ದು ಇರುತ್ತದೆ ಈಗ ಸರ್ಕಾರ ಪಕ್ಷದ ಹೈಕಮಾಂಡರ ಮಾದಿಗರ ಅಸ್ಮಿತೆಗೆ ಧಕ್ಕೆ ಯಾಗದಂತೆ ಸಾಮಾಜಿಕ ನೀಡಬೇಕೆಂದು ಅವರು ಹೇಳಿದ್ದಾರೆ. ಎಡಗೈ ಸಮುದಾಯದ ನಾಯಕರಾದಂತ ತಿಮ್ಮಾಪೂರರವರು ಹಾಗೂ ಕೆ.ಎಚ್.ಮುನಿಯಪ್ಪರವರು ಇದ್ದು ಕಾಂಗ್ರೇಸ ಪಕ್ಷವನ್ನು ಬೆಂಬಲಿಸುವಲ್ಲಿ…

Read More

ಅಯೋಧ್ಯೆ: ರಾಮ ಮಂದಿರದಲ್ಲಿ (Ram Mandir) ರಾಮ ಪ್ರಾಣ ಪ್ರತಿಷ್ಠೆ ನಡೆಯುವ ಮೊದಲು ಅಯೋಧ್ಯೆಯ (Ayodhya) ಸರಯೂ ನದಿ ದಂಡೆಯಲ್ಲಿ 1008 ಶಿವಲಿಂಗಗಳನ್ನು ಸ್ಥಾಪಿಸುವ ಭವ್ಯವಾದ ರಾಮನಾಮ ಮಹಾ ಯಜ್ಞ (Ram Naam Maha Yagya) ಜನವರಿ 14 ರಿಂದ ಜನವರಿ 25 ರವರೆಗೆ ನಡೆಯಲಿದೆ. ಈ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ನೇಪಾಳದಿಂದ 21,000 ಯತಿಗಳು ಆಗಮಿಸಲಿದ್ದಾರೆ. ಮಹಾಯಾಗವನ್ನು ನಡೆಸಿ, ಅದರಲ್ಲಿ ಶಿವಲಿಂಗಗಳನ್ನು (Shiva Linga) ಇರಿಸಲು ಈಗಾಗಲೇ 1008 ಯಜ್ಞ ಮಂಟಪವನ್ನು ನಿರ್ಮಿಸಲಾಗಿದೆ. ಈ ಪೈಕಿ ದೊಡ್ಡ ಯಾಗ ಶಾಲೆಯ ಛಾವಣಿ 11 ಪದರಗಳನ್ನು ಹೊಂದಿರುವುದು ವಿಶೇಷ. ರಾಮಮಂದಿರದಿಂದ 2 ಕಿ.ಮೀ ದೂರದಲ್ಲಿರುವ ಸರಯೂ ನದಿಯ (Sarayu River) ಮರಳು ಘಾಟ್‌ನಲ್ಲಿರುವ 100 ಎಕರೆ ಪ್ರದೇಶದಲ್ಲಿ ಈ ಯಜ್ಞ ಮಂಟಪಗಳನ್ನು ಸ್ಥಾಪಿಸಲಾಗಿದೆ. ಅಯೋಧ್ಯೆ ಮೂಲದ ಈಗ ನೇಪಾಳದಲ್ಲಿ (Nepal) ನೆಲೆಸಿರುವ ಆತ್ಮಾನಂದ ದಾಸ್ ಮಹಾತ್ಯಾಗಿ(ನೇಪಾಳಿ ಬಾಬಾ) ಅವರು ಈ ಯಾಗವನ್ನು ಆಯೋಜಿಸಿದ್ದಾರೆ. ಪ್ರತಿ ವರ್ಷದ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನಾನು ಈ…

Read More

ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದು ನಿಮ್ಮ ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ನಮ್ಮಲ್ಲಿ ಹಲವರು ಚಳಿಗಾಲದಲ್ಲಿ ಮೊಸರು ತಿನ್ನಲು ಇಷ್ಟಪಡುವುದಿಲ್ಲ. ಯಾಕೆಂದರೆ ಮೊಸರು ತಿನ್ನುವುದರಿಂದ ಶೀತ ಆಗುತ್ತದೆ. ಚಳಿಗಾಲದಲ್ಲಿ ಇದು ಕಫ ಮತ್ತು ಶೀತವನ್ನು ಉಂಟುಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ ಅಥವಾ ಬೇಡವೇ ಎಂಬುವ ಪ್ರಶ್ನೆ ಹಲವರಲ್ಲಿದೆ. ಇಲ್ಲಿದೆ ನೋಡಿ! ಅಂತೆಯೇ, ಮೊಸರು ತನ್ನ ಗುರು, ಸ್ನಿಗ್ಧ, ಅಭಿಷ್ಯಂಧಿ ಗುಣಗಳಿಂದ ಕಫ ದೋಷವನ್ನು ಸಹ ಹೆಚ್ಚಿಸುತ್ತದೆ. ಈ ಕಫ ದೋಷವು ತಲೆ ನೋವು, ತಲೆ ಭಾರ, ದಮ್ಮು, ಗಂಟಲು ನೋವು ಮುಂತಾದವು ಗಳನ್ನು ಉಂಟುಮಾಡಬಹುದು. ಇಂದು ನಾವೆಲ್ಲರೂ ಮೊಸರನ್ನು ಫ್ರಿಡ್ಜ್ ನಲ್ಲಿಟ್ಟು ಹಾಗೆಯೇ ಕೊರೆಯುವ ಥಂಡಿಯಲ್ಲೇ ಸೇವಿಸುವುದರಿಂದ ಈ ಕಫ ದೋಷದ ವೃದ್ಧಿಯೇ ಮುನ್ನೆಲೆಗೆ ಬಂದು ಮೊಸರು ತಂಪೆನ್ನುವ ಕಲ್ಪನೆ ಬೆಳೆದಿರಬಹುದು. ಆಯುರ್ವೇದದ ಪ್ರಕಾರ ಹಾಲಿಗೆ ಹೆಪ್ಪು ಹಾಕಿ ಒಂದು ರಾತ್ರಿ ಕಾಲ ಇಟ್ಟರೆ ದಧಿ, ಅಥವಾ ನಾವು ಮೊಸರೆಂದು ಕರೆಯುವ ದ್ರವ್ಯ ಸಿದ್ಧವಾಗುತ್ತದೆ. ಈ…

Read More

ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನವರಿ 17 ರಂದು ಇಂಡಿಯಾ ಹಾಗೂ ಅಫ್ಘಾನಿಸ್ತಾನ ಟಿ20 ಹೊನಲು ಬೆಳಕಿನ ಪಂದ್ಯ ನಡೆಯಲಿದೆ. ಈ ಪಂದ್ಯ ವೀಕ್ಷಣೆಗೆ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚುವರಿ ಬಸ್​ ಸೇವೆಯನ್ನು ಒದಗಿಸಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ನಗರದ 12 ಕಡೆಗಳಿಗೆ ಹೆಚ್ಚುವರಿ ಬಸ್​​​ ಕಾರ್ಯಾಚರಣೆ ನಡೆಸಲಿವೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್​,​ ಕೆಂಗೇರಿ, ನೆಲಮಂಗಲ, ಯಲಹಂಕ 5ನೇ ಹಂತ 5ನೇ ಹಂತ, ಬಾಗಲೂರು, ಹೊಸಕೋಟೆಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಗಸಂಖ್ಯೆ ಎಸ್‍ಬಿಎಸ್ -1ಕೆ ಬಸ್ ಎಚ್‍ಎಎಲ್ ಮಾರ್ಗವಾಗಿ ಕಾಡುಕೋಡಿ ತಲುಪಲಿದೆ. ಎಸ್‍ಬಿಎಸ್-13ಕೆ ನಂಬರಿನ ಬಸ್ ಹೂಡಿ ಮಾರ್ಗವಾಗಿ ಕಾಡುಗೋಡಿ ಬಸ್ ನಿಲ್ದಾಣ ತಲುಪಲಿದೆ. ಜಿ-2 ಬಸ್ ಅಗರ, ದೊಮ್ಮಸಂದ್ರ ಮಾರ್ಗವಾಗಿ ಸರ್ಜಾಪುರ, ಜಿ-3ಬಸ್ ಹೊಸೂರು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ, ಜಿ-4 ಜಯದೇವ ಆಸ್ಪತ್ರೆ ಮಾರ್ಗವಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ತಲುಪಲಿದೆ ಎಂದು ಬಿಎಂಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಡಿಜಿಟಲೀಕರಣವನ್ನು ಪ್ರಕಟಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ RBI ಮಾರ್ಗದರ್ಶನದಲ್ಲಿ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (RBIH) ಸಹಯೋಗದೊಂದಿಗೆ ಫಿನ್‌ಟೆಕ್ ಉಪಕ್ರಮದ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಡಿಜಿಟಲ್ ಮಾಡಲು ಯೋಜಿಸಿದೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank Of India)  ಮಂಗಳವಾರ ಮುಂಬೈನಲ್ಲಿ ಪ್ರಮುಖ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಪ್ರಾಜೆಕ್ಟ್ ‘ಸಂಭವ’ ಭಾಗವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಉತ್ಪನ್ನದ ಉದ್ಯಮ-ಪ್ರಥಮ, ರೈತ-ಕೇಂದ್ರಿತ ಎಂಡ್-ಟು-ಎಂಡ್ ಡಿಜಿಟಲೀಕರಣವನ್ನು ಘೋಷಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ನ (Kisan Credit Card) ಡಿಜಿಟಲೀಕರಣವು  ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗದರ್ಶನದಲ್ಲಿ ರಿಸರ್ವ್ ಬ್ಯಾಂಕ್ ಇನ್ನೋವೇಶನ್ ಹಬ್ (RBIH) ಸಹಯೋಗದೊಂದಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಫಿನ್‌ಟೆಕ್ ಉಪಕ್ರಮವಾಗಿದೆ. ಇದು ವೈಯಕ್ತಿಕ ಭೇಟಿಯಂತಹ ರೈತರು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಬ್ಯಾಂಕ್ ಶಾಖೆಗೆ, ಭೂ ಮಾಲೀಕತ್ವ ಮತ್ತು ಇತರ ದಾಖಲೆಗಳ ಸಲ್ಲಿಕೆ, ಮತ್ತು KCC ಪಡೆಯುವಲ್ಲಿ…

Read More

ದುಬೈ: ವೆಸ್ಟ್ ಇಂಡೀಸ್ ಮತ್ತು ಅಮೇರಿಕದಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಈ ಬಾರಿ 20 ತಂಡಗಳು ಭಾಗವಹಿಸುತ್ತಿದ್ದು, ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಇಂದು(ಜ.5) ಪ್ರಕಟಿಸಿದೆ. ಟಿ20 ವಿಶ್ವಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ್ದು, ಜೂ.9ರಂದು ಭಾರತ ಹಾಗೂ ಪಾಕಿಸ್ತಾನ ಸೆಣಸಾಡಲಿದೆ. ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯವು ಜೂನ್ 1ರಂದು ನಡೆಯಲಿದ್ದು, ಸಹ-ಆತಿಥೇಯ ಅಮೇರಿಕ ತಂಡವು ಕೆನಡಾ ತಂಡವನ್ನು ಎದುರಿಸುವುದರೊಂದಿಗೆ ಚಾಲನೆ ಸಿಗಲಿದೆ. ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಬಹು ನಿರೀಕ್ಷಿತ ಪಂದ್ಯವು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ತಮ್ಮ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್‌ ತಂಡದ ವಿರುದ್ಧ ಟೀಮ್ ಇಂಡಿಯಾ ಸೆಣಸಾಡಲಿದೆ. ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್‌ಕೀಪರ್‌), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್,…

Read More

ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿರೋ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಯಶಸ್ವಿನಿ ಕಾರ್ಡ್ ಫಲಾನುಭವಿಗಳಿಂದ ಡಿಸ್ಚಾರ್ಜ್ ವೇಳೆ ಹಣ ಪಡೆಯಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ತುಮಕೂರು ಮೂಲದ ಯುವಕನೊಬ್ಬ ಡಿಸೆಂಬರ್ 30ನೇ ತಾರೀಕು ಕಾಲಿನ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ರು, ಚಿಕಿತ್ಸೆ ಮುಗಿಸಿ ಡಿಸ್ಚಾರ್ಜ್ ಆಗೋ ವೇಳೆ ಆಸ್ಪತ್ರೆ ಸಿಬ್ಬಂದಿ 3 ಸಾವಿರ ರೂಪಾಯಿ ಪಡೆದು ಬಿಲ್ ಕೈಗಿಟ್ಟಿದ್ದಾರೆ. ಬಿಲ್ ನಲ್ಲಿ ಸೇವೆಯ ವಿವರ ಇಲ್ಲದ್ದನ್ನ ಕಂಡ ರೋಗಿ ಸಂಬಂಧಿಕರು, ಹಣ ಯಾಕೆ ಪಡಿತಿದ್ದಾರೆ ಅಂತಾ ತಮ್ಮ ಜಿಲ್ಲೆಯ ಯಶಸ್ವಿನಿ ಸಂಯೋಜಕರನ್ನ ಕೇಳಿದಾಗ, ದೂರು ನೀಡಿವಂತೆ ಸೂಚನೆ ಕೊಟ್ಟಿದ್ದಾರೆ. ಇನ್ನು ಯಶಸ್ವಿನಿ ಕಾರ್ಡ್, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಅಥವಾ ರಿಯಾಯಿತಿ ನೀಡಬೇಕು ಅನ್ನೋ ನಿಯಮವಿದೆ. ಆದರೆ ಡಿಸ್ಚಾರ್ಜ್ ಬಿಲ್​ನಲ್ಲಿ ಯಾವುದಕ್ಕೆ ಹಣ ಪಡೆದಿದ್ದಾರೆ ಅನ್ನೋದನ್ನ ನಮೂದಿಸದೇ ಇರೋದು ಹಲವು ಅನುಮಾನ ಮೂಡಿಸಿದೆ. ಇನ್ನು ಈ ಬಗ್ಗೆ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದ್ರೆ, ಆ ರೀತಿ ಸುಮ್ಮ ಸುಮ್ಮನೆ ಹಣ ತೆಗೆದುಕೊಳ್ಳಲ್ಲ, ಒಂದು ವೇಳೆ ಏನಾದ್ರೂ ಸಮಸ್ಯೆಯಾಗಿದ್ರೆ…

Read More

ಬೆಂಗಳೂರು :- ಸ್ವಾಮಿ ವಿವೇಕಾನಂದರು ನಮ್ಮವರಲ್ಲ, ಅವರು ಮಹಿಳಾ ವಿಮೋಚನೆಯನ್ನು ವಿರೋಧಿಸಿದವರು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಮೂಲಕ ಮತ್ತೊಂದು ವಿವಾದದ ಮೂಲಕ ಸುದ್ದಿಯಲ್ಲಿ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಇಂದು ವಿವೇಕಾನಂದರ ಜನ್ಮದಿನ. ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದವರು ಮತ್ತು ಜಾತಿ ವ್ಯವಸ್ಥೆಯನ್ನು ಸರ್ಮರ್ಥಿಸಿದರು. ಅವರು ಬರೆಯುತ್ತಾರೆ, ‘ಜಾತಿ ಒಳ್ಳೆಯದು, ಅದೊಂದೇ ಜೀವನವನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ. ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ. ಏಕೆಂದರೆ, ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುತ್ತಾರೆ. ವಿವೇಕಾನಂದರು ಸಮಾನತಾವಾದಿಯಲ್ಲ.. ಅವರು ನಮ್ಮವರಲ್ಲ’ ಎಂದು ತಮ್ಮ ಟ್ವೀಟ್‌ನಲ್ಲಿ ಚೇತನ್‌ ಬರೆದುಕೊಂಡಿದ್ದಾರೆ. ಹಿಂದುತ್ವ (ಬಿಜೆಪಿ) ಮತ್ತು ಉದಾರವಾದಿಗಳು (ಕಾಂಗ್ರೆಸ್) ಇಬ್ಬರಿಗೂ ಏಕ ಶತ್ರುವಿದೆ -ಸಮಾನತಾವಾದಿಗಳಾದ ನಮಗೆ ಸಂಪೂರ್ಣ ಅನ್ಯಾಯದ ವ್ಯವಸ್ಥೆಯೇ ನಮ್ಮ ಶತ್ರು. ಅದಕ್ಕೆ, ನಾವು ಸಮಾನತಾವಾದಿಗಳು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಎಷ್ಟೇ ಪ್ರಶ್ನಿಸಿದರೂ ಹಿಂದುತ್ವಕ್ಕೆ ತೃಪ್ತಿಯಾಗುವುದಿಲ್ಲ; ನಾವು ಸಮಾನತಾವಾದಿಗಳು ಬಿಜೆಪಿ ಮತ್ತು ಮೋದಿಯನ್ನು ಎಷ್ಟೇ ಪ್ರಶ್ನಿಸಿದರೂ ಉದಾರವಾದಿಗಳಿಗೆ ತೃಪ್ತಿಯಾಗುವುದಿಲ್ಲ. ಅವರಿಬ್ಬರೂ…

Read More

ಭಾರತದಲ್ಲಿ ಸ್ಮಾರ್ಟ್‌ಫೋನ್ ಉದ್ಯಮದ ಬದಲಾಗುತ್ತಿರುವ  ಸನ್ನಿವೇಶದಲ್ಲಿ ಯಾವಾಗಲೂ ಆಶ್ಚರ್ಯಕರವಾಗಿದೆ. ಈ ವರ್ಷ, ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಕೆಲವು ವಿಭಾಗಗಳಲ್ಲಿ ಹಲವಾರು ಹೊಸಬರು ಆಯ್ಕೆ ಮಾಡಲು ಉತ್ಸಾಹಿ ಖರೀದಿದಾರರಿಗೆ ಸಾಧನಗಳ ಅತ್ಯಂತ ಆಸಕ್ತಿದಾಯಕ ಮಿಶ್ರಣವನ್ನು ಮಾಡಲು. Xiaomi ಮತ್ತು Realme ನಂತಹ ಹೆಚ್ಚಿನ ರೆಗ್ಯುಲರ್‌ಗಳು ಬಜೆಟ್ ವಿಭಾಗದಲ್ಲಿ ಬೆರಳೆಣಿಕೆಯ ಲಾಂಚ್‌ಗಳನ್ನು ನೋಡಿದ್ದರೂ, Motorola ಮತ್ತು Infinix ನಂತಹ ಬ್ರ್ಯಾಂಡ್‌ಗಳು ಎಲ್ಲಾ ಗನ್‌ಗಳಲ್ಲಿ ಬೆಳಗುತ್ತಿವೆ. Xiaomi ಬಜೆಟ್ ಶ್ರೇಣಿಯ ಉನ್ನತ ಮಟ್ಟದಲ್ಲಿ ಮತ್ತು ಬದಲಿಗೆ ಮಧ್ಯಮ ಶ್ರೇಣಿಯತ್ತ ಮುನ್ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ (ಹಲವಾರು ವಿಳಂಬಗಳ ನಂತರ) OnePlus ತನ್ನ ಮೊದಲ ಪುಸ್ತಕ-ಶೈಲಿಯ ಫೋಲ್ಡಬಲ್ ಓಪನ್ ಅನ್ನು ಪ್ರಾರಂಭಿಸಿದಾಗ Samsung ಮತ್ತು OnePlus ನಡುವಿನ ಯುದ್ಧವು 2023 ಕ್ಕಿಂತ ದೊಡ್ಡದಾಗಿರಲಿಲ್ಲ. Oppo ಮತ್ತು Motorola ನಂತಹ ಬ್ರ್ಯಾಂಡ್‌ಗಳು ಫೋಲ್ಡಬಲ್‌ಗಳು ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್ ಕೊಡುಗೆಗಳೊಂದಿಗೆ ಒಂದು ಹೆಜ್ಜೆಯನ್ನು ತೆಗೆದುಕೊಂಡಿವೆ, ಆದರೆ ಸ್ಯಾಮ್‌ಸಂಗ್ ಅದನ್ನು ತುಲನಾತ್ಮಕವಾಗಿ ಸುಲಭವಾಗಿ ತೆಗೆದುಕೊಂಡಿತು, ಆದರೆ ಅದರ Galaxy S23…

Read More