Author: AIN Author

ಬೆಂಗಳೂರು: ಸಿದ್ದರಾಮಯ್ಯ ರಾಮ ಮಂದಿರಕ್ಕೆ ಭೇಟಿ ನೀಡುವ ವಿಚಾರ ಬಗ್ಗೆ ಮಾಜಿ ಸಚಿವ  ಅಶ್ವತ್ಥ್‌  ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ ನಗರದಲ್ಲಿ ಮಾತನಾಡಿದ ಅವರು,  ಸಿದ್ದರಾಮಯ್ಯ ಅವರು ದಿನಕ್ಕೊಂದು ಹೇಳಿಕೆ ಕೊಡ್ತಿದ್ದಾರೆ ಬರೀ ನಾಟಕ ಮಾಡೋದು ಎಲ್ಲಿ ಮತ ಸಿಗಲ್ಲ , ಜನ ನಮ್ಮ ವಿರೋಧ ಆಗ್ತಾರೆ ಅಂತ ಕಾಂಗ್ರೆಸ್ ಗೆ ಭಯ ಶುರುವಾಗಿರಬಹುದು ಹಾಗಾಗಿ ಈಗ ಸಿಎಂ ಸಿದ್ದರಾ ಸಿದ್ದರಾಮಯ್ಯ ಶ್ರೀರಾಮನ ದರ್ಶನ ಮಾಡ್ತಾರೆ ಎಂದಿದ್ದಾರೆ ಬಹಳ ಸಂತೋಷ, ಆದರೆ ಬಹಳ ಭಕ್ತಿಯಿಂದ ಶ್ರೀರಾಮನ ದರ್ಶನ ಮಾಡ್ಲಿ ನಾಟಕ ಮಾಡಿಕೊಂಡು, ದರ್ಶನ ಮಾಡಬೇಡಿ ಎಂದು ಹೇಳಿದರು. ನಿಮ್ಮ ಸಚಿವರೇ, ಶ್ರೀರಾಮ ಒಂದೇ ದೇವರಾ..? ಅಂತಾರೆ ರಾಮ ದೇವರ ಬೆಟ್ಟದಲ್ಲಿ ದಕ್ಷಿಣ ಭಾರತದ ಅಯೋಧ್ಯೆ ನಿರ್ಮಾಣ ಮಾಡುವುದಾಗಿ ನಾವು ಹೇಳಿದ್ವಿ ಆದರೆ ನೀವು ಅದನ್ನು ವಾಪಸ್ ತೆಗೆದುಕೊಂಡ್ರಿ ಈಗ ನಿಮ್ಮ ಶಾಸಕರು ಇಕ್ಬಾಲ್ ಹುಸೇನ್ ಸೇರಿದಂತೆ ಅನೇಕ ನಾಯಕರ ರಾಮ ದೇವರ ಬೆಟ್ಟದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಾಣ ಮಾಡ್ತಾರೆ ಅಂತಾರೆ ಇನ್ನೊಂದು ಕಡೆ…

Read More

ರಾಯಚೂರು, ದೇವದುರ್ಗ, ಜನವರಿ 13: ಕಾಂಗ್ರೆಸ್ ಪಕ್ಷ ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದು, ಒಂದು ಧರ್ಮ , ಒಂದು ಜಾತಿಯ ಪರವಾಗಿರಲು ನಾವು ಬಿಜೆಪಿ ಅಲ್ಲ. ನಾವು ಎಲ್ಲಾ ಧರ್ಮ, ಎಲ್ಲಾ ಜಾತಿಯವರ ಪರವಾಗಿ ಇರುವವರು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದೇವದುರ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಮಾಜ ವಿಭಜನಾ ಹೇಳಿಕೆಗೆ ಉತ್ತರಿಸಿ, ಸಮಾಜದಲ್ಲಿನ ಎಲ್ಲಾ ಜಾತಿ, ಧರ್ಮದ ಪರವಾಗಿ ನಾವಿದ್ದೇವೆ. ಕೇವಲ ಒಂದು ಜಾತಿ, ಧರ್ಮದ ಪರವಾಗಿರಲು ನಾವು ಬಿಜೆಪಿ ಅಲ್ಲ. ಧರ್ಮದ ಆಧಾರದ ಮೇಲೆ ಸಮಜವನ್ನು ಒಡೆಯುವವರಲ್ಲ. ನಾವು ಜಾತ್ಯಾತೀತ ತತ್ವ ಹಾಗೂ ಧರ್ಮನಿರಪೇಕ್ಷತೆಯಲ್ಲಿ ನಂಬಿಕೆಯುಳ್ಳವರು. ಕಾಂಗ್ರೆಸ್ ಜಾತ್ಯಾತೀತ ಪಕ್ಷ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು ಎಂದರು. ಮೈಸೂರು ಲೋಕಸಭಾ ಕ್ಷೇತ್ರ ದಿಂದ ಯತೀಂದ್ರ ಸ್ಪರ್ಧೆ: ಊಹಾಪೋಹ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಮಾಜಿ ಶಾಸಕ ಯತೀಂದ್ರ ಅವರನ್ನು ಕಣಕ್ಕಿಳಿಸಿದರೆ ಸ್ವಾಗತಿಸುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿಕೆ…

Read More

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು (Droupadi Murmu) ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಅಯೋಧ್ಯೆ (Ayodhya) ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಮತ್ತು ಆರ್‌ಎಸ್‌ಎಸ್‌ ಮುಖಂಡ ರಾಮ್ ಲಾಲ್ ಅವರು ರಾಷ್ಟ್ರಪತಿಗಳಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.  https://ainlivenews.com/a-kannada-song-is-playing-in-ayodhya/ ಜನವರಿ 22ರಂದು ನಡೆಯಲಿರುವ ಅದ್ಧೂರಿ ಕಾರ್ಯಕ್ರಮಕ್ಕೆ ಸುಮಾರು 7 ಸಾವಿರ ಗಣ್ಯರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಬ್ಬರನ್ನೂ ಮುಖತಃ ಭೇಟಿ ಮಾಡಿ ಆಹ್ವಾನ ಪತ್ರಿಕೆಗಳನ್ನು ನೀಡಲಾಗುತ್ತಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್‌ ಹಾಗೂ ಅವುಗಳ ಸಂಯೋಜಿತ ಸಂಘಟನೆಗಳ ಮುಖ್ಯ ಪ್ರತಿನಿಧಿಗಳು ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 

Read More

ಧಾರವಾಡ: ಮೊನ್ನೆಯಷ್ಟೇ ಕಾಂಗ್ರೆಸ್ ವರಿಷ್ಠರು ದೆಹಲಿಗೆ ಭೇಟಿ ನೀಡಿದ ವಿಚಾರವಾಗಿ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ರಾಷ್ಟ್ರನಾಯಕರು ನಮಗೆ ಎಲ್ಲಾ ಸಚಿವರು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರದ ನಡುವೆ ಯಾವ ರೀತಿಯ ಬಾಂಧವ್ಯ ಇರಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಹೇಳಿದ್ದಾರೆ. ಯಾವುದೇ ವಿವಾದಾತ್ಮಕ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದಾರೆ ಎಂದರು. ಡಿಸಿಎಂ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಶಾಸಕರನ್ನು ಆಯ್ಕೆ ಮಾಡಬೇಕು ಎಂಬ ತೀರ್ಮಾನ ಆಗಿದೆ ಎಂದರು. https://ainlivenews.com/a-kannada-song-is-playing-in-ayodhya/ ಲೋಕಸಭಾ ಚುನಾವಣೆಗೆ ನಿಲ್ಲಲು ನನಗೆ ಆಸೆ ಇಲ್ಲ. ನಾನು ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗ ಬೇಕು. ನಾನು ಇಲ್ಲೇ ಕೆಲಸ ಮಾಡಬೇಕು. ನಮ್ಮ ಪಾರ್ಟಿಯಲ್ಲಿ ಯಾರೇ ನಿಂತರೂ ನನ್ನಷ್ಟೇ ಸೂಕ್ತರಿದ್ದಾರೆ. ನೋಡೋಣ ಯಾರಿಗೆ ಕೊಡುತ್ತಾರೋ…

Read More

ಕನ್ನಡದ ಹೆಸರಾಂತ ನಟ ದರ್ಶನ್ (Darshan) ಅವರನ್ನು ಟಾರ್ಗೆಟ್ (Target) ಮಾಡಲಾಗ್ತಿದೆಯಾ? ಇಂಥದ್ದೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕಾಟೇರ (Katera) ಸಿನಿಮಾದ ಸಕ್ಸಸ್ ಅನ್ನು ಸಹಿಸಿಕೊಳ್ಳೊಕೆ ಆಗದೇ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh) ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡ್ತಿರೋದು ಯಾರು ಎನ್ನುವ ಚರ್ಚೆ ಶುರು ಮಾಡಿದ್ದಾರೆ. ನಟ ದರ್ಶನ್ ನಟನೆಯ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಒಂಥರಾ ಇಡೀ ಸಿನಿಮಾ ಟೀಂಗೆ ತೊಂದರೆ ತಂದೊಡ್ಡಿತ್ತು. ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ರು ಅಂತಾ‌ ನಟ ದರ್ಶನ್ ಸೇರಿ 8 ಸ್ಟಾರ್ ಗಳಿಗೆ ನೊಟೀಸ್ ನೀಡಿದ್ದ ಪೊಲೀಸರ ಮುಂದೆ ಎಂಟೂ ಸ್ಟಾರ್ ಗಳು ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ರು. ಜನವರಿ ಮೂರನೇ ತಾರೀಖಿನ ರಾತ್ರಿ ಜೆಟ್ಲಾಗ್ ಪಬ್ ನಲ್ಲಿ ನಲ್ಲಿ ಕಾಟೇರ ಸಿನಿಮಾ‌ ತಂಡ ಸಕ್ಸಸ್ ಪಾರ್ಟಿ ಮಾಡಿತ್ತು. ಸ್ಟಾರ್ಸ್ ಗಳು  ಮುಂಜಾನೆ 3-4ಗಂಟೆವರೆಗೂ ಪಬ್ ನಲ್ಲಿದ್ರು ಅನ್ನೋ…

Read More

ಈವರೆಗೂ ಡೈರೆಕ್ಟ್ ಆಗಿ ಫಿನಾಲೆ (Finale) ಹೋಗುವಂತಹ ಅವಕಾಶವನ್ನು ಬಿಗ್ ಬಾಸ್ (Big Boss) ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಇನ್ನೂ ಎರಡು ವಾರಗಳ ಕಾಲ ಇರುವಾಗಲೇ ನೇರವಾಗಿ ಫಿನಾಲೆ ವೇದಿಕೆಗೆ ಒಬ್ಬ ಕಂಟೆಸ್ಟೆಂಟ್ ಹೋಗುವಂತಹ ಅವಕಾಶವನ್ನು ನೀಡಿದ್ದಾರೆ. ಅದಕ್ಕಾಗಿಯೇ ಟಿಕೆಟ್ ಟು ಫಿನಾಲೆ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನಲ್ಲಿ ಬಹುತೇಕರು ವೈಯಕ್ತಿಕವಾಗಿ ಆಡಬೇಕಾಗಿದ್ದರಿಂದ ಪ್ರತಿ ಟಾಸ್ಕ್ ಕೂಡ ರೋಚಕವಾಗಿದ್ದವು. ವಾರ ಪೂರ್ತಿ ನಡೆದ ಟಿಕೆಟ್ ಟು ಟಾಸ್ಕ್‌ನಲ್ಲಿ ಪ್ರತಿ ನಾಲ್ವರು ಆಡಬೇಕಿತ್ತು. ಸರದಿ ಬಂದಾಗ ಪ್ರತಿ ಆಟಗಾರ ಕೂಡ ತನ್ನೊಂದಿಗೆ ಆಡಲು ಮೂವರು ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗೆ ಎಂಟು ರೌಂಡ್ಸ್‌ನಲ್ಲಿ ಆಟ ನಡೆದಿತ್ತು. ಎಂಟು ಸ್ಪರ್ಧಿಗಳಿಗೂ ಅಂಕಗಳನ್ನು ನೀಡಲಾಗಿತ್ತು. ಹೆಚ್ಚು ಯಾರು ಅಂಕ ಪಡೆಯುತ್ತಾರೋ ಅವರೇ ಫಿನಾಲೆಯ ಟಿಕೆಟ್ ಪಡೆಯುತ್ತಾರೆ ಎನ್ನುವುದು ಬಿಗ್ ಬಾಸ್ ನಿಯಮವಾಗಿತ್ತು. ಇಂದು ಬೆಳಗ್ಗೆ ವಾಹಿನಿಯು ಪ್ರೋಮೋವೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪ್ರತಾಪ್ ಅವರೇ ಟಾಪ್ ಎಂದು ತೋರಿಸಲಾಗಿದೆ. ಜೊತೆಗೆ…

Read More

ಪ್ರಿನ್ಸ್ ಮಹೇಶ್ ಬಾಬು ನಟನೆಯ ಟಾಲಿವುಡ್ ಮೂವಿ ಗುಂಟೂರು ಖಾರಂ ದೊಡ್ಡ ನಿರೀಕ್ಷೆಯೊಂದಿಗೆ ತೆರೆಗೆ ಬಂದಿದೆ. ತ್ರಿವಿಕ್ರಮ್- ಪ್ರಿನ್ಸ್ ಕಾಂಬಿನೇಷನ್​ನ ಈ ಸಿನಿಮಾ ನಿರೀಕ್ಷೆಯಂತೆ ಬಿಗ್ ಓಪನಿಂಗ್ ಪಡೆದುಕೊಂಡಿದೆ. ಅಭಿಮಾನಿಗಳು ಮುಗಿಬಿದ್ದು ಫಸ್ಟ್ ಡೇ ಫಸ್ಟ್ ಶೋ ಸಿನಿಮಾನ ನೋಡಿದ್ದಾರೆ. ಆದ್ರೆ ಗುಂಟೂರು ಖಾರಂ ನಿರೀಕ್ಷೆಯಂತೆ ಮೂಡಿ ಬಂದಿದೆಯಾ.. ಚಿತ್ರಕ್ಕೆ ಬಂದಿರೋ ರೆಸ್ಪಾನ್ಸ್ ಎಂಥದ್ದು ಇಲ್ಲಿದೆ ವರದಿ. ಯೆಸ್, ದೊಡ್ಡ ನಿರೀಕ್ಷೆಯೊಂದಿಗೆ ತೆರೆಗೆ ಬಂದಿರೋ ಗುಂಟೂರು ಖಾರಂ ಸಿನಿಮಾಗೆ ನಿರೀಕ್ಷೆಯಂತೆಯೇ ದೊಡ್ಡ ಓಪನಿಂಗ್ ಸಿಕ್ಕಿದೆ. ತ್ರಿವಿಕ್ರಮ್ ನಿರ್ದೇಶನದ ಮಹೇಶ್ ಬಾಬು-ಶ್ರೀಲೀಲಾ ಜೋಡಿಯ ಈ ಸಿನಿಮಾ ರಿಲೀಸ್​ಗೂ ಮೊದಲೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿತ್ತು. ತೆಲಗು ರಾಜ್ಯಗಳಷ್ಟೇ ಅಲ್ಲದೇ ವರ್ಲ್ಡ್ ವೈಡ್ ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ರಿಲೀಸ್ ಆಗಿರೋ ಗುಂಟೂರು ಖಾರಂ ಫಸ್ಟ್ ಡೇ ಬಿಗ್ ರೆಸ್ಪಾನ್ಸ್ ಪಡೆದುಕೊಂಡಿದೆ. ಮಹೇಶ್ ಬಾಬು ಜೊತೆಗೆ ಈ ಹಿಂದೆ ಅತಡು, ಖಲೇಜ ಸಿನಿಮಾಗಳನ್ನ ಮಾಡಿದ್ದ ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾ ಇದು. ಪ್ರಿನ್ಸ್-ತ್ರಿವಿಕ್ರಮ್…

Read More

ಬೆಂಗಳೂರು: ರಾಮಮಂದಿರ ಉದ್ಘಾಟನೆಗೆ ಹೋಗುವ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಹೋಗುವುದಿಲ್ಲ ಎಂದು ಹೇಳಿದರೆ, ಉತ್ತರ ಭಾರತದ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ‌. ಇದರಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದೆ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಅಯೋಧ್ಯೆಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಅವರಿಗೆ ಸಲಹೆಗಾರರು ಬಹಳ‌ಜನ ಇದ್ದಾರೆ. ಹೀಗಾಗಿ ರಾಮ ಮಂದಿರ ವಿಚಾರದಲ್ಲಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಒಂದು ದಿನ ನಮ್ಮ ಊರಿನಲ್ಲೇ ರಾಮನ ಪೂಜಿಸುತ್ತೇವೆ ಅಂತಾರೆ ಮತ್ತೊಂದು ರಾಮ ಮಂದಿರ ಉದ್ಘಾಟನೆಗೆ ಹೊಗುವುದಿಲ್ಲ ಎನ್ನುತ್ತಾರೆ. ಅದರಿಂದ ರಾಜಕೀಯವಾಗಿ ಕಷ್ಟವಾಗಲಿದೆ ಎಂದು ಇನ್ನೊಬ್ಬ ಸಲಹೆಗಾರರು ಹೇಳಿದಾಗ ಅಯೋದ್ಯೆಗೆ ಹೋಗುವುದಾಗಿ ಹೇಳುತ್ತಾರೆ. ರಾಮಮಂದಿರ ಉದ್ಘಾಟನೆವರೆಗೂ ಇನ್ನೂ ಏನೇನು ಹೇಳುತ್ತಾರೊ ನೋಡಿ ಎಂದು ವ್ಯಂಗ್ಯವಾಡಿದರು. ರಾಮಂದಿರ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದೆ. ಉತ್ತರ ಭಾರತದ ಅನೇಕ ಶಾಸಕರು ಅಯೋಧ್ಯೆಗೆ ಹೊಗುವುದಾಗಿ ಹೇಳುತ್ತಾರೆ. ಸೋನಿಯಾ ಖರ್ಗೆ ಹೋಗುವುದಿಲ್ಲ ಎಂದು ಹೇಳುತ್ತಾರೆ‌. ರಾಜ್ಯದ ನಾಯಕರು ಜನವರಿ…

Read More

ಬೆಂಗಳೂರು :  ರಾಜ್ಯದಲ್ಲಿ ಮಹಿಳಾ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸರ್ಕಾರದ ಮೇಲೆ ಅನಾವಶ್ಯಕವಾಗಿ ಸುಳ್ಳು ಆರೋಪಗಳನ್ನು ಹೊರಿಸುವುದು ಸರಿಯಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿರ್ಭಯಾ ಯೋಜನೆಯಡಿ ಮಹಿಳಾ ಸುರಕ್ಷತಾ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಹಾವೇರಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ‌ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ‌. ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ತನಿಖೆ ಇನ್ನು ಪೂರ್ಣಗೊಂಡಿಲ್ಲ. ಈ ಮೊದಲೇ ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದು ಹೇಳಿದರು. ಶಾಸಕ ಟಿ.ಬಿ.ಜಯಚಂದ್ರ ಅವರ ಪುತ್ರ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವುದರಿಂದ ಮಾಜಿ ಸಂಸದ ಮುದ್ದ ಹನುಮೇಗೌಡ ಅವರು ಪಕ್ಷ ಸೇರ್ಪಡೆಗೆ ವಿರೋಧಿಸುತ್ತಿರಬಹುದು. ಯಾರೇ ಟಿಕೆಟ್ ಆಕಾಂಕ್ಷಿಯಾಗಿದ್ದರು ಸಹ ಪಕ್ಷದ ರಾಜ್ಯ ಚುನಾವಣಾ ಸಮಿತಿ…

Read More

ಹವಾಮಾನ ಬದಲಾಗೋ ಈ ದಿನಗಳಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಈ ಸಂದರ್ಭದಲ್ಲಿ ಬೆಚ್ಚನೆಯ ಬಾದಾಮಿ ಸೂಪ್ ಸೇವನೆ ಉತ್ತಮವಾಗಿರುತ್ತದೆ. ಇದನ್ನು ಉಪವಾಸದ ಸಂದರ್ಭದಲ್ಲಿಯೂ ಸೇವಿಸಲು ಅರ್ಹವಾಗಿದೆ. ಬಾದಾಮಿ ಸೂಪ್ ಮಾಡುವ ವಿಧಾನವನ್ನು ನಾವಿಂದು ಹೇಳಿಕೊಡಲಿದ್ದೇವೆ. ನೀವು ಕೂಡಾ ಇದನ್ನು ಸವಿದು ಆರೋಗ್ಯವನ್ನು ಕಾಪಾಡಿಕೊಳ್ಳಿ. ಬೇಕಾಗುವ ಪದಾರ್ಥಗಳು: ಬಾದಾಮಿ – 20 ಹಾಲು – 2 ಕಪ್ ನೀರು – 1 ಕಪ್ ಕಲ್ಲುಪ್ಪು – ರುಚಿಗೆ ತಕ್ಕಷ್ಟು ಕರಿ ಮೆಣಸಿನಪುಡಿ – ಸ್ವಾದಕ್ಕನುಸಾರ ಬೇಯಿಸಿದ ಆಲೂಗಡ್ಡೆ – 1 ಫ್ರೆಶ್ ಕ್ರೀಮ್ – ಅರ್ಧ ಕಪ್  ಮಾಡುವ ವಿಧಾನ: * ಮೊದಲಿಗೆ ಬಾದಾಮಿಯನ್ನು ಬೆಚ್ಚಗಿನ ನೀರಿನಲ್ಲಿ ಸುಮಾರು 20 ನಿಮಿಷ ನೆನೆಸಿ. * ನಂತರ ಅದರ ಸಿಪ್ಪೆ ತೆಗೆದು, ಮಿಕ್ಸರ್ ಜಾರ್‌ನಲ್ಲಿ ಪೇಸ್ಟ್ ಮಾಡಿಕೊಳ್ಳಿ. * ಈಗ ಒಂದು ಪ್ಯಾನ್‌ಗೆ ಈ ಬಾದಾಮಿ ಪ್ಯೂರಿಯನ್ನು ಹಾಕಿ ಬೇಯಿಸಿಕೊಳ್ಳಿ. * ನಂತರ ಅದಕ್ಕೆ ಹಾಲು, ನೀರು ಸೇರಿಸಿ…

Read More