Author: AIN Author

ಬೆಂಗಳೂರು:- HDK ಕೇಂದ್ರ ಸಚಿವನಾಗುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಚ್. ಡಿ. ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿ ಆಗುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮುಂದೆ ಆ ಬಗ್ಗೆ ಚರ್ಚೆ ಆಗಿಲ್ಲ. ಆದರೆ, ಮೋದಿ ಅವರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದು ಹೇಳಿದರು. ಒಂದು ಬಾರಿ ಸಂಸತ್ ಸದಸ್ಯರಾದವರನ್ನು ಮಂತ್ರಿ ಮಾಡಿದ್ದಾರೆ. ಮೋದಿ‌ ಅವರ‌ ಆಯಕ್ಷನ್ ಪ್ಲ್ಯಾನ್ ಅವರ ಸಹೋದ್ಯೋಗಿಗಳಿಗೂ ಗೊತ್ತಾಗುವುದಿಲ್ಲ. ಹೀಗಾಗಿ ಅವರ ಮನಸ್ಸಿ‌ಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದರು. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುತ್ತಾರಾ? ಇಲ್ಲವಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನರೇಂದ್ರ ಮೋದಿ ಅವರು ಏನು ಹೇಳ್ತಾರೋ ನೊಡೋಣ. ಅವರ ಮನಸ್ಸಿನಲ್ಲಿ ಏನು ಇದೆಯೋ ಗೊತ್ತಿಲ್ಲ. ಮೋದಿ ಅವರು ಹೇಳಿದಂತೆ ಕುಮಾರಸ್ವಾಮಿ ಅವರು ಕೇಳುತ್ತಾರೆ. ಕುಮಾರಸ್ವಾಮಿ ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದರೆ, ನಾವೆಲ್ಲ ಕುಳಿತು ಚರ್ಚೆ…

Read More

ಬೆಂಗಳೂರು:- ಹಿಂದೂ-ಮುಸ್ಲೀಂ ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಇಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಹಿಂದುಗಳಾಗಲಿ, ಮುಸ್ಲಿಮರಾಗಲಿ ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು. ನೈತಿಕ ಪೊಲೀಸ್‌ ಗಿರಿ ವಿಚಾರದಲ್ಲಿ ನಾವು ತುಂಬ ಕಟ್ಟು ನಿಟ್ಟಾಗಿದ್ದೇವೆ. ಹಿಂದುಗಳಾಗಲೀ ಮುಸ್ಲಿಮರಾಗಲೀ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಬಾರದು. ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ ಅವರಿಬ್ಬರು, ಯಾ ಕಾರಣಕ್ಕೂ ಇಂಥ ಘಟನೆಗಳನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

Read More

ಹಾವೇರಿ : ಜ 13 – ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಜನವರಿ 15 ರಂದು ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾಯ೯ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಸೋಮವಾರ ಬೆಳಿಗ್ಗೆ 11.30 ಗಂಟೆಗೆ ಸುಕ್ಷೇತ್ರ ನರಸೀಪುರ (ಕಂಚಾರಗಟ್ಟಿ )ದಲ್ಲಿ ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ೬ ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಬ್ಯಾಡಗಿ ತಾಲೂಕಾ ಚಿಕ್ಕಬಾಸೂರು ಗ್ರಾಮದಲ್ಲಿ ಅಯೋಜಿಸಲಾದ ಶ್ರೀ ಗುರುವಶಿವಯೋಗಿಸಿದ್ದಾರಾಮೇಶ್ವರರ 851 ನೇ ಜಯಂತಿ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ಹುಬ್ಬಳ್ಳಿಗೆ ಆಗಮಿಸಿ ಹೆಲಿಕ್ಯಾಪ್ಟರ್ ಮೂಲಕ ಹಾವೇರಿ ಜಿಲ್ಲೆ ನರಸೀಪುರಕ್ಕೆ 11.20 ಗಂಟೆಗೆ ಆಗಮಿಸಲಿದ್ದಾರೆ . ನಿಗದಿತ ಕಾಯ೯ಕ್ರಮದಲ್ಲಿ ಭಾಗವಹಿಸಿ 1.20 ಗಂಟೆಗೆ ನರಸೀಪುರದಿಂದ ಬ್ಯಾಡಗಿ ತಾಲೂಕು ಚಿಕ್ಕ ಬಾಸೂರು ಗ್ರಾಮಕ್ಕೆ ಆಗಮಿಸಲಿದ್ದಾರೆ ನಿಗದಿತ ಕಾಯ೯ಕ್ರಮದಲ್ಲಿ ಭಾಗವಹಿಸಿ ಸಂಜೆ 4.45 ಕ್ಕೆ ಚಿಕ್ಕ…

Read More

ಹುಬ್ಬಳ್ಳಿ: ಶ್ರೀರಾಮನೊಬ್ಬನೇ ದೇವರು ಎಂದು ನಾವು ಎಲ್ಲಿಯೂ ಹೇಳಿಲ್ಲ. ರಾಮ ರಾಜ್ಯದ ಆಶಯದೊಂದಿಗೆ ಅಯೋಧ್ಯಯಲ್ಲಿ ಮಂದಿರ ನಿರ್ಮಾವಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಆ ಶ್ರೀರಾಮನೆ ಬುದ್ದಿ ಕರುಣಿಸಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು. ಶ್ರೀರಾಮನನ್ನು ತಾವೇ ಹುಟ್ಟಿಸಿದಂತೆ ಬಿಜೆಪಿಗರು ವರ್ತಿಸುತ್ತಿದ್ದಾರೆ ಎಂಬ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಹೇಳಿಕೆ ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಪ್ರತಿಕ್ರಿಯಿಸಿದರು. ಸತಾತನ ಧರ್ಮದ ಪುನರುತ್ಥಾನ, ದೇವನೊಬ್ಬ ನಾಮ ಹಲವು ಎನ್ನುವಂತೆ ನಮ್ಮಲ್ಲಿ ಮುಕ್ಕೋಟಿ ದೇವತೆಗಳಿದ್ದಾರೆ. ಆದರೆ, ಶ್ರೀರಾಮ ಹಿಂದುತ್ವದ ಪ್ರತೀಕ ಎಂದರು. ಬಿಜೆಪಿ ಎಲ್.ಕೆ. ಅಡ್ವಾನಿ ಅವರು ಹೋರಾಟ ಆರಂಭಿಸುವ ಮುನ್ನ ಕಾಂಗ್ರೆಸ್ ನಾಯಕರು ಯಾರಾದರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬ ಹೇಳಿಕ್ಕೆ ನೀಡಿದ್ದರೆ ತೋರಿಸಲಿ. ಬಾಬರ್ ಬಿಡದ, ರಾಮನ ಹಿಡಿಯದ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದರು ಎಂದು ತಿಳಿಸಿದರು. ರಾಮ ಕಾಲ್ಪನಿಕ ವ್ಯಕ್ತಿ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ನಾಲ್ಕು ರಾಜ್ಯಗಳ ವಜಾ, ಕರಸೇವಕರ ಬಂಧನ, ದಾವಣಗೆರೆ, ಚನ್ನಪಟ್ಟಣದಲ್ಲಿ, ಬೆಂಗಳೂರಿನಲ್ಲಿ ಗೋಲಿಬಾರ್…

Read More

ಬೆಳಗಾವಿ:- ಗೋಮಾಂಸ ‌ನಾವು ತಿನ್ನುತ್ತೇವೆ ಎನ್ನುವವರ ವಿರುದ್ಧ ನಮಗೆ ಸಿಟ್ಟಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೈಕ್ ಮೂಲಕ ಅಜಾನ್ ಕೂಗುವುದು ಸುಪ್ರೀಂ ಕೋರ್ಟ್ ಪ್ರಕಾರ ನಿಷೇಧ ಇದೆ. ಮೈಕ್ ಮೂಲಕ ಅಜಾನ್ ಕೂಗುತ್ತಿದ್ದರೂ ಪೊಲೀಸರೇನು ಕಿವಿಯಲ್ಲಿ ಹತ್ತಿ, ಶಗಣಿ ಹಾಕೊಂಡಿದ್ದಾರಾ? ಅಜಾನ್ ನೀವು ನಿಲ್ಲಿಸ್ತಿರೋ,‌ ನಾವು ನಿಲ್ಲಿಸೋಣವೋ ಎಂದು ಪೊಲೀಸರಿಗೆ ‌ಮುತಾಲಿಕ್ ಪ್ರಶ್ನೆ ಮಾಡಿದರು. ನಾವು ಗೋಹಂತಕರನ್ನು ವಿರೋಧಿಸುವುದನ್ನು ಬಿಟ್ಟು ‌ಪೂಜೆ ಮಾಡಬೇಕೆ? ರಾಜ್ಯದಲ್ಲಿರುವುದು ನೀಚ ಕಾಂಗ್ರೆಸ್ ‌ಸರ್ಕಾರ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ‌ರು. ಹಿಂದೂಗಳು ಮಾಂಸ ತಿನ್ನುತ್ತಾರೆ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಗೋಹತ್ಯೆ ಮಾಡಿ ಗೋಮಾಂಸ ತಿನ್ನುವುದನ್ನು ನಾವು ವಿರೋಧಿಸುತ್ತೇವೆ. ಹಲವು ರಾಜಕೀಯ ನಾಯಕರು, ಬುದ್ಧಿಜೀವಿಗಳು ‌ಸೊಕ್ಕಿನಿಂದ ನಾನು ಗೋಮಾಂಸ ತಿನ್ನುತ್ತೇನೆ ಎನ್ನುತ್ತಿದ್ದಾರೆ. ಗೋಮಾಂಸ ‌ನಾವು ತಿನ್ನುತ್ತೇವೆ ಎನ್ನುವವರ ವಿರುದ್ಧ ನಮಗೆ ಸಿಟ್ಟಿದೆ. ಗೋಮಾಂಸ ತಿನ್ನುತ್ತೇವೆ ಎನ್ನುವ ನೀವು ಹಂದಿ‌ ಏಕೆ ತಿನ್ನಲ್ಲ? ಆಕಳನ್ನು ತಿಂದ್ರೆ ನಮಗೆ ಸಿಟ್ಟು ಬರುತ್ತದೆ. ಈ…

Read More

ಹುಬ್ಬಳ್ಳಿ:- UPA,NDA ಅವಧಿಯ ಅನುದಾನದ ಕುರಿತು ಶ್ವೇತ ಪತ್ರ ಹೊರಡಿಸಿ ಎಂದು ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯಕ್ಕೆ ಹಿಂದಿನ ಯುಪಿಎ ಸರ್ಕಾರದಲ್ಲಿ ಎಷ್ಟು ಅನುದಾನ ಬಂದಿದೆ, ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎನ್‌ಎ ಸರ್ಕಾರದಲ್ಲಿ ಎಷ್ಟು ಬಂದಿದೆ ಎಂಬುದರ ಬಗ್ಗೆ ಸಿಎಂ ಶ್ವೇತಪತ್ರ ಹೊರಡಿಸಲಿ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂಕಿ-ಅಂಶ ಮುಚ್ಚಿಟ್ಟು ಕೇಂದ್ರದ ವಿರುದ್ದ ಸುಳ್ಳು ಆರೋಪ‌ ಮಾಡುತ್ತಿದೆ.2004ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರದ ಡಾ.ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಅನುದಾನ ಎಷ್ಟು ಕೊಟ್ಟಿದ್ದಾರೆ ತಿಳಿಸಬೇಕು. ನರೇಂದ್ರ ಮೋದಿ ಅವರು ಕೊಟ್ಟ ಅನುದಾನ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು. ಪ್ರಧಾನಿ ಮೋದಿ ಅನುದಾನ ಕಡಿಮೆ ಕೊಟ್ಟಿದ್ದರೆ ನಾವು ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಒಪ್ಪಿಕೊಂಡು ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುವುದಿಲ್ಲ.ನೀವು ಇದೇ ಸವಾಲನ್ನು ಸ್ವೀಕರಿಸಿ, ಸುಳ್ಳೆ…

Read More

ಬೆಂಗಳೂರು:- ಆಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್ ಗಳ ಜೊತೆ ವೈರ್ ಲೆಸ್ ಸಂಪರ್ಕ, ಋತುಸ್ರಾವ ಮಹಿಳೆಯರ ಅನುಕೂಲಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ಸ್ಥಾಪನೆ, ಸಮಾರಂಭಗಳಲ್ಲಿ ಬಳಸಿದ ಹೂವು ಮತ್ತು ಆಹಾರ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಸೇರಿ ಐಡಿಯಾಥಾನ್ ಸ್ಪರ್ಧೆಯ ಅತ್ಯುತ್ತಮ ಸಲಹೆಗಳನ್ನು ಜಾರಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕಳೆದೊಂದು ತಿಂಗಳಿಂದ ನಡೆದ ಯುವ ನಾಯಕತ್ವ ಸಮ್ಮೇಳನ ಹಾಗೂ ಐಡಿಯಾಥಾನ್ ಸ್ಪರ್ಧೆಯ ಅಂತಿಮ ಸುತ್ತು ನಗರದಲ್ಲಿ ಶನಿವಾರ ನಡೆಯಿತು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು: ಬ್ರಾಂಡ್ ಬೆಂಗಳೂರು ಯೋಜನೆ ಮೂಲಕ ಬೆಂಗಳೂರಿನ ಸಮಸ್ಯೆಗಳಿಗೆ ಶಾಲಾ ಮಕ್ಕಳು ಈ ಐಡಿಯಾಥಾನ್ ಸ್ಪರ್ಧೆ ಮೂಲಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ದೇಶದ ಬೆಳವಣಿಗೆಗೆ ನಿಮ್ಮ ಆಲೋಚನೆ, ನಾಯಕತ್ವ ಗುಣ ಅತ್ಯಗತ್ಯ. ಕೇವಲ ರಾಜಕಾರಣಿಗಳು ಮಾತ್ರ ನಾಯಕರಲ್ಲ. ನಿಮ್ಮಲ್ಲೂ ನಾಯಕತ್ವ ಗುಣ ಇವೆ. ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ನಾಯಕತ್ವದ ಗುಣ…

Read More

ಮುಂಬೈ:- ಹೃದಯಾಘಾತದಿಂದ ಸಂಗೀತದ ಮೇರು ಗಾಯಕಿ 92 ವರ್ಷದ ಡಾ.ಪ್ರಭಾ ಅತ್ರೆ ಅವರು ಇಂದು ನಿಧನರಾದರು. ಪ್ರಭಾ ಅವರು ಶನಿವಾರ ನಸುಕಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ದೀನನಾಥ ಮಂಗೇಶ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ಅವರು ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಬಹುಮುಖಿ ವ್ಯಕ್ತಿತ್ವದ ಪ್ರಭಾ ಅವರು ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ದಶಕಗಳಿಂದ ಕಿರಾಣಾ ಘರಾಣಾ ಗಾಯನ ಶೈಲಿಯನ್ನು ಪ್ರತಿನಿಧಿಸಿದ್ದರು. 1932ರ ಸೆಪ್ಟೆಂಬರ್‌ 13ರಂದು ಜನಿಸಿದ್ದ ಪ್ರಭಾ ಅವರು ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೆ ಶಿಕ್ಷಣತಜ್ಞೆಯಾಗಿಯೂ ಹೆಸರಾಗಿದ್ದರು. ಕರ್ನಾಟಕದೊಂದಿಗೆ, ವಿಶೇಷವಾಗಿ ಹುಬ್ಬಳ್ಳಿ–ಧಾರವಾಡದೊಂದಿಗೆ ಅವರು ವಿಶೇಷ ನಂಟನ್ನು ಹೊಂದಿದ್ದರು.

Read More

ಬಳ್ಳಾರಿ: ನಗರದ ಕಪ್ಪಗಲ್ಲು ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಇಂದು ಬೆಳಗಿನ‌ಜಾವ ಕಳ್ಳರು ಸರಣಿಗಳ್ಳತ ನಡೆಸಿ ಸಾವಿರಾರು ರೂ ನಗದನ್ನು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ. ಈ ರಸ್ತೆಯಲ್ಲಿ ಮೆಡ್ ಪ್ಲಸ್ ನಲ್ಲಿ 24880 ರೂ, ಸಾಯಿ ಇಂದಿರಾ ಮೆಡಿಕಲ್ ಸ್ಟೋರ್ ನಲ್ಲಿ 8000 ರೂ, ಕನಕ ದುರ್ಗಮ್ಮ ಪ್ರಾವಿಷನ್ ಸ್ಟೋರ್ ನಲ್ಲಿ ಒಂದು ಸಾವಿರ ರೂ ಮತ್ತು ವಿಜಯ ರಾಮ ಸೂಪರ್ ಮಾರ್ಕೇಟ್ ನಲ್ಲಿ 17 ಸಾವಿರ ರೂ ನಗದು ದೋಚಿದ್ದಾರೆ. ಈ ಬಗ್ಗೆ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರು ಮುಖಕ್ಕೆ ವಾಸ್ಕ್ ಧರಿಸಿಕೊಂಡು, ಬ್ಯಾಟರಿ ಹಿಡಿದುಕೊಂಡು, ಮಳಿಗೆಯ ಷಟರ್ ನಿಂದ ಒಳಗೆ ನುಗ್ಗಿ, ಕ್ಯಾಸ್ ಕೌಂಟರ್ ತೆಗೆದು ಹಣ ಲಪಟಾಯಿಸಿದ್ದಾರೆ. ಮಳಿಗೆಗಳ ಷಟರ್ ಗಳನ್ನು ಹಾರೆಗಳಿಂದ ಮೀಟಿ ತೆಗೆಯಲಾಗಿದೆ ಇದೆಲ್ಲ ಸಿಸಿ ಕೆಮೆರಾಗಳಲ್ಲಿ ರೆಕಾರ್ಡ್ ಆಗಿದೆ. ಸ್ಥಳಕ್ಕೆ ಪೊಲೀಸರು ಬಂದು ಹೋಗಿದ್ದಾರೆ‌. ಕಳ್ಳರನ್ನು ಪತ್ತೆ ಹಚ್ಚಬೇಕಿದೆ.

Read More

ಬೆಂಗಳೂರು :- ನಗರ ಹೊರವಲಯ ನೆಲಮಂಗಲ ನಗರದ ಪುರಾಣ ಪ್ರಸಿದ್ಧ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಿಂದ ಸಂಕ್ರಾಂತಿ ವಿಶೇಷವಾಗಿ ಸುಗ್ಗಿ ಸಂಭ್ರಮ ಅರ್ಥ ಪೂರ್ಣ ಕಾರ್ಯಕ್ರಮ ಆಚರಣೆ ಮಾಡಲಾಗಿದ್ದು. ಪವಾಡ ಶ್ರೀ ಬಸವಣ್ಣ ದೇವರ ಮಠದ ಶಿಕ್ಷಕರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಸುಗ್ಗಿ ಸಂಭ್ರಮದಲ್ಲಿ ಪಾಲ್ಗೊಂಡು ಸುಗ್ಗಿ ಸಂಭ್ರಮದ ಕಲರವದಲ್ಲಿ ಸಂಭ್ರಮಿಸಿದ್ದಾರೆ. ಇನ್ನೂ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು. ಎತ್ತುಗಳಿಗೆ ಅಲಂಕಾರ, ಚಕ್ಕಡಿ ಗಳಿಗೆ ಅಲಂಕಾರ ,ಗೋವು ಪೂಜೆ, ಭೂಮಿ ಹಾಗೂ ಗಂಗಾ ಮಾತೆಗೆ ವಿಶೇಷ ಪೂಜೆ ಪುನಸ್ಕಾರ ಸಲ್ಲಿಸಲಾಗಿದೆ . ಇನ್ನೂ ಸಂಕ್ರಾಂತಿ ವಿಶೇಷ ಎಳ್ಳು ಬೆಲ್ಲ, ಬೇಯಿಸಿದ ಕಡಲೇಕಾಯಿ, ಅವರೇ ಕಾಯಿ ಹಾಗೂ ಕಬ್ಬುಗಳನ್ನು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಿದ್ಯಾರ್ಥಿಗಳಿಗೆ ಹಂಚುತ್ತಾ ಸುಗ್ಗಿ ಸಂಭ್ರಮದಲ್ಲಿ ತಾವು ಮಕ್ಕಳಂತೆ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಇನ್ನೂ ಸುಗ್ಗಿ ಸಂಭ್ರಮದ ವಿಶೇಷವಾಗಿ ತಯಾರಿಸಿದ ವಿಶೇಷ ಅಲಂಕಾರಗೊಂಡ ಚಕ್ಕಡಿಯಲ್ಲಿ ವಿದ್ಯಾರ್ಥಿಗಳು ಕುಳಿತು ಸುಗ್ಗಿ ಸಂಭ್ರಮವನ್ನು…

Read More