Author: AIN Author

ಬೆಂಗಳೂರು:- ತಮ್ಮ ವಿರುದ್ಧದ ಎಫ್‌ಐಆರ್ ರದ್ದುಕೋರಿ ಬೆಂಗಳೂರು ಹೈಕೋರ್ಟ್‌ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ ಲಿಮಿಟೆಡ್‌ಗೆ 439 ಕೋಟಿ ರೂ. ಸಾಲ ಪಾವತಿಸದೇ ವಂಚಿಸಿರುವ ಆರೋಪವನ್ನು ಎದುರಿಸುತ್ತಿರುವ ಸೌಭಾಗ್ಯಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಮತ್ತಿಬ್ಬರು ನಿರ್ದೇಶಕರಾಗಿದ್ದ ವಸಂತ್ ಪಾಟೀಲ್ ಮತ್ತು ಶಂಕರ್ ಪವಾಡೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ರಮೇಶ್ ಜಾರಕಿಹೊಲಿ ಸೇರಿದಂತೆ ಇನ್ನಿಬ್ಬರು, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ಮತ್ತು ಅದರ ಸಮೂಹದ ಬ್ಯಾಂಕ್‌ಗಳಲ್ಲಿ ಅವಧಿ ಸಾಲ, ದುಡಿಯುವ ಬಂಡವಾಳದ ರೂಪದಲ್ಲಿ 2013ರ ಜುಲೈ 12 ರಂದು ರಿಂದ 2017ರ ಮಾರ್ಚ್ 31ರ ಅವಧಿಯಲ್ಲಿ 232.88 ಕೋಟಿ ಸಾಲ ಪಡೆದಿದ್ದರು. ಇದು 439.7 ಕೋಟಿಗೆ ಏರಿಕೆಯಾಗಿದ್ದರೂ ಅದನ್ನು ಪಾವತಿಸಿರಲಿಲ್ಲ. ಸಾಲ ಪಡೆಯುವ ಸಂದರ್ಭದಲ್ಲಿ ಶುಗರ್ ಕಂಪೆನಿಯಲ್ಲಿ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ವಸಂತ್ ಮತ್ತು ಶಂಕರ್ ಅವರು ನಿರ್ದೇಶಕರಾಗಿದ್ದರು. ಸಾಲ…

Read More

ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ  (Pri yanka  Gandhi Vadra) ಮುಂಬರುವ ಲೋಕಸಭಾ ಕ್ಷೇತ್ರದಿಂದ (Koppala Lok Sabha) ಕಣಕ್ಕೆ ಇಳಿಯು ತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ. ರಾಜ್ಯಮಟ್ಟದ ನಾಯಕರಿಗೆ ತಿಳಿಸದೇ ಎಐಸಿಸಿ (AICC) ರಹಸ್ಯವಾಗಿ ಕರ್ನಾಟಕದ ಕೊಪ್ಪಳ (Koppala) ಮತ್ತು ತೆಲಂಗಾಣದ ಒಂದು ಲೋಕಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾಗದಲ್ಲಿ ಕಾಂಗ್ರೆಸ್‌ ಇನ್ನೂ ಗಟ್ಟಿಯಾಗಿದೆ. ಸದ್ಯ ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರದಲ್ಲಿದ್ದರೆ ತಮಿಳುನಾಡು, ಕೇರಳದಲ್ಲಿ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ದಕ್ಷಿಣ ಭಾಗದಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಅನುಕೂಲ. ಅದರಲ್ಲೂ ಗಾಂಧಿ ಕುಟುಂಬ ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು. ಕರ್ನಾಟಕಕ್ಕೆ ಬಂದರೆ ಪಕ್ಷಕ್ಕೆ ಲಾಭ ಆಗಲಿದೆ ಎಂದು ರಾಜ್ಯ ನಾಯಕರು ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಪೂರಕ ಎಂಬಂತೆ ಎಐಸಿಸಿ ಕೊಪ್ಪಳ ಕ್ಷೇತ್ರದಲ್ಲಿ ರಹಸ್ಯವಾಗಿ ಸಮೀಕ್ಷೆ ನಡೆಸಿದೆ. ಕೊಪ್ಪಳದಲ್ಲಿ ಯಾಕೆ? ರಾಯಚೂರು ಜಿಲ್ಲೆಯ…

Read More

ಬೆಂಗಳೂರು:+ ನಮ್ಮ ಪುತ್ರನಿಗೆ MP ಟಿಕೆಟ್ ಕೊಡುವಂತೆ ವರಿಷ್ಠರ ಬಳಿ ಕೇಳಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,: ಪುತ್ರ ಕಾಂತೇಶ್ ಅವರಿಗೆ ಲೋಕಸಭೆ ಟಿಕೆಟ್ ನೀಡುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ತಮ್ಮ ಪುತ್ರ ಕಾಂತೇಶ್ ಅವರಿಗೆ ಚುನಾವಣಾ ಅಖಾಡಕ್ಕೆ ಇಳಿಸಲು ಕಸರತ್ತು ನಡೆಸುತ್ತಿದ್ದಾರೆ.

Read More

ಹಾವೇರಿ;+ ಕಾಂಗ್ರೆಸ್​ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದಾರೆ ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಗ್ಯಾರಂಟಿಯೂ ಇದೆ. ಇದು ಸರ್ಕಾರದ ಆರನೇ ಗ್ಯಾರಂಟಿ ಅನಿಸುತ್ತದೆ ಎಂದರು. ಕಾಂಗ್ರೆಸ್​ನವರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದಾರೆ. ಕೃತ್ಯ ಆಗಿ ಇಷ್ಟು ದಿನ ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಬಂದಿಲ್ಲ. ಇದು ದುರ್ದೈವದ ಸಂಗತಿ. ಆರೋಪಿಗಳನ್ನು ಭೇಟಿಯಾಗಲು ಮುಖಂಡರನ್ನು ಬಿಡುತ್ತಾರೆ ಅಂದರೆ ಪೊಲೀಸರು ಶಾಮೀಲಿದಾರೆ ಎಂದು ಕಿಡಿಕಾರಿದ್ದಾರೆ. ಯಾರು ಏನು ಮಾಡಿ, ಓಟ್ ಒಂದು ಕೊಟ್ಟು ಬಿಡಿ ಎನ್ನುವ ತರ ಕಾಂಗ್ರೆಸ್ ಸರ್ಕಾರದ ಸ್ಥಿತಿ ಇದೆ. ಎಲ್ಲಿ ಬೇಕಾದರೂ ಗಾಂಜಾ, ಸಾರಾಯಿ ಸಿಗುತ್ತಿದೆ. ಯುವಕರು ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ ಎಂದಿದ್ದಾರೆ. ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಲ್ಕರ ಕ್ರಾಸ್ ಬಳಿ ಸುಮಾರು 7 ಜನ ಲಾಡ್ಜ್​ಗೆ ನುಗ್ಗಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದಾರೆ…

Read More

ಬೆಂಗಳೂರು:-ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಪತ್ತೆಯಾಗಿದ್ದು, 2 ಕೋಟಿ ರೂ. ಮೌಲ್ಯದ ಸಾಮಾಗ್ರಿ ವಶಕ್ಕೆ ಪಡೆಯಲಾಗಿದೆ. ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ನಕಲಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲ. ನಕಲಿ ಉತ್ಪನ್ನ, ಪ್ಯಾಕಿಂಗ್​ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್ ಸೇರಿದಂತೆ ಸಾಮಾಗ್ರಿಗಳು ಪತ್ತೆಯಾಗಿವೆ. ಹೈದರಾಬಾದಿನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವರ ಬಂಧಿಸಲಾಗಿದ್ದು, ಮಾಲಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ನಕಲಿ ಮೈಸೂರ್ ಸ್ಯಾಂಡಲ್ ಸಾಬೂನು ಹೈದರಾಬಾದ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬಗ್ಗೆ ಸಚಿವ ಎಂಬಿ. ಪಾಟೀಲ್​​ಗೆ ಅನಾಮಧೇಯ ಕರೆ ಬಂದಿದೆ. ಆ ಮೂಲಕ ಕಾರ್ಖಾನೆ ಎಂಡಿ ಡಾ. ಪ್ರಶಾಂತ್​ಗೆ ನಿಗಾ ವಹಿಸಲು ಸೂಚಿಸಿದ್ದಾರೆ.

Read More

ವಾಷಿಂಗ್ಟನ್: ನೀರು ಅಂದ್ರೆ ಯಾರಿಗಾದ್ರೂ ಉತ್ಸಾಹ ಉಕ್ಕಿ ಬರೋದು ಸಹಜ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೀರು ಅಂದ್ರೆ ತುಂಬಾನೇ ಇಷ್ಟ ಪಡುತ್ತಾರೆ. ಈಗ ಗೋರಿಲ್ಲಾ ಒಂದು ನೀರಿನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. https://www.youtube.com/watch?v=XfS5kBGBh00&t=2s&ab_channel=DallasZoo ಅಮೆರಿಕಾದ ಡಲ್ಲಾಸ್ ಮೃಗಾಲಯದಲ್ಲಿ ಗೋರಿಲ್ಲಾವೊಂದು ನೀರಿನ ತೊಟ್ಟಿಯಲ್ಲಿ ನಿಂತು ಡ್ಯಾನ್ಸ್ ಮಾಡಿದೆ. ಹೌದು, ಈ 14 ವರ್ಷದ ಗಂಡು ಗೊರಿಲ್ಲ ಬಕೆಟ್ ನೀರಿನಲ್ಲಿ ನಿಂತು ಸಖತ್ ಡ್ಯಾನ್ಸ್ ಮಾಡಿದೆ. ಇದನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿದ್ದು, ವಿಡಿಯೋವನ್ನು ಯುಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಇದೂವರೆಗೆ 19 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Read More

ಚಿಕ್ಕಬಳ್ಳಾಪುರ:- ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾಂತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲವಿತ್ತು. ಆದರೆ ಈ ವರ್ಷ ತೀವ್ರ ಬರಗಾಲ ಹಿನ್ನಲೆ ಸಂಕ್ರಾಂತಿ ಮಾಯವಾಗಿದೆ. ಮತ್ತೊಂದೆಡೆ ಅವರೇಕಾಯಿ, ಕಡಲೇಕಾಯಿ, ಗೆಣಸು ದುಬಾರಿಯಾಗಿದೆ. ಖರೀದಿ ಮಾಡಲಾಗದೇ ಜನ ಹಬ್ಬದ ಸಂದರ್ಭದಲ್ಲೇ ಸಂಕಷ್ಟಕ್ಕೀಡಾಗಿದ್ದಾರೆ. ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಇಲ್ಲದೇ ಸಂಕ್ರಾಂತಿ ಊಹಿಸಿಕೊಳ್ಳುವುದು ಕಷ್ಟ. ಸಂಕ್ರಾಂತಿಯ ಸುಗ್ಗಿಗೆ ಅವರೇಕಾಯಿ, ಕಡಲೇಕಾಯಿ, ಗೆಣಸು, ಕಬ್ಬು ಬೇಕೇಬೇಕು. ಅವರೇಕಾಯಿ, ಕಡಲೇಕಾಯಿ, ಗೆಣಸನ್ನು ಬೇಯಿಸಿ, ಅದರ ಜೊತೆ ಎಳ್ಳು-ಬೆಲ್ಲ ಸೇರಿಸಿ ಪರಸ್ಪರ ಹಂಚಿ ಶುಭಾಶಯ ಕೋರುವುದು ವಾಡಿಕೆ. ಆದರೆ ಈ ಬಾರಿ ರಾಜ್ಯಾದ್ಯಂತ ತೀವ್ರ ಬರಗಾಲ ಹಿನ್ನಲೆ ಮಳೆಯಿಲ್ಲದೇ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರೀಕ್ಷೆಯಷ್ಟು ಅವರೇಕಾಯಿ, ಕಡಲೇಕಾಯಿ, ಗೆಣಸು ಬೆಳೆ ಬಂದಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಬೆಳೆದಿರುವ ಅವರೇಕಾಯಿ, ಕಡಲೇಕಾಯಿ, ಗೆಣಸು ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಇದ್ರಿಂದ ಜಿ ಅವರೇಕಾಯಿಗೆ 80 ರೂಪಾಯಿ, ಕೆಜಿ ಕಡಲೇಕಾಯಿಗೆ 100 ರೂಪಾಯಿ,…

Read More

ಹುಬ್ಬಳ್ಳಿ:ಬೆಚ್ಚನೆಯ ಮನೆ ಇರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನ್ನಿರುವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದು ಎಂಬ ಸರ್ವಜ್ಞನ ಮಾತನ್ನು ನಾವೆಲ್ಲ ಕೇಳಿಯೇ ಇದ್ದೇವೆ,ಹಾಗೆಯೇ ಇಲ್ಲೊಂದು ಕುಟುಂಬ ಕೂಡಾ ಸರ್ವಜ್ಞನ ಮಾತಿನಂತೆಯೇ ಇಲ್ಲೊಬ್ಬ ಕೋಟ್ಯಾಧೀಶ ತನ್ನ ಹೆಂಡತಿ ಹಾಗೂ ಮಕ್ಕಳ ಜೊತೆ ಖುಷಿಯಾಗಿ ಇದ್ದ ಆದ್ರೆ ಅದ್ಯಾವ ಶನಿಯ ದೃಷ್ಟಿ ಈ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ ಚೆನ್ನಾಗಿದ್ದ ಕುಟುಂಬದಲ್ಲಿ ಪರಸ್ತ್ರಿ ಆಗಮನವಾಗಿ ಕೋಟ್ಯಾಧೀಶ ಕೊಲೆಯಾಗಿದ್ದಾನೆ.ಅಷ್ಟಕ್ಕೂ ಯಾರಾತ ಯಾರೀ ಕೋಟ್ಯಾಧೀಶ ಅಂತೀರಾ ಅಲ್ವಾ ಈ ಸ್ಟೋರಿ ನೋಡಿ.. ಹೀಗೆ ಫೋಟೋದಲ್ಲಿ ಕಾಣುತ್ತಿರೋ ಈ ಕುಟುಂಬದ ಮನೆಯೊಡೆಯ ಅಶೋಕ ಬ್ಯಾಹಟ್ಟಿ ಹಾಗೂ ಲತಾ ದಂಪತಿಗಳ ಸುಂದರ ಕುಟುಂಬ ಅಶೋಕ ವೃತ್ತಿಯಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿದ್ದ ಆತನ ತಾತನ ಕಾಲದಲ್ಲಿಯೇ ನಗರದ ದುರ್ಗದ ಬೈಲ್ ನಲ್ಲಿ ಪ್ರಸಿದ್ಧ ಟೀ ಅಂಗಡಿ ಇತ್ತು.ಬ್ಯಾಹಟ್ಟಿ ಟೀ ಅಂದ್ರೆ ತುಂಬಾನೇ ಫೇಮಸ್ ಅದೇ ರೀತಿ ಅಶೋಕ ತನ್ನ ಅಜ್ಜ ಹಾಗೂ ಅಪ್ಪನ ಬ್ಯುಸಿನೆಸ್ ಮುಂದುವರೆಸಿಕೊಂಡು ತನ್ನ ಕುಟುಂಬದ ಜೊತೆ ಖುಷಿಯಿಂದ…

Read More

ಬಾದಾಮಿ ಸೇವನೆಯು ಮೆದುಳಿನ ಬೆಳವಣಿಗೆಗೆ ಹಾಗೂ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಈ ಮರವು ಪರ್ವತ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ. ನೋಡಿದರೆ ಬಾದಾಮಿ ಮರಗಳು ಏಷ್ಯಾದ ಇರಾನ್, ಇರಾಕ್, ಮೆಕ್ಕಾ, ಶಿರಾಜ್ ಮೊದಲಾದ ಸ್ಥಳಗಳಲ್ಲಿ ಹೆಚ್ಚು ಕಂಡುಬರುತ್ತವೆ. ಇದನ್ನು ಸರಿಯಾಗಿ ಸೇವಿಸಿದರೆ, ನಿಮ್ಮ ಮೆದುಳಿನ ನ್ಯೂರಾನ್‌ಗಳನ್ನು ಸಕ್ರಿಯಗೊಳಿಸುವುದು ಸುಲಭವಾಗುತ್ತದೆ. ಬಾದಾಮಿಯನ್ನು ಹೇಗೆ ಸೇವಿಸಬೇಕೆಂದು ನಿಮಗೆ ತಿಳಿದಿಲ್ಲದಿದ್ದರೆ. ಬಾದಾಮಿಯನ್ನು ಸರಿಯಾಗಿ ಸೇವಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಟ್ಯಾನಿನ್ ಉಪ್ಪಿನ ಸಂಯುಕ್ತವು ಬಾದಾಮಿಯಲ್ಲಿದೆ. ಇದನ್ನು ಸೇವಿಸುವುದರಿಂದ ಬಾದಾಮಿಯ ಸಂಪೂರ್ಣ ಪೋಷಕಾಂಶಗಳು ದೇಹಕ್ಕೆ ಸಿಗುವುದಿಲ್ಲ. ಅದಕ್ಕಾಗಿಯೇ ನಾವು ಬಾದಾಮಿಯನ್ನು ಸಿಪ್ಪೆಯೊಂದಿಗೆ ಸೇವಿಸಬಾರದು. ಆಗಾಗ ಅನೇಕರು ಹಸಿವಿನಿಂದ ಬಾದಾಮಿಗಳನ್ನು ಹಾಗೆಯೇ ಸೇವಿಸುತ್ತಾರೆ, ಆದರೆ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸಿಪ್ಪೆಯನ್ನು ತೆಗೆದು ತಿನ್ನಬೇಕು. ಒಂದೊಮ್ಮೆ ಸಿಪ್ಪೆಯೊಂದಿಗೆ ಸೇವಿಸಿದರೆ ದೇಹದಲ್ಲಿ ಪಿತ್ತದ ಅಸಮತೋಲನ ಹೆಚ್ಚಾಗತೊಡಗುತ್ತದೆ. ಇದರಿಂದಾಗಿ ಅನೇಕ ರೋಗಗಳು ನಿಮ್ಮನ್ನು ಕಾಡಬಹುದು, ಆದ್ದರಿಂದ ಬಾದಾಮಿಯನ್ನು ಸಿಪ್ಪೆಯೊಂದಿಗೆ ಸೇವಿಸುವುದರಿಂದ ದೂರವಿರಿ. ಸಿಪ್ಪೆ ಸಹಿತ ಬಾದಾಮಿಯನ್ನು ತಿನ್ನುವುದರಿಂದ, ಅದರ ಕೆಲವು ಕಣಗಳು…

Read More

ಹರಿಯಾಣ: ಕಳೆದ ಒಂದು ವಾರಗಳ ಹಿಂದೆಯಷ್ಟೇ ಗುರುಗ್ರಾಮ್‌ನ ಹೋಟೆಲ್‌ವೊಂದರಲ್ಲಿ (Gurugram Hotel) ಗುಂಡು ಹಾರಿಸಿ ಹತ್ಯೆಗೀಡಾದ ಮಾಜಿ ಮಾಡೆಲ್‌ ದಿವ್ಯಾ ಪಹುಜಾ (Divya Pahuja) ಅವರ ಮೃತದೇಹವು ಹರಿಯಾಣದ ಕಾಲುವೆಯಲ್ಲಿ ಪತ್ತೆಯಾಗಿದೆ. ಪಂಜಾಬ್‌ನ ಭಾಕ್ರಾ ಕಾಲುವೆಯಲ್ಲಿ ಮೃತದೇಹವನ್ನು ಎಸೆಯಲಾಗಿದ್ದು, ಪಕ್ಕದ ರಾಜ್ಯಕ್ಕೆ ತೇಲಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಕಾಲುವೆಯಲ್ಲಿ ಪತ್ತೆಯಾದ ಮೃತದೇಹವನ್ನು ಗುರುಗ್ರಾಮ್‌ ಪೊಲೀಸರ ತಂಡವು ಹೊರತೆಗೆದು, ಪಹುಜಾ ಕುಟುಂಬಕ್ಕೆ ಫೋಟೋಗಳನ್ನ ಕಳುಹಿಸಿದೆ. ಕುಟುಂಬಸ್ಥರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಕೊಲೆಯಾದ ಮರುದಿನ (ಜನವರಿ 3) ಪಂಜಾಬ್‌ನ ಕಾಲುವೆಯಲ್ಲಿ ಶವವನ್ನು ಎಸೆದಿರುವುದಾಗಿ ಆರೋಪಿಗಳಲ್ಲಿ ಒಬ್ಬ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. https://ainlivenews.com/a-kannada-song-is-playing-in-ayodhya/ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಆರೋಪಿ ಬಾಲರಾಜ್ ಗಿಲ್ ಎಂಬಾತನನ್ನು ಗುರುಗ್ರಾಮ್‌ ಪೊಲೀಸರ ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಆರೋಪಿ, ಜನವರಿ 2 ರಂದು ಕೊಲೆ ಮಾಡಿ, ಮರುದಿನ ಗುರುಗ್ರಾಮ್‌ನಿಂದ ಸುಮಾರು 270 ಕಿಮೀ ದೂರದಲ್ಲಿರುವ ಪಟಿಯಾಲದ ಕಾಲುವೆಯಲ್ಲಿ ಎಸೆದಿದ್ದೆವು ಎಂದು…

Read More