Author: AIN Author

ಕಲಬುರಗಿ: ಚಾಲಕನ ನಿಯಂತ್ರಣ ತಪ್ಪಿ ಶಾಸಕರು ಪ್ರಯಾಣಿಸುತಿದ್ದ ಕಾರು ಅಪಘಾತವಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.. ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಸಂಚರಿಸುತಿದ್ದ ಕಾರು ಕಲಬುರಗಿಯಿಂದ ಸಣ್ಣೂರು ಕಡೆ ಹೊರಟಾಗ ಪಲ್ಟಿಯಾಗಿದೆ. ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಶಾಸಕರು ಪಾರಾಗಿದ್ದಾರೆ.

Read More

ಅಶ್ಲೀಲ ವಿಡಿಯೋ ಪೋಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant)ಗೆ ಮುಂಬೈ ನ್ಯಾಯಾಲಯವು ನಿರೀಕ್ಷಣಾ ಜಾಮೀನು (Anticipatory Bail) ನೀಡಲು ನಿರಾಕರಿಸಿದೆ. ಈ ಹಿಂದೆ ತಮ್ಮ ಮಾಜಿಪತಿ ಅನಿಲ್ ದುರಾನಿ (Anil Durrani) ಅವರ ಅಶ್ಲೀಲ ವಿಡಿಯೋವನ್ನು ರಾಕಿ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದ್ದರು. ಹಾಗಾಗಿ ದುರಾನಿ ಕೋರ್ಟ್ ಮೆಟ್ಟಿಲು ಏರಿದ್ದರು. ಮುಂಬೈಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಸ್ವತಃ ಮಾಜಿಪತ್ನಿಯ ವಿರುದ್ಧವೇ ದುರಾನಿ ದೂರು ನೀಡಿದ್ದರು. ತಮ್ಮ ಖಾಸಗಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. https://ainlivenews.com/mukesh-ambani-property-once-again-joins-the-100-billion-club/ ದೂರು ದಾಖಲಾಗುತ್ತಿದ್ದಂತೆಯೇ ರಾಖಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶ್ರೀಕಾಂತ್ ವೈ ಭೋಂಸ್ಲೆ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ರಾಖಿ ಬಿಡುಗಡೆ ಮಾಡಿರುವ ವಿಡಿಯೋ ಅಶ್ಲೀಲವಾಗಿವೆ ಎಂದು ಕೋರ್ಟ್ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟಿದೆ. ಹಾಗಾಗಿ ರಾಖಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

Read More

ನವದೆಹಲಿ: ಜನವರಿ 22 ರ ಬಳಿಕ ಅಯೋಧ್ಯೆಯ ರಾಮಮಂದಿರಕ್ಕೆ (Ayodhya Ram Mandir) ಭೇಟಿ ನೀಡುವ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆ ಸರಿಯಾಗಿದೆ. ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರೆ ಏನು ತಪ್ಪು ಎಂದು ಸಚಿವ ಕೆ.ಎನ್.‌ರಾಜಣ್ಣ (K.N.Rajanna) ಪ್ರಶ್ನಿಸಿದ್ದಾರೆ. ಅಯೋಧ್ಯೆಗೆ ಭೇಟಿ ನೀಡುವ ಹೇಳಿಕೆ ಸಂಬಂಧ ದೆಹಲಿಯಲ್ಲಿ ಮಾತನಾಡಿದ ಅವರು, ಮಂದಿರಾ ಬಿಜೆಪಿ ನಾಯಕರ ಸ್ವತ್ತೆ. ಹಿಂದೆ ಹೇಳಿದ್ದು ಸರಿ, ಈಗ ಹೇಳುವುದು ಸರಿಯಾಗೇ ಇದೆ ಎಂದು ಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಅಥವಾ ಅವರಿಗೆ ಜಾಗೀರು ಕೊಟ್ಟಿದ್ದೀವಾ? ನಾವು ಹಿಂದೂಗಳು ಅಲ್ಲದೇ ಇನ್ನೇನು? ವೋಟಿಗಾಗಿ ಬಿಜೆಪಿ ಪದೇ ಪದೆ ಹಿಂದೂ ಹಿಂದೂ ಅಂತ ಹೇಳುತ್ತಾರೆ. ಅಂಬೇಡ್ಕರ್ ಹಿಂದೂವಾಗಿ ಸಾಯುವುದಿಲ್ಲ ಎಂದ್ರು ಯಾಕೆ? ಈ ರೀತಿ ಹಿಂದುತ್ವ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು ಎನ್ನುವ ಕಾರಣಕ್ಕೆ ವಿಮುಖವಾದರು ಎಂದು ತಿಳಿಸಿದ್ದಾರೆ. https://ainlivenews.com/mukesh-ambani-property-once-again-joins-the-100-billion-club/ ಈ ರೀತಿ ಮಾತನಾಡುವ ಬದಲು ಮೊದಲು ರಾಮಮಂದಿರಕ್ಕೆ ದಲಿತರನ್ನು ಬಿಡಲು ಹೇಳಿ. ಅಲ್ಲಿ ಒಬ್ಬ ದಲಿತ ಅರ್ಚಕನನ್ನು ನೇಮಕ…

Read More

ನವದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatre) ಮೂಲಕ ಗಮನಸೆಳೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮತ್ತೊಂದು ಸುತ್ತಿನ ಯಾತ್ರೆಗೆ ಸಿದ್ಧರಾಗಿದ್ದಾರೆ. ಇಂದಿನಿಂದ ಭಾರತ್ ನ್ಯಾಯ್ ಯಾತ್ರೆ ಎಂಬ ಹೆಸರಿನಲ್ಲಿ ಮಣಿಪುರದಿಂದ (Manipura) ಮಹಾರಾಷ್ಟ್ರದ (Maharastra) ಕಡೆಗೆ ರಾಗಾ ಯಾತ್ರೆ ಮಾಡಲಿದ್ದಾರೆ. ಮಣಿಪುರದಿಂದ ಮುಂಬೈಗೆ 67 ದಿನಗಳ ಅವಧಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಇಂದಿನಿಂದ ಮಾರ್ಚ್ 20 ರವರೆಗೆ ಇಂಫಾಲ್‍ನಿಂದ ಮುಂಬೈಗೆ ಯಾತ್ರೆ ಪ್ರಯಾಣಿಸಲಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು (Bharat Jodo Nyay Yatra) 66 ದಿನಗಳಲ್ಲಿ ಬಸ್ಸುಗಳು ಮತ್ತು ಕಾಲ್ನಡಿಗೆಯಲ್ಲಿ 6,713 ಕಿ.ಮೀಗಳನ್ನು ಕ್ರಮಿಸುವ ಗುರಿ ಹೊಂದಿದೆ. ಈ ಪಯಣದುದ್ದಕ್ಕೂ 14 ರಾಜ್ಯಗಳು, 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ದಾಟಿ, ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ. https://ainlivenews.com/mukesh-ambani-property-once-again-joins-the-100-billion-club/ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ಪರವಾಗಿ ಜನ ಬೆಂಬಲವನ್ನು ಒಟ್ಟುಗೂಡಿಸುವ ಪ್ರಯತ್ನದ ಭಾಗವಾಗಿದೆ. ಭಾರತದ ಪೂರ್ವದಿಂದ ಪಶ್ಚಿಮದವರೆಗೆ ಹಾದುಹೋಗಲಿದೆ. ಎಐಸಿಸಿ…

Read More

ಬೆಂಗಳೂರು: ಗರ್ಭಿಣಿಯೊಬ್ಬರು ತನ್ನ 5 ವರ್ಷದ ಪುಟ್ಟ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದು, ಇದೀಗ ಆಕೆಗಾಗಿ ಪತಿ ಹುಡುಕಾಡುತ್ತಿರುವ ಪ್ರರಣವೊಂದು ಬೆಳಕಿಗೆ ಬಂದಿದೆ. ಶಾಲಿನಿ ನಾಪತ್ತೆಯಾಗಿರುವ 4 ತಿಂಗಳ ಗರ್ಭಿಣಿ. ಶಾಲಿನಿ ಹಾಗೂ ಸ್ವಾಮಿ ದಂಪತಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮತ್ ಲೇ ಔಟ್ ನಲ್ಲಿ ವಾಸವಾಗಿದ್ದಾರೆ. ಸದ್ಯ ಈಕೆಗಾಗಿ ಪತಿ ಮೆಜೆಸ್ಟಿಕ್ ಹಾಗೂ ಬಿಎಂಟಿಸಿ ಬಸ್ ಸ್ಟಾಂಡ್‍ನಲ್ಲಿ ಕಣ್ಣೀರಾಕುತ್ತಾ ಹುಡುಕಾಡುತ್ತಿದ್ದಾರೆ. ಶಾಲಿನಿ ಎಂದಿನಂತೆ ಬೆಳಗ್ಗೆ 6 ಗಂಟೆಗೆ ಹಾಲು ತರಲು 30 ರೂ. ಹಣ ತೆಗೆದುಕೊಂಡು ಹೋಗಿದ್ದರು. ಆದರೆ 8 ಗಂಟೆಯಾದ್ರೂ ಕೂಡ ಪತ್ನಿ ಶಾಲಿನಿ ಮನೆಗೆ ಬಾರದೇ ಇದ್ದಾಗ ಪತಿ ಗಾಬರಿಯಾದರು. ಬಳಿಕ ಯಾಕೆ ಪತ್ನಿ ಇನ್ನೂ ಮನೆಗೆ ಬಂದಿಲ್ಲ ಎಂದು ಹುಡುಕಾಟ ನಡೆಸಲು ಆರಂಭಿಸಿದರು. ಈ ವೇಳೆ ಪತ್ನಿ ಬಿಎಂಟಿಸಿ ಬಸ್ ಹತ್ತಿ ತೆರಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. https://ainlivenews.com/mukesh-ambani-property-once-again-joins-the-100-billion-club/ ಬೆಳಗ್ಗೆಯಿಂದ ಮಧ್ಯರಾತ್ರಿಯಾದ್ರೂ ಪತಿ ಹುಡುಕಾಟ ನಡೆಸಿದ್ದಾರೆ. ಕೆಆರ್ ಮಾರ್ಕೆಟ್, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕುಟುಂಬಸ್ಥರು ಕೂಡ ಹುಡುಕಾಡಿದ್ದಾರೆ. ಅಲ್ಲದೆ…

Read More

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ ಕಳೆದ 24 ಗಂಟೆಗಳಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. WTI ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 71.94 ಡಾಲರ್​ಗೆ ಏರಿದೆ ಮತ್ತು ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 79.12 ಡಾಲರ್​ ತಲುಪಿದೆ, ಆದರೆ ಇದರಿಂದಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. 20 ತಿಂಗಳಿಂದ ದೇಶದಲ್ಲಿ ತೈಲ ಬೆಲೆ ಸ್ಥಿರವಾಗಿರುವುದು ಗೊತ್ತೇ ಇದೆ. ಇವು ಭಾರತದಲ್ಲಿ ಇಂದಿನ ಪೆಟ್ರೋಲ್ ಬೆಲೆಗಳು ದೆಹಲಿ: ಪ್ರತಿ ಲೀಟರ್‌ಗೆ 96.72 ರೂ ಮುಂಬೈ: ಪ್ರತಿ ಲೀಟರ್‌ಗೆ 106.31 ರೂ ಕೋಲ್ಕತ್ತಾ: ಪ್ರತಿ ಲೀಟರ್‌ಗೆ 106.03 ರೂ ಚೆನ್ನೈ: ಪ್ರತಿ ಲೀಟರ್‌ಗೆ 102.63 ರೂ ಬೆಂಗಳೂರು: ಪ್ರತಿ ಲೀಟರ್‌ಗೆ 101.94 ರೂ ಪಾಟ್ನಾ: ಪ್ರತಿ ಲೀಟರ್‌ಗೆ 107.24 ರೂ ಗುರುಗ್ರಾಮ: ಪ್ರತಿ ಲೀಟರ್‌ಗೆ 97.18 ರೂ ಕೇರಳ: ಪ್ರತಿ ಲೀಟರ್‌ಗೆ 117.17 ರೂ ಜೈಪುರ: ಪ್ರತಿ ಲೀಟರ್‌ಗೆ 108.73 ರೂ ಲಕ್ನೋ: ಪ್ರತಿ ಲೀಟರ್‌ಗೆ…

Read More

ಧಾರವಾಡ: ಯಾವುದೇ ಪದವಿ ಪಡೆಯದೇ ಹಾಗೂ ನೋಂದಣಿ ಇಲ್ಲದೇ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದ ನಕಲಿ ವೈದ್ಯರೊಬ್ಬರ ಆಸ್ಪತ್ರೆಯನ್ನು ಇದೀಗ ಸೀಜ್ ಮಾಡಿಕೊಡಲಾಗಿದ್ದು, ಅದನ್ನು ಓಪನ್ ಮಾಡಿಸಿಕೊಡುವಂತೆ ಕಾಂಗ್ರೆಸ್ ಮುಖಂಡರೊಬ್ಬರೊಂದಿಗೆ ಬಂದಿದ್ದ ನಕಲಿ ವೈದ್ಯನನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಧಾರವಾಡದ ಪ್ರವಾಸಿ ಮಂದಿರಕ್ಕೆ ಲಾಡ್ ಬಂದಿದ್ದಾರೆಂದು ತಿಳಿದರೆ ಅಲ್ಲಿಗೆ ಆ ವೈದ್ಯನನ್ನು ಕರೆದುಕೊಂಡು ಬಂದ ಕಾಂಗ್ರೆಸ್ ಮುಖಂಡ ಮುತ್ತುರಾಜ್ ಮಾಕಡವಾಲೆ ಎಂಬುವವರನ್ನು ಲಾಡ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಧಾರವಾಡದ ಭೂಸಪ್ಪ ಚೌಕ್‌ನಲ್ಲಿ ನೋಂದಣಿ ಇಲ್ಲದೇ ಹಾಗೂ ಯಾವುದೇ ಪದವಿ ಪಡೆಯದೇ ಕ್ಲಿನಿಕ್ ನಡೆಸುತ್ತಿದ್ದ ತರುಣಕುಮಾರ್ ಎಂಬುವವರ ಆಸ್ಪತ್ರೆಯನ್ನು ಇತ್ತೀಚೆಗೆ ಸೀಜ್ ಮಾಡಲಾಗಿದೆ. ಇದನ್ನು ಓಪನ್ ಮಾಡಿಸಿಕೊಡುವಂತೆ ಮಾಕಡವಾಲೆ ಎಂಬುವವರು ಆ ವೈದ್ಯನೊಂದಿಗೆ ಲಾಡ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ವೇಳೆ ಇದರ ಬಗ್ಗೆ ಮಾಹಿತಿ ಪಡೆದ ಸಚಿವ ಲಾಡ್, ಈ ವೈದ್ಯನಿಗೆ ಯಾವುದೇ ಪದವಿ ಇಲ್ಲ. ನೋಂದಣಿ ಸಹ ಮಾಡಿಸಿಲ್ಲ. https://ainlivenews.com/a-32-year-old-womans-love-with-a-16-year-old-boy-a-boy-who-became-a-father-to-a-9-month-old-baby/ ಹೀಗಿರುವಾಗ ಇಂತವರ…

Read More

ಧಾರವಾಡ: ಇವತ್ತು ನಾವು ಬಹಳ ಕಷ್ಟದ ದಿನಗಳಲ್ಲಿದ್ದೇವೆ. ಸಿಎಂಗೆ ಗೌರವ ಸಿಗುತ್ತಿಲ್ಲ. ಸಭಾಪತಿಗೆ ಗೌರವ ಸಿಗುತ್ತಿಲ್ಲ. ಇದನ್ನೆಲ್ಲ ಗಮನಿಸಿ ಬೆಳಗಾವಿ ಅಧಿವೇಶನದಲ್ಲಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಹೇಳಿದ್ದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಮ್ಮ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ. ಧಾರವಾಡದ ಕವಿವಿಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸದನದಲ್ಲಿ ಎಚ್.ಕೆ.ಪಾಟೀಲ ಎಂಬ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣೆ ಸುಧಾರಣೆ ಆಗುವವರೆಗೂ ಪ್ರಜಾಪ್ರಭುತ್ವ ಸುಧಾರಣೆ ಆಗುವುದಿಲ್ಲ. ನಮ್ಮಲ್ಲಿ ಮೂರು ಪಕ್ಷ ಇವೆ. ಯಾರ್‍ಯಾರು ಸೋತ್ತಿದ್ದಾರೆ, ಗೆದ್ದಿದ್ದಾರೆ ಅವರೆಲ್ಲ ಒಂದೇ ಕೆಲಸ ಮಾಡಿದ್ದು. ಅವರೆಲ್ಲ ಯಾರಿಗೆ ಏನು ಕೊಡಬೇಕೋ  ಕೊಟ್ಟು ಬಿಟ್ಟಿದ್ದಾರೆ. ಟೋಪಿ ಹಾಕಿಸಿಕೊಂಡವನು ಅಭ್ಯರ್ಥಿ ಗೆದ್ದು ಶಾಸಕ, ಸಚಿವ ಆದ ಮೇಲೆ ಆತ ಎಲ್ಲರೂ‌ ಟೋಪಿ ಹಾಕುತ್ತಾನೆ. ಈ ವ್ಯವಸ್ಥೆ ಹೇಗೆ ಸುಧಾರಣೆಯಾಗುತ್ತದೆಯೋ ಗೊತ್ತಿಲ್ಲ. ಜಾತಿ, ದುಡ್ಡು ಇದ್ದವರು ಶಾಸನ ಸಭೆಗೆ ಬರುತ್ತಾರೆ. https://ainlivenews.com/a-32-year-old-womans-love-with-a-16-year-old-boy-a-boy-who-became-a-father-to-a-9-month-old-baby/ ವಿಧಾನ ಪರಿಷತ್‌ಗೆ ಸಾಹಿತಿಗಳು, ಸಂಗೀತಗಾರರು ಬರಬೇಕು ಎಂದಿದೆ. ಆದರೆ, ಅವರನ್ನು…

Read More

ಹಾವೇರಿ: ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಜನವರಿ  15 ರಂದು ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾಯ೯ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಬೆಳಿಗ್ಗೆ  11.30 ಗಂಟೆಗೆ ಸುಕ್ಷೇತ್ರ ನರಸೀಪುರ (ಕಂಚಾರಗಟ್ಟಿ )ದಲ್ಲಿ ಜರುಗಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ೬ ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ೯೦೪ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆಗೆ ಬ್ಯಾಡಗಿ ತಾಲೂಕಾ ಚಿಕ್ಕಬಾಸೂರು ಗ್ರಾಮದಲ್ಲಿ ಅಯೋಜಿಸಲಾದ ಶ್ರೀ ಗುರುವಶಿವಯೋಗಿಸಿದ್ದಾರಾಮೇಶ್ವರರ 851 ನೇ ಜಯಂತಿ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ  ಅಂದು ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ಹುಬ್ಬಳ್ಳಿಗೆ ಆಗಮಿಸಿ ಹೆಲಿಕ್ಯಾಪ್ಟರ್ ಮೂಲಕ ಹಾವೇರಿ ಜಿಲ್ಲೆ ನರಸೀಪುರಕ್ಕೆ 11.20 ಗಂಟೆಗೆ ಆಗಮಿಸಲಿದ್ದಾರೆ. https://ainlivenews.com/a-32-year-old-womans-love-with-a-16-year-old-boy-a-boy-who-became-a-father-to-a-9-month-old-baby/ ನಿಗದಿತ ಕಾಯ೯ಕ್ರಮದಲ್ಲಿ ಭಾಗವಹಿಸಿ 1.20 ಗಂಟೆಗೆ ನರಸೀಪುರದಿಂದ ಬ್ಯಾಡಗಿ ತಾಲೂಕು ಚಿಕ್ಕ ಬಾಸೂರು ಗ್ರಾಮಕ್ಕೆ ಆಗಮಿಸಲಿದ್ದಾರೆ ನಿಗದಿತ ಕಾಯ೯ಕ್ರಮದಲ್ಲಿ ಭಾಗವಹಿಸಿ ಸಂಜೆ 4.45 ಕ್ಕೆ ಚಿಕ್ಕ ಬಾಸೂರು ಹೆಲಿಪ್ಯಾಡ್ ನಿಂದ ಹುಬ್ಬಳ್ಳಿ…

Read More

ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಜನವರಿ 25 ರಿಂದ ಮಾರ್ಚ್‌ 11ರವರೆಗೆ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ರೋಹಿತ್‌ ಶರ್ಮ ತಂಡದ ನಾಯಕರಾಗಿದ್ದು, ಜಸ್‌ಪ್ರೀತ್‌ ಬುಮ್ರಾ ಅವರಿಗೆ ತಂಡದ ಉಪನಾಯಕ ಜವಾಬ್ದಾರಿ ನೀಡಲಾಗಿದೆ. ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಜ.25 ರಿಂದ 29ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿದ್ದರೆ, 2ನೇ ಪಂದ್ಯ ಫೆ.2 ರಿಂದಫೆ. 6ರವರೆಗೆ  ವಿಶಾಖಪಟ್ಟಣದಲ್ಲಿ ನಡೆಯಲಿದೆ. ಸರಣಿಯ ಉಳಿದ ಪಂದ್ಯಗಳು ಕ್ರಮವಾಗಿ ಫೆ.15 ರಿಂದ 19ರವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿದ್ದರೆ, ನಾಲ್ಕನೇ ಟೆಸ್ಟ್‌ ಪಂದ್ಯ ಫೆ.23 ರಿಂದ 27ರವರೆಗೆ ರಾಂಚಿ ಹಾಗೂ ಮಾ.7 ರಿಂದ 11ರವರೆಗೆ ಐದನೇ ಟೆಸ್ಟ್‌ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಜನವರಿ ನಾಲ್ಕರಂದು ಕೇಪ್‌ಟೌನ್‌ನಲ್ಲಿ ಭಾರತ ತಂಡದ ಮೊಟ್ಟಮೊದಲ ಟೆಸ್ಟ್‌ ಗೆಲುವು ದಾಖಲಿಸಿದ ಬಳಿಕ, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಟೀಮ್‌ ಇಂಡಿಯಾ ಅಗ್ರಸ್ಥಾನದಲ್ಲಿದೆ.  https://ainlivenews.com/a-32-year-old-womans-love-with-a-16-year-old-boy-a-boy-who-became-a-father-to-a-9-month-old-baby/…

Read More