Author: AIN Author

ಹುಬ್ಬಳ್ಳಿ: ನನ್ನನ್ನು ಮತ್ತೆ ಬಿಜೆಪಿಗೆ (BJP) ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ. ಆದರೆ ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ. ನನಗೆ ಆಗಿರೋ ಅಪಮಾನವನ್ನು ನಾನು ಇನ್ನೂ ಮರೆತಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆ ನೀಡಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ತೊರೆದ ನಂತರ ಆಗಿರೋ ಹಾನಿ ಬಗ್ಗೆ ಅವರಿಗೆ ಮನವರಿಕೆ ಆಗಿದೆ. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿ ಇದ್ದಾರೆ. ದೊಡ್ಡ ಮಟ್ಟದ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಆದರೆ ಹಲವಾರು ನಾಯಕರು ವಾಪಸ್ ತರುವಂತೆ ಒತ್ತಡ ಹಾಕಿರೋ ಮಾಹಿತಿ ಇದೆ. ಯಾರು ಏನೇ ಪ್ರಯತ್ನ ಮಾಡಿದ್ರೂ ನಾನು ಬಿಜೆಪಿಗೆ ವಾಪಸ್ಸಾಗಲ್ಲ ಎಂದು ಸ್ಪಷ್ಟನೆ ನೀಡಿದರು. 

Read More

ಬೆಂಗಳೂರು: ಅನಧಿಕೃತ ಶಾಲೆಗಳನ್ನ ಮುಚ್ಚುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು  ಈಗ ಶಿಕ್ಷಣ ಇಲಾಖೆಯ ಸುತ್ತೊಲೆಯ ಬಗ್ಗೆ ಪರ-ವಿರೋಧದ ಚರ್ಚೆ ಶುರುವಾಗಿದೆ. ಕ್ಯಾಮ್ಸ್, ರುಪ್ಸಾದಿಂದ ಎದುರಾಯ್ತು ಭಾರೀ ವಿರೋಧ ವ್ಯಕ್ತವಾಗಿದ್ದು  ಪ್ರಭಾವಿಗಳ ಒತ್ತಡಕ್ಕೆ ಮಣಿದು ಸುತ್ತೋಲೆ ಹೊರಡಿಸಲಾಗಿದೆಂದು ಆಕ್ರೋಶ ಕನ್ನಡ ಹಾಗೂ ಬಜೆಟ್ ಶಾಲೆಗಳನ್ನು ಮುಚ್ಚಿ ಕಾರ್ಪೋರೇಟ್ ಶಾಲೆಗಳಿಗೆ ಮಣೆ ಹಾಕ್ತಿದ್ದಾರೆಂದು ಕಿಡಿ ಬಡ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ  ನೀಡುವ ಕೆಲ ಶಾಲೆಗಳುಗ್ರಾಮೀಣ ಭಾಗದ, ನಗರದ ಕೊಳಚೆ ಪ್ರದೇಶಗಲ್ಲಿರುವ ಬಜೆಟ್ ಶಾಲೆಗಳನ್ನು ಗುರಿಯಾಗಿಸಿ ಸಾವಿರಾರು ಶಾಲೆಗಳನ್ನು ಮುಚ್ಚಲು ಈ ರೀತಿಯ ಆದೇಶ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಬೆಂಗಳೂರನಲ್ಲಿ ಅನೇಕ ವರ್ಷಗಳಿಂದ ಅನಧಿಕೃತ ಬೃಹತ್ ಶಾಲೆಗಳಿವೆ ಮಾನ್ಯತೆ ಇಲ್ಲದ ಅನೇಕ ಶಾಲೆಗಳು ಬಹಿರಂಗವಾಗಿ ನಡೆಯುತ್ತಿವೆ ಈ ಶಾಲೆಗಳ ಮಾಲೀಕರು ಪ್ರಭಾವಿ ರಾಜಕಾರಣಿಗಳಾಗಿರೋದ್ರಿಂದ  ಅಂತಹ ಶಾಲೆಗಳ ಮೇಲೆ ಇಲಾಖೆ ಕ್ರಮ ಗೊಂಡಿಲ್ಲವೆಂದು ಆಕ್ರೋಶ ಸಣ್ಣ ಪುಟ್ಟ ಬಜೆಟ್ ಶಾಲೆಗಳನ್ನು ಅನಧಿಕೃತ ಅನ್ನೋದರ ಹಿಂದೆ  ಕೆಲ ಪ್ರಭಾವಿಗಳ ಕೈವಾಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.…

Read More

ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಶಾಖಾಹಾರಿ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಮಲೆನಾಡಿನ ಸೊಗಡಿನ ಥ್ರಿಲ್ಲರ್ ಕಥೆ ಹೂರಣದ ಈ ಹಾಡನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ರಿಲೀಸ್ ಮಾಡಲಾಗಿದೆ. ಇಡೀ ಚಿತ್ರತಂಡ ಈ ವೇಳೆ ಭಾಗಿಯಾಗಿ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸೌಗಂಧಿಕ ಎಂಬ ಮೆಲೋಡಿ ಹಾಡಿಗೆ ನಿರ್ದೇಶಕ‌ ಸಂದೀಪ್ ಸುಕಂದ್ ಸಾಹಿತ್ಯ ಬರೆದಿದ್ದು, ಸಿದ್ಧಾರ್ಥ್ ಬೆಳ್ಮಣ್ಣು ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ಮಯೂರ್‌ ಅಂಬೆಕಲ್ಲು ಸಂಗೀತದ ಇಂಪು ಹಾಡಿನ ತೂಕ ಹೆಚ್ಚಿಸಿದೆ. ಯುವ ಪ್ರೇಮಿಗಳ ನಡುವಿನ ಈ ಮೆಲೋಡಿ ಹಾಡಿನಲ್ಲಿ ವಿನಯ್ ಯುಜೆ ಹಾಗೂ ನಿಧಿ ಹೆಗಡೆ ಕಾಣಿಸಿಕೊಂಡಿದ್ದಾರೆ. ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಅನುಭವವಿರುವ ಸಂದೀಪ್ ಸುಂಕದ್ ಶಾಖಾಹಾರಿ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಬಾಣಸಿಗನ ಪಾತ್ರದಲ್ಲಿ ರಂಗಾಯಣ ರಘು, ಪೊಲೀಸ್‌ ಅಧಿಕಾರಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಬಣ್ಣ ಹಚ್ಚಿದ್ದಾರೆ. ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ…

Read More

ನವದೆಹಲಿ: ನಾಡಿನಾದ್ಯಂತ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಸಂಭ್ರಮ ಜೋರಾಗಿದೆ.  ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಅಗತ್ಯ ವಸ್ತುಗಳ ಖರೀದಿಗೆ ಜನ ಮಾರುಕಟ್ಟೆಗೆ ದಾಂಗುಡಿ ಇಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ರಾಸುಗಳಿಂದ ಕಿಚ್ಚು ಹಾಯಿಸಲು ಭರ್ಜರಿ ತಯಾರಿ ನಡೆಸಿದ್ದಾರೆ. ಇನ್ನೂ ಸ್ನೇಹಿತರು, ಬಂಧು-ಬಾಂಧವರು ಪರಸ್ಪರ ಶುಭಕೋರುತ್ತಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ. ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಬ್ಬದ ಶುಭ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ದೇಶದ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ ಪವಿತ್ರ ಸಂಕ್ರಾಂತಿ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತಸ ಮತ್ತು ಅಮೃದ್ಧಿಯನ್ನು ತರಲಿ. ಸುಗ್ಗಿಯ ಕಾಲವು ಸಮೃದ್ಧಿ ಮತ್ತು ಸಂತೋಷದಿಂದ ತುಂಬಲಿ ಎಂದು ಹಾರೈಸುತ್ತೇನೆ. ಮುಂಬರುವ ದಿನಗಳಲ್ಲಿ ನಿಮ್ಮ ಎಲ್ಲಾ ಆಕಾಂಕ್ಷೆಗಳು ಈಡೇರಲಿ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ರಾಜ್ಯದ ಗಣ್ಯಮಾನ್ಯರೂ ಹಬ್ಬಕ್ಕೆ ಶುಭಹಾರೈಸಿದ್ದಾರೆ.

Read More

ಬೆಂಗಳೂರು: ಹೊಸ ವರ್ಷದ ಮೊದಲ ಸಂಕ್ರಾಂತಿ ಹಬ್ಬವಾಗಿದ್ದು ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ  ಕಬ್ಬಿನಲ್ಲಿ ವಿಶೇಷ ಅಲಂಕಾರ ಮಾಡಿದ್ದನ್ನು ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ದೇವಾಸ್ಥಾನ ಮಹಾರಾಷ್ಟ್ರದ ಮಹಾಲಕ್ಷ್ಮೀ ದೇವಾಲಯದಂತಿದೆ. ಪ್ರತಿ ಹಬ್ಬಕ್ಕೂ ವಿಶೇಷ ಅಲಂಕಾರ ಮಾಡುವ ಮೂಲಕ ಭಕ್ತರನ್ನ ತಮ್ಮತ್ತ ಸೆಳೆಯುತ್ತಿರುವ ದೇವಸ್ಥಾನ ಶೇಷಾದ್ರಿಪುರಂನಲ್ಲಿರುವ  ಈ ಮಹಾಲಕ್ಷ್ಮಿ ದೇವಸ್ಥಾನ ಇಡೀ ದೇವಸ್ಥಾನವನ್ನ ಹಳ್ಳಿ ವಾತಾವರಣದಲ್ಲಿ‌ ಸೃಷ್ಟಿ ಮಾಡಲಾಗಿದೆ.. ದೇವಸ್ಥಾನದ ಅಲ್ಲಲ್ಲೆ ಇದೆ ಅಡುಗೆ ಒಲೆಗಳು ಕಬ್ಬಿನ ಜಲ್ಲೆಗಳಿಂದ ಇಡೀ ದೇವಸ್ಥಾನ ಅಲಂಕಾರ  ಕಬ್ಬಿ ಜಲ್ಲೆಯಿಂದ ಮುಚ್ಚಲಾಗಿದೆ ದೇವಸ್ಥಾನದ ಗೋಡೆ.. ಇತಿಹಾಸವಿರುವ ಈ ದೇವಸ್ಥಾನಕ್ಕೆ ದೇವರ ದರ್ಶನ ಪಡೆಯಲು ಬರ್ತಾರೆ ಸಾವಿರಾರು ಭಕ್ತರ ದೇವಸ್ಥಾನ‌ ಅಲಂಕಾರಕ್ಕೆ ಬಳಸಲಾಗಿದೆ ೧೦ಕ್ಕೂ ಹೆಚ್ವು ಟನ್ ಕಬ್ಬು.. ಇಡೀ ದೇವಸ್ಥಾನ ಕಪ್ಪು ಕಬ್ಬಿನಿಂದ ಆವೃತಿಗೊಳಿಸಲಾಗಿದೆ.

Read More

ಬೆಂಗಳೂರು:  ಅತ್ಯಾಚಾರ ಕೇಸಲ್ಲಿ ಜೈಲಿನಲ್ಲಿದ್ದು ಬಂದ್ರೂ ಬುದ್ದಿ ಬಾರದ ಯುವಕನೋರ್ವ ಮತ್ತೆ ಶಾಲಾ ಭಾಲಾಕಿ ಮೇಲೆ ಅತ್ಯಾಚಾರವೆಸಗಿ ಜೈಲುಪಾಲಾಗಿದ್ದಾನೆ. ಆನಂದ್ (24) ದೊಡ್ಡಬಳ್ಳಾಪುರದ ದೊಡ್ಡ‌ ಬೆಳವಂಗಳ ನಿವಾಸಿಯಾಗಿದ್ದು ಮತ್ತೆಅತ್ಯಾಚಾರ ಕೇಸ್’ನಲ್ಲಿ ಪೊಲೀಸರ ಅತಿಥಿಯಾಗಿದ್ದಾನೆ. ಮೂರು ವರ್ಷ ಜೈಲಿನಲ್ಲಿದ್ದು ಬಂದ ಆಸಾಮಿ ಮತ್ತೆ ರೇಪ್ ಮಾಡಿ ಸಿಕ್ಕಿಬಿದ್ದಿದ್ದ 19 ವರ್ಷ ಇರುವಾಗಲ್ಲೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೇಪ್ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದ ತನಗೆ 19 ವರ್ಷ ‌ಇರುವಾಗ್ಲೆ ಅತ್ಯಾಚಾರ ಕೇಸ್ನಲ್ಲಿ ಜೈಲಿಗೆ ಹೋಗಿದ್ದ..‌ ಇದೀಗ ಶಾಲಾ ವಿದ್ಯಾರ್ಥಿಯೋರ್ವಳನ್ನು ಪುಸಲಾಯಿಸಿ ಕರೆದೊಯ್ದಿದ್ದ ಆಸಾಮಿ ತ್ಯಾಮಗೊಂಡ್ಲುವಿನಿಂದ ಯಲಹಂಕಕ್ಕೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ ನಂತರ ಯಲಹಂಕದ ರೂಂ ಒಂದರಲ್ಲಿ ಇರಿಸಿಕೊಂಡು ಅತ್ಯಚಾರ. ಮಗಳು ಮನೆಗೆ ಬಾರದೆ ಇದ್ದ ಹಿನ್ನೆಲೆ ದಾಬಾಸ್ ಪೇಟೆಯಲ್ಲಿ ದೂರು ನೀಡಿದ್ದ ವಿದ್ಯಾರ್ಥಿನಿ ಪೋಷಕರು..  ಆಗ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡ ನಂತರ ಪ್ರಕರಣ ಬೆಳಕಿಗೆ. ಇದೀಗ ಮತ್ತೆ ಅತ್ಯಾಚಾರ ಕೇಸ್ ನಲ್ಲಿ ಬಂಧಿಸಿ ಜೈಲಿಟ್ಟಿರುವ…

Read More

ಬೆಂಗಳೂರು: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ (Makar Sankranti)  ಆರಂಭವಾಗಿದೆ. ಸಂಕ್ರಾತಿ ದಿನದಂದೆ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ (Gavi Gangadhareshwara Temple) ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಈ ದಿನ ಸೂರ್ಯರಶ್ಮಿ ಶಿವನನ್ನು ಸ್ಪರ್ಶಿಸುವ ವಿಶೇಷ ಕೌತುಕ ನಡೆಯಲಿದೆ. ಸೂರ್ಯ ದಕ್ಷಿಣಪಥ ದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಶಿವನ ಮೂರ್ತಿಯನ್ನು ಸ್ಪರ್ಶಿಸಲಿದ್ದಾನೆ. ಸಂಜೆ 5.20 ರಿಂದ 5.23 ನಿಮಿಷದ ವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಲಿದೆ. ಲಿಂಗಭಾಗದಲ್ಲಿ ಎಷ್ಟು ಸಮಯ ಸೂರ್ಯರಶ್ಮಿ ಇರುತ್ತೆ ಅನ್ನೋದರ ಮೇಲೆ ಹೊಸ ವರ್ಷದ ಭವಿಷ್ಯ ಇರಲಿದೆ ಅನ್ನೋದು ನಂಬಿಕೆ. ದೇವಸ್ಥಾನದಲ್ಲಿ ಬೆಳಗ್ಗೆ 5 ಗಂಟೆಗೆ ವಿಶೇಷಪೂಜೆ, ಅಲಂಕಾರ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ದೇವಸ್ಥಾನ ಓಪನ್ ಇರಲಿದ್ದು, ನಂತ್ರ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿರುದಿಲ್ಲ ಸಂಜೆ ಸೂರ್ಯರಶ್ಮಿ ಲಿಂಗವನ್ನ ಸ್ಮರ್ಶಿಸಿದ ನಂತ್ರ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿದೆ ಭಕ್ತಾಧಿಗಳು ವಿಸ್ಮಯವನ್ನು ಕಣ್ತುಂಬಿಕೊಳ್ಳಲು…

Read More

ಕನ್ನಡದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ವಿಭಿನ್ನ ಬಗೆಯ ಕಥಾಹಂದರ ಸಿನಿಮಾ ಮೂಲಕ ಯುವ ಸಿನಿಮೋತ್ಸಾಹಿಗಳು ಪ್ರೇಕ್ಷಕರ ಎದುರು ಹಾಜರಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಸಿನಿಮಾ ದಿ.ದಿ ಸಿನಿಮಾ ಮೂಲಕ ವಿನಯ್ ನಾಯಕನಾಗಿ ಹಾಗೂ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಒಂದಷ್ಟು ವರ್ಷಗಳ ಅನುಭವವಿರುವ ಅವರೀಗ ದಿ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರದ ನಾನು ಮೌನಿ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ.ಕವಿರಾಜ್ ಸಾಹಿತ್ಯದ ಈ ಹಾಡಿಗೆ ಸಾಯಿ ವಿಘ್ನೇಶ್ ಧ್ವನಿಯಾಗಿದ್ದು, ಯುಎಂ ಸ್ಟೀವನ್ ಸತೀಶ್ ಸಂಗೀತ ಒದಗಿಸಿದ್ದಾರೆ. ನಾನು ಮೌನಿ ಅಂತಾ ವಿನಯ್ ಹಾಗೂ ದಿಶಾ ರಮೇಶ್ ಹಾಡಿನಲ್ಲಿ ಮಿಂಚಿದ್ದಾರೆ. ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ದಿ ಚಿತ್ರ ಡಾಲರ್ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಹರಿಣಿ, ಬಾಲ ರಾಜ್ವಾಡಿ, ನಾಗೇಂದ್ರ ಅರಸ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರು, ಶರಣ್, ಸುರೇಶ್ ಬಾಬು, ಗಣೇಶ್, ಕಲಾರತಿ ಮಹದೇವ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ‘ವಿಡಿಕೆ’ ಸಿನಿಮಾಸ್…

Read More

ಬೆಂಗಳೂರು:ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿ ಮಾಡಿ ಬಂದಿರುವ  ಬಗ್ಗೆ  ವಿ ಸೋಮಣ್ಣ ಇಂದು ನಗರದಲ್ಲಿ ಪ್ರತಿಕ್ರಿಯೆ ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ನಮ್ಮ ನಾಯಕರ ಭೇಟಿ ಜತೆಗೆ ದೇವಸ್ಥಾನಗಳನ್ನೂ ನೋಡಿಕೊಂಡು ಬಂದೆ ಈ ಸಲದ ದೆಹಲಿ ಭೇಟಿ ನನಗೆ ದೊಡ್ಡ ಅನುಭವ ಕೊಡ್ತು  ಅಮಿತ್ ಶಾ ಮತ್ತು ಜೆ ಪಿ‌ ನಡ್ಡಾ ಅವರ ಭೇಟಿ ಮಾಡಿದ್ದೇನೆ ಅಮಿತ್ ಶಾ ರಾಷ್ಟ್ರದ ಅತ್ಯುನ್ನತ ನಾಯಕ ಅಮಿತ್ ಶಾ ಅವರ ಜತೆಗೆ ನಡೆದ ಮಾತುಕತೆ ಫಲಪ್ರದ ಆಗಿದೆ ಎಲ್ಲವೂ ಸುಖಾಂತ್ಯ ಆಗಿದೆ ಯಾವುದಾದರೂ ಮೂರು‌ ಲೋಕಸಭೆ ಕ್ಷೇತ್ರಗಳ ಜವಾಬ್ದಾರಿ ಕೊಡಿ, ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರ್ತೇನೆ ಅಂದೆ ರಾಜ್ಯಸಭೆ ಸ್ಥಾನ ಕೊಡಿ ಅಂತ ಕೇಳಿದ್ದೇನೆ ಅಮಿತ್ ಶಾ ಅರ್ಧ ಗಂಟೆ ಕಾಲ‌ ಮಾತಾಡಿದ್ರು ನನಗೆ 73 ವರ್ಷ, ಆರೋಗ್ಯವಾಗಿದೀನಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಈ ತಿಂಗಳ ಕೊನೆಗೆ ಅಮಿತ್ ಶಾ ಬರ್ತಾರೆ, ಎಲ್ಲವೂ ಬಗೆಹರಿಯಲಿದೆ ಎಂದರು.   ಹಾಗೆ ಅನಂತ್ ಕುಮಾರ್ ಹೆಗಡೆ…

Read More

ಬೆಂಗಳೂರು: ಅಕ್ರಮ ಕಾಮಗಾರಿ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದಕ್ಕೆ ಗುತ್ತಿಗೆದಾರೊಬ್ಬರಿಗೆ ಅಧಿಕಾರಿಗಳು ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಕರ್ನಾಟಕ ಇನ್ಫ್ರಾಸ್ಟ್ರಕ್ಚರ್‌ ರೂರಲ್ ಡವಲಪ್ಮೆಂಟ್ ಇಲಾಖೆಯಲ್ಲಿ ಅಕ್ರಮ ಕಾಮಗಾರಿ ನಡೆದಿದೆ ಅಂತಾ ಗುತ್ತಿಗೆದಾರ ಮೋಹನ್ ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ವಿಚಾರ ತಿಳಿದ ಅಧಿಕಾರಿಗಳು ಮೋಹನ್ ಕುಮಾರ್‌ಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ ಈ ಸಂಬಂಧ ಮೋಹನ್ ಕುಮಾರ್ ಕೋರ್ಟ್ನಲ್ಲಿ ಪಿಸಿಆರ್ ದಾಖಲಿಸಿದ್ದಾರೆ. ಕೋರ್ಟ್ ಸೂಚನೆ ಮೇರೆಗೆ ನಗರದ ಅನ್ನಪೋರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಇಲಾಖೆಯ ಏಳು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ

Read More