Author: AIN Author

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕೈಯಲ್ಲಿ ಲಾಂಗ್ ಹಿಡಿದು ನಡು ರಸ್ತೆಯಲ್ಲೇ ಮಹಿಳೆಗೆ ಅವಾಜ್ ಹಾಕಿ ಬೆದರಿಕೆ ಹಾಕಿದ ರೌಡಿಶೀಟರ್ ಮುತ್ತು ಮುರಳಿ ಅಲಿಯಾಸ್ ಮುರುಳಿಯನ್ನ ಪೊಲೀಸರು ಬಂಧಿಸಿದ್ದಾರೆ. ವರ್ತೂರು ಪೊಲೀಸರು ಆರ್ಮ್ ಆಕ್ಟ್ ಅಡಿಯಲ್ಲಿ ಬಂಧಿಸಲಾಗಿದೆ. ಮಹದೇವಪುರದ ಪಣತ್ತೂರು ದಿನ್ನೆಯಲ್ಲಿ‌ ರೌಡಿಶೀಟರ್ ಮುತ್ತುನ ಅಟ್ಟಹಾಸ ಮೆರೆದಿದ್ದು, ರೌಡಿ ಮುತ್ತು ಪ್ರತಿನಿತ್ಯ ಕುಡಿದು ಅಕ್ಕಪಕ್ಕದ ಮನೆಗಳಲ್ಲಿನ ಜನರಿಗೆ ಹಿಂಸೆ ನೀಡುತ್ತಿದ್ದ. ಮದ್ಯಾಹ್ನವೇ ಇಸ್ಪೀಟ್ ಮತ್ತು ಗಾಂಜಾ ಸೇವಿಸಿ ನೆರೆಹೊರೆ ಜನರಿಗೆ ಕಿರುಕುಳ ನೀಡುತ್ತಿದ್ದ. ಪ್ರಶ್ನಿಸಿದಕ್ಕೆ ಎದುರು ಮನೆ ಮಹಿಳೆಗೆ ಅವಾಜ್ ಹಾಕಿದ್ದಾನೆ. ಲಾಂಗ್ ಹಿಡಿದು ಮಹಿಳೆಗೆ ಅವಾಜ್ ಹಾಕುತ್ತಿರುವ ವಿಡೀಯೋ ವೈರಲ್ ಆಗಿದ್ದು, ವಿಡೀಯೋ ವೈರಲ್ ಆದ್ರೂ ಕಂಡು ಕಾಣದಂತೆ ವರ್ತೂರು ಪೊಲೀಸರು ವರ್ತಿಸುತ್ತಿದ್ದಾರೆ. ಅಲ್ಲದೇ ವರ್ತೂರು ಪೊಲೀಸರು ರೌಡಿಶೀಟರ್ ಮುತ್ತುಗೆ ಹೆದರುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ.

Read More

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಬಿಜೆಪಿ ಮಾಜಿ ಸಚಿವ ಕೆ.ಸುಧಾಕರ್ ಅವರು ಭೇಟಿ ಮಾಡಿದರು. ಮಾಜಿ ಸಚಿವ ಸುಧಾಕರ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಬಿಡದಿ ತೋಟದ ಮನೆಯಲ್ಲಿ ಹೆಚ್‌ಡಿಕೆ ಭೇಟಿಯಾಗಿ ಮಾತುಕತೆ ನಡೆಸಿದ ಉಭಯ ನಾಯಕರು. ಪ್ರಸ್ತುತ ರಾಜಕೀಯ ವಿದ್ಯಾಮನಗಳ ಬಗ್ಗೆ ಚರ್ಚೆ ಹಾಗೆ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಸಿದರು.

Read More

ಮುಂಬೈ: ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿರುವ ಮಿಲಿಂದ್ ದಿಯೋರಾ ಅವರು ಶಿವಸೇನೆ (Shivasene) ಸೇರ್ಪಡೆಯಾಗಲಿದ್ದಾರೆ ಎಂಬ ಗುಮಾನಿ ಎದ್ದಿದೆ. ಈ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಪಕ್ಷಕ್ಕೆ ಬಂದ್ರೆ ಸ್ವಾಗತಿಸುವುದಾಗಿ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ದಿಯೋರಾ ಅವರು ಕಾಂಗ್ರೆಸ್‌ (Congress) ತೊರೆದ ವಿಚಾರ ನನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ಅವರು ಶಿವಸೇನೆಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ದಕ್ಷಿಣ ಮುಂಬೈನ ಮಾಜಿ ಸಂಸದ ಮಿಲಿಂದ್ ದಿಯೋರಾ (Milind Deora) ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಕಾಂಗ್ರೆಸ್ ಮತ್ತು ಶಿವಸೇನೆ ಬಣದ ನಡುವಿನ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ವಿಚಾರದಿಂದ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಯಾಗಿದೆ.  ದಿಯೋರಾ ಅವರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವ ಸಾಧ್ಯತೆ ಇದೆ ಎಂದು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯಗಳಲ್ಲಿ ಊಹಾಪೋಹಗಳು ಹರಿದಾಡುತ್ತಿವೆ.…

Read More

ಬೆಂಗಳೂರು:  ಕೆಂಗೇರಿ ಹೋಬಳಿಯ ಸೋಂಪುರದಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ ಹಾಗೂ ಕಡಲೆಕಾಯಿ ಪರಿಷೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭಾಗವಹಿಸಿದ್ದರು. ಹಾಗೆ ದೇವರ ದರ್ಶನಾಶೀರ್ವಾದ ಪಡೆಯಲಾಯಿತು. ವರ್ಷದ ಮೊದಲ ಹಬ್ಬ ಸಂಕ್ರಮಣದಂದು ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ಕೆ.ಆರ್.ಐ.ಡಿ.ಎಲ್ ಮಾಜಿ ಅಧ್ಯಕ್ಷರಾದ ಶ್ರೀ ಎಂ.ರುದ್ರೇಶ್, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಜಿ ಮರಿಸ್ವಾಮಿ ಅವರು, ಸ್ಥಳೀಯ ಮುಖಂಡರು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.

Read More

ಕೊಪ್ಪಳ: ಸಿಎಂ ಸಿದ್ದರಾಮಯ್ಯ ಮುಂದೆ ಸಂಸದ ಅನಂತ್ ಕುಮಾರ್‌ ಹೆಗಡೆ ಪುಟಗೋಸಿಗೆ ಸಮನಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಮಾತನಾಡುವ ನಿಮ್ಮಂಥ ನಾಯಿಗಳಿಗೆ ನಾನು ಅಲ್ಲಿಗೆ ಬಂದು ಉತ್ತರ ಕೊಡಬೇಕಾಗುತ್ತೆ ಮಗನೆ ಎಂದು ಸಚಿವ ಶಿವರಾಜ್‌ ತಂಗಡಗಿ (Shivaraj Tangadagi) ಏಕವಚನದಲ್ಲಿಯೇ ತಿರುಗೇಟು ನೀಡಿದ್ದಾರೆ. ಕೊಪ್ಪಳ (Koppal) ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅನಂತ್‌ ಕುಮಾರ್‌ಗೆ ಅವನದೇ ಭಾಷೆಯಲ್ಲಿ ಉತ್ತರ ಕೊಡಲು ನನಗೂ ಬರುತ್ತೆ.‌ ಆದರೆ ನನ್ನ ಹಿರಿಯರು ನನಗೆ ಸಂಸ್ಕಾರ ಕಲಿಸಿದ್ದಾರೆ. ಅದಕ್ಕಾಗಿ ಅವನಿಗೆ ಕೆಟ್ಟ ಭಾಷೆಯಲ್ಲಿ ಉತ್ತರ ಕೊಡುತ್ತಿಲ್ಲ. ಬದಲಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ಮೊದಲು ಮತ್ತು ಕೊನೆ. ಸಿದ್ದರಾಮಯ್ಯ ಬಗ್ಗೆ ಅವನು ಮಾತನಾಡಬಾರದು. https://ainlivenews.com/we-will-not-go-because-bjp-is-doing-politics-in-the-name-of-ram-h-anjaneya/ ಸಿದ್ದರಾಮಯ್ಯ ಅವರಿಗೆ ಆಗಿರುವ ಅನುಭವ‌ದಷ್ಟು ಅವನಿಗೆ ವಯಸ್ಸಾಗಿಲ್ಲ. ಅವರ ಕಾಲಿನ ಧೂಳಿಗೂ ಹೆಗಡೆ ಸಮನಲ್ಲ. ನಾನೂ ಕೂಡ ಹೀಗೆ ಮಾತನಾಡಬಾರದು. ಆದರೆ ಅವನಾಡಿದ ಮಾತಿನಿಂದ ನೋವಾಗಿ ಹೀಗೆ ಹೇಳಿದ್ದೇನೆ. ಇಂಥ ನಾಯಿಗಳಿಗೆ ನಾವು ಬುದ್ಧಿ…

Read More

ಬೆಂಗಳೂರು: ಸಂಸದ ಅನಂತಕುಮಾರ್ ಹೆಗಡೆ  ಕುಂಭಕರ್ಣನಿದ್ದಂತೆ. ನಾಲ್ಕೂವರೆ ವರ್ಷ ಮಲಗುವುದು, ಚುನಾವಣೆ ಬಂದಾಗ ಏಳುವುದು ಎಂದು ಕಾಂಗ್ರೆಸ್ (Congress) ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ (Congress) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಸ್ಥಿತಿಯ ಪರಂಪರೆಯನ್ನು ಮುಂದುವರಿಸುವ ಅನಂತ್ ಕುಮಾರ್ ಹೆಗಡೆಯಂತಹ ಕ್ರಿಮಿ ಕೀಟಗಳು ಈ ದೇಶಕ್ಕೆ ಕ್ಯಾನ್ಸರ್‌ನಂತೆ ಕಾಡುತ್ತವೆ. ಈ ಕ್ಯಾನ್ಸರ್‌ಗೆ ಸಂವಿಧಾನದಲ್ಲಿ ಔಷಧವಿದೆ ಎಂದು ವಾಗ್ದಾಳಿ ನಡೆಸಿದೆ ಕಾಂಗ್ರೆಸ್ ಪಕ್ಷದ ಬಗ್ಗೆ, ಸಿದ್ದರಾಮಯ್ಯ ಅವರ ಬಗ್ಗೆ ತನ್ನ ಕೊಳಕು ನಾಲಿಗೆ ಹರಿಬಿಡುವ ಮೊದಲು ಸಂಸದನಾಗಿ ತನ್ನ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಈ ಅಸಹ್ಯದ ವ್ಯಕ್ತಿಯಲ್ಲಿ ಪುರೋಹಿತಶಾಹಿಯ ಅಹಂಕಾರ ಮಿತಿ ಮೀರಿ ನರ್ತಿಸುತ್ತಿದೆ. ಈ ಅಹಂಕಾರದ ಮದ ಇಳಿಸುವ ತಾಕತ್ತು ಕನ್ನಡಿಗರಿಗೆ ಇದೆ ಎಂದು ಹರಿಹಾಯ್ದಿದೆ

Read More

ಆರ್‌.ಎಸ್‌.ಪಿ. ಪ್ರೊಡಕ್ಷನ್ಸ್  ಮೂಲಕ ಲಕ್ಷ್ಮಿ ಹರೀಶ್ ಅವರು ನಿರ್ಮಿಸುತ್ತಿರುವ ಉಸಿರು (Usiru) ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ, ಲಕ್ಷ್ಮಿ ಹರೀಶ್ ಅವರು ನೂತನ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಉಸಿರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ  ಚಿತ್ರೀಕರಣ ಆರಂಭಿಸುತ್ತಿರುವ  ಈ ಚಿತ್ರದ ಪೋಸ್ಟರ್ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕ ಪ್ರಭಾಕರ್ (Prabhakar) ಹೇಳಹೊರಟಿದ್ದಾರೆ, ಸುಮಾರು 6 ತಿಂಗಳವರೆಗೆ ವರ್ಕ್ ಷಾಪ್ ನಡೆಸಿ ತಯಾರಾಗಿರುವ ಚಿತ್ರತಂಡ ಇದೇ ತಿಂಗಳ 17ರಿಂದ ಮಡಿಕೇರಿಯಲ್ಲಿ …

Read More

ನಟ ರಿಷಬ್ ಶೆಟ್ಟಿ (Rishab Shetty) ಅವರು ಕಳೆದ ವಾರ ದೈವ ದರ್ಶನ ಪಡೆದಿದ್ದರು. ‘ಕಾಂತಾರ 1’ (Kantara 1) ಚಿತ್ರದ ಕೆಲಸದ ನಡುವೆ ದೈವ ದರ್ಶನ ಪಡೆದ ವಿಡಿಯೋವನ್ನು ರಿಷಬ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಂಗಳೂರಿನ ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಬ್ ಭಾಗಿಯಾಗಿ ಮೈಸಂದಾಯ ದೈವದ ಆಶೀರ್ವಾದ ಪಡೆದಿದ್ದಾರೆ. ದೈವ ಸನ್ನಿಧಿಯಲ್ಲಿ ಆಶೀರ್ವಾದ ಪಡೆದ ಕ್ಷಣಗಳು ಎಂದು ರಿಷಬ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ. ರಿಷಬ್ ದೈವ ಕೋಲದಲ್ಲಿ ಭಾಗಿಯಾದ ವೇಳೆ, ಭಯಪಡಬೇಡ ನೀನು ಮುನ್ನುಗ್ಗು ನಾನಿದ್ದೇನೆ ಎಂದು ರಿಷಬ್‌ಗೆ ದೈವ ಅಭಯ ನೀಡಿದೆ. ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ ಎಂದು ದೈವ ಸೂಚನೆ ನೀಡಿದೆ ಕಾಂತಾರ’ ಸಿನಿಮಾ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಚಿತ್ರ ರಿಲೀಸ್ ಆದ್ಮೇಲೆ 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಸೌಂಡ್ ಮಾಡಿತ್ತು. ‘ಕಾಂತಾರ’ ಭಾಗ 1ಕ್ಕೆ ಕಥೆ ರೆಡಿಯಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಇತ್ತೀಚಿಗೆ ಮುಹೂರ್ತ…

Read More

ಕನ್ನಡದ ಹುಡುಗಿ, ಬೆಂಗಳೂರಿನ ಬೆಡಗಿ ಶ್ರೀಲೀಲಾ (Sreeleela) ಅವರಿಗೆ ಇದೀಗ ಟಾಲಿವುಡ್‌ನಲ್ಲಿ (Tollywood) ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸೋಲನ್ನು ಕಂಡ ‘ಕಿಸ್’ ನಟಿಗೆ ಈಗ ‘ಗುಂಟೂರು ಖಾರಂ’ ಸಿನಿಮಾದಿಂದ ಯಶಸ್ಸು ಸಿಕ್ಕಿದೆ. ಕಿಸ್, ಭರಾಟೆ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ಶ್ರೀಲೀಲಾ ಬಳಿಕ ತೆಲುಗಿಗೆ ಹಾರಿದ್ದರು. ಧಮಾಕಾ’ ಚಿತ್ರದ ಸಕ್ಸಸ್ ಬಳಿಕ ‘ಸ್ಕಂದ’, ‘ಆದಿಕೇಶವ’, ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ಸೋಲಿನಿಂದ ಕಂಗೆಟ್ಟ ನಟಿಗೆ ‘ಗುಂಟೂರು ಖಾರಂ’ ಚಿತ್ರದಿಂದ ಯಶಸ್ಸು ಜನವರಿ 12ರಂದು ರಿಲೀಸ್ ಆದ ‘ಗುಂಟೂರು ಖಾರಂ’ (Guntur Kaaram) ಚಿತ್ರದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಶ್ರೀಲೀಲಾ ನಟನೆ ಮತ್ತು ಡ್ಯಾನ್ಸ್, ಚಿತ್ರದ ಕಥೆ ಬಗ್ಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಪ್ರಿನ್ಸ್- ಶ್ರೀಲೀಲಾ ಜೋಡಿ ಮೋಡಿ ಮಾಡುತ್ತಿದೆ. ರಶ್ಮಿಕಾ(Rashmika Mandanna), ಪೂಜಾ ಹೆಗ್ಡೆ, ಕೃತಿ ಶೆಟ್ಟಿಗೆ (Krithi Shetty) ಠಕ್ಕರ್ ಕೊಟ್ಟು ಮತ್ತೆ ಸಕ್ಸಸ್ ರೇಸ್‌ನಲ್ಲಿದ್ದಾರೆ ಶ್ರೀಲೀಲಾ.…

Read More

ಸಂಕ್ರಾಂತಿ ಸಂಭ್ರಮಕ್ಕೆ ನೋ ಎಲಿಮಿನೇಷನ್ ಸಿಹಿ ಕೊಟ್ಟಿರುವ ಬಿಗ್‌ಬಾಸ್, ಹೊಸ ವಾರಕ್ಕೆ ಸ್ಪರ್ಧಿಗಳಿಗೆ ಹೊಸ ಹೊಸ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಸದಸ್ಯರ ನಡುವಿನ ಸ್ಪರ್ಧೆಯ ತುರುಸನ್ನು ಹೆಚ್ಚಿಸುವ ಬೆಂಕಿ ಚಟುವಟಿಕೆಯೊಂದು ಮನೆಯೊಳಗೆ ನಡೆದಿದೆ. ಜಿಯೋ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಅದರ ಝಲಕ್ ತೋರಿಸಲಾಗಿದೆ ಈ ವಾರದ ನಾಮಿನೇಷನ್‌ನಲ್ಲಿ ನಿಮ್ಮೊಳಗಿರುವ ಗೆಲುವಿನ ಕಿಚ್ಚಿಗೆ ಇಬ್ಬರು ಸದಸ್ಯರು ಬಲಿಯಾಗಬೇಕು ಎಂದು ಹೇಳಿದ್ದಾರೆ. ಎದುರಿಗೆ ಧಗದಹಿಸಿ ಉರಿಯುತ್ತಿರುವ ಬೆಂಕಿಗೆ ತಾವು ಇಚ್ಛಿಸಿರುವ ಇಬ್ಬರು ಸದಸ್ಯರ ಫೊಟೊಗಳನ್ನು ಹಾಕಬೇಕು. ಮನೆಯೊಳಗೇ ರೂಪುಗೊಂಡಿರುವ ಬಾಂಧವ್ಯವೆಲ್ಲವೂ ಈ ಬೆಂಕಿಯಲ್ಲಿ ಹಾದು ಬಣ್ಣ ಬದಲಿಸಿಕೊಳ್ಳುತ್ತಿವೆ. ಕೆಲವು ಉರಿದು ಬೂದಿಯಾಗುತ್ತಿವೆ. ಕೆಲವು ಕರಕಲಾಗುತ್ತಿವೆ. ಯಾವುದಾದರೂ ಬೆಂಕಿಯಲ್ಲಿ ಬೆಂದು ಅಪ್ಪಟ ಚಿನ್ನವಾಗಿ ಹೊರಬರಲಿವೆಯೇ ಎಂದು ಕಾದು ನೋಡಬೇಕಿದೆ. ಸಂಗೀತಾ(Sangeetha Sringeri), ಪ್ರತಾಪ್ ಅವರ ಫೋಟೊವನ್ನು ಬೆಂಕಿಗೆ ಎಸೆದಿದ್ದಾರೆ. ನಾನು ಇದುವರೆಗೆ ನೋಡಿರುವ ಪ್ರತಾಪ್ ಬೇರೆಯೇ, ಈಗ ನೋಡ್ತಿರೋ ಪ್ರತಾಪ್ (Prathap) ಬೇರೆಯೇ. ಹಾಗಾಗಿ ಅವರನ್ನು ನಾಮಿನೇಟ್ ಮಾಡುತ್ತೇನೆ ಎಂದು ಸಂಗೀತಾ ವಿವರಣೆ ನೀಡಿದ್ದಾರೆ. ತುಕಾಲಿ ಸಂತೋಷ್…

Read More