Author: AIN Author

ವಿಜಯನಗರ: ತಾಯಿಯೊಂದಿಗೆ ರಸ್ತೆ ದಾಟುವ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ ನಾಲ್ಕು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಟ್ಟೂರು ತಾಲೂಕಿನ ಕೆ. ಅಯ್ಯನಹಳ್ಳಿ‌ ಗ್ರಾಮದಲ್ಲಿ ನಡೆದಿದೆ. ಮೂಗಮ್ಮ ಎಂಬುವವರ ಪುತ್ರಿ ವರ್ಷಿಣಿ (4) ಮೃತ ಬಾಲಕಿಯಾಗಿದ್ದು, ತಾಯಿ ತನ್ನಿಬ್ಬರ ಮಕ್ಕಳ ಜೊತೆಗೆ ಆಸ್ಪತ್ರೆಗೆ ಹೋಗುತ್ತಿದ್ದಳು. ಈ ವೇಳೆ ಬಸ್ ಸ್ಟಾಪ್‌ನಲ್ಲಿ ಬಾಲಕಿ ವರ್ಷಿಣಿ ನಿಂತಿದ್ದಳು. ಲಾರಿ ರಸ್ತೆ ಮೇಲೆ ಸ್ಪೀಡ್ ಆಗಿ ಬರುತ್ತಿದ್ದಾಗ ಬಾಲಕಿ ಲಾರಿಯತ್ತ ಓಡಿ ಹೋಗಿದ್ದಾಳೆ. ಬಸ್ ಸ್ಟಾಪ್ ಎದುರು ಹಂಪ್ಸ್ ಇಲ್ಲದ ಕಾರಣ ವೇಗವಾಗಿ ಹೋಗುತ್ತಿದ್ದ ಲಾರಿ ಬಾಲಕಿ ಮೇಲೆ ಹರಿದಿದೆ. ಚಾಲಕನ ಅಜಾಗರೂಕತೆ ಯಿಂದ ಅಪಘಾತ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಹಾವೇರಿ: ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.ಪರಿಶಿಷ್ಟ ವರ್ಗಕ್ಕೆ ಸೇರಲು ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರ್ಕಾರ ಈಗ ಪುನಃ ಕೇಳಿರುವ ಸ್ಪಷ್ಟೀಕರಣವನ್ನು ಕೂಡಲೇ ಮಾಹಿತಿ ತರಿಸಿ ಸ್ಪಷ್ಟೀಕರಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಅವರು ಇಂದು ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ 904 ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಂತರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ರಮ ವಹಿಸಬೇಕು ಎಂದರು. 96-97 ರಲ್ಲಿಯೇ ದಿವಂಗತ ಶಾಸಕ ನಾರಾಯಣ ರಾವ್ ಎಸ್.ಟಿ ಗೆ ಸೇರಿಸಲು ಪ್ರಯತ್ನಿಸಿದ್ದರು ಎಂದು ಮರೆಯಬಾರದು ಎಂದರು. ದೋಣಿ ನಡೆಸುವುದು ಹಾಗೂ ಮೀನು ಹಿಡಿಯುವ ಕಾಯಕ ಅಂಬಿಗರದ್ದು. ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕವನ್ನು ಆಧರಿಸಿ ಮೇಲು ಕೀಳು ಎಂದು ತಾರತಮ್ಯ…

Read More

ವಾಷಿಂಗ್ಟನ್: ಮಹಿಳೆಯೊಬ್ಬಳನ್ನು ತನ್ನ ಗೆಳೆಯನ 18 ತಿಂಗಳ ಮಗುವಿಗೆ ನೇಲ್ ಪಾಲಿಶ್ ರಿಮೂವರ್ ಹಾಗೂ ಸಣ್ಣ ಸ್ಕ್ರೂಗಳನ್ನು ತಿನ್ನಿಸಿ ಹತ್ಯೆಗೈದ ಆರೋಪದ ಮೇಲೆ ಅಮೆರಿಕದ (America) ಪೊಲೀಸರು (Police) ಬಂಧಿಸಿದ್ದಾರೆ. ಅಲಿಸಿಯಾ ಓವೆನ್ಸ್ (20) ಎಂಬ ಮಹಿಳೆ ಮಗುವನ್ನು ಹತ್ಯೆಗೈದ ಆರೋಪಿಯಾಗಿದ್ದು ಆಕೆಯನ್ನು ಬಂಧಿಸಲಾಗಿದೆ. ಮಹಿಳೆ 2023ರ ಜೂನ್‍ನಲ್ಲಿ ತನ್ನ ಗೆಳೆಯನ ಮಗುವಿಗೆ ನೇಲ್ ಪಾಲಿಶ್, ಸ್ಕ್ರೂ ಹಾಗೂ ಬಟನ್ ಆಕಾರದ ಬ್ಯಾಟರಿಗಳನ್ನು ತಿನ್ನಿಸಿ ಹತ್ಯೆಗೈದಿದ್ದಳು ಎಂದು ಆರೋಪಿಸಲಾಗಿದೆ.   ಮೃತಪಟ್ಟ ಮಗುವನ್ನು ಐರಿಸ್ ಎಂದು ಗುರುತಿಸಲಾಗಿದೆ. ಮಗುವಿಗೆ ಕಳೆದ ಜೂನ್‍ನಲ್ಲಿ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಬಳಿಕ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಶವಪರೀಕ್ಷೆಯ ಬಳಿಕ ಮಗುವಿನ ಹೊಟ್ಟೆಯಲ್ಲಿ ಬಟನ್ ಆಕಾರದ ಬ್ಯಾಟರಿಗಳು ಮತ್ತು ಸ್ಕ್ರೂಗಳು ಸಿಕ್ಕಿದ್ದವು. https://ainlivenews.com/mukesh-ambani-property-once-again-joins-the-100-billion-club/ ಅಲ್ಲದೇ ನೇಲ್ ಪಾಲಿಶ್ ಕುಡಿಸಿರುವುದನ್ನು ವೈದ್ಯರು ಖಚಿತಪಡಿಸಿದ್ದರು. ಆರೋಪಿ ಮಹಿಳೆ, ಮಕ್ಕಳಿಗೆ ವಿಷಕಾರಿಯಾದ ಸೌಂದರ್ಯವರ್ಧಕ ಮತ್ತು ಮಕ್ಕಳ ಸಾವಿಗೆ ಕಾರಣವಾಗುವ ಔಷಧಿಗಳ ಬಗ್ಗೆ…

Read More

ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿದ್ದರೆ ಒಸಡಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹಲ್ಲಿನ ಮೇಲೆ ಬ್ಯಾಕ್ಟೀರಿಯಾಗಳ ಅಂಟಾದ ಪದರ ಉಂಟಾಗುತ್ತದೆ. ಅದರ ಆರೈಕೆ ಮಾಡಿಕೊಳ್ಳದಿದ್ದರೆ ಇದು ಅಂತಿಮವಾಗಿ ನಿಮ್ಮ ಒಸಡುಗಳಿಗೆ ಇರಿಸುಮುರಿಸು ಉಂಟು ಮಾಡುತ್ತದೆ ಪ್ರಾರಂಭದಲ್ಲಿ ಬಾಯಿಯಲ್ಲಿ ಅಥವಾ ತುಟಿಗಳ ಮೇಲೆ ಬಿಳಿ ಅಥವಾ ಕೆಂಪು ಪ್ಯಾಚ್ ರೀತಿ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮೇಲಿನ ಚರ್ಮವು ದಪ್ಪದಾಗಿ ಅಥವಾ ಕ್ರಮೇಣ ನಿರಂತರವಾದ ಹುಣ್ಣು ಅಥವಾ ಸವೆತ ಕಾಣಿಸಿಕೊಳ್ಳಬಹುದು. ಆರಂಭದಲ್ಲಿ ಇದು ಊತ ಮತ್ತು ವಾಸಿಯಾಗದ ಹುಣ್ಣಾಗುತ್ತದೆ. ಅಲ್ಲದೆ ಹುಣ್ಣಿನ ಬಳಿ ಹಲ್ಲುಗಳು ಸಡಿಲಗೊಳ್ಳುತ್ತವೆ. ಕೆಲವೊಮ್ಮೆ ಹಲ್ಲುಗಳು ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಈ ಒಸಡಿನ ಕ್ಯಾನ್ಸರ್ ಸಾಮಾನ್ಯವಾಗಿ ಪ್ಲೇಕ್ ನಿರ್ಮಾಣದಿಂದ ಉಂಟಾಗುತ್ತದೆ. ಸಿಗರೇಟ್, ಭಾಂಗ್ ಸೇದುವ ಅಭ್ಯಾಸವಿರುವ ಅಥವಾ ತಂಬಾಕು, ಗುಟ್ಕಾ, ಹುಕ್ಕಾ ಅಥವಾ ಶುಶ್ ಅನ್ನು ಜಗಿಯುವ ಜನರಲ್ಲಿ ಈ ಬಾಯಿಯ ಕ್ಯಾನ್ಸರ್ ಅಥವಾ ಒಸಡಿನ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಒಸಡು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು  3-4 ವಾರಗಳವರೆಗೆ ವಾಸಿಯಾಗದ ಬಾಯಿ ಹುಣ್ಣು, ಬಾಯಲ್ಲಿ ಬಿಳಿ ಅಥವಾ…

Read More

ಪ್ರಸಕ್ತ 2022-23ನೇ ಸಾಲಿನ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಹೀಗಾಗಿ, ಅರ್ಹ ವಿದ್ಯಾರ್ಥಿಗಳು, ಇನ್ನೂ ಅರ್ಜಿ ಸಲ್ಲಿಸದವರು ತಪ್ಪದೇ ಅರ್ಜಿ ಸಲ್ಲಿಸಬೇಕಿದೆ. ಮೆಟ್ರಿಕ್ ನಂತರದ ಕೋರ್ಸ್​ಗಳಲ್ಲಿ ವ್ಯಾಸಂಗ (ಓದುತ್ತಿರುವ) ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನ, ಶುಲ್ಕ ಮರು ಪಾವತಿ, ವಸತಿ ಸಹಾಯ ಯೋಜನೆಯಡಿ ಈಗಾಗಲೇ ಅರ್ಜಿ ಕರೆಯಲಾಗಿತ್ತು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನಾಂಕ ಮುಂದೂಡಿ ಜನವರಿ 15ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರ್ಹ ವಿದ್ಯಾರ್ಥಿಗಳು ಆನ್​ಲೈನ್​ನಲ್ಲಿ ಕೂಡಲೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮನೆಯಿಂದ ಕಾಲೇಜಿಗೆ 5 ಕಿ.ಮೀ. ದೂರ ಇರುವ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಪಡೆಯದೇ ಇರುವ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಪಿಯುಸಿ / ಸೆಮಿಸ್ಟರ್ ಅಂಕಪಟ್ಟಿ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದೂರ ದೃಢೀಕರಣ ಪತ್ರ. ಪಾಸ್‌ಪೋರ್ಟ್…

Read More

ಸೂರ್ಯೋದಯ: 06:53, ಸೂರ್ಯಾಸ್ತ 05:57 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ, ಶುಕ್ಲ ಪಕ್ಷ, ಉತ್ತರಾಯಣ, ಹೇಮಂತ ಋತು, ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: 12:08 ನಿಂದ 1:38 ತನಕ ಅಭಿಜಿತ್ ಮುಹುರ್ತ: ಮ.12:03 ನಿಂದ ಮ.12:47 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಮಂಗಳಕಾರ್ಯ ಸುಗಮ, ಸಂಗಾತಿಯ ಕುಟುಂಬದಿಂದ ಮದುವೆ ಕಾರ್ಯಕ್ಕೆ ಚಾಲನೆ, ಸರಕಾರಿ ಅಧಿಕಾರಿಗಳಿಗೆ ಬಲವಂತದ ವರ್ಗಾವಣೆ ಸಾಧ್ಯತೆ, ಹೆಚ್ಚಿನ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರವಾಸ ಯಶಸ್ಸು, ಕೌಟುಂಬಿಕ ಕಲಹಗಳು ಬಗೆಹರಿಯಲಿವೆ ಎಂಬ ಆಲೋಚನೆಯಲ್ಲಿ ಇತರ ದುರ್ಭೂಬುದ್ದಿಯಿಂದ ವ್ಯತ್ಯಾಸ, ನೇತ್ರ ಚಿಕಿತ್ಸೆ ಸಂಭವ, ಮೇಲಿಂದ ಮೇಲೆ ಅನಾರೋಗ್ಯ, ಒಡಹುಟ್ಟಿದವರಿಂದ ಸಹಕಾರ, ಕಮಿಷನ್…

Read More

ಬೆಂಗಳೂರು:- ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದಾರೆ. INDIA ಬ್ಲಾಕ್ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಡಿಕೆಶಿ ಅವರು ಶುಭ ಕೋರಿದ್ದಾರೆ. ಹಾಗೂ ಇದೇ ವೇಳೆ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ.

Read More

ನೆಲಮಂಗಲ: ಸಂಕ್ರಾಂತಿ ಹಬ್ಬದ ಹಿನ್ನಲೆ ಕಾಟುಮರಾಯನ ಗುಡಿಯಲ್ಲಿ ಬಹಳ ಅದ್ದೂರಿಯಾಗಿ ಪೂಜೆ ಪುರಸ್ಕಾರ ಜರುಗಿದೆ. ರೈತರ ಗ್ರಾಮೀಣ ಜನರ ಸುಗ್ಗಿ ಸಂಭ್ರಮದ ಸಂಕ್ರಮಣ ಇದಾಗಿದ್ದು, ಜನರು ಪ್ರಾಣಿ ಪಕ್ಷಿಗಳು ಜೀವ ಸಂಕುಲಕ್ಕೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿದ್ದಾರೆ. ಕಾಟುಮರಾಯನಿಗೆ ಹೆಳ್ಳುಬೆಲ್ಲ, ಕಬ್ಬು,ಕಡಲೆಕಾಯಿ, ಗೆಣಸು ಇಟ್ಟು ಪೂಜೆ ಮಾಡಲಾಗಿದೆ. ನೆಲಮಂಗಲ ನಗರದ ಮಾರುತಿ ನಗರದ ಗ್ರಾಮಸ್ಥರಿಂದ ವಿಶೇಷ ಪೂಜೆ ಮಾಡಲಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಶೇಷ ಹಬ್ಬ ಅಚರಣೆ ಮಾಡಲಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನ ಇದಾಗಿದ್ದು, ಜಾನುವಾರುಗಳಿಂದ ಕಿಚ್ಚ ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬ ಆಚರಣೆ ಮಾಡಲಾಗಿದೆ. ಗ್ರಾಮದ ಹಿರಿಯರಿಗೆ ಗ್ರಾಮಸ್ಥರು ಗೌರವ ಸಲ್ಲಿಸಿದ್ದಾರೆ.

Read More

ಬೆಂಗಳೂರು:- ಮಕರ ಸಂಕ್ರಾಂತಿ ದಿನದಂದು ಸೂರ್ಯ ತನ್ನ ಪಥವನ್ನು ಬದಲಿಸುವ ಮುನ್ನ ಬೆಂಗಳೂರು ಗವಿಗಂಗಾದರೇಶ್ವರನ ಅಡಿಯಿಂದ ಮುಡಿವರೆಗೆ ಸೂರ್ಯ ರಶ್ಮಿ ಸ್ಪರ್ಶಿಸಿವೆ. ಗವಿಗಂಗಾಧರೇಶ್ವರ ದೇವಾಲಯಕ್ಕೆ ಆಗಮಿಸಿದ ಶಾಸಕ ರವಿಸುಬ್ರಮಣ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಗವಿಗಂಗದರೇಶ್ವರ ದೇವಸ್ಥಾನದಲ್ಲಿ ಸೂರ್ಯ ರಶ್ಮಿ ಶಿವನ‌ ಪದಸ್ಪರ್ಶ ಮಾಡುವ ಪುಣ್ಯ ಸಮಯಕ್ಕೆ ಭಾಗಿಯಾಗಲು ಸಹಸ್ರಾರು ಭಕ್ತರು ಬಂದಿದ್ದಾರೆ. ಕೆಲ ಜನರಿಗೆ ಮಾತ್ರ ದೇವಸ್ಥಾನದ ಒಳಗೆ ಈ ವಿಸ್ಮಯ ಕ್ಷಣ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಆದ್ರೆ ಭಕ್ತರಿಗಾಗಿ ಎಲ್ ಇಡಿ ಸ್ಕ್ರೀನ್ ಹಾಕುವ ಮೂಲಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು 700 ವರ್ಷಗಳ ಇತಿಹಾಸ ಇರುವ ದೇವಸ್ಥಾನವಾಗಿದೆ. ಭಕ್ತರ ಅನುಕೂಲಕ್ಕಾಗಿ ಸ್ಕ್ರೀನ್ ಮೂಲಕ ಸೂರ್ಯ ರಶ್ಮಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದರು.

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಆತಂಕ ಮನೆ ಮಾಡಿದ್ದು, ಇಂದು 61 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 1.95 ರಷ್ಟಿದೆ. ಬೆಂಗಳೂರಿನಲ್ಲಿ ಇಂದು 30 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ 3,123 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 863 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. 156 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಮೈಸೂರು 8, ಬೆಳಗಾವಿ 5, ಉತ್ತರ ಕನ್ನಡ ಜಿಲ್ಲೆಯಲ್ಲಿ 5, ಬಳ್ಳಾರಿ 2, ಚಾಮರಾಜನಗರ 2, ಶಿವಮೊಗ್ಗ 2, ವಿಜಯನಗರ 2, ಬಾಗಲಕೋಟೆ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಹಾಸನ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿವೆ. ಕೊರೊನಾ ಬಳಿಕ ರಾಜಧಾನಿ ಬೆಂಗಳೂರಿನ ಶೇ 30 ರಷ್ಟು ಜನರಲ್ಲಿ ಗೊರಕೆ ಸಮಸ್ಯೆ ಕಾಣಿಸಿದೆ. ಇದು ಗೊರಕೆಗಷ್ಟೇ ಸೀಮಿತವಾಗದೆ, ಹೃದಯ ಸಮಸ್ಯೆ…

Read More