Author: AIN Author

ಅಮೇರಿಕಾ:- ಸೆಪ್ಟೆಂಬರ್​ ತಿಂಗಳಿನಲ್ಲಿ ಒಂದೇ ರಾತ್ರಿಯಲ್ಲಿ ಮೂರು ಮಿಲಿಯನ್ ಜೇನುನೊಣಗಳ ಸಾವುಗೀಡಾಗಿದ ಘಟನೆ ಕ್ಯಾಲಿಫೋರ್ನಿಯಾ ಅಭಯಾರಣ್ಯದಲ್ಲಿ ಜರುಗಿದೆ. ಮೂರು ಬಿಲಿಯನ್​ ಜೇನುನೊಣ ಸಾವಿನ ಹಿಂದಿನ ರಹಸ್ಯವನ್ನು ಯುಸ್​ ಕೃಷಿ ಇಲಾಖೆ (USDA)ಯ ತಜ್ಞರು ಬಹಿರಂಗಪಡಿಸಿದ್ದು ಜೇನುನೊಣಗಳು ಫಿಪ್ರೊನಿಲ್ ಎಂಬ ರಾಸಾಯನಿಕ ವಿಷ ಸೇವಿಸಿ ಸಾವುಗೀಡಾಗಿವೆ ಎಂದು ತಿಳಿಸಿದ್ದಾರೆ. ಜೇನುನೊಣಗಳ ಸಾಮೂಹಿಕ ಸಾವು ಸೆಪ್ಟೆಂಬರ್‌ನಲ್ಲಿ ನಡೆದಿತ್ತು. ಯುಎಸ್‌ಡಿಎ ತನ್ನ ಸಂಶೋಧನೆಗಳನ್ನು ಈ ತಿಂಗಳು ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಆದರೆ ಜೇನುನೊಣಗಳು ವಿಷಕಾರಿ ರಾಸಾಯನಿಕ ವಸ್ತುವನ್ನು ಹೇಗೆ ಸೇವಿಸಿದ್ದವು ಎಂಬ ಮಾಹಿತಿ ಇನ್ನೂ ನಿಗೂಢವಾಗಿದೆ. ಜೇನುನೊಣ ಅಭಯಾರಣ್ಯದ ಕೆಲಸಗಾರ ಡೊಮಿನಿಕ್ ಪೆಕ್ ಮಾತನಾಡಿ, ಈ ಘಟನೆ ನೋವು ಉಂಟುಮಾಡಿದೆ. ಎಲ್ಲಾ ಹತ್ತಿರದ ತೋಟಗಳಲ್ಲಿ ಫಿಪ್ರೊನಿಲ್ ಬಳಕೆಯ ಬಗ್ಗೆ ಇನ್ನೂ ವರದಿಯಾಗಿಲ್ಲ. ಫಿಪ್ರೊನಿಲ್ ಮನುಷ್ಯರಿಗೆ ಹಾನಿಕಾರಕವಾಗಿದೆ. ಇದು ಬೆವರುವುದು, ವಾಕರಿಕೆ, ವಾಂತಿ, ತಲೆನೋವು, ಹೊಟ್ಟೆ ನೋವು, ತಲೆತಿರುಗುವಿಕೆ ಮತ್ತು ರೋಗಗ್ರಸ್ತವಾಗುವಿಕೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

Read More

ಇಂದೋರ್‌: ಅಫ್ಘಾನಿಸ್ತಾನ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಟೀಂ ಇಂಡಿಯಾ ಆಲ್‌ರೌಂಡರ್‌ ಶಿವಂ ದುಬೆ (Shivam Dube), ತನ್ನ ಯಶಸ್ಸನ್ನು ಎಂ.ಎಸ್‌ ಧೋನಿ (MS Dhoni) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಅರ್ಪಿಸಿದ್ದಾರೆ. ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಶಿವಂ ದುಬೆ, ತಮ್ಮ ವೃತ್ತಿಜೀವನದಲ್ಲಿ ಮೇಲೇಳುವಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದ ಕೊಡುಗೆ ಅಪಾರ. ನಾಯಕ ಎಂ.ಎಸ್ ಧೋನಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಸೂಪರ್ ಕಿಂಗ್ಸ್‌ ತಂಡದ ಹಿರಿಯ ಆಟಗಾರರು ನನ್ನ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ ನನಗೆ ಸಲ್ಲುತ್ತಿರುವ ಶ್ರೇಯಸ್ಸು, ಸಿಎಸ್‌ಕೆ ತಂಡ ಮತ್ತು ಮಹಿ ಅಣ್ಣನಿಗೆ ಸಲ್ಲಬೇಕು. ನಾನು ನನ್ನ ಆಟ ಆಡುತಿದ್ದೆ, ಆದರೆ ಸಿಎಸ್‌ಕೆ ನನ್ನ ನಿಜವಾದ ಪ್ರತಿಭೆಯನ್ನು ಹೊರತಂದಿದೆ. ತಂಡವು ನನ್ನಲ್ಲಿ ಆ ಆತ್ಮವಿಶ್ವಾಸ ತುಂಬಿದೆ. ನಾನು ಐಪಿಎಲ್‌ನಲ್ಲಿ ರನ್ ಗಳಿಸಲು ಸಾಧ್ಯವಿದೆ ಎಂಬುದನ್ನು ಅವರು ನನಗೆ ಮನವರಿಕೆ ಮಾಡಿದರು. ಅಲ್ಲದೇ…

Read More

ಇಂದೋರ್‌: ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ (Ind vs Afg) ನಡುವಿನ 2ನೇ ಟಿ20 ಪಂದ್ಯದ ವೇಳೆ ಇಂದೋರ್‌ನ ಹೋಳ್ಕರ್‌ ಮೈದಾನದಲ್ಲಿ ಭದ್ರತೆ ಉಲ್ಲಂಘಿಸಿದ ಕ್ರಿಕೆಟಿಗ ವಿರಾಟ್‌ ಕೊಹ್ಲಿ (Virat Kohli) ಅವರ ಅಪ್ಪಟ ಅಭಿಮಾನಿಗೆ ಸಂಕಷ್ಟ ಎದುರಾಗಿದೆ. ಪಂದ್ಯದಲ್ಲಿ ಅಫ್ಘಾನಿಸ್ತಾನದ ಇನ್ನಿಂಗ್ಸ್‌ ವೇಳೆ ಕೊಹ್ಲಿಯ ಅಪ್ಪಟ ಅಭಿಮಾನಿಯೊಬ್ಬ (Virat Kohli Fan) ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ಹಾರಿಬಂದು ಕೊಹ್ಲಿಯನ್ನು ಭೇಟಿಯಾಗಿದ್ದಾನೆ.‌ ಓಡಿಬಂದು ಬೌಂಡರಿ ಲೈನ್‌ ಬಳಿ ನಿಂತಿದ್ದ ಕೊಹ್ಲಿಯ ಪಾದಮುಟ್ಟಿದ್ದಾನೆ, ಬಳಿಕ ಅಪ್ಪಿಗೊಂಡು ಭಾವುಕನಾಗಿದ್ದಾನೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಮಧ್ಯಪ್ರದೇಶ ಪೊಲೀಸರು (MadhyaPradesh Police) ವಶಕ್ಕೆ ಪಡೆದಿದ್ದಾರೆ. ಯುವಕನನ್ನು ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಟಿಕೆಟ್‌ ಖರೀದಿಸಿ ಪಂದ್ಯ ವೀಕ್ಷಿಸಲು ಬಂದಿದ್ದ ಯುವಕ ನರೇಂದ್ರ ಹಿರ್ವಾನಿ ಗೇಟ್‌ ಮೂಲಕ ಮೈದಾನಕ್ಕೆ ನುಗ್ಗಿದ್ದಾನೆ. ಯುವಕನು ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಹಿರಿಯ ಆಟಗಾರನನ್ನು ಭೇಟಿಯಾಗಬೇಕೆಂಬ ಆಸೆಯಿಂದ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಮೈದಾನ ಪ್ರವೇಶಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಯುವಕನ ವಿಚಾರಣೆ ನಡೆಸಲಾಗುತ್ತಿದ್ದು,…

Read More

ಗರ್ಭಾವಸ್ಥೆಯ ಮಧುಮೇಹವು ತಾಯಿಯ ಜೊತೆ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಭಯ ಪಡದೇ ಕಾಳಜಿವಹಿಸಬೇಕಾಗುತ್ತದೆ. ಇಲ್ಲಿ ವೈದ್ಯರು ಗರ್ಭಾವಸ್ಥೆಯ ಮಧುಮೇಹದಿಂದ ತಾಯಿ-ಮಗುವಿಗೆ ಏನೆಲ್ಲಾ ತೊಂದರೆಯಾಗುತ್ತದೆ ಮತ್ತು ಅದನ್ನು ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ ಗರ್ಭಾವಸ್ಥೆಯ ಮಧುಮೇಹವು ತಾಯಿ-ಮಗುವಿಗೆ ಅಪಾಯಕಾರಿಯೇ? ಹೈದರಾಬಾದಿನ ಯಶೋದಾ ಹಾಸ್ಪಿಟಲ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರಾದ ಡಾ. ಅನುಷಾ ರಾವ್ ಪಿ, ಗರ್ಭಾವಸ್ಥೆಯ ಮಧುಮೇಹವು ಅತಿಯಾದ ಭ್ರೂಣದ ಬೆಳವಣಿಗೆಗೆ ಕಾರಣವಾಗಬಹುದು. ಇದನ್ನು ಮ್ಯಾಕ್ರೋಸೋಮಿಯಾ ಎಂದೂ ಕರೆಯುತ್ತಾರೆ, ಇದು ಜರಾಯುವನ್ನು ದಾಟಿದ ಗ್ಲೂಕೋಸ್ ಮಟ್ಟಗಳ ಕಾರಣದಿಂದಾಗಿ ಸಂಭವಿಸುತ್ತದೆ. ಅಂದರೆ ಇದು ಸರಾಸರಿಗಿಂತ ದೊಡ್ಡದಾದ ಮಗುವಿಗೆ ಕಾರಣವಾಗಬಹುದು, ಹೆರಿಗೆಯ ಸಮಯದಲ್ಲಿ ಅಪಾಯ ಕೂಡ ಉಂಟಾಗಬಹುದು” ಎಂದು ವಿವರಿಸುತ್ತಾರೆ. ಗರ್ಭಾವಸ್ಥೆಯಲ್ಲಿ ಮಧುಮೇಹ ಹೊಂದಿರುವ ತಾಯಂದಿರಿಗೆ ಜನಿಸಿದ ಶಿಶುಗಳು ಜನನದ ನಂತರ ಕಡಿಮೆ ರಕ್ತದ ಸಕ್ಕರೆಯನ್ನು ಹೊಂದಿರಬಹುದು ಏಕೆಂದರೆ ಅವರ ಸ್ವಂತ ಇನ್ಸುಲಿನ್ ಉತ್ಪಾದನೆಯು ಗ್ಲೂಕೋಸ್ ಅನ್ನು ನಿಯಂತ್ರಿಸಲು ಪ್ರಾರಂಭಿಸುತ್ತದೆ ಎಂದು ಡಾ. ಅನುಷಾ ರಾವ್ ಪಿ…

Read More

ಬೆಂಗಳೂರು: ಬೆಂಗಳೂರು- ತುಮಕೂರು- ಹಾಸನ ರಸ್ತೆಗಳ ಕಡೆಗೆ ಸಂಚರಿಸುವ ವಾಹನ ಸವಾರರಿಗೆ ಹೆದ್ದಾರಿ ಇಲಾಖೆ ಶಾಕ್‌ ನೀಡಿದೆ. ಹೌದು, ಇಂದಿನಿಂದ ಪೀಣ್ಯ ಫ್ಲೈ ಓವರ್‌ ಮೂರು ದಿನ ಬಂದ್‌ ಆಗಲಿದೆ. ಪರ್ಯಾಯ ಮಾರ್ಗಗಳನ್ನು ಟ್ರಾಫಿಕ್‌ ಇಲಾಖೆ ನೀಡಿದೆ. ಇಂದು ರಾತ್ರಿ 11 ಗಂಟೆಯಿಂದ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಲೋಡ್ ಟೆಸ್ಟಿಂಗ್ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದ್ದು, ಇಂದು ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 11 ಗಂಟೆ ತನಕ ಬಂದ್ ಆಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಹೈವೇಗೆ (ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೆತುವೆ) ಅಳವಡಿಸಿದ್ದ ವಯಾಡಕ್ಟ್ ದುರಸ್ತಿ ಮಾಡಲಾಗುತ್ತಿದೆ. ವಯಾಡಕ್ಟ್‌ನ ಸಮಗ್ರತೆ ಪರಿಶೀಲನೆ & ಲೋಡ್ ಟೆಸ್ಟಿಂಗ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಯಾಕೆ ನಿರ್ಬಂಧ? ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಹೈವೇ (ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೆತುವೆಗೆ) ಅಳವಡಿಸಿದ್ದ ವಯಾಡಕ್ಟ್ ದುರಸ್ತಿ ಕಾರ್ಯ ಇದೆ. ವಯಾಡಕ್ಟ್ ನ ಸಮಗ್ರತೆ ಪರಿಶೀಲನೆ ಮತ್ತು…

Read More

ಹಾಲು, ಮೊಟ್ಟೆಗಳು ದೇಹದ ಬೆಳವಣಿಗೆ ಮತ್ತು ಮೂಳೆಗಳಿಗೆ ಬೇಕಾದ ಶಕ್ತಿಯನ್ನು ನೀಡುತ್ತವೆ. ಹಾಲಿನೊಂದಿಗೆ ಬೇರೆ ಆಹಾರ ತಯಾರಿಸಿ ಮೊಟ್ಟೆಯನ್ನು ಹಾಲಿನಲ್ಲಿ ಬೇಯಿಸಿ ತಿನ್ನಬಹುದೇ? ಆದರೆ ಹಸಿ ಮೊಟ್ಟೆಯನ್ನು ಹಾಲಿನ ಜೊತೆ ತಿನ್ನಬಾರದು, ಇದು ಹೊಟ್ಟೆ ಉಬ್ಬರ, ಅಸ್ವಸ್ಥತೆ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. ಹಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಈ ಬ್ಯಾಕ್ಟೀರಿಯಾವು ಹಾಲಿನಲ್ಲಿ ಹರಡಬಹುದು, ಇದು ಹೊಟ್ಟೆ ಉಬ್ಬರ, ವಾಂತಿ, ವಾಕರಿಕೆಗೆ ಕಾರಣವಾಗಬಹುದು. ಎರಡು ರೀತಿಯ ಪ್ರೋಟೀನ್ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅಸಾಧ್ಯವಾದ ಪರಿಣಾಮಗಳು ಉಂಟಾಗಬಹುದು. ಹೊಟ್ಟೆ ಉಬ್ಬರ, ಚಡಪಡಿಕೆ, ಹೊಟ್ಟೆ ನೋವು ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಆದರೆ ಹಸಿ ಮೊಟ್ಟೆ ಮತ್ತು ಹಾಲು ಬೇರೆ ಬೇರೆ ಆಹಾರಗಳನ್ನು ತಯಾರಿಸಿ ತಿನ್ನಬಹುದು. ಮಸಲ್ ಬಿಲ್ಡ್ ಮಾಡಲು ಮತ್ತು ಪ್ರೋಟೀನ್ ಸೇವನೆಯನ್ನು ಹೆಚ್ಚಿಸಲು ಬಾಡಿಬಿಲ್ಡರ್‌ಗಳು ಹಾಲಿನಲ್ಲಿ ನಾಲ್ಕು-ಐದು ಕಚ್ಚಾ ಮೊಟ್ಟೆಗಳನ್ನು ಬೆರೆಸಿ ತಿನ್ನುತ್ತಾರೆ. ಆದರೆ ಈ ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಸಮೃದ್ಧವಾಗಿರುವುದು ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾಂಬಿನೇಶನ್ ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಹೇಳಲಾಗಿದೆ.

Read More

ಬೆಂಗಳೂರು: ಯಲಹಂಕದ ಎಲ್​ಬಿಎಸ್​​ ಲೇಔಟ್​ನ ಮನೆಯೊಂದ ರಲ್ಲಿನ ಸಿಲಿಂಡರ್ ಸ್ಫೋಟಗೊಂಡು ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಐದು ಮನೆಗಳಿಗೆ ಹಾನಿಯಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.

Read More

ಬೆಂಗಳೂರು: ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮಹಿಳೆ ಸ್ಥಿತಿ ಗಂಭೀರವಾಗಿರುವ ಘಟನೆ ನೆಲಮಂಗಲ ಬಳಿಯ ಅಡಕಿಮಾರನಹಳ್ಳಿಯ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೈಕ್ ನಲ್ಲಿದ್ದ ಮೂವರು ಗಂಡ,ಹೆಂಡತಿ ಮಗುವಾಗಿದ್ದು, ತಂದೆ ಹಾಗೂ ನಾಲ್ಕು ವರ್ಷದ ಮಗು ಸ್ಥಳದಲೇ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಕ್ರಾಂತಿ ಹಬ್ಬವನ್ನ ಮುಗಿಸಿಕೊಂಡು ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುವಾಗ ಈ ದುರ್ಘಟನೆ ನಡೆದಿದ್ದು, ಮೃತರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಇನ್ನೂ  ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲಿ ಚಾಲಕ ಬಚಾವ್ ಆಗಿದ್ದಾನೆ. ಬೆಂಗಳೂರಿನ ಡೇರಿ ಸರ್ಕಲ್​ನಲ್ಲಿ ತಡರಾತ್ರಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಆಡಿ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಬಸಕ್ಕೆ ಕಾರು ಪಲ್ಟಿ ಹೊಡೆದು ನಜ್ಜುಗುಜ್ಜಾಗಿದೆ. ಆಡಿ ಕಾರಿನಲ್ಲಿದ್ದ ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಆಡುಗೋಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಚಿಕ್ಕಬಳ್ಳಾಪುರ: ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ನನಗೆ ಅಹ್ವಾನ ಬಂದಿದೆ, ಆದರೆ ಹೋಗಲಾಗುತ್ತಿಲ್ಲ. ಇದು ದುರದೃಷ್ಟಕರ ಎಂದು ಈಶಾ ಸಂಸ್ಥಾಪಕ ಜಗ್ಗಿ ವಾಸುದೇವ್ ಹೇಳಿದರು. ಚಿಕ್ಕಬಳ್ಳಾಪುರದ ಈಶಾ ಆದಿಯೋಗಿ ಕೇಂದ್ರದಲ್ಲಿ ನಂದಿ ವಿಗ್ರಹ ಹಾಗೂ ತ್ರಿಶೂಲ ಪ್ರತಿಷ್ಠಾಪನಾ ಕಾರ್ಯಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ನನಗೆ ಈಗಾಗಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪೂರ್ವ ನಿಗದಿ ಕಾರ್ಯಕ್ರಮ ಇರುವ ಕಾರಣದಿಂದ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗಲಾಗುತ್ತಿಲ್ಲ.‌ ಇದು ನನ್ನ ದುರದೃಷ್ಟ, ನಾನು ಹೋಗಲಾಗುತ್ತಿಲ್ಲ ಅಂತ ಸ್ಪಷ್ಟಪಡಿಸಿದರು. https://ainlivenews.com/the-benefits-of-consuming-cumin-seeds-are-not-one-or-two/ ಇದೇ ವೇಳೆ ಅಪೂರ್ಣ ಮಂದಿರ ಉದ್ಘಾಟನೆ ಅಂತಾ ಕೆಲ ಮಠಾಧೀಶರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸದ್ಗುರು, ನಮಗೆ ಯಾರ ಮೇಲಾದರೂ ಬಹಳ ಪ್ರೀತಿ ಇದ್ರೆ ಎಷ್ಟು ಮಾಡಿದ್ರೂ ಸಾಕಾಗಲ್ಲ ಅನಿಸುತ್ತೆ. ಸ್ವಲ್ಪ ಮಾಡಿದರೂ ಬಹಳ ಮಾಡಿದೆ ಅಂತ ತಿಳಿದುಕೊಳ್ಳುವವರ ಹೃದಯದಲ್ಲಿ ಪ್ರೀತಿ ಇರಲ್ಲ. ಜಾಸ್ತಿ ಮಾಡಿದರೂ ಇನ್ನೂ ಮಾಡಬೇಕು ಎನ್ನುವವರ ಹೃದಯದಲ್ಲಿ ಪ್ರೀತಿ ಇರಲಿದೆ.  ದೇವಾಲಯ…

Read More