Author: AIN Author

ಕಲಬುರ್ಗಿ:- ಸಿಎಂ ಸಿದ್ರಾಮಯ್ಯನವರು ಯಾವತ್ತೂ ಯಾರಿಗೂ ಏಕವಚನದಲ್ಲಿ ಮಾತಾಡಲ್ಲ ಅಂತ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಏಕವಚನದಲ್ಲಿ ಮೊದ್ಲು ಮಾತಾಡೋದೇ ಸಿದ್ರಾಮಯ್ಯನವರು ಅನ್ನೋ ಬಿಜೆಪಿಯವರ ನೀಡಿದ ಹೇಳಿಕೆಗೆ ತಿರುಗೇಟು ಕೊಟ್ರು. ಸಿಎಂ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಏಕವಚನದಲ್ಲಿ ಮಾತನಾಡಿದ್ದು ಅವರ ಸಂಸ್ಕೃತಿ ಏನೂಂತ ತೋರಿಸುತ್ತದೆ ಅಂದ್ರು..

Read More

ಚಾಮರಾಜನಗರ;-ಸಿಎಂ ಸಿದ್ದರಾಮಯ್ಯ ವಿರುದ್ದ ಸಂಸದ ಅನಂತ ಕುಮಾರ್ ಹೆಗಡೆ ಏಕ ವಚನದಲ್ಲಿ ವಾಗ್ದಾಳಿ ಮಾಡಿದ ವಿಚಾರವಾಗಿ ಪಶು ಸಂಗೋಪನಾ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಗರಂ ಆಗಿದ್ದಾರೆ. ಅನಂತ ಕುಮಾರ್ ಹೆಗಡೆಗೆ ಸಂಸ್ಕಾರನೇ ಇಲ್ಲಾ ಆ ಮನುಷ್ಯನಿಗೆ ಸಂಸ್ಕಾರ ಅಂದ್ರೆ ಏನು ಅಂತ ತಿಳಿದಿಲ್ಲ ಎಂದರು. ಇನ್ನೂ ಬಾಬ್ರಿ ಮಸೀದಿ ರೀತಿ ಭಟ್ಕಳದ ಮಸೀದಿ ನಿರ್ನಾಮ ಮಾಡುತ್ತೇವೆ ಎಂಬ ಸಂಸದ ಹೇಳಿಕೆ ವಿಚಾರವಾಗಿ ಮಾತನಾಡಿ, ಸರ್ಕಾರ ಇದೆ ಕಾನೂನು ಇದೆ ಅದಕ್ಕೆಲ್ಲಾ ಏನು ಬಂದೋಬಸ್ತ್ ಮಾಡ್ಬೇಕೊ ಅದನ್ನ ಸರ್ಕಾರ ಮಾಡುತ್ತೆ. ಬೇರೆ ಸಮಾಜದ ದೇವಸ್ಥಾನಗಳನ್ನ ದ್ವಂಸ ಮಾಡುವುದಕ್ಕೆ ಬಿಡೋಕೆ ಆಗುತ್ತಾ..?? ಎಂದರು. ಇನ್ನೂ ಮೈಸೂರಿನಿಂದ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ನನಿಗೆ ಗೊತ್ತಿರುವ ಮಾಹಿತಿ ಪ್ರಕಾರ ಯತೀಂದ್ರ ಸಿದ್ದರಾಮಯ್ಯ ಮೈಸೂರಿನಿಂದ ಕಣಕ್ಕೆ ಇಳಿಯುವುದಿಲ್ಲ. ಬಿಜೆಪಿಯವರಿಗೆ ಮಾತನಾಡುವ ಚಟ ಅದಕ್ಕೆ ನಾವೇನು ಹೇಳೋದು. ನಾನಂತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ಇದು ನನ್ನ ಕೊನೆ ಚುನಾವಣೆ ಅಸಂಬ್ಲಿ ಚುನಾವಣೆಗೂ ಸ್ಪರ್ಧಿಸೊಲ್ಲ…

Read More

ಬೆಂಗಳೂರು: ಬಿಜೆಪಿ ಅವರು ಹೇಳಿದಂತೆ ನಾವು ಕೇಳೋಕೆ ಶುರು ಮಾಡಿದ್ರೆ, ನಾವು ಆಡಳಿತ ಮಾಡೋಕೆ ಆಗಲ್ಲ ಎಂದು ಬಿಜೆಪಿ ವಿರುದ್ಧ ಗೃಹ ಸಚಿವ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ. ಹಾವೇರಿ ರೇಪ್ ಕೇಸ್ (Haveri Rape Case) ಪ್ರಕರಣದಲ್ಲಿ ಎಸ್‌ಐಟಿ (SIT) ರಚನೆಗೆ ಆಗ್ರಹಿಸಿದ ವಿಚಾರ ಹಾಗೂ ಕೇಸ್‌ಗೆ ಸಂಬಂಧಿಸಿದವರ ಬಂಧನ ಆಗಿದೆ ಎಂಬ ಸಂತ್ರಸ್ತೆ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ತನಿಖೆ ಆಗುತ್ತಿದೆ. ಸಂಪೂರ್ಣ ತನಿಖೆ ಆಗಲಿ. ಅಲ್ಲಿಯವರೆಗೂ ನಾನೇನು ಹೇಳಲ್ಲ. ಈಗಾಗಲೇ 7-8 ಜನ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಈ ಮಧ್ಯೆ ಸಂತ್ರಸ್ತೆ ಊರಿಗೆ ಹೋಗಬೇಕು ಅಂದಿದ್ದಾರೆ. ಅದಕ್ಕೆ ಕಳುಹಿಸಲಾಗಿದೆ. ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣ ಸಂಬಂಧ ಸ್ಥಳೀಯ ಇನ್ಸ್ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ. ತನಿಖೆ ವರದಿ ಬರಲಿ ಮುಂದೆ ನೋಡೋಣ ಎಂದರು. ಎಸ್‌ಐಟಿ ತನಿಖೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ಅವರು, ಎಸ್‌ಐಟಿ, ಸಿಬಿಐ, ಸಿಒಡಿ ಎಲ್ಲಾ ಮಾಡಿ ಅಂತ ಹೇಳುತ್ತಾರೆ.…

Read More

ಬೆಂಗಳೂರು: ಅದೊಂದು ಸ್ಫೋಟ ಇಡೀ ಏರಿಯಾ ಜನರನ್ನೇ ಬೆಚ್ಚಿ ಬೀಳಿಸಿತ್ತು.ಸ್ಫೋಟದ ಸದ್ದು ಎದೆ ನಡುಗುವಂತೆ ಮಾಡಿತ್ತು..ಮನೆಗಳೇ ಛಿದ್ರ ಛಿದ್ರವಾಗಿದ್ದವು..ಆಗ ತಾನೆ ಮಲಗಿ ಎದ್ದವರು  ಆಸ್ಪತ್ರೆ ಸೇರಿದ್ರು.ಇದು ಒಂದು ಕಡೆ ಆದ್ರೆ ರಾಜಾಜಿನಗರ ಮೆಟ್ರೊ ನಿಲ್ದಾಣ ಪಕ್ಕದಲ್ಲೇ ನಿಂತಿದ್ದ ಬೈಕ್ ಗಳು ಬೆಂಕಿಗೆ ಆಹುತಿ ಆಗಿದೆ. ಆತಂಕದಲ್ಲೇ ಓಡಾಡ್ತಿರೊ ಜನ..ಪೀಸ್ ಪೀಸ್ ಆಗಿ ಬಿದ್ದಿರೊ ಮನೆಯ ಗೋಡೆ..ಛಿದ್ರ ಛಿದ್ರವಾಗಿರೊ ಕಿಟಕಿ ಗಾಜು..ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿರೊ ವಸ್ತುಗಳು..ಈ ದೃಶ್ಯಗಳೇ ಘಟನೆಯ ಭೀಕರತೆ ಎಷ್ಟಿದೆ ಅನ್ನೋದನ್ನ ಹೇಳ್ತಿವೆ.. ಹೌದು..ಇದು ಯಲಹಂಕದಲ್ಲಿರುವ ಎಲ್ ಬಿ ಎಸ್ ಲೇಔಟ್..ಈ ಕಟ್ಟಡದಲ್ಲಿ ಅಂಟಿಕೊಂಡಂತೆ ಐದು ಮನೆಗಳಿವೆ..ಇಲ್ಲಿನ ಜನ ರಾತ್ರಿ ಮಲಗಿ ಬೆಳಗ್ಗೆ ಏಳೊ ಸಮಯ..7.10 ರಲ್ಲಿ ದುರಂತವೊಂದು ಸಂಭವಿಸಿಬಿಟ್ಟಿತ್ತು..ಮದ್ಯದ ಮನೆಯಲ್ಲಿ ಸಂಭವಿಸಿದ ಸ್ಫೋಟ ಐದು ಮನೆಗಳಿಗೆ ಹಾನಿ ಮಾಡಿದೆ..ಗೋಡೆಗಳೇ ಉರುಳಿಬಿದ್ದಿವೆ..ಕಿಟಕಿ ಗಾಜುಗಳು ಪುಡಿ ಪುಡಿ ಯಾಗಿದೆ..ಘಟನೆಯಿಂದಾಗಿ ಮನೆಯಲ್ಲಿದ್ದ ಪಸಿಯಾ ಭಾನು,ಹಸ್ಮಾ ಎಂಬುವವರಿಗೆ ಗಂಭೀರ ಗಾಯವಾಗಿದ್ದು.ಸಲ್ಮಾ, ಶಾಹಿದ್ ಸೇರದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ.. ಪಸಿಯಾ ಭಾನು ,ಹಸ್ಮಾ ಇಬ್ಬರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ…

Read More

ತುಮಕೂರು:- ಡೀಸೆಲ್ ತುಂಬಿದ್ದ ಲಾರಿ ಪಲ್ಟಿ ಹೊಡೆದ ಹಿನ್ನೆಲೆ, ಡೀಸೆಲ್ ಗೆ ಜನತೆ ಮುಗಿಬಿದ್ದ ಘಟನೆ ತುಮಕೂರು‌ ಜಿಲ್ಲೆ ತಿಪಟೂರು ತಾಲ್ಲೂಕಿನ ಹರಿಸಮುದ್ರ ಗೇಟ್ ಬಳಿ ಜರುಗಿದೆ. ಅತಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಡೀಸೆಲ್ ಲಾರಿ ಉರುಳಿ ಬಿದ್ದಿದೆ. ಈ ವೇಳೆ ಬೈಕ್‌ಗೆ ಡಿಕ್ಕಿಯಾಗಿ ರಸ್ತೆ ಮೇಲೆ ಡೀಸೆಲ್ ಲಾರಿ ಉರುಳಿಬಿದ್ದಿದೆ. ಬೈಕ್ ನಲ್ಲಿದ್ದ ಮಹಿಳೆ ಸರ್ವಮಂಗಳಗೆ ಸಣ್ಣಪುಟ್ಟ ಗಾಯವಾಗಿದೆ. ಲಾರಿಯಿಂದ ಡೀಸೆಲ್ ಹರಿದ ಕಾರಣ ಡೀಸೆಲ್ ಗೆ ಜನತೆ ಮುಗಿಬಿದ್ದಿದ್ದಾರೆ. ನಾ ಮುಂದು ತಾ ಮುಂದು ಎಂದು ಜನತೆ ಡೀಸೆಲ್ ಕೊಂಡೊಯ್ದಿದ್ದಾರೆ. ಕ್ಯಾನ್,ಬಾಟಲ್ ಗಳಲ್ಲಿ ಡೀಸೆಲ್ ತುಂಬಿಕೊಂಡು ಜನರು ಹೋಗಿದ್ದಾರೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಬೆಂಗಳೂರು: ಬೈಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ತಂದೆ ಮತ್ತು ಐದು ವರ್ಷದ ಮಗಳು ಮೃತಪಟ್ಟಿರುವ ಘಟನೆ ನೆಲಮಂಗಲ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನೆಲಮಂಗಲ ಬಳಿಯ ಅಡಕಿಮಾರನಹಳ್ಳಿಯ ಫ್ಲೈಓವರ್ ಮೇಲೆ ಅಪಘಾತ ಸಂಭವಿಸಿದೆ. ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಡ, ಹೆಂಡತಿ ಹಾಗೂ ಮಗು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಭೀಕರ ಅಪಘಾತದ ಪರಿಣಾಮ ತಂದೆ (Father) ಹಾಗೂ ನಾಲ್ಕು ವರ್ಷದ ಮಗು (Child) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಚಿಕ್ಕಪೇಟೆಯ ಅಮಿತ್ (32) ಹಾಗೂ 5 ವರ್ಷದ ಮಗಳು ಅನಿತಾ ಮೃತಪಟ್ಟವರು. ಅಮಿತ್ ಪತ್ನಿ ಕುಸುಮಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ತಂದೆ ಹಾಗೂ ಮಗಳ ಇಬ್ಬರ ತಲೆಗೂ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟರು. ಅಮಿತ್‌ ಮತ್ತು ಕುಸುಮಾ ಅವರು ತಮ್ಮ ಪುಟ್ಟ ಮಗಳೊಂದಿಗೆ ಸಂಕ್ರಾಂತಿ ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಅಲ್ಲಿಂದ ಹಬ್ಬ ಮುಗಿಸಿ ಮರಳುವಾಗ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ…

Read More

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ವೇಗದ ಬಸ್‌ ಚಾಲನೆಗೆ ಫುಡ್‌ ಡೆಲಿವರಿ ಬಾಯ್‌ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. https://ainlivenews.com/the-prime-ministers-favorite-song-poojisalende-hoogala-paat/ ಬಸವಾರಾಜು ಮೃತ ಫುಡ್ ಡೆಲಿವರಿ ಬಾಯ್. ತಡರಾತ್ರಿ 2 ಗಂಟೆ ವೇಳೆ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂಭಾಗ ಈ ಅಪಘಾತ ಸಂಭವಿಸಿದೆ. ಫುಡ್‌ ಡೆಲಿವರಿ ಬಾಯ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೈಸೂರು ರೋಡ್‌ ಕಡೆಗೆ ರಾತ್ರಿ ಫುಡ್ ಡೆಲಿವರಿ ಮಾಡಲು ಬಸವರಾಜು ತೆರಳುತ್ತಿದ್ದ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಸ್ಥಳದಲ್ಲೇ ಬಸವರಾಜು ಮೃತಪಟ್ಟಿದ್ದಾನೆ.

Read More

ಬೆಂಗಳೂರು : ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.‌ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದರು. ಶೋಷಣೆಗೆ ಒಳಗಾದವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಡ ಹೆಚ್ಚಾಗಬೇಕು. ವೈಜ್ಞಾನಿಕವಾಗಿ ಸಮರ್ಥ ಆರೋಪ ಪಟ್ಟಿ ಸಲ್ಲಿಕೆಯಾಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಿ. ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು. ಇಲ್ಲದಿದ್ದರೆ ಡಿಸಿಪಿ ಗಳನ್ನೇ ಈ ವೈಫಲ್ಯಕ್ಕೆ ಹೊಣೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ವರಿಸಿದರು. ಪೊಲೀಸರಿಗೆ ನಮ್ಮ ಸರ್ಕಾರ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದೆ. ಪೊಲೀಸರ ಕೆಲಸದಲ್ಲಿ ಮೂಗು ತೂರಿಸಬಾರದು ಎನ್ನುವುದು ನನ್ನ ಬದ್ಧತೆ. ಆದರೆ ನಾವು ಫ್ರೀ ಹ್ಯಾಂಡ್ ಕೊಟ್ಟಿದ್ದು ದುರುಪಯೋಗ ಆಗಬಾರದು. ಅದು ಜನರಿಗೆ ಅನುಕೂಲ ಆಗುವಂತಿರಬೇಕು ಎಂದು ಸೂಚಿಸಿದರು. ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ…

Read More

ಬೆಂಗಳೂರು ಗ್ರಾಮಾಂತರ:   ಕಾರವಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಮಾತನಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಎನ್ಐಎಸ್ ಯು ಸಂಘಟನೆ ವತಿಯಿಂದ ಆನೇಕಲ್ ಪೊಲೀಸ್ ಠಾಣೆಯಲ್ಲಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಕೇಸ್ ದಾಖಲು ಮಾಡುವಂತೆ ದೂರು ನೀಡಿದರು ಕಾರವಾರದಲ್ಲಿ ಮಾತನಾಡುವಾಗ ಸಂಸದ ಅನಂತ್ ಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯ ಮೂರ್ಖ ರಾಮಯ್ಯನವರು ಹಿಂದು ಸಮಾಜವನ್ನು ಒಡೆಯುತ್ತಿದ್ದಾರೆ ಏಕವಚನದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು ಹೇಳಿಕೆನ ಖಂಡಿಸಿ ಎನ್ಐಎಸ್ಯು ಸಂಘಟನೆಗಳು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಇನ್ನು ಅನಂತ್ ಕುಮಾರ್ ನನ್ನ ಬಂಧಿಸುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Read More

ಚಾಮರಾಜನಗರ:- ಪುಣಜನೂರು ಸ್ಟೇಟ್ ಫಾರೆಸ್ಟ್‌ನಲ್ಲಿ ವ್ಯವಸಾಯ ಮಾಡಲು ತೊಂದರೆ ಕೊಡುತ್ತಿರುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಕ್ರಮವನ್ನು ವಿರೋಧಿಸಿ ದಸಂಸ ಪದಾಧಿಕಾರಿಗಳು ಮತ್ತು ನಗರದ ಅಂಬೇಡ್ಕರ್ ಬಡಾವಣೆಯ ನಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಅವರ ಹಾಕಿದರು. ಚಾಮರಾಜನಗರ ತಾಲೂಕಿನ ಎಚ್.ಡಿ.ಫಾರೆಸ್ಟ್ ಪುಣಜನೂರು ಸ್ಟೇಟ್ ಫಾರೆಸ್ಟ್‌ನ ಸ.ನಂ. 1. 3. 5ರಲ್ಲಿ ಸುಮಾರು 150 ಜನರಿಗೆ ಸೇರಿದ ಜಮೀನಿದ್ದು, ಕಳೆದ 50 ವರ್ಷಗಳಿಂದಲೂ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಆದರೆ, ಕಳೆದ 2-3 ವರ್ಷಗಳಿಂದ ಕೋವಿಡ್ ಕಾರಣ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ವ್ಯವಸಾಯ ಮಾಡಲು ಸಾಧ್ಯವಾಗಿಲ್ಲ. ಆರ್ಥಿಕ ಮಟ್ಟವನ್ನು ಸುಧಾರಿಸಿಕೊಂಡು ಜಮೀನನ್ನು ಉಳುಮೆ ಮಾಡಲು ಜಮೀನಿಗೆ ತೆರಳಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಜಮೀನನ್ನು ಉಳುಮೆ ಮಾಡದಂತೆ ನಮ್ಮನ್ನು ತಡೆದು, ನಮಗೆ ತೊಂದರೆ ಕೊಡುತ್ತಿದ್ದಾರೆ. ಉಳುಮೆ ನಿಲ್ಲಿಸಿ…

Read More