Author: AIN Author

ಬೆಂಗಳೂರು: ರಾಜಕಾರಣದಲ್ಲಿ ಯಾರು ಮಿತ್ರರಲ್ಲ ಶತೃಗಳಲ್ಲ ಎಲ್ಲರು ಸಮಾನರು ಜನ ಸೇವೆಗೆ ಯಾರು ತಮ್ಮ ಜೀವನ ಮುಡುಪಾಗಿಟ್ಟಿರುತ್ತಾರೋ ಅವರೇ ನಿಜವಾದ ಜನ ಸೇವಕರು ಹಾಗೆ ನಿಜವಾದ ರಾಜಕಾರಣಿಗಳು. ಹಾಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವತ್ಥ್‌ ನಾರಾಯಣ ಅವರು ಡಿ.ಕೆ ಶಿವಕುಮಾರ್ ಸಿಎಂ ಆಗಲಿ ಎಂದು  ಶುಭ ಹಾರೈಸಿದ್ದಾರೆ. ಶೇಷಾದ್ರಿಪುರಂ ಗುಂಡೂರಾವ್ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯದ ಮಲ್ಲೇಶ್ವರಂ, ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನ ಒಟ್ಟುಗೂಡಿಸಿಕೊಂಡು ಜನಸ್ಪಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಶ್ವಥ್ ನಾರಾಯಣ್ ಅವರು ವೇದಿಕೆ ಮೇಲೆಯೇ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅಂತಾ ಆಶಿಸಿದರು. ಜನರನ್ನ ನೇರವಾಗಿ ತಲುಪುವ ಕೆಲಸವನ್ನು ಡಿಕೆ ಶಿವಕುಮಾರ್ ಅವರು ಮಾಡುತ್ತಿದ್ದಾರೆ. ಅವರಿಗೆ ಈಗ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಅಂತಾ ಆಶಿಸುತ್ತಾ ಮುಂದಿನ ದಿನಗಳಲ್ಲಿ ಉನ್ನತ ಮಟ್ಟಕ್ಕೆ ಹೋಗಿ ಮುಖ್ಯಮಂತ್ರಿ ಕೂಡ ಆಗಲಿ ಎಂದು ಶುಭ ಹಾರೈಸಿದರು.  ಕರ್ನಾಟಕ ಸರ್ಕಾರ ಉತ್ತಮವಾದ ಕಾರ್ಯಕ್ರಮ ರೂಪಿಸಿದೆ. ನಮ್ಮ ಪಶ್ಚಿಮ ವಲಯದಲ್ಲಿ…

Read More

ಬೆಂಗಳೂರಿನಿಂದ ನೆಲಮಂಗಲ ಕಡೆ ಹೋಗುವವರು ಈ ಸ್ಟೋರಿ ಮಿಸ್ ಮಾಡದೆ ನೋಡಿದೆ. ಯಾಕೆಂದರೆ ಬರೋಬ್ಬರಿ 18 ಜಿಲ್ಲೆಗೆ ಸಂಪರ್ಕಿಸೋ ಪೀಣ್ಯ ಫ್ಲೈ ಓವರ್ ಮತ್ತೆ ಬಂದ್ ಆಗಲಿದೆ. ಈ ಬಾರಿ ಮೂರು ದಿನಗಳ ಕಾಲ ಸಂಚಾರಕ್ಕೆ ನಿರ್ಬಂಧ ಇರಲಿದೆ. ಮೊದಲೇ ಸಂಚಾರ ದಟ್ಟಣೆ ಮಧ್ಯೆ ಇದು ಪ್ರಯಾಣಿಕರು, ವಾಹನ ಸವಾರರಿಗೆ ಮತ್ತಷ್ಟು ಕಿರಿಕಿರಿ ಎದುರಾಗಲಿದೆ. ಬೆಂಗಳೂರು ನಗರದಿಂದ ಬರೋಬ್ಬರಿ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಪೀಣ್ಯ ಫ್ಲೈಓವರ್. ಇಂದು ರಾತ್ರಿಯಿಂದ ಮೂರು ದಿನಗಳ ಕಾಲ ಬಂದ್ ಆಗಿರಲಿದೆ. ಇಂದು ರಾತ್ರಿ 11 ಗಂಟೆಯಿಂದ ಜನವರಿ 19ರ ರ ಬೆಳಗ್ಗೆ 11 ಗಂಟೆವರೆಗೆ ಸಂಪೂರ್ಣ ವಾಹನಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ-೪ ರ ಪೀಣ್ಯ ಎಲಿವೇಟೆಡ್ ಹೈವೇಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಹಿನ್ನೆಲೆ ಲೋಡ್ ಟೆಸ್ಟಿಂಗ್ ನಡೆಸಲಿರುವ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ನಾಗಸಂದ್ರದ ಪಾರ್ಲೆ ಜಿ ಫ್ಯಾಕ್ಟರಿವರೆಗೂ 5 ಕಿಮೀ ಉದ್ದವಿರುವ…

Read More

ದಾವಣಗೆರೆ:- ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಮಾಜಿ ಸಚಿವ MP ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಹೇಳಿಕೆಯನ್ನ ಪಕ್ಷವು ಒಪ್ಪಲ್ಲ, ರಾಜ್ಯಾಧ್ಯಕ್ಷರು ಒಪ್ಪಲ್ಲ. ಸಿದ್ದರಾಮಯ್ಯ ಗೌರವಯುತ ಸ್ಥಾನದಲ್ಲಿದ್ದಾರೆ. ಮೇಲಾಗಿ ಹಿರಿಯರು. ಹಗುರವಾಗಿ ಏಕವಚನದಲ್ಲಿ ಮಾತನಾಡಿದ್ದನ್ನ ಖಂಡಿಸುತ್ತೇವೆ. ಹಿಂದೆ ಕೂಡ ಹೆಗಡೆ ಸಂವಿಧಾನ ಬದಲಾಚಣೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆಗಲೂ ಕೂಡ ನಾವು ಖಂಡಿಸಿದ್ದೇವೆ. ಈಗಲು ಅವರ ಹೇಳಿಕೆಯನ್ನ ಖಂಡಿಸುತ್ತೇವೆ. ರಾಜಕೀಯವಾಗಿ ಟೀಕೆ ಮಾಡಬಹುದು. ಆದರೆ, ಏಕವಚನದಲ್ಲಿ ಪದ ಬಳಕೆ ಸರಿಯಾಗಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

Read More

ಬೆಂಗಳೂರು: ಲೋಕಸಭೆಗೆ ಮಾತ್ರವಲ್ಲ ಮುಂಬರುವ ಪರಿಷತ್ & ಬಿಬಿಎಂಪಿ ಚುನಾವಣೆಯಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ತಕ್ಷಣವೇ ವಿಧಾನ ಪರಿಷತ್ ಚುನಾವಣೆ ‌ಎದುರಾಗಲಿದೆ ಇಲ್ಲೂ ಮೈತ್ರಿ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ ಈ ಬಗ್ಗೆ ಮೈತ್ರಿ ಕುರಿತು ದೇವೇಗೌಡರು ಮತ್ತು ಕುಮಾರಸ್ವಾಮಿ ಗೆ ಸಲಹೆ ಕೊಟ್ಟ ಸ್ಥಳೀಯ ರಾಜ್ಯ ಜೆಡಿಎಸ್ ನಾಯಕರು ‘ಲೋಕ’ ಮೈತ್ರಿ ಮಾತುಕತೆ ಫೈನಲ್ ವೇಳೆ ಪರಿಷತ್ ವಿಚಾರ ಪ್ರಸ್ತಾಪ ಮಾಡಲು ಹೆಚ್ಡಿಕೆ ಚಿಂತನೆ ನಡೆಸಿದ್ದು ಮುಂದೆ ಬರಲಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಪರಿಷತ್ ಚುನಾವಣೆ ಮೈತ್ರಿ ಸಿದ್ದತೆ ಕೂಡ ನಡೆಯುತ್ತಿದೆ. 1.ಬೆಂಗಳೂರು ಪದವೀದರರ ಕ್ಷೇತ್ರ 2.ಬೆಂಗಳೂರು ಶಿಕ್ಷಕರ ಕ್ಷೇತ್ರ 3.ದಕ್ಷಿಣ ಶಿಕ್ಷಕರ ಕ್ಷೇತ್ರ 4.ನೈರುತ್ಯ ಶಿಕ್ಷಕರ ಕ್ಷೇತ್ರ 5.ಆಗ್ನೇಯ ಶಿಕ್ಷಕರ ಕ್ಷೇತ್ರ 6.ಈಶಾನ್ಯ ಪದವಿದರರ ಕ್ಷೇತ್ರ 7.ನೈರುತ್ಯ ಪದವಿದರ ಕ್ಷೇತ್ರಕ್ಕೆ ಜೂನ್ ನಲ್ಲಿ ಚುನಾವಣೆ ಜೆಡಿಎಸ್ ಪ್ರಬಲವಾಗಿರುವ ಕಡೆ…

Read More

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದಲ್ಲಿ ತನ್ನ 14 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಬೇಸರದಲ್ಲಿ ತಂದೆಯೂ ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ. ಮೃತರನ್ನು ಪೆರ್ಲ ನಿವಾಸಿ ಯೊಗೀಶ್ ಪೂಜಾರಿ (41) ಎಂದು ಗುರುತಿಸಲಾಗಿದೆ. ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಯೊಗೀಶ್ ಪೂಜಾರಿ ಕೂಡ ಸೂಸೈಡ್ ಮಾಡಿಕೊಂಡಿದ್ದಾರೆ. ಇದೇ ತಿಂಗಳ ಜನವರಿ 4 ರಂದು ಪುತ್ರ ಯಕ್ಷಿತ್ (14) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ಮಗನ ಉತ್ತರ ಕ್ರಿಯೆ ಜನವರಿ 14 ರಂದು ಭಾನುವಾರ ನಡೆದಿತ್ತು. ಇದಾದ ಬಳಿಕ ಯೋಗೀಶ್ ಪೂಜಾರಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ ಯಕ್ಷಿತ್, ಉಜಿರೆ ಖಾಸಗಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು. ಕೆಲದಿನಗಳ ಹಿಂದೆ ಯಕ್ಷಿತ್ ಹಾಗೂ ಆತನ 6 ವರ್ಷದ ತಮ್ಮನ ಜೊತೆ ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ಯಕ್ಷಿತ್ ಹೊಟ್ಟೆ ಮೇಲೆ ತಮ್ಮ ಕಚ್ಚಿ ಗಾಯ ಮಾಡಿದ್ದ. ಈ ವಿಚಾರದಲ್ಲಿ ನೊಂದು ತಮ್ಮನ…

Read More

ಹಾವೇರಿ:- ಹಾವೇರಿ ಜಿಲ್ಲೆಯಾದ್ಯಂತ ರಾಮ ನಾಮ ಜಪ ಶುರುವಾಗಿದೆ. ರಾಣೆಬೆನ್ನೂರು ನಗರದ ಬೇಕರಿಯಲ್ಲಿ ಶುಗರ್ ಪೇಸ್ಟ್​ ಬಳಸಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಬೇಕರಿ ಸರ್ಕಲ್ ಎಂಬ ಹೆಸರಿನ ಬೇಕರಿಯಲ್ಲಿ 35 ಕೆ.ಜಿ ಶುಗರ್ ಪೇಸ್ಟ್ ಕೇಕ್ ನಿಂದ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸುಮಾರು 40 ಸಾವಿರ ಖರ್ಚು ಮಾಡಲಾಗಿದೆ. ಸತತ 5 ದಿನಗಳ ಪರಿಶ್ರಮದಿಂದಾಗಿ ಅದ್ಭುತವಾದ ರಾಮ ಮಂದಿರ ನಿರ್ಮಾಣವಾಗಿದೆ. ಈ ಕೇಕ್ ಮಂದಿರ ರಾಣೆಬೆನ್ನೂರು ನಗರದ ಜನರ ಗಮನ ಸೆಳೆಯುತ್ತಿದೆ. ಜನವರಿ 22ರಂದು ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಇಂದಿನಿಂದ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ನಾಳೆ ಮಂದಿರ ಆವರಣಕ್ಕೆ ರಾಮಲಲ್ಲಾ ಮೂರ್ತಿ ಪ್ರವೇಶವಾಗಲಿದ್ದು, ಜನವರಿ 18ರಂದು ಗರ್ಭಗುಡಿಯಲ್ಲಿ ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ರಾಮನ ಮೂರ್ತಿ ಇರಿಸಲಾಗುತ್ತದೆ.

Read More

ಕೆಲವು ದಿನಗಳಿಂದ ಕಾಟೇರ (Katera) ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ. ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಒಂದು ಕಡೆ ಸೆಲೆಬ್ರಿಟಗಳು ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಕಾಟೇರ ಸಿನಿಮಾ ರಿಲೀಸ್ ಗಳಿಕೆಯೂ ಭರ್ಜರಿಯಾಗಿದೆ. ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಕುರಿತಂತೆ ದರ್ಶನ್…

Read More

ಚಿಕ್ಕಬಳ್ಳಾಪುರ:- ಅರೆಬೆತ್ತಲೆಯಾಗಿ ನಡುರಸ್ತೆಯಲ್ಲೇ ತಮಿಳುನಾಡಿನ ಮಂಗಳಮುಖಿ ಭಾರೀ ಹೈಡ್ರಾಮಾ ನಡೆಸಿದ್ದಾನೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ಜರುಗಿದೆ. KSRTC ಬಸ್ಸಿನಲ್ಲಿ ಮಂಗಳಮುಖಿ ಪ್ರಯಾಣಿಸುತ್ತಿದ್ದಾಗ ಕಂಡಕ್ಟರ್​​ ಮುಂದೆ ಹೋಗು ಎಂದಿದಕ್ಕೆ ಅವರಿಬ್ಬರ ಮಧ್ಯೆ ಪರಸ್ಪರ ವಾಗ್ವಾದ ನಡೆದಿದೆ. ಜೊತೆಗೆ, ಬಸ್ ಪ್ರಯಾಣಿಕರು ಹಾಗೂ ಕಂಡೆಕ್ಟರ್ ಜೊತೆಗೆ ಮಂಗಳಮುಖಿ ವಾಗ್ವಾದಕ್ಕೆ ಇಳಿದಿದ್ದಾಳೆ. ಇದರಿಂದ ಮಂಗಳಮುಖಿಯನ್ನ ಕಂಡಕ್ಟರ್​​ ಬಸ್ಸಿನಿಂದ ಇಳಿಸಿದ್ದಕ್ಕೆ ನಡುರಸ್ತೆಯಲ್ಲೇ ಹೈಡ್ರಾಮಾ ನಡೆಸಿದ್ದಾಳೆ. ಒಂದು ಹಂತದಲ್ಲಿ, ಮೈಮೇಲೆ ಹಾಕಿಕೊಂಡಿದ್ದ ಶರ್ಟ್ ಬಿಚ್ಚಿ ಸಂಪೂರ್ಣ ಬೆತ್ತಲಾಗುವುದಾಗಿಯೂ ಮಂಗಳಮುಖಿ ಬೆದರಿಕೆ ಹಾಕಿದಳು. ಮಂಗಳಮುಖಿಯನ್ನು ವಶಕ್ಕೆ ಪಡೆದು ಪೊಲೀಸರು ಸಮಾಧಾನ ಹೇಳಿದರು. ನಗರಠಾಣೆ ಪಿಎಸ್‍ಐ ನಂಜುಂಡಯ್ಯ ಸಮಾಧಾನ ಪಡಿಸಿದರು. ಕೊನೆಗೆ, ಮಂಗಳಮುಖಿಗೆ ಹೊಸ ಬಟ್ಟೆ ಕೊಡಿಸಿ, 500 ರೂಪಾಯಿ ಹಣ ನೀಡಿ ಬೀಳ್ಕೊಡುಗೆ ನೀಡಲಾಯಿತು ಎಂದು ತಿಳಿದು ಬಂದಿದೆ.

Read More

ಬೆಂಗಳೂರು:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ನಡೆದಿದ್ದು ಡಿಸಿಎಂ ಡಿ.ಕೆ. ಶಿವಕುಮೃ ಅವರು ಜನರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕಮಾರ್‌ ಅವರು, ನಾಗರಿಕರ ಅಹವಾಲು/ಕುಂದು-ಕೊರತೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು. ಪಶ್ಚಿಮ ವಲಯದ ಗಾಂಧಿನಗರ, ಮಲ್ಲೇಶ್ವರ ಹಾಗೂ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರಗಳನ್ನು ಒಟ್ಟುಗೂಡಿಸಿ ಶೇಷಾದ್ರಿಪುರಂನ ಶಿರೂರ್ ಆಟದ ಮೈದಾ‌ನದಲ್ಲಿ ಹಮ್ಮಿಕೊಂಡಿದ್ದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿಕಲ‌ ಚೇತನರು ಹಾಗೂ ಹಿರಿಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ವೇಳೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್, ಶ್ರೀ ಬಿ.ಝಡ್ ಜಮೀರ್ ಅಹ್ಮದ್ ಖಾನ್, ಮಲ್ಲೇಶ್ವರಂ ಶಾಸಕರಾದ ಡಾ. ಸಿ.ಎನ್ ಅಶ್ವತ್ಥ ನಾರಾಯಣ್, ಮಾಜಿ ರಾಜ್ಯ ಸಭಾ ಸದಸ್ಯರಾದ ರಾಜೀವ್ ಗೌಡ, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್…

Read More

ದೊಡ್ಡಬಳ್ಳಾಪುರ:- ಘಾಟಿ ಸುಬ್ರಹ್ಮಣ್ಯ ರಥೋತ್ಸವದಲ್ಲಿ ತಪ್ಪಿದ ಅನಾಹುತ ತಪ್ಪಿದ್ದು, ಕೂದಲೆಳೆ ಅಂತರದಲ್ಲಿ ಮಹಿಳೆ ಪಾರಾದ ಘಟನೆ ಜರುಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಇಂದು ಬ್ರಹ್ಮ ರಥೋತ್ಸವ ನಡೆದಿದೆ. ಬ್ರಹ್ಮ ರಥೋತ್ಸವದ ವೇಳೆ ಭಾರಿ ಅನಾಹುತವೊಂದು ತಪ್ಪಿದೆ. ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿ ಚಕ್ರದ ಬಳಿ ಮಹಿಳೆ ಬಿದ್ದಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಮತ್ತು ದೇವಸ್ಥಾನದ ಸಿಬ್ಬಂದಿ ಮಹಿಳೆಯನ್ನ ಮೇಲಕ್ಕೆ ಎತ್ತಿದಿದ್ದಾರೆ. ಬಳಿಕ ಮಹಿಳೆಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಮಹಿಳೆ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಪುಷ್ಯ ಶುದ್ದ ಷಷ್ಟಿ ಹಿನ್ನೆಲೆಯಲ್ಲಿ ಇಂದು ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು. ಮದ್ಯಾಹ್ನ 12.15ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ಮುನಿಯಪ್ಪ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು

Read More