ಮಂಡ್ಯ: ನಮ್ಮ ಸರ್ಕಾರ ಕೆಡವಲು ಬಿಜೆಪಿಯಿಂದ 50 ಕೋಟಿ ಅಲ್ಲ 100 ಕೋಟಿ ರೂ. ಆಫರ್ ಬಂಧಿದೆ ಎಂದು ಶಾಸಕ ಗಣಿಗ ರವಿಕುಮಾರ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಸರ್ಕಾರದಲ್ಲಿ ಲೂಟಿ ಮಾಡಿರುವ ಹಣದಿಂದ ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ಪ್ಲಾನ್ ಮಾಡಿದೆ. ಕೆಲವರು ಪೆನ್‌ಡ್ರೈವ್ ತೋರಿಸಿ ರಿವಿಲ್ ಮಾಡಿಲ್ಲ, ನಾವು ತೋರಿಸಿದರೆ ಖಂಡಿತ ರಿವಿಲ್ ಮಾಡುತ್ತೇವೆ. ನಮ್ಮ ಬಳಿ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳಿವೆ. ಕಿತ್ತೂರು ಶಾಸಕ ಬಾಬು, ಚಿಕ್ಕಮಗಳೂರು ಶಾಸಕ ತಮ್ಮಣ್ಣರನ್ನ ಯಾಕೆ ಸಂಪರ್ಕಿಸಿದ್ದರು? ಯಾವ್ಯಾವ ಹೋಟೆಲ್, ಏರ್‌ಪೋರ್ಟ್, ಗೆಸ್ಟ್ ಹೌಸ್‌ನಲ್ಲಿ ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಆಡಿಯೋ, ವಿಡಿಯೋ, ಸಿಡಿ, ಪೆನ್‌ಡ್ರೈವ್ ಸೇರಿದಂತೆ ಮುಂದುವರಿದು ಐ ಕ್ಲೌಡ್ ಕೂಡ ಇದೆ ಎಂದರು. https://ainlivenews.com/farmers-note-5-lakhs-per-acre-if-grown-for-white-sevanti-profit/ ನಮ್ಮ ಶಾಸಕರನ್ನ ಎಲ್ಲೆಲ್ಲಿ ಸಂಪರ್ಕಿಸಿದ್ದರು? ಏನೇನು ಆಫರ್ ಮಾಡಿದ್ದರು? ಎನ್ನುವುದನ್ನು ಶೀಘ್ರದಲ್ಲೇ ಮಾಧ್ಯಮಗಳ ಮೂಲಕ ದಾಖಲೆ ಬಿಡುಗಡೆ ಮಾಡುತ್ತೇವೆ. ಸರ್ಕಾರ ಕೆಡವಲು ಪ್ರಯತ್ನಿಸದವರು…
Author: AIN Author
ಮೈಸೂರು: ಬೆಮಲ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದಲ್ಲಿ ನಡೆದಿದೆ. ಬೆಮಲ್ ಮ್ಯಾನೇಜರ್ ಮೋಹನ್ (54) ಮೃತ ದುರ್ದೈವಿಯಾಗಿದ್ದು, https://ainlivenews.com/5-star-rating-for-these-3-cars-of-mahindra-company/ ಮೈಸೂರಿನ ಬೋಗಾದಿ ಬಳಿಯ ಅಪಾರ್ಟ್ಮೆಂಟ್‌ನಲ್ಲಿದ್ದ ಮೋಹನ್ ಎಂದಿನಂತೆ ಭಾನುವಾರ ಬೆಳಿಗ್ಗೆ ಕರ್ತವ್ಯಕ್ಕೆ ತೆರಳಿದ್ದರು. ಬಳಿಕ ದಟ್ಟಗಳ್ಳಿ ಬಳಿಯ ಕೆಇಬಿ ಸಮುದಾಯ ಭವನದ ವಾಚ್‌ಮ್ಯಾನ್ ಶೆಡ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುವೆಂಪುನಗರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗೋಕಾಕ- ನಾಡಿನಾದ್ಯಂತ ನಡೆಯುತ್ತಿರುವ ಸಂತ ಶ್ರೇಷ್ಠ ಕನಕದಾಸರ ಜಯಂತಿಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಕೋರಿದ್ದಾರೆ. https://ainlivenews.com/trying-to-sexually-harass-a-minor-girl-by-undressing-youth-arrested/ ಕನಕದಾಸರು ಸರ್ವ ಶ್ರೇಷ್ಠ ದಾಸರು. ಇತರ ದಾಸರಿಗಿಂತ ಭಿನ್ನವಾದವರು. ಸಾಮಾನ್ಯನ ಬದುಕು ಹಸನಾಗಬೇಕು ಎಂಬ ಹಂಬಲ ಅವರದ್ದಾಗಿತ್ತು. ಕನ್ನಡ ಮನಸ್ಸಿನ ವೈಚಾರಿಕ ಪರಂಪರೆಯ ಮಹತ್ವದ ಕೊಂಡಿಯಾಗಿದ್ದರು ಕನಕದಾಸರು. ಕೇಡುಗಳಿಲ್ಲದ ವರ್ಗ, ಜಾತಿ, ಅಸಮಾನತೆಗಳಿಲ್ಲದ ನಮ್ಮ ಭಾರತೀಯ ಸಮ ಸಮಾಜದ ಕನಸು ಬಿತ್ತುವವರಾಗಿ ಕಾಣಿಸುತ್ತಾರೆ. ಮನುಷ್ಯನಾಗಲಿ, ದೇವನಾಗಲೀ ಎಲ್ಲದರಲ್ಲಿ ಬದ್ಧತೆ ಇರಬೇಕು ಎಂಬ ನಂಬಿಕೆಗಳನ್ನು ಇಟ್ಟುಕೊಂಡಿದ್ದರು. ದೇವಸ್ಥಾನಗಳು ಭಕ್ತರ ಕಾಮಧೇನುವಾಗಬೇಕು. ಕೇವಲ ಅಡಂಬರಕ್ಕೆ ನಮ್ಮ ಭಕ್ತಿ ಸಿಮೀತವಾಗಬಾರದು. ದೇವರು- ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಯಾವುದೇ ಕೇಡು ಆಗಬಾರದು. ಮುಕ್ತವಾದ ಮಾನವ ಸಮಾಜವು ನಿರ್ಮಾಣವಾಗಬೇಕು ಎಂಬುದನ್ನು ದಾಸರು ತಮ್ಮ ಕೀರ್ತನೆಗಳಲ್ಲಿ ಒತ್ತಿ ಹೇಳಿದ್ದಾರೆ. ಶ್ರೇಷ್ಠ ದಾರ್ಶನಿಕರಾಗಿರುವ ಕನಕದಾಸರು ಸಾರಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಭ ಸಂದೇಶದಲ್ಲಿ ಹೇಳಿದ್ದಾರೆ.
ಆನೇಕಲ್:-ಬೆಂಗಳೂರು ಹೊರವಲಯದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಕ್ಕದ ಮನೆ ಯುವಕರಿಂದ ಸುಮಾರು 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ಜರುಗಿದೆ. https://ainlivenews.com/rudresh-suicide-case-in-tehsildars-office-this-is-not-a-suicide-but-a-murder/ ಆರೋಪಿಗಳನ್ನು ಶ್ರೀಕಂಠ ಮತ್ತು ವಿಜಯ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕಿ, ಕಳೆದ ಶುಕ್ರವಾರ ರಾತ್ರಿ ಊಟ ಮಾಡಿ ಮನೆಯಿಂದ ಹೊರಬಂದಿದ್ದಳು. ಈ ವೇಳೆ ಚಾಕೊಲೇಟ್ ಕೊಡುವುದಾಗಿ ಅಸಾಮಿಗಳು, ಪುಸಲಾಯಿಸಿದ್ದರು. ಒಪ್ಪದಿದ್ದಾಗ ಸಮೀಪದ ದೇವಸ್ಥಾನದ ಬಳಿ ಎಳೆದೊಯ್ದು ಕಿರುಕುಳ ಕೊಟ್ಟಿದ್ದಾರೆ. ಬಾಲಕಿ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಬಟ್ಟೆ ಬಿಚ್ಚಲು ಯತ್ನಿಸಿದಾಗಿ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಕೂಡಲೇ ಆತಂಕಗೊಂಡ ಆರೋಪಿಗಳು, ಬಾಲಕಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಬಾಲಕಿ ತಾಯಿಯಿಂದ ದೂರು ನೀಡಲಾಗಿದ್ದು, ದೂರು ಆಧರಿಸಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಳಗಾವಿ:- ತಹಶೀಲ್ದಾರ್ ಕಚೇರಿಯಲ್ಲಿ ರುದ್ರೇಶ್ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆಯಲ್ಲ ಕೊಲೆ ಎಂದು ಬಂತು ಅನಾಮಧೇಯ ಪತ್ರ ಬಂದಿದೆ. https://ainlivenews.com/beware-folks-your-bpl-card-can-get-canceled-too/ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ’ ಎಂಬ ಒಕ್ಕಣೆಯುಳ್ಳ ಅನಾಮಧೇಯ ಪತ್ರವೊಂದು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ, ಪ್ರಕರಣದ ತನಿಖಾಧಿಕಾರಿ ಸೇರಿ ಹಲವರಿಗೆ ಬಂದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣದ ಎ1 ತಹಶಿಲ್ದಾರ ಬಸವರಾಜ ನಾಗರಾಳ, ಎ2 ಅಶೋಕ ಕಬ್ಬಲಿಗೇರ್, ಎ3 ಹೆಬ್ಬಾಳ್ಕರ್ ಪಿಎ ಸೋಮುಗೆ ಜಾಮೀನು ಸಿಕ್ಕ ಕೆಲವೇ ದಿನಗಳಲ್ಲಿ ಈ ಪತ್ರ ಬಂದಿರುವುದು ಗೊತ್ತಾಗಿದೆ. ಅಂಚೆ ಮೂಲಕ ಅನಾಮಧೇಯ ವ್ಯಕ್ತಿಯ ಪತ್ರ ಬಂದಿದೆ. ಅನಾಮಧೇಯ ಪತ್ರದಲ್ಲಿ, ‘ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ. ತಹಶಿಲ್ದಾರ್ ಆಪ್ತ ಡ್ರೈವರ್ ಯಲ್ಲಪ್ಪ ಬಡಸದ ಕೊಲೆಗೆ ಸೂತ್ರದಾರ. ತಹಶಿಲ್ದಾರರ ಜೀಪ್ ಚೆಕ್ ಮಾಡಿದರೆ ಎಲ್ಲಾ ಸಿಗುತ್ತವೆ. ಅದು ಸೂಸೈಡ್ ಅಂತಿದ್ದಾರೆ. ಆದರೆ, ಆದ್ರೇ ಆತ್ಮಹತ್ಯೆ ಅಲ್ಲ. ಡ್ರೈವರ್ ಯಲ್ಲಪ್ಪನ ವಿಚಾರಣೆ ಮಾಡಿದರೆ ಕೊಲೆ ರಹಸ್ಯ…
ಬೆಂಗಳೂರು:- ಸಧ್ಯ ಇದೀಗ ಕರ್ನಾಟಕದಲ್ಲಿ ಹೆಚ್ಚು ಚರ್ಚೆಯಲ್ಲಿ ಹಾಗೂ ಗಾಸಿಪ್ ನಲ್ಲಿರುವ ವಿಚಾರ ಅಂದ್ರೆ ಅದು BPL ಕಾರ್ಡ್ ರದ್ದು ವಿಚಾರ. ಇದು ಅಕ್ಷರಸಹ ಫಲಾನುಭವಿಗಳ ನಿದ್ದೆಗೆಡಿಸಿದೆ. https://ainlivenews.com/demolition-of-more-than-70-houses-on-the-pretext-of-widening-the-road-the-family-came-to-the-street/ ಎಸ್, ಗೃಹಲಕ್ಷ್ಮೀ ಬೆನ್ನಲ್ಲೇ ಸರ್ಕಾರ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ರೇಷನ್ ಕಾರ್ಡ್ಗೆ ಸದ್ದಿಲ್ಲದೇ ಆಪರೇಷನ್ಗೆ ಇಳಿದಿದೆ. ರಾಜ್ಯಾದ್ಯಂತ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಸಾವಿರ ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಲು ಮುಂದಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಎಸ್ಟಿ ಬಳಸುತ್ತಿದ್ದ 16 ಸಾವಿರ ಫಲಾನುಭವಿಗಳಿಗೆ ಯೋಜನೆಯಿಂದ ಹೊರಗುಳಿಸಲಾಗಿತ್ತು. ಇದೀಗ ಅದೇ ಮಾನದಂಡದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾಗಿದೆ. ರಾಜ್ಯಾದ್ಯಂತ ಒಟ್ಟು 10 ಸಾವಿರ ಕಾರ್ಡ್ಗಳನ್ನ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಕೆಲವು ಕಾರ್ಡ್ಗಳನ್ನ ಬದಲಾವಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ನಿಂದ ಎಪಿಎಲ್ ಕಾರ್ಡ್ಗೆ ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಪಾವತಿ, ವಾರ್ಷಿಕ ಆದಾಯ, ಸರ್ಕಾರಿ ನೌಕರ ಹೀಗೆ ಹಲವು ಮಾನದಂಡ ಇಟ್ಟು ಬಿಪಿಎಲ್ ಕಾರ್ಡ್ ರದ್ದು ಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 9,441…
ಬಳ್ಳಾರಿ:- ರಸ್ತೆ ಅಗಲೀಕರಣಕ್ಕಾಗಿ 70ಕ್ಕೂ ಹೆಚ್ಚು ಮನೆಗಳ ನೆಲಸಮ ಮಾಡಿದ್ದು, ನೋಟಿಸ್ ನೀಡದೆ ತೆರವು ಆರೋಪ ಕೇಳಿ ಬಂದಿದೆ. https://ainlivenews.com/those-born-on-this-date-are-very-fond-of-lakshmi-and-live-like-kings-for-life/ ಬಾಪೂಜಿ ನಗರದ ಬಡಾವಣೆಯಲ್ಲಿ ಸುಮಾರು 70ಕ್ಕೂ ಹೆಚ್ಚು ಮನೆಗಳನ್ನು ರಸ್ತೆ ಅಗಲೀಕರಣದ ನೆಪ ಹೇಳಿ ಯಾವುದೇ ನೋಟಿಸ್ ಕೊಡದೆ ಮಹಾನಗರ ಪಾಲಿಕೆ ತೆರವುಗೊಳಿಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮನೆ ಕಳೆದುಕೊಂಡವರು ಬಹುತೇಕ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವಂತವರು. ರಸ್ತೆ ಪಕ್ಕದಲ್ಲಿ ಸಣ್ಣಪುಟ್ಟ ಮನೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದರು. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಇವರಿಗೆ ಮನೆ ಪತ್ರಗಳನ್ನು ಸಹ ನೀಡಿದೆ. ಹೀಗಿದ್ದಾಗ ಏಕಾಏಕಿ ಯಾವುದೇ ನೋಟಿಸ್ ಕೊಡದೆ ಮನೆಗಳನ್ನು ತೆರವು ಮಾಡಲಾಗಿದೆ ಎಂದು ಜನ ಆರೋಪಿಸಿದ್ದಾರೆ.
ಸಂಖ್ಯಾಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ಅವನ ರಾಡಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ ರಾಡಿಕ್ಸ್ ಅನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದರಿಂದ ವ್ಯಕ್ತಿಯ ಜೀವನದಿಂದ ಅವನ ಭವಿಷ್ಯದವರೆಗೆ ಬಹಳಷ್ಟು ಅಂದಾಜು ಮಾಡಬಹುದು. ಒಬ್ಬ ವ್ಯಕ್ತಿ 1 ರಿಂದ 31ರ ಸಂಖ್ಯೆಯ ನಡುವೆ ಯಾವುದೇ ದಿನದಲ್ಲಿ ಜನಿಸಬಹುದು. ಆದರೆ ರಾಡಿಕ್ಸ್ ಅನ್ನು 1 ರಿಂದ 9 ಅಂಕೆಗಳವರೆಗೆ ಮಾತ್ರ ಪರಿಗಣಿಸಲಾಗುತ್ತದೆ. https://ainlivenews.com/uproar-for-retail-petrol-station-staff-attacked-by-thugs/ ನಮ್ಮ ದೇಶದ ವೈವಿಧ್ಯಮಯ ಕಾರಣಗಳಿಗಾಗಿ ಇತರ ರಾಷ್ಟ್ರಗಳಿಗಿಂತ ಸದಾ ಭಿನ್ನವಾಗಿದೆ . ಇಲ್ಲಿನ ಆಚಾರ-ವಿಚಾರ ವಿದೇಶಿಯರಿಗೂ ಅಚ್ಚುಮೆಚ್ಚು. ಭಾರತೀಯರು ಪ್ರತಿನಿತ್ಯ ಪಾಲಿಸುವ ಜ್ಯೋತಿಷ್ಯಶಾಸ್ತ್ರ, ದೇವರ- ಪೂಜೆ ಪುನಸ್ಕಾರಗಳುಕೂಡ ಇತ್ತೀಚಿನ ದಿನಗಳಲ್ಲಿ ವಿದೇಶಿಯರ ಮನ ಸೆಳೆಯುತ್ತಿವೆ. ಹೀಗಿರುವಾಗ ಭಾರತೀಯರ ಪಾಲಿಗೆ ಜ್ಯೋತಿಷ್ಯ ಶಾಸ್ತ್ರ ಎಂಬುದು ಬಹು ಮುಖ್ಯವಾದ ಅಂಗ.. ಶಕುನಗಳನ್ನು ನೋಡಿ, ಎಲ್ಲಾ ಕಾರ್ಯವನ್ನು ಮಾಡುವ ಭಾರತೀಯರು ಜ್ಯೋತಿಷ್ಯಶಾಸ್ತ್ರದ ಮತ್ತೊಂದು ಭಾಗವಾದ ಸಂಖ್ಯಾಶಾಸ್ತ್ರಕ್ಕೂ ಅಷ್ಟೊಂದು ಮಹತ್ವ ನೀಡುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 6, 15 ಮತ್ತು 24 ರಂದು…
ಗದಗ:- ಚಿಲ್ಲರೆ ವಿಚಾರಕ್ಕೆ ಪುಂಡರಿಂದ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಘಟನ ಗದಗ ಜಿಲ್ಲೆಯ ಹರ್ತಿ ಗ್ರಾಮದ ಪೆಟ್ರೋಲ್ ಬಂಕ್ ನಲ್ಲಿ ಜರುಗಿದೆ. https://ainlivenews.com/ipl-2025-abd-tips-rcb-to-buy-south-africas-explosive-finisher/ ಐದಾರು ಜನರ ಯುವಕರ ಗುಂಪೊಂದು ಪೆಟ್ರೋಲ್ ಬಂಕ್ ಕೆಲಸಗಾರನ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ಮಾಡುವ ದೃಶ್ಯ ಪೆಟ್ರೋಲ್ ಬಂಕ್ ನ ಸಿ ಸಿ ಟಿವಿಯಲ್ಲಿ ಸೆರೆಯಾಗಿದೆ. ಪುಂಡರ ವಿರುಧ್ಧ ಆಕ್ರೋಶ ವ್ಯಕ್ತವಾಗಿದ್ದು, ಕ್ರಮಕ್ಕೆ ಆಗ್ರಹಿಸಲಾಗಿದೆ.
ಮೆಗಾ ಹರಾಜಿನಲ್ಲಿ ಸೌತ್ ಆಫ್ರಿಕಾದ ಸ್ಪೋಟಕ ಫಿನಿಷರ್ ಖರೀದಿಸಲು RCBಗೆ ಎಬಿಡಿ ಸಲಹೆ ಕೊಟ್ಟಿದ್ದಾರೆ. https://ainlivenews.com/three-pregnant-women-died-on-the-same-day-jameer-did-not-face-the-field/ ಪ್ರಸ್ತುತ ಆರ್‌ಸಿಬಿ ತಂಡಕ್ಕೆ ಫಿನಿಶರ್ ಒಬ್ಬರ ಅಗತ್ಯವಿದೆ. ಹೀಗಾಗಿ 6ನೇ ಕ್ರಮಾಂಕಕ್ಕಾಗಿ ಸೌತ್ ಆಫ್ರಿಕಾದ ಸ್ಪೋಟಕ ದಾಂಡಿಗ ಡೇವಿಡ್ ಮಿಲ್ಲರ್ ಅವರನ್ನು ಖರೀದಿಸಬೇಕು. ಆರ್‌ಸಿಬಿ ಅವರನ್ನು ಹರಾಜಿನಲ್ಲಿ ಖರೀದಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮಿಲ್ಲರ್ ಆಗಮನದಿಂದಾಗಿ ಆರ್‌ಸಿಬಿ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. ಡೇವಿಡ್ ಮಿಲ್ಲರ್ ಕಳೆದ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದರು. ಅಲ್ಲದೆ ಇದುವರೆಗೆ 130 ಪಂದ್ಯಗಳನ್ನಾಡಿರುವ ಅವರು 36.55 ರ ಸರಾಸರಿಯಲ್ಲಿ 2924 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧ ಶತಕ ಮತ್ತು 1 ಶತಕವನ್ನು ಗಳಿಸಿದ್ದಾರೆ. ಇನ್ನು 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಂಚುರಿ ಸಿಡಿಸಿದ್ದರು. ಇದೀಗ ಮೆಗಾ ಹರಾಜಿನಲ್ಲಿರುವ ಕಿಲ್ಲರ್ ಮಿಲ್ಲರ್ ಖ್ಯಾತಿಯ ಸೌತ್ ಆಫ್ರಿಕಾ ಫಿನಿಶರ್ ಅನ್ನು ಆರ್‌ಸಿಬಿ ತಂಡ ಖರೀದಿಸುವುದು ಉತ್ತಮ. ಈ…