Author: AIN Author

ಕಾರವಾರ:– ನಮ್ಮದು ವೀರ ಸಂತಾನ, ಹೇಡಿಗಳ ಸಂತಾನ ಅಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಒಂದು ಕೆನ್ನೆಗೆ ಹೊಡೆದ್ರೆ ಮತ್ತೊಂದು ಕೆನ್ನೆ ತೋರಿಸುವ ಸಂತಾನ ನಮ್ಮದಲ್ಲ. ಒಂದು ಕೆನ್ನೆಗೆ ಹೊಡೆದರೆ ನಿಮ್ಮ ತಲೆಯನ್ನೇ ತೆಗೆಯುವ ಸಂತಾನದವರು ನಾವು. ನಮ್ಮದು ವೀರ ಸಂತಾನ, ಹೇಡಿಗಳ ಸಂತಾನ ಅಲ್ಲ ಎಂದು ಗುಡುಗಿದರು. https://ainlivenews.com/a-huge-kadai-is-ready-to-make-ram-halwa-do-you-know-what-are-its-special-features/ ನಮ್ಮಮ್ಮ ತನ್ನ ಎದೆಹಾಲು ಕುಡಿಸಿ ಬೆಳೆಸಿದ್ದಾರೆ, ಬೇವರ್ಸಿ ಹಾಲನ್ನು ಅಲ್ಲ. ತಾಯಿ ಹಾಲು ಕುಡಿದಿದ್ದಕ್ಕೆ ಗಂಡುಭಾಷೆ ಹುಟ್ಟಿನಿಂದಲೇ ಬಂದಿದೆ. ಏಕವಚನದಲ್ಲಿ ನೀವು ಮಾತಾಡಿದ್ರೆ ನಾವೂ ಏಕಚನದಲ್ಲಿ ಮಾತನಾಡುತ್ತೇವೆ. ಸಿಎಂ ಸಿದ್ದರಾಮಯ್ಯನವರೇ ನೀವು ಸಭ್ಯತೆ ಬಗ್ಗೆ ಕಲಿತುಕೊಳ್ಳಿ. ವಿಧಾನಸಭೆಯಲ್ಲಿ ಶಾಸಕರಿಗೆ, ಪತ್ರಕರ್ತರಿಗೆ ಏಕವಚನದಲ್ಲಿ ಮಾತಾಡುತ್ತೀರಿ. ನಮಗೆ ತಾಕತ್‌ ಇಲ್ಲವಾ?, ನಮಗೆ ಮಾತನಾಡಲು ಬರೋದಿಲ್ಲವಾ? ಎಂದು ವಾಗ್ದಾಳಿ ನಡೆಸಿದರು.

Read More

ಬೆಂಗಳೂರು: ಫೆಬ್ರವರಿ 12ರಿಂದ ಫೆಬ್ರವರಿ 23ರವರೆಗೆ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 16ರಂದು ಕರ್ನಾಟಕ ರಾಜ್ಯ ಬಜೆಟ್​ ಮಂಡನೆಯಾಗಲಿದೆ. ವಿಧಾನಮಂಡಲ ಅಧಿವೇಶನ ಅಧಿವೇಶನದ ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಭಾಷಣ ಮಾಡಲಿದ್ದಾರೆ https://ainlivenews.com/cabinet-meeting-agreed-to-provide-10-units-of-additional-electricity/ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್‌ನಿಂದಲೇ  ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ  ರಾಜ್ಯ ಬಜೆಟ್‌ ನ್ನು ಫೆಬ್ರವರಿಯಲ್ಲಿ ಮಂಡಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿದೆ.

Read More

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಹಿಳೆಯರು ತುಂಬಾ ಹುಷಾರಾಗಿರಬೇಕು ಯಾಕಂದರೆ ಎಲ್ಲೆಂದರಲ್ಲಿ ಕಳ್ಳರು ಯಾವಾಗ ಬರ್ತಾರೆ ಅಂತಾನೆ ಗೊತ್ತಾಗಲ್ಲ ಹಾಗೆ ಮಹಿಳೆಯರು ತಮ್ಮ ಚಿನ್ನಾಭರಣ ಬಗ್ಗೆ ಕೂಡ ಎಚ್ಚರವಹಿಸಬೇಕು ಹಾಗೆ ಇಲ್ಲೊಬ್ಬ ಮಹಿಳೆ  ಅಪಾರ್ಟ್ಮೆಂಟ್ ನಲ್ಲಿ ಲಿಫ್ಟ್ ಗಾಗಿ ಕಾಯುತ್ತಿದ್ದ ವೇಳೆ ಕಿರಾತಕ ಬಂದು ಕುತ್ತಿಗೆಯಲ್ಲಿದ್ದ ಚನ್ನದ ಸರವನ್ನೇ ಎಗರಿಸಿದ್ದಾನೆ. ಆರ್ ಆರ್ ನಗರದ ರೈಸ್ ಪಾರ್ಟ್ ಅಪಾರ್ಟ್ಮೆಂಟ್ ನಲ್ಲಿ  ನಡೆದಿರುವ ಘಟನೆಯಾಗಿದ್ದು ಮನೆಗೆ ಹೊಗಲು ಲಿಫ್ಟ್ ಬೇಸ್ ಮೆಂಟ್ ನಲ್ಲಿ ಕಾಯುತ್ತಿದ್ದ ವೇಳೆ ಈ ಘಟನೆ ಜರುಗಿದೆ.ಎರಡು ಚಿನ್ನದ ಸರಗಳ್ಳತನ‌ ಮಾಡಿದ್ದ ಆರೋಪಿ‌ಯನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸುಮಂತ್ ನನ್ನ ಬಂಧಿಸಿದ ಆರ್ ಆರ್ ನಗರ ಪೋಲಿಸರು ಬಂಧಿತನಿಂದ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.

Read More

ನವದೆಹಲಿ: ಜನವರಿ 22ರಂದು ರಾಮನೂರಿನಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ಈ ದಿನಕ್ಕಾಗಿ ದೇಶಾದ್ಯಂತ ಜನ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಲ್ಲದೆ ಈ ದಿನ ರಜೆ ನೀಡಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು.  ಇದೀಗ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ನೀಡಲಾಗುವುದು. ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. https://ainlivenews.com/a-huge-kadai-is-ready-to-make-ram-halwa-do-you-know-what-are-its-special-features/ ಈ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಕೂಡ ಭಾಗವಹಿಸಬೇಕು ಎಂಬ ಕಾರಣಕ್ಕೆ ಭಾರತದಾದ್ಯಂತ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳನ್ನು ಅರ್ಧ ರಜೆ ನೀಡಲಾಗುವುದು ಎಂದು ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳು / ಇಲಾಖೆಗಳಿಗೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಜನವರಿ 22ರಂದು ಮಧ್ಯಾಹ್ನ 12.30ಕ್ಕೆ, ರಾಮ ಮಂದಿರದಲ್ಲಿ ರಾಮ ಲಲ್ಲಾನ…

Read More

ಬೆಂಗಳೂರು: ತಾವು ಕೇಂದ್ರ ಸಚಿವರಾಗುವ ವದಂತಿಗಳನ್ನು ಸಾರಾಸಗಟಾಗಿ ಅಲ್ಲಗಳೆದ ಮಾಜಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಯಾವ ಕಾರಣಕ್ಕೆ ಈ ಸುದ್ದಿ ಹುಟ್ಟಿಕೊಂಡಿತು ಎನ್ನುವುದು ಈಗಲೂ ನನಗೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ ಎಂದಿದ್ದಾರೆ. ನವದೆಹಲಿಯಲ್ಲಿ ಇಂದು ಬೆಳಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ನಾನು ಮಂತ್ರಿಯಾಗುತ್ತೇನೆ ಎನ್ನುವ ಸುದ್ದಿ ಯಾವ ಮೂಲಗಳಿಂದ ಅಷ್ಟು ಪ್ರಾಮುಖ್ಯತೆ ಪಡೆಯಿತೋ ಎನ್ನುವುದು ನನಗೆ ಗೊತ್ತಿಲ್ಲ. ಅದು ಎಲ್ಲಿಂದ ಬಂದಿತು, ಹುಟ್ಟಿತು ಎನ್ನವುದೂ ನನಗೆ ತಿಳಿದಿಲ್ಲ. ಮಾಧ್ಯಮಗಳ ಮೂಲಕವೇ ನನಗೆ ಆ ವಿಷಯ ಗೊತ್ತಾಯಿತು ಎಂದು ಹೇಳಿದರು. ಚುನಾವಣೆ ಹತ್ತಿರದಲ್ಲಿ ಇದೆ. ಎರಡು ತಿಂಗಳಷ್ಟೇ ಸಮಯ ಉಳಿದಿದೆ. ಈಗ ನಾನು ಮಂತ್ರಿಯಾಗಿ ಮಾಡುವುದು ಏನಿದೆ? ಇಷ್ಟು ಅಲ್ಪ ಅವಧಿಯಲ್ಲಿ ರಾಜ್ಯಕ್ಕೆ, ರಾಷ್ಟ್ರಕ್ಕೆ ನಾನು ಏನು ಕೆಲಸ ಮಾಡಲು ಸಾಧ್ಯ? ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ಏನನ್ನೂ ಮಾಡಲು ಸಾಧ್ಯವಿಲ್ಲ, ಅದರಿಂದ ಉಪಯೋಗವೂ ಇಲ್ಲ. ಯಾವ ಕಾರಣಕ್ಕೆ ಆ ಸುದ್ದಿ ಹುಟ್ಟಿಕೊಂಡಿತು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು…

Read More

ಬೆಳಗಾವಿ: ಕಾಂಗ್ರೆಸ್​​ನವರು ಬಿಜೆಪಿಯಿಂದ ಸಭ್ಯತೆ ಕಲಿಯುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಚಿವ ಹೆಚ್​ ಎಂ ರೇವಣ್ಣ ಹೇಳಿದ್ದಾರೆ. ಕಾಂಗ್ರೆಸ್​​ನವರು ಸಭ್ಯತೆ ಕಲಿಯಲಿ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘‘ಇದೇನು ಮೊದಲಲ್ಲ. ಈ ರಾಷ್ಟ್ರದಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ನಾವೆಲ್ಲರೂ ಅಪ್ಪಿ, ಒಪ್ಪಿ ಬಾಳುತ್ತಿದ್ದೇವೆ. ಆದರೆ, ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿದ್ದ ಆ ವ್ಯಕ್ತಿ ಸಂಸ್ಕಾರವಂತರಾಗಿ ಮಾತನಾಡುತ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರು ಎಷ್ಟು ಜಾಣರು ಎಂದರೆ ಒಳ್ಳೆಯ ಮಗು ಹುಟ್ಟಿದರೆ ನಮ್ಮದು, ಕೆಟ್ಟ ಮುಗು ಹುಟ್ಟಿದರೆ ಬೀದಿಯದ್ದು ಎನ್ನುತ್ತಾರೆ‘‘ ಎಂದು ಲೇವಡಿ ಮಾಡಿದರು. ಟೀಕೆ ಮಾಡಲು ಇವರಿಗೆ ಒಳ್ಳೆಯ ಪದಗಳೇ ಸಿಗುವುದಿಲ್ಲ. ಹಿಂದೆ ಜೆ ಎಚ್‌ ಪಟೇಲರು ಸೇರಿ ಅನೇಕ ರಾಜಕಾರಣಿಗಳು ಬಹಳ ತೀಕ್ಷ್ಣವಾಗಿ ಟೀಕೆ ಮಾಡುತ್ತಿದ್ದರು. ಆದರೆ, ಬಿಜೆಪಿಯವರಿಗೆ ಪದಗಳು ಸಿಗುವುದಿಲ್ಲವೇ? ಈ ರೀತಿ ಮಾತಾಡುವುದು ಸಾರ್ವಜನಿಕವಾಗಿ ಒಳ್ಳೆಯದಲ್ಲ. https://ainlivenews.com/trust-has-been-betrayed-actor-vasishtha-simha-thundered-against-the-director/ ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್​ ಎಂದು ಹೇಳುತ್ತಾರೆ.…

Read More

ಬೆಂಗಳೂರು: ದೇಶದೆಲ್ಲೆಡೆ ಅಯೋಧ್ಯೆ ರಾಮಮಂದಿರದಲ್ಲಿನ (Ayodhya Ram Mandir) ಪ್ರಾಣ ಪ್ರತಿಷ್ಠೆ ಸಮಾರಂಭದ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಶ್ರೀರಾಮ ಜಪ, ಭಜನೆ (Ram Bhajan) ಮೊಳಗುತ್ತಿದೆ. ದೇಶದ ಕೋಟ್ಯಂತರ ಭಾರತೀಯ ಶ್ರೀರಾಮನ ಸ್ಮರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಬೆಂಗಳೂರಿನಿಂದ ಅಯೋಧ್ಯೆಗೆ (Bengaluru-Ayodhya Flight) ಹೊರಟಿದ್ದ ಭಕ್ತರ ತಂಡವೊಂದು ವಿಮಾನದಲ್ಲಿ ರಾಮಜಪ ಮಾಡಿ ಗಮನ ಸೆಳೆಯಿತು. ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ ಕೇಳಿಬಂತು. ವಿಮಾನ ನಿಲ್ದಾಣದ ಬೋರ್ಡಿಂಗ್‌ ಗೇಟಲ್ಲಿ ಭಕ್ತರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ರಾಮಭಜನೆ ಮಾಡುತ್ತಾ ವಿಮಾನ ಏರಿದ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ಢಕ್ಕೆ ಭಾರಿಸುತ್ತ, ಕಂಸಾಳೆ ಸದ್ದು ಮಾಡುತ್ತ, ‘ಶ್ರೀರಾಮ.. ಜಯ ರಾಮ.. ಜಯ ಜಯ ರಾಮ’ ಎಂದು ಭಜಿಸುತ್ತಾ ಭಕ್ತರು ವಿಮಾನ ಏರಿದ್ದಾರೆ. ಮತ್ತೆ ಒಂದು ಕಡೆ ನಿಂತು ‘ಭೋಲೊ ಭಾರತ್‌ ಮಾತಾಕಿ’, ‘ರಾಮಚಂದ್ರ ಮಹಾರಾಜ್‌ಕೀ’, ‘ಅಯೋಧ್ಯಾ ವಾಸಿಕೀ’ ಜೈ ಎಂದು ಘೋಷಣೆ ಕೂಗಿದ್ದಾರೆ.

Read More

ಬೆಂಗಳೂರು: 10 ಯುನಿಟ್ ಹೆಚ್ಚುವರಿ ವಿದ್ಯುತ್ ನೀಡುವ ವಿಚಾರ ಬಗ್ಗೆ  ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು,  200 ಯುನಿಟ್ ವಿದ್ಯುತ್ ಉಚಿತ ಅಂತ ಹೇಳಿದ್ವಿ. ಇದರನ್ವಯ ವಾರ್ಷಿಕ ಸರಾಸರಿ ಮೇಲೆ 10% ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅವಕಾಶ ಕೊಡಲಾಗಿತ್ತು ಎಂದರು 20,30,40 ಯುನಿಟ್ ಬಳಕೆ ಮಾಡೋ ಗ್ರಾಹಕರಿಗೆ 10% ಹೆಚ್ಚುವರಿ ಯುನಿಟ್ ಅಂದರೆ ಕಡಿಮೆ ವಿದ್ಯುತ್ ಸಿಗುತ್ತಿತ್ತು. ಹೀಗಾಗಿ 48 ಯುನಿಟ್ ಒಳಗೆ ಉಪಯೋಗ ಮಾಡುವ ಗ್ರಾಹಕರಿಗೆ 10% ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಒಪ್ಪಿಕೊಂಡಿದೆ. ಮುಂದಿ‌ನ ತಿಂಗಳ ಬಿಲ್ ನಿಂದಲೇ ಇದನ್ನ ಜಾರಿ ಮಾಡ್ತೀವಿ. ಸರ್ಕಾರಕ್ಕೆ ಇದರಿಂದ 500 ಕೋಟಿ ವಾರ್ಷಿಕ ಹೆಚ್ಚುವರಿ ಹಣ ಖರ್ಚಾಗಲಿದೆ. (ಉದಾಹರಣೆ- 20 ಯುನಿಟ್ ವಿದ್ಯುತ್ ಬಳಕೆ ಮಾಡೋ ಗ್ರಾಹಕನಿಗೆ 10% ಅಂದರೆ 2 ಯುನಿಟ್ ‌ಮಾತ್ರ ಹೆಚ್ಚುವರಿ ಸಿಗುತ್ತಿತ್ತು. ಈಗ 10 ಯುನಿಟ್ ಕೊಡುವುದರಿಂದ 20+10 ಸೇರಿ 30…

Read More

ಅಯೋಧ್ಯಾ ಶ್ರೀರಾಮ ಮಂದಿರ (Shreerama Mandir) ಉದ್ಘಾಟನೆಯನ್ನು ನೋಡಲು ಇಡೀ ದೇಶವೇ ಎದುರು ನೋಡುತ್ತಿದೆ. ಈ ವೇಳೆ, ಜ.22ರಂದು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ರಾಮ ನಾಮ ಭಜನೆ ಮಾಡಿ ಎಂದು ವಿಡಿಯೋ ಸಂದೇಶ ನೀಡಿದ್ದ ಖ್ಯಾತ ಹಿನ್ನೆಲೆ ಗಾಯಕಿ, ರಾಷ್ಟ್ರ ಪ್ರಶಸ್ತಿ ವಿಜೇತರು ಕೆ.ಎಸ್. ಚಿತ್ರಾ (K.s Chithra) ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಪರ ಮತ್ತು ವಿರೋಧದ ಚರ್ಚೆ ಶುರುವಾಗಿದೆ. ಗಾಯಕಿ ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪುಟ್ಟದೊಂದು ವಿಡಿಯೋ ಅಪ್‌ಡೇಟ್ ಮಾಡಿದ್ದರು. ಈ ವಿಡಿಯೋದಲ್ಲಿ ಚಿತ್ರಾ ಅವರು ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಎಲ್ಲರೂ ಶ್ರೀರಾಮ, ಜಯ ರಾಮ, ಜಯ ಜಯ ರಾಮ ಎಂಬ ಮಂತ್ರವನ್ನು ಭಜನೆ ಮಾಡುವಂತೆ ಮನವಿ ಮಾಡಿದ್ದರು ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ…

Read More

ತಮಗೆ ನಂಬಿಕೆ ದ್ರೋಹವಾಗಿದೆ. ಇನ್ಮುಂದೆ ಸಿನಿಮಾ ಒಪ್ಪಿಕೊಳ್ಳುವಾಗ ಅಗ್ರಿಮೆಂಟ್ ಕ್ಲಿಯರ್ ಆಗಿ ಮಾಡಿಕೊಳ್ಳಬೇಕು ಅನಿಸಿದೆ ಎಂದಿದ್ದಾರೆ ನಟ ವಸಿಷ್ಠ ಸಿಂಹ (Vasishtha Simha). ತಾವು ಇಷ್ಟಪಟ್ಟು ಮಾಡಿದ್ದ ಕಾಲಚಕ್ರ (Kalachakra) ಸಿನಿಮಾವನ್ನು ನಿರ್ದೇಶಕ ಸುಮಂತ್ ಕ್ರಾಂತಿ (Sumanth Kranti) ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರಂತೆ. ಹೀಗಾಗಿ ಸಿಂಹಗೆ ಸಹಜವಾಗಿ ಬೇಸರವಾಗಿದೆ. ಒಂದು ಸಿನಿಮಾ ಮಾಡುವಾಗ ಎಲ್ಲರೂ ಕಷ್ಟ ಪಡುತ್ತಾರೆ. ಅದನ್ನು ತೆರೆಯ ಮೇಲೆ ನೋಡಲು ಇಷ್ಟ ಪಡುತ್ತಾರೆ. ಆದರೆ, ಕಾಲಚಕ್ರ ಸಿನಿಮಾ ಹಾಗಾಗಲಿಲ್ಲ. ಯಾರದೋ ಮೇಲಿನ ಕೋಪಕ್ಕೆ ನಿರ್ದೇಶಕರು ಎಲ್ಲರ ಕನಸು ನಾಶ ಮಾಡೋದು ಸರಿ ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಕಾಲಚಕ್ರ ಸಿನಿಮಾದ ಬಗ್ಗೆ ಸಿಂಹಗೆ ಅತೀವ ನಿರೀಕ್ಷತೆ ಇತ್ತು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹಲವಾರು ಬಾರಿ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಆದರೆ, ಯೂಟ್ಯೂಬ್ ನಲ್ಲಿ ಹಾಕಿದ್ದು ಯಾಕೆ ಎನ್ನುವುದನ್ನು ಸಿಂಹ ಸ್ಪಷ್ಟ ಪಡಿಸಲಿಲ್ಲ. ಯಾರದೋ ಮೇಲಿನ ಕೋಪಕ್ಕೆ ಎಂದು ಹೇಳುವ ಮೂಲಕ ಚಿತ್ರತಂಡದಲ್ಲಿ ಯಾವುದೂ ಸರಿ…

Read More