Author: AIN Author

ತುಮಕೂರು: ಜಿಲ್ಲೆಯ ಕುಣಿಗಲ್‌ ತಾಲೂಕಿನಲ್ಲಿರುವ 421.32 ಎಕರೆ ಸ್ಟಡ್‌ ಫಾರ್ಮ್‌ನಲ್ಲಿ ಟೌನ್‌ಶಿಪ್‌ ನಿರ್ಮಾಣಕ್ಕೆ ಸಂಚು ರೂಪಿಸಲಾಗಿದೆ. ಬಂಡವಾಳ ಶಾಹಿಗಳ ಮೆಗಾ ಪ್ಲ್ಯಾನ್‌ಗೆ ಸರಕಾರದ ಮಟ್ಟದಲ್ಲೂ ಭಾರಿ ಲಾಬಿ ನಡೆದಿದೆ. ಪಶುಸಂಗೋಪನಾ ಇಲಾಖೆ ಸುಪರ್ದಿಯಲ್ಲಿರುವ ಸ್ಟಡ್‌ ಫಾರ್ಮ್‌ ಮೇಲೆ ನಗರಾಭಿವೃದ್ಧಿ ಇಲಾಖೆ ಕಣ್ಣು ನೆಟ್ಟಿದೆ. ಈಗಾಗಲೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್‌ ಹಾಗೂ ಎರಡೂ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.  ಕುಣಿಗಲ್‌ ಅಸ್ಮಿತೆಯ ಉಳಿವಿಗಾಗಿ ಎಚ್ಚರಿಕೆ ಕರೆ ರವಾನಿಸಲು ಸ್ಥಳೀಯರು ನಿರ್ಧರಿಸಿದ್ದು, ರಸ್ತೆಗಳಿದು ಪ್ರತಿಭಟಿಸಿದ ಹೋರಾಟಗಾರರು.. ಸ್ಟಡ್ ಫಾಮ್೯ ಪಶುಸಂಗೋಪನೆ ಇಲಾಖೆಯಲ್ಲೇ ಉಳಿಸುವಂತೆ  ಮನವಿ ಮಾಡಲಾಗಿದೆ. ಇನ್ನೂ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರಾಜೇಶ್ ಗೌಡ, ಜೆಡಿಎಸ್ ಜಗದೀಶ್, ಮುಖ್ಯಮಂತ್ರಿ ಚಂದ್ರು,ಸಾಮಾಜಿಕ ಹೋರಾಟಗಾರ ಚೇತನ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ನಗರದಲ್ಲಿ ಹೆಸ್ಕಾಂ ನಗರ ಘಟಕ ವತಿಯಿಂದ ಸಾರ್ವಜನಿಕರಿಗೆ ಹುಬ್ಬಳ್ಳಿ ವಿದ್ಯುತ ಸರಬರಾಜು ಕಂಪನಿ ನಿಯಮಿತ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯುತ್ ಸುರಕ್ಷತಾ ಮಾಸಾಚರಣೆ ಹಾಗೂ ಸುರಕ್ಷತಾ ಅಭಿಯಾನ ಮತ್ತು ಬೀದಿ ನಾಟಕ ಕಾರ್ಯಕ್ರಮ ನಡೆಯಿತು. ಯಾವಾಗಲೂ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಐ ಎಸ್ ಐ ಅಧಿಕೃತ ಗುಣಮಟ್ಟದ ಸಾಮಗ್ರಿಗಳನ್ನ ಉಪಯೋಗಿಸಿ. ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯನ್ನು ಮುಟ್ಟಬೇಡಿ ಹಾಗೂ ಈ ವಿಷಯವನ್ನು ಕೂಡಲೇ ನಿಗಮದ ಅಧಿಕಾರಿಗಳಿಗೆ 1912 ಕರೆ ಮಾಡಿ ತಿಳಿಸಿ. ವಿದ್ಯುತ್ ಕಂಬಗಳಿಗೆ ಪ್ರಾಣಿಗಳನ್ನು ಕಟ್ಟಬೇಡಿ ವಿದ್ಯುತ್ ಕಂಬದ ತಂತಿಗಳ ಮೇಲೆ ಬಟ್ಟೆಗಳನ್ನು ಒಣಗಿಸಲು ಹಾಕಬಾರದು. ತಂತಿ ಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಹಾಯ್ಸಬಾರದು ಸಾರ್ವಜನಿಕರು ವಿದ್ಯುತ್ ಕಂಬಗಳನ್ನು ಹತ್ತಬಾರದು ಭೂಸಂಪರ್ಕ ವ್ಯವಸ್ಥೆ ಇಲ್ಲದೆ ವಿದ್ಯುತ್ ಉಪಕರಣಗಳನ್ನು ಬಳಸಬಾರದು. ವಿದ್ಯುತ್ ಮಾರ್ಗಗಳ ಕಡೆಗೆ ಬಾಲ್ಕನಿಗಳನ್ನು ಕಿಟಕಿಗಳನ್ನು ನಿರ್ಮಿಸಬಾರದು ಎಂದು ರಬಕವಿ ನಗರದ ಹೆಸ್ಕಾಂ ಅಧಿಕಾರಿ ಬ್ರಹ್ಮಾನಂದ ಮಾಸ್ತಿ ಹೇಳಿದರು. ವಿದ್ಯುತ್ ಎಂದರೆ ಅಪಾಯಕಾರಿ ದಯವಿಟ್ಟು…

Read More

ಬೆಂಗಳೂರು: ಗೃಹಜ್ಯೋತಿ (Gruha Jyothi) ನಿಯಮದಲ್ಲಿ ಬದಲಾವಣೆ ಮಾಡಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಗೃಹಜ್ಯೋತಿ ಸರಾಸರಿ ಪ್ರಮಾಣದಲ್ಲಿ ಶೇ.10 ಹೆಚ್ಚುವರಿ ವಿದ್ಯುತ್‌ ನೀಡುವ ಮಾನದಂಡವನ್ನು 10 ಯೂನಿಟ್‌ ಆಗಿ ಬದಲಾಯಿಸಲು ಸಂಪುಟ ಸಮ್ಮತಿ ನೀಡಿದೆ. ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌ (K.J.George), ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಅಂತಾ ಹೇಳಿದ್ವಿ. ಇದರನ್ವಯ ವಾರ್ಷಿಕ ಸರಾಸರಿ ಮೇಲೆ 10% ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಕೇವಲ 20, 30, 40 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ 10% ಹೆಚ್ಚುವರಿ ಯೂನಿಟ್ ಅಂದರೆ ಕಡಿಮೆ ವಿದ್ಯುತ್ ಸಿಗುತ್ತಿತ್ತು. ಹೀಗಾಗಿ 48 ಯೂನಿಟ್ ಒಳಗೆ ಉಪಯೋಗ ಮಾಡುವ ಗ್ರಾಹಕರಿಗೆ 10% ವಿದ್ಯುತ್ ಬದಲಾಗಿ 10 ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. 20 ಯೂನಿಟ್ ವಿದ್ಯುತ್ ಬಳಕೆ ಮಾಡುವ ಗ್ರಾಹಕನಿಗೆ 10% ಅಂದರೆ ಕೇವಲ 2 ಯೂನಿಟ್ ‌ಮಾತ್ರ ಹೆಚ್ಚುವರಿ ಸಿಗುತ್ತಿತ್ತು.…

Read More

ಬೆಂಗಳೂರು : ರಾಮಲಲ್ಲಾನ ಮೂರ್ತಿಯನ್ನು ಟೆಂಟ್ ಗೊಂಬೆಗೆ ಹೋಲಿಸಿ ರಾಮಮಂದಿರ ಕುರಿತು ಲಘುವಾಗಿ ಹೇಳಿಕೆ ನೀಡಿದ್ದ ಸಹಕಾರಿ ಸಚಿವ ಕೆ.ಎನ್. ರಾಜಣ್ಣರಿಗೆ ಬಿಜೆಪಿ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ರಾಮನ ಅವಹೇಳನ ಮಾಡಿದ್ರೆ ನನ್ನ ಡಿಸಿಎಂ ಮಾಡ್ತಾರೆ ಎಂಬ ಉದ್ದೇಶ ರಾಜಣ್ಣರದ್ದು ಎಂದು ಪೋಸ್ಟರ್ ಹಾಕಿ ಲೇವಡಿ ಮಾಡಿದೆ. ರಾಮನಿಗೆ ಯಾಕೆ ಅವಹೇಳನ ಮಾಡುತ್ತೀರಾ ರಾಜಣ್ಣ ಎಂದೂ.. ಹಿಂದೂ ಧರ್ಮಕ್ಕೆ, ರಾಮನಿಗೆ ಅವಹೇಳನ ಮಾಡಿದರೆ ಮಾತ್ರ ನಮ್ಮ ಹೈಕಮಾಂಡ್ ನನ್ನನ್ನು ಡಿಸಿಎಂ ಮಾಡ್ತಾರಂತೆ, ಅದಕ್ಕೆ ಕಣ್ಲಾ.. ಎಂದೂ ಪ್ರಶ್ನೆ ಹಾಗೂ ಉತ್ತರ ಹಾಕಿ ವ್ಯಂಗ್ಯವಾಡಿದೆ. ಹಿಂದೂ ಧರ್ಮದ ಅವಹೇಳನವೇ ಉಸಿರು ಕಾಂಗ್ರೆಸ್​ ಪಕ್ಷ ಹಾಗೂ ನಾಯಕರು, ತನ್ನ ಸ್ವಾರ್ಥ ಸಾಧನೆಗಾಗಿ ಹಿಂದೂ ಧರ್ಮ ಮತ್ತು ಹಿಂದೂ ದೇವರುಗಳ ಅವಹೇಳನವನ್ನೇ ಉಸಿರಾಗಿಸಿಕೊಂಡಿದ್ದಾರೆ ಎಂದು ಕೈ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

Read More

ಬೆಳಗಾವಿ: ಜ.22ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶ್ರೀರಾಮಚಂದ್ರನ ಉಚಿತ ಟ್ಯಾಟೊ ಅಭಿಯಾನ ಆರಂಭವಾಗಿದೆ. 10ಸಾವಿರಕ್ಕೂ ಅಧಿಕ ರಾಮನ ಭಕ್ತರಿಗೆ ಉಚಿತ ಟ್ಯಾಟೊ ಹಾಕಿಸುವ ಅಭಿಯಾನ ಇದಾಗಿದ್ದು, ಶಾಸಕ ಅಭಯ್ ಪಾಟೀಲ್​ ರಾಮ ಭಕ್ತರ ಕೈ ಮೇಲೆ ಉಚಿತವಾಗಿ ರಾಮನ ಪ್ರತಿಮೆ, ಜೈ ಶ್ರೀರಾಮ ಟ್ಯಾಟೋ(ಹಚ್ಚೆ) ತೆಗೆಯುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. https://ainlivenews.com/rohit-sharma-scored-a-historic-century-and-made-a-record/ ಕನ್ನಡ, ಹಿಂದಿ, ಮರಾಠಿ ಭಾಷೆಯ ಶ್ರೀರಾಮನ ಭಾವಚಿತ್ರವಿರುವ ಹಚ್ಚೆ ಹಾಕುತ್ತಿದ್ದು, ಬೆಳಗಾವಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಮೂರು ಕಡೆಗಳಲ್ಲಿ ಟ್ಯಾಟೊ ಕೇಂದ್ರ ಓಪನ್ ಮಾಡಲಾಗಿದೆ. ಈಗಾಗಲೇ 2 ಸಾವಿರ ಜನರು ಟ್ಯಾಟೋ ತೆಗೆಸಿಕೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ.30ರಿಂದ 40 ಜನ ಟ್ಯಾಟೋ ತೆಗೆಯುವವರನ್ನು ನಿಯೋಜಿಸಲಾಗಿದೆ.

Read More

ಬೆಂಗಳೂರು : ಬಂಡೆಯಂತೆ ಆರ್ಭಟಿಸಬೇಕಿದ್ದ ಡಿ.ಕೆ. ಶಿವಕುಮಾರ್ ಸೈಲೆಂಟ್ ಆಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದ್ದಾರೆ. ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಪೂರ್ಣಾವಧಿ ಸಿಎಂ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಡಿ.ಕೆ. ಶಿವಕುಮಾರ್ ಅವರ ಮೆದು ಮಾತುಗಳ ಪ್ರತಿಕ್ರಿಯೆ ಗಮನಿಸಿದರೆ ಅವರಲ್ಲಿ ರಾಜಕೀಯ ಹತಾಶೆ ಮುತ್ತಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಅವರ ಹಿಂಬಾಲಕರ ಮೂಲಕ ಹೇಳಿಸಿ, ಉಪಮುಖ್ಯಮಂತ್ರಿಗಳನ್ನು ಮುಜುಗರಕ್ಕೆ ಸಿಲುಕಿಸುತ್ತಿದ್ದರು. ಇದೀಗ ತಮ್ಮ ಪುತ್ರ ಡಾ. ಯತೀಂದ್ರ ಅವರ ಮೂಲಕ ತಂದೆಯವರ ಪೂರ್ಣಾವಧಿ ಮುಖ್ಯಮಂತ್ರಿ ಸ್ಥಾನ ಅಬಾಧಿತ ಎಂದು ಹೇಳಿಕೆ ಕೊಡಿಸಿದ್ದಾರೆ. ಸ್ವಪಕ್ಷೀಯ ವೀರೋಧಿಗಳ ದಾಳ ಡಿ.ಕೆ. ಶಿವಕುಮಾರ್​ ಅವರಲ್ಲಿ ರಾಯಕೀಯ ಪಲಾಯನದ ಮಾತನಾಡಿಸುತ್ತಿರುವಂತಿದೆ ಎಂದು ಚಾಟಿ ಬೀಸಿದ್ದಾರೆ.

Read More

ಬೆಂಗಳೂರು: ನಿರ್ಲಕ್ಷ್ಯ ಇರಬೇಕು ಇಷ್ಟೋದಾ ಈಗಾ..ಜನ ಬ್ಯಾಕ್ ಟು ಬ್ಯಾಕ್ ಬೀದಿಪಾಲಾದ್ರೂ ಎಚ್ಚೆತ್ತುಕೊಂಡಿಲ್ಲ ಅಂದ್ರೆ ಹೇಗೆ,ಹೌದು ಬೆಂಗಳೂರು ನಗರದಲ್ಲಿ ಬೆಸ್ಕಾಂ ಅದಿಕಾರಿಗಳ ನಿರ್ಲಕ್ಷ್ಯ ದಿನೇ ದಿನೇ ಜಾಸ್ತಿಯಾದ್ರೂ ಹೇಳೊರಿಲ್ಲ ಕೇಳೊರಿಲ್ಲ ಅನ್ನೋ ಪರಿಸ್ಥಿತಿ ಇದೆ..ನಗರದೆಲ್ಲಡೆ ಯಮ ಅವತಾರ ತಾಳಿರುವ ಬೆಸ್ಕಾಂ ತಂತಿಗಳು ಪದೇ ಪದೇ ಮುಗ್ಧ ಜೀವಗಳನ್ನು ಬಲಿ ಪಡೆಯುತ್ತಲೇ ಇವೆ. ಕಾಡುಗೋಡಿಯಲ್ಲಿ ಗರ್ಭಿಣಿ ತಾಯಿ ಮತ್ತು 9 ತಿಂಗಳ ಕಂದಮ್ಮನನ್ನು ಬಲಿ ಪಡೆದ್ರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ . ಬೆಸ್ಕಾಂ ಅಧಿಕಾ ರಿಗಳ ನಿರ್ಲಕ್ಷ್ಯ ಹೇಗಿದೆ ಅಂತ ತೋರಿಸುತ್ತೇವೆ ನೋಡಿ ಸರ್ಕಾರೀ ಇಲಾಖೆಗಳು ಜನರನ್ನ ರಕ್ಷಿಸುವ ಕೆಲಸ ಮಾಡಬೇಕು. ಆದ್ರೆ ಬೆಂಗಳೂರು ನಗರದಲ್ಲಿ ವಿವಿಧ ಇಲಾಖೆಗಳು ಜನರ ಜೀವ ತೆಗೆಯುವ ಕೆಲಸ ಮಾಡ್ತಿವೆ. ಒಂದು ಕಡೆ ಬಿಬಿಎಂಪಿ ನಿರ್ಲಕ್ಷ್ಯದಿಂದ ಜನರ ಗುಂಡಿಗಳಿಂದ ಸಾವನ್ನಪುತ್ತಿದ್ರೆ ಮತ್ತೊಂದೆಡೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾದಿಬೀದಿಯಲ್ಲಿ ಜನ ಸಾವನ್ನುಪ್ಪುತ್ತಿದ್ದಾರೆ. ಕಳೆದ ತಿಂಗಳು ಕಾಡುಗೋಡಿ ಬಳಿ ತಾಯಿ- ಮಗು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ರು. ಬಳಿಕ ನಗರದಲ್ಲಿ ಡೇಂಜರ್…

Read More

ದಾವಣಗೆರೆ:- ಸಿಎಂ ವಿರುದ್ಧ ಅನಂತಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಮಾಜಿ ಸಚಿವ MP ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಅನಂತಕುಮಾರ ಹೆಗಡೆ ಹೇಳಿಕೆಯನ್ನ ಪಕ್ಷವು ಒಪ್ಪಲ್ಲ, ರಾಜ್ಯಾಧ್ಯಕ್ಷರು ಒಪ್ಪಲ್ಲ. ಸಿದ್ದರಾಮಯ್ಯ ಗೌರವಯುತ ಸ್ಥಾನದಲ್ಲಿದ್ದಾರೆ. ಮೇಲಾಗಿ ಹಿರಿಯರು. ಹಗುರವಾಗಿ ಏಕವಚನದಲ್ಲಿ ಮಾತನಾಡಿದ್ದನ್ನ ಖಂಡಿಸುತ್ತೇವೆ. https://ainlivenews.com/legislature-joint-session-from-february-12-budget-on-february-16/  ಹಿಂದೆ ಕೂಡ ಹೆಗಡೆ ಸಂವಿಧಾನ ಬದಲಾಚಣೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆಗಲೂ ಕೂಡ ನಾವು ಖಂಡಿಸಿದ್ದೇವೆ. ಈಗಲು ಅವರ ಹೇಳಿಕೆಯನ್ನ ಖಂಡಿಸುತ್ತೇವೆ. ರಾಜಕೀಯವಾಗಿ ಟೀಕೆ ಮಾಡಬಹುದು. ಆದರೆ, ಏಕವಚನದಲ್ಲಿ ಪದ ಬಳಕೆ ಸರಿಯಾಗಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.  

Read More

ಬೆಂಗಳೂರು: ಸೋತ ಮಾತ್ರಕ್ಕೆ ನಾನು ಪಕ್ಷದ ಕಾರ್ಯಕರ್ತನಾಗಿ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ ಎಂದು ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು. ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಿಖಿಲ್ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿ ಮಾತನಾಡಿದರು. ನಾನು ಪಕ್ಷದ ಕಾರ್ಯಕರ್ತನಾಗಿ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ. ಎರಡು ಬಾರಿ ಚಿಕ್ಕ ವಯಸ್ಸಿನಲ್ಲಿಯೇ ಚುನಾವಣೆಯಲ್ಲಿ ಸೋಲು ಕಂಡಿದ್ದೇನೆ. ಕೆಲ ರಾಜಕೀಯ ಷಡ್ಯಂತ್ರ್ಯಕ್ಕೆ ನಾನು ಬಲಿಯಾದೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆ ಅಪ್ರಸ್ತುತ. ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ, ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ ಇತರರು ಹಾಜರಿದ್ದರು.

Read More

ಬೆಂಗಳೂರು: ರಾಜ್ಯದಲ್ಲಿ ಇಂದು 87 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಇಂದು 38 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 1.14ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,579 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 672 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. 165 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಇನ್ನೂ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಗಳು ಇಳಿಮುಖಗೊಂಡಿದೆ. ಕೊವಿಡ್ ಕೇಸ್ ಇಳಿಕೆ ಬೆನ್ನಲ್ಲೇ ಪ್ರಸ್ತುತ ಮಾರ್ಗಸೂಚಿ ಪಾಲಿಸಲು ಆರೋಗ್ಯ ಇಲಾಖೆ ಸಲಹೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರಲ್ಲಿ ILI ಲಕ್ಷಣ ಇರುವವರಿಗೆ ಟೆಸ್ಟ್ ಕಡ್ಡಾಯ. ಹೋಮ್ ಐಸೋಲೇಷನ್​ನಲ್ಲಿರುವ ಸೋಂಕಿತರ ಬಗ್ಗೆ ಪಿಹೆಚ್​ಸಿ, ಯುಪಿಹೆಚ್​ಸಿ, ನಮ್ಮ ಕ್ಲಿನಿಕ್ ಸಿಬ್ಬಂದಿ ಗಮನ ಹರಿಸಬೇಕು. ಆರೋಗ್ಯ ಸಮಸ್ಯೆ ಇರುವ ಸೋಂಕಿತರ ಉಸಿರಾಟದ ಬಗ್ಗೆ ಗಮನಹರಿಸುವುದು, ಅಗತ್ಯವಿದ್ದಲ್ಲಿ…

Read More