Author: AIN Author

ಸಾನ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿಲ್ಪ ಪ್ರಸನ್ನ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧುಗೌಡ ನಿರ್ದೇಶನದ “ಆಪಲ್ ಕಟ್ ” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಟಿ ರಾಗಿಣಿ ಟೀಸರ್ ಬಿಡುಗಡೆ ಮಾಡಿದರು. ನಟಿ, ನಿರ್ದೇಶಕಿ, ನಿರ್ಮಾಪಕಿಯರಾದ ಪ್ರಿಯಾ ಹಾಸನ್ ಹಾಗೂ ರೂಪ ಅಯ್ಯರ್, ನಿರ್ದೇಶಕ ಗಡ್ಡ ವಿಜಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಲ್ಲಾ ಗಣ್ಯರು “ಆಪಲ್ ಕಟ್” ಯಶಸ್ವಿಯಾಗಲಿ ಎಂದು ಮನಸ್ಸಾರೆ ಹಾರೈಸಿದರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಚಿತ್ರದ ಟೀಸರ್ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ನಂತರ ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, ನಾನು ಯಾರ ಬಳಿಯೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿಲ್ಲ. ನಮ್ಮ ಅಪ್ಪನ ಕಾರ್ಯವೈಖರಿ ನೋಡಿ ನನಗೆ ನಿರ್ದೇಶನದ ಆಸೆ ಹುಟ್ಟಿತ್ತು. ಕಿರುತೆರೆಯಲ್ಲಿ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕಿಯಾಗಿ ಇದು ಮೊದಲ…

Read More

ಬೆಂಗಳೂರು:- ಮುಂದೆ ಸಿದ್ದರಾಮಯ್ಯ ಫೋಟೊ ಇರುವ ಬ್ಯಾನರ್‌ ಹರಿದುಹೋಗುವ ದಿನ ಬರಲಿದೆ ಎಂದು ಮಾಜಿ ಸಿಎಂ DV ಸದಾನಂದಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಚಿವ ರಾಜಣ್ಣನ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷಮೆ ಕೇಳಬೇಕು, ಅಥವಾ ರಾಜಣ್ಣನ ಮೂಲಕ ಕ್ಷಮೆ ಕೇಳಿಸಬೇಕು ಎಂದರು. ಕೋಲಾರದ ಮುಳಬಾಗಿಲಿನ ಬ್ಯಾನರ್ ಹರಿದರಲ್ಲವೇ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಸಿದ್ದರಾಮಯ್ಯನವರ ಫೋಟೊ ಇರುವ ಬ್ಯಾನರ್‌ಗಳು ಹರಿದುಹೋಗುವ ದಿನ ಬರಲಿದೆ ಎಂದು ಎಚ್ಚರಿಸಿದರು ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ. ರಾಜಣ್ಣನಿಗೆ ಬೊಂಬೆ ಕಂಡಿತೇ? ಅರಶಿನ ಕಾಮಾಲೆ ರೋಗದವರಿಗೆ ಅರಶಿನವಾಗಿಯೇ ಕಾಣುತ್ತದೆ. ಸಹಕಾರ ಸಚಿವನಾಗಿ ಮಾಡಿದ್ದಾರೆ. ಛೇ, ಸಿದ್ದರಾಮಯ್ಯರಿಂದ ಕೆಟ್ಟ ಕೆಲಸವಿದು. ಸಿದ್ದರಾಮಯ್ಯರ ಓಲೈಕೆ ಮುಂದುವರಿದಿದೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ (Congress) 3 ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಕಿಡಿಕಾರಿದರು

Read More

ಬೆಂಗಳೂರು:- ಅಂಬೇಡ್ಕರ್ ಹೆಸರಲ್ಲೂ ರಾಮನಿದ್ದಾನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ. ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ (Congress) ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ಮನಬಂದಂತೆ ಟೀಕಿಸುತ್ತಿದೆ. ಕಾಂಗ್ರೆಸ್‍ನ ಈ ನಿಲುವನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಮೊದಲು ವಿರೋಧಿಸಿದ್ದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು ಇದನ್ನು ನಾನು ಮೆಚ್ಚುತ್ತೇನೆ. ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ಪ್ರಿಯಾಂಕ್ ಖರ್ಗೆ ಮನಬಂದಂತೆ ಮಾತಾಡಿದ್ದಾರೆ. ಜನರೇ ಇದಕ್ಕೆ ಉತ್ತರ ಕೊಡುತ್ತಾರೆ. ಅವರೆಲ್ಲ ಶ್ರೀರಾಮನನ್ನು ಅವಹೇಳನ ಮಾಡಿದಾಕ್ಷಣ ದೊಡ್ಡ ನಾಯಕರಾಗ್ತಾರೆ ಎಂಬ ತಪ್ಪು ಭಾವನೆಯಲ್ಲಿದ್ದಾರೆ. ಪೊಸ್ಟರ್ ಹಾಕಿದರೆ ಅದನ್ನ ಕತ್ತರಿಸ್ತಾರೆ. ಮಂತ್ರಾಕ್ಷತೆಯನ್ನು ಎಲ್ಲಾ ಕಡೆ ಹಂಚಿಕೆ ಮಾಡಲಾಗ್ತಿದೆ.…

Read More

ಬೆಂಗಳೂರು:- 2024ನೇ ಸಾಲಿನ ರಾಜ್ಯ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿದ್ದು, ಅದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 2024ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯ ಸಂಬಂಧ ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನಾಚರಣೆಯ ದಿನ ಆವರಣಕ್ಕೆ ಬರುವ ಅತೀ ಗಣ್ಯರು, ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಯಾವ ದ್ವಾರದಲ್ಲಿ ಬರಬೇಕು ಹಾಗೂ ವಾಹನಗಳ ಪಾರ್ಕಿಂಗ್ ಸ್ಥಳ ವಿಚಾರವಾಗಿ ಯಾವುದೇ ಲೋಪಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. ಪ್ರತಿ ವರ್ಷದಂತೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕವಾಯತು ಪ್ರದರ್ಶನಕ್ಕಾಗಿ ಅಗತ್ಯ ಏರ್ಪಾಡುಗಳನ್ನು ಮಾಡಿಕೊಂಡು ಪೋಲೀಸ್ ಇಲಾಖೆಯಿಂದ ಶಿಷ್ಟಾಚಾರದನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸೂಚನೆ ನೀಡಿದರು. ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯುವ ವೇಳೆ ಮೈದಾನದಲ್ಲಿ ಧೂಳು ಏಳುವ ಸಾಧ್ಯತೆಯಿದ್ದು,…

Read More

ಬಾದಾಮಿ ಸೇವಿಸುವಾಗ ನಾವು ಮಾಡುವ ಕೆಲವೊಂದು ಮಿಸ್ಟೇಕ್ಗಳು ನಮ್ಮ ಆರೋಗ್ಯವನ್ನೇ ಹಾಳು ಮಾಡಿಬಿಡುತ್ತವೆ. ಹೀಗಾಗಿ ಬಾದಾಮಿಯನ್ನು ನಿಯಮಿತವಾಗಿ ಸೇವಿಸಬೇಕು. ಹಾಗಾದರೆ ಒಂದು ದಿನಕ್ಕೆ ಎಷ್ಟು ಬಾದಾಮಿ ಸೇವನೆ ಮಾಡಬೇಕು? ಬಾದಾಮಿ ತಿನ್ನುವಾಗ ಯಾವ ಕ್ರಮ ಅನುಸರಿಸಬೇಕು? ಮತ್ತು ಬಾದಾಮಿಯ ಅತಿಯಾದ ಸೇವನೆಯಿಂದ ದೇಹಕ್ಕಾಗುವ ತೊಂದರೆಗಳೇನು? ಮುಂತಾದ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳೋಣ. ವಿಟಮಿನ್ ಇ ಹೆಚ್ಚಾದ್ರೆ ಸಮಸ್ಯೆ ಬಾದಾಮಿಯಲ್ಲಿ ವಿಟಮಿನ್‌ ಇ ಸಮೃದ್ಧವಾಗಿದೆ. ಇದು ಕೊಬ್ಬನ್ನೇ ಕರಗಿಸಬಲ್ಲ ವಿಟಮಿನ್ ಆಗಿದೆ. ಇದು ನಿಮ್ಮ ಚರ್ಮ, ಕಣ್ಣುಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯವಾಗಿದೆ. ಇದನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದು ತುಂಬಾ ಒಳ್ಳೆಯದು. ಒಂದು ವೇಳೆ ನೀವು ಮಿತಿಮೀರಿ ಸೇವನೆ ಮಾಡಿದರೆ ಅದು ವಿಷವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಹೊಟ್ಟೆ ಸೆಳೆತ, ಅತಿಸಾರ ಮತ್ತು ಇತರೆ ಜೀರ್ಣಕಾರಿ ಸಮಸ್ಯೆಗಳಂತಹ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ವಿಟಮಿನ್ ಇ ರಕ್ತ ಹೆಪ್ಪುಗಟ್ಟುವಿಕೆಗೆ ತಡೆಯಾಗುವುದರಿಂದ ಇದು ರಕ್ತಸ್ರಾವದ ಅಪಾಯವನ್ನು ಕೂಡ ಹೆಚ್ಚಿಸಬಹುದು.…

Read More

ಬೀಟ್ ರೋಟ್ ನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇರುತ್ತದೆ. ಪೊಟ್ಯಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈಗಾಗಲೇ ಲೋ ಬಿಪಿ ಸಮಸ್ಯೆ ಇರುವವರು ಬೀಟ್ ರೋಟ್ ಅನ್ನು ಸೇವಿಸಿದರೆ ರಕ್ತದೊತ್ತಡ ಕಡಿಮೆಯಾಗಿ ತಲೆ ತಿರುಗುವಿಕೆ, ಆಯಾಸ ಮುಂತಾದ ಸಮಸ್ಯೆ ಕಾಡುತ್ತದೆ. ಬೀಟ್ ರೋಟ್ ನಲ್ಲಿ ಆಕ್ಸಲೇಟ್ ಅಂಶವಿದೆ. ಇದು ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಇರುವವರು ಬೀಟ್ ರೋಟ್ ಸೇವಿಸಬೇಡಿ. ಅಲ್ಲದೇ ಬೀಟ್ ರೋಟ್ ಲಿವರ್ ನ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹಾಗಾಗಿ ಲಿವರ್ ಗೆ ಸಂಬಂಧಿಸಿದ ಸಮಸ್ಯೆ ಇರುವವರು ಬೀಟ್ ರೋಟ್ ನಿಂದ ದೂರವಿರಿ.

Read More

ಊಟದ ನಂತರ ನಿತ್ಯ ಬೆಲ್ಲ ತಿನ್ನುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಆಹಾರ ಸೇವಿಸಿದ ನಂತರ ಬೆಲ್ಲ ತಿನ್ನುವುದರಿಂದ ಆಗುವ ಲಾಭಗಳೇನು ಎಂದು ತಿಳಿಯೋಣ. ಬೆಲ್ಲ ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಊಟದ ನಂತರ ಬೆಲ್ಲ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.‌ ಇದಲ್ಲದೆ, ಬೆಲ್ಲದಲ್ಲಿರುವ ಕಬ್ಬಿಣಂಶವು ಕೀಲು ಸಮಸ್ಯೆಗಳು ಮತ್ತು ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಪಾಯಕಾರಿ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಈ ಬೆಲ್ಲವನ್ನು ತಿನ್ನುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆಲಸ್ಯ ಮತ್ತು ದೌರ್ಬಲ್ಯದ ಲಕ್ಷಣಗಳು ಕಾಣಿಸಿಕೊಂಡಾಗ ಸಣ್ಣ ತುಂಡು ಬೆಲ್ಲವನ್ನು ತಿನ್ನುವುದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಕಿವಿ ನೋವಿನಿಂದ ಬಳಲುತ್ತಿರುವವರು ಬೆಲ್ಲವನ್ನು ತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಆಹಾರ ಸೇವಿಸಿದ ನಂತರ ಬೆಲ್ಲ ತಿನ್ನುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗುತ್ತವೆ ಎಂದು ಆರೋಗ್ಯ ತಜ್ಞರು…

Read More

ಪಪ್ಪಾಯದ ಕಾಯಿಯಲ್ಲಿ ಹಲ್ವದಿಂದ ಹಿಡಿದು ಪಲ್ಯದವರೆಗೂ ತಿನಿಸು ತಯಾರಾಗುತ್ತದೆ. ಇನ್ನು ಕೇಸರಿ ಬಣ್ಣದ ತಿರುಳು, ಕಪ್ಪು ಬೀಜ ಮಿಶ್ರಿತ ಹಣ್ಣು ನಾನಾ ಪೌಷ್ಟಿಕಾಂಶಗಳ ಆಗರ. ಇನ್ನು ಇದರ ಎಲೆಯ ಜ್ಯೂಸ್ ಅನ್ನು ಪ್ಲೇಟ್​ಲೇಟ್ ಕೌಂಟ್ ಹೆಚ್ಚು ಮಾಡಲು ಬಳಸಲಾಗುತ್ತದೆ. ಆರೋಗ್ಯವರ್ಧಕವಾದ ಈ ಹಣ್ಣು ಹೆಚ್ಚು ಉಷ್ಣಾಂಶಭರಿತ ಹಣ್ಣಾಗಿದ್ದು, ಇದರಲ್ಲಿ ವಿಟಮಿನ್ ಸಿ, ಎ, ವಿಟಮಿನ್ ಬಿ9, ನಾರಿನಾಂಶ ಯಥೇಚ್ಛವಾಗಿರುತ್ತದೆ. ಇನ್ನು ಇದರಲ್ಲಿರುವ ಪಪೈನ್ ಎಂಬ ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಸಹಾಯವಾಗುತ್ತದೆ. ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಮತ್ತು ಚರ್ಮದ ಆರೋಗ್ಯಕ್ಕೂ ಪೂರಕವಾಗಿದೆ. ಇದರಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ದೇಹ ತೂಕ ಇಳಿಸಲು ಪಪ್ಪಾಯ ಬಹಳ ಉಪಯುಕ್ತವಾದ ಹಣ್ಣು. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿ ಇರುವುದಲ್ಲದೇ ಹೆಚ್ಚು ನೀರಿನಾಂಶ ಇರುವ ಹಣ್ಣು ಕೂಡ ಹೌದು. ಇನ್ನು ಇತರೆ ಎಲ್ಲ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ನಾರಿನಾಂಶ ಕೊಂಚ…

Read More

ಹುಬ್ಬಳ್ಳಿ: ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಈಗಾಗಲೇ ದಿನಗಣನೆ ಪ್ರಾರಂಭಗೊಂಡಿದೆ. ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆಯ ಅದ್ಭುತ ಕ್ಷಣಕ್ಕಾಗಿ ಇಡೀ ಭಾರತವೇ ಜಾತಕ ಪಕ್ಷಿಯಂತೆ ಎದುರು ನೋಡುತ್ತಿದೆ. ಈ ಹಿನ್ನೆಲೆ ದೇಶದಾದ್ಯಂತ ರಾಮಭಕ್ತರು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಅಪ್ಪಟ ರಾಮಭಕ್ತ ಯುವಕನೊಬ್ಬ ವಿಭಿನ್ನವಾಗಿ ಭಕ್ತಿಯನ್ನ ಮೆರೆದಿದ್ದು, ಎಲ್ಲರ ಗಮನ ಸೆಳೆದಿದ್ದಾನೆ. ಒಂದಕಡೆ ರಾಮಮಯವಾಗಿ ಕಂಗೊಳಿಸುತ್ತಿರುವ ಸುಂದರ ಕಾರ್, ಅದನ್ನ ಎಲ್ಲರೂ ಭಕ್ತಿ ಭಾವ ಹಾಗೂ ಬೆರಗುಗಣ್ಣಿನಿಂದ ನೋಡ್ತಿರೋ ಜನರು. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ. ಹೌದು, ಇದೇ 22ರಂದು ಅಯೋದ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನೆಲೆ ಹುಬ್ಬಳ್ಳಿಯ ಹೊಸೂರು ನಿವಾಸಿಯಾಗಿರುವ ಸಚಿನ ಮಿಸ್ಕಿನ್ ಎಂಬ ಯುವಕ ತಮ್ಮ ಐ ಟೆನ್ ಕಾರನ್ನ ರಾಮಮಯವಾಗಿಸಿದ್ದಾರೆ. ಇಡೀ ಕಾರ್ ಅನ್ನ ರಾಮನಾಮಾವಳಿಗಳಿಂದ ಶೃಂಗಿಸಿದ್ದಾರೆ. ಜತೆಗೆ ಅಲ್ಲಲ್ಲಿ ರಾಮ, ಸೀತೆ ಲಕ್ಷ್ಮಣ ಸೇರಿ ಆಂಜನೇಯ ಸ್ವಾಮಿಯ ಫೋಟೋಗಳನ್ನ ಅಚ್ಚೋತ್ತಿಸಿದ್ದಾರೆ. ಕಾರಿನ…

Read More

ಶಿವಮೊಗ್ಗ:– ಮಧು ಬಂಗಾರಪ್ಪ ಸಣ್ಣತನದ ರಾಜಕಾರಣ ಮತ್ತು ಅಧಿಕಾರಿಗಳನ್ನು ಬೆದರಿಸುವುದು ನಿಲ್ಲಿಸಬೇಕು ಎಂದು ಬಿವೈ ರಾಘವೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಚಿವ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಅಧಿಕಾರಿಗಳ ಮೇಲೆ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದರು. ಶಿವಮೊಗ್ಗ ಜಿಲ್ಲೆಯಲ್ಲಿ 100 ಬಿಎಸ್ ಎನ್ ಎಲ್ ಟಾವರ್​ಗಳಿಗೆ ಕೇಂದ್ರ ಅರಣ್ಯ ಸಚಿವಾಲಯದಿಂದ ತಾವು ಕ್ಲೀಯರನ್ಸ್ ಕೊಡಿಸಿದ್ದು ಇನ್ನೇನು ಕೆಲಸ ಆರಂಭಾವಾಗಲಿದೆ ಎಂದ ರಾಘವೇಂದ್ರ, https://ainlivenews.com/use-these-leaves-for-long-black-hair-and-get-shiny-black-hair/ ಮಧು ಬಂಗಾರಪ್ಪ ಅಧಿಕಾರಿಗಳನ್ನು ಹೆದರಿಸುವ ಭಯ ಹುಟ್ಟಿಸುವ ಕೆಲಸದಲ್ಲಿ ತೊಡಗಿದ್ದಾರೆಂದು ಹೇಳಿದರು. ತಾನು ನಡೆಸುವ ಸಭೆಗಳಿಗೆ ಹಾಜರಾಗುವ ಆಧಿಕಾರಿಗಳಿಗೆ ಮಧು ಬಂಗಾರಪ್ಪ ಗದರುತ್ತಾರೆ, ಮೀಟಿಂಗ್ ಹಾಜರಾಗಬಾರದೆಂದು ತಾಕೀತು ಮಾಡುತ್ತಾರೆ ಎಂದು ರಾಘವೇಂದ್ರ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಇಂಥ ಸಣ್ಣತನ ಪ್ರದರ್ಶಿಸಬಾರದು ಎಂದು ಸಂಸದ ಖಾರವಾಗಿ ಹೇಳಿದರು.

Read More