Author: AIN Author

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನೆ ಸಂಸ್ಥೆಯ ನಿರ್ದೇಶಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 30 ರಂದು ಡಾ ಸಿ.ಎನ್. ಮಂಜುನಾಥ್ ಅವರು ನಿವೃತ್ತಯಾಗಲಿದ್ದು ಮಂಜುನಾಥ್ ಸ್ಥಾನಕ್ಕೆ ಮತ್ತೊಬ್ಬರ ನೇಮಕಾತಿಗೆ ಪತ್ರಿಕಾ ಪ್ರಕಟಣೆ ಮೂಲಕ ನಿರ್ದೇಶಕ ಹುದ್ದೆಗೆ ಆರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಖಾಯಂ ನಿರ್ದೇಶಕರ ಹುದ್ದೆಗೆ ಅರ್ಜಿ ಆಹ್ವಾನ ನೀಡಲಾಗಿದ್ದು ಇದೆ ತಿಂಗಳು 19ರ ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಅನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೆ ಅರ್ಜಿ ಶುಲ್ಕದ ಡಿ.ಡಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ದಿನಾಂಕ ನಿಗದಿ ಪಡಿಸಲಾಗಿದೆ. ಈಗಾಗಲೇ 5ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದು ಬರುವಂತಹ ಅರ್ಜಿಗಳನ್ನು ಪರಿಶೀಲಿಸಿ ಹಿರಿಯ ವೈದ್ಯರನ್ನೂ ನಿರ್ದೇಶಕರ ಸ್ಥಾನಕ್ಕೆ ನೇಮಕಕ್ಕೆ ಸರ್ಕಾರ ಸಿದ್ದತೆ ನಡೆಸಿಕೊಳ್ಳುತ್ತಿದೆ.

Read More

ವಿದೇಶಗಳಿಂದ ಭಾರತಕ್ಕೆ ಒಳಬರುವ ಹಣದ ಪ್ರಮಾಣ ಶೇ 12.3ರಷ್ಟು ಏರಿಕೆಯಾಗಿ 125 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. 2022ರಲ್ಲಿ ಈ ಪ್ರಮಾಣ 111.22 ಬಿಲಿಯನ್ ಡಾಲರ್ ಆಗಿತ್ತು. ಭಾರತದ ಒಳಬರುವ ಹಣದ ಪ್ರಮಾಣ ಈಗ ದೇಶದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 3.4 ರಷ್ಟಿದೆ. ವಿಶ್ವಬ್ಯಾಂಕ್​ನ “ವಲಸೆ ಮತ್ತು ಅಭಿವೃದ್ಧಿ ಸಾರಾಂಶ” ವರದಿಯ ಪ್ರಕಾರ, ಭಾರತವು ಜಾಗತಿಕವಾಗಿ ವಿದೇಶಗಳಿಂದ ಅತಿ ಹೆಚ್ಚು ಹಣ ಸ್ವೀಕರಿಸುವ ದೇಶವಾಗಿ ಮುಂದುವರೆದಿದೆ. ಮೆಕ್ಸಿಕೊ (67 ಬಿಲಿಯನ್ ಡಾಲರ್) ಮತ್ತು ಚೀನಾ (50 ಬಿಲಿಯನ್ ಡಾಲರ್) ನಂತರದ ಸ್ಥಾನಗಳಲ್ಲಿವೆ. ದಕ್ಷಿಣ ಏಷ್ಯಾಕ್ಕೆ ಬರುವ ಒಟ್ಟು ವಿದೇಶಿ ಹಣದಲ್ಲಿ ಶೇಕಡಾ 66 ರಷ್ಟು ಭಾರತಕ್ಕೆ ಬರುತ್ತಿದೆ. 2022 ರಲ್ಲಿ ಈ ಪ್ರಮಾಣ ಶೇಕಡಾ 63ರಷ್ಟಿತ್ತು. ಪ್ರತಿಭಾವಂತ ಭಾರತೀಯರು ಕೆಲಸ ಮಾಡುತ್ತಿರುವ ಪ್ರಮುಖ ದೇಶಗಳಾದ ಯುಎಸ್, ಯುಕೆ ಮತ್ತು ಸಿಂಗಾಪುರಗಳಲ್ಲಿನ ಹಣದುಬ್ಬರ ಇಳಿಕೆ ಮತ್ತು ಆದಾಯದಲ್ಲಾದ ಹೆಚ್ಚಳದಿಂದ…

Read More

ಬೆಂಗಳೂರು: ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಬಸವಣ್ಣ ಅವರ ಹೆಸರನ್ನು ಸರ್ಕಾರ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರದ ಪರವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವೀರಶೈವ ಲಿಂಗಾಯತ ಸ್ವಾಮೀಜಿಗಳ ನಿಯೋಗ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರವನ್ನು ಬರೆದು, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಭಾರತ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಗುರು ಬಸವಣ್ಣ ನವರು ಅಸ್ಪೃಶ್ಯತೆ ವಿರುದ್ಧ ಚಳುವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಸಮಾನತೆಗೆ ಧ್ವನಿ ಎತ್ತಿದ ಇತಿಹಾಸದ ಮೊದಲ ನಾಯಕ. ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು. https://ainlivenews.com/ginger-peel-can-be-easily-peeled-by-simple-tricks/ ವಿಧಾನಸೌಧದ (Vidhana Soudha) ಸಮ್ಮೇಳನ ಸಭಾಂಗಣಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಜಾತಿ ರಹಿತ ಸಮಾಜದ ಕನಸು ಕಂಡವರು ಬಸವಣ್ಣ. ಸಮಾಜದಲ್ಲಿ…

Read More

ಬೇಗ ಅಡುಗೆ ಮಾಡಬೇಕೆಂದಾಗ ಅಗತ್ಯವಾದ ಬೆಳ್ಳುಳ್ಳಿ ಹಾಗೂ ಶುಂಠಿ ಸಿಪ್ಪೆ ತೆಗೆಯುವುದು ಬಹಳ ಕಷ್ಟದ ಕೆಲಸ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಕೆಲ ಸುಲಭ ವಿಧಾನ ಅನುಸರಿಸಿದರೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ಎಳೆ ಶುಂಠಿ ಸಿಪ್ಪೆ ತೆಳು ಇದ್ದರೆ ಬಲಿತ ಶುಂಠಿಯ ಸಿಪ್ಪೆ ದಪ್ಪ ಇರುತ್ತದೆ. ಎಳೆ ಶುಂಠಿಯ ಸಿಪ್ಪೆಯನ್ನು ನಾವು ಕೈ ಬೆರಳು ಸಹಾಯದಿಂದಲೇ ಸುಲಿಯ ಬಹುದು. ಆದರೆ ಬಲಿತ ಶುಂಠಿ ಸಿಪ್ಪೆ ತೆಗೆಯುವುದು ತುಸು ಕಷ್ಟ ಶುಂಠಿ ಮಣ್ಣಿನೊಳೆಗ ಬೆಳೆಯುವುದರಿಂದ ಅದರಲ್ಲಿ ಮಣ್ಣು ಹೆಚ್ಚಾಗಿ ಇರುತ್ತದೆ. ಮೊದಲು ಅದನ್ನು ನೀರಿನಲ್ಲಿ ಮಣ್ಣು ಸಂಪೂರ್ಣವಾಗಿ ಹೋಗುವಂತೆ ಚೆನ್ನಾಗಿ ತೊಳೆಯಬೇಕು. ಶುಂಠಿಯಲ್ಲಿ ಕವಲುಗಳು ಜಾಸ್ತಿ ಇರುತ್ತದೆ. ಮೊದಲು ಅವುಗಳನ್ನು ಸಣ್ಣ ಸಣ್ಣದಾಗಿ ಬಿಡಿಸಿಕೊಳ್ಳಬೇಕು ಅಡುಗೆಗೆ ಮುನ್ನ ಅರ್ಧ ಗಂಟೆ ನೀರಿನಲ್ಲಿ ನೆನೆಸಬೇಕು ಅಥವಾ ಫ್ರಿಡ್ಜ್‌ನಲ್ಲಿ ಇಡಬೇಕು. ಆಗ ಸಿಪ್ಪೆ ಮೃದುವಾಗುತ್ತದೆ. ಚಾಕು ಸಹಾಯದಿಂದ ಸುಲಭವಾಗಿ ತೆಗೆಯಬಹುದು. ಚಾಕು ಅಥವಾ ತರಕಾರಿ ಪೀಲರ್‌ಗಿಂತ ಚಮಚದಲ್ಲಿ ಸಿಪ್ಪೆಯನ್ನು ಸುಲಭವಾಗಿ ಬಿಡಿಸಬಹುದು. ಶುಂಠಿ ಕತ್ತರಿಸುವ ಸಾಧನಗಳು…

Read More

ಹೆಚ್ಚು ಹಣ ಉಳಿಸಬೇಕು ಹಾಗೂ ಶ್ರೀಮಂತರಾಗ್ಬೇಕು ಅಂತ ಹಲವರಿಗೆ ಆಸೆ ಇದ್ದೇ ಇರುತ್ತದೆ. ಇದಕ್ಕೆ ಹಲವರು ಷೇರು ಮಾರುಕಟ್ಟೆಯಲ್ಲಿ ಅಥವಾ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡ್ತಾರೆ. ಆದರೆ, ಮ್ಯೂಚುವಲ್‌ ಫಂಡ್ಸ್‌ ಬಗ್ಗೆ ನಿಮಗೆ ಅನುಮಾನಗಳಿದ್ದರೆ, ಹೀಗೆ ಮಾಡಿ ನೀವು ಹೂಡಿಕೆ ಮಾಡುವ ಬಗ್ಗೆ ಚಿಂತಿಸುತ್ತಿದ್ದರೆ ಮತ್ತು ಇತ್ತೀಚೆಗೆ ಹೂಡಿಕೆಯ ಜಗತ್ತಿನಲ್ಲಿ ತೊಡಗಿಸಿಕೊಂಡಿದ್ದರೆ, ನಿಮ್ಮ ದೀರ್ಘಾವಧಿಯ ಹಣಕಾಸಿನ ಗುರಿಗಳೊಂದಿಗೆ ಹೊಂದಿಕೆಯಾಗುವ ಆ ಮ್ಯೂಚುಯಲ್ ಫಂಡ್ಸ್ ಆಯ್ಕೆ ಮಾಡಿಕೊಳ್ಳುವುದು ಸುಲಭವಲ್ಲ. ನಿಮಗಾಗಿ “ಸರಿಯಾದ” ಮ್ಯೂಚುಯಲ್ ಫಂಡ್ ಅನ್ನು ನೀವು ಆಯ್ಕೆಮಾಡುವ ಮೊದಲು, ಹೂಡಿಕೆ ಗುರಿಗಳು, ಅಪಾಯ ಸಹಿಷ್ಣುತೆ, ಕಾರ್ಯಕ್ಷಮತೆಯ ಇತಿಹಾಸ ಮತ್ತು ತಜ್ಞರ ನಿರ್ವಹಣೆಯಂತಹ ಹಲವಾರು ಅಂಶಗಳನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಕಡ್ಡಾಯವಾಗಿದೆ.  ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮೊದಲು, ಈ ಐದು ಅಂಶಗಳನ್ನು ಗಮನಿಸಿ: ಅಪಾಯದ ಹಸಿವು (ರಿಸ್ಕ್‌ ಅಪಿಟೈಟ್‌) ಆಸ್ತಿ ವರ್ಗ ಮತ್ತು ನಿಧಿಗಳ ವರ್ಗವನ್ನು ಆಯ್ಕೆಮಾಡುವ ಮೊದಲು, ಅಪಾಯದ ಹಸಿವಿನ ಆಧಾರದ ಮೇಲೆ ನಿಧಿಯನ್ನು ಆರಿಸಬೇಕಾಗುತ್ತದೆ. ಉದಾಹರಣೆಗೆ, ಹೆಚ್ಚಿನ ರಿಸ್ಕ್‌ ಅಪಿಟೈಟ್‌ ಹೊಂದಿರುವ…

Read More

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ. ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ. 2ನೇ ಮನೆಯ ಕುಟುಂಬ ಸ್ಥಾನ 4ನೇ ಮನೆ ಸುಖದ ಸ್ಥಾನ, 9ನೇ ಮನೆ ಭಾಗ್ಯದ ಸ್ಥಾನ, 11ನೇಮನೆಲಾಭಸ್ಥಾನವಾಗಿರುತ್ತದೆ. ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ…

Read More

“ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ” ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜೀವನದಲ್ಲಿ ಒಂದೇ ಒಂದು ಸಾರಿ ಮದುವೆ ಆಗುತ್ತದೆ. ಮದುವೆ ಕ್ಷಣದಿಂದ ತುಂಬಾ ಉಲ್ಲಾಸ ಜೀವನ ಮಾಡುತ್ತೀರಿ, ನಂತರ ಎರಡು ವರ್ಷ ,ಮೂರು ವರ್ಷ ಕಳೆದು ಹೋಗುತ್ತದೆ. ನಂತರ ನಿಮಗೆ ಮಕ್ಕಳಿಲ್ಲದ ಸಂಕಟ ಪ್ರಾರಂಭವಾಗುತ್ತದೆ. ಆಗ ನೀವು ಆ ದೇವರು ದರ್ಶನ, ವೈದ್ಯರ ಭೇಟಿ ಮಾಡಲು ಪ್ರಾರಂಭಿಸುತ್ತೀರಿ. ವೈದ್ಯರು ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಸುತ್ತಾರೆ . ಅದರಲ್ಲಿ ಯಾವುದೇ ತರಹದ ನ್ಯೂನ್ಯತೆ ಕಾಣುವುದಿಲ್ಲ . ಎಲ್ಲ ನಿಮ್ಮ ಆರೋಗ್ಯ ಚೆನ್ನಾಗಿದೆ ಹೌಷಧಿ ತಗೊಳ್ಳಿ ಅಂತ ಸಲಹೆ ನೀಡುತ್ತಾರೆ. ಆದ್ರೂ ನಿರಾಶೆ ಆಗುವ ಸಾಧ್ಯತೆ. ಆಗ ತಮಗೆ ಸಹಾಯಸ್ತ ನೀಡುವುದು ದೈವ ಭಾಗ್ಯ ಅದೇ ಜನ್ಮಜಾತಕ ಅಥವಾ ಜನ್ಮ ಕುಂಡಲಿ. ತಮ್ಮ ಜನ್ಮಕುಂಡಲಿ ಪರೀಕ್ಷಿಸಬೇಕು. ಅದರಲ್ಲಿ ಲಗ್ನದಿಂದ ಪಂಚಮ ಸ್ಥಾನ ನೋಡಿ ಸರಿಯಾಗಿ ಪರೀಕ್ಷಿಸಬೇಕು.ಪಂಚಮ ಸ್ಥಾನಕ್ಕೆ ಯಾರು ಅಧಿಪತಿ ಇದ್ದಾನೆ ,ಶುಭಗ್ರಹಗಳು…

Read More

ಸೂರ್ಯೋದಯ: 06:53, ಸೂರ್ಯಾಸ್ತ : 05:59 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಹೇಮಂತ ಋತು, ತಿಥಿ: ನವಮಿ ನಕ್ಷತ್ರ: ಭರಣಿ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಮೇಷ ರಾಶಿ: ಧಾರ್ಮಿಕ ಕ್ಷೇತ್ರಗಳ ಭೇಟಿ ಆಲೋಚನೆ, ಪತ್ರಿಕೋದ್ಯಮಿಗಳಿಗೆ ಶುಭ ಸಂದೇಶ,ಹೋಟೆಲ್ ಉದ್ಯಮದಾರರಿಗೆ ಧನ ಲಾಭ ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ ಯಶಸ್ಸು. ಮನೆ ಕಟ್ಟಡ ಸುಗಮವಾಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಶುಭ ಮಂಗಳ ಕಾರ್ಯ ಜರುಗುವುದು. ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಸಹೋದರ ಸಹೋದರಿಯರ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಮಾಯವಾಗಿ ಎಲ್ಲರೂ…

Read More

ಬೆಂಗಳೂರು:- ನಾಳೆ ಕರ್ನಾಟಕಕ್ಕೆ ಆಗಮಿಸುವ PM ಮೋದಿ ಅವರು, ಕಲಬುರಗಿ ಹಾಗೂ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಅಧಿಕೃತ ಕಾರ್ಯಕ್ರಮ ನಿಗದಿಯಾಗಿದೆ. ಕೆಲ ದಿನಗಳಿಂದ ನಿರಂತರವಾಗಿ ಪ್ರವಾಸ ಮಾಡುತ್ತಿರುವ ಪ್ರಧಾನಿ ಮೋದಿ ಶುಕ್ರವಾರ ಒಂದೇ ದಿನ ಮೂರು ರಾಜ್ಯಗಳಲ್ಲಿ ಪ್ರವಾಸ ಹಾಕಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ7 ದೆಹಲಿಯಿಂದ ಹೊರಟು ಬೆಳಿಗ್ಗೆ 9:35ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. ಅಲ್ಲಿ ವಿಮಾನದಿಂದ ಇಳಿದು ಬೆಳಿಗ್ಗೆ 9:40 ಕ್ಕೆ ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರ ನಗರಕ್ಕೆ ತೆರಳಲಿದ್ಧಾರೆ. ಅಲ್ಲಿ ಎರಡು ಗಂಟೆ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಬಳಿಕ ಮಧ್ಯಾಹ್ನ 12:10ಕ್ಕೆ ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರದಿಂದ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 1:05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 2:10 ಕ್ಕೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು. 2:15 ಕ್ಕೆ ವಿಮಾನ…

Read More

ಕಾರವಾರ:- ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಸಭೆ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾದ G +2 ವಸತಿ ಮನೆಗಳ ಕಾಮಗಾರಿಯನ್ನು ಬೇಗ ಪೂರ್ಣ ಗೊಳಿಸಿ ಪಲಾನುಭವಿಗಳಿಗೆ ಹಸ್ತಾಂತರ ಮಾಡುವಂತೆ ಇಂದು ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದಾಂಡೇಲಿ ಸಮಗ್ರ ಹೋರಾಟ ಸಮಿತಿಯ ಹೋರಾಟಗಾರರು ಆದ ಆಕ್ರಂ ಖಾನ್, ಅಶೋಕ್ ಪಾಟೀಲ್, ರಾಘವೇಂದ್ರ ಗಡೆಪ್ಪನವರ್, ದತ್ತಾತ್ರೇಯ ಹೆಗ್ಡೆ, ಗೌಸ ಬಡಿಗೇರಿ, ಶ್ಯಾಮ್ ಬೆಂಗಳೂರು, ಮುತುಜ ಚಬ್ಬಿ ಇವರ ನೇತೃತ್ವದಲ್ಲಿ ಹೋರಾಟ ನಡೆದಿದೆ. ಮಾಧ್ಯಮ ಮಿತ್ರ ಬಸವರಾಜು ಸಹ ಇವರ ಹೋರಾಟಕ್ಕೆ ಬೆಂಬಲ ಕೊಟ್ಟು, ಸರ್ಕಾರಕ್ಕೆ ಹಾಗೂ ಕರ್ನಾಟಕ ಗೃಹ ಮಂಡಳಿ ಮತ್ತು ಯೋಜನಾ ನಿರ್ದೇಶಕರಿಗೆ ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಇನ್ನೂ ಹೋರಾಟಗಾರ ಆಕ್ರಂ ಖಾನ್ ಅವರ ಮನವಿ ಸ್ವೀಕಾರ ಕಾರವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯ ನಿರ್ವಾಹಕ ಅಭಿಯಂತರರು ಆದ ರವಿಕುಮಾರ್ ಕೆ.ಎಂ ಅವರು ಮನವಿ ಸ್ವೀಕಾರ ಮಾಡಿ ಈ ಸಮಸ್ಯೆ ಕೂಡಲೇ ಬಗೆಹರಿಸುವುದಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬರಲಾಗುವುದು…

Read More