Author: AIN Author

ನ್ಯೂಜಿಲೆಂಡ್‌ ತಂಡದ ಆರಂಭಿಕ ಬ್ಯಾಟರ್‌ ಫಿನ್‌ ಆಲೆನ್‌ ಸ್ಪೋಟಕ ಶತಕ ಬಾರಿಸಿದ್ದಾರೆ. ಪ್ರವಾಸಿ ಪಾಕಿಸ್ತಾನ ಎದುರು ನಡೆದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಲೆನ್‌ 62 ಎಸೆತಗಳಲ್ಲಿ 137 ರನ್‌ಗಳ ಸ್ಪೋಟಕ ಶತಕ ಬಾರಿಸಿದರು. ಪರಿಣಾಮ 45 ರನ್‌ಗಳಿಂದ ಗೆದ್ದ ನ್ಯೂಜಿಲೆಂಡ್‌ ತಂಡ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿತು. 24 ವರ್ಷದ ಯುವ ಬ್ಯಾಟರ್‌ ಇದೀಗ ನ್ಯೂಜಿಲೆಂಡ್‌ ಪರ ಟಿ20-ಐ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್‌ ಮಾಡಿದ ದಾಖಲೆಯನ್ನೂ ಪಡೆದುಕೊಂಡಿದ್ದಾರೆ. 2012ರಲ್ಲಿ ಬಾಂಗ್ಲಾದೇಶ ಎದುರು ಬ್ರೆಂಡನ್‌ ಮೆಕಲಮ್‌ ಬಾರಿಸಿದ್ದ 123 ರನ್‌ ಈವರೆಗನ ಗರಿಷ್ಠ ಸ್ಕೋರ್‌ ಆಗಿತ್ತು. 137 ರನ್‌ಗಳೊಂದಿಗೆ ಆಲ್‌ ಈ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರನ್‌ಚೇಸ್‌ ಮಾಡಿದ ಪಾಕಿಸ್ತಾನ ತಂಡ ಸತತ ಮೂರನೇ ಬಾರಿ ವೈಫಲ್ಯ ಅನುಭವಿಸಿತು. ಪಾಕ್‌ ತಂಡದ ಸ್ಟಾರ್‌ ಬ್ಯಾಟರ್‌ ಸರಣಿಯಲ್ಲಿ ಮೂರನೇ ಅರ್ಧಶತಕ ಬಾರಿಸಿಯೂ ತಂಡಕ್ಕೆ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. 20 ಓವರ್‌ಗಳಲ್ಲಿ…

Read More

ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆ‌ರ್.ಎಸ್‌.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪರ ವಕಾಲತ್ತು ವಹಿಸಿ, ನೀರಿಕ್ಷಣಾ ಜಾಮೀನು ಕೊಡಿಸಿದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾನೂನು ಘಟಕದ ತಾಲ್ಲೂಕು ಅಧ್ಯಕ್ಷ ಡಿ.ಚಂದ್ರೇಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ವಕೀಲ ಡಿ.ಚಂದ್ರೇಗೌಡ, ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದನಾಕಾರಿ ಭಾಷಣ ಮಾಡಿದ ಹಾಗೂ ಮುಸ್ಲಿಂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪದಡಿ ಕಲಂ 354, 294, 509, 506, 295, 298 2໖ כע ט ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕಲ್ಲಡ್ಕ ಪ್ರಭಾಕ‌ರ್ ಪರ ವಕಾಲತ್ತು ವಹಿಸಿ, ಅವರಿಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೊಡಿಸಿದ್ದು,  ಈ ನಡವಳಿಕೆಯು ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ನಿಯಮ ನಿಬಂಧನೆಗಳಿಗೆ ವಿರುದ್ಧವಾಗಿರು ವುದರಿಂದ ಅವರನ್ನು ಶ್ರೀರಂಗಪಟ್ಟಣ ತಾಲ್ಲೂಕು ಕಾನೂನು ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಕಾನೂನು ಘಟಕದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಸ್.ಗೌರಿಶಂಕರ್ ತಿಳಿಸಿದ್ದಾರೆ.

Read More

ಕಲಬುರಗಿ: ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಯುವ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಇವತ್ತು ಪ್ರಧಾನಿ ಮೋದಿ ಚಾಲನೆ ಕೊಡಲಿದ್ದು ಆ ಕಾರ್ಯಕ್ರಮಕ್ಕೆ ತೆರಳುವ ಮೋದಿಯವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದ್ದಾರೆ.. ಹೌದು ದೆಹಲಿಗೆ ವಿಶೇಷ ವಿಮಾನದಲ್ಲಿ ಹೊರಡುವ ಪ್ರಧಾನಿ ನೇರವಾಗಿ ಕಲಬುರಗಿಗೆ ಬಂದಿಳಿಯಲಿದ್ದಾರೆ.. ನಂತ್ರ 9.50 ಕ್ಕೆ ಸೇನಾ ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರಕ್ಕೆ ತೆರಳಲಿದ್ದಾರೆ..ಮತ್ತೆ 12.50 ಕ್ಕೆ ವಾಪಾಸ್ ಕಲಬುರಗಿಗೆ ಏರ್ಪೋರ್ಟ್ ಗೆ ಬಂದು ಬೆಂಗಳೂರಿಗೆ ಪಯಣಿಸಲಿದ್ದಾರೆ..ಹೀಗಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು ಡ್ರೋಣ್ ಹಾರಾಟಕ್ಕೂ ನಿಷೇಧ ಹೇರಲಾಗಿದೆ..ಇದೇವೇಳೆ ಪ್ರಧಾನಿ ಸ್ವಾಗತಿಸಲು ಕೆಲವೇ ಮುಖಂಡರಿಗೆ ಮಾತ್ರ ಅವಕಾಶ ನೀಡಿದೆ ಪಿಎಂ ಕಾರ್ಯಲಯ. 

Read More

ಅಯೋಧ್ಯೆ: ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣ ಪ್ರತಿಷ್ಠಾದ ಆಚರಣೆಗಳು ಮುಂದುವರಿದಿದೆ. ಇದೀಗ ಗರ್ಭಗುಡಿಯಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ (Pran Prathistha Ceremony) ಎಂದು ಮಂದಿರ ನಿರ್ಮಾಣ ಸಮಿತಿಯ ಸದಸ್ಯರು ಹೇಳಿದ್ದಾರೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಸಮಗ್ರ ಪ್ರಕ್ರಿಯೆಯ ನಂತರ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ.  ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. ರಾತ್ರಿ ವಿಶೇಷ ಪೂಜೆಯೊಂದಿಗೆ ರಾಮಲಲ್ಲಾನ ವಿಗ್ರಹವನ್ನು ಗರ್ಭಗುಡಿಗೆ ತರಲಾಯಿತು. ಈ ಬೆಳ್ಳಿಯ ವಿಗ್ರಹವನ್ನು ಗುಲಾಬಿ ಮತ್ತು ಚೆಂಡು ಹೂಗಳಿಂದ ಅಲಂಕರಿಸಲಾಗಿತ್ತು. https://ainlivenews.com/ginger-peel-can-be-easily-peeled-by-simple-tricks/ ಬಳಿಕ ಅದನ್ನು ಗರ್ಭಗುಡಿಯಲ್ಲಿ ಇರಿಸಲು ಕ್ರೇನ್ ಬಳಸಿ ಮೇಲೆತ್ತಲಾಯಿತು. ಜನವರಿ 22 ರ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಚರಣೆಯ ಅಂಗವಾಗಿ ‘ಕಲಶ ಪೂಜೆ’ ನಡೆಯಿತು. ಇಂದು 4 ಗಂಟೆಗಳ ಧಾರ್ಮಿಕ ಕಾರ್ಯಕ್ರಮಗಳ  ನಂತರ 5…

Read More

ದೇಶದಾದ್ಯಂತ ರಾಮ (Ram) ಮತ್ತು ಹನುಮನ (Hanuman) ಜಪ ಶುರುವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ, ಚಿತ್ರೋದ್ಯಮದಲ್ಲಿ ಹನುಮಾನ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಹಣ ಬಾಚುತ್ತಿದೆ. ಈ ನಡುವೆ ನಿಖಿಲ್ ಸಿದ್ದಾರ್ಥ ನಟಿಸುತ್ತಿರುವ ಹೊಸ ಸಿನಿಮಾದಲ್ಲೂ ಹನುಮಾನ್ ಕಥೆ ಇದೆಯಂತೆ. ಹನುಮ ಭಕ್ತನೊಬ್ಬನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲ್ಲಿದ್ದಾರಂತೆ. ನಿಖಿಲ್ ಸಿದ್ದಾರ್ಥ್ (Nikhil Siddharth) ನಟನೆಯ 20ನೇ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕೆ ಸ್ವಯಂಭೂ ಎಂದು ಹೆಸರಿಡಲಾಗಿದೆ.  ಭರತ್ ಕೃಷ್ಣಮಾಚಾರಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾಗೆ ಸ್ವಯಂಭೂ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಯಂಭೂ (Swayambhu) ಎಂದರೆ ಸ್ವಯಂ ಹುಟ್ಟು ಎಂದರ್ಥ.  ಇನ್ನು, ಫಸ್ಟ್‌ ಲುಕ್ ಪೋಸ್ಟರ್ ನಲ್ಲಿ ನಿಖಿಲ್, ಉದ್ದವಾದ ಕೂದಲು ಬಿಟ್ಟು ಒಂದು ಕೈಯಲ್ಲಿ ಈಟಿ, ಮತ್ತೊಂದು ಕೈಯಲ್ಲಿ ಗುರಾಣಿ ಹಿಡಿದು ವೀರಯೋಧನಂತೆ ಕಾಣಿಸಿಕೊಂಡಿದ್ದಾರೆ.

Read More

ಲಂಡನ್ : ಅಕ್ರಮ ವಲಸಿಗರನ್ನು ಉದ್ದೇಶಪೂರ್ವಕವಾಗಿ ತಮ್ಮ ದೇಶದ ಗಡಿಗಳಿಗೆ ನುಗ್ಗಿಸುವ ಮೂಲಕ ಶತ್ರು ದೇಶಗಳು ತಮ್ಮ ದೇಶದ ಸಮಾಜದಲ್ಲಿ ಅಸ್ಥಿರತೆ ಮೂಡಿಸಲು ಪ್ರಯತ್ನಿಸುತ್ತಿವೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಅಕ್ರಮ ವಲಸೆಯ ವಿರುದ್ಧ ಪ್ರಬಲ ಧ್ವನಿ ಎತ್ತಿರುವ ಸುನಕ್, ಈ ಸಮಸ್ಯೆಯ ಪರಿಹಾರಕ್ಕಾಗಿ ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ ಹೆಚ್ಚುತ್ತಿರುವ ವಲಸಿಗರ ಸಂಖ್ಯೆ ಯುರೋಪಿಯನ್ ದೇಶಗಳನ್ನು ವಿನಾಶದಂಚಿಗೆ ತರಬಹುದು ಎಂದು ಎಚ್ಚರಿಸಿದ್ದಾರೆ ಎಂದು ದಿ ಈವಿನಿಂಗ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಇಟಲಿಯ ಇಟಾಲಿಯನ್ ಕನ್ಸರ್ವೇಟಿವ್ಸ್ ಮತ್ತು ಬಲಪಂಥೀಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಸುನಕ್, “ಕ್ರಿಮಿನಲ್ ಗ್ಯಾಂಗ್​ಗಳು ನಮ್ಮ ಮಾನವೀಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಅಡ್ಡದಾರಿ ಹಿಡಿಯುತ್ತಿವೆ ಮತ್ತು ಅಕ್ರಮ ವಲಸಿಗರನ್ನು ದೋಣಿಗಳ ಮೂಲಕ ತಮ್ಮ ಗಡಿಗಳಿಗೆ ತಲುಪಿಸುವ ಪ್ರಯತ್ನದಲ್ಲಿ ಆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ” ಎಂದು ಹೇಳಿದರು. “ನಾವು ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳದಿದ್ದರೆ ಅಕ್ರಮ ವಲಸಿಗರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಇದು ನಮ್ಮ ದೇಶಗಳ ಮೇಲೆ ವಿಪರೀತ ಹೊರೆಯನ್ನುಂಟು ಮಾಡುತ್ತದೆ ಮತ್ತು…

Read More

ಸದ್ಯ ಮ್ಯಾಕ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಿಚ್ಚ ಸುದೀಪ್, ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮ್ಯಾಕ್ಸ್ ಮುಗಿಯುತ್ತಿದ್ದಂತೆಯೇ ಅನೂಪ್ ಭಂಡಾರಿ (Anoop Bhandari) ಜೊತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಇತ್ತ ಅನೂಪ್ ಕೂಡ ಫೆಬ್ರವರಿಯಲ್ಲಿ ಹೊಸ ಚಿತ್ರದ ಅಪ್ ಡೇಟ್ ನೀಡುವುದಾಗಿ ಹೇಳಿದ್ದಾರೆ. ‘ಮ್ಯಾಕ್ಸ್’ (Max Film) ಸಿನಿಮಾ ಮತ್ತು ಬಿಗ್ ಬಾಸ್ ಶೋ ನಿರೂಪಣೆಯಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿದ ಮೇಲೆ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಚಿತ್ರದ ಕೆಲಸ ಎಲ್ಲಿಯವರೆಗೂ ಬಂತು ಎಂದು ಸುದೀಪ್ (Sudeep) ಮಾಹಿತಿ ನೀಡಿದ್ದಾರೆ.‘ಮ್ಯಾಕ್ಸ್’ (Max Film) ಸಿನಿಮಾ ಮತ್ತು ಬಿಗ್ ಬಾಸ್ ಶೋ ನಿರೂಪಣೆಯಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ‘ಮ್ಯಾಕ್ಸ್’ ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿದ ಮೇಲೆ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಚಿತ್ರದ ಕೆಲಸ ಎಲ್ಲಿಯವರೆಗೂ ಬಂತು ಎಂದು ಸುದೀಪ್ (Sudeep) ಮಾಹಿತಿ ನೀಡಿದ್ದಾರೆ. ಎರಡು…

Read More

ಬಾಲಿವುಡ್ (Bollywood)ನ ಹೆಸರಾಂತ ನಟಿ ಸೋನಂ ಕಪೂರ್ ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಗೊಳಿಸಿದ್ದಾರೆ. ತಾಯಿಯಾದ ನಂತರ ಅವರ ತೂಕ ಹೆಚ್ಚಾಗಿತ್ತು. ಈಗ 20 ಕೆಜಿ ತೂಕವನ್ನು ಇಳಿಸಿಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಈ ಮೂಲಕ ಮತ್ತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಕುರಿತು ಸುಳಿವು ನೀಡಿದ್ದಾರೆ. ಮೊನ್ನೆಯಷ್ಟೇ ಸೋನಂ ಕಪೂರ್ (Sonam Kapoor) ದಾಂಪತ್ಯ ಜೀವನಕ್ಕೆ ಕಾಲಿಟ್ಟು 5 ವರ್ಷಗಳಾಗಿವೆ. ಈ ಖುಷಿಯ ಸಂದರ್ಭದ ವೇಳೆ ಮೊದಲ ಬಾರಿಗೆ ಮಗ ವಾಯು (Vayu) ಮುಖವನ್ನ ನಟಿ ರಿವೀಲ್ ಮಾಡುವ ಮೂಲಕ ಅಭಿಮಾನಿಗಳ ಖುಷಿ ಇಮ್ಮಡಿಗೊಳಿಸಿದ್ದರು. ಇಷ್ಟು ದಿನ ಮಗ ವಾಯು ಮುಖ ಎಲ್ಲೂ ಕಾಣದಂತೆ ಕ್ಯಾಮೆರಾ ಕಣ್ಣಿಂದ ದೂರ ಇಟ್ಟಿದ್ದರು ಸೋನಂ. ಆಲಿಯಾ ಭಟ್ ಅವರಂತೆಯೇ ಮಗನ ಫೋಟೋ ಎಲ್ಲೂ ರಿವೀಲ್ ಮಾಡಿರಲಿಲ್ಲ. ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಗ ವಾಯು ಫೋಟೋ ರಿವೀಲ್ ಮಾಡಿದ್ದರು. ಅಭಿಮಾನಿಗಳಿಗೆ ಸೋನಂ ಮಗುವಿಗೆ ಶುಭ ಹಾರೈಸಿದ್ದರು. ‘ಸಾವರಿಯಾ’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಸೋನಂ ಕಪೂರ್…

Read More

ಅಮೆರಿಕ ಮೂಲದ ಬೃಹತ್‌ ಟೆಕ್‌ ಕಂಪನಿ ಆಪಲ್ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದ್ದು, ಬೆಂಗಳೂರಿನ ಮಿನ್ಸ್ಕ್ ಸ್ಕ್ವೇರ್‌ನಲ್ಲಿ ಹೊಸ ಕಛೇರಿ ಆರಂಭಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಗುರುಗ್ರಾಮ್‌ನಲ್ಲಿ ಕಾರ್ಪೊರೇಟ್ ಕಛೇರಿಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಇದೀಗ ಎರಡನೇ ಕಛೇರಿ ಆರಂಭಿಸಿದೆ. ಬೆಂಗಳೂರಿನಲ್ಲಿ ಆಪಲ್‌ ಆರಂಭಿಸಿರುವ ಹೊಸ ಕಛೇರಿಯು 15 ಮಹಡಿಗಳನ್ನು ಹೊಂದಿದ್ದು, ಲ್ಯಾಬ್ ಸ್ಥಳ ಹಾಗೂ 1,200 ಉದ್ಯೋಗಿಗಳಿಗೆ ಬೇಕಾದಷ್ಟು ವಿಸ್ತಾರವಾದ ಸ್ಥಳಾವಕಾಶವನ್ನು ಹೊಂದಿದೆ. ಈ ಡೈನಾಮಿಕ್ ನಗರವು ಈಗಾಗಲೇ ಸಾಫ್ಟ್‌ವೇರ್ ಎಂಜಿನಿಯರಿಂಗ್ ಮತ್ತು ಹಾರ್ಡ್‌ವೇರ್ ತಂತ್ರಜ್ಞಾನ, ಕಾರ್ಯಾಚರಣೆ, ಗ್ರಾಹಕ ಬೆಂಬಲ ಮತ್ತು ಇನ್ನೂ ಹೆಚ್ಚಿನ ಪ್ರತಿಭಾವಂತ ತಂಡಗಳಿಗೆ ನೆಲೆಯಾಗಿದೆ. ಈ ಹೊಸ ಕಛೇರಿಯನ್ನು ನಾವೀನ್ಯತೆ, ಸೃಜನಶೀಲತೆ ಮತ್ತು ಸಂಪರ್ಕವನ್ನು ಉತ್ತೇಜಿಸಲು ರಚಿಸಲಾಗಿದೆ. ಟೆಕ್ ದೈತ್ಯ ಕಂಪನಿಯು ಭಾರತದಲ್ಲಿ ಈಗಾಗಲೇ ಸುಮಾರು 3,000 ಉದ್ಯೋಗಿಗಳನ್ನು ಹೊಂದಿದೆ. ಇದಲ್ಲದೆ ಕಂಪನಿ ಭಾರತೀಯ ಪೂರೈಕೆದಾರರನ್ನೂ ಹೊಂದಿದ್ದು, ದೇಶವ್ಯಾಪಿ ಸಾವಿರಾರು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಆಪಲ್ 2020ರಿಂದ ತನ್ನ ಕಾರ್ಪೊರೇಟ್ ಕಾರ್ಯಾಚರಣೆಗಳಲ್ಲಿ ಶೂನ್ಯ ಇಂಗಾಲ ನೀತಿಗೆ…

Read More

ಕಿತ್ತಳೆ ಹಣ್ಣು ಹೆಚ್ಚಾಗಿ ಸಿಗುವ ಕಾಲ ಇದು. ಯಾಕೆಂದರೆ ಕಿತ್ತಳೆ ಹಣ್ಣಿನ ಸೀಸನ್ ಈಗ. ನೀವು ಸೇವಿಸುವ ಕಿತ್ತಳೆ ಹಣ್ಣು ಚಳಿಗಾಲದಲ್ಲಿ ನಿಮಗೆ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಕಿತ್ತಳೆ ಹಣ್ಣಿನ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಾವು ಕಿತ್ತಳೆ ಹಣ್ಣು ತಿನ್ನುವಾಗ ಒಳಗಿನ ತೊಳೆ ತಿನ್ನುತ್ತೇವೆ ಮತ್ತು ಮೇಲಿನ ಸಿಪ್ಪೆಯನ್ನು ಬಿಸಾಡುತ್ತೇವೆ. ಕಿತ್ತಳೆ ಹಣ್ಣಿನ ಸಿಪ್ಪೆ ಒಗರು ಅನುಭವ ನೀಡುತ್ತದೆ. ಹಾಗಾಗಿ ಇದನ್ನು ನಾವು ತಿನ್ನಲು ಬಯಸುವುದಿಲ್ಲ. ಆದರೆ ಇದರಲ್ಲಿ ಕಿತ್ತಳೆ ಹಣ್ಣಿನ ತೊಳೆಗಿಂತ ಹೆಚ್ಚಾದ ಪ್ರಯೋಜನಗಳು ಇವೆ. ಕಿತ್ತಳೆ ಸಿಪ್ಪೆಯ ಪುಡಿಯನ್ನು ತ್ವಚೆಯ ಆರೈಕೆಯಲ್ಲಿ ಬಳಸಿದಾಗ ಚರ್ಮಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕೆಲವು ಸಂಭಾವ್ಯ ಪ್ರಯೋಜನಗಳು ಇಲ್ಲಿವೆ: ಎಫ್ಫೋಲಿಯೇಶನ್: ಕಿತ್ತಳೆ ಸಿಪ್ಪೆಯ ಪುಡಿಯು ಅದರ ಸ್ವಲ್ಪ ಅಪಘರ್ಷಕ ವಿನ್ಯಾಸದಿಂದಾಗಿ ನೈಸರ್ಗಿಕ ಎಫ್ಫೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದ ಮೇಲ್ಮೈಯಿಂದ ಸತ್ತ ಚರ್ಮದ ಕೋಶಗಳು, ಕೊಳಕು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ನಯವಾದ…

Read More