Author: AIN Author

ಬೆಂಗಳೂರು: ಲಾರಿ ಮಾಲೀಕರ ಮತ್ತು ಚಾಲಕರ ವಿರೋಧಿ ನೀತಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಇಂದು ಕರ್ನಾಟಕ ಟಿಪ್ಪರ್ ಲಾರಿ ಅಸೋಸಿಯೇಷನ್ ಮತ್ತು  ಬೊಮ್ಮಸಂದ್ರ ಇಂಡಸ್ಟ್ರಿಯಲ್ ಸಹಯೋಗದೊಂದಿಗೆ ಆನೇಕಲ್ ಅತ್ತಿಬೆಲೆ ಅನಿರ್ದಿಷ್ಟಾವಧಿ ಮುಷ್ಕರವನ್ನ  ಮಾಡಲಾಯಿತು.. ಇನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 10 ವರ್ಷ ಜೈಲು 7 ಲಕ್ಷ ತಂಡದ ಕಾನೂನು ವಿರುದ್ಧ ಈ ಒಂದು ಮುಷ್ಕರವನ್ನ ಕರೆ ನೀಡಲಾಗಿತ್ತು. ಹೀಗಾಗಿ ನಾಲ್ಕು ಕೈಗಾರಿಕಾ ಪ್ರದೇಶ ಜಿಗಿಣಿ ಬೊಮ್ಮಸಂದ್ರ ಅತ್ತಿಬೆಲೆ ಸೇರಿದಂತೆ ನಾಲ್ಕು ಕೈಗಾರಿಕಾ ಪ್ರದೇಶದಲ್ಲಿ ಮುಷ್ಕರಕ್ಕೆ ಬೆಂಬಲವನ್ನ ಸೂಚಿಸಿದ್ದಾರೆ ಇನ್ನು ನೆನ್ನೆ ರಾತ್ರಿಯಿಂದಲೇ ಅನಿರ್ಧಿಷ್ಟವಧಿ ಮುಷ್ಕರಕ್ಕೆ ಕರೆ ನೀಡಿದ್ದು  ಸಾರಿಗೆ ಮಾಲೀಕರು ಕೂಡ ಬೆಂಬಲವನ್ನು ಸೂಚಿಸಿದ್ದಾರೆ.. ಚಾಲಕರು ತಮ್ಮ ವೃತ್ತಿಯನ್ನು ಬಿಟ್ಟು ಹೋಗುವಂತೆ ಕೇಂದ್ರ ಸರ್ಕಾರ ಕಾನೂನನ್ನ ತಂದಿದೆ ಈ ನೀತಿಯನ್ನು ಸಂಪೂರ್ಣವಾಗಿ ಕೈಬಿಡಬೇಕು ರಾಜ್ಯದ ಗಡಿಭಾಗವಿಗಳಲ್ಲಿ ಸಾರಿಗೆ ಇಲಾಖೆ ತಪಾಸನ ಠಾಣೆಯನ್ನು ತೆಗಿಬೇಕು ಎಕ್ಸೆಸ್ ಪ್ರೊಜೆಕ್ಷನ್ ವಿರುದ್ಧ ಹಾಕುತ್ತಿರುವ 20,000 ದಂಡವನ್ನು ಕಡಿಮೆ ಮಾಡಬೇಕು. https://ainlivenews.com/ginger-peel-can-be-easily-peeled-by-simple-tricks/ ಎಫ್ ಸಿ ಮತ್ತು…

Read More

ಉತ್ತರ ಪ್ರದೇಶ: ಶ್ರೀರಾಮಮಂದಿರದ ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ (ರಾಮಲಲ್ಲಾ) ನೂತನ ವಿಗ್ರಹವನ್ನು (Ramlalla Idol) ಗುರುವಾರ‌ ಇರಿಸಲಾಗಿದೆ. ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಸಮಗ್ರ ಪ್ರಕ್ರಿಯೆಯ ನಂತರ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ. ಗರ್ಭಗುಡಿಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಚಿತ್ರ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.  ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣಶಿಲೆಯಿಂದ ಕೆತ್ತನೆ ಮಾಡಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಬಿಗಿ ಭದ್ರತೆಯ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು. https://ainlivenews.com/ginger-peel-can-be-easily-peeled-by-simple-tricks/  ಗುರುವಾರ ಸಂಜೆ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳು ನೇರವೇರಿದ ಬಳಿಕ ಕೃಷ್ಣಶಿಲೆಯಲ್ಲಿ ಮೂಡಿದ 5 ವರ್ಷದ ರಾಮನ 51 ಇಂಚು ಎತ್ತರದ ಬಾಲರಾಮನ ಮೂರ್ತಿಯನ್ನ ಪ್ರತಿಷ್ಠಾಪಿಸಲಾಯಿತು. ಜನವರಿ 22ರಂದು ರಾಮಭಕ್ತರು ಇದರ ರೂಪ ಕಣ್ತುಂಬಿಕೊಳ್ಳುವ ಸಮಯ ಮತ್ತಷ್ಟು ಸನ್ನಿಹಿತವಾದಂತಾಗಿದೆ. ಅಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಲಿದೆ.

Read More

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ (Ram Mandir) ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಅಂಚೆ ಚೀಟಿಗಳು (Postage Stamps) ಐತಿಹಾಸಿಕ ಘಟನೆಯ ಸಾಕ್ಷಿಯಾಗಿ ಮತ್ತು ಅದರ ಸುತ್ತಲಿನ ವಿಚಾರಗಳನ್ನು ಭವಿಷ್ಯಕ್ಕೆ ತಿಳಿಸುವ ಸಂಕೇತಗಳಾಗಿ ಉಳಿಯುತ್ತವೆ ಎಂದಿದ್ದಾರೆ. ದೇಗುಲದ ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ಭಗವಾನ್ ರಾಮನ ಕುರಿತಾದ ಅಂಚೆಚೀಟಿಗಳ ಪುಸ್ತಕದ ಬಿಡುಗಡೆಯ ಬಳಿಕ, ಅಂಚೆ ಚೀಟಿಗಳು ಭವಿಷ್ಯದ ಪೀಳಿಗೆಗೆ ಇತಿಹಾಸ ಮತ್ತು ರಾಮಮಂದಿರದ ಕುರಿತಾದ ಐತಿಹಾಸಿಕ ಕ್ಷಣಗಳನ್ನು ತಲುಪಿಸುವ ಮಾಧ್ಯಮಗಳಾಗಿವೆ. ಈ ಅಂಚೆ ಚೀಟಿಗಳು ಕೇವಲ ಕಾಗದದ ತುಣುಕುಗಳು ಅಥವಾ ಕೇವಲ ಕಲಾಕೃತಿಗಳಲ್ಲ. ಅವು ರಾಮಾಯಣದ ಕುರಿತಾದ ತಮ್ಮದೇ ಆದ ವಿಶಿಷ್ಟ ಗುರುತುಗಳನ್ನು ಹೊಂದಿವೆ ಎಂದಿದ್ದಾರೆ. https://ainlivenews.com/ginger-peel-can-be-easily-peeled-by-simple-tricks/ ಬಿಡುಗಡೆ ಮಾಡಲಾದ ಅಂಚೆ ಚೀಟಿಗಳಿಂದ ಯುವಕರು ಬಹಳಷ್ಟು ಕಲಿಯುತ್ತಾರೆ. ಅಂಚೆ ಚೀಟಿಯಲ್ಲಿ ರಾಮ್ ಚರಿತ್ ಮಾನಸ್‍ನ ಶ್ಲೋಕವಿದೆ. ದೇಶಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುವ ಸೂರ್ಯನ ಚಿತ್ರವಿದೆ. ಅಲ್ಲದೇ ಸರಯು ನದಿಯ (Saryu River) ಚಿತ್ರಣವೂ…

Read More

ಮೈಸೂರು: ಸಿದ್ದರಾಮಯ್ಯ ತಮ್ಮ ಮಗನ ಹೆಗಲ ಮೇಲೆ ಬಂದೂಕು ಇಟ್ಟು ಡಿ.ಕೆ.ಶಿವಕುಮಾರ್ ಎದೆಗೆ ಗುಂಡು ಹೊಡೆಯುತ್ತಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ಆರೋಪಿಸಿದರು. ನಗರದಲ್ಲಿ ಸುದ್ದಿಗಾರ ರೊಡನೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತೆ. ಎಸ್.ಎಂ. ಕೃಷ್ಣ ಬಳಿಕ ಮತ್ತೊಮ್ಮೆ ಸಿಎಂ ಆಗುವ ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಮಾಡಿದ್ದರು.  ಆದರೆ ಸಿದ್ದರಾಮಯ್ಯ ಸಿಎಂ ಚೇರ್‌ಗೆ ಬಂದು ಕುಳಿತ ಮೇಲೆ ವರಸೆ ಬದಲಾಗಿದೆ. ಮೊದಲು ಎಂ.ಬಿ.ಪಾಟೀಲ್ ಬಾಯಿಂದ ಐದು ವರ್ಷ ನಾನೇ ಸಿಎಂ ಅಂತ ಹೇಳಿಸಿದ್ದರು. ನಂತರ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್, ಕೆ.ಎನ್. ರಾಜಣ್ಣ ಅವರಿಂದ ಹೇಳಿಕೆ ಕೊಡಿಸಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ನಾನೇ ಐದು ವರ್ಷ ಸಿಎಂ ಅಂತ ಹೇಳಿದ್ದಾಗಿದೆ. ಈಗ ಮಗನ ಮೂಲಕ ಹೇಳಿಸುತ್ತಿದ್ದಾರೆ ಎಂದರು.  

Read More

ಚಿಕ್ಕಮಗಳೂರು: ಶಂಕರಾಚಾರ್ಯರು ಸ್ಥಾಪಿಸಿದ ಚಿಕ್ಕಮಗಳೂರು (Chikkamagaluru) ಜಿಲ್ಲೆ ಶೃಂಗೇರಿ ಮಠದ ಶ್ರೀಗಳು ಅಯೋಧ್ಯೆಯಲ್ಲಿ (Ayodhya) ನಡೆಯುವ ರಾಮಮಂದಿರ (Ram Mandir) ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮಠದ ಆಡಳಿತಾಧಿಕಾರಿ ಗೌರಿ ಶಂಕರ್ ಸ್ಪಷ್ಟಪಡಿಸಿದ್ದಾರೆ. ಶೃಂಗೇರಿ ಮಠದ (Sringeri Mutt) ಇಬ್ಬರು ಗುರುವತ್ರಯರಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಶ್ರೀಗಳು ಇಬ್ಬರು ಗೈರಾಗಲಿದ್ದು, ಮಠದ ಪ್ರತಿನಿಧಿಯಾಗಿ ಆಡಳಿತಾಧಿಕಾರಿ ಗೌರಿಶಂಕರ್ ಅಯೋಧ್ಯೆಯ ರಾಮಮಂದಿರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಶೃಂಗೇರಿ ಜಗದ್ಗುರುಗಳು ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗುತ್ತಾರೆ ಅನ್ನೋದು ಸುಳ್ಳು ಸುದ್ದಿ ಇಬ್ಬರು ಗುರುಗಳು ಹೋಗುತ್ತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. https://ainlivenews.com/ginger-peel-can-be-easily-peeled-by-simple-tricks/ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಗುರುಗಳು ಅಯೋಧ್ಯೆಯ ರಾಮಮಂದಿರಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಸುಳ್ಳು ಸುದ್ದಿಯನ್ನ ಹರಿಬಿಡುತ್ತಾರೆ. ಮತ್ತೊಮ್ಮೆ ಗುರುಗಳು ಅಯೋಧ್ಯೆ ಕಾರ್ಯಕ್ರಮಕ್ಕೆ ತೆರಳುತ್ತಾರೆ ಎಂದು ಸಂದೇಶ ಹಾಕುತ್ತಾರೆ. ಇದು ಶುದ್ಧ ಸುಳ್ಳು. ಗುರುಗಳು ಅಯೋಧ್ಯೆಗೆ ಹೋಗುತ್ತಿಲ್ಲ. ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಗುರುಗಳು ಅಯೋಧ್ಯೆಗೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read More

ಬೆಂಗಳೂರು: ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು, ಹಿಂದೂ ಧರ್ಮದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಬೌದ್ಧ ಧರ್ಮಕ್ಕೆ ಹೋಗಿದ್ದರು. ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಅವರು ಹೋಗಿಲ್ಲ. ರಾಮಮಂದಿರದ ಅರ್ಚಕರಲ್ಲಿ 24 ಜನರ ಪೈಕಿ ಇಬ್ಬರು ದಲಿತರಿದ್ದಾರೆ. ಹಿಂದೂ ಧರ್ಮ ಬದಲಾಗುತ್ತಿದೆ ಎಂದಿದ್ದಾರೆ. https://ainlivenews.com/ginger-peel-can-be-easily-peeled-by-simple-tricks/ ಕಾಂಗ್ರೆಸ್ ಪಕ್ಷದ ಭವಿಷ್ಯ ಅಲ್ಪಸಂಖ್ಯಾತರ ಕೈಯಲ್ಲಿದೆ ಎಂದುಕೊಂಡು ಹಿಂದೂಗಳನ್ನ ನಿಂದಿಸುತ್ತಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯನ್ನು ಕಾಂಗ್ರೆಸ್ ಮನಬಂದಂತೆ ಟೀಕಿಸುತ್ತಿದೆ. ಕಾಂಗ್ರೆಸ್‍ನ ಈ ನಿಲುವನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಮೊದಲು ವಿರೋಧಿಸಿದ್ದರು. ಜನ ಉತ್ತರ ಕೊಡಲು ಆರಂಭಿಸಿದ ಮೇಲೆ ಬದಲಾದರು ಇದನ್ನು ನಾನು ಮೆಚ್ಚುತ್ತೇನೆ ಎಂದರು.

Read More

ತಮಿಳಿನ ಹೆಸರಾಂತ ನಟ ಸೂರ್ಯ, ಇದೀಗ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ. ಹೌದು, ಅವರು ಹಿಂದಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಚಿತ್ರದಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ (Janhvi Kapoor)ನಾಯಕಿಯಾಗಿ ನಟಿಸಲಿದ್ದಾರಂತೆ. ಚಿತ್ರದ ಕುರಿತಂತೆ ಸಾಕಷ್ಟು ವಿವರಗಳು ಸಿಗದೇ ಇದ್ದರೂ, ಸೂರ್ಯ ಮತ್ತು ಜಾಹ್ನವಿ ಕಾಂಬಿನೇಷನ್ ಬಗ್ಗೆ ಸಖತ್ ಸುದ್ದಿಗಳು ಹರಿದಾಡುತ್ತಿವೆ. ಒಂದು ಕಡೆ ಸೂರ್ಯ ಬಾಲಿವುಡ್ ಪ್ರವೇಶ ಮಾಡುತ್ತಿದ್ದರೆ ಮತ್ತೊಂದು ಕಡೆ ಸೂರ್ಯ (Surya) ನಟನೆಯ ‘ಕಂಗುವ’ (Kanguva) ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನಲ್ಲಿ ಸೂರ್ಯ ಸಖತ್ ಮಿಂಚಿದ್ದಾರೆ. ಪೋಸ್ಟರ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.  ಜೊತೆಗೆ ಈ ಸಿನಿಮಾವನ್ನು ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಜೊತೆಗೆ 3 ಡಿ ತಂತ್ರಜ್ಞಾನದಲ್ಲೂ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ಸಿನಿಮಾದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿಲ್ಲ. ಆಗಲೇ ಭರ್ಜರಿ ವ್ಯಾಪಾರ ಕೂಡ ಆರಂಭಿಸಿದೆ.  ಭಾರೀ ಮೊತ್ತಕ್ಕೆ ಓಟಿಟಿಗೆ…

Read More

ಮುಂಬೈ: ಮುಂಬೈನ ರೆಸ್ಟೋರೆಂಟ್‌ನಲ್ಲಿ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನವರಿ 8, 2024ರಂದು ಮುಂಬೈಗೆ ಭೇಟಿ ನೀಡಿದ ರಾಜೀವ್‌ ಶುಕ್ಲಾ, ವರ್ಲಿಯಲ್ಲಿರುವ ಹೆಸರಾಂತ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದರು. ಆಹಾರ ರೂಮ್‌ಗೆ ತಲುಪಿ ಬಾಕ್ಸ್ ಓಪನ್ ಮಾಡಿ ತಿಂದ ಸ್ಪಲ್ಪ ಹೊತ್ತಿನಲ್ಲಿ ಬಾಕ್ಸ್‌ನಲ್ಲಿ ಸತ್ತ ಇಲಿಯನ್ನು ನೋಡಿದ್ದಾರೆ. ಆಹಾರ ತಿಂದು ಅಸ್ವಸ್ಥಗೊಂಡ ಶುಕ್ಲಾರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ಲಾ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರೂ, ಟ್ವೀಟ್ ಮಾಡುವ ಸಮಯದಲ್ಲಿ ನಾಗ್ಪಾಡಾ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿರಲಿಲ್ಲ. ಟ್ವೀಟ್‌ನೊಂದಿಗೆ ಆರ್ಡರ್ ರಸೀದಿ, ವಿತರಿಸಿದ ಪ್ಯಾಕೇಜ್ ಮತ್ತು ಇಲಿಯಿದ್ದ ಆಹಾರದ ಪ್ಯಾಕೆಟ್‌ನ ಪೋಟೋಗಳು ಇದ್ದವು. ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಸಹ ಶುಕ್ಲಾ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ಘಟನೆ ತಕ್ಷಣವೇ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. https://twitter.com/shukraj/status/1746541297375367173?ref_src ಹಲವಾರು X ಬಳಕೆದಾರರು ಶುಕ್ಲಾ ಅವರ ಪರವಾಗಿ ಸಹಾಯಕ್ಕಾಗಿ ಮನವಿಯಲ್ಲಿ ವಿವಿಧ ಅಧಿಕಾರಿ ಗಳನ್ನು…

Read More

ಬದುಕಿನ ಹಾದಿಯ ಆರಂಭದಲ್ಲಿಯೇ ಅದೃಷ್ಟದಂತೆ ಸಿಕ್ಕ ಪ್ರೇಮ.. ಅದನ್ನು ಒಪ್ಪಿಕೊಂಡು ಅಪ್ಪಿಕೊಂಡ ಕುಟುಂಬ..ಸಪ್ತಪದಿಯ ಹೆಜ್ಜೆಗಳನ್ನ ಸ್ವರ್ಗದ ಮೆಟ್ಟಿಲಾಗಿಸಿದ ಹುಡುಗ.. ಸೌಂದರ್ಯ ತುಂಬಿದ್ದ ಅವಳ ಕಣ್ಣುಗಳಲ್ಲಿ ಕಾಣುತ್ತಿದ್ದಿದ್ದು ತೃಪ್ತಿಯ ನಗು.. ಇಷ್ಟಿದ್ದರೂ ಆಕೆ ಉಪ್ಪರಿಗೆಯ ಕೋಣೆಯಲ್ಲಿ ಉಸಿರಿಗೆ ನೇಣಿನ ಗೋಣು ಬಿಗಿಸಿದ್ದಳು.. ಆಗುಂಬೆಯ ನಿಸರ್ಗದ ಆಪ್ತತೆಯ ಸಂಕೇತದಂತ್ತಿದ್ದ ಅವಳು ಇಹಲೋಕ ಬಿಟ್ಟಿದ್ದೇಕೆ ಎಂಬ ವಿಚಾರ ನಿಜಕ್ಕೂ ಪ್ರೀತಿಯನ್ನೆ ಅಪರಾಧಿಯನ್ನಾಗಿಸುತ್ತೆ.. ಆಗುಂಬೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೊನ್ನೆ ರಾತ್ರಿ ಯುವತಿಯೊಬ್ಬಳು ನೇಣಿಗೆ ಶರಣಾಗಿದ್ದಳು. ಅದರ ಬಗೆಗಿನ ವಿವರ ರಾತ್ರಿ ಕೋಣೆಗೆ ಹೋಗಿ ಮಲಗಿದ್ದ ಯುವತಿ ಶವ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಈ ಸ್ಟೋರಿಯಲ್ಲಿದೆ. ಮುಂದುವರಿದು ಹೇಳುವುದಾದರೆ, ಆಕೆ ತನ್ನ ಸಾವಿಗೆ ಯಾರನ್ನೂ ಸಹ ಕಾರಣವಾಗಿಸಿಲ್ಲ. ಬರೆದಿಟ್ಟ ಡೈರಿಯ ಡೆತ್​ ನೋಟ್​ನಲ್ಲಿ ಯಾರನ್ನು ಸಹ ದೂರಿಲ್ಲ. ಹೊಣೆಯಾಗಿಸಿಲ್ಲ. ಅಪರಾಧಿಯಾಗಿಸಿಲ್ಲ. ಹಾಗೆ ನೋಡಿದರೆ, ಕಾನೂನಿನ ಅಡಿಯಲ್ಲಿ ಇವತ್ತು ಆಗುಂಬೆ ಪೊಲೀಸ್ ಸ್ಟೇಷನ್​ನಲ್ಲಿ ರಿಜಿಸ್ಟರ್ ಆದ ಕೇಸ್​ ತುಂಬಾನೇ ಗಂಭೀರವಾದುದು. ಮದುವೆಯಾದ 10 ತಿಂಗಳಿನಲ್ಲಿಯೇ ಯುವತಿಯೊಬ್ಬಳು…

Read More

ಬೆಂಗಳೂರು: ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮನ ಹಿನ್ನೆಲೆ ಸಾರ್ವಜನಿಕರ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಆಗಲಿದೆ. ಪ್ರಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಸಂಚಾರ ಮಾರ್ಗದ ಹಲವೆಡೆ ನಿರ್ಬಂಧ ಹೇರಲಾಗಿದೆ. ಗೊಲ್ಲರಹಳ್ಳಿ ಗೇಟ್-ಹುಣಸೂರು ಗ್ರಾಮ (ಕೆಐಎಡಿಬಿ ಕೈಗಾರಿಕ ಪ್ರದೇಶ), ಡಾಬಾ ಗೇಟ್‌ನಿಂದ (ಎನ್‌ಹೆಚ್ 648) ವಿಮಾನ ನಿಲ್ದಾಣದ ಕಡೆಗೆ, ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಿಂದ ವಿಮಾನ ನಿಲ್ದಾಣದ ಕಡೆಗೆ, ಚಿಕ್ಕಜಾಲ ಕೋಟೆ ಕಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗೆ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. https://ainlivenews.com/ginger-peel-can-be-easily-peeled-by-simple-tricks/ ಇನ್ನು ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಇಂದು ಬೆಳಗ್ಗೆ 9:35ಕ್ಕೆ ದೆಹಲಿಯಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. 9:40 ಕ್ಕೆ ಕಲಬುರಗಿಯಿಂದ ಹೆಲಿಕಾಪ್ಟರ್ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 12:10ಕ್ಕೆ ಹೆಲಿಕಾಪ್ಟರ್ ಮೂಲಕ ಸೊಲ್ಲಾಪುರದಿಂದ…

Read More