Author: AIN Author

ಸೊರಬ: ಕೆನರಾ ಸಂಸದ ಅನಂತಕುಮಾರ್ ಹೆಗಡೆ ಕೆಟ್ಟ ಹಾವು ಇದ್ದಂತೆ. ಜನರಿಂದ ಆಯ್ಕೆಯಾದ ನಂತರ ಸದನದಲ್ಲಿ ಕಾಣ ಸಿಗದವರು ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿ ನಡೆಸಿದ ಅವರು,  ಯಾರೇ ಆಗಿರಲಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸಬಾರದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ಜನತೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ.  ಆದರೆ, ಸದನದಲ್ಲಿ ಎಲ್ಲಿಯೂ ಕಾಣದ ಅವರು ಆರಿಸಿದ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಪ್ರಜಾಪ್ರಭುತ್ವದ ಅಡಿಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದವರು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಮುಖ್ಯಮಂತ್ರಿ ಕುರಿತು ಏಕವಚನದಲ್ಲಿ ಮಾತನಾಡುತ್ತಾರೆ. ಇದು ನೀಚತನದ ಪರಮಾವಧಿ. ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುವ ಅಗತ್ಯವಿದೆ ಎಂದರು. ನಾವ್ಯಾರೂ ರಾಮ ಭಕ್ತರಲ್ಲವೇ ಎಂದು ಪ್ರಶ್ನಿಸಿದ ಅವರು, ನಾವೂ…

Read More

ಅಯೋಧ್ಯೆ:- ಅಯೋಧ್ಯೆಯಲ್ಲಿ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಭಯೋತ್ಪಾದನ ನಿಗ್ರಹ ದಳ ಅರೆಸ್ಟ್ ಮಾಡಿದ್ದಾರೆ. ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರತಿಯೊಂದು ಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಗುರುವಾರ ಭಯೋತ್ಪಾದನಾ ನಿಗ್ರಹ ದಳ ಅಯೋಧ್ಯೆಯಲ್ಲಿ ಮೂವರು ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದೆ. ಈ ಸಂಬಂಧ ಉತ್ತರ ಪ್ರದೇಶದ ವಿಶೇಷ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರು ಮಾತನಾಡಿ, ಗುರುವಾರ ಅಯೋಧ್ಯೆ ಜಿಲ್ಲೆಯಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳವು ಮೂವರು ಶಂಕಿತ ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಜಿಪಿ ಕುಮಾರ್ ಹೇಳಿದ್ದಾರೆ.

Read More

ಬಳ್ಳಾರಿ:- ಊಟಕ್ಕೆಂದು ಹೊಟೇಲ್​ಗೆ ಬಂದ ದಲಿತ ಯುವಕರಿಗೆ “ಹೊಟೇಲ್ ಮುಚ್ಚುತ್ತೇನೆ, ಆದರೆ, ನಿಮಗೆ ಊಟ ಕೊಡಲ್ಲ” ಎಂದು ಮಹಿಳೆಯೊಬ್ಬಳು ಹೇಳಿರುವ ಘಟನೆ ಬಳ್ಳಾರಿಯಲ್ಲಿ ಜರುಗಿದೆ. ಗುತ್ತಿಗನೂರು ಗ್ರಾಮದ ಹೊಟೇಲ್‌ನಲ್ಲಿ ಆಹಾರ ನೀಡಲು ಮಹಿಳೆ ನಿರಾಕರಣೆ ಮಾಡಿದ್ದಾರೆ. ಅಸ್ಪೃಶ್ಯತೆ ವಿರುದ್ಧ ಗರಂ ಆದ ಯುವಕರು ಹೊಟೇಲ್‌ನಲ್ಲಿ ಆಹಾರ ನೀಡದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹೊಟೇಲ್ ಬಾಗಿಲ್ ಬಂದ್ ಮಾಡುತ್ತೇನೆ. ಆದರೆ ಊಟ ಕೊಡುವುದಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ದಲಿತರಿಗೆ ನಿಂದಿಸಿದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ವಿಚಾರ ತಿಳಿದ ಕುರುಗೋಡು ತಹಶೀಲ್ದಾರ್ ರಾಘವೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಹುಬ್ಬಳ್ಳಿ : ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ರಾಜಕಾರಣ ಮಾಡುತ್ತಿರುವುದು ಯಾರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಕಾಂಗ್ರೆಸ್‌ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ನಾವು ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಅವರು ಸಹಜವಾಗಿ ಬಂದಿದ್ದರೆ ಯಾವುದೇ ಬಗೆಯ ಚರ್ಚೆನೂ ಆಗುತ್ತಿರಲಿಲ್ಲ. ಆದರೆ, ಎಲ್ಲಿ ಹೋದರೆ ಮತ ಸಿಗುತ್ತದೆ. ಎಲ್ಲಿ ಹೋದರೆ ಸಿಗಲ್ಲ ಎಂದು ಲೆಕ್ಕಾಚಾರ ಹಾಕಿ ಶ್ರೀರಾಮಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದರು.  ಹೀಗಾಗಿ ಇದು ಜನಮಾನಸದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜಕಾರಣ ಮಾಡುತ್ತಿರುವುದು ನಾವಲ್ಲ ಅವರು ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.  ನಾನು ಅಥವಾ ಯಾವುದೇ ಪ್ರಮುಖ ನಾಯಕರು ಆ ರೀತಿ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್‌ನವರು ರಾಮಮಂದಿರ ಉದ್ಘಾಟನೆಗೆ ಬಂದರೆ ಸಂತೋಷ. ಆದರೆ ಬರಲಿಲ್ಲ ಅಂದರೂ ಓಕೆ ಎಂದ ಅವರು, ಕಾಂಗ್ರೆಸ್ಸಿಗರ ಟೀಕೆಗೆ ನಾವು ಪ್ರತಿಕ್ರಿಯೆ ನೀಡುತ್ತಿಲ್ಲ. ಜನರೇ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳ ಮಸೀದಿ ನಿರ್ನಾಮ ಮಾಡುವ ಬಗ್ಗೆ ಅನಂತಕುಮಾರ…

Read More

ಬೆಂಗಳೂರು:- ಬೆಂಗಳೂರಿನಲ್ಲಿಂದು ಮೋಡಕವಿದ ವಾತಾವರಣ ಇದ್ದು, ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಒಣಹವೆ ಇರಲಿದೆ. ಹೊನ್ನಾವರದಲ್ಲಿ 31.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 33.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್ಪೋರ್ಟ್​ 31.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಚಾಮರಾಜನಗರದಲ್ಲಿ 32.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 14.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ದಾವಣಗೆರೆಯಲ್ಲಿ 31.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 14.2 ಡಿಗ್ರಿ…

Read More

ಬೆಂಗಳೂರು:- ಆನೇಕಲ್ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದು ಬಿದ್ದು 20 ಜನ ಗಾಯಗೊಂಡ ಘಟನೆ ಜರುಗಿದೆ. ಗಾಯಾಳು ಕಾರ್ಮಿಕರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಕಟ್ಟಡದ ಅವಶೇಷಗಳಡಿ ಇನ್ನೂ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಎರಡನೇ ಅಂತಸ್ತಿನ ನಿರ್ಮಾಣದ ವೇಳೆ ಕಟ್ಟಡ ಕುಸಿದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.

Read More

ಒಬ್ಬ ವ್ಯಕ್ತಿಯು ತನ್ನ ಮರಣದ ಸಮೀಪದಲ್ಲಿ ಕೆಲವು ಚಿಹ್ನೆಗಳನ್ನು ಪಡೆಯುತ್ತಾನೆ ಎಂದು ಶಿವಪುರಾಣ ಹೇಳುತ್ತದೆ. ಈ ಚಿಹ್ನೆಯಿಂದ ವ್ಯಕ್ತಿ ತನಗೆ ಸಾವು ಸಮೀಪಿಸುತ್ತಿದೆ ಎಂದು ತಿಳಿಯಬಹುದು. ಶಿವ ಪುರಾಣದಲ್ಲಿ, ಶಿವನು ತಾಯಿ ಪಾರ್ವತಿಗೆ ಸಾವಿಗೆ ಸಂಬಂಧಿಸಿದ ಕೆಲವು ಲಕ್ಷಣಗಳ ಬಗ್ಗೆ ಹೇಳುತ್ತಾನೆ. ಅಲ್ಲದೆ, ಸಾವು ಸಮೀಪಿಸಿದಾಗ ಮನುಷ್ಯನ ದೇಹದಲ್ಲಿ ಕಂಡುಬರುವ ಚಿಹ್ನೆಗಳ ಕುರಿತು ಸಹ ತಿಳಿಸಿದ್ದಾನೆ. ಹಾಗಾದರೆ ಸಾವು ಹತ್ತಿರವಾಗುವ ಮುನ್ನ ಕಾಣಿಸಿಕೊಳ್ಳುವ ಆ ಲಕ್ಷಣಗಳು ಯಾವುವು..? ಇಲ್ಲಿವೆ ನೋಡಿ.. ಶಿವಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಇಂದ್ರಿಯಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ, ಅವನ ಸಾವು ಹತ್ತಿರದಲ್ಲಿದೆ ಎಂದು ತಿಳಿಯುತ್ತದೆ. ಅಲ್ಲದೆ, ದೇಹದ ಬಣ್ಣವು ಬದಲಾಗಲು ಪ್ರಾರಂಭಿಸಿದಾಗ, ಅಂದರೆ ದೇಹವು ಬಿಳಿ, ಹಳದಿ, ನೀಲಿ ಅಥವಾ ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ, ಇದು ನಿಮಗೆ ಸಾವು ಸಮೀಪಿಸುತ್ತಿದೆ ಎಂಬ ಸೂಚನೆ ನೀಡುತ್ತದೆ. ಅಲ್ಲದೆ, ಶಿವಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ನೆರಳನ್ನು ನೋಡದಿದ್ದಾಗ ಅಥವಾ ನೆರಳು ತಲೆರಹಿತವಾದಾಗ, ಸಾವಿನ ನೆರಳು ಅವನ…

Read More

ಆಹಾರಕ್ಕೆ ತಕ್ಕಂತೆ ಉಪ್ಪು ಹಾಕಿದಾಗ ಆಹಾರದ ರುಚಿ, ಪರಿಮಳ ಹೆಚ್ಚಾಗುತ್ತದೆ. ಕೆಲವರು ಆಹಾರಕ್ಕೆ ಹಾಕಿರುವ ಉಪ್ಪಿನ ಜೊತೆಗೆ ಮೇಲುಪ್ಪು ಹಾಕಿಕೊಂಡು ಊಟ ಮಾಡ್ತಾರೆ. ಉಪ್ಪಿನ ಸೇವನೆ ಮಿತವಾಗಿರಬೇಕು. ಅತಿಯಾದ ಉಪ್ಪು ನಮ್ಮ ಆರೋಗ್ಯವನ್ನು ಹದಗೆಡಿಸುವುದಲ್ಲದೆ ಸಾವಿಗೆ ಕಾರಣವಾಗುತ್ತದೆ. ಪ್ರತಿ ವರ್ಷ ಸುಮಾರು 1.89 ಮಿಲಿಯನ್ ಜನರು ಅತಿಯಾದ ಉಪ್ಪಿನಿಂದ ಸಾವನ್ನಪ್ಪುತ್ತಾರೆ ಎಂಬ ಆಘಾತಕಾರಿ ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅತಿಯಾದ ಉಪ್ಪು ಸೇವನೆ ಮಾಡೋರಲ್ಲಿ ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಹೃದಯ ಸಮಸ್ಯೆಗಳು ಕಾಡುತ್ತವೆ. ನೀವು ಎಲ್ಲ ಆಹಾರ ಕ್ಕೆ ಅತಿಯಾಗಿ ಉಪ್ಪು ಹಾಕ್ಬೇಕಾಗಿಲ್ಲ. ಹಾಲು, ಮಾಂಸ ಮತ್ತು ಚಿಪ್ಪುಮೀನುಗಳಂತಹ ಅನೇಕ ರೀತಿಯ ಆಹಾರಗಳಲ್ಲಿ ನೈಸರ್ಗಿಕವಾಗಿ ಇದು ಕಂಡುಬರುತ್ತದೆ. ಟೇಬಲ್ ಸಾಲ್ಟ್‌ನಲ್ಲಿ ವ್ಯಾಪಕವಾಗಿ ಕಂಡುಬರುವ ಸೋಡಿಯಂ, ಜೀವಕೋಶಗಳ ಆರೋಗ್ಯ ಕಾಪಾಡುವ ಪೋಷಕಾಂಶವಾಗಿದೆ. ದೇಹಕ್ಕೆ ಅಗತ್ಯ ಎನ್ನುವ ಕಾರಣಕ್ಕೆ ಸೋಡಿಯಂ ಅನ್ನು ಅಧಿಕವಾಗಿ ಸೇವಿಸಿದರೆ, ಹೃದ್ರೋಗ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದ ಅಪಾಯ ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ…

Read More

ಕಲಬುರಗಿ: ಅಯೋಧ್ಯೆಯಲ್ಲಿ ಉದ್ಘಾಟನೆಯಾಗಲಿರುವ ಪ್ರಭು ಶ್ರೀರಾಮ ಚಂದ್ರನ ಆಹ್ವಾನ ಪತ್ರಿಕೆ ಯಲ್ಲಿರುವ ಲೋಗೋ ರಚಿಸಿದ್ದು ಕಲಬುರಗಿಯ ಕಲಾವಿದ. ಹೌದು ರಾಮಮಂದಿರ ಟ್ರಸ್ಟ್ ವಿತರಿಸಿರುವ ಆಹ್ವಾನ ಪತ್ರಿಕೆಯಲ್ಲಿ ಇರೋ ಲೋಗೋ ರಚಿಸಿದ್ದು ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್. ಅಂದಹಾಗೆ VHP ಪ್ರಮುಖ್ ಗೋಪಾಲ್ ನಾಗರಕಟ್ಟೆ ಮೂಲಕ ಟ್ರಸ್ಟ್ ಗೆ ಲೋಗೋ ತಲುಪಿದೆ. ದೇಶದ ವಿವಿಧ ಭಾಗಗಳಿಂದ ಸಾವಿರಾರು ಲೋಗೋಗಳು ಬಂದಿದ್ದವಂತೆ ಅದರಲ್ಲಿ ಕೊನೆಗೆ ಕಲಬುರಗಿ ಲೋಗೋ ಆಯ್ಕೆಯಾಗಿದೆ.ವಿಶೇಷ ಅಂದ್ರೆ ಪ್ರಜ್ವಲಿಸುವ ಸೂರ್ಯನ ಮಧ್ಯೆ ಶ್ರೀರಾಮ ಕಂಗೊಳಿಸುತಿದ್ದಾನೆ.. ಶ್ರೀರಾಮನ ಕೆಳಗೆ ಎರಡೂ ಬದಿಯಲ್ಲಿ ಕೈ ಮುಗಿದು ಕುಳಿತಿರುವ ಹನುಮಂತನ ಚಿತ್ರವಿದೆ..ಹೀಗಾಗಿ ಲೋಗೋ ಎಲ್ಲರ ಗಮನ ಸೆಳೆದಿದೆ.

Read More

ನವದೆಹಲಿ: ಬಿಲ್ಕಿಸ್ ಬಾನೊ ಪ್ರಕರಣದ ಮೂವರು ಅಪರಾಧಿಗಳು ಶರಣಾಗಲು ಹೆಚ್ಚಿನ ಕಾಲಾವಕಾಶ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ (Supreme Court) ಒಪ್ಪಿಗೆ ನೀಡಿದೆ. 11 ಮಂದಿಯನ್ನು ಮುಂಚಿತವಾಗಿ ಬಿಡುಗಡೆ ಮಾಡಿದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ನಂತರ ಅವರನ್ನು ಮತ್ತೆ ಜೈಲಿಗೆ ಕಳುಹಿಸಲು ಆದೇಶಿಸಿತ್ತು. ಇದಾದ ಒಂದು ವಾರದ ನಂತರ ಅಪರಾಧಿಗಳು ಅರ್ಜಿಗಳನ್ನು ಸಲ್ಲಿಸಿದ್ದರು.  ಹಿರಿಯ ವಕೀಲ ವಿ.ಚಿತಾಂಬರೇಶ್ ಅವರು ಅರ್ಜಿಯ ಆರಂಭಿಕ ವಿಚಾರಣೆಯನ್ನು ಕೋರಿದರು. ಈ ಮೂವರು ಅಪರಾಧಿಗಳು ಜನವರಿ 21 ರಂದು ಶರಣಾಗಲು ಕೇವಲ ಮೂರು ದಿನಗಳು ಮಾತ್ರ ಉಳಿದಿವೆ ಎಂದು ಹೇಳಿದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ಪೀಠವನ್ನು ರಚಿಸುವಂತೆ ಸಿಜೆಐ ಡಿ.ವೈ.ಚಂದ್ರಚೂಡ್ ಅವರಿಂದ ಆದೇಶ ಪಡೆಯಲು ನೋಂದಣೆಗೆ ನಿರ್ದೇಶನ ನೀಡಿದರು. ಜನವರಿ 8 ರಂದು ಮಹತ್ವದ ತೀರ್ಪಿನಲ್ಲಿ, 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಿದ…

Read More