Author: AIN Author

ಮೈಸೂರು:- ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಇಡೀ ದೇಶವೇ ಬಹಳ ಕಾತುರದಿಂದ ಕಾಯುತ್ತಿರುವ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಜನವರಿ 22 ರ ದಿನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನೂ ಅಯೋಧ್ಯೆ ರಾಮಮಂದಿರದಲ್ಲಿ ಜ.22 ರಂದು ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ವಿಗ್ರಹದ ಮೊದಲ ಚಿತ್ರ ವೈರಲ್‌ ಆಗಿದೆ. ಈ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತನೆ ಮಾಡಿದ್ದಾರೆ. ಈ ವಿಗ್ರಹವು ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ.

Read More

ದೇವನಹಳ್ಳಿ:- ಪ್ರಧಾನಿ ಮೋದಿ ಅವರು ಇಂದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಹೆಚ್ಚಿದ ಭದ್ರತೆ ಒದಗಿಸಲಾಗಿದೆ. ಅದರ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಹೌದು, ಇಂದು ಬೆಂಗಳೂರಿಗೆ ಆಗಮಿಸುತ್ತಿರುವ PM ಮೋದಿ ಅವರು, ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಹೊಸ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸನ್ನ ಉದ್ಘಾಟಿಸಲಿದ್ದಾರೆ. ಹೀಗಾಗಿ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಹೆಚ್ಚಿದ ಭದ್ರತೆ ಒದಗಿಸಲಾಗಿದೆ. ಪ್ರಧಾನಿ ಮೋದಿಯವರ ವಾಹನ ವಿಐಪಿ ಗೇಟ್ ಮೂಲಕ ಹೊರ ಬರಲಿರುವ ಹಿನ್ನೆಲೆ ಬಾಂಬ್ ನಿಗ್ರಹ ದಳ ಶ್ವಾನದಳದಿಂದ ಪ್ರತಿ ವಾಹನಗಳ ತಪಾಸಣೆ ಮಾಡಲಾಗಿದೆ. ಎಸ್ಪಿಜಿ ತಂಡದಿಂದ ಏರ್ಪೋರ್ಟ್ ಬಳಿ ಬರುವ ಎಲ್ಲಾ ವಾಹನಗಳ ಮೇಲೆ  ಹೆಚ್ಚು ನಿಗಾ ಇರಿಸಲಾಗಿದೆ.

Read More

ಮೈಸೂರು:- ಕಪಿಲಾ ನದಿಯ ನೀರುಪಾಲಾಗಿದ್ದ ಮೂವರು ಮಾಲಾಧಾರಿಗಳಲ್ಲಿ ಓರ್ವನ ರಕ್ಷಣೆ ಹಾಗೂ ಮತ್ತೋರ್ವನ ಮೃತದೇಹ ಪತ್ತೆಯಾಗಿರುವ ಘಟನೆ ಜರುಗಿದೆ. ಅಲ್ಲದೇ ಮತ್ತೊಬ್ಬನಿಗೆ ಶೋಧ ಮುಂದುವರಿದಿದೆ. ಗವಿರಂಗ, ರಾಕೇಶ್ (19), ಅಪ್ಪು (16) ನೀರು ಪಾಲಾಗಿದ್ದರು. ಇದೀಗ ಗವಿರಂಗ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಬಾಲಕ ಅಪ್ಪು ಮೃತ ದೇಹ ಪತ್ತೆಯಾಗಿದೆ. ಇವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಟು ಜನ ಅಯ್ಯಪ್ಪ ಮಾಲಾಧಾರಿಗಳು ಕಳೆದ ಮೂರು ದಿನಗಳ ಹಿಂದೆ ಶಬರಿ ಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮುಗಿಸಿಕೊಂಡು ಮಾಲಧಾರಿಗಳು ನಂಜನಗೂಡಿಗೆ ಬಂದಿದ್ದಾರೆ. ಇಲ್ಲೇ ಮಾಲೆ ತೆಗೆದಯಲು ನಿಶ್ಚಯಿಸಿದ್ದರು. ಹೀಗಾಗಿ ಐವರು ಕಪಿಲಾ ನದಿಯ ಹೆಜ್ಜಿಗೆ ಸೇತುವೆ ಬಳಿ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮಾಡುವಾಗ ಮೂವರು ನೀರು ಪಾಲಾಗಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದಾರೆ. ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ.

Read More

ಕಲಬುರ್ಗಿ:- ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸ್ಟಾಪ್​ಓವರ್ ನಂತರ ಸೇನೆಯ ಚಾಪರೊಂದರಲ್ಲಿ ಸೋಲಾಪುರಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆರಳಿದ್ದಾರೆ ಭಾರತೀಯ ವಾಯು ಸೇನೆಯ ವಿಮಾನದಲ್ಲಿ ಬೆಳಗ್ಗೆ 9.35 ಕ್ಕೆ ನಗರದಲ್ಲಿ ಲ್ಯಾಂಡ್ ಆದ ಪ್ರಧಾನಿ ಮೋದಿ ಕೂಡಲೇ ಅಂದರೆ 9.40ಕ್ಕೆ ಸೇನೆಯ ಹೆಲಿಕ್ಪಾಪ್ಟರ್ ವೊಂದರ ಮೂಲಕ ಸೋಲಾಪುರಗೆ ತೆರಳಿದರು. ಅವರ ಆಗಮನದ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಕಲಬುರಗಿಯ ಜಿಲ್ಲಾಧಿಕಾರಿ ಫೌಜಿಯ ತರನ್ನುಮ್ ವಿಮಾನ ನಿಲ್ದಾಣ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆ ಪ್ರತಿಬಂಧಕಾಜ್ಞೆ ವಿಧಿಸಿದ್ದಾರೆ. ಸೋಲಾಪುರದಿಂದ ಮಧ್ಯಾಹ್ನ 1 ಗಂಟೆಗೆ ಕಲಬುರಗಿಗೆ ವಾಪಸ್ಸಾಗಲಿರುವ ಪ್ರಧಾನಿ ಮೋದಿ 1.05 ಕ್ಕೆ ವಾಯುಪಡೆಯ ಅದೇ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

Read More

ಅಯೋಧ್ಯೆ : ಭವ್ಯವಾದ ಶ್ರೀರಾಮಮಂದಿರದ (Ram Mandir) ಗರ್ಭಗುಡಿಯ ಪೀಠದ ಮೇಲೆ ಬಾಲರಾಮನ (ರಾಮಲಲ್ಲಾ) ನೂತನ ವಿಗ್ರಹವನ್ನು (Ramlalla Idol) ಗುರುವಾರ‌ ಇರಿಸಲಾಗಿದೆ. ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರು ಸಮಗ್ರ ಪ್ರಕ್ರಿಯೆಯ ನಂತರ ವಿಗ್ರಹವನ್ನು ಆಯ್ಕೆ ಮಾಡಿದ್ದಾರೆ. ಗರ್ಭಗುಡಿಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಚಿತ್ರ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೃಷ್ಣಶಿಲೆಯಿಂದ ಕೆತ್ತನೆ ಮಾಡಿದ ಸುಮಾರು 150-200 ಕೆಜಿ ತೂಕದ ಈ ವಿಗ್ರಹವನ್ನು ಬುಧವಾರ ಸಂಜೆ ಬಿಗಿ ಭದ್ರತೆಯ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತರಲಾಗಿತ್ತು

Read More

ಮೈಸೂರು:- ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರೋದು ಸೌಭಾಗ್ಯ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. 500 ವರ್ಷಗಳ ನಂತರ ರಾಮಮಂದಿರ ನಿರ್ಮಾಣವಾಗಿ ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ಆಗುತ್ತಿರುವುದು ಇಡೀ ನಾಡಿಗೆ ಸಂತಸ ಮತ್ತು ಸಂಭ್ರಮದ ವಿಷಯವಾಗಿದೆ, ಇದು ನಿಜಕ್ಕೂ ಎಲ್ಲ ಭಾರತೀಯರಿಗೆ ಐತಿಹಾಸಿಕ ಕ್ಷಣ ಎಂದರು. ಪ್ರತಿಷ್ಠಾಪನೆಗೆ ಮೈಸೂರಿನವರೇ ಆಗಿರುವ ಅರುಣ್ ಯೋಗಿರಾಜ್ ಕೆತ್ತಿರುವ ಬಾಲ ರಾಮನ ಮೂರ್ತಿ ಆಯ್ಕೆಯಾಗಿರೋದು ಹೆಮ್ಮೆಯ ವಿಷಯ. ಇನ್ನೂ ಬೇರೆ ಬೇರೆ ವಿಗ್ರಹಗಳನ್ನು ಕೆತ್ತಿ ನಾಡಿನಾದ್ಯಂತ ಖ್ಯಾತಿ ಗಳಿಸಿರುವ ಅರುಣ್ ಅವರಿಗೆ ಅಭಿನಂದನೆ ಮತ್ತು ಶುಭಾಶಯಗಳು ಎಂದು ಯದುವೀರ್ ಹೇಳಿದರು.

Read More

ಬೆಂಗಳೂರು: ಅಯೋಧ್ಯೆ ರಾಮಮಂದಿರ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ನಾವು ಹಿಂದೂಗಳೇ ಎಂದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಾಮಮಂದಿರ ವಿಚಾರದಲ್ಲಿ ಯೂಟರ್ನ್‌ ಹೊಡೆದಿದ್ದಾರೆ. https://ainlivenews.com/countdown-to-inauguration-of-ram-mandir-in-ayodhya-ramas-geeta-lokarpane-in-bengaluru/ ನಗರದಲ್ಲಿ ಮಾತನಾಡಿದ ಅವರು, ನಾವು  ಕೂಡಾ ಶ್ರೀರಾಮನ ಆರಾಧಕರು ನನ್ನ ಎದೆಯನ್ನು ಸೀಳಿದ್ರೆ ಶ್ರೀರಾಮ, ಸಿದ್ದರಾಮ ಇಬ್ಬರೂ ಇದ್ದಾರೆ ಬಿಜೆಪಿಯವರು ನಾವು ಹಿಂದೂ ವಿರೋಧಿಗಳೆಂಬ ರೀತಿ ಬಿಂಬಿಸ್ತಿದ್ದಾರೆ ಎಂದು ಹೇಳಿದ್ದಾರೆ ಯುವಕರು ದಯವಿಟ್ಟು ರಾಜಕಾರಣಿಗಳ ಹಿಂದೆ ಬರಲೇಬೇಡಿ ನಿಮಗೆ ರಾಜಕಾರಣಿ ಇಷ್ಟವಾದ್ರೆ ಚುನಾವಣೆ ವೇಳೆ ಮತ ಹಾಕಿ ರಾಮಮಂದಿರ ಓಪನ್ ಮಾಡಿಸಿದ್ದೇ ರಾಜೀವ್ ಗಾಂಧಿ. ಜ.22ರ ನಂತರ ಅಯೋದ್ಯೆಗೆ ಹೋಗ್ತೆನೆಂದು ಸಿಎಂ ಹೇಳಿದ್ದಾರೆ ನಾನು ಕೂಡಾ ಶ್ರೀರಾಮನ ಆರಾಧಕ, ನಾನೂ ಅಯೋಧ್ಯೆಗೆ ಹೋಗ್ತೇನೆ ಎಂದು  ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

Read More

ನೆಲಮಂಗಲ:- ಮೋದಿ ಜೊತೆಗಿನ ಫೋಟೋ ಬಳಸಿ ವೈದ್ಯೆಗೆ 95 ಸಾವಿರ ರೂ. ವಂಚಿಸಿದ ನಕಲಿ ಆರ್ಮಿ ಆಫೀಸರ್ ವಿರುದ್ಧ FIR ದಾಖಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಆರ್ಮಿ ಆಫೀಸರ್ ಸತೀಶ್ ಎಂಬಾತ ಸೇನೆಯಲ್ಲಿ 25 ಮಂದಿ ಮಹಿಳೆಯರನ್ನು ತಪಾಸಣೆಗೆ ಕಳುಹಿಸುವುದಾಗಿ ಹೇಳಿ ದಾಸರಹಳ್ಳಿಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ.ಜ್ಯೋತಿ ಅವರನ್ನು ನಂಬಿಸಿದ್ದಾನೆ. ಅಲ್ಲದೆ, ಆರ್ಮಿಯಿಂದ ಅಡ್ವಾನ್ಸ್ ಪೇ ಮಾಡಿಸುತ್ತಾರೆ. ನಿಮ್ಮ ಯುಪಿಐ ಸ್ಕ್ಯಾನರ್ ಕಳುಹಿಸಿ ಎಂದು ಕೇಳಿದ್ದಾನೆ. ಡಾಕ್ಟರ್ ಯುಪಿಐ ಸ್ಕ್ಯಾನರ್ ಕಳುಹಿಸುತ್ತಲೇ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 95 ಸಾವಿರ ರೂಪಾಯಿ ಬೇರೊಂದು ಖಾತೆಗೆ ವರ್ಗಾವಣೆಯಾಗಿದೆ. ಆನ್​ಲೈನ್ ಮೂಲಕ ಹಣ ಎಗರಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಡಾಕ್ಟರ್ ಜ್ಯೋತಿ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Read More

ಬೆಂಗಳೂರು: ರಾಜ್ಯದಲ್ಲಿ ಗೋದ್ರಾ ರೀತಿಯ ಘಟನೆ ಆಗುತ್ತೆಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ MLC ಬಿ.ಕೆ.ಹರಿಪ್ರಸಾದ್ ವಿರುದ್ಧವೇ ಸರ್ಕಾರ ಅಸ್ತ್ರ ಬಿಟ್ಟಿದೆ. MLC ಹರಿಪ್ರಸಾದ್‌ರನ್ನು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಕೆಕೆ ಗೆಸ್ಟ್ ಹೌಸ್‌ನಲ್ಲಿ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು https://ainlivenews.com/sri-ram-temple-built-by-police-personnel/ ಹೇಳಿಕೆ ಆಧರಿಸಿ MLC ಹರಿಪ್ರಸಾದ್ ವಿಚಾರಣೆ ನಡೆಸಿರುವ ಸಿಸಿಬಿ ವಿವಿಐಪಿ ಟ್ರೇಟ್‌ಮೆಂಟ್ ಬೇಡವೆಂದು ಪೊಲೀಸರ ಬಳಿ ಹೇಳಿಕೆ ಬೇಕಿದ್ದರೆ ಅರೆಸ್ಟ್ ಮಾಡಿ ಎಂದಿರುವ ಎಂಎಲ್‌ಸಿ B.K.ಹರಿಪ್ರಸಾದ್ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹರಿಪ್ರಸಾದ್ ಇದು ಕಾಂಗ್ರೆಸ್‌ ಸರ್ಕಾರನೋ RSS ಸರ್ಕಾರವೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More

ಎಲಿಮಿನೇಟ್ ಆಗಿ ಬಿಗ್ ಬಾಸ್ (Bigg Boss Kannada) ಮನೆಯಿಂದ ಆಚೆ ಬಂದಿದ್ದ ಇಶಾನಿ (Ishani) ಸೇರಿದಂತೆ ಹಲವು ಕಂಟೆಸ್ಟೆಂಟ್ ಇದೀಗ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿರುವ ಎಂಟು ಜನರ ಜೊತೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಯಾರು ಹೇಗೆ? ಹೇಗೆ ಆಟ ಆಡಬೇಕು, ಏನು ಮಾಡ್ತಿದ್ದೀರಿ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ (Drone Pratap) ಅವರನ್ನು ಅನುಮಾನಿಸೋ ರೀತಿಯಲ್ಲಿ ಇಶಾನಿ ಆಡಿದ್ದಾರೆ. ಆ ಮಾತೇ ಅವರಿಗೆ ಮುಳುವಾಗಿದೆ. ಕಾಗೆ ಕಕ್ಕ ಉದಾಹರಣೆಯನ್ನು ತೆಗೆದುಕೊಂಡು ಡ್ರೋನ್ ಪ್ರತಾಪ್ ಅವರಿಗೆ ಬೈದಿದ್ದಾರೆ. ಪ್ರತಾಪ್ ಅವರನ್ನು ಕಾಗೆಗೆ ಹೋಲಿಸಿದ್ದಾರೆ. ಇಶಾನಿ ಆಡಿದ ಈ ಮಾತುಗಳನ್ನು ಕೇಳಿದ ಡ್ರೋನ್ ಫ್ಯಾನ್ಸ್ ಇಶಾನಿ ಮೇಲೆ ಗರಂ ಆಗಿದ್ದಾರೆ. ಡ್ರೋನ್ ಗೆ ಮಾತನಾಡುವಂತಹ ಯಾವುದೇ ಯೋಗ್ಯತೆ ಇಲ್ಲವೆಂದು ಕಾಮೆಂಟ್ ಮಾಡಿದ್ದಾರೆ. ಇಶಾನಿ ಮತ್ತು ಡ್ರೋನ್ ಪ್ರತಾಪ್ ಆಡಿದ ಮಾತುಗಳು ಕೂಡ ನಾನಾ ಅರ್ಥಗಳನ್ನು ಕಲ್ಪಿಸುತ್ತಿವೆ. ಇಶಾನಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ ಎಂದು ಕೆಲವರು…

Read More