Author: AIN Author

ಬೆಳಗಾವಿ:- ಅಯ್ಯೋಧ ರಾಮಮಂದಿರ ಉದ್ಘಾಟನೆ ಶುಭಾಶಯ ಕೋರಿದ ಮರಾಠಿ ಬ್ಯಾನರ್ ಗಳನ್ನು ತೆರವು ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳಿಗೆ ಕನ್ನಡಪರ ಹೋರಾಟಗಾರರ ಮನವಿ ಮೇರೆಗೆ ತೆರವು ಮಾಡಲಾಗಿದೆ. ಬೆಳಗಾವಿ ಕಪಿಲೇಶ್ವರ ಮಂದಿರದ ಹತ್ತಿರ ಹಾಕಲಾಗಿದ್ದ ಮರಾಠಿ ಬ್ಯಾನರ್ ತೆರವು ಮಾಡಲಾಗಿದೆ. ಎಂಇಎಸ್ ಮುಖಂಡ ರಮಾಕಾಂತ ಕೊಂಡುಸ್ಕರ್,ಸಾಗರ ಪಾಟೀಲ,ಕಪೀಲ್ ಬೋಸ್ಲೆ ಶುಭಾಶಯ ಕೋರಿದ ಬ್ಯಾನರ್ ಹಾಕಲಾಗಿತ್ತು. ಕರ್ನಾಟಕ ರಾಜ್ಯ ಸರಕಾರದ 60% ಕನ್ನಡ ಬಳಕೆ ಮಾಡದ ಹಿನ್ನಲೆ ತೆರವು ನಿನ್ನೆ ರಾತ್ರಿ ಪೋಲಿಸರ ಸಮ್ಮುಖದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳಿಂದ ತೆರವು ಮಾಡಲಾಗಿದೆ.

Read More

ಬೆಂಗಳೂರು: ಏರೋಸ್ಪೇಸ್ ಪಾರ್ಕ್ ಬೋಯಿಂಗ್ ಕಂಪನಿಯ ಘಟಕ  ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನಿಂದ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಆಗಮಿಸಿದ ಪ್ರಧಾನಿ ಮೋದಿ.BIETC ಕ್ಯಾಂಪಸ್‌ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ! ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ವಿಮಾನ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಇಂದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ನಿರ್ಬಂಧಿಸಲಾಗಿದೆ ಬೋಯಿಂಗ್ ಘಟಕದ ಉದ್ಘಾಟನೆ ಮುಗಿಸಿ ಸಂಜೆ 4ಗಂಟೆ ನಂತರ ಕೆಐಎ ಮೂಲಕ ದೆಹಲಿಯತ್ತ ಪ್ರಧಾನಿ ಪ್ರಯಾಣ ಬೆಳಸಲಿದ್ದಾರೆ.

Read More

ಹಾಸನ:- ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ನಾನು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಅಂದು ಒಕ್ಕಲಿಗ ಸಮುದಾಯಕ್ಕೆ ನೀಡಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದು ನಾನು ಎಂದರು. ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿ ಕೊಡಬೇಕೆಂದು ಸಚಿವ ಸಂಪುಟ ಸಭೆ ತುರ್ತು ನಿರ್ಣಯ ಮಾಡಿ ಈಗ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಈ ಕೆಲಸವನ್ನು ನಾನೂ ನನ್ನ ಅಧಿಕಾರ ಅವಧಿಯಲ್ಲೇ ಮಾಡಿದ್ದೆ. ಅಂದು ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ. ನಾನು ಅಧಿಕಾರದಲ್ಲಿದ್ದಾಗ ಒಕ್ಕಲಿಗರಿಗೆ ನೀಡಿದ್ದನ್ನು ಕಡಿಮೆ ಮಾಡಿ, ಮುಸ್ಲಿಮರಿಗೆ ಮೀಸಲಾತಿ ಕೊಟ್ಟೆ. ಇದನ್ನು ನಿರ್ಣಯ ಮಾಡಿದ್ದು ದೇವೇಗೌಡ ಎಂದು ಹೇಳಿಕೊಂಡಿದ್ದಾರೆ. ಗುಂಡೂರಾವ್‌ ಸರ್ಕಾರದಲ್ಲಿ ಅಂಬೇಡ್ಕರ್ ಅವರು ನೀಡಿದ್ದ 18% ಮೀಸಲಾತಿಯಲ್ಲಿ ಎಸ್ಸಿಗೆ 15%, ಎಸ್ಟಿಗೆ 3% ನೀಡಿದ್ದರು. ಆದ್ರೆ ಆ ಕೋಟಾ ಭರ್ತಿ ಮಾಡಲಿಲ್ಲ. ನಂತರ ನಾನು 1983ರಲ್ಲಿ ಲೋಕೋಪಯೋಗಿ ಸಚಿವನಾದಾಗ ಅಂಬೇಡ್ಕರ್ ಕೊಟ್ಟಂತಹ ಕೋಟಾ ಭರ್ತಿಯಾಗಲು 15% ಮೀಸಲಾತಿಯನ್ನು 18%ಗೆ…

Read More

ಮಹಾರಾಷ್ಟ್ರ:- ಮಹಾರಾಷ್ಟ್ರದ ಸೋಲಾಪುರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು, ಮಹಾರಾಷ್ಟ್ರ ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಎಂಟು ಅಮೃತ್ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು. ಬಳಿಕ ಮಾತನಾಡಿದ ಮೋದಿ, ರಾಜಕೀಯ ಎಂದರೆ ಆರೋಪ-ಪ್ರತ್ಯಾರೋಪಗಳೇ. ಆದರೆ ನಮ್ಮ ದಾರಿ ಅಭಿವೃದ್ಧಿ. ಇದರಿಂದಾಗಿ ದೇಶದ ನಾಲ್ಕು ಕೋಟಿ ಜನರಿಗೆ ಮನೆಗಳನ್ನು ನೀಡಲು ಸಾಧ್ಯವಾಯಿತು. ಈ ಜನರು ಎಷ್ಟು ಸಂತೋಷವಾಗಿದ್ದಾರೆ ಎಂದು ಕೇಳಿ. ದೇಶದಲ್ಲಿ ಬಡತನ ನಿರ್ಮೂಲನೆಯ ಘೋಷಣೆಗಳು ಬಹಳ ಕಾಲ ಮೊಳಗಿದವು. ಆದರೆ ಬಡತನ ಹೋಗಲಿಲ್ಲ. ಏಕೆಂದರೆ ಬಡವರ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಅದರ ಪ್ರಯೋಜನ ಸರಿಯಾದ ಫಲಾನುಭವಿಗೆ ಸಿಗುತ್ತಿಲ್ಲ. ನೀವು ಅನುಭವಿಸಿದ ಕಷ್ಟಗಳು ಈಗ ನಿಮ್ಮ ಮಕ್ಕಳಿಗೆ ನೋಡಲು ಸಿಗುವುದಿಲ್ಲ. ಗುಡಿಸಲಿನ ಬದಲು ಗಟ್ಟಿಯಾದ ಮನೆಯಲ್ಲಿ ವಾಸಕ್ಕೆ ಅವಕಾಶ ಸಿಗಲಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಭಾರತದ ಅತಿದೊಡ್ಡ…

Read More

ಚಾಮರಾಜನಗರ:- ಕೈಯಲ್ಲಿ ತುಳಸಿ ಮಾಲೆ, ರಾಮನ ಪುಸ್ತಕ ಹಾಗೂ ಮಂತ್ರಾಕ್ಷತೆ ಹಿಡಿದು ಪದ್ಮಾಸನ ಕುಳಿತ ಕೈದಿಗಳು.. ಮತ್ತೊಂದೆಡೆ ರಾಮನ ಜಪ ಮಾಡುತ್ತ ತನ್ಮಯವಾಗಿರುವ ಅಧಿಕಾರಿಗಳು.. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರದ ಬಂಧಿಖಾನೆಯಲ್ಲಿ. ನ್ಯಾಯಾಧೀಶರಾದ ಶ್ರೀಧರ್ ನೇತೃತ್ವದಲ್ಲಿ ಜನಾರ್ದನ ದೇವಾಲಯದ ಮುಖ್ಯ ಅರ್ಚಕರಾದ ಅನಂತ್ ಪ್ರಸಾದ್ ಹಾಗೂ ಕಾನೂನು ಪ್ರಾಧಿಕಾರದ ಕಾರ್ಯದರ್ಶಿ ಇಂದು ವಿಚಾರಣಧೀನ ಕೈದಿಗಳಿಗೆ ಅಯೋಧ್ಯೆ ಮಂತ್ರಾಕ್ಷತೆ, ರಾಮನ ಪುಸ್ತಕ ಹಾಗೂ ತುಳಸಿ ಮಾಲೆ ನೀಡಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದ್ರು. ಹೊರಗಿನವರಿಗೆ ರಾಮನ ಪ್ರಾಣ ಪ್ರತಿಷ್ಠಾಪನೆ ನೋಡುವ ಭಾಗ್ಯ ದೊರೆಯಲಿದೆ. ಜೊತೆಗೆ ಮಂತ್ರಾಕ್ಷತೆ ಸಹ ಸಿಗಲಿದೆ, ಆದ್ರೆ ಒಂದಲ್ಲಾ ಒಂದು ಕಾರಣಕ್ಕೆ ತಪ್ಪು ಮಾಡಿ ಜೈಲು ಸೇರಿರುವ ಇವರಿಗೆ ಈ ತರಹದ ಅವಕಾಶಗಳು ಇರುವುದಿಲ್ಲ. ಹಾಗಾಗಿ ಇಂತಹವರಿಗೂ ಈ ಭಾಗ್ಯ ತಪ್ಪದೆ ಸಿಗಲಿ ಹಾಗೂ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಡೆದು ಜೈಲಿನಿಂದ ಆಚೆ ಬಂದ ಬಳಿಕ ಸನ್ಮಾರ್ಗದಲ್ಲಿ ನಡೆಯಲಿ, ರಾಮನ ಗುಣಗಳನ್ನ ಅನುಸರಿಸಲಿ ಎಂದು ಈ ಕಾರ್ಯಕ್ರಮವನ್ನ…

Read More

ಬಳ್ಳಾರಿ:- ಸಿದ್ದರಾಮಯ್ಯನ ಸರ್ಕಾರ ಯ ಮಾದಿಗರಿಗೆ ಮಖ್ಮಲ್ ಟೋಪಿ ಹಾಕಿದೆ ಎಂದು ಕರ್ನಾಟಕ ಮಾದರ ಚನ್ನಯ್ಯ ಸೇನೆಯ ರಾಜ್ಯಾಧ್ಯಕ್ಷ ಜಯಗೋಪಲ್ ಆಕ್ರೋಶ ಹೊರ ಹಾಕಿದ್ದಾರೆ. 4 ಸಂಬಂಧ ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಒಳ ಮೀಸಲಾತಿ ಪರಿಷ್ಕರಣೆ ಹೊಣೆಯನ್ನು ಕೆಂದ್ರದ ಹೆಗಲ ಮೇಲೆ ಹಾಕಿ ಮಾದಿಗರಿಗೆ ಮಖ್ಮಲ್ ಟೋಪಿ ಹಾಕಿದೆ. ಚುನಾವಣೆ ಪೂರ್ವದಲ್ಲಿ ನೀಡಿದ ಹೇಳಿಕೆಗೆ ಬದ್ದವಾಗಿಲ್ಲ, ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಅಂಗೀಕರಿಸಿ ಕೇಂದ್ರಕ್ಕೆ ಕಳಿಸುತ್ತೇವೆ ಎಂದಿದ್ರು,ಆದರೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕ್ರಿಯೆಯನ್ನು ನಡೆಸಿಲ್ಲ, ಈಗಾ ಸಿಎಂ ಸಿದ್ದರಾಮಯ್ಯ ಮಾದಿಗರನ್ನು ಕೇವಲ ವೋಟ್ ಬ್ಯಾಂಕ್’ಗೆ ಬಳಸಿಕೊಳ್ತಾರೆ, ಅಹಿಂದ ಮುಖವಾಡ ಧರಿಸಿರುವ ಸಿಎಂಗೆ ನಾಚಿಕೆಯಾಗಬೇಕು ಎಂದರು ಇನ್ನೂ ಅಮಾಯಕ ಮಾದಿಗರಿಗೆ ವಿರೋಧಿ ನಿರ್ಣಯ ಕೈಗೊಂಡು ಮರಣ ಶಾಸನ ಬರೆದಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯರ ನಕಲಿ ಅಹಿಂದ ಮುಖವಾಡ ಕಳಚಿ ಬಿದ್ದಿದೆ. ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ದೇಶನ…

Read More

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೊಲೀಸ್ ಬಂದೋಬಸ್ತ್ ಫುಲ್‌ ಸ್ಟ್ರೀಕ್ಟ್‌ ಆಗಿದ್ದು ಈಗಾಗಲೇ ಪೊಲೀಸ್‌ ಸಿಬ್ಬಂದಿಗಳಿಗೆ ರೂಲ್ಸ್‌ ಫಾಲೋ ಮಾಡಲು  ಕಡ್ಡಾಯಗೊಳಿಸಲಾಗಿದೆ. 22 ನೇ ತಾರೀಖು ಯಾವುದೇ ಸಿಬ್ಬಂದಿಗೂ ಇಲ್ಲ ರಜೆ, ರಜೆ ಮೇಲೆ ಇರುವವರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇ ಬೇಕು ಎಂದು ಸೂಚನೆಗಳನ್ನ ನೀಡಲಾಗಿದೆ. ಈ ಹಿಂದಿನ ಕೋಮು ಗಲಭೆಗೆ ಗಳ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಹಾಗಾಗಿ ಈ ಹಿಂದೆ ಕೋಮು ಗಲಭೆಗಳಲ್ಲಿ ಭಾಗಿಯಾದವರ ಮೇಲೆ ಪೊಲೀಸರ ಕಣ್ಣು. ಅಂತವರನ್ನ ಕೂಡ ಕರೆದು ವಾರ್ನ್ ಮಾಡಿರುವ ಪೊಲೀಸರು ಅವರ ಹಿನ್ನೆಲೆ ಹಾಗೂ ಪ್ರಸ್ತುತ ಆತ ಮಾಡುತ್ತಿರುವ ಕೆಲಸದ ಮೇಲೆ ವಶಕ್ಕೆ ಪಡೆಯುವ ಬಗ್ಗೆ ಚಿಂತನೆ ಆಯಾ ಏರಿಯಾ ರೌಡಿ ಶೀಟರ್ ಗಳ ಮೇಲೂ ಪೊಲೀಸರ ಹದ್ದಿನ ಕಣ್ಣುಎಲ್ಲಾ ಠಾಣ ವ್ಯಾಪ್ತಿಯಲ್ಲೂ ಶಾಂತಿ ಪಾಲನ ಸಭೆಯನ್ನ ನಡೆಸಲು ಸೂಚನೆ ನೀಡಲಾಗಿದೆ. ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ನಡೆಯಲಿರುವ ಶಾಂತಿ ಪಾಲನಾ ಸಭೆ ಎಲ್ಲಾ ಧರ್ಮದ…

Read More

ಕೋಲಾರ:- ಇಲ್ಲಿನ ಟಿಎಪಿಸಿಎಂಎಸ್‍ಗೆ ಸಾಮಾನ್ಯ ರೈತರು ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಅವರಲ್ಲಿ ಸೂಕ್ತ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿರುವು ತುಂಬಾ ಸಂತೋಷವಾಗಿದೆ ಇದು ತಾಲೂಕಿನ ರೈತರ ಗೆಲುವಾಗಿದೆ ಎಂದು ಸಿಎಂ ಆರ್ ಶ್ರೀನಾಥ್ ಅವ್ರು ತಿಳಿಸಿದ್ರು. ನಗರದ ತಮ್ಮ ನಿವಾಸದಲ್ಲಿ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ವಡಗೂರು ರಾಮು ಹಾಗೂ ಉಪಾಧ್ಯಕ್ಷ ಎಲ್.ಆರ್.ರಾಜಣ್ಣ ಅವರನ್ನು ಸನ್ಮಾಸಿ ನಂತರ ಸುದ್ದಿಗಾರೊಂರಿಗೆ ಮಾತನಾಡಿದ್ರು. ಟಿಎಪಿಸಿಎಂಎಸ್‍ನ 14 ಸ್ಥಾನಗಳ ಪೈಕಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಗಳು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಒಬ್ಬ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅವಿರೋಧ ಆಯ್ಕೆಯಾಗಿದ್ದಬೇಕಿದ್ದುದನ್ನು ಚುನಾವಣೆ ನಡೆಯುವಂತೆ ಕುತಂತ್ರ ಕೆಲಸ ಮಾಡಿ ನಮ್ಮ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಕಾಂಗ್ರೆಸ್ಸಿನವರಿಗೆ ರೈತರು ತಕ್ಕಪಾಠ ಕಲಿಸಿದ್ದಾರೆ ಎಂದರು. ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೂ ಕಾಂಗ್ರೆಸ್ಸಿನವರು ಸಂಖ್ಯಾಬಲವಿಲ್ಲದೇ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಜೆಡಿಎಸ್, ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದು, ಕುತಂತ್ರ ರಾಜಕಾರಣಕ್ಕೆ ತೆರೆ ಬಿದ್ದಿದೆ ಎಂದ ಅವರು, ಕಾಂಗ್ರೆಸ್ಸಿನವರೊಂದಿಗೆ ಯಾವುದೇ ರಾಜಿ, ಒಳ ಒಪ್ಪಂದ ಮಾಡಿಕೊಂಡಿಲ್ಲವೆಂದು ಸ್ಪಷ್ಟಪಡಿಸಿದರು. ಇನ್ನು ಟಿಎಪಿಸಿಎಂಎಸ್‍ನಲ್ಲಿ…

Read More

ಕಲಬುರ್ಗಿ:- ಅಯೋಧ್ಯೆಯಲ್ಲಿ ಉದ್ಘಾಟನೆ ಆಗ್ತಿರೋ ಪ್ರಭು ಶ್ರೀರಾಮ ಚಂದ್ರನ ಭವ್ಯ ಮಂದಿರದ ಆಹ್ವಾನ ಪತ್ರಿಕೆಯಲ್ಲಿ ನಾನು ರಚಿಸಿದ ಲೋಗೊ ಆಯ್ಕೆಯಾಗಿದ್ದು ನನಗೆ ಸಂತಸ ತಂದಿದ್ದು ಇದು ನನ್ನ ಸೌಭಾಗ್ಯ ಅಂತ ಕಲಬುರಗಿಯ ಕಲಾವಿದ ರಮೇಶ್ ತಿಪ್ಪನೂರ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ರಮೇಶ್ ವಿಶ್ವ ಹಿಂದೂ ಪರಿಷತ್ ಪ್ರಮುಖರು ಲೋಗೋ ರಚಿಸುವಂತೆ ಹೇಳಿದ್ರು. ವಿಶೇಷ ಅಂದ್ರೆ ದೇಶದ ಸಾವಿರಾರು ಲೋಗೋಗಳ ಮಧ್ಯೆ ರಾಮ ಮಂದಿರ ಟ್ರಸ್ಟ್ ನನ್ನ ಲೋಗೋ ಆಯ್ಕೆ ಮಾಡಿದೆ ಅಂದ್ರು. ಹೀಗಾಗಿ ಯಶಸ್ಸು ಇಡೀ ನಮ್ಮ ಕಲಬುರಗಿಗೆ ಸಲ್ಲಬೇಕು ಅಂತ ಹೇಳಿದ್ರು.

Read More

ಬೆಂಗಳೂರು: ಇಂದು ರಾಜ್ಯಕ್ಕೆ ಭೇಟಿ ನೀಡಿರುವ ಗೌರವಾನ್ವಿತ ಪ್ರಧಾನಮಂತ್ರಿಗಳಾದ  ಮೋದಿ ಅವರಿಗೆ ಅತ್ಯಂತ ಪ್ರೀತಿ, ಆದರಪೂರ್ವಕ ಸ್ವಾಗತ, ಸುಸ್ವಾಗತವನ್ನು ಕೋರಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ. https://x.com/hd_kumaraswamy/status/1748241708977103355?t=KU4hFOPpvyUmeQdfZjEwvg&s=08 ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು,  ಮಾನ್ಯ ಪ್ರಧಾನಿಗಳನ್ನು ಸ್ವಾಗತಿಸಲು ನಾನು ಸಹ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಬೇಕಿತ್ತು. ನಿನ್ನೆಯಷ್ಟೇ ನವದೆಹಲಿಯಿಂದ ಬೆಂಗಳೂರಿಗೆ ವಾಪಸ್ ಬಂದ ನನಗೆ ಶೀತ ಲಕ್ಷಣ ಕಾಣಿಸಿಕೊಂಡಿದ್ದು, ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ಗೌರವಾನ್ವಿತ ಪ್ರಧಾನಿಗಳನ್ನು ಖುದ್ದು ಸ್ವಾಗತಿಸಲು ಸಾಧ್ಯವಾಗದಿದ್ದಕ್ಕೆ ವಿಷಾದಿಸುತ್ತೇನೆ ಹಾಗೂ ಪ್ರಧಾನಿಗಳ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ.

Read More