Author: AIN Author

ಬೆಂಗಳೂರು: ಕೃಷಿ ಅಧಿಕಾರಿಗಳ ಸಹಾಯಕ ಕೃಷಿ ನಿರ್ದೇಶಕರ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಯಿಂದ ಕೃಷಿ ಅಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡಿದ ಮಾನ್ಯ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಯವರಿಗೆ ಕರ್ನಾಟಕ ಕೃಷಿ ಅಧಿಕಾರಿಗಳ ಸಂಘದ ವತಿಯಿಂದ ಇಂದು ಕೃಷಿ ಆಯುಕ್ತಾಲಯದಲ್ಲಿರುವ ಸಂಗಮ ಸಭಾಂಗಣದಲ್ಲಿ ಸನ್ಮಾನಿಸಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು, ಕಳೆದ 30 ವರ್ಷಗಳ ರಾಜಕೀಯ ಜೀವನದಲ್ಲಿ ಹಿರಿಯ ಹಾಗು ಕಿರಿಯ ಅಧಿಕಾರಿಗಳ ಜೊತೆ ಕೆಲಸ ಮಾಡಿದ ಅನುಭವವದಲ್ಲಿ, ನಾನು ಸನ್ಮಾನ ಹಾಗೂ ಅಭಿನಂದನೆ ಪಡೆಯಲು ಬಡ್ತಿ ನೀಡಿಲ್ಲ.. ನನ್ನ ಹಾಗೇ ನಿಮಗೂ ನಾಲ್ಕು ಮಂದಿಗೆ ಸಹಾಯ ಮಾಡಲು ಅವಕಾಶ ಸಿಗಲಿದೆ ಎನ್ನುವ ಉದ್ದೇಶದಿಂದ ಸುಮಾರು 538 ಮಂದಿಗೆ ಮುಂಬಡ್ತಿ ನೀಡಲಾಗಿದೆ ಎಂದು ಹೇಳಿದರು… ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ. ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ಹಾಗು ನಿರ್ದೇಶಕ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತಿದ್ದರಿದ್ದರು..

Read More

ದೇವನಹಳ್ಳಿ:- ಜಾಗತಿಕ ಅಗತ್ಯ ಪೂರೈಸುವ ನಗರ ಬೆಂಗಳೂರು ಎಂದು PM ಮೋದಿ ಹೇಳಿದ್ದಾರೆ. ಇಂದು ನಗರದಲ್ಲಿ ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೊದಲು ಬೆಂಗಳೂರು ಬಗ್ಗೆ ಮೆಚ್ಚುಗೆ ಮಾತನ್ನಾಡಿದರು. ಜಾಗತಿಕ ಅಗತ್ಯಗಳನ್ನು ಪೂರೈಸುವ ನಗರ ಬೆಂಗಳೂರು ಆಗಿದೆ. ಈ ಬಿಐಇಟಿಸಿ ಕೇಂದ್ರ ವೈಮಾನಿಕ ಕ್ಷೇತ್ರಕ್ಕೆ ದೊಡ್ಡ ಬಲ ಕೊಡಲಿದೆ. ಈ ಕೇಂದ್ರ ಭಾರತದ ಮೇಲೆ ವಿಶ್ವದ ಭರವಸೆ ಇನ್ನಷ್ಟು ಗಟ್ಟಿ ಮಾಡಲಿದೆ ಎಂದರು. ಒಂದು ದಿನ ಈ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ವಿಶ್ವದ ಭವಿಷ್ಯ ರೂಪಿಸಲಿದೆ. ಕರ್ನಾಟಕದ ಜನತೆಗೂ ಇವತ್ತು ಮಹತ್ತರ ದಿನ. ಕಳೆದ ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟಿಸಲಾಯ್ತು. ಕರ್ನಾಟಕ ಜಾಗತಿಕ ರಂಗದಲ್ಲಿ ಹೆಚ್ಚು ಹೆಚ್ಚು ವಿಕಸಿತ ಆಗ್ತಿದೆ. ವೈಮಾನಿಕ ರಂಗದಲ್ಲಿ ಹೊಸ ಕೌಶಲ್ಯ ಕಲಿಯಲು ಹೆಚ್ಚು ಅವಕಾಶಗಳು ಸಿಕ್ತಿವೆ. ವೈಮಾನಿಕ ರಂಗದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗತೊಡಗಿವೆ ಎಂದು ಹೇಳಿದರು. ಭಾರತ ಮಹಿಳಾ ಪೈಲಟ್ ಗಳ ವಿಚಾರದಲ್ಲಿ…

Read More

ಧಾರವಾಡ:- ಇಲ್ಲಿನ ಕಲಿಕೇರಿ ಗ್ರಾಮದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಶ್ರೀರಾಮ ವಿಗ್ರಹ ಪತ್ತೆಯಾಗಿದೆ. ಗ್ರಾಮದ ಹೊರಭಾಗದಲ್ಲಿ ಕೆರೆಯ ದಂಡೆಯಲ್ಲಿ ಶ್ರೀರಾಮ ವಿಗ್ರಹ ಪತ್ತೆಯಾಗಿದೆ. ಗ್ರಾಮಸ್ಥರು ಜೆಸಿಬಿ ಮೂಲಕ ಕಚ್ಚಾ ರಸ್ತೆ ದುರಸ್ತಿ ನಡೆಸುತ್ತಿದ್ದಾಗ ದೊಡ್ಡ ಕಲ್ಲು ಪತ್ತೆಯಾಗಿದೆ. ಕಲ್ಲಿನಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ರೂಪಗಳಿವೆ. ಮೇಲ್ಭಾಗದಲ್ಲಿ ಶಿವ-ಪಾರ್ವತಿ ಕೆತ್ತನೆ, ಕೆಳಭಾಗದಲ್ಲಿ ಶ್ರೀರಾಮನ ಕೆತ್ತನೆಯಿದೆ. ವಿಗ್ರಹ ಕಂಡು ಅಚ್ಚರಿಗೊಂಡ ಸ್ಥಳೀಯರು ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ

Read More

ಅಯೋಧ್ಯೆ : ಅಯೋಧ್ಯೆ  ರಾಮಮಂದಿರದಲ್ಲಿ   ಬಾಲ ರಾಮನ ಪೂರ್ಣ ವಿಗ್ರಹ ಅನಾವರಣ.   ಪ್ರತಿಷ್ಠಾಪನೆ ಆಗಿರುವ ರಾಮ ಲಲ್ಲಾ ಮೂರ್ತಿಯ ಎಕ್ಸ್‌ಕ್ಲೂಸಿವ್ ಫೋಟೋಗಳು AIN ನ್ಯೂಸ್ ಲಭ್ಯವಾಗಿದೆ.‌ 51 ಇಂಚಿನ ಅಂದ – ಚೆಂದದ ಮುದ್ದಾಗಿ ನಗುವ ಶ್ರೀ ರಾಮಲಲ್ಲಾ ಮೂರ್ತಿ ಇದಾಗಿದೆ. ಮೂರ್ತಿಯ ಪ್ರಭಾವಳಿಯ ಸುತ್ತ ವಿಷ್ಣುವಿನ ದಶಾವತಾರ ಕಾಣಸಿಗುತ್ತೆ. ಮೂರ್ತಿಯ ಪ್ರಭಾವಳಿಯ ಕೆಳಗೆ ನಿಂತ ಬಲಭಾಗ ಭಕ್ತಾಂಜನೇಯ, ಎಡಭಾಗ ಗರುಡ ಮೂರ್ತಿ ಕಾಣಸಿಗುತ್ತೆ. ರಾಮಲಲ್ಲಾ ಇನ್ನು ರಾಮನ ಬಲಗೈನಲ್ಲಿ ಚಿನ್ನದ ಬಾಣ ಹಾಗೂ ಎಡಗೈನಲ್ಲಿ ಚಿನ್ನದ ಬಿಲ್ಲು ಹಿಡಿದು, ಬ್ರಹ್ಮಕಮಲದ ಮೇಲೆ ರಾಮ ಲಲ್ಲಾ ದರ್ಶನ ನೀಡಲಿದ್ದಾರೆ.

Read More

ಬೆಂಗಳೂರು: ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಚಿವ ರಾಜಣ್ಣನ (KN Rajanna) ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಕ್ಷಮೆ ಕೇಳಬೇಕು, ಅಥವಾ ರಾಜಣ್ಣನ ಮೂಲಕ ಕ್ಷಮೆ ಕೇಳಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ.ಸದಾನಂದಗೌಡ (DV Sadananda Gowda) ಅವರು ಆಗ್ರಹಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರದ ಮುಳಬಾಗಿಲಿನ ಬ್ಯಾನರ್ ಹರಿದರಲ್ಲವೇ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು. ಮುಂದೆ ಸಿದ್ದರಾಮಯ್ಯನವರ ಫೋಟೊ ಇರುವ ಬ್ಯಾನರ್‌ಗಳು ಹರಿದುಹೋಗುವ ದಿನ ಬರಲಿದೆ ಎಂದು ಎಚ್ಚರಿಸಿದರು ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ. ರಾಜಣ್ಣನಿಗೆ ಬೊಂಬೆ ಕಂಡಿತೇ? ಅರಶಿನ ಕಾಮಾಲೆ ರೋಗದವರಿಗೆ ಅರಶಿನವಾಗಿಯೇ ಕಾಣುತ್ತದೆ. ಸಹಕಾರ ಸಚಿವನಾಗಿ ಮಾಡಿದ್ದಾರೆ. ಛೇ, ಸಿದ್ದರಾಮಯ್ಯರಿಂದ ಕೆಟ್ಟ ಕೆಲಸವಿದು. ಸಿದ್ದರಾಮಯ್ಯರ ಓಲೈಕೆ ಮುಂದುವರಿದಿದೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ (Congress) 3 ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ…

Read More

ದೇವನಹಳ್ಳಿ:- ಬೋಯಿಂಗ್ ಸುಕನ್ಯಾ ಯೋಜನೆಯನ್ನು PM ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದಾರೆ. ದೇವನಹಳ್ಳಿ ತಾಲೂಕಿನ ಬಿ.ಮಾರೇನಹಳ್ಳಿ ಗ್ರಾಮದಲ್ಲಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್​ನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಕ್ಯಾಂಪಸ್ ಬೋಯಿಂಗ್ ಕಂಪನಿಯ ಅತಿ ದೊಡ್ಡ ಹೂಡಿಕೆಯಾಗಿದೆ. 43 ಎಕರೆ ಪ್ರದೇಶದಲ್ಲಿ 1,600 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್​ ನಿರ್ಮಾಣ ಮಾಡಲಾಗಿದೆ. ಈ ವೇಳೆ ಬೋಯಿಂಗ್ ಸುಕನ್ಯಾ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದು, ದೇಶದ ಹೆಣ್ಣುಮಕ್ಕಳನ್ನು ಏವಿಯೇಷನ್ ಸೆಕ್ಟರ್​ನತ್ತ ಆಕರ್ಷಿಸುವ ಮತ್ತು ಮಹಿಳೆಯರಿಗೆ ತರಬೇತಿ ನೀಡಲು ಉತ್ತೇಜಿಸಲಾಗುತ್ತಿದೆ ಬಿಐಇಟಿಸಿ ಕೇಂದ್ರದಿಂದ ಜಾಗತಿಕ ಏರೋಸ್ಪೇಸ್ ಉದ್ಯಮದ ಪ್ರಗತಿಗೆ ನೆರವು ನೀಡಲಾಗುತ್ತಿದೆ. 3,000ಕ್ಕೂ ಹೆಚ್ಚು ಇಂಜಿನಿಯರ್‌ಗಳನ್ನು ಹೊಂದುವ ಗುರಿಯನ್ನು ಬಿಐಇಟಿಸಿ ಹಾಕಿಕೊಂಡಿದೆ. ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಕಂಪ್ಯೂಟಿಂಗ್, ಮಾಡೆಲ್ ಆಧಾರಿತ ಇಂಜಿನಿಯರಿಂಗ್ ಮತ್ತು ಅಡ್ಡಿಟಿವ್ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸಲಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್​​ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ…

Read More

ಬೆಂಗಳೂರು: ಜನವರಿ 22ರಂದು ಸೋಮವಾರ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬಿಗಿ ಭದ್ರತೆ ನಿಯೋಜಿಸಲಾಗುತ್ತಿದೆ. ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜ.22ರಂದು ಯಾವುದೇ ಪೊಲೀಸ್ (Police) ಸಿಬ್ಬಂದಿಗೆ ರಜೆ ನೀಡದಂತೆ ಸೂಚಿಸಲಾಗಿದೆ. ಒಂದು ವೇಳೆ ರಜೆಯಲ್ಲಿರುವವರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲೇಬೇಕು ಎಂದು ಹಿರಿಯ ಅಧಿಕಾರಿಗಳು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ ಈ ಹಿಂದಿನ ಕೋಮುಗಲಭೆಗಳ (Communal Riots) ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು, ಅಂತಹ ಗಲಭೆಗಳಲ್ಲಿ ಭಾಗಿಯಾಗಿದ್ದವರ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಜೊತೆಗೆ ಆಯಾ ರೌಡಿಶೀಟರ್‌ಗಳ ಮೇಲೂ ನಿಗಾ ವಹಿಸಲಾಗಿದೆ. ಅಲ್ಲದೇ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್‌ಗಳು ಧರ್ಮದ ಮುಖಂಡರನ್ನ ಕರೆಸಿ ಶಾಂತಿಪಾಲನಾ ಸಭೆ ನಡೆಸಬೇಕು. ಈ ಬಗ್ಗೆ ತಮ್ಮ ಸಮುದಾಯದ ಮುಖಂಡರಿಗೆ ಸಲಹೆ ನೀಡುವಂತೆ ಸೂಚಿಸಲು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

Read More

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಹೀಗಾಗಿ ಬೆಂಗಳೂರು ನಗರದಾದ್ಯಂತ  ಮಾಂಸ ಮಾರಾಟ, ಮದ್ಯ ಮಾರಾಟ ನಿಷೇಧಿಸುವಂತೆ  ಶ್ರೀರಾಮ ಸೇನೆಯಿಂದ ಡಿಸಿಗೆ ಮನವಿ ಮಾಡಿಕೊಂಡಿದ್ದಾರೆ. ಶ್ರೀರಾಮ ಸೇನೆಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು  ಸನಾತನ ಹಿಂದೂ ಧರ್ಮಕ್ಕೆ ಅದೊಂದು ಪವಿತ್ರ ಹಾಗೂ ಅವಿಸ್ಮರಣೀಯ ಕ್ಷಣ ಅಂದು ಸಾತ್ವಿಕ ಆಹಾರ ಸೇವಿಸಿ ಪ್ರತಿಷ್ಟಾಪನೆ ಕಣ್ತುಂಬಿಕೊಳ್ಳಬೇಕು ,ಈ‌ ಹಿನ್ನೆಲೆ ನಗರದಲ್ಲಿ ಮಾಂಸ ಮಾರಾಟ ಹಾಗೂ ಮದ್ಯ ನಿಷೇಧಿಸುವಂತೆ ಶ್ರೀರಾಮ ಸೇನೆ ಆಗ್ರಹ ಮಾಡಿದೆ.

Read More

ಬೆಂಗಳೂರು: ಮೊದಲು ಒಳ ಮೀಸಲಾತಿ ಜಾರಿ ಮಾಡಿ ಎಂದು ಸಿಎಂ ಸಿದ್ದರಾಮಯ್ಯನ ವಿರುದ್ಧ ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕ್ಯಾಬಿನೆಟ್​ನಲ್ಲಿ ತೀರ್ಮಾನಿಸಿ‌ ಒಳಮೀಸಲಾತಿ ಘೋಷಿಸ್ತೀವಿ ಅಂತಾ ಕಾಂಗ್ರೆಸ್ ಹೇಳಿತ್ತು.ಆದರೆ ಈಗ ಲೋಕಸಭೆ ಚುನಾವಣೆ ಹಿನ್ನೆಲೆ ಮೋಸದಾಟ ಶುರು ಮಾಡಿದ್ದಾರೆ ಅಂತಾ ಸಿಎಂ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ವೋಟ್‌ ಬ್ಯಾಂಕ್ ಹೋಗುವ ಭಯ‌ ಕಾಂಗ್ರೆಸ್​​ಗೆ ಶುರುವಾಗಿದೆ. ಒಳ ಮೀಸಲಾತಿಯನ್ನು ಜಾರಿ ಮಾಡಿ ಎಂದರು. ಇವತ್ತು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ. 2012ರಲ್ಲಿ ನಾವು ಪತ್ರ ಬರೆದಿದ್ದೆವು. ಇದೇ ಪತ್ರವನ್ನು ಮತ್ತೆ ಬರೆದು ಮೋಸ ಮಾಡುತ್ತಿದ್ದಾರೆ. ಇದಾದ ಬಳಿಕ 2020ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. ಮತ್ತೆ ಸುಳ್ಳು ಹೇಳಿ ಮೋಸ ಮಾಡುವ ಪ್ರಯತ್ನದಲ್ಲೇ ಸಿದ್ದರಾಮಯ್ಯ ಇದ್ದಾರೆ. ಚುನಾವಣೆ ಬಂದಾಗ ಗಿಮಿಕ್, ಮೋಸದಾಟವನ್ನು ಮಾಡುತ್ತಾರೆ ಎಂದು ಗೋವಿಂದ ಕಾರಜೋಳ ಅವರು ಟೀಕಿಸಿದರು. ಈ ಮೋಸದಾಟ ಬಿಡಿ. ನಿಮಗೆ ನಿಜವಾದ ಇಚ್ಛಾಶಕ್ತಿ ಇದ್ದರೆ ನಾಳೆಯೇ ಒಂದು ಆದೇಶ ಮಾಡಿ. ಒಳಮೀಸಲಾತಿ…

Read More

ಬೆಂಗಳೂರು: ರಾಮಮಂದಿರಕ್ಕೆ ಕರ್ನಾಟಕದ ಕೊಡುಗೆ ಅಧಿಕವಾಗಿದೆ. ಕರ್ನಾಟಕದ ಅನೇಕ ಕಲಾವಿದರು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರೆ ಇದೀಗ ಕನ್ನಡಿಗರು ರಾಮಮಂದಿರಕ್ಕೆ ಅತಿ ದೊಡ್ಡ ಕೇಸರಿ ಧ್ವಜವನ್ನು ಅರ್ಪಣೆ ಮಾಡಿದ್ದಾರೆ. ಹೌದು, ಕರ್ನಾಟಕದಿಂದ ಅಯೋಧ್ಯೆಗೆ ಜೀಪ್​ನಲ್ಲಿ ತೆರಳಿ 51 ಅಡಿ ಉದ್ದದ ಭಗವಾ ಧ್ವಜವನ್ನು ಶ್ರೀರಾಮಜನ್ಮ ಭೂಮಿ ಟ್ರಸ್ಟ್​ಗೆ ನೀಡಿದ್ದಾರೆ. ಅನೇಕ ವರ್ಷಗಳಿಂದ ಈ ಕನ್ನಡಿಗ ಭಕ್ತರು ಧ್ವಜ ನೀಡುವ ಸಂಕಲ್ಪ ಹೊಂದಿದ್ದಾಗಿ ತಿಳಿಸಿದ್ದಾರೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾ ವಿಗ್ರಹವನ್ನು ಮೈಸೂರಿ ಹೆಮ್ಮೆಯ ಕನ್ನಡಿಗ ಅರುಣ್​ ಯೋಗರಾಜ್​ರವರು ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ.

Read More