Author: AIN Author

ಹಾವೇರಿ: ತಾಕತ್ ಇದ್ರೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಆರ್ ಅಶೋಕ್ ಸವಾಲ್ ಹಾಕಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಧು ಬಂಗಾರಪ್ಪ ಇದೆ ಮೊದಲ ಬಾರಿಗೆ ಶಾಸಕರಾಗಿದ್ದಾರೋ ಏನೋ.. ನನಗೆ ಗೋತ್ತಿಲ್ಲಾ. ಅನಂತ್ ಕುಮಾರ್ ಹೆಗಡೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾರವಾರದ ಜನ ಅವರನ್ನು ಆಯ್ಕೆ ಮಾಡಿದ್ದಾರೆ. ಕಾರವಾರ ಜನರಿಗೆ ಅವಮಾನ ಆಗುವಂತ ಹೇಳಿಕೆ ಮಧು ಬಂಗಾರಪ್ಪ ನೀಡಿದ್ದಾರೆ ಎಂದರು. ಮಧು ಬಂಗಾರಪ್ಪ ಬಿಜೆಪಿಗೆ ಸೇರಿದ ನಂತರ ಟಿಕೆಟ್​ ಹಂಚಿಕೆ ತಂಡದಲ್ಲಿದ್ದರೆ ಮಾತನಾಡಲಿ. ಸದ್ಯ ಅವರು ಕಾಂಗ್ರೆಸ್​ನಲ್ಲಿದ್ದು, ಅವರ ಪಕ್ಷದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ನೋಡಿಕೊಳ್ಳಲಿ. ಇತ್ತೀಚಿಗೆ, ಕಾಂಗ್ರೆಸ್​ನಲ್ಲಿ 13 ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸೂಕ್ತ ಅಭ್ಯರ್ಥಿಗಳೇ ಇಲ್ಲ ಎಂದು ವರದಿಯಾಗಿದೆ. ಇಂತಹ ಗತಿಯಿಲ್ಲದ ಕ್ಷೇತ್ರಗಳಿಗೆ ಟೀಕೆಟ್ ನೀಡಲಿ. ಆಮೇಲೆ ಬಿಜೆಪಿ ಬಗ್ಗೆ ಮಾತನಾಡಲಿ ಎಂದರು. ವೋಟ್ ಹಾಕಿ ಗೆಲ್ಲುಸುವುದು ಮತದಾರು. ಮಧು ಬಂಗಾರಪ್ಪ ಅಲ್ಲ. ತಿರ್ಮಾನ ತೆಗೆದುಕೊಳ್ಳವುದು ಪ್ರಜ್ಞಾವಂತ ಮತದಾರರು. ಏನು…

Read More

ಬೆಂಗಳೂರು:- ನಕಲಿ ಮೈಸೂರು ಸ್ಯಾಂಡಲ್ ಸೋಪು ತಯಾರಿಕೆ ದಂಧೆ ಬಗ್ಗೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ವಿಧಾನಸೌಧದದಲ್ಲಿ ಕೆಎಸ್​​ಡಿಎಲ್​ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ರಮ ಆಗಿದೆ ಅಲ್ವಾ ಎಂದಿದ್ದಾರೆ. ಹೌದು ಆಗಿದೆ ಎಂದು ಕೈಗಾರಿಕೆ ಇಲಾಖೆ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ. ಇನ್ಮುಂದೆ ಕ್ಯೂ ಆರ್‌ ಕೋಡ್‌ ಬಳಸಿ ಪ್ಯಾಕ್‌ ಮಾಡುತ್ತೇವೆ ಎಂದು ಸಚಿವರು ಹೇಳಿದ್ದಾರೆ. ಮೈಸೂರು ಸೋಪ್ಸ್ ಆ್ಯಂಡ್​ ಡಿಟರ್ಜೆಂಟ್​ನಿಂದ ಕೆಲ ವಸ್ತುಗಳ ಬಿಡುಗಡೆಗೆ ಎಂಬಿಪಿ ಒತ್ತಾಯ ಮಾಡಿದ್ದರು. ಹೆಚ್ಚು ಮಾತನಾಡುವುದಿಲ್ಲ ಬಜೆಟ್ ಪೂರ್ವಭಾವಿ ಸಭೆ ನಡೆಯುತ್ತಿದೆ. ಜ.16ಕ್ಕೆ ಬಜೆಟ್ ಮಂಡಿಸಬೇಕು. ಇದಕ್ಕೆ ತಯಾರಿ ನಡೆಸುತ್ತಿದ್ದೇವೆ. 19 ವೈವಿಧ್ಯಮಯ ಉತ್ಪನ್ನಗಳನ್ನ ಬಿಡುಗಡೆ ಮಾಡಲಾಗಿದೆ. ಅತ್ಯಂತ ಸಂತೋಷದಿಂದ ಎಲ್ಲ ವಸ್ತುಗಳನ್ನು ಬಿಡುಗಡೆ ಮಾಡಿದ್ದೇನೆ. ಯಾವುದೇ ವಸ್ತು ಜನಪ್ರಿಯ ಆಗಬೇಕಂದರೆ ಮಾರುಕಟ್ಟೆ ಸಿಗಬೇಕು. ಒಳ್ಳೆಯ ಗುಣಮಟ್ಟ, ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಹೊಸ ಉತ್ಪನ್ನ ತಯಾರಿ ಮಾಡಬೇಕು ಆಗ ಬಿಕರಿ ಆಗುತ್ತೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ…

Read More

ಬೆಂಗಳೂರು:- ನಾನು ಸಿಎಂ ಹೆಸರು ಹೇಳಿಲ್ಲ, ಕುಂಬಳಕಾಯಿ ಕಳ್ಳನಂತೆ ವರ್ತಿಸಬಾರದು ಎಂದು ಬಿ.ಕೆ ಹರಿಪ್ರಸಾದ್‌ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನನ್ನ ವಿಚಾರಣೆ ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿರುವುದಾಗಿ ಪೊಲೀಸರು ಹೇಳುತ್ತಾರೆ, ಈ ವಿಚಾರಗಳೆಲ್ಲ ಗೃಹಸಚಿವರಿಗೆ ಗೊತ್ತಿದ್ದಂತಿಲ್ಲ ಎಂದು ಹೇಳಿದ ಬಿ.ಕೆ. ಹರಿಪ್ರಸಾದ್‌ ಅವರು, ಸಿಸಿಬಿ ವಿಚಾರಣೆ ವಿಚಾರದಲ್ಲಿ ನಾನು ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿಲ್ಲ. ಹೀಗಿರುವಾಗ ಕುಂಬಳಕಾಯಿ ಎಂದರೆ ಹೆಗಲು ಮುಟ್ಟಿಕೊಂಡರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಸಿಸಿಬಿ ಪೊಲೀಸರ ವಿಚಾರಣೆ ಕುರಿತಾಗಿ, ರಾಜ್ಯಪಾಲರಿಗೆ ಬಿಜೆಪಿಯವರು ದೂರು ಕೊಟ್ಟಿದ್ದರು. ವಿಚಾರಣೆ ಮಾಡಿ ತಿಳಿಸಿ ಎಂದು ರಾಜ್ಯಪಾಲರು ಹೇಳಿರಬೇಕು. ಹಾಗಾಗಿ ಇಷ್ಟೊಂದು ಕ್ಷಿಪ್ರವಾಗಿ ಇದು ಬಂದಿದೆ. ದೂರು ಕೊಟ್ಟಿದ್ದರಲ್ಲಿ ತಪ್ಪಿಲ್ಲ, ರಾಜ್ಯಪಾಲರು ಕೇಳಿದ್ದರೆ ಅದರಲ್ಲೂ ತಪ್ಪಿಲ್ಲ. ನಿಜವಾಗಿ ಎಲ್ಲ ಪ್ರಕರಣಗಳು ಹೀಗೆ ಆದರೆ ಉತ್ತಮ. ನಮಗೆ ಮಾತ್ರ ಆದರೆ ಯಾಕೆ ಹೀಗೆ ಎಂದು ಪ್ರಶ್ನೆ ಮಾಡಬೇಕಾಗುತ್ತದೆ, ಉತ್ತರ ಹುಡುಕಬೇಕಾಗುತ್ತದೆ. ರಾಜ್ಯಪಾಲರು ಸಂವಿಧಾನದ ಒಂದು ಅಂಗ ಇದ್ದಂತೆ.…

Read More

ನವದೆಹಲಿ:- ರೈಲ್ವೆಯಲ್ಲಿ ಲಕ್ಷಾಂತರ ಹುದ್ದೆ ಖಾಲಿಯಿದ್ದರೂ ಯುವಕರಿಗೆ ಅನ್ಯಾಯವಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರೈಲ್ವೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ಸೂಕ್ತವಾಗಿ ನೇಮಕಾತಿ ಮಾಡಿಕೊಳ್ಳದೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು. ರೈಲ್ವೆಯಲ್ಲಿ ಲಕ್ಷಗಟ್ಟಲೆ ಹುದ್ದೆಗಳು ಖಾಲಿಯಿದ್ದರೂ, ಯುವಕರು 5 ವರ್ಷ ಕಾಯ್ದರೂ ಈಗ ಕೇವಲ 5,696 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯವಾಗಿದೆ ಎಂದು ಟೀಕಿಸಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ನೀವು, ಯಾರಿಗೆ ಲಾಭ ಮಾಡಿ ಕೊಡಲು ರೈಲ್ವೆಯಲ್ಲಿ ಹುದ್ದೆಗಳ ಕಡಿತ ಮಾಡುತ್ತಿದ್ದೀರಿ. ರೈಲ್ವೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂಬ ನಿಮ್ಮ ಭರವಸೆ ಏನಾಯಿತು? ಎಂದು ‍ಪ್ರಶ್ನಿಸಿದ್ದಾರೆ. ಇಷ್ಟು ವರ್ಷ ಕಾಯ್ದರೂ ಇಷ್ಟು ಕಡಿಮೆ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿರುವುದನ್ನು ನೋಡಿದರೆ ಮೋದಿಯವರ ಗ್ಯಾರಂಟಿ ಯುವಕರಿಗೆ ಎಚ್ಚರಿಕೆ ಕರೆಗಂಟೆಯಾಗಿದೆ ಎಂದು ಹೇಳಿ #NyayForYuva ಎಂಬ ಹ್ಯಾಶ್ ಟ್ಯಾಗ್ ಮೂಲಕ ಆಕ್ರೋಶ…

Read More

ಕಾರವಾರ:- ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಸುವವರನ್ನು ಮತದಾರರು ಸೋಲಿಸಲಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಧರ್ಮದ ಹೆಸರಲ್ಲಿ ದ್ವೇಷ ಬಿತ್ತುವವರನ್ನು ಮತದಾರರು ಸೋಲಿಸಬೇಕು ಎಂದರು. ಸಂವಿಧಾನ ಬದಲಿಸುವ ಮಾತುಗಳನ್ನಾಡುವ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ವಿರೋಧಿಸುವ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಗೆ ಸಹ ಬಿಜೆಪಿ ಟಿಕೆಟ್ ಕೊಡಬೇಕು. ಆಗ ಅವರಿಗೆ ಮತದಾರರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಧರ್ಮ ಪ್ರೀತಿಸುವ ಜನರು ಕರಾವಳಿ ಭಾಗದಲ್ಲಿ ಹೆಚ್ಚಿದ್ದಾರೆ. ಅವರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಕೆಟ್ಟ ಗುಣ. ಹಿಂದಿನಂತೆ ಕೋಮು ಧ್ರುವೀಕರಣದ ಚಟುವಟಿಕೆಗೆ ಈ ಬಾರಿ ಅವಕಾಶ ಸಿಗದು ಎಂದು ಹೇಳಿದರು‌. ನಾಲ್ಕು ವರ್ಷ ಜನರಿಂದ ದೂರವಿದ್ದು ಚುನಾವಣೆ ಸಮೀಪಿಸಿದಾಗ ಸಮಾಜದ ಸಾಮರಸ್ಯ ಕದಡುವ ಮಾತುಗಳನ್ನಾಡವವರನ್ನು ಮತದಾರರು ದೂರ ಇಡಬೇಕು ಎಂದು ಸಂಸದ ಅನಂತಕುಮಾರ…

Read More

ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಇಡೀ ದೇಶದಲ್ಲಿ ರಾಮನಾಮ ಸ್ಮರಣೆ ಕೇಳಿಬರುತ್ತಿದೆ. ರಾಮಭಕ್ತರ ನಾನಾ ರೀತಿಯ ವಿಶೇಷ ಸಂಗತಿಗಳ ಕಡೆಗೆ ಎಲ್ಲರಲ್ಲೂ ಆಸಕ್ತಿ ಇರುವುದು ಸಹಜ. ಸುಮ್ಮನೆ ಕ್ರಿಯಾಶೀಲತೆಯಿಂದ ರಚಿಸಿದ ಸಣ್ಣದೊಂದು ಚಿತ್ರ ಕೂಡ ಏಕಾಏಕಿ ವೈರಲ್‌ ಆಗಲು ಶುರುವಾಗುತ್ತದೆ. ಇಂಥದ್ದೇ ಘಟನೆ ಈಗ ಜರುಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ರಘುಮೂರ್ತಿ೦೭ ಎನ್ನುವ ಖಾತೆಯಿಂದ ಪೋಸ್ಟ್‌ ಆದ ಚಿತ್ರವೊಂದು ವೈರಲ್‌ ಆಗಿದ್ದು, ಅದರ ಬಗ್ಗೆ ಈಗ ಸ್ಪಷ್ಟನೆಯನ್ನೂ ನೀಡಲಾಗಿದೆ. ಆ ಚಿತ್ರ ಕೂಡ ಭಾರೀ ಮುದ ನೀಡುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ.‌ ವೈರಲ್‌ ಆಗಿರುವ ಈ ಚಿತ್ರ ಯಾವುದು ಎನ್ನುತ್ತೀರಾ? ಅದು ರಾಮಮಂದಿರವನ್ನೇ ಕುರಿತಾಗಿರುವ ಚಿತ್ರ. ರಘುಮೂರ್ತಿ ಅವರ ಖಾತೆಯಿಂದ 500 ರೂಪಾಯಿ ನೋಟಿನಲ್ಲಿ (500 Rupees Note) ಗಾಂಧೀಜಿ (Gandhiji) ಭಾವಚಿತ್ರದ (Picture) ಬದಲು ರಾಮ ಹಾಗೂ ಹಿಂಬದಿ ಭಾಗದಲ್ಲಿ ಕೆಂಪು ಕೋಟೆಯ ಬದಲು ರಾಮಮಂದಿರದ ಚಿತ್ರವನ್ನು ಕೂರಿಸಿ ಪೋಸ್ಟ್‌ (Post) ಮಾಡಲಾಗಿತ್ತು. ಗ್ಲಾಸುಗಳ ಬದಲಿಗೆ ರಾಮನ ಬಿಲ್ಲು ಮತ್ತು ಬಾಣದ ಚಿತ್ರಗಳಿದ್ದವು.…

Read More

ಕಿವಿ ಹಣ್ಣು ರುಚಿಗಾಗಿ ಮಾತ್ರವಲ್ಲ, ಅದು ಹಲವು ಪೌಷ್ಠಿಕಾಂಶವನ್ನು ಹೊಂದಿದೆ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ವಿಶೇಷ ಪಾತ್ರ ವಹಿಸುತ್ತದೆ. ಕಿವಿ ಹಣ್ಣಿನಲ್ಲಿ ಪಾಲಿಫಿನಾಲ್ ಗಳು ಮತ್ತು ಕ್ಯಾರೊಟಿನಾಯ್ಡ್ ಗಳಂತಹ ಉತ್ಕರ್ಷಣ ನಿರೋಧಕಗಳಿವೆ. ಅವು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಈ ಉತ್ಕರ್ಷಣ ನಿರೋಧಕಗಳು ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡುತ್ತವೆ ಮತ್ತು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತವೆ. ಅವು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತವೆ. ಪ್ರತಿದಿನ ಕಿವಿ ಹಣ್ಣನ್ನು ತಿನ್ನುವುದರಿಂದ ಋತುಮಾನದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಬಹುದು. ತೂಕವನ್ನು ಸಹ ನಿಯಂತ್ರಣದಲ್ಲಿಡಬಹುದು. ತೂಕವನ್ನು ನಿಯಂತ್ರಿಸಲು ಕಿವಿ ಹಣ್ಣು ವಿಶೇಷವಾಗಿ ಸಹಾಯಕವಾಗಿದೆ. ಈ ಹಣ್ಣುಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಕ್ಯಾಲೋರಿ ಕಡಿಮೆ ಇರುತ್ತದೆ. * ಇದು ಹಸಿವನ್ನು ಕಡಿಮೆ ಮಾಡುತ್ತದೆ. ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಕಿವಿ ಹಣ್ಣನ್ನು ತಿನ್ನಬೇಕು. ಕಿವಿಹಣ್ಣಿನಲ್ಲಿರುವ ನಾರಿನಂಶವು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಈ ಹಣ್ಣು ಹೊಟ್ಟೆಯನ್ನು ಶುದ್ಧೀಕರಿಸುತ್ತದೆ. ಮಲಬದ್ಧತೆಯ…

Read More

ವಿಭಿನ್ನ ರುಚಿಯ ಈ ಬಾಳೆಹಣ್ಣಿನ ಬೊಂಡಾ ತಿನ್ನುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ಗೊತ್ತಾಗುವುದಿಲ್ಲ. ಮನೆಯಲ್ಲಿ ಬಾಳೆಹಣ್ಣು ಇದೆಯಾ…? ಹಾಗಾದ್ರೆ ತಡಯಾಕೆ…? ಇದರಿಂದ ರುಚಿಯಾದ ಸಿಹಿ ಬೊಂಡಾ ಮಾಡಿಕೊಂಡು ಸವಿಯಿರಿ ಬೇಕಾಗುವ ಸಾಮಗ್ರಿಗಳು ಬಾಳೆಹಣ್ಣು-3, ಬೆಲ್ಲ-3/4 ಕಪ್, ತೆಂಗಿನಕಾಯಿ ತುರಿ-1/4 ಕಪ್, ತುಪ್ಪ-1 ಟೇಬಲ್ ಸ್ಪೂನ್, ಗೋಧಿ ಹಿಟ್ಟು-1 ಕಪ್, ಮೈದಾ ಹಿಟ್ಟು-1 ಕಪ್, ಬೇಕಿಂಗ್ ಸೋಡಾ-1/4 ಟೀ ಸ್ಪೂನ್, ಉಪ್ಪು-1/4 ಟೀ ಸ್ಪೂನ್, ಏಲಕ್ಕಿ-8, ಜೀರಿಗೆ-1/4 ಟೀ ಸ್ಪೂನ್, ಉಗುರು ಬೆಚ್ಚಗಿನ ನೀರು-1/4 ಕಪ್, ಎಣ್ಣೆ- ಕರಿಯಲು ಅಗತ್ಯವಿರುವಷ್ಟು. ಮಾಡುವ ವಿಧಾನ ಒಂದು ಬೌಲ್ ಗೆ ಸಿಪ್ಪೆ ತೆಗೆದ ಬಾಳೆಹಣ್ಣು ಹಾಕಿ ಅದನ್ನು ಚೆನ್ನಾಗಿ ಕಿವುಚಿಕೊಳ್ಳಿ. ಇನ್ನೊಂದು ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ 2 ಟೇಬಲ್ ಸ್ಪೂನ್ ನೀರು ಸೇರಿಸಿ 3 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಕಿವುಚಿದ ಬಾಳೆಹಣ್ಣು, ತೆಂಗಿನಕಾಯಿ ತುರಿ, ತಣ್ಣಗಾದ ಬೆಲ್ಲದ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಇನ್ನೊಂದು ಬೌಲ್ ಗೆ ಮೈದಾಹಿಟ್ಟು, ಗೋಧಿಹಿಟ್ಟು,…

Read More

ಬೆಂಗಳೂರು: ಸಿಟಿಐ ಮತ್ತು ಪಿಎಸ್ಐ ಪರೀಕ್ಷಾ ಅಕ್ರಮ ವಿಚಾರ ಬಗ್ಗೆ  ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಪಿಎಸ್​ಐ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಬ್​ಇನ್ಸ್​ಪೆಕ್ಟರ್ ಓರ್ವರನ್ನು ಸಿಸಿಬಿ​ ವಶಕ್ಕೆ ಪಡೆದಿದೆ,  ಪಿ ಎಸ್ ಐ ಲಿಂಗಯ್ಯ ಅವರು ಗುಪ್ತದಳದಲ್ಲಿದ್ದಾರೆ ನಾವು ಎಚ್ಚರಿಕೆ ವಹಿಸಬೇಕು ಅದಕ್ಕೆ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲೇ ಹಾಕಿದ್ದೆವೆ ಈ ಮದ್ಯೆ ಗುಪ್ತದಳದವರು ಮಾಹಿತಿ ಕಲೆಹಾಕ್ತಿದ್ದಾರೆ ಮಾಹಿತಿ ಪಡೆಯುವಾಗ ಈ ಆಡಿಯೋ ಬೆಳಕಿಗೆ ಬಂದಿದೆ ಎಂದರು. ನಾನು ಇಂಟಲಿಜೆನ್ಸ್ ಮಾಹಿತಿ ಕಲೆ ಹಾಕಲು ಪೇಕ್ ಆಡಿಯೋ ಮಾಡಿದ್ದೆ ಅಂತ ಹೇಳಿಕೆ ಕೊಟ್ಟಿದ್ದೆ ಅಂತ ಹೇಳಿದ್ದಾನೆ ಅದನ್ನ ಸಿಸಿಬಿ ವಿಚಾರಣೆ ಮಾಡ್ತಿದೆ ಇದು ನಿಜವಾ ಅಲ್ಲವಾ ಎಂಬೋದನ್ನ ವಿಚಾರಣೆ ಆಗ್ತಿದೆ ಎಲ್ಲಾ ರೀತಿಯ ಮುಂಜಾಗ್ರತೆ ತಗೆದುಕೊಂಡು ಪರೀಕ್ಷೆ ಮಾಡಬೇಕು ಅಂತ ಮಾಡಿದ್ದೆವೆ ಮೂರು ವರ್ಷ ಆಯ್ತು. ಇದುವರೆಗೆ ನೇಮಕಾತಿ ಮಾಡಲು ಆಗಿಲ್ಲ ಅಂದ್ರೆ ಸಿಸ್ಟಮ್ ನಡೆಯಲ್ಲ ಸಿಸಿಬಿ ತನಿಖೆ ಮಾಡ್ತಿದ್ದು,ಅಕ್ರಮ ಆಗಿದ್ರೆ…

Read More

ಮೊಳಕಾಲ್ಮೂರು: ಬೆಳ್ಳಂಬೆಳಗ್ಗೆ ವ್ಯಕ್ತಿಯೋರ್ವನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವರಾಜ (45) ಚಿರತೆ ದಾಳಿಗೆ ಸಿಲುಕಿ ಪ್ರಾಣಪಾಯದಿಂದ ಪಾರಾಗಿರುವ ವ್ಯಕ್ತಿ. ಇಂದು ಬೆಳಗ್ಗೆ ಗ್ರಾಮದ ಬಯಲು ಪ್ರದೇಶದಲ್ಲಿ ಬಹಿರ್ದೆಸೆಗೆ ಹೋಗಿದ್ದ ವೇಳೆ, ಗ್ರಾಮದ ಸ್ಮಶಾನದ ಬಳಿ ಅಡಗಿ ಕುಳಿತಿದ್ದ ಚಿರತೆ ಏಕಾಏಕಿ ಈ ವ್ಯಕ್ತಿಯ ಮೇಲೆ ದಾಳಿ ನಡೆಸಿದೆ. ಕೂಡಲೇ, ಬಸವರಾಜ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಪಾಯದಿಂದ ಪಾರಾಗಿದ್ದಾನೆ. ಚಿರತೆ ದಾಳಿಯಿಂದ ಹೊಟ್ಟೆಯ ಭಾಗದಲ್ಲಿ ತೀವ್ರ ಸ್ವರೂಪದ ಗಂಭೀರ ಗಾಯಗಳಾಗಿದ್ದು, ಮೊಳಕಾಲ್ಮೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೊಳಕಾಲ್ಮೂರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲ್ಲೂಕಿನಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ, ಗುಡ್ಡಗಾಡಿನ ಅಕ್ಕಪಕ್ಕದ ಗ್ರಾಮಗಳಿಗೆ ಕಾಡುಪ್ರಾಣಿಗಳು ಆಹಾರ ಹುಡುಕಿಕೊಂಡು ಬಂದು ಮನುಷ್ಯರ ಹಾಗೂ ಇತರೆ…

Read More