Author: AIN Author

ಕಲಬುರಗಿ: ನಾಳೆ ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಭು ಶ್ರೀರಾಮ ಚಂದ್ರನ ಎಲ್ಲ ಧಾರ್ಮಿಕ ಕಾರ್ಯಗಳು ಸುಸೂತ್ರವಾಗಿ ನಡೆಯಲಿ ಅಂತ ಕಲಬುರಗಿಯ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸತ್ಯಾತ್ಮತೀರ್ಥ ಸೇವಾ ಸಮಿತಿ ಇವತ್ತು ಸಾಮೂಹಿಕ ಪಾರಾಯಣ ನಡೆಸಿತು.. ಸುಮಾರು 50 ಅಧಿಕ ಸಂಖ್ಯೆಯ ರಾಮ ಭಕ್ತರು ಸಂಕಲ್ಪ ಮಾಡಿದ್ದು ರಾಮ ಮಂದಿರ ಉದ್ಘಾಟನೆ ಸಡಗರವನ್ನ ಇಡೀ ದೇಶವೇ ಕಣ್ತುಂಬಿಕೊಳ್ಳುತ್ತಿದೆ..ಹೀಗಾಗಿ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ ಅಂತ ಪಾರಾಯಣ ಮಾಡ್ತಿದ್ದೇವೆ ಅನ್ನೋದು ಸಮಿತಿಯ ಮುಖ್ಯಸ್ಥ ಸಮೀರ್ ದೇಶಪಾಂಡೆ ಮಾತು..

Read More

ಹುಬ್ಬಳ್ಳಿ : ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರರ ಕಾರ್ಯಾಲಯದಲ್ಲಿ ತಾಲೂಕು ಆಡಳಿತದಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ್, ಸಮಾಜದ ಮುಖಂಡರಾದ ಮಂಜುನಾಥ ಬೈರನ್ನವರ, ಗುರಪ್ಪ ಜಿಡ್ಡಿ, ರಾಮಣ್ಣ ಗುಗ್ಗರಿ, ಮಂಜುನಾಥ ಗಡಿಯನ್ನವರ, ಗುರಪ್ಪ ಕರಬಣ್ಣವರ, ಬಸವರಾಜ್ ದಾಸನಾಯ್ಕಾರ್, ಯಲ್ಲಪ್ಪ ಅಳಗವಾಡಿ, ಭೀಮಶಿ ಅಡವೆನ್ನವರ್, ರವಿ ಹಡಗಲಿ, ಬಸವರಾಜ್ ಗಡಿಯನ್ನವರ್, ಗಂಗಪ್ಪ ಬಾರಕೇರ, ಅರ್ಜುನ ಬಾರಕೇರ, ಲಕ್ಷ್ಮಣ ಅಂಬಿಗೇರ, ಗುರುನಾಥ ಸುಣಗಾರ, ಶಿವಾನಂದ್ ಬಾರಕೇರ, ಮಂಜುನಾಥ್, ಎಲ್. ಜೆ. ಅಂಬಿಗೇರ, ಹನಮಂತಪ್ಪ ನಾಯ್ಕೊಡಿ, ಸುರೇಶ್ ಹೆಬ್ಬಳ್ಳಿ, ದೊಡ್ಡಪ್ಪ ಬಾರಕೇರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪೂರದಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ನ ಸಹಯೋಗದಲ್ಲಿ ನಡೆದ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮ ನಡೆಯಿತು. ಶಾಸಕ ಸಿದ್ದು ಸವದಿ ಮಾತನಾಡಿ ಗಣ ಭಾರತ ಸರ್ಕಾರದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಮುದ್ರಾ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕರಾದ ವಿಠ್ಠಲ್ ಬಿ ಗುರವ ಮಾತನಾಡಿ ಪ್ರಧಾನ ಮಂತ್ರಿ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಿದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ಜನ- ದನ ಖಾತೆಯ ಬಗ್ಗೆ ತಿಳುವಳಿಕೆ ನೀಡಿದರು. ಇದೇ ಸಂದರ್ಭದಲ್ಲಿ ಬಸನಗೌಡ ಪಾಟೀಲ. ಸುರೇಶ್ ಅಕ್ಕಿವಾಟ. ಆನಂದ ಕಂಪು ಮಹಾಲಂಗ ಕುಲ್ಲೋಳಿ. ಜಿ ಎಸ್…

Read More

ಗದಗ: ನಾಳೆ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಗದಗ ನಗರದಲ್ಲೂ ಕೂಡಾ ನಾಳೆ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು ನಗರದ ಟ್ಯಾಗೋರ್ ರಸ್ತೆಯ ಮಹಾಂತೇಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯ ಭರದಿಂದ ಸಾಗಿದೆ. ಓಣಿಯ ಮಹಾಂತ ಯುವಕ ಬಳಗದಿಂದ ಬೆಳಿಗ್ಗೆಯಿಂದಲೇ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿದ್ದು ನಾಳಿನ ಸಂಭ್ರಮಕ್ಕೆ‌ ಸಿಧ್ಧತೆ ನಡೆಸಿದ್ದಾರೆ. ಮಹಾಂತೇಶ್ವರ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿದ್ದು ಸಂಜೆ ಓಣಿಯ ಮಹಾಂತ ಮಹಿಳಾ ಬಳಗದಿಂದ ದೀಪೋತ್ಸವ ಜರುಗಲಿದೆ. ಸ್ವಚ್ಚತಾ ಕಾರ್ಯದಲ್ಲಿ ಮಹಾಂತ ಯುವಕ ಬಳಗದ ಹಿರಿಯರಾದ ಪಂಡೀತಯ್ಯ ಬಣ್ಣದನೂಲಮಠ, ದೇವಪ್ಪ ಮುಗಳಿ, ಸುರೇಶ ಬಳಿಗಾರ, ಅಶೋಕ ಕಡಿವಾಲ ಸೇರಿದಂತೆ ಉತ್ಸಾಹಿ ಯುವಕರಾದ ಬಾಹುಬಲಿ ಜೈನರ್, ಪ್ರದೀಪ್ ಕಡಿವಾಲ್, ರವಿ ಹೊಸೂರ, ಮಂಜು ದೇಸಾಯಿ, ಸಿದ್ದು ಹಗರಣ್ಣವರ, ಪ್ರಕಾಶ ಲಮಾಣಿ ಪಾಲ್ಗೊಂಡು ಸ್ವಚ್ಚತೆ ಮಾಡಿದ್ರು

Read More

ತುಮಕೂರು: ಇಂದು ಶಿವಕುಮಾರ್ ಶ್ರೀಗಳ ಐದನೇ ಪುಣ್ಯ ಸ್ಮರಣೆ ಹಿನ್ನೆಲೆ ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ಶಿವಕುಮಾರ್ ಶ್ರೀ ಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿಲಾಯಿತು. ರುದ್ರಾಭಿಷೇಕ,ಮಹಮಂಗಳಾರತಿ ಸೇರಿದಂತೆ ವಿಶೇಷ ಪೂಜೆ ಮಾಡಲಾಗಿದ್ದು, ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಶ್ರೀ, ವಿವಿಧ ಮಠಾಧಿಶರು ಪೂಜೆಯಲ್ಲಿ ಭಾಗಿಯಾಗಿದ್ದರು.

Read More

ಕಾರವಾರ: ಸಂಸದ ಅನಂತ್‌ ಕುಮಾರ್ ಹೆಗಡೆ ಒಬ್ಬ ಹುಚ್ಚ. ಅವನಿಗೆ ಸಂಸ್ಕೃತಿ ಇಲ್ಲ. ಅವನ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ ಎಂದು ಅನಂತ್‌ಕುಮಾರ್ ಹೆಗಡೆ ವಿರುದ್ಧ ಸಚಿವ ಮಧು ಬಂಗಾರಪ್ಪ (Madhu Bangarappa) ಕಿಡಿಕಾರಿದ್ದಾರೆ. ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರಿಂದ ಮತ ಪಡೆದು ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತ್‌ಕುಮಾರ್ ಹೆಗಡೆ. ನಾಲ್ಕು ವರ್ಷ ಕೂತ್ಕೊಳೋದು, ಆಮೇಲೆ ಜನರ ವಿಶ್ವಾಸಕ್ಕೆ ಮೋಸ ಮಾಡೋದು. ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವರಿಗೆ ನಾವು ಧಿಕ್ಕಾರ ಮಾಡಲೇಬೇಕು. ಜನ ಅವನನ್ನು ಬದಲಾವಣೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. https://ainlivenews.com/see-how-many-health-benefits-drinking-buttermilk-has/ ಬಿಜೆಪಿ (BJP) ಅವನಿಗೆ ಟಿಕೆಟ್ ಕೊಡ್ಬೇಕು. ಆಗ ನಾವು ಅವರನ್ನ ಉಪಚಾರ ಮಾಡೋಕೆ ಬರುತ್ತೇವೆ. ನಾನು ಕೂಡ ಸೋತಿದ್ದೇನೆ. ಆದರೆ ಮಾನ ಮರ್ಯಾದೆ ಬಿಟ್ಟು ಈ ಥರ ಮಾಡೋದನ್ನ ಮಾಡಿಲ್ಲ. ಮನುಷ್ಯನೇ ಅಲ್ಲ ಅವನು, ತಲೆಕೆಟ್ಟಿರೋ ವ್ಯಕ್ತಿ. ಮಾನ ಮರ್ಯಾದೆ ಇಲ್ಲದಿರೋ ವ್ಯಕ್ತಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Read More

ಬೆಂಗಳೂರು: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ದಿನ ಸರ್ಕಾರಿ ರಜೆ ಕೊಡಲು ಇಷ್ಟು ದಿನ ಮೀನಾಮೇಷ ಎಣಿಸುವುದೇ ತಪ್ಪು, ರಜೆ ಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ? ಎಂದು ಮಾಜಿ ಸಚಿವ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಸರ್ಕಾರ ರಜೆ ಘೋಷಣೆ ಮಾಡಬೇಕು. ಇದೇ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ಕಾಂಗ್ರೆಸ್‍ಗೆ (Congress) ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‍ನ ನಿಲುವನ್ನ ವಿರೋಧಿಸಿ ಅವರು ರಾಜೀನಾಮೆ ನೀಡಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ರಾವಣನ ಸಹೋದರ ವಿಭೀಷಣ ರಾವಣನ ದುರ್ನಡತೆ ವಿರೋಧಿಸಿ ರಾಮನ ಪರ ಬಂದ. ಅದೇ ರೀತಿ ಕಾಂಗ್ರೆಸ್‍ನಲ್ಲಿ ರಾಮಮಂದಿರ ವಿಚಾರವಾಗಿ ಬೇರೆ ಬೇರೆ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ವಿಭೀಷಣನ ಮನಸ್ಥಿತಿಯ ಕಾಂಗ್ರೆಸ್‍ನವರು ಪಕ್ಷ ತೊರೆದು ಬರುವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ. https://ainlivenews.com/see-how-many-health-benefits-drinking-buttermilk-has/  ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರ, ಗೋಧ್ರಾ ರೀತಿಯ ಘಟನೆ ಆಗಬಹುದು ಎಂಬ ಹೇಳಿಕೆ ಬಗ್ಗೆ ಅವರು ಪೊಲಿಸರಿಗೆ ಮಾಹಿತಿ ನೀಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆಯ…

Read More

ಗಾಂಧೀನಗರ: ರಾಮಮಂದಿರ   ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವಿನಿಂದ ಅಸಮಾಧಾನಗೊಂಡು ಗುಜರಾತ್‌ನ ಕಾಂಗ್ರೆಸ್  ಶಾಸಕ ಸಿ.ಜೆ ಚಾವ್ಡಾ (CJ Chavda) ರಾಜೀನಾಮೆ ನೀಡಿದ್ದಾರೆ. ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕರಾದ ಸಿಜೆ ಚಾವ್ಡಾ ವಿಜಾಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಮಮಂದಿರ ವಿಷಯದಲ್ಲಿ ನಮ್ಮ ಪಕ್ಷದ (ಕಾಂಗ್ರೆಸ್) ಧೋರಣೆಯಿಂದ ಅಸಮಾಧಾನವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಗಾಂಧೀನಗರದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.  https://ainlivenews.com/see-how-many-health-benefits-drinking-buttermilk-has/ ರಾಜೀನಾಮೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೂ ನಾನು ರಾಜೀನಾಮೆ ನೀಡಿದ್ದೇನೆ. ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇಡೀ ದೇಶವೇ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಎದುರು ನೋಡುತ್ತಿದೆ. ಅದರಿಂದಾಗಿ ದೇಶದ ಜನರು ಬಹಳ ಸಂತೋಷದಿಂದ ಇದ್ದಾರೆ. ಆ ಸಂತೋಷದಲ್ಲಿ ಭಾಗವಹಿಸುವ ಬದಲು, ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯೇ ನನ್ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಮ್ಮೆ ಮನವಿ ಮಾಡುತ್ತೇವೆ. ಸರ್ಕಾರಿ ರಜೆ ಘೋಷಣೆ ಮಾಡಿ ರಾಮಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಹೇಳಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಈಗಾಗಲೇ ಹಲವು ರಾಜ್ಯಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಕೇಂದ್ರ ಸರ್ಕಾರ (Central Govt) ಕೂಡ ಅರ್ಧ ದಿನ ರಜೆ ಘೋಷಣೆ ಮಾಡಿದೆ. ಹಾಗಾಗಿ ರಾಜ್ಯದಲ್ಲೂ ರಜೆ ಘೋಷಣೆ ಮಾಡಬೇಕು ಅಂತಾ ಮನವಿ ಮಾಡಿದ್ರು. ಸೆಲ್ಫಿ ಕಟೌಟ್‌ಗಳನ್ನ ರಾಜ್ಯದ ಎಲ್ಲ ಪ್ರಮುಖ ಸ್ಥಳಗಳಲ್ಲಿ ರಾಜ್ಯ ಬಿಜೆಪಿ ಘಟಕದಿಂದ ಹಾಕಲಾಗುತ್ತೆ. ಅಲ್ಲದೆ ಕರ್ನಾಟಕದಿಂದ ಅಯೋಧ್ಯೆಗೆ (Ayodhya Ram Mandir) ಜನವರಿ 22ರ ಬಳಿಕ 60 ದಿನಗಳ ಕಾಲ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು,  35 ಸಾವಿರಕ್ಕೂ ಹೆಚ್ಚು ರಾಮಭಕ್ತರು ಪ್ರಯಾಣ ಮಾಡುತ್ತಾರೆ. ಜನವರಿ 31ರಿಂದ ಮಾರ್ಚ್ 25ರ ವರೆಗೆ ರಾಮಭಕ್ತರು ಪ್ರಯಾಣ ಮಾಡುತ್ತಾರೆ. ರಾಮಭಕ್ತರೇ ಪ್ರಯಾದ ಖರ್ಚು ವೆಚ್ಚ ಭರಿಸಲಿದ್ದಾರೆ ಅಂತಾ ವಿಜಯೇಂದ್ರ ಸ್ಪಷ್ಟಪಡಿಸಿದ್ರು. 

Read More

ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಉತ್ತರ ಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್ ಮತ್ತು ಹರ್ಯಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಿದೆ, ಆದರೆ ಪಂಜಾಬ್, ರಾಜಸ್ಥಾನ, ಹಿಮಾಚಲ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಧನ ಬೆಲೆ ಕಡಿಮೆಯಾಗಿದೆ. ಇತರ ರಾಜ್ಯಗಳು ಮತ್ತು ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಿಳಿಯೋಣ. ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ – ದೆಹಲಿಯಲ್ಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. – ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ 94.27 ರೂ. – ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. -ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ, ಡೀಸೆಲ್ 87.89 ರೂ. https://ainlivenews.com/see-how-many-health-benefits-drinking-buttermilk-has/ ಈ ನಗರಗಳಲ್ಲಿ ಬೆಲೆಗಳು ಎಷ್ಟು ಬದಲಾಗಿವೆ – ನೋಯ್ಡಾದಲ್ಲಿ ಪೆಟ್ರೋಲ್ 96.94 ರೂ. ಮತ್ತು ಡೀಸೆಲ್ ಲೀಟರ್‌ಗೆ 90.11 ರೂ. ಆಗಿದೆ. – ಗಾಜಿಯಾಬಾದ್‌ನಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 96.44 ರೂ ಮತ್ತು ಡೀಸೆಲ್…

Read More