Author: AIN Author

ಪೀಣ್ಯ ದಾಸರಹಳ್ಳಿ:’ ನಾವು ಸಾಕ್ಷಾತ್ ದೇವರನ್ನು ನೋಡಿಲ್ಲ. ಆದರೆ ನಾಡಿಗೆ ಅಕ್ಷರ, ಅನ್ನದಾಸೋಹ, ಭಕ್ತಿ, ಪೂಜೆ ನೀಡಿದ ಸಿದ್ದಗಂಗಾಶ್ರೀ ಅಂತಹ ಮಹಾನ್ ಪುರುಷರನ್ನು ದೇವರ ರೂಪದಲ್ಲಿ ಕಂಡಿದ್ದೇವೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ಭುವನೇಶ್ವರಿ ಬಡಾವಣೆಯಲ್ಲಿ ಕಾಯಕಯೋಗಿ ಸಹಕಾರ ಸಂಘ ಮತ್ತು ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ವೇದಿಕೆ ಹಾಗೂ ಇತರೆ ಸಂಘದ ವತಿಯಿಂದ ಸಿದ್ದಗಂಗಾ ಶ್ರೀಗಳ 5ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಸ್ವಾಮೀಜಿ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಸಿದ್ದಗಂಗಾ ಮಠ ಅನೇಕ ಭಕ್ತ ಸಮೂಹವನ್ನು ಹೊಂದಿರುವ ಮಠ. ಶ್ರೀಗಳ ನೆನಪು ಮಠದಲ್ಲಿ ಹಾಗೂ ಸಮಾಜದ ಮಧ್ಯೆ ಸೂರ್ಯ ಚಂದ್ರ ಇರುವರಿಗೂ ಇರುತ್ತದೆ. ಅಂತಹ ಆರಾಧ್ಯ ದೈವ ತ್ರಿವಿಧ ದಾಸೋಹಿಯನ್ನು ದರ್ಶನ ಪಡೆದಿದ್ದ ನಾವೇ ಧನ್ಯರು’ ಎಂದರು. ಸಂಘದ ಅಧ್ಯಕ್ಷ ಕಾಯಕಯೋಗಿ ಬಸವರಾಜಣ್ಣ ಮಾತನಾಡಿ ‘ಸರ್ಕಾರವು ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಿದೆ. ಆದ ಕಾರಣ ಈ ಕ್ಷೇತ್ರದಲ್ಲಿ ಭಕ್ತರು ರಸ್ತೆಗಳಲ್ಲಿ, ಮನೆಗಳಲ್ಲಿ ಸ್ವಾಮೀಜಿ ಭಾವಚಿತ್ರ ಇಟ್ಟು ಕೈಲಾದಷ್ಟು…

Read More

ನಟಿ ರಶ್ಮಿಕಾ ಮಂದಣ್ಣಗೆ ಈ ಡೀಪ್‌ಫೇಕ್ ವಿಡಿಯೋ ಕಾಟ ನಿದ್ದೆಗೆಡಿಸಿತ್ತು. ಡೀಪ್‌ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ಸಾಕಷ್ಟು ಜನರು ಒತ್ತಾಯಿಸಿದ್ದರು. ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಆಸಾಮಿಗಳಿಗೆ ಬಲೆ ಬೀಸಿದ್ದರು. ಕೊನೆಗೂ ವ್ಯಕ್ತಿಯೊಬ್ಬನ ಬಂಧನವಾಗಿದೆ. ರಶ್ಮಿಕಾ ಸೇರಿದಂತೆ ಹಲವರ ಡೀಪ್‌ಫೇಕ್ ವಿಡಿಯೋ ಮಾಡಿದ್ದ ಆಂಧ್ರ ಪ್ರದೇಶದ ವ್ಯಕ್ತಿಯನ್ನು ದೆಹಲಿ (Delhi) ಪೊಲೀಸರು ಬಂಧಿಸಿದ್ದಾರೆ. ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತಿಂಗಳ ಹಿಂದೆಯಷ್ಟೇ ಇವರ ಡೀಪ್‌ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಸರಕಾರದ ಮಟ್ಟದಲ್ಲಿ ಚರ್ಚೆಗೂ ಕಾರಣವಾಗಿತ್ತು. ಆದರೂ, ಅದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಹರಿಬಿಟ್ಟ ಮತ್ತೊಂದು ವಿಡಿಯೋ ಸಾಕ್ಷಿಯಾಗಿತ್ತು. https://ainlivenews.com/another-record-breaking-katera-movie-rs-200-crore-club-poster-release/ ತಿಂಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಶ್ಮಿಕಾ ಪರ ಅನೇಕರು ಮಾತನಾಡಿದ್ದರು. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್‌ಫೇಕ್ ಮಾಡುವವರ ವಿರುದ್ಧ…

Read More

ದಾವಣಗೆರೆ: ಅಯೋಧ್ಯೆಯಲ್ಲಿ ಸೋಮವಾರ ಪ್ರಭು ಶ್ರೀರಾಮನ ಪ್ರಾಣಿ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿಯೂ ರಾಮಭಕ್ತರ ಸಂಭ್ರಮ ಜೋರಾಗಿದೆ. ಅಯೋಧ್ಯೆಯಲ್ಲಿನ ಕಾರ್ಯಕ್ರಮ ಯಶಸ್ವಿಯಾಗಲೆಂದು ದಾವಣಗೆರೆಯ ಸುಪರ್ ಮಾಮ್ಸ್ ಗ್ರುಪ್ ನ ಮಹಿಳೆಯರು ಸಾಮೂಹಿಕವಾಗಿ ರಾಮೋತ್ಸವವನ್ನ ಆಚರಣೆ ಮಾಡಿದ್ದಾರೆ. https://ainlivenews.com/another-record-breaking-katera-movie-rs-200-crore-club-poster-release/ ದಾವಣಗೆರೆಯ ವಿದ್ಯಾನಗರದ ಪಾರ್ಕ್ ನಲ್ಲಿ ಸುಮಾರು ನೂರಕ್ಕು ಹೆಚ್ಚು ಮಹಿಳೆಯರು ರಾಮನಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದರು. ಈ ವೇಳೆ ಶ್ರೀರಾಮ, ಸೀತಾ ಹಾಗೂ ಆಂಜನೇಯನ ವೇಷ ತೊಟ್ಟ ಮಕ್ಕಳಿಗೆ ಆರತಿಯನ್ನ ಬೆಳಗಿ ಪೂಜೆ ಸಲ್ಲಿಸಲಾಯಿತು. ಪೂಜೆ ಹಿನ್ನಲೆಯಲ್ಲಿ ಮಹಿಳೆಯರು ಸುಮಾರು ಎರಡು ಗಂಟೆಗಳ ಕಾಲ ರಾಮ ಜಪವನ್ನ ಮಾಡಿದರು.

Read More

ಬೆಂಗಳೂರು: ಬೆಂಗಳೂರಿನಲ್ಲಿ ಸರಿಯಾಗಿ ಫುಟ್ ಪಾತ್ ನಲ್ಲಿ ನಡೆಯೋದೇ ಕಷ್ಟ. ಅತ್ತೊಂದ್ರಲ್ಲಿ ಫುಟ್‌ಪಾತ್‌ಗಳ ಮೇಲೆ ಯಮರೂಪಿ  ಟ್ರಾನ್ಸ್‌ ಫಾರ್ಮರ್‌ ಗಳು ಜನರ ಪಾಲಿಗೆ ಕಂಟಕ ತಂದಿವೆ.ಇವುಗಳ ಬಳಿ ಸ್ವಲ್ಪ ಯಾಮಾರಿದ್ರೂ ಯಮನ ಪಾದ ಸೇರೋದು ಗ್ಯಾರಂಟಿ.ಆದ್ರೂ ಬೆಸ್ಕಾಂ ಮಾತ್ರ ತಲೆನೇ ಕೆಡಿಸಿಕೊಳ್ತಿಲ್ಲ. ನಗದ ಗಲ್ಲಿ ಗಲ್ಲಿಯಲ್ಲೂ ಡೆಡ್ಲಿ ಟ್ರಾನ್ಸ್ ಫಾರ್ಮರ್ ಗಳು ಜನರ ಬಲಿಗಾಗಿ ಕಾಯ್ತಿವೆ. ಹಾಗಾದ್ರೆ ನಿಗದಲ್ಲಿ ಇನ್ನೂ ಎಷ್ಟಿವೆ ಡೆಡ್ಲಿ ಟಾನ್ಸ್ ಫಾರ್ಮಸ್ಸ್ ಬನ್ನಿ ಹೇಳ್ತಿವೆ. ಬೆಸ್ಕಾಂ ಇದು. ಮನೆ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡುವ ಸರ್ಕಾರಿ ಇಲಾಖೆ. ಆದ್ರೆ ಇತ್ತೀಚಿಗೆ ಈ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿ ಎದ್ದು ಕಾಣ್ತಿದೆ. ಇವರು ಮಾಡ್ತಿರೋ ಎಡವಟ್ಟುಗಳಿಂದ ಜನನ ಬೀದಿ ಹೆಣವಾಗ್ತಿದ್ದಾರೆ. ಇತ್ತೀಚಿಗೆ ಕಾಡುಗೋಡಿ ಬಳಿ ವಿದ್ಯುತ್ ಅವಘಡದಿಂದ ದೊಡ್ಡ ಅನಾಹುತವೇ ನಡೆದುಹೋಗಿದೆ. ಆದ್ರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಡೇಜರ್ ಟ್ರಾನ್ಸ್ ಫಾರ್ಮರ್ ಗಳನ್ನು ದುಸಸ್ಥಿ ಮಾಡುವ ಯತ್ನಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ನಗರದಲ್ಲಿ ಇನ್ನೂ ಸಾವಿರಾರು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳು…

Read More

ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದವನನ್ನು ಅರೆಸ್ಟ್ ಮಾಡಿದ್ದಾರೆ. ಶಶಾಂಕ್(26) ಬಂಧಿತ ಆರೋಪಿಯಾಗಿದ್ದು, ಶಶಾಂಕ್ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದ. ಸಮಾಜದಲ್ಲಿ ಭಯಭೀತ ವಾತಾವರಣ ಸೃಷ್ಟಿ ಮಾಡ್ತಿದ್ದ. ಹೀಗಾಗಿ ಸಿಸಿಬಿ ಪೊಲೀಸರು ಶಶಾಂಕ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. https://ainlivenews.com/see-how-many-health-benefits-drinking-buttermilk-has/ ವಿಚಾರಣೆ ವೇಳೆ ಈತನ ಮೇಲೆ 7 ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂದಿದೆ. 2015 ರಲ್ಲಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಕೇಸ್, 2019ರಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ರಾಜಾಜಿನಗರ, ತಿಲಕನಗರದಲ್ಲಿ ಒಂದೊಂದು ಕೊಲೆ ಯತ್ನ ಕೇಸ್​, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಹಾಗೂ ಕೊಲೆಯತ್ನ ಕೇಸ್, ಪುಟ್ಟರೆನಹಳ್ಳಿಯಲ್ಲಿ ಹಲ್ಲೆ ಪ್ರಕರಣ ಸೇರಿದಂತೆ ಏಳು ಪ್ರಕರಣಗಳು ಶಶಾಂಕ್ ವಿರುದ್ಧ ಇರೋದು ಬೆಳಕಿಗೆ ಬಂದಿದೆ.

Read More

ತುಮಕೂರು, ಜನವರಿ 21: ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 12000 ರೂ.ಗಳೊಂದಿಗೆ 1500 ರೂ. ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಸಿದ್ದಗಂಗಾ ಮಠ ಕ್ಯಾತ್ಸಂದ್ರ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದರೊಂದಿಗೆ ಮಾತನಾಡಿದರು. ಒಟ್ಟು ನಮ್ಮ ಸರ್ಕಾರದಿಂದ ಕ್ವಿಂಟಾಲಿಗೆ 1500 ರೂ.ಗಳನ್ನು ಒದಗಿಸಲಾಗುವುದು. 3000 ರೂ.ಗಳಿಗೆ ಬೇಡಿಕೆ ಇದ್ದರೂ ಸರ್ಕಾರದ ತನ್ನ ಶಕ್ತ್ಯಾನುಸಾರ ಬೆಂಬಲ ಬೆಲೆ ನೀಡುತ್ತಿದ್ದು, ಎಂ.ಎಸ್.ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದರು. ಕೇಂದ್ರ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ರಾಜ್ಯ ಸರ್ಕಾರ ಕೊಬ್ಬರಿ ಬೆಳೆಗಾರರಿಗೆ 1500 ಹೆಚ್ಚಾಗಿ ನೀಡಲಿದೆ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆಗೆ ರಜೆ ಇಲ್ಲ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ನಾಳೆ ರಜೆ ಘೋಷಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಚಾರ ಮಾಡಲಾಗುವುದು ಹಿಂದಿನ ಸರ್ಕಾರ ಜನವರಿ 21 ನ್ನು ದಾಸೋಹ ದಿನ ಎಂದು ಆಚರಿಸಲು ಘೋಷಣೆ ಮಾಡಿದ್ದರ…

Read More

ಹೈದರಾಬಾದ್: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ  ಸಕಲ ಸಿದ್ಧತೆಗಳು ನಡೆದಿವೆ. ಈ ಹೊತ್ತಿನಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO), ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರವನ್ನು ಬಿಡುಗಡೆ ಮಾಡಿದೆ. ಆಕಾಶದಿಂದ ಅಯೋಧ್ಯೆಯ ರಾಮಮಂದಿರ ಹೇಗೆ ಕಾಣುತ್ತದೆ ಎಂಬ ಚಿತ್ರವನ್ನು ಹೈದರಾಬಾದ್‍ನ ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿದೆ. ಈ ಚಿತ್ರಗಳನ್ನು ಭಾರತೀಯ ರಿಮೋಟ್ ಸೆನ್ಸಿಂಗ್ ಉಪಗ್ರಹದಿಂದ ತೆಗೆಯಲಾಗಿದೆ. ಇದರಲ್ಲಿ ದಶರಥ ಮಹಲ್, ಅಯೋಧ್ಯೆಯ ರೈಲು ನಿಲ್ದಾಣ ಮತ್ತು ಪವಿತ್ರ ಸರಯೂ ನದಿ ಕಾಣಿಸುತ್ತದೆ. ಇಂಡಿಯನ್ ರಿಮೋಟ್ ಸೆನ್ಸಿಂಗ್ ಸಿರೀಸ್ ಉಪಗ್ರಹದ ಮೂಲಕ ತೆಗೆದ ಈ ಚಿತ್ರಗಳಲ್ಲಿ 2.7 ಎಕರೆ ಇರುವ ಪವಿತ್ರ ರಾಮಮಂದಿರ ಸಂಕೀರ್ಣವು ನಮಗೆ ಕಾಣುತ್ತದೆ. https://ainlivenews.com/see-how-many-health-benefits-drinking-buttermilk-has/ ಸೋಮವಾರ (ಜ.22) ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಅಯೋಧ್ಯೆ ಸಂಪೂರ್ಣವಾಗಿ ಸಿಂಗಾರಗೊಂಡಿದೆ. ಈ ಸಮಾರಂಭದಿಂದ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ. ಜನ ತಮ್ಮ ಸುತ್ತಮುತ್ತಲಿನ ದೇವಾಲಯಗಳು ಸೇರಿದಂತೆ, ಮನೆಯಲ್ಲೂ ಈ ಸಮಾರಂಭವನ್ನು ದೀಪಾವಳಿಯಂತೆ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

Read More

ಬೆಂಗಳೂರು: ಒಕ್ಕಲಿಗ ಸಮುದಾಯದ ಸಹಕಾರದಿಂದ ನಾನು ಇಲ್ಲಿವರೆಗೆ ಬಂದಿದ್ದೇನೆ. ನಿಮ್ಮೆಲ್ಲರ ಬೆಂಬಲ ಇದ್ದರೆ ನಾನು ಇನ್ನೂ ಎತ್ತರಕ್ಕೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ( DK Shivakumar) ಹೇಳಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಒಕ್ಕಲಿಗ ಉದ್ಯಮಿಗಳ ಎಕ್ಸ್‌ಪೋದಲ್ಲಿ ಮಾತನಾಡಿದ ಅವರು, ನನಗೆ ಬೇಕಾದಷ್ಟು ಏಟು ಬಿದ್ದಿದೆ. ನಾನು ಕನಕಪುರದ (Kanakapur) ಕಲ್ಲು ಮಣ್ಣಿನಿಂದ ಬಂದಿದ್ದೇನೆ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ, ಏಟು ಬಿದ್ದು ಬಿದ್ದು ಈ ಹಂತಕ್ಕೆ ಬಂದಿದ್ದೇನೆ. ನೀವು ತಿರುಪತಿ ತಿಮ್ಮಪ್ಪನ ಹಾಗೇ ಒಂದೇ ಕಡೆ ಇರಬಾರದು. ಎರಡೂ ಕಡೆ ಇರಬೇಕು, ನೀವು ಬೆಳೆಯಬೇಕು ಬೇರೆಯವ ರನ್ನೂ ಬೆಳೆಸಬೇಕು ಎಂದಿದ್ದಾರೆ. ಮೂರು `ಕೆ’ಗಳನ್ನು ನಮ್ಮ ಸಮಾಜ ಸದಾ ನೆನಪಿಸಿ ಕೊಳ್ಳಬೇಕು. ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, https://ainlivenews.com/see-how-many-health-benefits-drinking-buttermilk-has/ ಬೆಂಗಳೂರಿಗೆ ಹೊಸ ರೂಪ ನೀಡಿದ ಎಸ್.ಎಂ ಕೃಷ್ಣ ಅವರನ್ನು ಮರೆಯಬಾರದು. ಸಮುದಾಯದವರ ನಡುವೆ ಶೇರಿಂಗ್& ಕೇರಿಂಗ್ ಇರಬೇಕು ಎಂದಿದ್ದಾರೆ. ಸಮುದಾಯದ ಜನ ಗಟ್ಟಿ…

Read More

ವಿಜಯಪುರ: ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ವಿಜಯಪುರದಲ್ಲಿ ರಾಮ ಭಕ್ತರಿಂದ ವಿಶೇಷ ಅಭಿಯಾನ ಮಾಡಲಾಗಿದೆ. ನಗರದ ಜೋರಾಪುರ ಪೇಟ್, ಅಡಕಿ ಗಲ್ಲಿಗಳಲ್ಲಿ ಜೈ ಶ್ರೀರಾಮ್ ಸೀಲ್ ಅಭಿಯಾನ ಮಾಡಿದ್ದಾರೆ. ಪ್ರತಿ ಮನೆಯ ಗೋಡೆಗಳಿಗೆ ರಾಮ ಭಕ್ತರು ಜೈ ಶ್ರೀ ರಾಮ್ ಸೀಲ್ ಹಾಕ್ತಿದ್ದಾರೆ. 200 ಮನೆಗಳಿಗೆ ಜೈ ಶ್ರೀರಾಮ್ ಕೇಸರಿ ಬಣ್ಣದ ಸೀಲ್ ಹಾಕಲಾಗಿದ್ದು, ಜೊತೆಗೆ ಮನೆಮನೆಗು ರಾಮ ಮಂದಿರದ ಅಕ್ಷತೆ ವಿತರಣೆ ಮಾಡಿದ್ದಾರೆ. ರಾಮ ನಾಮ ಸೀಲ್ ಹಾಕೋಕೆ ರಾಮ ಭಕ್ತರನ್ನ ಆಹ್ವಾನಿಸ್ತಿರೋ ಸಾರ್ವಜನಿಕರು.

Read More

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರತ್ನ ಶತಾಯುಷಿ ಪರಮಪೂಜ್ಯ ಡಾ.ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ “ಸ್ಮೃತಿ ವನ” ವನ್ನು ಉದ್ಘಾಟಿಸಿ, ಶ್ರೀಗಳ 5 ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಸಮೀಜಿ, ತೋಂಟದಾರ್ಯ ಸಂಸ್ಥಾನ ಮಠದ ಡಾ.ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, ಸಿದ್ಧಗಂಗಾ ಮಠದ ಉತ್ತರಾಧಿಕಾಧಿಕಾರಿಗಳಾದ ಶಿವ ಸಿದ್ಧೇಶ್ವರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆದವು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವರಾದ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ರಾಜಣ್ಣ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರುಗಳಾದ ಜ್ಯೋತಿಗಣೇಶ್, ಸುರೇಶ್ ಗೌಡ, ಶ್ರೀನಿವಾಸ್ ಹಾಗೂ KRIDL ನ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಸೇರಿ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Read More