Author: AIN Author

ಅಯೋಧ್ಯೆ:- ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ. ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಸಾಧುಸಂತರು, ಪ್ರಮುಖ ಕೈಗಾರಿಕೋದ್ಯಮಿಗಳು, ಬಾಲಿವುಡ್‌ ತಾರೆಯರು ಸೇರಿದಂತೆ ಸರಿಸುಮಾರು ಎಂಟು ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಡೀ ಅಯೋಧ್ಯೆಯು ರಾಮ ಭಕ್ತಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ. ದೇಶದ ವಿವಿಧೆಡೆಗಳಿಂದ ಬಂದಿರುವ ಸಾಧುಗಳು ಹಾಗೂ ಭಕ್ತರು ಭಜನೆ ಹಾಡುತ್ತ, ತುಳಸೀದಾಸರು ಬರೆದ ರಾಮಚರಿತಮಾನಸದ ಸಾಲುಗಳನ್ನು ಹೇಳುತ್ತ ನರ್ತಿಸುತ್ತಿರುವ ದೃಶ್ಯ ಇಲ್ಲಿನ ಬೀದಿಗಳಲ್ಲಿ ಕಾಣಿಸುತ್ತಿದೆ. ‘ಮಂಗಲ ಭವನ ಅಮಂಗಲ ಹಾರಿ, ದ್ರವಹು ಸುದಸರಥ ಅಜಿರ ವಿಹಾರಿ’ (ನನಗೆ ಯಾವ ಕೆಡುಕೂ ಆಗದಂತೆ ಶ್ರೀರಾಮ ಮಾತ್ರ ನೋಡಿಕೊಳ್ಳಬಲ್ಲ… ಅವನ ಆಶೀರ್ವಾದ ಕೋರಿ ಪ್ರಾರ್ಥಿಸುತ್ತೇನೆ) ಎಂದು ನೆರೆಯ ಅಂಬೇಡ್ಕರ್ ನಗರ ಜಿಲ್ಲೆಯ ಹರೇಂದ್ರ ಮಿಶ್ರಾ ಹೇಳುತ್ತಾರೆ. ಇಲ್ಲಿ ರಾಮ ಭಕ್ತರು ಶ್ರೀರಾಮನ ಸ್ಮರಣೆಯಲ್ಲಿ ಅದೆಷ್ಟು ಮಗ್ನರಾಗಿದ್ದಾರೆಂದರೆ, ತಮ್ಮನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗೆ ಈ ದ್ವಿಪದಿಯನ್ನು ಉಲ್ಲೇಖಿಸಿ ಉತ್ತರಿಸಿದ್ದಾರೆ. ಅಯೋಧ್ಯೆಯ ಹಲವು ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು…

Read More

ರಾಮಮಂದಿರ ಉದ್ಘಾಟನೆಯಂದು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಇಂದು ನಿಮಗೆ ಶುಭಸುದ್ದಿ ಸಿಗುವುದು ಖಂಡಿತ. ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಚಿನ್ನದ ದರ ತಟಸ್ಥವಾಗಿದ್ದರೆ ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್‌ ಚಿನ್ನದ ದರ ಇಂದು 1 ಗ್ರಾಂ ಚಿನ್ನದ ಬೆಲೆ 5,780ರೂ ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,240 ರೂ. ನೀಡಬೇಕು. ಇಂದಿನ 10 ಗ್ರಾಂ ಚಿನ್ನದ ಬೆಲೆ 57,800 ಆಗಿದ್ದರೆ, 100 ಗ್ರಾಂ ಚಿನ್ನದ ಬೆಲೆ 5,78,000 ರೂ. ಇದೆ. 24 ಕ್ಯಾರೆಟ್‌ ಚಿನ್ನದ ದರ 1 ಗ್ರಾಂ 24 ಕ್ಯಾರೆಟ್‌ ಚಿನ್ನಕ್ಕೆ ಇಂದು 6,305 ಇದೆ. 8 ಗ್ರಾಂ ಚಿನ್ನಕ್ಕೆ ಇಂದು 50,440 ರೂ ನೀಡಬೇಕು. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,050 ರೂ. ಕೊಡಬೇಕು. ಇವತ್ತು 100 ಗ್ರಾಂ ಚಿನ್ನದ ದರ 6,30,500 ರೂ. ಇದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ…

Read More

ನವದೆಹಲಿ;- ರಾಮಲಲ್ಲಾ ಮೂರ್ತಿ “ಪ್ರಾಣ ಪ್ರತಿಷ್ಠೆ” ಸಮಾರಂಭ ಇಂದು ಅಯೋಧ್ಯೆಯಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ. “ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಜ.22 ರಂದು ನಡೆಯುವ ಶ್ರೀರಾಮಲಲ್ಲಾ “ಪ್ರಾಣ ಪ್ರತಿಷ್ಠೆ” ಸಮಾರಂಭದಲ್ಲಿ ಭಾಗಿಯಾಗಲು ನೀವು ಕಠಿಣ ಅನುಷ್ಠಾನವನ್ನು ಕೈಗೊಂಡಿದ್ದೀರಿ. ನೀವು ಕೈಗೊಂಡ 11-ದಿನಗಳ ಅನುಷ್ಠಾನ ಕೇವಲ ಪವಿತ್ರ ಧಾರ್ಮಿಕ ಆಚರಣೆಗಳ ಅನುಸರಣೆ ಮಾತ್ರವಲ್ಲ, ಇದು ತ್ಯಾಗ ಮನೋಭಾವದಿಂದ ಪ್ರೇರಿತವಾದ ಅತ್ಯುನ್ನತ ಆಧ್ಯಾತ್ಮಿಕ ಕಾರ್ಯವಾಗಿದೆ. ಇಂತಹ ಶುಭ ಸಂದರ್ಭದಲ್ಲಿ, ನೀವು ಅಯೋಧ್ಯೆಗೆ ಭೇಟಿ ನೀಡುತ್ತಿರುವುದಕ್ಕೆ ನಾನು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.

Read More

ಸೂರ್ಯೋದಯ: 06:53, ಸೂರ್ಯಾಸ್ತ : 06:01 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ, ಹೇಮಂತ ಋತು, ರಾಹು ಕಾಲ: 07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ:03:00 ನಿಂದ 04:30 ತನಕ ಮೇಷ ರಾಶಿ: ಹಳೆ ವಾಹನ ಬದಲಾಯಿಸಿ ಹೊಸ ವಾಹನ ಖರೀದಿ,ರಾಶಿಯ ಕೌಟುಂಬಿಕ ಜೀವನ ತುಂಬಾ ಮಧುರ, ವ್ಯಾಪಾರ ಮಧ್ಯಮ,ಹಣದ ವಿಷಯದಲ್ಲಿ ಸಾಮಾನ್ಯ ದಿನವಾಗಿದೆ. ಕೆಲವೊಮ್ಮೆ ಅಪಾಯಕಾರಿ ಪರಿಸ್ಥಿತಿ ಎದುರಿಸುವಿರಿ. ಇವರ ಹಠಾತ್ ನಿರ್ಧಾರಗಳಿಂದಾಗಿ ಎಡವಟ್ಟೇ ಹೆಚ್ಚು. ನೀವು ಆರ್ಥಿಕವಾಗಿ ಅಷ್ಟೇನೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲ. ಇವರು ಕ್ಷಣಿಕ ಆಕರ್ಷಣೆಗೆ ಹೆಚ್ಚು ಒಳಗಾಗುತ್ತಾರೆ. ಹೊಸ ಬಟ್ಟೆ, ಕಾರು, ವಸ್ತುಗಳನ್ನು ಖರೀದಿಸುವಲ್ಲಿ ಬೇಗ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ,ಆದರೆ, ಇವರು ತಮ್ಮ ಗಳಿಕೆಯ ಸಾಮರ್ಥ್ಯವನ್ನು ಚೆನ್ನಾಗಿ ಅರಿತವರಾಗಿರುತ್ತಾರೆ. ಮಾತಾಪಿತೃ ಬಗ್ಗೆ ವಿಶ್ವಾಸ ಹೊಂದಿರುತ್ತಾರೆ. ಹಣ ಉಳಿತಾಯದ ವಿಚಾರದಲ್ಲಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸುತ್ತಾರೆ. ಸ್ವಂತ ಉದ್ಯಮ ಪ್ರಾರಂಭಿಸಿ…

Read More

ಗುವಾಹಟಿ:- ರಾಮಮಂದಿರ ಉದ್ಘಾಟನೆ ದಿನ ಮುಸ್ಲಿಮರು, ಕ್ರೈಸ್ತರು ಪ್ರಾರ್ಥನೆ ಮಾಡಿ ಎಂದು ಅಸ್ಸಾಂ ಸಿಎಂ ಮನವಿ ಮಾಡಿದ್ದಾರೆ. ಎಲ್ಲಾ ಜಾತಿ ಮತ್ತು ಸಮುದಾಯದವರು ಶಾಂತಿಯಿಂದ ಇರಲು ನಾಳೆ ವಿಶೇಷ ಪ್ರಾರ್ಥನೆ ಮಾಡಲು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಲ್ಲಿ ನಾನು ಮನವಿ ಮಾಡುತ್ತೇನೆ. ಇದು ಹಿಂದೂಗಳ ವಿಜಯವಲ್ಲ, ಭಾರತೀಯ ನಾಗರಿಕತೆಯ ವಿಜಯವಲ್ಲ. ಒಂದು ಧರ್ಮದ ಆಕ್ರಮಣಕಾರನು ಭಾರತೀಯ ಪೂಜಾ ಸ್ಥಳವನ್ನು ಒಡೆದ. ಬಾಬರ್ ಆಕ್ರಮಣಕಾರನಾಗಿದ್ದ. ಅವನು ಕೇವಲ ಹಿಂದೂಗಳ ಮೇಲೆ ದಾಳಿ ಮಾಡಲಿಲ್ಲ. ಬ್ರಿಟಿಷ್ ವಸಾಹತುಶಾಹಿ ಮತ್ತು ಬಾಬರ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 1992 ರಲ್ಲಿ ಬಾಬರಿ ಮಸೀದಿಗೂ ಮೊದಲು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ಇತ್ತು. 16 ನೇ ಶತಮಾನದ ಮಸೀದಿಯು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಹಳೆಯ ವಿವಾದದ ಕೇಂದ್ರವಾಗಿತ್ತು. ಈ ಸ್ಥಳವು ಭಗವಾನ್ ರಾಮನ ಜನ್ಮಸ್ಥಳವಾಗಿದೆ. ಮುಸ್ಲಿಂ ಆಕ್ರಮಣಕಾರರು ಅಲ್ಲಿರುವ ದೇವಾಲಯವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಿದ್ದರು. ಈಗ ಕೆಡವಲಾದ ಮಸೀದಿಯ ಒಳಗಿನ ಶಾಸನಗಳು ಇದನ್ನು 1528-29 ರಲ್ಲಿ ಮೊಘಲ್…

Read More

ಗದಗ:- ಜಿಲ್ಲೆಯ ಚಿಕ್ಕಹಂದಿಗೋಳ ಗ್ರಾಮದ ಯುವ ಕಲಾವಿದ ನಾಗರಾಜ ಕಮ್ಮಾರ ಅವರು 15 ಕೆಜಿ ಜೋಳ, 2 ಕೆಜಿ ಅಕ್ಕಿಯಲ್ಲಿ 12 ಅಡಿ ಎತ್ತರ, 10 ಅಡಿ ಅಗಲ ವಿಸ್ತೀರ್ಣದಲ್ಲಿ ಶ್ರೀರಾಮಮಂದಿರ ನಿರ್ಮಿಸಿದ್ದಾರೆ ಮತ್ತೊಂದು ಕಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ‌ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅಯೋಧ್ಯೆ ರಾಮಮಂದಿರ ಸೆಟ್ ಹಾಕಲಾಗಿದೆ. ರಾಮಮಂದಿರ ಸೆಟ್ ಮುಂದೆ ನಿಂತು ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

Read More

ಮೂರು ಹೊತ್ತು ಅನ್ನ ತಿನ್ನುವ ಅಭ್ಯಾಸ ನಿಮಗಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಚಪಾತಿ ಅಥವಾ ರೊಟ್ಟಿ ತಿಂದರೆ ಒಂದು ಮುಷ್ಟಿ ಅನ್ನ ಬೇಕೇ ಬೇಕು ಎನ್ನುವವರಿದ್ದಾರೆ. ಆಗ ಮಾತ್ರ ಊಟ ಪರಿಪೂರ್ಣಗೊಳ್ಳುತ್ತದೆ ಎಂಬುದು ಅವರ ಭಾವನೆ. ಅಂಥವರು ತಿಳಿದಿರಲೇ ಬೇಕಾದ ಒಂದಿಷ್ಟು ಮಾಹಿತಿಗಳು ಇಲ್ಲಿವೆ. ಅನ್ನ ಹಾಗೂ ಚಪಾತಿಯನ್ನು ಜೊತೆಯಾಗಿ ತಿನ್ನುವುದರಿಂದ ದೇಹದಲ್ಲಿ ಪಿಷ್ಟದ ಪ್ರಮಾಣ ಹೆಚ್ಚುತ್ತದೆ. ಮೂರು ಹೊತ್ತು ಅನ್ನವನ್ನು ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಅಕ್ಕಿಯಲ್ಲಿ ನಾರಿನಂಶ ಕಡಿಮೆ ಇರುವುದರಿಂದ ಅದನ್ನು ತಿಂದ ಬಳಿಕ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅನ್ನ ಸೇವನೆಯಿಂದ ನೇರವಾಗಿ ಬೊಜ್ಜು ಬೆಳೆಯದಿದ್ದರೂ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಕ್ಯಾಲರಿಗಳನ್ನು ಸೇವನೆ ಮಾಡಿದಾಗ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ ಹಾಗೂ ಕ್ರಮೇಣ ತೂಕ ಹೆಚ್ಚುತ್ತದೆ. ಒಂದು ತಿಂಗಳ ಕಾಲ ನೀವು ಅನ್ನ ಸೇವನೆಯನ್ನು ತ್ಯಜಿಸುವುದರಿಂದ ಅಥವಾ ಕಡಿಮೆ ಮಾಡುವುದರಿಂದ ನಿಮ್ಮ ದೇಹ ತೂಕ ಕಡಿಮೆಯಾಗುವುದು…

Read More

ಬೆಂಗಳೂರು:- ರಾಮಮಂದಿರ ಪ್ರತಿಷ್ಠಾಪನೆ ದಿನ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ನಾಳೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಎಲ್ಲಾ ಮುಜರಾಯಿ ಇಲಾಖೆ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಆದರೆ ಸರ್ಕಾರಿ ರಜೆ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ನಾನು ಮಹಾದೇಪುರದಲ್ಲಿ ನಿರ್ಮಾಣ ಆಗಿರುವ ರಾಮಮಂದಿರ ಉದ್ಘಾಟನೆಗೆ ಹೋಗುತ್ತೇನೆ ಎಂದು ಹೇಳಿದರು. ಬೆಂಬಲ ಬೆಲೆ ಕುರಿತು ಮಾತನಾಡಿ, ಕೊಬ್ಬರಿಗೆ ರಾಜ್ಯ ಸರ್ಕಾರದಿಂದ 1,500 ರೂ. ಹೆಚ್ಚುವರಿಯಾಗಿ ಬೆಂಬಲ ಬೆಲೆ ಕೊಟುತ್ತೇವೆ ಎಂದರು. ರಾಮಮAದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನ ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸಬೇಕು ಎಂದು ಬಿಜೆಪಿ ನಾಯಕರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ ರಜೆ ನೀಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ ಹೇಳಿಕೆಗೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ, ರಾಮಭಕ್ತರ ವಿರೋಧಿ ಎಂದು ಟೀಕಿಸಿದ್ದಾರೆ.

Read More

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಲುಕ್‌ನಲ್ಲಿ ಮೇಘಾ ಶೆಟ್ಟಿ ಮಿಂಚಿದ್ದಾರೆ. ಕೈವ’ ಸಿನಿಮಾ ನಂತರ ಸಾಕಷ್ಟು ಆಫರ್ಸ್ ಬಾಚಿಕೊಳ್ತಿರೋ ಮೇಘಾ ಇದೀಗ ಹೊಸ ಲುಕ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣ ಡ್ರೆಸ್‌ನಲ್ಲಿ ಮೇಘಾ ಶೆಟ್ಟಿ ಮುದ್ದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಕಿವಿ ಮೇಲೆ ಫ್ಲವರ್ ಇಟ್ಟುಕೊಂಡಿರೋ ಫೋಟೋ ಶೇರ್ ಮಾಡಿರೋ ಮೇಘಾಗೆ ಅತಿಲೋಕ ಸುಂದರಿ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕ ಹಾಡಿಹೊಗಳುತ್ತಿದ್ದಾರೆ. ನಟಿಯ ಮೂಗುತಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಟಿವಿ ಜಗತ್ತಿಗೆ ಪರಿಚಿತರಾದ ಮೇಘಾ ಶೆಟ್ಟಿ ಅವರು ಈಗ ಬೆಳ್ಳಿತೆರೆಯಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡ್ತಿದ್ದಾರೆ. ಅನು ಸಿರಿಮನೆ ಎಂಬ ಪಾತ್ರದ ಮೂಲಕ ಕಿರುತೆರೆ ಮನೆ ಮಾತಾಗಿದ್ದ ನಟಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಮಿಂಚ್ತಿದ್ದಾರೆ.

Read More

ಚಿತ್ರದುರ್ಗ:- ಹೊಳಲ್ಕೆರೆ ತಾಲೂಕಿನ ಹೊಸಹಳ್ಳಿಯಲ್ಲಿ ಎಲ್​​ಪಿಜಿ ಸಿಲಿಂಡರ್ ನ ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ. 38 ವರ್ಷದ ಲಕ್ಷ್ಮಮ್ಮ (38) ಮೃತ ದುರ್ದೈವಿ. ರೇಣುಕಮ್ಮ ಮತ್ತು ರಚನಾ ಎಂಬುವರಿಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಮೇಶ್ ಎಂಬುವರ ಬೀದಿ ಬದಿ ಹೋಟೆಲ್​​ಗೆ ಬೆಂಕಿ ಬಿದ್ದಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿದ್ದ ಮಹಿಳಾ ಕಾರ್ಮಿಕರು ಬೀದಿ ಬದಿ ಹೋಟೆಲ್​​ನತ್ತ ಧಾವಿಸಿದ್ದಾರೆ. ಈ ವೇಳೆ ಹೋಟೆಲ್​​ನಲ್ಲಿದ್ದ ಸಿಲಿಂಡರ್​ ಸ್ಪೋಟಗೊಂಡಿದೆ. ಸಿಲಿಂಡರ್​ ಸ್ಪೋಟದಿಂದ ಸ್ಥಳದಲ್ಲಿದ್ದ ಮಹಿಳಾ ಕಾರ್ಮಿಕ ಲಕ್ಷ್ಮಮ್ಮ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Read More