Author: AIN Author

ಮಂಡ್ಯ:- ಹೊಯ್ಸಳರ ಕಾಲದ ಶಾಸನಗಳು ಮತ್ತು ರೇಖಾಚಿತ್ರಗಳು ಇರುವ ಅಪರೂಪದ ಕಲ್ಲು ಪತ್ತೆಯಾದ ಘಟನೆ ನಾಗಮಂಗಲ ತಾಲೂಕಿನ ಮಾಚಲಘಟ್ಟ ಕುಗ್ರಾಮದ ಮಲ್ಲೇಶ್ವರ ದೇವಸ್ಥಾನದ ಬಳಿ ಜರುಗಿದೆ. CIIL ನ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕರು ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಶಿಲೆ ಪತ್ತೆಯಾಗಿದೆ. ತಜ್ಞರ ಪ್ರಕಾರ, 16 ನೇ ಶತಮಾನದ ಶಿಲಾ ಶಾಸನವಾಗಿದ್ದು, ದುಷ್ಟಶಕ್ತಿಗಳನ್ನು ಗ್ರಾಮದಿಂದ ದೂರವಿಡಲು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ ಚಪ್ಪಡಿ ಕಲ್ಲಿನಲ್ಲಿ ರೇಖೆಗಳನ್ನು ಕೆತ್ತಲಾಗಿದ್ದು, ಬರಹಗಳು ಮೋದಿ ಲಿಪಿಯಲ್ಲಿವೆ. ಅರ್ಧ ಶಿಲೆ (ಮೇಲಿನ ಭಾಗ) ಮಾತ್ರ ಪತ್ತೆಯಾಗಿದ್ದು, ಇನ್ನೂ ಅರ್ಧ ಕಲ್ಲು ಭೂಮಿಯೊಳಗೆ ಹುದುಗಿ ಹೋಗಿದೆ. ಹಿರಿಯ ಸಂಶೋಧನಾ ಸಹೋದ್ಯೋಗಿ ಶಶಿಧರ ಸಿಎ ಅವರು ಈ ಸಂಶೋಧನೆಯನ್ನು ನಡೆಸಿದರು. ಸಿಐಐಎಲ್ ನಿರ್ದೇಶಕ ಶೈಲೇಂದ್ರ ಮೋಹನ್ ಅವರ ಮಾರ್ಗದರ್ಶಕರಾಗಿದ್ದರು ಈ ಕಲ್ಲಿನ ಮೇಲ್ಭಾಗದಲ್ಲಿ ದೇವತೆಯ ರೇಖಾಚಿತ್ರವಿದೆ. ಕೆಳಭಾಗದಲ್ಲಿ ವಾಸ್ತುಮಂಡಲಗಳ ರೇಖಾಚಿತ್ರಗಳಿವೆ. ಕೆಳಗಿನ ಚೌಕದಲ್ಲಿ ಒಟ್ಟು 20 ಮನೆಗಳ ಚಿತ್ರಗಳಿವೆ. “ಓಂ” ಮತ್ತು “ಹ್ರೀಂ” ನಂತಹ “ಬೀಜ ಮಂತ್ರಗಳು” ಇವೆ. ರಜೋಗುಣ,…

Read More

ಅಯೋಧ್ಯೆ: ರಾಮಮಂದಿರದ 500 ವರ್ಷಗಳ ಕನಸು ಈಗ ನನಸಾಗುತ್ತಿರುವ ಕಾರಣ ಕೋಟ್ಯಂತರ ಭಾರತೀಯರು ಉದ್ಘಾಟನೆಗಾಗಿ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದು, ಸೋಮವಾರ ಸುಮಾರು 5 ಗಂಟೆ ಮೋದಿ ಅವರು ಅಯೋಧ್ಯೆಯಲ್ಲಿಯೇ ಕಾಲ ಕಳೆಯಲಿದ್ದಾರೆ. ರಾಮಲಲ್ಲಾಗೆ ಮೊದಲ ಮಜ್ಜನ: ಅಯೋಧ್ಯೆಯ ಗರ್ಭಗುಡಿ ಪ್ರವೇಶಿಸಿರುವ ರಾಮಲಲ್ಲಾ ಮೂರ್ತಿಗೆ ಸೋಮವಾರ ಮೊದಲ ಬಾರಿಗೆ ಸ್ನಾನ ಮಾಡಿಸಲಾಗಿದೆ. ಸುಮಾರು 114 ತೀರ್ಥಕ್ಷೇತ್ರಗಳಿಂದ ತಂದ ನೀರಿನಲ್ಲಿ ರಾಮಲಲ್ಲಾ ಮೂರ್ತಿಗೆ ಮಹಾಮಜ್ಜನ ಮಾಡಿಸಲಾಗಿದೆ ಅಯೋಧ್ಯೆಯಲ್ಲಿಂದು ಮೋದಿ: ಬೆಳಗ್ಗೆ 10.25: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮನ ಬೆಳಗ್ಗೆ 10.55: ರಾಮಜನ್ಮಭೂಮಿ ಆವರಣ ತಲುಪಲಿರುವ ಹೆಲಿಕಾಪ್ಟರ್‌ ಬೆಳಗ್ಗೆ 11 ರಿಂದ ಮಧ್ಯಾಹ್ನ 12: ರಾಮಮಂದಿರದ ವೀಕ್ಷಣೆ ಮಾಡಲಿರುವ ಪ್ರಧಾನಿ ಮಧ್ಯಾಹ್ನ 12.05-12.55: ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಿರುವ ಮೋದಿ. ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿ. ಮಧ್ಯಾಹ್ನ 1-2: ನರೇಂದ್ರ ಮೋದಿ, ಮೋಹನ್‌ ಭಾಗವತ್‌, ಯೋಗಿ ಆದಿತ್ಯನಾಥ್‌ ಸಾರ್ವಜನಿಕ ಭಾಷಣ ಮಧ್ಯಾಹ್ನ 2.10: ರಾಮಜನ್ಮಭೂಮಿ ಆವರಣದಲ್ಲಿರುವ ಶಿವ ಮಂದಿರಕ್ಕೆ ಭೇಟಿ,…

Read More

ಕಾಠ್ಮಂಡು: ರಾಮಲಲ್ಲಾನ ಪ್ರಾಣ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದ್ದು, ರಾಮನ ಅತ್ತೆ ಮನೆ ಜನಕ್‌ಪುರದಲ್ಲಿಯೂ ಹಬ್ಬದ ವಾತಾವರಣ ಮನೆ ಮಾಡಿದೆ. ನೇಪಾಳದ ಜನಕ್‌ಪುರದಲ್ಲಿರುವ ಜಾನಕಿ ದೇವಾಲಯದಲ್ಲಿ ಸಕಲ ತಯಾರಿಗಳು ನಡೆದಿದೆ. ಇನ್ನೂ ದೇಗುಲವು ವಿದ್ಯುದ್ದೀಪಗಳಿಂದ ಕಣ್ಮನ ಸೆಳೆಯುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ, ಜನಕ್‌ಪುರದಲ್ಲಿ ಸಂತೋಷ ಮತ್ತು ಹಬದ ರೀತಿಯಲ್ಲಿ ಸಂಭ್ರಮಿಸಲಾಗುತ್ತದೆ. ಇದು ಎರಡು ಸ್ಥಳಗಳ ನಡುವೆ ಹಂಚಿಕೊಂಡಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಒತ್ತಿಹೇಳುತ್ತದೆ. ಈ ಸಂಬಂಧ ಶ್ರೀರಾಮ ಯುವ ಸಮಿತಿಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಚೌಧರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತ್ರೇತಾಯುಗದ ವನವಾಸದ ಸಂದರ್ಭದಲ್ಲಿ ರಾಮಚಂದ್ರ ಅನುಭವಿಸಿದ ನೋವು ಕಲಿಯುಗದಲ್ಲಿಯೂ ಮುಂದುವರಿದಿದೆ. ಬರೋಬ್ಬರಿ 500 ವರ್ಷಗಳ ಹೋರಾಟವನ್ನು ಮಾಡಬೇಕಾಯಿತು. ಈ ಸಮಯದಲ್ಲಿ ಅವರು ಟಾರ್ಪಾಲಿನ ಅಡಿಯಲ್ಲಿ ಆಶ್ರಯ ಪಡೆಯಬೇಕಾಗಿತ್ತು. ಅವರ ನೋವು ನಿಜಕ್ಕೂ ಎಲ್ಲಾ ಹಿಂದೂಗಳ ನೋವಾಗಿದೆ. ನಮ್ಮ ಪೂರ್ವಜರು ಕಷ್ಟಪಟ್ಟು ಹೋರಾಡಿದರು. ಇದೀಗ ಅಂತಿಮ ಫಲಿತಾಂಶವು ಇಂದು ಇಲ್ಲಿ ಮರ್ಯಾದಾಪುರುಷ ಭಗವಾನ್ ರಾಮನ ದೇವಾಲಯದ ನಿರ್ಮಾಣವಾಗಿದೆ.…

Read More

ಬೆಂಗಳೂರು:- ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದ್ದು, ಕರ್ನಾಟಕದಾದ್ಯಂತ ಸಂಭ್ರಮ ಮನೆ ಮಾಡಿದೆ. ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಯಲಿದೆ. ರಾಜ್ಯಾದ್ಯಂತ ಭಕ್ತರು ನಾನಾ ರೀತಿಯಲ್ಲಿ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಬೆಳಕಿನ ಅಲಂಕಾರ ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಬಿಜೆಪಿ ಕಚೇರಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಬಿಜೆಪಿ ಕಚೇರಿ ಕಂಗೊಳಿಸುತ್ತಿದೆ. ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ ದೇಗುಲ ಉದ್ಘಾಟಿಸಲಿರುವ ಸಿಎಂ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ಸೀತಾ ರಾಮ ದೇಗುಲ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿಯಲ್ಲಿರುವ ಸೀತಾ ರಾಮ ಲಕ್ಷ್ಮಣ ಸಮೇತ ಆಂಜನೇಯ ದೇಗುಲ ಉದ್ಘಾಟನೆ ಮಾಡಲಿದ್ದಾರೆ. ಶ್ರೀರಾಮ ಟ್ರಸ್ಟ್​​ನಿಂದ ನಿರ್ಮಿಸಲಾಗಿರುವ 32 ಅಡಿ ಎತ್ತರದ ಹನುಮನಮೂರ್ತಿ ಸೇರಿದಂತೆ ದೇವಸ್ಥಾನ ಲೋಕಾರ್ಪಣೆ ಮಾಡಲಿದ್ದಾರೆ. ಇಂದು ಮಧ್ಯಾಹ್ನ 12ರಿಂದ 2 ಗಂಟೆವರೆಗೆ ಮಹಾ…

Read More

ಕಲಬುರ್ಗಿ:- ಅತ್ತ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಮಂದಿರ ಉದ್ಘಾಟನೆ ಆಗುತಿದ್ರೆ ಇತ್ತ ಕಲಬುರಗಿಯಲ್ಲಿ ರಾಮ ಹನುಮನ ಜಪ ಬೆಳಿಗ್ಗೆಯಿಂದಲೇ ಶುರುವಾಗಿದ್ದು ಜಗತ್ ಬಡಾವಣೆಯಲ್ಲಿ ಮಹಿಳಾ ಭಜನಾ ಮಂಡಳಿ ಸದಸ್ಯರು ಹನುಮಾನ ಚಾಲಿಸಾ ಪಠಣೆ ಮಾಡಿದ್ರು. ಹಲವು ದಶಕಗಳಿಂದ ಕಂಡಿರುವ ಕನಸು ನನಸಾದ ಹಿನ್ನಲೆ ಇವತ್ತು ಇಡೀದಿನ ರಾಮ ಮತ್ತು ಹನುಮಾನ ಮಂದಿರಗಳಲ್ಲಿ ಹೋಮ ಹವನ ಪೂಜೆ ಪುನಸ್ಕಾರ ನಿರಂತರವಾಗಿ ನಡೆಯುತ್ತಿದೆ..

Read More

ಬೀದರ್:- ಕೆಮಿಕಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಬೀದರ್​ ಜಿಲ್ಲೆಯ ಹುಮ್ನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಜರುಗಿದೆ. ಎಂಟು ಜನರು ಅಸ್ವಸ್ಥರಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಣಾಪಾದಿಂದ ಪಾರಾಗಿದ್ದಾರೆ. ಮೊಹಮ್ಮದ್ ಶಾಬಾದ್ (21) ಇಂದ್ರಜೀತ್ (23) ಮೃತ ದುರ್ದೈವಿಗಳು ಎನ್ನಲಾಗಿದೆ. ಭಾನುವಾರ (ಜ.21) ರಾತ್ರಿ ಪ್ರಸನ್ನ ಪ್ರೀ ಪ್ರೊಸೆಸಿಂಗ್ ಲಿಮಿಟೆಡ್ ಎಂಬ ರಾಸಾಯನಿಕ ತಯಾರಿಕಾ ಕಾರ್ಖಾನೆಯಲ್ಲಿ ಘಟನೆ ನಡೆದಿದೆ. ಹುಮ್ನಾಬಾದ್ ನಗರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:- ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದ್ದು, ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ.‌ ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಧಾನಿಗಳಾದ ಮಾನ್ಯ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೆರವೇರುತ್ತಿದೆ. ಈ ಎಲ್ಲಾ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ದಕ್ಕಿದೆ ಮತ್ತು ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವೂ, ಅವಕಾಶವು ನನ್ನದಾಗಿದೆ. ಎಲ್ಲ ಕರಸೇವಕರನ್ನೂ ಸ್ಮರಿಸುತ್ತಾ, ಈ ಸುಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಪ್ರತಿಯೊಬ್ಬರಿಗೂ ಆ ರಾಮದೇವರು ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ’ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ. ಮತ್ತೊಂದು…

Read More

ಗದಗ:- ಅಯೋಧ್ಯೆ ರಾಮ ಮಂದಿರದ ಫೋಟೋ ತಿರುಚಿ ಪೋಸ್ಟ್ ಮಾಡಿದ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ​ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ತಾಜುದ್ದೀನ್‌ ದಫೇದಾ‌ರ್ ಎಂಬ ಯುವಕನೊಬ್ಬ ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿರುವಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭದಲ್ಲಿ ಇಂತಹ ಘಟನೆ ನಡೆದಿದೆ. ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾಕಿರುವ ಚಿತ್ರ ಫೇಸ್‌ಬುಕ್‌ನಲ್ಲಿ ಫೋಸ್ಟ್ ಮಾಡಲಾಗಿದೆ. ಸುದ್ಧಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ಹೊರ ಹಾಕಿದ್ದು ಗಜೇಂದ್ರಗಡ ಪೊಲೀಸರು ತಾಜುದ್ದೀನ್‌ ದಫೇದಾ‌ರ್ ಎಂಬಾತನನ್ನು ಬಂಧಿಸಿದ್ದಾರೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಜರಂಗದಳ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ತಡರಾತ್ರಿ ಪೊಲೀಸ್ ಠಾಣೆಗೆ ದೌಡಾಯಿಸಿ ಯುವಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Read More

ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಹಿಂದೂಗಳ ಬಹುವರ್ಷಗಳ ಕನಸಿಗೆ ಕೆಲವೇ ಕೆಲವು ಗಂಟೆ ಬಾಕಿ ಉಳಿದಿದೆ. ಪ್ರತಿ ಮನೆ..ಮನೆಯಲ್ಲಿಯೂ ಜಯ ಶ್ರೀ ರಾಮನ ನಾಮ ಸ್ಮರಣೆ ಮಾಡಲಾಗುತ್ತಿದೆ. ಅದರಂತೆ ಕಲಾವಿದನೋರ್ವ ಮಗಳ ಕೆನ್ನೆಯ ಮೇಲೆಯೇ ಶ್ರೀರಾಮನ ಚಿತ್ರ ಬಿಡಿಸಿದ್ದಾರೆ. ಕಲಾವಿದ ಯಲ್ಲಪ್ಪ ವೈ‌.ಕುಂಬಾರ ಕಲೆಗೆ ಜನ್ರು ಫಿದಾ ಆಗಿದ್ದಾರೆ. ಶ್ರೀರಾಮನ ಆಗಮನವನ್ನು ನಮ್ಮ‌ಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕಲಾವಿದ ಹೇಳಿದ್ದಾರೆ.

Read More

ಬೆಂಗಳೂರು:- ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಟಾಪನೆಗೆ ಶುಭ ಹಾರೈಕೆ ತಿಳಿಸಿದ್ದಾರೆ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ರಾಮರಾಜ್ಯದ ನಿರ್ಮಾಣ, ನಮ್ಮ ಕನಸು. ಅದನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೊಳಿಸಿದ ಐದು ಗ್ಯಾರಂಟಿಗಳು ಇಂದು ಯಶಸ್ವಿಯಾಗಿವೆ. ರಾಮನ ಆದರ್ಶ, ಹನುಮನ ನಿಷ್ಠೆ ಇದ್ದರೆ ಅದೇ ಅರ್ಥಪೂರ್ಣ ಬದುಕು. ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.

Read More