Author: AIN Author

ಖ್ಯಾತ ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹಾದೇವನ್ (Shankar Mahadevan) ಅವರು ಅಯೋಧ್ಯೆ (Ayodhya) ರಾಮಮಂದಿರದ ಉದ್ಘಾಟನೆಯ ಕುರಿತು ಮಾತನಾಡಿದ್ದಾರೆ. ಅದಷ್ಟೇ ಅಲ್ಲ, ಈ ಸಂಭ್ರಮದಲ್ಲಿ ಶಂಕರ್ ಮಹಾದೇವನ್ ಕೂಡ ಭಾಗಿಯಾಗಿದ್ದಾರೆ. ಈಗಾಗಲೇ ಅಯೋಧ್ಯೆ ತಲುಪಿರುವ ಶಂಕರ್ ಮಹಾದೇವನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ದೇಶ ಮಾತ್ರವಲ್ಲದೇ ಇಡೀ ಜಗತ್ತು ಈ ಕ್ಷಣಕ್ಕಾಗಿ ಕಾಯುತ್ತಿದೆ. ರಾಮಮಂದಿರ ಪ್ರಾಣ ಪ್ರತಿಷ್ಠೆ ನೋಡಲು ನಾವು ತುಂಬಾ ಸಂತೋಷ ಮತ್ತು ಉತ್ಸುಕರಾಗಿದ್ದೇವೆ. ನಾವು ಕೂಡ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿರೋದ್ದಕ್ಕೆ ಖುಷಿಯಿದೆ ಎಂದು ಹೇಳಿದ್ದಾರೆ. ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯು ಭಾರತದಲ್ಲಿ ನಡೆಯಲಿರುವ ದೊಡ್ಡ ಸಂಭ್ರಮ ಎಂದು ನಾನು ಭಾವಿಸುತ್ತೇನೆ ಎಂದು ಶಂಕರ್ ಮಹಾದೇವನ್ ಮಾತನಾಡಿದ್ದಾರೆ.

Read More

ಮುಂಬೈ:- ದೇಶದ ಅತೀ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ನಲ್ಲಿ ಅಟಲ್ ಸೇತು ಮೊದಲ ಅಪಘಾತ ಸಂಭವಿಸಿದೆ. ಚಾಲಕನಿಂದ ನಿಯಂತ್ರಣ ಕಳೆದುಕೊಂಡ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡಿದಿದೆ. ಡಿಕ್ಕಿ ಹೊಡೆದು ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳಿಗೆ ಗಾಯಗಳಾಗಿವೆ, ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೊಳಗಾದ ಕಾರು ಅವರು ಚಿರ್ಲೆಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. 17,840 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅಟಲ್‌ ಸೇತು ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಾರಗಳ ಹಿಂದೆ ಉದ್ಘಾಟಿಸಿದ್ದರು.

Read More

ಅಯೋಧ್ಯೆಯ ರಾಮಮಂದಿರ (Ram Mandir) ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗ ಹಾಡುವ ಮೂಲಕ ಶ್ರೀರಾಮನನ್ನು ನಟ ಜಗ್ಗೇಶ್ ಸ್ಮರಿಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಜಗ್ಗೇಶ್ (Actor Jaggesh) ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ‌ https://x.com/Jaggesh2/status/1748977544660132087?s=20 ಜೈಶ್ರೀರಾಮ್ ಎಂದು ಹೇಳುತ್ತಲೇ ಜಗ್ಗೇಶ್ ಹಾಡಿದ್ದಾರೆ. ಹಾಡುವ ಮುಖಾಂತರ ರಾಮನ ಬರಮಾಡಿಕೊಳ್ಳೋಣ ಸ್ನೇಹಿತರೆ ಎಂದಿದ್ದಾರೆ. ಶಾಸ್ತ್ರೀಯವಾಗಿ ಬಂದರು ಸರಿ ಇಲ್ಲದಿದ್ದರು ಸರಿ ರಾಮನಿಗಾಗಿ, ಸಂಕೋಚ ಬಿಟ್ಟು ಯತ್ನಿಸಿ ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ಎಂದು ಅಭಿಮಾನಿಗಳಿಗೆ ಜಗ್ಗೇಶ್ ಮನವಿ ಮಾಡಿದ್ದಾರೆ. ರಾಮನಿಗಾಗಿ ಸಣ್ಣಭಕ್ತಿಯ ಪ್ರಯತ್ನವಿದು. ನಾನು ಹಾಡುಗಾರನಲ್ಲ ತಪ್ಪಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿ.ವೈ ವಿಜಯೇಂದ್ರ ಅವರಿಗೆ ಜಗ್ಗೇಶ್ ಟ್ಯಾಗ್ ಮಾಡಿದ್ದಾರೆ. ಜ.22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆಯುತ್ತಿದೆ. ಕನ್ನಡದ ನಟ ರಿಷಬ್ ಶೆಟ್ಟಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಬಹುಭಾಷಾ ಕಲಾವಿದರಿಗೂ ಆಹ್ವಾನ ನೀಡಿದ್ದಾರೆ.

Read More

ಅಯೋಧ್ಯೆ: ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಟಾ ನೆರವೇರಲು ಕ್ಷಣಗಣನೆ ಆರಂಭವಾಗಿದೆ. ನೂರಾರು ವರ್ಷಗಳ ಹೋರಾಟದ ಕನಸು ನನಸಾಗುತ್ತಿರುವ ಈ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ದೇಶದ ಕೋಟ್ಯಾಂತರ ಜನ ಕಾಯುತ್ತಿದ್ದಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದು ದೇಶದ ವಿವಿಧೆಡೆಗಳಿಂದ ಆಹ್ವಾನಿತರು, ಸಾರ್ವಜನಿಕರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ರಾಮ ಜನ್ಮಭೂಮಿಯಲ್ಲಿ ರಾಮನ ಪ್ರಾಣ ಪ್ರತಿಷ್ಟಾ ಎಂದು ಎಲ್ಲೆಡೆ ಹೇಳಲಾಗುತ್ತಿದ್ದು, ಈ ಪ್ರಾಣ ಪ್ರತಿಷ್ಟಾ ಎಂದರೇ ಏನು? ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಉತ್ತರ ಈ ವರದಿಯಲ್ಲಿದೆ. ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ. ಪ್ರಾಣ ಪ್ರತಿಷ್ಠಾ…

Read More

ಬೆಂಗಳೂರು: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಇಂದು ಬಾಲರಾಮನ ಪ್ರಾಣ ಪ್ರತಿಷ್ಠಾ ನಡೆಯಲಿದೆ ಈ ಸುಸಂದರ್ಭದಲ್ಲಿ ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಪ್ರಿನ್ಸ್​ ಅರ್ಜುನ್​ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೂ ಇಂದೇ ನಾಮಕರಣ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಅಪ್ಪಟ ಹನುಮ ಭಕ್ತರಾಗಿರುವ ಸರ್ಜಾ ಕುಂಟುಂಬದ ಕುಡಿಗಳಿಗೆ ಇಂದು ನಾಮಕರಣ ಮಾಡಲು ತಯಾರಿ ನಡೆಯುತ್ತಿದೆ. ನಟ ಧೃವ ಸರ್ಜಾ ಅವರ ಮಗಳು ಮತ್ತು ಮಗ ಇಬ್ಬರ ನಾಮಕರಣವನ್ನು ಕನಕಪುರದ ಬಳಿ ಇರುವ ಫಾರಂಹೌಸ್​ ನಲ್ಲಿ ನೆರವೇರಿಸಲಿದ್ದಾರೆ. ಈ ಸುಸಂದರ್ಭದಲ್ಲಿ ಅರ್ಜುನ್​ ಸರ್ಜಾ ಫ್ಯಾಮಿಲಿ, ಧೃವಸರ್ಜಾ ಮತ್ತು ಚಿರುಸರ್ಜಾ ಪತ್ನಿ ಮೇಘನಾ ರಾಜ್​ ಮತ್ತು ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Read More

ಮಂಡ್ಯ:- ಸಂಸಾರ ಎಂಬ ನೌಕೆಯಲ್ಲಿ ಕೌಟುಂಬಿಕ ಕಲಹ ಉಂಟಾಗಿ, ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಮಂಡ್ಯ ನೆಹರೂನಗರದ ಪೂರ್ವ ಬಡಾವಣೆಯಲ್ಲಿ ನಡೆದಿದೆ. ಪದ್ಮ(36) ಮೃತ ಮಹಿಳೆ. ಇನ್ನ ಇದು ಆತ್ಮಹತ್ಯೆಯಲ್ಲ ಕೊಲೆ ಅಂತಾ ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತ ಮಹಿಳೆ ಪದ್ಮ ಪತಿ ಸಿದ್ದರಾಜು ಎಂಬಾತನ ಮೇಲೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಂದಹಾಗೆ ರಾಮನಗರ ತಾಲೂಕಿನ ಅಂಕನಹಳ್ಳಿ ನಿವಾಸಿಯಾಗಿದ್ದ ಪದ್ಮ ಹಾಗೂ ಮಂಡ್ಯ ಮೂಲದ ಸಿದ್ದರಾಜು ನಡುವೆ ಪ್ರೀತಿ ಉಂಟಾಗಿ 13 ವರ್ಷದ ಕೆಳಗೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮುದ್ದಾದ ಮಕ್ಕಳು ಸಹ ಇವೆ. ಆದರೆ ಆನಂತರ ಹಣಕ್ಕಾಗಿ ಸಿದ್ದರಾಜು ಎಂಬಾತ ಸಾಕಷ್ಟು ಪೀಡಿಸುತ್ತಿದ್ದನಂತೆ. ಆಗಾಗ ಗಲಾಟೆ ಸಹ ನಡೆಯುತ್ತಿತ್ತು. ಹಲವು ಬಾರಿ ಹಲ್ಲೆ ಕೂಡ ನಡೆಸಿದ್ದನಂತೆ. ಹೀಗಾಗಿಯೇ ಇದರಿಂದ ಮನನೊಂದು ಪದ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಮಧ್ಯೆ ಕುಟುಂಬಸ್ಥರು ಮಾತ್ರ ಪತಿ ಸಿದ್ದರಾಜುನೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎನ್ನುತ್ತಿದ್ದಾರೆ. ಅಂದಹಾಗೆ ಮದುವೆಯಾದ ನಂತರ ಒಂದು ಬಾರಿಗೂ…

Read More

ಅಯೋಧ್ಯೆ: ಅಯೋಧ್ಯೆ ನಗರದ ರಾಮಮಂದಿರದಲ್ಲಿ ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆ ನಗರ ಸಡಗರದಿಂದ ಸಜ್ಜಾಗಿದ್ದು, ಸಂಭ್ರಮ ಮನೆ ಮಾಡಿದೆ. ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ 14 ದಂಪತಿ ‘ಯಜಮಾನ’ರಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲಿಂಗರಾಜ ಬಸವರಾಜ ಅವರು ಯಜಮಾನರಾಗಿ ಪತ್ನಿಯೊಂದಿಗೆ ಭಾಗಿಯಾಗಲಿದ್ದಾರೆ. ಅಯೋಧ್ಯೆ ನಗರದಲ್ಲಿ ಇಂದಿನ ಕಾರ್ಯಕ್ರಮಗಳು: • ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಇರುವುದು 84 ಸೆಕೆಂಡುಗಳಷ್ಟು ಮಾತ್ರ. ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ. • ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮವು 12.20ರಿಂದ 12.45ರವರೆಗೆ ನಡೆಯಲಿದೆ. • ಮಹಾವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ. • ಪುರೋಹಿತರು ಮಂತ್ರಗಳ ಮೂಲಕ ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ. • ಗರ್ಭಗೃಹದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ವಿಧಿವಿಧಾನಗಳು ನಡೆಯುತ್ತವೆ. • ಧಾರ್ಮಿಕ ವಿಧಿವಿಧಾನಗಳನ್ನು 121 ಮಂದಿ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು…

Read More

ನವದೆಹಲಿ: ತೀವ್ರ ಚಳಿಯಿಂದಾಗಿ ಕೊನೆಯ ಕ್ಷಣದಲ್ಲಿ ಅಡ್ವಾಣಿಯವರ ಅಯೋಧ್ಯೆ ಪ್ರಯಾಣ ರದ್ದಾಗಿದೆ. ಈ ಮೂಲಕ ಅಡ್ವಾಣಿಯವರು ಇಂದಿನ ಕಾರ್ಯಕ್ರದಿಂದ ಹೊರಗುಳಿಯಲಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಚಳವಳಿಯಲ್ಲಿ ಅಡ್ವಾಣಿ ಕೂಡ ಪ್ರಮುಖ ವ್ಯಕ್ತಿ. 96 ನೇ ವಯಸ್ಸಿನಲ್ಲಿಯೂ ಆಹ್ವಾನ ಸ್ವೀಕರಿಸಿ ಅಯೋಧ್ಯೆಗೆ ತೆರಳಲು ಸಿದ್ಧರಾಗಿದ್ದರು. ಭಾರತೀಯ ಹವಾಮಾನ ಇಲಾಖೆ ಬುಲೆಟಿನ್ ಪ್ರಕಾರ, ಅಯೋಧ್ಯೆಯಲ್ಲಿ ಲಘು ಗಾಳಿಯೊಂದಿಗೆ ಚಳಿಯ ಅಲೆ ಮುಂದುವರಿಯುತ್ತದೆ. ಬೆಳಗಿನ ಗೋಚರತೆ ಕೂಡ 100 ರಿಂದ 400 ಮೀಟರ್ ಆಗಿರುತ್ತದೆ. ದಿನ ಕಳೆದಂತೆ ಗೋಚರತೆ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ.

Read More

ಅಯೋಧ್ಯೆ:- ಅಯೋಧ್ಯಾ ನಗರ ವರ್ಣರಂಜಿತ ಹೂವುಗಳು, ದೀಪಗಳಿಂದ ಅಲಂಕರಿಸಲ್ಪಟ್ಟಿದೆ. ಎಲ್ಲೆಡೆ ರಾಮನ ಧ್ವಜಗಳು ಹಾರಾಡುತ್ತಿವೆ. ರಾಮಸ್ತೋತ್ರ, ಗಾಯನ, ನೃತ್ಯ, ಸಂಗೀತಗಳೊಂದಿಗೆ ಇಡೀ ನಗರ ‘ರಾಮಮಯ’ವಾಗಿ ಮಾರ್ಪಟ್ಟಿದೆ. ಮಂದಿರದ ಪ್ರವೇಶದ್ವಾರ, ಅತಿಥಿಗಳನ್ನು ಸ್ವಾಗತಿಸುವ ಅಯೋಧ್ಯಾಧಾಮ್ ರಸ್ತೆ, ಗೋಡೆಗಳೆಲ್ಲವೂ ಹೂವುಗಳ ಸುಂದರ ವಿನ್ಯಾಸದಿಂದ ಭಕ್ತರನ್ನು ಆಕರ್ಷಿಸುತ್ತಿವೆ. ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ರಾಮನಗರಿ, ಶ್ರೀರಾಮನಾಗಮನದ ಆನಂದದಲ್ಲಿ ತೇಲಾಡುತ್ತಿದ್ದರೆ, ಯಜ್ಞಶಾಲೆಗಳಲ್ಲಿ ವೇದಮಂತ್ರದ ಘೊಷಣೆ ಮುಗಿಲುಮಟ್ಟಿದೆ. ‘ರಾಮ್ ಆಯೇಂಗೆ ರಾಮ್ ಆಯೇಂಗೆ’ ಎಂಬೆಲ್ಲ ರಾಮನನ್ನು ಕೇಂದ್ರೀಕರಿಸಿದ ಹಾಡುಗಳಂತೂ ಬೀದಿಬೀದಿಗಳಲ್ಲಿ ಅನುರಣಿಸುತ್ತಿವೆ. ಕಿಕ್ಕಿರಿದು ತುಂಬಿರುವ ಅಯೋಧ್ಯೆಯಲ್ಲಿ ಕಾಲಿಡಲೂ ಜಾಗವಿಲ್ಲದ ಪರಿಸ್ಥಿತಿ ನಿರ್ವಣವಾಗಿದ್ದರೂ, ಕೊರೆಯುವ ಚಳಿಯ ಮಧ್ಯೆಯೂ ಕಳೆದ ಮೂರ್ನಾಲ್ಕು ದಿನಗಳಿಂದ ಭಕ್ತರು ಭಾರೀ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ‘ಶುಭ್ ಘಡಿ ಆಯಿ, ತೈಯಾರ್ ಹೈ ಅಯೋಧ್ಯಾಧಾಮ್ ಶ್ರೀರಾಮ್ ಬಾಸೋ ಮೇರೆ ಮನ್ ಮೇ, ರಾಮ್ ಆಯೇಂಗೆ, ಅವಧ್ ಮೇ ರಾಮ್ ಆಗಯಾ, ರಾಮರಾಜ್ಯ’ ಎಂದು ಬರೆದಿರುವ ಪೋಸ್ಟರ್, ಹೋರ್ಡಿಂಗ್​ಗಳಿಂದ ಆವೃತವಾಗಿರುವ ಅಯೋಧ್ಯಾ ರಾಮೋತ್ಸವ ಸಂಭ್ರಮೋಲ್ಲಾಸದಲ್ಲಿದೆ. ಅಯೋಧ್ಯೆಯ ವಿವಿಧ ಪುರಾತನ ಮಂದಿರಗಳು, ಬೀದಿಗಳು, ರಾಮಪಥ,…

Read More

ಬೆಂಗಳೂರು:- ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಮಾದರಿಯಲ್ಲಿ ರಾಮಮಂದಿರದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ. ಗಿರಿನಗರದ ವಾಸವಿ ಕನ್ನಿಕಾ ಪರಮೇಶ್ವರ ದೇವಾಲಯದಲ್ಲಿ ಅಯೋಧ್ಯೆ ಮಾದರಿ ದೇವಾಲಯದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ 18 ಅಡಿ ಎತ್ತರದ ಅಯೋಧ್ಯೆ ರಾಮಮಂದಿರವನ್ನು ರಾಮಭಕ್ತರು ನಿರ್ಮಾಣ ಮಾಡಿದ್ದಾರೆ. 18 ಅಡಿ ಎತ್ತರ, 26 ಅಡಿ ಉದ್ದ, 20 ಅಡಿ ಅಗಲವಿರುವ ದೇವಾಲಯದ ಪ್ರತಿಕೃತಿ ನಿರ್ಮಾಣ ಮಾಡಲಾಗಿದ್ದು, ಥರ್ಮಾಕೋಲ್ ನಲ್ಲಿ ಅಯೋಧ್ಯೆ ಮಾದರಿಯ ದೇವಾಲಯ ನಿರ್ಮಾಣವಾಗಿದೆ. ದೇವಸ್ಥಾನದ ರಸ್ತೆ ಮುಂಭಾಗ ಬಗೆಗೆಗೆಯ ರಂಗೋಲಿಗಳಿಂದ ಭಕ್ತರಿಗೆ ಸ್ವಾಗತ ಮಾಡಲಾಗಿದೆ. ಭಕ್ತರಿಗೆ ಪ್ರಸಾದ ವಿತರಣೆ ಕಾರ್ಯ ಮಾಡಲಾಗಿದ್ದು, ಈಗಾಗಲೇ ದೇವರಿಗೆ ಅಭಿಷೇಕ ಮಾಡಿ ಮಹಾ ಮಂಗಳಾರತಿ‌ ಕಾರ್ಯ ನಡೆದಿದೆ.

Read More