Author: AIN Author

ಕಠ್ಮಂಡು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ (Pran Prathistha ceremony) ಕ್ಷಣಗಣನೆ ನಡೆಯುತ್ತಿದ್ದರೆ, ಇತ್ತ ರಾಮನ ಅತ್ತೆ ಮನೆ ನೇಪಾಳದಲ್ಲಿಯೂ ಹಬ್ಬದ ಸಡಗರ ಜೋರಾಗಿದೆ. ಹೌದು. ನೇಪಾಳದ ಜನಕಪುರದಲ್ಲಿರುವ (Janakpur) ಜಾನಕಿ ದೇವಾಲಯದಲ್ಲಿ ಸಕಲ ತಯಾರಿಗಳು ನಡೆದಿದೆ. ಇನ್ನೂ ದೇಗುಲವು ವಿದ್ಯುದ್ದೀಪಗಳಿಂದ ಕಣ್ಮನ ಸೆಳೆಯುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ, ಜನಕ್‌ಪುರದಲ್ಲಿ ಸಂತೋಷ ಮತ್ತು ಹಬದ ರೀತಿಯಲ್ಲಿ ಸಂಭ್ರಮಿಸಲಾಗುತ್ತದೆ. ಇದು ಎರಡು ಸ್ಥಳಗಳ ನಡುವೆ ಹಂಚಿಕೊಂಡಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಒತ್ತಿಹೇಳುತ್ತದೆ. ಈ ಸಂಬಂಧ ಶ್ರೀರಾಮ ಯುವ ಸಮಿತಿಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಚೌಧರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತ್ರೇತಾಯುಗದ ವನವಾಸದ ಸಂದರ್ಭದಲ್ಲಿ ರಾಮಚಂದ್ರ ಅನುಭವಿಸಿದ ನೋವು ಕಲಿಯುಗದಲ್ಲಿಯೂ ಮುಂದುವರಿದಿದೆ. ಬರೋಬ್ಬರಿ 500 ವರ್ಷಗಳ ಹೋರಾಟವನ್ನು ಮಾಡಬೇಕಾಯಿತು. ಈ ಸಮಯದಲ್ಲಿ ಅವರು ಟಾರ್ಪಾಲಿನ ಅಡಿಯಲ್ಲಿ ಆಶ್ರಯ ಪಡೆಯಬೇಕಾಗಿತ್ತು. ಅವರ ನೋವು ನಿಜಕ್ಕೂ ಎಲ್ಲಾ ಹಿಂದೂಗಳ ನೋವಾಗಿದೆ. ನಮ್ಮ ಪೂರ್ವಜರು ಕಷ್ಟಪಟ್ಟು ಹೋರಾಡಿದರು. ಇದೀಗ ಅಂತಿಮ ಫಲಿತಾಂಶವು ಇಂದು…

Read More

ಭಾರತೀಯ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕ್‌ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik) ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ಹೇಳಿದ್ದು, ಕೆಲ ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಶೋಯೆಬ್‌ ಮಲಿಕ್‌ ಅವರು ಪಾಕ್‌ ನಟಿ ಸನಾ ಜಾವೇದ್‌ (Sana Javed) ಅವರೊಂದಿಗೆ ವಿವಾಹವಾದ ಬಳಿಕ ಸುದ್ದಿ ಹೊರಬೀಳುತ್ತಿದ್ದಂತೆ ಸಾನಿಯಾ ಕುಟುಂಬ ಸ್ಫಷ್ಟನೆ ನೀಡಿದೆ ಸಾನಿಯಾ ಯಾವಾಗಲೋ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿದ್ದಾಳೆ. ಆದರೆ ಶೋಯೆಬ್‌ ರಿಂದ ವಿಚ್ಛೇದನ ಪಡೆದು ಕೆಲವು ತಿಂಗಳಾಗಿವೆ. ಈಗ ಅದರ ಬಗ್ಗೆ ಮಾತನಾಡುವ ಸಂದರ್ಭ ಬಂದಿದೆ ಎಂದು ಹೇಳಿದೆ. ಅಲ್ಲದೇ ಸಾನಿಯಾ ಸಹ ಶೋಯೆಬ್‌ ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾಳೆ ಎಂಬುದಾಗಿ ಕುಟುಂಬ ತಿಳಿಸಿದೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ಮದುವೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ, ಪಾಕಿಸ್ತಾನದಲ್ಲಿರುವ ಸಾನಿಯಾ ಮಿರ್ಜಾ ಅಭಿಮಾನಿಗಳು ಸಾನಿಯಾ ಬೆಂಬಲಿಸಿ ಎಕ್ಸ್‌…

Read More

ಬೆಂಗಳೂರು:- ನಗರ ಸೇರಿ ರಾಜ್ಯಾದ್ಯಂತ ಇಂದು ಮೋಡಕವಿದ ವಾತಾವರಣ ಹಾಗೂ ಒಣಹವೆ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ನಗರಗಳ ಹವಾಮಾನ ವರದಿ: ಬೆಂಗಳೂರು: 29-19 ಮಂಗಳೂರು: 31-23 ಶಿವಮೊಗ್ಗ: 32-17 ಬೆಳಗಾವಿ: 31-16 ಮೈಸೂರು: 33-19 ಮಂಡ್ಯ: 33-19 ಮಡಿಕೇರಿ: 31-17 ರಾಮನಗರ: 32-19 ಹಾಸನ: 30-17 ಚಾಮರಾಜನಗರ: 33-19 ಚಿಕ್ಕಬಳ್ಳಾಪುರ: 29-17 ಕೋಲಾರ: 29-18 ತುಮಕೂರು: 31-18 ಉಡುಪಿ: 31-22 ಕಾರವಾರ: 31-21 ಚಿಕ್ಕಮಗಳೂರು: 29-16 ದಾವಣಗೆರೆ: 32-18 ಹುಬ್ಬಳ್ಳಿ: 33-17 ಚಿತ್ರದುರ್ಗ: 31-18 ಹಾವೇರಿ: 33-18 ಬಳ್ಳಾರಿ: 34-21 ಗದಗ: 33-17 ಕೊಪ್ಪಳ: 33-19 ರಾಯಚೂರು: 34-22 ಯಾದಗಿರಿ: 33-21 ವಿಜಯಪುರ: 33-18 ಬೀದರ್: 31-19 ಕಲಬುರಗಿ:…

Read More

ಬೆಂಗಳೂರು : ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಜರ್ಮನಿಯ ಮ್ಯೂನಿಚ್‌ನಲ್ಲಿ ಯಶಸ್ವಿ ಸೊಂಟದ (ತೊಡೆಸಂದು) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸೂರ್ಯಕುಮಾ‌ರ್ ಅವರ ಪತ್ನಿ ದೇವಿಶಾ ಅವರೊಂದಿಗೆ ಜರ್ಮನಿಯಲ್ಲಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸೂರ್ಯ ಕುಮಾರ್ ಅವರು ಭಾರತ ಮತ್ತು ಅಫ್ಘಾನಿಸ್ಥಾನ ನಡುವಿನ ರೋಚಕ ಹಣಾಹಣಿಯನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆದಿದೆ, ಎಲ್ಲರ ಕಾಳಜಿ ಮತ್ತು ನನ್ನ ಆರೋಗ್ಯ ಚೇತರಿಕೆಗೆ ಕೋರಿದ ಶುಭಾಶಯಗಳಿಗಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮತ್ತು ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ನಿಮಗೆ ಹೇಳಲು ನನಗೆ ಸಂತೋಷಪಡುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. SKY ಐಪಿಎಲ್​ ಆಡೋದು ಡೌಟ್? ಒಂದು ವಾರದಲ್ಲಿ ಸೂರ್ಯಕುಮಾರ್ ಯಾದವ್ ಭಾರತಕ್ಕೆ ಮರಳುವ ಸಾಧ್ಯತೆಯಿದೆ. ಬಳಿಕ, ಬೆಂಗಳೂರಿನ ಎನ್​ಸಿಎಯಲ್ಲಿ ರಿಹ್ಯಾಬ್​ನಲ್ಲಿರುವುದಾಗಿ ತಿಳಿಸಿದ್ದಾರೆ. ಸೂರ್ಯ ಎರಡನೇ ಬಾರಿ ತೊಡೆಸಂದು ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈಗ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕಾಗಬಹುದು. ಐಪಿಎಲ್​-2024 ರ ವೇಳೆಗೆ ಫಿಟ್ ಆಗಬಹುದು ಎಂದು ಹೇಳಲಾಗುತ್ತಿದೆ.

Read More

ಚೆನ್ನೈ : ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಪ್ಪಟ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮಿಳುನಾಡಿನ ಕುಡ್ಡಲೂರು ಜಿಲ್ಲೆಯ ತಿತ್ತಕುಡಿ ನಿವಾಸಿಯಾಗಿರುವ ಕೃಷ್ಣನ್‌ ಅವರೇ ಆತ್ಮಹತ್ಯೆಗೆ ಶರಣಾದ ಅಭಿಮಾನಿ. ಆರ್ಥಿಕ ಸಂಕಷ್ಟವೇ ಆತ್ಮಹತ್ಯಗೆ ಕಾರಣ ಎಂದು ತಿಳಿದುಬಂದಿದೆ. ಕೃಷ್ಣನ್ ಅವರು ಧೋನಿ ಹಾಗೂ ಸಿಎಸ್​ಕೆ ತಂಡದ ದೊಡ್ಡ ಅಭಿಮಾನಿಯಾಗಿದ್ದರು. ಮೃತ ಕೃಷ್ಣನ್ 2020ರಲ್ಲಿ ತಮ್ಮ ಮನೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬಣ್ಣದ ಪೇಂಟ್‌ ಮಾಡಿಸಿದ್ದರು. ಅಲ್ಲದೆ, ಮನೆಗೆ ‘ಹೋಂ ಆಫ್‌ ಧೋನಿ ಫ್ಯಾನ್’ (ಧೋನಿ ಅಭಿಮಾನಿಯ ಮನೆ) ಎಂಬ ಹೆಸರನ್ನಿಟ್ಟಿದ್ದರು. ಸಿಎಸ್‌ಕೆ ಲಾಂಛನ ಹಾಗೂ ಧೋನಿ ಅವರ ಚಿತ್ರ ಕೂಡ ಮೂಡಿಸಿದ್ದರು. ಇದಕ್ಕಾಗಿ ಅವರು ರೂ 1.5 ಲಕ್ಷ ರೂ. ಖರ್ಚು ಮಾಡಿದ್ದರು. ಕೃಷ್ಣನ್‌ ಅಭಿಮಾನವನ್ನು ಸ್ವತಃ ಧೋನಿ ಕೊಂಡಾಡಿದ್ದರು. ಮೃತ ಕೃಷ್ಣನ್ ದುಬೈಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಊರಿಗೆ ವಾಪಸಾಗಿದ್ದರು. ದುಬೈಯಲ್ಲಿ ಜರ್ಮನ್‌ ಟ್ರೇಡಿಂಗ್‌ ಕಂಪನಿಯೊಂದರಲ್ಲಿ ಅವರು ಮಾರ್ಕೆಟ್‌…

Read More

ಇಂದು ಶ್ರೀರಾಮಲಲ್ಲಾ (Ramlalla) ಪ್ರಾಣಪ್ರತಿಷ್ಠಾಪನೆಗೆ ಕೆಲವೇ ಗಂಟೆ ಬಾಕಿ ಇದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ (Ayodhya) ಭಾರತೀಯ ಸಿನಿಮಾ ರಂಗದ ಅನೇಕ ತಾರೆಯರು ಭಾಗಿಯಾಗಿದ್ದಾರೆ. ಈಗಾಗಲೇ ಕನ್ನಡದ ಹೆಸರಾಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishabh Shetty), ಅನಿಲ್ ಕುಮಾರ ಸ್ವಾಮಿ, ಬಾಲಿವುಡ್ ಖ್ಯಾತ ನಟ ಅಮಿತಾಬ್‌ ಬಚ್ಚನ್‌, ತೆಲುಗು ನಟರಾದ ಚಿರಂಜೀವಿ, ರಾಮ್‌ಚರಣ್, ಪವನ್‌ ಕಲ್ಯಾಣ್‌ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ತ್‌, ಕತ್ರಿನಾ ಕೈಫ್‌ ಸೇರಿದಂತೆ ಅನೇಕ ನಟ ನಟಿಯರು ಅಯೋಧ್ಯೆಗೆ ಆಗಮಿಸಿದ್ದಾರೆ. ಕೇವಲ ಸಿನಿಮಾ ನಟರು ಮಾತ್ರವಲ್ಲ, ಕ್ರೀಡಾ ತಾರೆ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ, ವೆಂಕಟೇಶ್‌ ಪ್ರಸಾದ್‌, ಆರ್‌.ಅಶ್ವಿನ್‌, ಸೈನಾ ನೆಹ್ವಾಲ್‌ ಸೇರಿದಂತೆ ಅನೇಕರು ಅಯೋಧ್ಯೆಗೆ ಆಗಮಿಸಿದ್ದು, ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

Read More

ಬೆಳಗಾವಿ : ನನಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ನ ಯಾವ ನಾಯಕರೂ ಸೂಚಿಸಿಲ್ಲ. ಲೋಕಸಭಾ ಚುನಾವಣೆಗೆ ಸಚಿವರು ಸ್ಪರ್ಧಿಸುವುದು ಕಡ್ಡಾಯವಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದರು. ಕಾಂಗ್ರೆಸ್‌ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮ ಸ್ಪರ್ಧೆಗೆ ಹೈಕಮಾಂಡ್‌ನಿಂದ ಒತ್ತಡ ಬರುತ್ತಿರುವ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ನನಗೇನೂ ಸೂಚನೆ ನೀಡಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ 18 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧ್ಯವಿಲ್ಲ. ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ವೀಕ್‌ ಇದೆ. 28ರ ಪೈಕಿ 20 ಕ್ಷೇತ್ರಗಳಲ್ಲಿ ನಾವು ಪ್ರಬಲರಾಗಿದ್ದೇವೆ. 8 ಕ್ಷೇತ್ರಗಳಲ್ಲಿ ವೀಕ್‌ ಇದ್ದೇವೆ. ತಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಸಚಿವರೂ ಪ್ರಯತ್ನ ಮಾಡುತ್ತಾರೆ. ನಮ್ಮ ಸಚಿವರ ಪ್ರಯತ್ನದ ನಂತರವೂ ಕೆಲವೊಮ್ಮೆ ಫಲ ಸಿಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಚಿವರ ತಲೆದಂಡವಾಗುತ್ತದೆ ಎಂಬುದು ಶುದ್ಧ…

Read More

ಬೆಂಗಳೂರು: ಇವತ್ತು ಆಯೋಧ್ಯೆಯಲ್ಲಿ‌ ಬಾಲರಾಮನ ಪ್ರಾಣಪ್ರತಿಷ್ಠಪಾನೆ ಹಿನ್ನೆಲೆಯಲ್ಲಿ ನಗರದ ಹಲವು ದೇಗುಲಗಳಲ್ಲಿ ವಿಶೇಷ ಅಭಿಷೇಕ, ಪೂಜೆ, ಹೋಮ ಹವನಗಳುನಡೆಯುತ್ತಿವೆ. ರಾಜಾಜಿನಗರದ ರಾಮಮಂದಿರ ದೇವಾಲಯದಲ್ಲೂ ಬೆಳಿಗ್ಗೆಯಿಂದ ವಿಶೇಷ ಪೂಜೆ, ಹೋಮ ನಡೆಯುತ್ತಿದ್ದು  ಮುಂಜಾನೆ 3 ಗಂಟೆಗೆ ಶ್ರೀರಾಮನಿಗೆ ಅಭಿಷೇಕ..ಬಳಿಕ ರಾಮನಿಗೆ ವಿಶೇಷ ಅಲಂಕಾರ ಬೆಳಿಗ್ಗೆ 6 ಗಂಟೆಯಿಂದ ದೇವರ ದರ್ಶನ ಪಡೆಯುತ್ತಿರುವ ಭಕ್ತರು 9.30ರಿಂದ ರಾಮತಾರಕ‌ ಹೋಮ ಆರಂಭಗೊಂಡು 12.30 ಪೂರ್ಣಾಹುತಿ ಆಗಲಿದೆ ರಾಮಮಂದಿರದಲ್ಲಿ ಇಡೀ ದಿನ ಭಜನೆ, ಪ್ರಸಾದ ವಿನಿಯೋಗ ನಡೆಯಲಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನಲೆ  ಸಾರ್ವಜನಿಕರ ಅನುಕೂಲಕ್ಕೆ ಎಲ್ ಇಡಿ ವ್ಯವಸ್ಥೆ ರಾಮಮಂದಿರದಲ್ಲಿ ಸಂಜೆ 6 ಗಂಟೆಗೆ 108 ದೀಪ ಬೆಳಗಲಿದೆ ರಾತ್ರಿ 10.30ರವರೆಗೂ ದೇವಾಲಯದಲ್ಲಿ ನಿರಂತರ ಭಜನೆ ನಡೆಯಲಿದೆ ಈಗಾಗಲೆ ವಿವಿಧ ಹಿಂದೂ ಸಂಘಟನೆಗಳಿಂದ ದೇವಾಲಯಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಕೆ

Read More

ಬೆಂಗಳೂರು: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ನಿರ್ಮಿಸಲಾಗಿರುವ ರಾಮಮಂದಿರದಲ್ಲಿಂದು ರಾಮಲಲ್ಲಾ (Ram lalla) ಪ್ರಾಣಪ್ರತಿಷ್ಠೆ ನೆರವೇರಲಿದೆ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮನೆಯಲ್ಲಿ  ಶ್ರೀ ರಾಮನಿಗೆ ವಿಶೇಷ ಪೂಜೆ ಮಾಡಿದ್ದಾರೆ. ಬೆಂಗಳೂರಿನ ಆರ್. ಟಿ. ನಗರದ ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಶ್ರೀ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಚನ್ನಮ್ಮ, ಮಗ ಭರತ್ ಹಾಗೂ ಪುತ್ರಿ ಅದಿತಿ ಬೊಮ್ಮಾಯಿ ಪಾಲ್ಗೊಂಡಿದ್ದರು.

Read More

ದಾಸರಹಳ್ಳಿ‌: ರಾಮನೂರು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆಗೆ ಕ್ಷಣಗಣನೆ ಶುರುವಾಗಿದೆ. ದೇಶಾದ್ಯಂತ ಶ್ರೀ ರಾಮನ ಜಪ ಮೊಳಗುತ್ತಿದೆ. ಅದರಂತೆ ರಾಜಧಾನಿ ಬೆಂಗಳೂರು ಇನ್ಫ಼ಿನಿಟಿ ಡಾಫೋಡಿಲ್ ಅಪಾರ್ಟ್ಮೆಂಟ್ ನಲ್ಲಿ ಕಾರ್ಯಕ್ರಮ ಅಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಶಾಸಕ ಎಸ್ ಮುನಿರಾಜು ಭಾಗಿ ಆಗಿದ್ದಾರೆ. ಅಪಾರ್ಟ್ಮೆಂಟ್ ಮುಂದೆ 40ಅಡಿ ಕಟೌಟ್ ನ ರಾಮನ ಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ. ಅಪಾರ್ಟ್ಮೆಂಟ್ ನ ಎಲ್ಲಾ ನಿವಾಸಿಗಳು ಭಾಗಿಯಾಗಿದ್ದಾರೆ.

Read More