Author: AIN Author

ಗದಗ:- ಹಿಂದೂ-ಮುಸ್ಲಿಂ ಯುವಕರಿಂದ ಮಸೀದಿಯಲ್ಲಿ ಶ್ರೀರಾಮನ ಆರಾಧನೆ ಮಾಡಿರುವ ದೃಶ್ಯ ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಸಿಕಟ್ಟಿಯಲ್ಲಿ ಜರುಗಿದೆ ಮಸೀದಿ ಎದುರು ಜೈ ಶ್ರೀರಾಮ ಎಂದು ಶ್ರೀರಾಮ ಭಕ್ತರು ಬರೆದಿದ್ದಾರೆ. ವೇದೋಕ್ತ ಮಂತ್ರಪುಷ್ಪಾಂಜಲಿ ಮೂಲಕ ಭಾರತಮಾತೆಗೆ ಪೂಜೆ-ಪುನಸ್ಕಾರ ಮಾಡಲಾಗಿದೆ. ಶ್ರೀರಾಮನ ಸ್ಮರಣೆ ಹೆಸರಲ್ಲಿ ಹುಣಸಿಕಟ್ಟಿ ಗ್ರಾಮ ಭಾವೈಕ್ಯತೆ ಮೆರೆದಿದೆ. ಮಸೀದಿಯಲ್ಲಿ ಶೋಡಷೋಪಚಾರದ ಮೂಲಕ ಅಭಿಷೇಕ ಮಾಡಲಾಗಿದೆ.

Read More

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಬೆಳ್ಳಿ ರಾಮಮಂದಿರ ಪ್ರತಿರೂಪವನ್ನು (Ram Mandir Replica) ಉಡುಗೊರೆಯಾಗಿ ನೀಡಿದರು. ಇದಕ್ಕೂ ಮುನ್ನ ಗೋವಿಂದ್ ದೇವ್ ಗಿರಿ ಜಿ ಮಹಾರಾಜ್ ಸ್ವಾಮೀಜಿ ಮೋದಿಗೆ ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್‌ ಅವರು RSS ಮುಖ್ಯಸ್ಥ ಮೋಹನ್‌ ಭಾಗವತ್‌ ಅವರಿಗೂ ಬೆಳ್ಳಿಯಿಂದ ನಿರ್ಮಿಸಲಾದ ರಾಮಮಂದಿರ ಪ್ರತಿರೂಪವನ್ನು ಉಡುಗೊರೆಯಾಗಿ ನೀಡಲಾಯಿತು. ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್‌ ಮುಹೂರ್ತದಲ್ಲಿ (ಅಭಿಜಿತ್‌ʼ ಅಂದ್ರೆ ʼವಿಜಯಶಾಲಿʼ ಎಂದರ್ಥ) ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು.

Read More

ಗದಗ:- ಜಿಲ್ಲೆಯಲ್ಲಿ ಶ್ರೀರಾಮನ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆಯದ ಹಿನ್ನಲೆ ಸಂಕ್ಷಿಪ್ತ ಮೆರವಣಿಗೆಗೆ ಶ್ರೀರಾಮಸೇನಾ ಕಾರ್ಯಕರ್ತರು ಕಾಂಜ್ ಮೇಳದೊಂದಿಗೆ ಕೈಯ್ಯಲ್ಲಿ ಶ್ರೀರಾಮನ ಭಾವಚಿತ್ರ ಹಿಡಿದು ಮೆರವಣಿಗೆ ಮಾಡಿದ್ದಾರೆ. ಜೋಡಮಾರುತಿ ದೇವಸ್ಥಾನದಿಂದ ತ್ರಿಕೂಟೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಗಿದೆ. ಕೇಸರಿ ಶಾಲು ಧರಿಸಿ ಮೆರವಣಿಗೆಯಲ್ಲಿ ಯುವಕರು, ಹಿರಿಯರು ಪಾಲ್ಗೊಂಡಿದ್ದು, ಶ್ರೀರಾಮ‌ ಜೈಕಾರ ಕೂಗಿ ಮೆರವಣಿಗೆಯಲ್ಲಿ ಮಹಿಳೆಯರು ಸಾಗಿದ್ದಾರೆ. ಮೆರವಣಿಗೆಗೆ ತಂದಿದ್ದ ಮೂರ್ತಿಗಳನ್ನು ಮಾರುತಿ ದೇವಸ್ಥಾನದ ಎದುರು ಶ್ರೀರಾಮಸೇನೆ ದರ್ಶನಕ್ಕೆ ಇಟ್ಟಿದೆ.

Read More

ಅಯೋಧ್ಯೆಯಲ್ಲಿ ಬಾಲರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವ ಈ ಹೊತ್ತಿನಲ್ಲಿ ನಟ ಧ್ರುವ ಸರ್ಜಾ (Dhruva Sarja) ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ (Rudrakshi) ಮತ್ತು ಮಗನಿಗೆ ಹಯಗ್ರೀವ (Hayagriva) ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಮಕರಣ ಶಾಸ್ತ್ರ ನಡೆದಿದೆ. ಅಯೋಧ್ಯೆ ಬಾ;ಲರಾಮ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ನಾಮಕರಣ ಶಾಸ್ತ್ರ ನಡೆದಿದ್ದು, ಮಕ್ಕಳಿಗೆ ವಿಶೇಷ ಮತ್ತು ಅರ್ಥಪೂರ್ಣವಾದ ಹೆಸರನ್ನೇ  ಇಟ್ಟಿದ್ದಾರೆ ಧ್ರುವ ಸರ್ಜಾ. ಧ್ರುವ ಸರ್ಜಾ ಅಂಡ್ ಫ್ಯಾಮಿಲಿ ಆಂಜನೇಯನ ಭಕ್ತರು. ಆಂಜನೇಯ ಗುಡಿಯನ್ನೇ ಈ ಕುಟುಂಬ ನಿರ್ಮಾಣ ಮಾಡಿದೆ. ಧ್ರುವ ಸಿನಿಮಾದಲ್ಲಿ ಹನುಮನ ಕುರಿತಾಗಿ ಸನ್ನಿವೇಶವೋ, ಹಾಡೋ ಇದ್ದೇ ಇರುತ್ತದೆ. ಹನುಮನ ಉಸಿರಾಗಿರುವ ರಾಮನ ಮಂದಿರ ಉದ್ಘಾಟನೆ ದಿನದಂದು ತಮ್ಮ ಪುತ್ರಿ ಹಾಗೂ ಪುತ್ರನಿಗೆ ನಾಮಕರಣ ಮಾಡಿದ್ದು ವಿಶೇಷ. ಇಂದು ಧ್ರುವ ಸರ್ಜಾ ಮಕ್ಕಳಿಗೆ ನಾಮಕರಣ ಮಾಡಿದ್ದರೆ, ಅನೇಕ ಮಹಿಳೆಯರು ಇಂದೇ ಹೆರಿಗೆ ಮಾಡಿಸುವಂತೆ ವೈದ್ಯರ ದುಂಬಾಲು ಬಿದ್ದಿರುವ ಘಟನೆಗಳು ನಡೆದಿವೆ.…

Read More

ಬೆಂಗಳೂರು: ಇದೇ ಜನವರಿ 23ರಂದು ಪಿಎಸ್‌ಐ ಪರೀಕ್ಷೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾಲ್‌ಟಿಕೆಟ್, ಗುರುತಿನ ಚೀಟಿ ಹೊರತುಪಡಿಸಿ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರಗಳನ್ನು ತರುವಂತಿಲ್ಲ ಎಂದು ಸೂಚನೆಯಲ್ಲಿ ತಿಳಿಸಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು (Guidelines) ಹೊರಡಿಸಲಾಗಿದೆ ಪುರುಷ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಏನು? * ಪೂರ್ಣ ತೋಳಿನ ಅಂಗಿಗಳನ್ನ ಧರಿಸುವಂತಿಲ್ಲ * ಕಾಲರ್ ರಹಿತ ಶರ್ಟ್ ಹಾಗೂ ಜೇಬುಗಳು ಕಮ್ಮಿ ಇರುವ ಪ್ಯಾಂಟ್ ಧರಿಸಿರಬೇಕು * ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್‌ಗಳಿಗೆ ಅನುಮತಿ ಇಲ್ಲ * ಶರ್ಟ್ ಅಥವಾ ಪ್ಯಾಂಟ್‌ಗಳಿಗೆ ಜಿಪ್ ಪ್ಯಾಕೆಟ್‌ಗಳು, ದೊಡ್ಡ ದೊಡ್ಡ ಗುಂಡಿಗಳು, ಹೆಚ್ಚುವರಿ ಡಿಸೈನ್ ಇರಬಾರದು * ಪರೀಕ್ಷಾ ಹಾಲ್‌ಗೆ ಶೂಗಳು ಕಟ್ಟು ನಿಟ್ಟಾಗಿ ನಿಷೇಧ * ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚನೆ * ಚೈನ್, ಕಿವಿಯೋಲೆ, ಉಂಗುರ, ಕೈ…

Read More

ಕಲಬುರ್ಗಿ:- ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನಲೆ ಕಲಬುರಗಿಯಲ್ಲಿ ರಾಮೋತ್ಸವ ಆಚರಿಸಿದ್ದು ಖಮಿತಕರ್ ಸೇವಾ ಬಳಗದಿಂದ ಅನ್ನದಾನ ಕಾರ್ಯ ಮಾಡಲಾಯಿತು. ನಗರದ ಕೃಷ್ಣೇಶ್ವರ ಗುಡಿಯಲ್ಲಿ ಇವತ್ತು ನಿರಂತರ ಪೂಜಾ ಕೈಂಕರ್ಯ ನಡೆದಿದ್ದು ರಾಮೋತ್ಸವದಲ್ಲಿ ಭಾಗಿಯಾದ ನೂರಾರು ಭಕ್ತರಿಗೆ ಅನ್ನದಾನ ಸೇವಾ ವ್ಯವಸ್ಥೆ ಮಾಡಲಾಗಿತ್ತು. ಸಂಸದ ಡಾ. ಉಮೇಶ್ ಜಾಧವ್ ಹಾಗು RSS ಪ್ರಮುಖರು ಸೇರಿದಂತೆ ನೂರಾರು ರಾಮ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

Read More

ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿದೆ. ಎಲ್ಲರೂ ರಾಮ ನಾಮ ಸ್ಮರಣೆ ಮಾಡುವ ಶುಭ ಘಳಿಗೆಯಲ್ಲಿ ‘ಶ್ರೀ ರಾಮ್, ಜೈ ಹನುಮಾನ್’ (Shri Ram Jai Hanuman) ಎಂಬ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ.  ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣವಾಗಲಿರುವ ‘ಶ್ರೀ ರಾಮ್, ಜೈ ಹನುಮಾನ್’ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.‌ ರಾಮ ಮಂದಿರ ಉದ್ಘಾಟನೆಯ ಸಮಯಕ್ಕೆ  ಅನಾವರಣಗೊಂಡಿರುವುದು ಹಿಂದೂ ಧರ್ಮದ ಭಕ್ತಗಣಕ್ಕೆ ಸಂತಸದ ವಿಷಯ. “An Untold Epic of RAMAYANA” ಎಂಬ ಅಡಿಬರಹ ಈ ಚಿತ್ರಕ್ಕಿದೆ. ರಾಮಾಯಣದ ಕುರಿತು ಬಹುತೇಕರಿಗೆ ವಿಷಯ ತಿಳಿದಿದೆ. ಆದರೆ ಎಲ್ಲೂ ದಾಖಲಾಗದ ಕೆಲವು ವಿಷಯಗಳನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂಬುದು ಈ ಸಿನಿಮಾದ ಮತ್ತೊಂದು ವಿಶೇಷ. ಸದ್ಯ ಹರಿಬಿಟ್ಟಿರುವ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಬೆಟ್ಟ, ಗುಡ್ಡ, ಬೆಂಕಿ, ನೀರು, ರಾಮ…

Read More

ವಿಜಯನಗರ:- ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿರಂತರ 30 ಗಂಟೆಗಳ ಕಾಲ ಹನುಮಾನ್ ಚಾಲೀಸ ಪಠಣ ಮಾಡಲಾಗಿದೆ. ಸಾವಿರಾರು ಸಂಖ್ಯೆಯ ಭಕ್ತಗಣರಿಂದ ಹನುಮಾನ್ ಚಾಲೀಸ ಪಠಣ ಮಾಡಲಾಗಿದ್ದು, ಅಯೋಧ್ಯೆ ರಾಮ ಮಂದಿರ ಮಾದರಿ ದೇಗುಲ ನಿರ್ಮಿಸಿ ನಿರಂತರ ಪಠಣ ಮಾಡಲಾಗಿದೆ. ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜ ಉಪಾಸನ ಮಂಡಳಿ, ಕರ್ನಾಟಕ ಬ್ರಾಹ್ಮಣ ಸಮಾಜದಿಂದ ಸಹಸ್ರ ಕಂಠ ಹನುಮಾನ್ ಚಾಲೀಸ ಪಠಿಸಿದ್ದಾರೆ. ಚಾಲೀಸ ಪಠಣ ಬಳಿಕ ಶ್ರೀರಾಮ ತಾರಕ ಯಜ್ಞ ಪೂಜೆ ಮಾಡಲಾಗಿದೆ.

Read More

ಕೋಲಾರ:- ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆಗೆ ಕ್ಷಣಗಣನೆ ಆರಂಭವಾಗಿದ್ದು‌ ಚಿನ್ನದ ನಾಡಿ‌ನಾದ್ಯಂತ ಕೇಸರಿ ಮಯವಾಗಿದೆ. ಶ್ರೀ ರಾಮಲಲ್ಲಾ ಪ್ರತಿಷ್ಟಾಪನೆ ಪ್ರಯುಕ್ತ ಸಮಾಜ ಸೇವಕರು ಹಾಗೂ ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್ ಅವ್ರು ಕೋಲಾರದ ಸಿಎಂಆರ್ ಟಮೊಟೊ ಮಂಡಿಯಲ್ಲಿ ಶ್ರೀರಾಮನ ಕಟೌಟಗೆ ಪುಷ್ಪ ನಮನವನ್ನು ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಮರ್ಯಾದೆ ಪುರುಷ ಆದರ್ಶ ಪುರುಷ ಈಡೀ ವಿಶ್ವದ ಎಲ್ಲಾ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯನ್ನು ಅಯೋಧ್ಯೆಯಲ್ಲಿ ಪ್ರತಿಷ್ಟಾಲನೆಯನ್ನು ಮಾಡಲಾಗುತ್ತಿದೆ. ದೇಶ ರಾಜ್ಯ ಪ್ರತಿ ಗ್ರಾಮಗಳಲ್ಲಿಯು ಸಹ ಶ್ರೀರಾಮನಿಗೆ ಹಬ್ಬದ ರೀತಿಯಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ. ಎಲ್ಲಾ ಹಿಂದುಗಳು ಹೆಮ್ಮೆ ಪಡುವ ಸಂಗತಿಯಾಗಿದೆ ಈಡೀ ವಿಶ್ವದಲ್ಲಿ ಎಲ್ಲರು ತಮ್ಮ ತಮ್ಮ ಮನೆಗಳಲ್ಲಿ ಶ್ರೀರಾಮನ ಪೂಜೆಯನ್ನು ನಡೆಸುತ್ತಿದ್ದಾರೆ ಹಿಂದೂ ರಾಷ್ಟ್ರ ರಾಮರಾಜ್ಯವಾಗ ಬೇಕು ಶ್ರೀರಾಮ ಆಳ್ವಿಕೆ ಮಾಡಿದಂತ ನಾಡು ಎಂದು ತಿಳಿಸಿದ್ರು. ಜೆಡಿಎಸ್ ಮುಖಂಡ ಸುಧಾಕರ್ ಮಾತನಾಡಿ 500 ವರ್ಷಗಳ ಇತಿಹಾಸವನ್ನು ಮುರಿದು ಶ್ರೀರಾಮ ಜನ್ಮ ಭೂಮಿ…

Read More

ಬೆಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸೋಮವಾರ (ಜ.22) ನೆರವೇರಿತು. ಪುಣ್ಯಪುರುಷ ರಾಮನನ್ನು ಕಣ್ತುಂಬಿಕೊಂಡು ಭಕ್ತರು ಪುನೀತರಾದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಿದ್ದೆ ಇತ್ತ  ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಮಾಜಿ ಸಿಎಂ ಯಡಿಯೂರಪ್ಪ ಹಾಗೆ ತಮ್ಮ ನಿವಾಸದಲ್ಲಿ ಪ್ರಭು ಶ್ರೀ ರಾಮನ ಪೂಜೆ ಸಲ್ಲಿಸಿದ ಬಿ.ವೈ ವಿಜಯೇಂದ್ರ ನಗರದ ಬಾಣಸವಾಡಿಯಲ್ಲಿರುವ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ  ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ ರಾಮನ ಆರಾಧಿಸಿದ ಬಿಎಸ್‌ ಯಡಿಯೂರಪ್ಪ ಬಿಎಸ್‌ʼವೈಗೆ ಸಂಸದ ಪಿಸಿ ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಸಾಥ್ ನೀಡಿದ್ದರು  ಹಾಗೆ ಇಂದು ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ತಮ್ಮ ನಿವಾಸದಲ್ಲಿ ಪ್ರಭು ಶ್ರೀ ರಾಮನ ಪೂಜೆ ಸಲ್ಲಿಸಿದರು

Read More