Author: AIN Author

ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ನೆರವೇರಿದೆ. ಆರಾಧ್ಯ ದೈವ ರಾಮಜನ್ಮ ಭೂಮಿಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನನ್ನ ಕಣ್ತುಂಬಿಕೊಂಡು ಕೋಟ್ಯಂತರ ಭಕ್ತರು ಧನ್ಯರಾಗಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ರಾಮಮಂದಿರ ಉದ್ಘಾಟನೆ ವಿಜಯದ ಇಡೀ ದೇಶಾದ್ಯಂತ ನೆಲೆಸಿರುವ ರಾಮಭಕ್ತರು, https://ainlivenews.com/pm-modi-pays-homage-to-balaram-in-ayodhya-hindu-dream-come-true/ ಪ್ರತಿ ಮನೆ-ಮನೆಗಳಲ್ಲಿ ರಾಮಜ್ಯೋತಿ ಬೆಳಗಿಸಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಧಾರ್ಮಿಕ ಮುಖಂಡರು ಹಾಗೂ ಖ್ಯಾತ ನಟ-ನಟಿಯರು ರಾಮ ಜ್ಯೋತಿ (Ram Jyoti) ಬೆಳಗಿಸುವ ಮೂಲಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ದೀಪ ಬೆಳಗಿಸುವ ಮೂಲಕ ದೇಶದ ಜನರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಯೋಧ್ಯೆ ಬೆಳಗಿದ 10 ಲಕ್ಷ ಹಣತೆಗಳು: ಅಯೋಧ್ಯೆಯ ಸರಯೂ ನದಿ ತೀರದ ರಾಮ್​ ಕಿ ಪಾಡಿಯಲ್ಲಿ ಸರಿಸುಮಾರು 10 ಲಕ್ಷ ದೀಪ ಬೆಳಗುತ್ತಿದ್ದು, ಇದರ ನಡುವೆ ಲೇಸರ್​​ ಲೈಟ್​ ಶೋಗಳೂ ಉತ್ಸವಕ್ಕೆ ಮತ್ತಷ್ಟು ಕಳೆ ತಂದಿದೆ. ಇದರೊಂದಿಗೆ ಕರ್ನಾಟಕ ದಲ್ಲಿಯೂ ಶ್ರೀರಾಮನ ಭಕ್ತರು ತಮ್ಮ ಮನೆಗಳಲ್ಲಿ, ಬೀದಿಗಳಲ್ಲಿ ಹಾಗೂ…

Read More

ಅಯೋಧ್ಯೆ: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಅವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಇಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಅತಿ ಗಣ್ಯರ ಗ್ಯಾಲರಿಯಲ್ಲಿ ಆಸೀನರಾಗಿದ್ದ ಮಾಜಿ ಪ್ರಧಾನಿಗಳ ಕುಟುಂಬದವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಾಗೂ ಭವ್ಯ ಶ್ರೀರಾಮ ಮಂದಿರವನ್ನು ಕಣ್ತುಂಬಿಕೊಂಡರು. ಪ್ರಾಣ ಪ್ರತಿಷ್ಠಾಪನೆ ಮುಗಿದ ನಂತರ ಗಣ್ಯರಿಗೆ ಶುಭ ಕೋರಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಧನ್ಯವಾದ ಹೇಳಿದರು. ಇದಕ್ಕೆ ಪ್ರತಿಯಾಗಿ ದೇವೇಗೌಡರು, ಕುಮಾರಸ್ವಾಮಿ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರು ಪ್ರಧಾನಿಗಳಿಗೆ ಅಭಿವಂದನೆ ಸಲ್ಲಿಸಿದರು. ಇದೇ ವೇಳೆ ರಾಜ್ಯದಿಂದ ಅಯೋಧ್ಯಗೆ ತೆರಳಿದ್ದ ಗಣ್ಯರು, ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಗಣ್ಯಾತಿಗಣ್ಯರು ಮಾಜಿ ಪ್ರಧಾನಿಗಳು ಆಸೀನರಾಗಿದ್ದ ಜಾಗಕ್ಕೆ ಬಂದು ಕುಶಲೋಪರಿ ವಿಚಾರಿಸಿದರು. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ…

Read More

ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಸಂಗಮದ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಫೆಬ್ರವರಿ 8ಕ್ಕೆ ಈ ಚಿತ್ರ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಈಗಾಗಲೇ ಒಂದು ಸರಳ ಪ್ರೇಮಕಥೆ ಬಳಗ ಪ್ರಚಾರದ ಪಡಸಾಲೆಗೆ ಧುಮುಕಿದೆ. ಅದರ ಭಾಗವಾಗಿ ಇಂದು ನಾಯಕಿ ಸ್ವಾತಿಷ್ಠ ಕೃಷ್ಣನ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಲಾಗಿದೆ. ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಕ್ಯಾರೆಕ್ಟರ್ ಟೀಸರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಸ್ವಾತಿಷ್ಠ ಕೃಷ್ಣನ್ ಅನುರಾಗ ಎಂಬ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಯಾವುದಕ್ಕೂ ಜಗ್ಗದೇ ಧೈರ್ಯವಾಗಿ ಮುನ್ನುಗ್ಗುವಾಗ ಜರ್ನಲಿಸ್ಟ್ ಆಗಿ ಪ್ರತ್ಯಕ್ಷರಾಗಿದ್ದಾರೆ. ಕಮಲ್ ಹಾಸನ್ ನಟನೆಯ ವಿಕ್ರಮ್ ಸೇರಿದಂತೆ ಒಂದಷ್ಟು ತಮಿಳು ಸಿನಿಮಾದಲ್ಲಿ ನಟಿಸಿರುವ ಸ್ವಾತಿಷ್ಠಗೆ ಒಂದು ಸರಳ ಪ್ರೇಮಕಥೆ ಚೊಚ್ಚಲ ಕನ್ನಡ ಸಿನಿಮಾವಾಗಿದೆ. ಇದೇ ಮೊದಲ ಬಾರಿಗೆ ದೊಡ್ಮನೆಯ ಹೀರೋ ವಿನಯ್ ರಾಜ್ ಕುಮಾರ್ ಗೆ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ವಿನಯ್ ನಾಯಕನಾಗಿ ನಟಿಸಿರುವ…

Read More

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದ್ದಾರೆ. ಈ ಸಂಬಂಧ ಸಿಎಂ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು,  ಪ್ರಧಾನಿ ನರೇಂದ್ರ ಮೋದಿಯವರೇ  ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ ಎಂದು ಸವಾಲು ಹಾಕಿದ್ದಾರೆ. ಎಕ್ಸ್‌ನಲ್ಲೇನಿದೆ..?: ನನಗೆ ತಿಳಿದಿರುವ ರಾಮ, ನಾನು ಪೂಜಿಸುವ ರಾಮ ವಚನ ಪರಿಪಾಲನೆಯನ್ನೇ ತನ್ನ ಉಸಿರಾಗಿಸಿಕೊಂಡವನು. ನನಗೆ ತಿಳಿದಿರುವ ಹನುಮ, ನಾನು ಪೂಜಿಸುವ ಹನುಮ ರಾಮನಾಮಕ್ಕಿಂತ ಮಿಗಿಲಿಲ್ಲ, ರಾಮನೇ ಜಗವೆಲ್ಲಾ ಎಂದು ತಿಳಿದು ರಾಮಭಕ್ತಿಯನ್ನೇ ಎದೆಯೊಳಗೆ ಇಳಿಸಿಕೊಂಡವನು. ಹನುಮನ ನಾಡಿನವರಾದ ನಮಗೆ ರಾಮನ ಬಗ್ಗೆ, ರಾಮಭಕ್ತಿಯ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ಅದೊಂದು ತೋರ್ಪಡಿಕೆಯ ವಿದ್ಯಮಾನವೂ ಅಲ್ಲ. ರಾಮಭಕ್ತಿ ನಿರಂತರ. ವೈಯಕ್ತಿಕವಾಗಿ ನಾನು,…

Read More

ಕಲಬುರಗಿ: ಅಯೋಧ್ಯೆಯಲ್ಲಿ ಮತ್ತೆ ಪ್ರಭು ಶ್ರೀರಾಮ ಚಂದ್ರನ ಆಗಮನವಾದ ಕಾರಣ ಸಂಜೆ ಎಲ್ಲರೂ ದೀಪ ಬೆಳಗಿಸುವಂತೆ ಪ್ರಧಾನಿ ಮೋದಿ ಕರೆಕೊಟ್ಟ ಹಿನ್ನಲೆ ಕಲಬುರಗಿಯಲ್ಲಿ ದೀಪೋತ್ಸವ ಜೋರಾಗಿತ್ತು. ಇಡೀ ನಗರದ ಎಲ್ಲೆಡೆ ದೀಪಗಳು ಜಗಮಗಿಸುತಿದ್ದವು. ಇದೇವೇಳೆ ಮಹಾದಾಸೋಹಿ ಶರಣನ ಗುಡಿ ಅಂಗಳದಲ್ಲಿ ಬೆಳಕಿನ ಬಾಣ ಬಿರುಸುಗಳು ಆಕಾಶಕ್ಕೆ ಮುತ್ತಿಕ್ಕುತ್ತಿದ್ದವು. ಪ್ರಭು ಶ್ರೀರಾಮನ ಭವ್ಯ ಮೂರ್ತಿಯು ನೋಡುಗರ ಕಣ್ಮನ ಸೆಳೆಯುತಿತ್ತು.. ಮಾತ್ರವಲ್ಲ ರಾಮ ಸೀತೆ ಲಕ್ಷ್ಮಣ ಈ ಮೂವರ ವೇಷಾಧಾರಿಗಳು ರಾಮೋತ್ಸವಕ್ಕೆ ಮೆರಗು ತಂದಿದ್ದು ಎದ್ದು ಕಾಣುತಿತ್ತು..

Read More

ಹುಬ್ಬಳ್ಳಿ: ಅಯೋಧ್ಯೆಯ ಭವ್ಯವಾದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಗರದ ಘೋಡಕೆ ಓಣಿ ಹಳೇ ಹುಬ್ಬಳ್ಳಿಯಲ್ಲಿ ಢೋರ ಕಕ್ಕಯ್ಯಾ ಸಮಾಜದ ವತಿಯಿಂದ ಏಳು ಮಕ್ಕಳ ತಾಯಿ ದೇವಸ್ಥಾನ ಆವರಣದಲ್ಲಿ ಶ್ರೀ ರಾಮ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಯೊಂದಿಗೆ ಶ್ರದ್ಧೆಯಿಂದ ಪೂಜೆ ನರೆವೇರಿಸಲಾಯಿತು. ಈ ಅವಧಿಯಲ್ಲಿ ಘೋಡಕೆ ಓಣಿಯ ಪಂಚಾಯತ್ ಅಧ್ಯಕ್ಷ ಗುರುನಾಥ ಘೋಡಕೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ಘೋಡಕೆ, ಅರುಣೋದಯ ಯುವಕ್ ಮಾಡಳದ ಅಧ್ಯಕ್ಷ ವಿನೋದ್ ಹುಟಗಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹೋಟಕರ, ಮಧುಕರ ಘೋಡಕೆ, ಅನಿಲ ನಾರಾಯಣಕರ, ಬಾಳು ಪೋಳ್, ಮಾಣಿಕರಾವ್ ಘೋಡಕೆ, ರವಿಕುಮಾರ್ ಹುಟಗಿ, ಶ್ರೀನಿವಾಸ್ ಘೋಡಕೆ ಕಿರಣ ಘೋಡಕೆ, ಸಿದ್ದಪ್ಪ ಘೋಡಕೆ, ಮಹಿಳೆಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಓಣಿಯ ನಾಗರಿಕರು ಭಾಗವಹಿದ್ದರು.

Read More

ಕಲಘಟಗಿ: ಇಂದು ಅಯೋಧ್ಯದಲ್ಲಿ ಶ್ರೀರಾಮಚಂದ್ರ ಪ್ರಭುವಿನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸಂತು ಸೈದು ಗೌಳಿ ದಡ್ಡಿಯ ಧನಗರ ಗೌಳಿ ಗೌಳಿ ಜನಾಂಗದವರು ಬಹು ವಿಜೃಂಭಣೆಯಿಂದ ಆಚರಿಸಿದರು ಅದೇ ರೀತಿಯಾಗಿ ಕಲಘಟಗಿ   ಪ್ರಮುಖ ರಸ್ತೆಗಳಲ್ಲಿ ಕೇಸರಿಮಯವಾದ ವಾತಾವರಣ ನಿರ್ಮಾಣವಾಗಿತ್ತು   ಚಿಕ್ಕ ಮಕ್ಕಳನ್ನು ರಾಮ ಲಕ್ಷ್ಮಣ ವೇಷಧಾರಿಗಳನ್ನು ಮಾಡಿ  ಬೈಕ ಮೇಲೆ ಸಂಚಾರ ಮಾಡಿರುವುದು  ವಿಶೇಷವಾಗಿತ್ತು.

Read More

ಅಯೋದ್ಯಯಲ್ಲಿ ಇಂದು ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಸಡಗರ ಜೋರಾಗಿದೆ. ಪ್ರತಿ ರಾಜ್ಯ, ಜಿಲ್ಲೆ ತಾಲೂಕಿನ ಸೇರಿದಂತೆ ಹಳ್ಳಿ ಹಳ್ಳಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಸ್ಮರಣೆ ಜೋರಾಗಿದ್ದು ರಾಷ್ತ್ರೀಯ ಹಬ್ಬಕ್ಕೆ ಸಾಕ್ಷಿಯಾಗಿದೆ.‌ ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ ಪ್ರಭುರಾಮಚಂದ್ರನ ಆರಾಧನೆ ಜೋರಾಗಿದ್ದು ಎಲ್ಲವೂ ರಾಮಮಯವಾಗಿದೆ ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಹೌದು. ಎಲ್ಲೆಲ್ಲಿಯೂ ರಾರಾಜಿಸುತ್ತಿರುವ ಕೇಸರಿ ಬಾವುಟ, ಶ್ರೀರಾಮ ಭಾವಚಿತ್ರ. ಇನ್ನೊಂದು ಕಡೆ ದೇವಸ್ಥಾನಕ್ಕೆ ಹಿರಿದು ಬಂದ ಭಕ್ತರಿಂದ ವಿಶೇಷ ಪೂಜೆ, ಪಟಾಕಿ ಸಿಡಿಸಿ ಮೆರವಣಿಗೆ ಸಂಭ್ರಮ ಸಡಗರ ಇಂತಹ ಮನಮೋಹಕ ದೃಶ್ಯ ಕಂಡು ಬಂದಿದ್ದು ಕುಂದಾನಗರಿ ಬೆಳಗಾವಿಯಲ್ಲಿ. ಇಂದು ಅಯೋಧ್ಯೆಯಲ್ಲಿ ಮರ್ಯಾದಾಪುರಷೊತ್ತಮ ಪ್ರಭು ಶ್ರೀರಾಮ ಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಗಲ್ಲಿ ಗಲ್ಲಿ ಯಲ್ಲಿ ರಾಮನ ಜಪ ಜೋರಾಗಿದ್ದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಹಿಮು ಕಲಾನಿ ಚೌಕನಲ್ಲಿ ರಾಮನ ಭಕ್ತರು ಅನ್ನ ಸಂತರ್ಪಣೆ ಮಾಡಿದ್ರೆ ಬೆಳಗಾವಿ ಖಡಕ್ ಗಲ್ಲಿ, ರಾಮಖಿಂಡಗಲ್ಲಿ…

Read More

ಹುಬ್ಬಳ್ಳಿ: ನಾಟ್ಯಾಂಜಲಿ ಕಲಾಮಂದಿರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸವಾಯಿ ಗಂಧರ್ವ ಹಾಲ್ ಹುಬ್ಬಳ್ಳಿಯಲ್ಲಿ ಜರುಗಿತು. ಸುಮಾರು 21 ನೃತ್ಯಗಳು 200 ವಿದ್ಯಾರ್ಥಿಗಳಿಂದ ನೃತ್ಯಕಾರ್ಯಕ್ರಮವು ನೆರವೇರಿಸಲ್ಪಟ್ಟಿತು. ಕಿಕ್ಕಿರಿದ ಸಭಾಂಗಣದಲ್ಲಿ ಪ್ರಮುಖವಾಗಿ ಸೀತಾರಾಮ ಕಲ್ಯಾಣ ಹಾಗೂ ಮಹಿಷಾಸುರ ನೃತ್ಯರೂಪಕಗಳು ಪ್ರೇಕ್ಷಕರನ್ನು ಮನರಂಜಿಸಿ ಮಂತ್ರ ಮುಗ್ದರನ್ನಾಗಿಸಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ವಿದುಷಿ ಸುನೀತಾ ಪೂಜಾರಿ, ಮುಖ್ಯ ಅತಿಥಿಗಳಾಗಿ ಜಿ. ಎಸ್. ಗದಗ, ಅಧ್ಯಕ್ಷತೆಯನ್ನು ವಿನೋದ ಮುಕ್ತೆದಾರ ವಹಿಸಿದ್ದರು.ಈ ಸಂದರ್ಭದಲ್ಲಿ ನಾಟ್ಯ ವಿದೂಷಿ ರೋಹಿಣಿ ಭಟ್ಟಕೂರ್ಸೆ ಹಾಗೂ ವಿದೂಷಿ ಅಲ್ಕಾ ಪ್ರಭು ಇವರಿಗೆ ನಾಟ್ಯರಮಣಿ ಎಂಬ ಬಿರುದಿನಿಂದ ಸನ್ಮಾನಿಸಲಾಯಿತು. ಹಾಗೇ ನಾಟ್ಯಾಂಜಲಿ ಕಲಾಮಂದಿರದ ಅಧ್ಯಕ್ಷೆ ವಿದೂಷಿ ಸೌಭಾಗ್ಯ (ವನಿತಾ) ಮಹಾಲೆ ಇವರಿಗೆ ಗುರು ವಂದನೆಯನ್ನು ಮಾಡಲಾಯಿತು. ವಿಶೇಷವಾಗಿ ಕೊನೆಯಲ್ಲಿ 200 ವಿದ್ಯಾರ್ಥಿಗಳಿಂದ ಒಂದೇ ವೇದಿಕೆಯಲ್ಲಿದ್ದರು‌‌ ರಾಮಮಂದಿರದ ಪ್ರಾಣಪ್ರತಿಷ್ಠಾಪನೆಉದ್ಘಾಟನೆಯ ಅಂಗವಾಗಿ ಮಕ್ಕಳಿಂದ ರಾಮ ಭಜನೆ ನೃತ್ಯವನ್ನು ಮಾಡಲಾಯಿತೆಂದು ಸಂಘದ ಅಧ್ಯಕ್ಷೆ ವಿದೂಷಿ ಸೌಭಾಗ್ಯ ಮಹಾಲೆ ತಿಳಿಸಿದರು.

Read More

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಲಾಡು ವಿತರಣೆಯನ್ನು ವಿಕ್ಟೊರಿಯಾ ರಸ್ತೆಯ ದೊಂಗಡಿ ಕುಟುಂಬದಿಂದ ಮಾಡಿದರು. ರಾಮೋತ್ಸವ ಆಚರಿಸುತ್ತಿರೋ ದೊಂಗಡಿ ಕುಟುಂಬ 8 ಸಾವಿರ ಲಾಡು ಸಿದ್ದಪಡಿಸಿದ್ದು, ಲಾಡು ಜೊತೆಗೆ ಮಿರ್ಚಿ ಇತ್ಯಾದಿ ವಿತರಿಸಿದರು

Read More