Author: AIN Author

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ PSI ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೊಂದೆಡೆ ಪರೀಕ್ಷೆ ಬರೆಯುವ ಮುನ್ನವೇ ಕೈಗೆ ಅಭ್ಯರ್ಥಿಯೋರ್ವ ಗಾಯ ಮಾಡಿಕೊಂಡಿದ್ದಾನೆ. ಗದಗದಿಂದ ಬೆಂಗಳೂರಿಗೆ ಪಿಎಸ್ ಐ ಪರೀಕ್ಷಾ ಅಭ್ಯರ್ಥಿ ಬಂದಿದ್ದು, ಎರಡು ವರ್ಷದ ಹಿಂದೆ ಕೈಗೆ ಹಾಕಿದ್ದ ಕಡಗ ತೆಗೆಯುವಂತೆ ಭದ್ರತಾ ಸಿಬ್ಬಂದಿಗಳು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಕೈಗರ ಹಾಕಿದ್ದ ಕಡಗ ತೆಗೆಯಲು ಅಭ್ಯರ್ಥಿ ಪರದಾಟ ನಡೆಸಿದ್ದಾರೆ. ಶಾಂಪೂ ಬಳಸಿ ಕೈನಲ್ಲಿದ್ದ ಕಡಗ ತೆರವು ಮಾಡಿದ್ದಾನೆ. ಕಡಗ ತೆಗೆಯುವ ವೇಳೆ ಕೈಗೆ ಅಭ್ಯರ್ಥಿ ಗಾಯ ಮಾಡಿಕೊಂಡಿದ್ದಾನೆ.

Read More

ಬೆಂಗಳೂರು:- ಕರ್ನಾಟಕ ಮತ್ತು ಗೋವಾವನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸಲು ನೈಋತ್ಯ ರೈಲ್ವೆಯ ‘ಆಸ್ತಾ ಸ್ಪೆಷಲ್ ಎಕ್ಸ್‌ಪ್ರೆಸ್’ ವಿಶೇಷ ರೈಲುಗಳನ್ನು ಓಡಿಸಲಿದೆ. ಎರಡು ರೈಲುಗಳು ಮೈಸೂರಿನಿಂದ (ಎಸ್​ಎಂವಿಟಿ ಬೆಂಗಳೂರು ಮೂಲಕ), ಮತ್ತು ಎಸ್​ಎಂವಿಟಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ (ಧಾರವಾಡ ಮತ್ತು ಹುಬ್ಬಳ್ಳಿ ಮೂಲಕ) ಮತ್ತು ವಾಸ್ಕೋಡಗಾಮಾ (ರತ್ನಗಿರಿ ಮತ್ತು ಪನ್ವೇಲ್) ಮೂಲಕ ತಲಾ ಒಂದು ರೈಲು ಅಯೋಧ್ಯೆಗೆ ಸಂಚರಿಸಲಿದೆ. ಪ್ರಯಾಣಿಕರು ಇಂಡಿಯನ್ ರೈಲ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್​ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್) ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ ಎಂದು ನೈಋತ್ಯ ರೈಲ್ವೆ ಈಗಾಗಲೇ ತಿಳಿಸಿದೆ. ಈ ರೈಲುಗಳು ಸೀಮಿತ ಟ್ರಿಪ್​ಗಳನ್ನು ಹೊಂದಿದ್ದರೂ, ರೈಲ್ವೆ ಮಂಡಳಿಯು ಬೇಡಿಕೆಯ ಆಧಾರದ ಮೇಲೆ ಅವುಗಳನ್ನು ವಿಸ್ತರಿಸಲು ನಿರ್ಧರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಕಿಂಗ್ ಮತ್ತು ದರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ. ರೈಲು ಸಂಖ್ಯೆ 06203:- ಇದು ತುಮಕೂರನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸುತ್ತದೆ. ಈ ರೈಲು…

Read More

ಚಿತ್ರದುರ್ಗ:- ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಚಿತ್ರದುರ್ಗ ಜಿಲ್ಲೆ ಸ್ವಯಂಪ್ರೇರಿತ ಬಂದ್​​ಗೆ ಕರೆ ಕೊಟ್ಟಿದೆ. ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ. ಇಂದು ಬೆಳಗ್ಗೆ 6:30ರಿಂದ ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರತಿಭಟನೆ ಹಿನ್ನೆಲೆ ರೈತ ಮುಖಂಡರು ಜಮಾಯಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿದ್ದಾರೆ.

Read More

ತುಮಕೂರು:- ಇತ್ತೀಚೆಗೆ ತುಮಕೂರು ನಗರದಲ್ಲಿ ಮೀಟರ್‌ ಬಡ್ಡಿ ದಂಧೆ ಹೆಚ್ಚಳ ಹಿನ್ನೆಲೆ ಎಸ್ ಪಿ ಅಶೋಕ್ ಅವರು ದಂಧೆಗೆ ಬ್ರೇಕ್ ಹಾಕಲು ಖಡಕ್ ಸೂಚನೆ ನೀಡಿದ್ದಾರೆ. The Karnataka prohibition of charging exorbitant interest act ಪ್ರಕಾರ ವರ್ಷಕ್ಕೆ 18% ಗಿಂತ ಹೆಚ್ಚು ಬಡ್ಡಿ ವಿಧಿಸಿ ವ್ಯವಹಾರ ಮಾಡುತ್ತಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸ್ ಪಿಎಸ್ ಐ,ಸಿಪಿಐ ಅಥವಾ ಡಿವೈಎಸ್ ಪಿಗಳಿಗೆ ಸಂಪರ್ಕ ಮಾಡಿ ದೂರು ನೀಡಲು SP ಮನವಿ ಮಾಡಿದೆ. ಇದರ ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯವಾಣಿ ನಂಬರ್ 9480802900 ಗೆ ಕರೆ ಮಾಡಿ ದೂರು ನೀಡಬಹುದು. ತುಮಕೂರು ಜಿಲ್ಲೆಯಲ್ಲಿ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಎಸ್ ಪಿ ಪ್ಲಾನ್ ಮಾಡಿದ್ದಾರೆ. ಇನ್ನೂ ಇತ್ತೀಚೆಗೆ ಬಡ್ಡಿ ದಂಧೆಗೆ ಆತ್ಮಹತ್ಯೆ ಗಳು ನಡೆದಿದ್ದವು..ಯಾರಾದರೂ ವರ್ಷಕ್ಕೆ 18% ಹೆಚ್ಚು ಸಾಲಕ್ಕೆ ಬಡ್ಡಿ ಪಡೆಯುತ್ತಿದ್ದರೇ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಲು ಎಸ್ ಪಿ ಅಶೋಕ್ ಮನವಿ ಮಾಡಿದ್ದಾರೆ.

Read More

ಚೀನಾ:-ಚೀನಾದಲ್ಲಿ ತಡರಾತ್ರಿ 7.2 ತೀವ್ರತೆಯ ಪ್ರಬಲ ಭೂಕಂಪನ ಆಗಿದ್ದು, ದೆಹಲಿಯಲ್ಲೂ ಭೂಕಂಪನ ಆಗಿದೆ. ಈ ಹಿನ್ನೆಲೆ ಜನತೆ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಆಸ್ತಿಪಾಸ್ತಿ ಹಾನಿಯಾದ ಬಗ್ಗೆಯೂ ವರದಿಯಾಗಿಲ್ಲ. ರಿಕ್ಟರ್‌ ಮಾಪಕದಲ್ಲಿ ಭೂಕಂಪನ ತೀವ್ರತೆ 7.2 ಎಂದು ಗುರುತಿಸಲಾಗಿದ್ದು, ಸುಮಾರು 80 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ ಸೋಮವಾರ ಬೆಳಿಗ್ಗೆ ಈಶಾನ್ಯ ಚೀನಾದ ಗುಡ್ಡಗಾಡು ಹಾಗೂ ಪರ್ವತ ಶ್ರೇಣಿಯಲ್ಲಿ ಭೂಕಂಪ ಸಂಭವಿಸಿದ್ದು, 47 ಮಂದಿ ಜೀವಂತ ಸಮಾಧಿಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿಯನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಪ್ರಸಾರಸಂಸ್ಥೆಗಳು ವರದಿ ಮಾಡಿವೆ. ಅಲ್ಲದೇ ದಿಢೀರ್‌ ಮಳೆ ಹಿನ್ನೆಲೆಯಲ್ಲಿ ಚೀನಾದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

Read More

ಗದಗ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗ್ತಿದ್ದಂತೆ ಇಡೀ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಗದಗ ನಗರದಲ್ಲೂ ಸಹ ಶ್ರೀ ರಾಮನ ಆರಾಧನೆಯನ್ನ ಶ್ರಧ್ಧಾ ಭಕ್ತಿಯಿಂದ ಮಾಡಲಾಗಿದೆ. ನಗರದ ಟ್ಯಾಗೋರ ರಸ್ತೆಯ ಎರಡನೇ ಕ್ರಾಸ್ ನ ಮಹಾಂತೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗಿದೆ. ದೀಪೋತ್ಸವ ಮಾಡುವ ಮೂಲಕ ಇಡೀ ಟ್ಯಾಗೋರ್ ರಸ್ತೆಯ ಜನ್ರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ರು. ಬಂದಂತಹ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಶ್ರೀರಾಮನ ಕೃಪೆಗೆ ಪಾತ್ರರಾದ್ರು.

Read More

ಬೆಂಗಳೂರು:- ಇಂದು ಪಿಎಸ್ಐ ನೇರ ನೇಮಕಾತಿ ಪರೀಕ್ಷೆ ಹಿನ್ನೆಲೆ ಈ ಬಾರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದೆ. ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗೂ ಬೆಂಗಳೂರಿನಲ್ಲೇ ಎಕ್ಸಾಂ ಇದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಪರೀಕ್ಷಾ ಅಭ್ಯರ್ಥಿಗಳಿಗಿರುವ ಸೂಚನೆಗಳು ಇಂತಿವೆ. ಪುರುಷ ಅಭ್ಯರ್ಥಿಗಳಿಗೆ ಮಾರ್ಗಸೂಚಿ:- ಪೂರ್ಣ ತೋಳಿನ ಅಂಗಿಗಳನ್ನ ಧರಿಸದಂತೆ ಸೂಚನೆ ಕಾಲರ್ ರಹಿತ ಶರ್ಟ್ ಹಾಗೂ ಜೇಬುಗಳು ಬಳಸಲು ಸೂಚನೆ ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್ ಗಳಿಗೆ ಅನುಮತಿ ಇಲ್ಲ ಶರ್ಟ್ ಅಥವಾ ಪ್ಯಾಂಟ್ ಗಳಿಗೆ ಜಿಪ್ ಪ್ಯಾಕೆಟ್ ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್ಟ್ರಾ ಡಿಸೈನ್ ಇರಬಾರದು ಪರೀಕ್ಷಾ ಹಾಲ್ ಗೆ ಶೂಗಳು ಕಟ್ಟು ನಿಟ್ಟಾಗಿ ನಿಷೇಧ ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚನೆ ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧ ಮಹಿಳಾ ಅಭ್ಯರ್ಥಿಗಳಿಗೆ ಮಾರ್ಗಸೂಚಿ:- ದೊಡ್ಡ ದೊಡ್ಡ ಡಿಸೈನ್, ಬಟನ್ ಇರೋ, ಹೂಗಳು ಇರೋ ಬಟ್ಟೆ…

Read More

ಬಿಸಿಸಿಐ ಪ್ರತಿ ವರ್ಷ ಪ್ರಶಸ್ತಿಗಳನ್ನು ನೀಡುತ್ತಿದ್ದು, ಇದರಲ್ಲಿ ವರ್ಷವಿಡೀ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಾಗುತ್ತದೆ. ಕಳೆದ ವರ್ಷ ಗಿಲ್ ಅವರ ಪ್ರದರ್ಶನವನ್ನು ಪರಿಗಣಿಸಿ, ಬಿಸಿಸಿಐ ಅವರನ್ನು ವರ್ಷದ ಅತ್ಯುತ್ತಮ ಭಾರತೀಯ ಕ್ರಿಕೆಟಿಗ ಎಂದು ಆಯ್ಕೆ ಮಾಡಿದೆ. ಬಿಸಿಸಿಐ ಮಂಗಳವಾರ ಹೈದರಾಬಾದ್‌ನಲ್ಲಿ ಈ ಪ್ರಶಸ್ತಿಗಳನ್ನು ನೀಡಲಿದೆ. ಗಿಲ್ 2023 ರಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 28.66 ಸರಾಸರಿಯಲ್ಲಿ 1 ಶತಕ ಸೇರಿದಂತೆ 258 ರನ್ ಕಲೆಹಾಕಿದ್ದರು. ಹಾಗೆಯೇ ಗಿಲ್ 2023 ರಲ್ಲಿ 29 ಏಕದಿನ ಪಂದ್ಯಗಳನ್ನು ಆಡಿದ್ದು, 63.36 ಸರಾಸರಿಯಲ್ಲಿ 1584 ರನ್ ಗಳಿಸಿದ್ದಾರೆ. ಈ ವರ್ಷ ಅವರ ಬ್ಯಾಟ್‌ನಿಂದ ಐದು ಶತಕ ಮತ್ತು ಒಂಬತ್ತು ಅರ್ಧ ಶತಕಗಳು ಸೇರಿವೆ. ಟಿ20ಯಲ್ಲಿ ಗಿಲ್ ಈ ವರ್ಷ 13 ಪಂದ್ಯಗಳನ್ನು ಆಡಿದ್ದು, 30 ರ ಸರಾಸರಿಯಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 304 ರನ್ ಗಳಿಸಿದ್ದಾರೆ. ಅಲ್ಲದೆ ಶುಭ್​ಮನ್ ಗಿಲ್ ಕಳೆದ 12 ತಿಂಗಳುಗಳಲ್ಲಿ ಅಂದರೆ…

Read More

ಬೆಂಗಳೂರು:- ನಿನ್ನೆ ಸಿಲಿಕಾನ್ ಸಿಟಿ ಬೆಂಗಳೂರು ಇಂದು ಕೇಸರಿಮಯ ಆಗಿತ್ತು. ನಗರದ ಬಹುತೇಕ ಏರಿಯಾಗಳಲ್ಲಿ ಹಬ್ಬ ಸಂಭ್ರಮ ಮನೆ ಮಾಡಿದ್ರೆ, ನಗರದ ದೇವಾಲಯಗಳಲ್ಲಂತೂ ಸಹಸ್ರಾರು ಸಂಖ್ಯೆಯಲ್ಲಿ ಜನ ರಾಮನನ್ನ ಸ್ಮರಿಸಿದರು. ರಾಮನೂರಿನಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಿಂದೂ ಸಮಾಜದ ಕೋಟ್ಯಂತರ ಮಂದಿ ಸಂಭ್ರಮಿಸಿದ್ದಾರೆ. ಆ ಐತಿಹಾಸಿಕ ಕ್ಷಣಕ್ಕಾಗಿ ನೂರಾರು ವರ್ಷ ಕಾದಿದ್ದ ಹಿಂದೂ ಸಮಾಜದ ಮನಕ್ಕಿಂದು ಆ ಕ್ಷಣ ಜೀವನ ಪಾವನವಾಗಿಸಿದೆ. ಬೆಂಗಳೂರಲ್ಲೂ ಈ ಸಂಭ್ರಮ ಅದ್ಧೂರಿಯಾಗಿ ಆಚರಣೆಯಾಗಿದ್ದು, ರಾಮ ಭಕ್ತರ ಸಂಭ್ರಮಕ್ಕಿಂದು ಪಾರವೇ ಇರಲಿಲ್ಲ. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಹಿನ್ನೆಲೆ ಬೆಳಗ್ಗೆಯಿಂದಲೇ ನಗರದ ಎಲ್ಲಾ ದೇವಾಲಯಗಳಲ್ಲೂ ಪೂಜೆ-ಪುನಸ್ಕಾರ ಜೋರಾಗಿತ್ತು. ವಿವಿಧ ಪೂಜೆ ಕೈಂಕರ್ಯ, ಅರ್ಚನೆ, ಹೋಮ, ಯಾಗಗಳ ಮೂಲಕ ಜನ ರಾಮನ ಭಕ್ತಿಯಲ್ಲಿ ಮುಳುಗಿದ್ದರು. ರಾಜಾಜಿನಗರದ ರಾಮಮಂದಿರ, ಗಾಳಿ ಆಂಜನೇಯಸ್ವಾಮಿ ದೇವಾಲಯ, ಶಿವಾಜಿನಗರ ರಾಮನ ದೇವಸ್ಥಾನ, ಸೇರಿದಂತೆ ಬಹುತೇಕ ಕಡೆ ಅದ್ಧೂರಿ ಅಲಂಕಾರಗಳ ಜೊತೆ ವಿಜೃಂಭಣೆಯ ಸಂಭ್ರಮ ನೇರವೇರಿತು. ಇನ್ನೂ ನಗರದ ಬಹುತೇಕ ದೇವಾಲಯಗಳಲ್ಲಿ ಅಯೋಧ್ಯೆ ಕಾರ್ಯಕ್ರಮ ನೇರಪ್ರಸಾರ ವೀಕ್ಷಣೆಗೆ…

Read More

ಮಂಡ್ಯ:- ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಮೇಲುಕೋಟೆಯಲ್ಲಿ ಶಾಲೆಗೆ ಹೋಗಿಬರುತ್ತೇನೆ ಎಂದು ಹೇಳಿಹೋಗಿದ್ದ ಮಹಿಳೆಯೊಬ್ಬರು ಕೆಲ ದಿನಗಳಲ್ಲೇ ಅನುಮಾನಾಸ್ಪದ ಸಾವಿಗೀಡಾಗಿರುವ ಘಟನೆ ಜರುಗಿದೆ. ನಾಪತ್ತೆಯಾದ ಮಹಿಳೆಯ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ದೀಪಿಕಾ ಎಂದು ಗುರುತಿಸಲಾಗಿದೆ. ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಗಿರುವ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಜನವರಿ 20 ರಂದು ದೀಪಿಕಾ ಶಾಲೆಗೆ ಹೋಗಿ ಬರುತ್ತೇನೆ ಎಂದು ಕೆಲಸಕ್ಕೆ ತೆರಳಿದ್ದರು. ಅದೇ ದಿನ ಮಧ್ಯಾಹ್ನದ ವೇಳೆಗೆ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಅಂದು ಸಂಜೆ ಕುಟುಂಬಸ್ಥರು ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು ಸೋಮವಾರ ಸಂಜೆ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶವ ಪತ್ತೆಹಚ್ಚಿದ್ದಾರೆ. ಸ್ಥಳಕ್ಕೆ ಮಂಡ್ಯ ಎಸ್‌ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More