Author: AIN Author

ಅಯೋಧ್ಯೆ:- ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಪೇಜಾವರ ಸ್ವಾಮೀಜಿ ಮುಖ ಮುಚ್ಚಿದ್ದೇಕೆ? ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಅದರ ಬಗ್ಗೆ ತಿಳಿಯಲು ಸುದ್ದಿ ಪೂರ್ತಿಯಾಗಿ ಓದಿ. ಒಂದು ಹಂತದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗರ್ಭಗುಡಿಯಲ್ಲಿ ಮುಖ ಮುಚ್ಚಿಕೊಂಡರು. ಅದೇಕೆ ಗೊತ್ತಾ? ರಾಮಲಲ್ಲಾನಿಗೆ ನೈವೇದ್ಯ ಮಾಡುವ ಸಂದರ್ಭದಲ್ಲಿ ದೇವರನ್ನು ನೋಡಬಾರದು ಎಂಬ ಶಾಸ್ತ್ರೀಯ ನಿಯಮ ಇದೆ. ಪ್ರಧಾನಿ ಮೋದಿಯವರು ರಾಮಲಲ್ಲಾನಿಗೆ ಭಕ್ಷ್ಯ ಮತ್ತು ಫ‌ಲಗಳನ್ನು ನೈವೇದ್ಯ ಮಾಡುತ್ತಿದ್ದರು. ಈ ವೇಳೆ ಮೋದಿ ಸಮೀಪವೇ ಇದ್ದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಅಂಗವಸ್ತ್ರದಿಂದ ಮುಖ ಮುಚ್ಚಿಕೊಂಡರು. ಜತೆಗೆ ವಿಧಿವಿಧಾನಗಳು ನಡೆಯುತ್ತಿದ್ದ ವೇಳೆ ಅವರು, ಮಂತ್ರೋಚ್ಛಾರಣೆ ಮಾಡುತ್ತಿದ್ದರು. ಜತೆಗೆ, ಕೆಲ ಸಂದರ್ಭದಲ್ಲಿ ಪ್ರಧಾನಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದದ್ದೂ ಕಂಡುಬಂತು.

Read More

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಇದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಲು ಬಯಸುವವರು ಇಲ್ಲಿ ಉದ್ಯೋಗವಕಾಶ ಇದೆ. ಅತ್ತಿಬೆಲೆ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಪದವಿ, ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 25 ರಂದು ಬೆಳಿಗ್ಗೆ 10:30 ರಿಂದ 1 ಗಂಟೆಯವರೆಗೆ ನೇರ ಸಂದರ್ಶನ‌ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ : ಡಾ.ಪಿ.ಬಾಲಾಜಿ ಮೊಬೈಲ್ ಸಂಖ್ಯೆ9942169804 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹುದ್ದೆಗಳ ವಿವರ Programme manager – 1 MSW two year experience, Salary 21k M&E cum Accountant -1 B.com or M.com 16k Counsellor 2 MSW 1year experience ORW – 7 qualification 10 STD 10500/- 1 EXPERIENCE ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಚಿಕ್ಕಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ 11 ದಿನಗಳ ಕಾಲ ಉಪವಾಸ ವ್ರತ ಮಾಡಿದ್ದೇ ಅನುಮಾನ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರೀ ಎಳನೀರು ಕುಡಿದು ಉಪವಾಸ ಮಾಡಿದ್ರೆ ಮನುಷ್ಯ ಒಂದೆರೆಡು ದಿನದಲ್ಲಿ ಕೆಳಗೆ ಬೀಳುತ್ತಾನೆ. 11 ದಿನಗಳ ಕಾಲ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದರು. https://ainlivenews.com/do-you-sleep-less-than-6-hours-beware-of-this-deadly-disease/ ನಾನು ಬೆಳಗ್ಗೆ ವಾಕಿಂಗ್ ಮಾಡಬೇಕಾದರೆ ವೈದ್ಯರ ಬಳಿ ಈ ಬಗ್ಗೆ ಚರ್ಚೆ ಮಾಡಿದೆ. ವೈದ್ಯರ ಅಭಿಪ್ರಾಯದ ಪ್ರಕಾರ ಮನುಷ್ಯ ಬದುಕೋದು ಅಸಾಧ್ಯ. ಹಾಗಾಗಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡಿರೋದು ಅನುಮಾನ. ಹಾಗೆ ಉಪವಾಸ ಮಾಡದೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ರೆ ಆ ಕ್ಷೇತ್ರಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ಪ್ರಶ್ನಿಸಿದರು.

Read More

ವಿಜಯಪುರ : ಮುಳವಾಡ ಏತ ನೀರಾವರಿ ಯೋಜನೆಯ ಎಡ ಹಾಗೂ ಬಲ ಕಾಲುವೆಗಳಿಗೆ ನೀರು ಹರಿಸುವಂತೆ ವಿಜಯಪುರ ಜಿಲ್ಲೆಯ ಕೋಲ್ಹಾರ-ಬಾಗೇವಾಡಿ ರಾಜ್ಯ ಹೆದ್ದರಿ ತಡೆದು ರೈತರು ಪ್ರತಿಭಟನೆ ನಡೆಸಿದರು. ಮಟ್ಟಿಹಾಳ ಕೆ.ಬಿ.ಜೆ.ಎನ್.ಎಲ್ ಕಚೇರಿಗೆ ಬೀಗ ಜಡಿದು ರಾಜ್ಯ ರೈತ ಸಂಘ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕಾಲುವೆ ನೀರು ಬಿಡದೆ ಇರೋದಕ್ಕೆ ಹೈವೆ ರಸ್ತೆಯಲ್ಲಿ ಟೈರ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗಿದೆ. ಆದ್ದರಿಂದ ತಕ್ಷಣವೇ ನೀರು ಬಿಡುವಂತೆ ಆಗ್ರಹಿಸಿದರು.

Read More

ಹುಬ್ಬಳ್ಳಿ ಜ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಮೀನುಗಾರಿಕೆ ಇಲಾಖೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಹಾಪ್ ಕಾಮ್ಸ್ ಮತ್ತು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಧಾರವಾಡ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬ 2023-24 ನ್ನು ಜನೇವರಿ 26 ರಿಂದ 28 ರವರೆಗೆ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಲಾಗಿದೆ. ಜನೇವರಿ 26 ರಂದು ಸಂಜೆ 4 ಗಂಟೆಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ, ವಿಧಾನ ಪರಿಷತ ಸಭಾಪತಿಯಾದ ಬಸವರಾಜ ಹೊರಟ್ಟಿ ಅವರ‌ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ‌ ಜರುಗಲಿದೆ. https://ainlivenews.com/do-you-sleep-less-than-6-hours-beware-of-this-deadly-disease/ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ, ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ…

Read More

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಶ್ರೀ ರಾಮೋತ್ಸವದ ನಿಮಿತ್ಯ ಶ್ರೀರಾಮದೂತರು ನಂದ ಗೋಕುಲ ಹೂ ಬಳ್ಳಿ ಗ್ರಾಮದ ಗುರುಹಿರಿಯರ ನೇತೃತ್ವದಲ್ಲಿ  ಬೆಳಗ್ಗೆ ಅನ್ನಪ್ರಸಾದ ಸೇವೆ ಮತ್ತು ಮಧ್ಯಾಹ್ನ  ಹಿಂದೂ ಸೇವಾ ಸಂಘ ಹುಬ್ಬಳ್ಳಿ ಮಹಾಮಂಗಳಾರತಿ ಅನ್ನದಾನಸೇವೆ  ಕಾರ್ಯಕ್ರಮ ಯಶಸ್ವಿ ಮಾಡಿಕೊಟ್ಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಬೆಂಗೇರಿ ವಹಿಸಿಕೊಂಡಿದ್ದರು. ನಾಗಪ್ಪ ಪೂಜಾರ, ಬಸಪ್ಪ ಎಲಿಗಾರ ಕಲ್ಮೇಶ, ವಿನಾಯಕ್ ನಿಂಗಪ್ಪ ಬಸವರಾಜ್ ಮಹೇಶ ಹನುಮಂತ ವಿಜಯ್ ಮುಂತಾದವರಿದ್ದರು.

Read More

ಹುಬ್ಬಳ್ಳಿ: ಕಲಘಟಗಿ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ನೂತನವಾಗಿ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ಸುನಿಲ್ ಕುಮಾರ್ ಕಮ್ಮಾರ್ ಉಪಾಧ್ಯಕ್ಷರಾಗಿ ಶ್ರೀಮತಿ ರೇಣುಕಾ ಬೋವಿ ಸದಸ್ಯರಾಗಿ ಗಿರೀಶ್ ಮುಕ್ಕಲ್ ಸಲೀಂ,  ಕಿತ್ತೂರ್ ಪ್ರಭು ಹುಬ್ಬಳ್ಳಿಮಠ ಮಲ್ಲೇಶ ಇಂಗಳೇ ಶಾಲೆಯ ಮುಖ್ಯೋಪಾಧ್ಯಾಯರು ಅಜಿತ್ ದೇವಲಾಪುರಹಾಗೂ ದೈಹಿಕ ಶಿಕ್ಷಕರ ಶಿವಾನಂದ ಚಿಕನರ್ತಿ ಮತ್ತು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Read More

ಗದಗ: ಅಸ್ಸಾಂ ನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಬಿಜೆಪಿ ಕಾರ್ಯಕರ್ತರ ಅನುಚಿತ ವರ್ತನೆ ಖಂಡಿಸಿ ಗದಗ ಜಿಲ್ಲಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು. ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ ಎಸ್ ಪಾಟೀಲ್ ನೇತೃತ್ವದಲ್ಲಿ ಕೆಂದ್ರ ಸರ್ಕಾರ ಹಾಗೂ ಬಿಜೆಪಿ ವಿರುಧ್ಧ ವಾಗ್ದಾಳಿ ನಡೆಸಿದರು. ಮಾಜಿ ಶಾಸಕ ಡಿ ಆರ್ ಪಾಟೀಲ್, ಬಿ ಆರ್ ಯಾವಗಲ್ ಸೇರಿದಂತೆ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

Read More

ಬೆಂಗಳೂರು: ಬೆಳ್ಳಂ ಬೆಳಗ್ಗೆ ಗೋವಾದಿಂದ ನಗರಕ್ಕೆ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ 50 ಲಕ್ಷ ಮೌಲ್ಯದ 16 ಸಾವಿರ ಮದ್ಯದ ಬಾಟೆಲ್ ಗಳನ್ನ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ. ಗೋವಾದಿಂದ ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಲಕ್ಷಾಂತರ ಮೌಲ್ಯದ ಮದ್ಯ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ನಗರದ ಮಹದೇವಪುರ ಹಾಗೂ ಕೆ.ಆರ್.ಪುರ ವಲಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡು 50 ಲಕ್ಷ ಮೌಲ್ಯದ 370 ಬಾಕ್ಸ್ ನಲ್ಲಿದ್ದ 16 ಸಾವಿರ ಮದ್ಯದ ಬಾಟೆಲ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾದಿಂದ ಬೆಳಗಾವಿ ಮಾರ್ಗವಾಗಿ ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಸಾಗಿಸುತ್ತಿದ್ದ ಚಾಲಕ ಅಮಿತ್ ಹಾಗೂ ಪರಮೇಶ್ ಎಂಬುವರನ್ನ ಬಂಧಿಸಲಾಗಿದೆ.ಗೋವಾದಿಂದ ನಗರಕ್ಕೆ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು‌.‌ ಕಳೆದ 15 ದಿನಗಳಿಂದ ಅಬಕಾರಿ ಇಲಾಖೆಯ ಡಿಸಿ ವೀರಣ್ಣ ಬಾಗೇವಾಡಿ, ಡಿವೈಎಸ್ಪಿ ಮುಜಾವರ್ ಅಬೂಬಕರ್ ನೇತೃತ್ವದ ತಂಡ ರಚಿಸಲಾಗಿತ್ತು. ಇಂದು ಮುಂಜಾನೆ ಹೊಸಕೋಟೆಗೆ ಕಡೆ ಮಾಲ್ ಸಾಗಿಸುವ ಬಗ್ಗೆ ಮಾಹಿತಿ…

Read More

ಮಿಜೋರಾಂ: ಮ್ಯಾನ್ಮಾರ್ ಸೈನಿಕರನ್ನು ಕರೆದೊಯ್ಯಲು ಬಂದಿದ್ದ ಮಿಲಿಟರಿ ವಿಮಾನವು ಮಿಜೋರಾಂನ ಲೆಂಗ್‌ಪುಯಿ ಏರ್‌ಪೋರ್ಟ್‌ನಲ್ಲಿ ರನ್‌ವೇಯಿಂದ ಸ್ಕಿಡ್ ಆಗಿದೆ. ಘಟನೆಯಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ. ಮಂಗಳವಾರ ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣದ ಟರ್ಮಿನಲ್ ತಲುಪುವ ಮೊದಲು ಅಂದರೆ ಬೆಳಗ್ಗೆ 10.19 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಘಟನೆ ನಡೆದ ವೇಳೆ ವಿಮಾನದಲ್ಲಿ ಒಟ್ಟು 14 ಮಂದಿ ಇದ್ದರು ಎನ್ನಲಾಗಿದೆ. https://ainlivenews.com/do-you-sleep-less-than-6-hours-beware-of-this-deadly-disease/ ಈ ಸಂಬಂಧ ಮಿಜೋರಾಂ ಡಿಜಿಪಿ ಅನಿಲ್‌ ಶುಕ್ಲಾ ಪ್ರತಿಕ್ರಿಯಿಸಿ, ಲ್ಯಾಂಡಿಂಗ್‌ ವೇಳೆ ಉಂಟಾದ ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ. ಈ ವಿಮಾನದಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ 6 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದ 8 ಮಂದಿ ಸುರಕ್ಷಿತವಾಗಿದ್ದಾರೆ. ಇವರನ್ನು ಲೆಂಗಪುಯಿನಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Read More