Author: AIN Author

ಹುಬ್ಬಳ್ಳಿ:- ಜ. 27, 28ರಂದು ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವ ನಡೆಯಲಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ಗಾಳಿಪಟ ಉತ್ಸವದಲ್ಲಿ 15 ದೇಶದ 23 ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಜೊತೆಗೆ ಕುಸ್ತಿ, ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇಸಿ ಕ್ರೀಡೆಗಳಿಗೆ ಆದ್ಯತೆ ನೀಡಲು ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್​ನವರು ಇಟಲಿ ತಳಿಗಳು.​ ಕಾಂಗ್ರೆಸ್ಸಿಗರು ಪೋಪ್​, ಚರ್ಚ್​ ಬಗ್ಗೆ ಮಾತಾಡಿದರೆ ಖುಷಿಯಾಗುತ್ತಿದ್ದರು. ರಾಮ, ವಿಶ್ವನಾಥ ಬಗ್ಗೆ ಮಾತಾಡಿದರೆ ಇಟಲಿ ತಳಿಗಳಿಗೆ ಎಲ್ಲಿ ತಿಳಿಯುತ್ತೆ. ಕಾಂಗ್ರೆಸ್ಸಿಗರು ಕುಡಿದು ಹೇಗೆ ಜೀವಂತ ಇರ್ತಾರೆ ಅನ್ನೋದೆ ಪವಾಡ. ಕಾಂಗ್ರೆಸ್​ನವರ ಪವಾಡವೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಕಾಂಗ್ರೆಸ್​ನವರು ಏನು ಕುಡೀತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇಟಲಿ ತಳಿಗಳಿಂದ ನಾವೇನೂ ನಿರೀಕ್ಷೆ​ ಮಾಡುವುದಕ್ಕೆ ಆಗುವುದಿಲ್ಲ. ರಾಹುಲ್ ಗಾಂಧಿ ಮುತ್ತಜ್ಜ ನಮ್ಮ ದೇಶದ ಮೊದಲ ಪ್ರಧಾನಮಂತ್ರಿ. ನಮ್ಮ ದೇಶದ ಗೌರವ, ಅಭಿಮಾನ, ಧರ್ಮ ಬಗ್ಗೆ ಯಾವ ಕಲ್ಪನೆ ಇಲ್ಲ. ದೇಶದಲ್ಲಿ ರಾಮ ಒಬ್ಬನೇ, ಗಾಂಧಿಗೂ ಅದೇ…

Read More

ಚಿಕ್ಕಬಳ್ಳಾಪುರ:- ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆಗೆ ತಳ್ಳಿದ್ದ 13 ವರ್ಷದ ಬಾಲಕಿ ಯನ್ನು ಪೊಲೀಸರು ರಕ್ಷಿಸಿರುವಂತಹ ಘಟನೆ ಜರುಗಿದೆ. ಆಟೋ ಚಾಲಕನ ಮೂಲಕ ಬಾಲಕಿಯ ಮಲತಂದೆಯಿಂದಲೇ ವೇಶ್ಯೆವಾಟಿಕೆ ತಳ್ಳಿದ್ದ ಆರೋಪ ಮಾಡಲಾಗಿದೆ. ಚಿಕ್ಕಬಳ್ಳಾಪುರ ಮಹಿಳಾ ಪೊಲೀಸರಿಂದ ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ.

Read More

ಕೋಲಾರ:- ಹಿಂದುಳಿದ, ದಲಿತ ಅಲ್ಪಸಂಖ್ಯಾತ ರಿಗೆ ಸರ್ಕಾರದಿಂದ ಬರುವ ಸೌಲಬ್ಯಗಳ ಆಯ್ಕೆಯ ಅಧಿಕಾರವನ್ನು ಜನಪ್ರತಿನಿಧಿಗಳಿಂದ ಹಿಂಪಡೆಯಬೇಕು, ಸರ್ಕಾರಿ ಭೂ ಮಂಜುರಾತಿಯಲ್ಲಿ ಪಾರದರ್ಶಕತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರುಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಸ್ ಎಂ ವೆಂಕಟೇಶ್ ಮಾತನಾಡಿ ಸರ್ಕಾರಿ ಸೌಲಬ್ಯಗಳನ್ನು ಬಡಜನರಿಗೆ ತಲುಪಿಸ ಬೇಕಾದ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗೆ ಮಾತ್ರ ಸೌಲಬ್ಯಗಳನ್ನು ನೀಡುತ್ತಿದ್ದಾರೆ ನಿಜವಾದ ಬಡ ಜನರಿಗೆ ಅವಷ್ಯಕತೆ ಇರುವವರಿಗೆ ಸಿಗುತ್ತಿಲ್ಲ , ಭೂ ಮಂಜೂರಾತಿ ಸಮಿತಿ ನಿಯಮಗಳನ್ನು ಗಾಳಿಗೆ ತೂರಿ ಸಾಕಷ್ಟು ಭೂಮಿ ಹೊಂದಿರುವವರಿಗೆ ಮತ್ತೆ ಭೂಮಿ ಮಂಜೂರಾತಿ ಮಾಡಲಾಗುತ್ತಿದೆ, ಇನ್ನು ಗೋಮಾಳ , ಗುಂಡುತೋಪು, ಸೇರಿದಂತೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ಜರುಗಿಸಬೇಕು, ಸರ್ಕಾರಿ ವಿದ್ಯಾರ್ಥಿ ನಿಲಯ ಗಳಲ್ಲಿ ಬೇರೆ…

Read More

ಕೋಲಾರ: -ಕೇಂದ್ರ ಸರಕಾರವು ಮುಂಬರುವ ಫೆಬ್ರವರಿ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಐಸಿಡಿಎಸ್ ಯೋಜನೆಯ ಅನುದಾನ ಹೆಚ್ಚಳ, ಕನಿಷ್ಠ ವೇತನ ಜಾರಿ ಸೇರಿದಂತೆ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಟ್ಟು ಜನಪರ ನೀತಿಗಳಿಗಾಗಿ ಅಗ್ರಹಿಸಿ, ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ವತಿಯಿಂದ ನಗರದ ಸಂಸದರ ಕಛೇರಿ ಮುಂದೆ ಧರಣಿ ನಡೆಸಿದರು. ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹಳೆ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಸಂಸದ ಎಸ್ ಮುನಿಸ್ವಾಮಿ ಅವರ ಕಛೇರಿಯವರಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಅಂಗನವಾಡಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಜಿಲ್ಲಾ ಅಧ್ಯಕ್ಷೆ ಅಂಜಲಮ್ಮ ಮಾತನಾಡಿ ಕಳೆದ 10 ವರ್ಷಗಳ ಹಿಂದೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ದೇಶದ ಕಾರ್ಮಿಕ ವರ್ಗವು ತೀವ್ರ ಸಂಕಷ್ಟದಲ್ಲಿದ್ದು, ಬದುಕು ಸಾಗಿಸಲು ಸಹ ಹರಸಾಹಸಪಡುವಂತಾಗಿದೆ. ದೇಶವನ್ನಾಳುವ…

Read More

ಬೆಂಗಳೂರು:- ಅಕ್ರಮ ಎಂಬ ಮಾತ್ರಕ್ಕೆ ಕಟ್ಟಡಗಳನ್ನು ನೀವು ಕೆಡವಲಾಗದು ಎಂದು ಬಿಬಿಎಂಪಿಗೆ ಹೈಕೋರ್ಟ್ ಚಾಟಿ ಬೀಸಿದೆ. ಬಿಬಿಎಂಪಿಯಿಂದ ಅನುಮತಿ ಪಡೆಯದಿದ್ದರೇ ಕೂಡಲೇ ಕಟ್ಟಡವನ್ನು ಕೆಡವಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವ್ಯಾಖ್ಯಾನಿಸಿದೆ. BBMP ಕಾಯಿದೆ, 2020 ರ ಸೆಕ್ಷನ್ 248(3) ಮತ್ತು 356 ರ ಅಡಿಯಲ್ಲಿ ಆದೇಶಗಳನ್ನು ರವಾನಿಸುವ ಮೊದಲು, ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಾಣವಾಗಿದೆಯೇ ಅಥವಾ ಕಟ್ಟಡದ ಬೈಲಾಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ಬಿಬಿಎಂಪಿ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮ ಮಾಡುವ ಬದಲು ಬಿಬಿಎಂಪಿ ಬೈಲಾ ಉಲ್ಲಂಘನೆಯಾಗಿದ್ದರೆ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ದೇಶನ ನೀಡಬಹುದು. ಉಲ್ಲಂಘನೆ ಮಾಡಿರುವುದನ್ನು ಪರಿಗಣಿಸಿ ಅಂತಹ ಕಟ್ಟಡಗಳ ಸಕ್ರಮ ಮಾಡುವುದಕ್ಕೆ ಬೈಲಾದಲ್ಲಿ ಅವಕಾಶವಿದೆ. ಉಲ್ಲಂಘನೆ ಮಾಡಿದ ದಿನದಿಂದ ತೆರಿಗೆ ಮತ್ತು ದಂಡ ಪಾವತಿಸುವಂತೆ ಸೂಚನೆ ನೀಡಬಹುದು ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ. ಬಿಬಿಎಂಪಿ ಅಧಿಕಾರಿಗಳು ನೀಡಿದ್ದ ಕೆಡವಲು ನೋಟಿಸ್ ಪ್ರಶ್ನಿಸಿ ಎಂ.ಚಂದ್ರಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್…

Read More

ಬೆಂಗಳೂರು:- ದೇಶದ ಐಟಿ ವಲಯಕ್ಕೆ ಬೆಂಗಳೂರು ಕೊಡುಗೆ ಅಪಾರ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ವ್ಯಾಪಿ ಹೊಸ ಐಟಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಸಹಾಯ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿ ಉತ್ತೇಜಿಸಲಾಗುವುದು ಎಂದರು. ಬೆಂಗಳೂರು ಐಟಿ ವಲಯದ ರಾಜಧಾನಿ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು ಪೇಟೆಗಳನ್ನು ನಿರ್ಮಾಣ ಮಾಡಿದ್ದು, ಇದು ಅಂದಿನ ಕಾಲದ ತಾಂತ್ರಿಕ ವಿನ್ಯಾಸ. ಈಗ ವಿಶೇಷ ಆರ್ಥಿಕ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇನ್ನೂ,ಆತ್ಮನಿರ್ಭರ ಭಾರತಕ್ಕೆ ಕರ್ನಾಟಕವೂ ಸಾಕಷ್ಟು ಬೆಂಬಲ ಸೂಚಿಸಿದೆ. ದೇಶದ ಐಟಿ ವಲಯಕ್ಕೆ ಬೆಂಗಳೂರು ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು. ಐಟಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಂಪೆನಿಗಳು ತೊಡಗಿಸಿಕೊಂಡಿವೆ ಎಂದ ಅವರು, ಭವಿಷ್ಯದ ಸವಾಲುಗಳನ್ನು ಮತ್ತು ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಎದುರಿಸಲು, ಕಾಲೇಜುಗಳಲ್ಲಿನ ಮಾನವ ಸಂಪನ್ಮೂಲವನ್ನು ಹೆಚ್ಚು ಉದ್ಯೋಗಾರ್ಹ ಮತ್ತು ತಾಂತ್ರಿಕವಾಗಿ ಮಾಡಲು ಹೊಸ ನೀತಿಗಳನ್ನು ರೂಪಿಸಲು ರಾಜ್ಯ ಸರಕಾರ ದೇಶದಲ್ಲಿ ಮೊದಲ…

Read More

ಬೆಂಗಳೂರು:- ಯಾವುದೇ ಅಕ್ರಮ, ಗೊಂದಲವಿಲ್ಲದೆ ಪಿಎಸ್‌ಐ ಪರೀಕ್ಷೆ ಇಂದು ಸುಗಮವಾಗಿ ನಡೆದಿದೆ. 117 ಸೆಂಟರ್‌ಗಳಲ್ಲಿ 4,4000 ಅಭ್ಯರ್ಥಿಗಳು ಇಂದು ಪರೀಕ್ಷೆ ಬರೆದಿದ್ದಾರೆ. ಎಕ್ಸಾಮ್ ಸೆಂಟರ್‌ಗೆ ಫುಲ್ ಶರ್ಟ್ ಧರಿಸಿ ಬಂದ ಅಭ್ಯರ್ಥಿಗಳ ಶರ್ಟ್ ಕಟ್ ಮಾಡಿ ಒಳಗೆ ಬಿಡಲಾಗಿದೆ. ಬೆಲ್ಟ್ ಶೂ ಧರಿಸಿ ಬಂದವರನ್ನೂ ಕೂಡ ಒಳಗೆ ಬಿಟ್ಟಿಲ್ಲ. ಬಳೆ ಧರಿಸಿ ಬಂದ ಮಹಿಳಾ ಅಭ್ಯರ್ಥಿಗಳಿಂದ ಬಳೆ ತೆಗೆಸಲಾಗಿದೆ. ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಸಹ ಒಳಗೆ ಬಿಟ್ಟಿಲ್ಲ. ಪರೀಕ್ಷೆ ನಡೆಯುವ ಸೆಂಟರ್‌ನ 200 ಮೀಟರ್‌ವರೆಗೆ 144 ಸೆಕ್ಷನ್ ಜಾರಿ ಮಾಡಿ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. 9:30ಕ್ಕೆ ಅಭ್ಯರ್ಥಿಗಳನ್ನು ಎಕ್ಸಾಮ್ ಹಾಲ್‌ಗೆ ಬಿಟ್ಟು ಎರಡೂ ಪತ್ರಿಕೆಗಳು ಮುಗಿದ ಬಳಿಕ ಮಧ್ಯಾಹ್ನ 2:30ಕ್ಕೆ ಹೊರಗೆ ಬಿಡಲಾಗಿದೆ. ಈ ಮೂಲಕ ಈ ಬಾರಿ ಯಾವುದೇ ಅಕ್ರಮ, ಅನುಮಾನ ಗೊಂದಲಗಳಿಗೆ ಅವಕಾಶ ನೀಡದಂತೆ ಕೆಇಎ ಪರೀಕ್ಷೆ ನಡೆಸಿದೆ.

Read More

ಬಾಗಲಕೋಟೆ:- ಬಿಜೆಪಿ ಮುಖಂಡ ಮುರುಗೇಶ್ ನಿರಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿದ್ದಾರೆ. ತಾಯಿ ಕಳೆದುಕೊಂಡ ಹಿನ್ನೆಲೆ, ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ. ತಮ್ಮ ತಾಯಿ ಸುಶಿಲಾತಾಯಿ ಅವರು ವಿಧಿವಶರಾದ ಸುದ್ದಿ ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ಅಗಲಿಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ, ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ. ತಾಯಿ ಹೃದಯಕ್ಕೆ ಈ ಜಗತ್ತಿನಲ್ಲಿ ಯಾವುದನ್ನು ಹೋಲಿಸೋದಕ್ಕೆ ಸಾಧ್ಯವಿಲ್ಲ. ತಾಯಿ ಎಂದು ಮರಳಿ ಸಿಗದ ಕೊಡುಗೆ ಇದ್ದ ಹಾಗೆ. ತಾಯಿ ಸದಾ ನೆರಳು ನೀಡುವ ಮರದಂತೆ. ಅವರು ಕುಟುಂಬದ ಜೊತೆ ತಮ್ಮ ನೆನಪನ್ನು ಬಿಟ್ಟು ಹೋಗಿದ್ದಾರೆ. ಅವರು ಅಜರಾಮರ ಎಂದು ಮೋದಿ ಪತ್ರದ ಮೂಲಕ ಸಾಂತ್ವನ ಹೇಳಿದ್ದಾರೆ. ಈ ಸಾಂತ್ವದ ಪತ್ರವನ್ನು ಮುರುಗೇಶ್ ನಿರಾಣಿ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡು, ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

Read More

ಚಿಕ್ಕಬಳ್ಳಾಪುರ:- ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ 11 ದಿನಗಳ ಕಾಲ ಉಪವಾಸ ವ್ರತ ಮಾಡಿದ್ದೇ ಅನುಮಾನ ಎಂದು ಮಾಜಿ ಸಿಎಂ ವೀರಪ್ಪಮೊಯ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಬರೀ ಎಳನೀರು ಕುಡಿದು ಉಪವಾಸ ಮಾಡಿದ್ರೆ ಮನುಷ್ಯ ಒಂದೆರೆಡು ದಿನದಲ್ಲಿ ಕೆಳಗೆ ಬೀಳುತ್ತಾನೆ. 11 ದಿನಗಳ ಕಾಲ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದರು ನಾನು ಬೆಳಗ್ಗೆ ವಾಕಿಂಗ್ ಮಾಡಬೇಕಾದರೆ ವೈದ್ಯರ ಬಳಿ ಈ ಬಗ್ಗೆ ಚರ್ಚೆ ಮಾಡಿದೆ. ವೈದ್ಯರ ಅಭಿಪ್ರಾಯದ ಪ್ರಕಾರ ಮನುಷ್ಯ ಬದುಕೋದು ಅಸಾಧ್ಯ. ಹಾಗಾಗಿ ನರೇಂದ್ರ ಮೋದಿಯವರು ಉಪವಾಸ ವ್ರತ ಮಾಡಿರೋದು ಅನುಮಾನ. ಹಾಗೆ ಉಪವಾಸ ಮಾಡದೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ರೆ ಆ ಕ್ಷೇತ್ರಕ್ಕೆ ಎಷ್ಟು ಪಾವಿತ್ರತ್ಯತೆ ಬರಲಿದೆ ಎಂದು ಪ್ರಶ್ನಿಸಿದರು

Read More

ಹಾವೇರಿ:- ಹಾವೇರಿಯಲ್ಲಿ ಅಣ್ಣ ತಮ್ಮಂದಿರು ಜಮೀನಿಗೆ ನೀರು ಹಾಯಿಸುವ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಒಂದು ಕ್ಷಣದ ಸಿಟ್ಟು ಅದೆಂಹತ ಅನಾಹುತಕ್ಕೆ ಸಾಕ್ಷಿಯಾಗುತ್ತೆ ಅನ್ನುವುದಕ್ಕೆ ಈ ಘಟನೆ ಸಾಕ್ಷಿ. ಇಲ್ಲಿ ಹೆಣವಾದ ವ್ಯಕ್ತಿಯ ಹೆಸರು ನಾಗಪ್ಪ ಬೆನಕನಹಳ್ಳಿ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ನಿವಾಸಿ. ಇವರು ಐದು ಜನ ಅಣ್ಣ ತಮ್ಮಂದಿರು ಎಲ್ಲರೂ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಎಲ್ಲರಿಗೂ ಮೂರು ಎಕರೆ ಜಮೀನು ಬಂದಿತ್ತು. ಅದರಲ್ಲಿ ಎಲ್ಲರೂ ಒಂದೊಂದು ಕೊಳವೆ ಬಾವಿ ಕೊರೆಸಿಕೊಂಡು ಜಮೀನು ಉಳುಮೆ ಮಾಡುತ್ತಿದ್ದರು. ಆದರೆ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಮೃತ ನಾಗಪ್ಪನ ತಮ್ಮ ಯಲ್ಲಪ್ಪ ತನ್ನ ಕೊಳವೆ ಬಾವಿಯಲ್ಲಿ ನೀರು ಕಡಿಮೇ ಆಗಿದಕ್ಕೆ ಅಣ್ಣನ ಜಮೀನಲ್ಲಿದ್ದ ನೀರು ಕದ್ದುಮುಚ್ಚಿ ಹಾಯಿಸಿಕೊಳ್ಳುತ್ತಿದ್ದನಂತೆ. ಇದನ್ನು ಪ್ರಶ್ನೆ ಮಾಡಿದ ಅಣ್ಣನನ್ನ ಕಟ್ಟಿಗೆಯಿಂದ ಕೊಡೆದು ಕೊಲೆ ಮಾಡಿದ್ದಾನೆ ಎಂದು ಮೃತನ ಹೆಂಡತಿ ಆರೋಪ ಮಾಡುತ್ತಿದ್ದಾರೆ. ಒಂದಡೆ ಬರಗಾಲ, ಮತ್ತೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ. ಹೀಗಾಗಿ ರೈತರು ತಮ್ಮ ಜಮೀನಿನಲ್ಲಿ…

Read More