Author: AIN Author

ಬೆಂಗಳೂರು:- ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್​​ಆ್ಯಪ್ ಅಥವಾ ವಾಟ್ಸ್​ಆ್ಯಪ್ ಪಿಂಕ್ ಅನ್ನು ಇನ್​ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್​ಆ್ಯಪ್ ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಉಲ್ಲೇಖಿಸಿದೆ. ನೀವು ಒಂದು ವೇಳೆ ವಾಟ್ಸ್​ಆ್ಯಪ್ ಪಿಂಕ್ ಇನ್​ಸ್ಟಾಲ್ ಮಾಡಿದ್ದೇ ಆದಲ್ಲಿ ಹ್ಯಾಕರ್​​ಗಳು ನಿಮ್ಮ ಫೋಟೊ, ಕಾಂಟ್ಯಕ್ಟ್​, ನೆಟ್​ ಬ್ಯಾಂಕಿಂಗ್ ಪಾಸ್ವರ್ಡ್​​ಗಳು, ಎಸ್​ಎಂಎಸ್​​ಗಳನ್ನು ಹ್ಯಾಕ್ ಮಾಡಲಿದ್ದಾರೆ ಎಂದು ಕರ್ನಾಟಕ ಪೊಲೀಸ್ ಎಚ್ಚರಿಕೆ ನೀಡಿದೆ. ವಂಚಕರು ನಿಮ್ಮ ಮೊಬೈಲ್​​ನ ಸಂಪೂರ್ಣ ದತ್ತಾಂಶಕ್ಕೆ ಕನ್ನ ಹಾಕುವ ಸಾಧ್ಯತೆ ಇದೆ. ಹೀಗಾಗಿ ಯಾರೂ ಕೂಡ ವಾಟ್ಸ್​ಆ್ಯಪ್ ಪಿಂಕ್ ಬಳಸಬೇಡಿ. ಒಂದು ವೇಳೆ ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದರೆ 1930 ಗೆ ಕರೆ ಮಾಡಿ ಎಂದು ಪೊಲೀಸರು ಸಲಹೆ…

Read More

ಮೈಸೂರು:- ಗಾಂಜಾ ಮಾರಾಟ ಆರೋಪ ಸಂಬಂಧ ಮೈಸೂರಿನ ಕಾವೇರಿನಗರದ ಗೋದಾಮಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹದೇವಪುರ ಮುಖ್ಯರಸ್ತೆಯ ಕಾವೇರಿನಗರದಲ್ಲಿರುವ ಗೋದಾಮಿನಲ್ಲಿ ಗಾಂಜಾ ಸಂಗ್ರಹಣೆ ಮಾಡಿಟ್ಟಿದ್ದ ವಿಚಾರ ತಿಳಿದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಸಿಸಿಬಿ ಪೊಲೀಸರು 20.19 ಲಕ್ಷ ಮೌಲ್ಯದ 57 ಕೆ.ಜಿ. 700 ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ. ಆಸೀಮ್​​, ನದೀಮ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಫರ್ಜು ಪರಾರಿಯಾಗಿದ್ದಾನೆ.

Read More

ಮೈಸೂರು:- ಆರೋಪಿಗೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಗಳ ಬಿಡಿಸಲು ಬಂದ ಪಕ್ಕದ ಮನೆಯ ಮಹಿಳೆಯನ್ನೇ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಆರೋಪಿ ಆಲ್ವಿನ್ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದು, 50 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಅಪರಾಧಿ ಆಲ್ವಿನ್ 2020ರ ಅಕ್ಟೋಬರ್ 17 ರಂದು ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದನು. ಈ ವೇಳೆ ಪಕ್ಕದ ಮನೆಯ ಮಹಿಳೆ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಆಲ್ವಿನ್, ಆ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು.

Read More

ಮುಂಬೈ: ಮಹಿಳೆಯಿಂದ ಪುರುಷನಾಗುವ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಾರಾಷ್ಟ್ರದ (Maharashtra) ಬೀಡ್ ಜಿಲ್ಲೆಯ ಲಲಿತ್ ಸಾಳ್ವೆ (Lalit Salve) ಎಂಬ ಪೊಲೀಸ್ ಪೇದೆ (Police Constable) ಇದೀಗ ತಂದೆಯಾಗಿದ್ದಾರೆ. ಲಲಿತ್ ಸಾಳ್ವೆ (36) ಅವರು 2020 ರಲ್ಲಿ ವಿವಾಹವಾಗಿದ್ದರು. ಇದೀಗ ಜನವರಿ 15 ರಂದು ಗಂಡು ಮಗುವಿಗೆ ತಂದೆಯಾದರು. ದಂಪತಿ ತಮ್ಮ ಮಗನಿಗೆ ಆರುಷ್ ಎಂದು ಹೆಸರಿಡಲು ನಿರ್ಧರಿಸಿದ್ದಾರೆ. ಹೆಣ್ಣಿನಿಂದ ಪುರುಷನಾಗುವ ನನ್ನ ಪ್ರಯಾಣವು ಹೋರಾಟಗಳಿಂದ ತುಂಬಿತ್ತು. ಈ ಸಮಯದಲ್ಲಿ ನನ್ನನ್ನು ಅನೇಕ ಜನ ಬೆಂಬಲಿಸಿದ್ದಾರೆ. ನನ್ನ ಹೆಂಡತಿ ಸೀಮಾ ಮಗುವನ್ನು ಹೊಂದಲು ಬಯಸಿದ್ದಳು. ನಾನು ಈಗ ತಂದೆಯಾಗಿದ್ದೇನೆ ಎಂದು ನನಗೆ ಸಂತೋಷವಾಗಿದೆ. ನನ್ನ ಕುಟುಂಬ ಇದರಿಂದ ಸಂಭ್ರಮದಲ್ಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. https://ainlivenews.com/do-you-know-how-much-ambani-family-donated-to-ayodhya-ram-mandir/ ಲಲಿತ್ ಸಾಳ್ವೆ (ಹಿಂದಿನ ಲಲಿತಾ) ಜೂನ್ 1988ರಲ್ಲಿ ಜನಿಸಿದ್ದರು. 2010ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು. ಮಹಿಳೆಯಾಗಿ ಬೆಳೆದ ಸಾಲ್ವೆ ಅವರು 2013ರಲ್ಲಿ ತಮ್ಮ ದೇಹದಲ್ಲಿ ಕೆಲವು ಬದಲಾವಣೆಗಳನ್ನು ಕಂಡುಕೊಂಡ ಬಳಿಕ, 2017ರಲ್ಲಿ ಕ್ಯಾರಿಯೋಟೈಪಿಂಗ್ (ಸಂಪೂರ್ಣ ಕ್ರೋಮೋಸೋಮ್ ಪೂರಕ…

Read More

ಅಂಕೋಲಾ: ಮುಂದಿನ ದಿನಗಳಲ್ಲಿ ಯಾವ ಶಾಲೆ ಮಕ್ಕಳು ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಮಾಡಬಾರದು. ಸುಸಜ್ಜಿತ ಆಸನಗಳ ವ್ಯವಸ್ಥೆ ಸರ್ಕಾರದಿಂದಲೇ ಜಾರಿಯಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಯಾವ ಶಾಲೆ ಮಕ್ಕಳು ನೆಲದ ಮೇಲೆ ಕುಳಿತು ವಿದ್ಯಾರ್ಜನೆ ಮಾಡಬಾರದು. ಸುಸಜ್ಜಿತ ಆಸನಗಳ ವ್ಯವಸ್ಥೆ ಸರ್ಕಾರದಿಂದಲೇ ಜಾರಿಯಾಗಲಿದೆ.  ಇಂತಹ ಸೌಕರ್ಯಗಳಿಂದ ಮುಂದೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಓಡೋಡಿ ಬರುತ್ತಾರೆ ಎಂದರು. ನಾನು ಈ ಸ್ಥಾನದಲ್ಲಿ ಇದ್ದೇನೆ ಎಂದರೆ ಅದು ದೇವದತ್ತ ಕಾಮತ ಅವರ ಕೊಡುಗೆ. ನಾನು ಯಾವ ಪಕ್ಷ ಅನ್ನುವುದಕ್ಕಿಂತ ಬಂಗಾರಪ್ಪನವರ ಪಕ್ಷವಾಗಿದೆ. ಅವರು ಎಲ್ಲಿದ್ದಾರೋ ಅಲ್ಲಿ ನಾನಿದ್ದೆ. https://ainlivenews.com/do-you-know-how-much-ambani-family-donated-to-ayodhya-ram-mandir/ ಇಂತಹ ಸ್ಥಾನದಲ್ಲಿ ಇದ್ದೇನೆ ಎಂದರೆ ಅದು ಹಲವರ ಮಾರ್ಗದರ್ಶನ ಮತ್ತು ಕೊಡುಗೆಯಾಗಿದೆ ಎಂದು ಹೇಳಿದರು.  ಡಾ. ದಿನಕರ ದೇಸಾಯಿ ಅವರಂತಹ ಅನೇಕ ಮಹಾನುಭಾವರ ಉದಾತ್ತ ಯೋಚನೆ, ಶೈಕ್ಷಣಿಕ ಪ್ರೀತಿಯಿಂದ ಕೋಟ್ಯಂತರ ವಿದ್ಯಾರ್ಥಿಗಳು ಈ ದೇಶಕ್ಕೆ ತಮ್ಮದೇ ಆದ ಕೊಡುಗೆ…

Read More

ಅಯೋಧ್ಯೆಯ ರಾಮಮಂದಿರದಲ್ಲಿ ‘ಪ್ರಾಣ-ಪ್ರತಿಷ್ಠಾ’ ಸಮಾರಂಭ ನಡೆದಿದ್ದು ಇಡೀ ರಾಷ್ಟ್ರವೇ  ಬೆರಗಾಗಿದೆ. ಗುಜರಾತ್‌ನ ಉದ್ಯಮಿಯೊಬ್ಬರು ತಮ್ಮ ಜಾಗ್ವಾರ್‌ನಲ್ಲಿ ಭಗವಾನ್ ರಾಮನ ಥೀಮ್ ಅನ್ನು ಸುತ್ತಿಕೊಂಡಿದ್ದಾರೆ.  ನಾವು ಸಾರ್ವಜನಿಕ ಸ್ಥಳಗಳು, ದೇಶಾದ್ಯಂತ ದೇವಾಲಯಗಳು ಮತ್ತು ಮಾರುಕಟ್ಟೆಗಳಲ್ಲಿ ಧ್ವಜಗಳು, ಭಂಗಿಗಳು, ದೀಪಗಳು, ಅಲಂಕಾರಗಳು ಇತ್ಯಾದಿಗಳನ್ನು ನೋಡುತ್ತೇವೆ. ಈ ಸಮಾರಂಭಕ್ಕಾಗಿ ಜನರು ಎಲ್ಲಾ ರೀತಿಯ ಚಟುವಟಿಕೆಗಳನ್ನು ನಡೆಸಿದ್ದಾರೆ ಧಾರ್ಮಿಕ ಗುಂಪುಗಳು ಮತ್ತು ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಪ್ರಮುಖ ಸೆಲೆಬ್ರಿಟಿಗಳು ಇಂದು ದೊಡ್ಡ ಪ್ರಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಇದೆಲ್ಲದರ ನಡುವೆ ಭಕ್ತಿಯನ್ನು ಪ್ರದರ್ಶಿಸಲು ಒಂದು ವಿನೂತನ ಮಾರ್ಗ ಆಯ್ಕೆ ಮಾಡಿಕೊಂಡಿದ್ದೆ ಅಚ್ಚರಿ! ಇದು ಈ ವಿಶಿಷ್ಟ ಐಷಾರಾಮಿ ಕಾರಿನ ಚಿತ್ರಗಳನ್ನು ಮತ್ತು ವೀಡಿಯೊವನ್ನು ಸೆರೆಹಿಡಿಯುತ್ತದೆ.  ಮಾಹಿತಿ ಪ್ರಕಾರ, ಈ ಜಾಗ್ವಾರ್ ಗುಜರಾತ್‌ನ ನಿರ್ದಿಷ್ಟ ಉದ್ಯಮಿಗೆ ಸೇರಿದೆ. ಈ ಹೊದಿಕೆಯಲ್ಲಿ ವಿವರಗಳಿಗೆ ಸಮರ್ಪಣೆ ಮತ್ತು ಗಮನವನ್ನು ನೋಡಬಹುದು. ಬಾನೆಟ್ ಮೇಲೆ, ನಾವು ದೇವಾಲಯದ ಸಂಕೀರ್ಣದ ಚಿತ್ರವನ್ನು ವೀಕ್ಷಿಸುತ್ತೇವೆ. ಕಾರಿನ ಗ್ರಿಲ್‌ಗೆ ರಾಮಮಂದಿರ ಧ್ವಜವನ್ನು ಜೋಡಿಸಲಾಗಿದೆ. ನಿಸ್ಸಂಶಯವಾಗಿ, ಕಾರಿನ ಬಣ್ಣ…

Read More

ಫೆಬ್ರವರಿ 16ರಂದು ದಾಸ ದರ್ಶನ್ (Darshan) ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳಿಗೆ ದರ್ಶನ್ ಸಂದೇಶವೊಂದನ್ನು ರವಾನಿಸಿದ್ದು, ಯಾರೂ ಕೇಕ್ ಮತ್ತು ಬ್ಯಾನರ್ ಕಟ್ಟದಂತೆ ಹೇಳಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಡೆವಿಲ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆ ಇದೆಯಂತೆ. ಈ ಹಿಂದೆ ಪ್ರಕಾಶ್ ವೀರ್ (Prakash Veer) ಅನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿದೆ. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದವು. ಆದರೆ, ಈ ಕುರಿತು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದರು. ಶುಭದಿನವೆಂದು ಡೆವಿಲ್ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಆದರೆ, ಚಿತ್ರದ ಫಸ್ಟ್ ಲುಕ್ (First Look) ಆಗಲಿ, ಪೋಸ್ಟರ್ ಆಗಲಿ ಯಾವುದು ನಾವು ಬಿಡುಗಡೆ ಮಾಡಿಲ್ಲ. ಕಾಟೇರ ಚಿತ್ರದ ನಂತರ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ‌. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ…

Read More

ಬೆಂಗಳೂರು:- ಕರ್ನಾಟಕದಾದ್ಯಂತ ಚಳಿ ತಗ್ಗಿದ್ದು, ಚಳಿ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ದಾಖಲಾಗಿದೆ. ಕರ್ನಾಟಕದಾದ್ಯಂತ ಚಳಿ ಸ್ವಲ್ಪ ಕಡಿಮೆಯಾಗಿದ್ದು, ಗರಿಷ್ಠ ಉಷ್ಣಾಂಶ ಹೆಚ್ಚಿದೆ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಇರಲಿದೆಇರಲಿದೆ ಬೆಳಗಾವಿ ಏರ್​ಪೋರ್ಟ್​ನಲ್ಲಿ 10.6 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದ್ದು, 29 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್​ಎಎಲ್​ನಲ್ಲಿ 30.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.2 ಡಿಗ್ರಿ ಸೆಲ್ಸಿಯಸ್​…

Read More

ದಿಯಾ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಗುರುತಿಸಿಕೊಂಡವರು ಖುಷಿ ರವಿ (Khushi Ravi). ದಿಯಾ ಬಳಿಕ ಕನ್ನಡದ ಜೊತೆಗೆ ಪರಭಾಷಾ ಚಿತ್ರಗಳಲ್ಲಿಯೂ ನಟಿಸುತ್ತಿರುವ ಅವರೀಗ ಮತ್ತೊಂದು ಕನ್ನಡದ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದೇ ‘S/O ಮುತ್ತಣ್ಣ’. ಯಂಗ್ ಡೈನಾಮಿಕ್ ಎಂದೇ ಕರೆಸಿಕೊಳ್ಳುತ್ತಿರುವ ಪ್ರಣಂ ದೇವರಾಜ್  ನಾಯಕನಾಗಿ ನಟಿಸಿತ್ತಿರುವ ಈ ಸಿನಿಮಾದಲ್ಲಿ ಖುಷಿ ರವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬದ  (Birthday)ಅಂಗವಾಗಿ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದ್ದು, ಸ್ಪೆಷಲ್ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆ ಮಾಡಿ ಶುಭ ಕೋರಿದೆ. ಪುರಾತನ ಫಿಲ್ಮಂಸ್ ಬ್ಯಾನರ್ ಅಡಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ‘S/O ಮುತ್ತಣ್ಣ’ (S/O Muttanna) ಸಿನಿಮಾಗೆ ಶ್ರೀಕಾಂತ್ ಹುಣಸೂರು ಆಕ್ಷನ್ ಕಟ್ ಹೇಳುತ್ತಿದ್ದರೆ. ದೇವರಾಜ್ ಪುತ್ರ ಮತ್ತೊಮ್ಮೆ ಈ ಸಿನಿಮಾದ ಮೂಲಕ ಗೆಲುವಿನ ಪರೀಕ್ಷೆಗೆ ಮುಂದಾಗಿದ್ದಾರೆ.

Read More

ಭಾರತ ತಂಡದ ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರನ್ನು ಐಸಿಸಿ ವರ್ಷದ ಟಿ20 ತಂಡದ ನಾಯಕರಾಗಿ ಹೆಸರಿಸಲಾಗಿದೆ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಟೋಯಿ ಮತ್ತು ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಅವರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಸತತ ಎರಡನೇ ಬಾರಿಗೆ ಸೂರ್ಯಕುಮಾರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಟಿ20 ವರ್ಷದ ಕ್ರಿಕೆಟಿಗ ರೇಸ್‌ನಲ್ಲೂ ಅವರು ಇದ್ದಾರೆ. 2023ರಲ್ಲಿ ಅವರು ಉತ್ತಮ ರನ್ ಗಳಿಕೆ ಮೂಲಕ ಹೆಸರು ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ವರ್ಷದ ಮೊದಲ ಪಂದ್ಯದಲ್ಲಿ ಕೇವಲ 7 ರನ್ ಸಿಡಿಸಿದ್ದ ಸೂರ್ಯ, ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 5 ಮತ್ತು 112 ರನ್ ಸಿಡಿಸಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 20 ಮತ್ತು 40 ಆಸುಪಾಸಿನಲ್ಲಿ ಔಟಾಗಿದ್ದ ಅವರು 44 ಎಸೆತಗಳಲ್ಲಿ 83 ರನ್ ಸಿಡಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಕಳೆದ ವರ್ಷದಲ್ಲಿ ರೋಹಿತ್ ಶರ್ಮಾ ಗಾಯಗೊಂಡಾಗ ಸೂರ್ಯ, ಟಿ20 ತಂಡವನ್ನು ಮುನ್ನಡೆಸಿದ್ದಾರೆ.

Read More