Author: AIN Author

ಬೆಂಗಳೂರು: ಅಮಾಯಕನ ಮೇಲೆ ಪೊಲೀಸರೇ ಹಲ್ಲೆ ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಯಾರೋ ಮಾಡಿದ ತಪ್ಪಿಗೆ ಅಮಾಯಕ ವ್ಯಕ್ತಿಯನ್ನು ಕಾಟನ್‍ಪೇಟೆ ಪೊಲೀಸರು ಠಾಣೆಗೆ (Cottonpet Police Station) ಕರೆದೊಯ್ಯದೇ ಲಾಡ್ಜ್ ಗೆ ಕರೆದೊಯ್ದು 3 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಕಾಟನ್ ಪೇಟೆ ಸಬ್‍ಇನ್ಸ್ ಪೆಕ್ಟರ್ ಸಂತೋಷ್ ಗೌಡ, ಸಿಬ್ಬಂದಿ ಧ್ಯಾನ್ ಪ್ರಕಾಶ್ ಹಾಗೂ ಸಚಿನ್ ವಿರುದ್ಧ ವೆಂಕಟ್ ಎಂಬವರು ದೂರು ನೀಡಿದ್ದಾರೆ. ಜೊತೆಗೆ ಪೊಲೀಸ್ ಕಮಿಷನರ್ ಹಾಗೂ ಮಾನವಹಕ್ಕುಗಳ ಆಯೋಗಕ್ಕೂ ಕೋಣನಕುಂಟೆ ನಿವಾಸಿ ವೆಂಕಟ್ ದೂರು ನೀಡಿದ್ದಾರೆ. ಆರೋಪ ಏನು..?: ಕಳೆದ ಜನವರಿ 12 ರಂದು ಬೆಂಗಳೂರಿನಿಂದ ಮುಳಬಾಗಿಲಿಗೆ ವೆಂಕಟೇಶ್ ತೆರಳಿದ್ದರು. ಮುಳಬಾಗಿಲಿನ ಪಕ್ಕದ ತನ್ನ ಹುಟ್ಟೂರಾದ ಬೇವಳ್ಳಿಗೆ ತೆರಳಲು ಮಣಿ ಎಂಬಾತನಿಂದ ಡ್ರಾಪ್ ಪಡೆಯುತ್ತಿದ್ದರು. ಈ ಮಣಿ ಎಂಬಾತನ ವಿರುದ್ಧ ಕಾಟನ್ ಪೇಟೆ ಠಾಣೆಯಲ್ಲಿ 420 ಅಡಿ ಕೇಸ್ ದಾಖಲಾಗಿತ್ತು. ಮಣಿಯನ್ನ ಹುಡುಕಾಡ್ತಿದ್ದ ಕಾಟನ್ ಪೇಟೆ ಪೊಲೀಸರಿಗೆ ಮಣಿ ಲೊಕೇಷನ್ ಮುಳಬಾಗಿಲು ತೋರಿಸಿತ್ತು

Read More

ಮೈಸೂರು, ಜನವರಿ 24: ಬಿಜೆಪಿಯವರು ನ್ಯಾಯ ಯಾತ್ರೆಗೆ ಉದ್ದೇಶಪೂರ್ವಕವಾಗಿಯೇ ಸಮಸ್ಯೆಗಳನ್ನು ಉಂಟುಮಾಡುತ್ತಿದ್ದಾರೆ. ಇದು ಸಂವಿಧಾನಬಾಹಿರವಾದ ಕ್ರಮ. ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಹೀಗೆಲ್ಲಾ ನಡೆದುಕೊಳ್ಳಬಾರದು. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಪಿರಿಯಾಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. https://ainlivenews.com/peanut-is-good-for-health-but-if-people-with-this-problem-eat-it-there-is-no-danger/ ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಗೆ ತಡೆಯೊಡ್ಡಿರುವ ಅಸ್ಸಾಂ ಸರ್ಕಾರದ ನಡೆಯ ಬಗ್ಗೆ ಪ್ರಧಾನಿಗಳು ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ನೀಡಿಲ್ಲ ಎಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪ್ರತಿ ನಾಗರಿಕನಿಗೂ ಪಾದಯಾತ್ರೆ ಕೈಗೊಳ್ಳಲು ಅಥವಾ ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸ್ವಾತಂತ್ರ್ಯವನ್ನು ಸಂವಿಧಾನ ಕೊಟ್ಟಿದೆ. ರಾಹುಲ್ ಗಾಂಧಿಯವರು ದೇಶದ ಜನರ ಸಮಸ್ಯೆಗಳನ್ನು ಅರಿಯಲು ಹಾಗೂ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಪ್ರಚೋದನೆ ನೀಡುವುದು ಸಂವಿಧಾನಬಾಹಿರ ನೆಹರೂ ಕುಟುಂಬಕ್ಕೆ ಬೆದರಿಕೆಯಿದ್ದು, ಭಾರತ ಸರ್ಕಾರ ಹಾಗೂ ಅಸ್ಸಾಂ ರಾಜ್ಯ ಸರ್ಕಾರಗಳು ರಾಹುಲ್ ಗಾಂಧಿಯವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕಾಗಿರುವುದು ಅವರ ಕರ್ತವ್ಯ. ಇದು…

Read More

ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಟ್ಟಿ ಪ್ರಕಟವಾಗಿದೆ. ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಸಂದಿವೆ. ಆದರೆ, ಈ ಬಾರಿ ಆಸ್ಕರ್ ನಾಮಿನೇಟ್ ಪಟ್ಟಿಯಲ್ಲಿ ಭಾರತದ ಯಾವುದೇ ಸಿನಿಮಾಗಳು ಇರದೇ ಇರುವುದು ಸಹಜವಾಗಿಯೇ ನಿರಾಸೆ ತಂದಿದೆ. ಹಾಗಂತ ತೀರಾ ನಿರಾಸೆ ಪಟ್ಟುವಂಥದ್ದು ಇಲ್ಲ. ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ, ಭಾರತದಲ್ಲೇ ನಿರ್ಮಾಣವಾದ, ವಿದೇಶಿ ಸಂಸ್ಥೆ ತಯಾರಿಸಿದ ಡಾಕ್ಯುಮೆಂಟರಿ ನಾಮ ನಿರ್ದೇಶನ ಪಟ್ಟಿಯಲ್ಲಿದೆ ಅತ್ಯುತ್ತಮ ಸಿನಿಮಾ ಪಟ್ಟಿಯಲ್ಲಿ ದಿ ಜೋನ್ ಆಫ್ ಇಂಟರೆಸ್ಟ್, ಬಾರ್ಬಿ, ಮಾಸ್ಟ್ರೊ, ಓಪನ್ ಹೈಮರ್, ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದ್ದರೆ, ಅತ್ಯುತ್ತಮ ನಟ ವಿಭಾಗದಲ್ಲಿ ಜೆಫ್ರಿ ರೈಟ್, ಬ್ರ್ಯಾಡ್ಲಿ ಕೂಪರ್, ಪಾಲ್ ಗಿಯಾಮಟ್ಟಿ, ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ. ನಿರ್ದೇಶನದ ವಿಭಾಗದಲ್ಲಿ ಕ್ರಿಸ್ಟೊಫರ್ ನೋಲನ್, ಜಸ್ಟಿನ್ ಟ್ರೈಟ್, ಜೊನಥನ್ ಗ್ಲೆಜರ್, ಯೊಗೊರ್ಸ್ ಲ್ಯಾಂತಿಮೋಸ್ ಕಾಣಿಸಿಕೊಂಡಿದ್ದಾರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಕ್ಯಾರಿ  ಮುಲ್ಲಿಗನ್, ಆನೆಟ್ ಬೆನಿಂಗ್, ಎಮ್ಮ…

Read More

ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿಖಾನ್ (Saif Ali Khan) ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ ಎನ್ನುವ ಮಾಹಿತಿ ಇತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿತ್ತು. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ (Hospital) ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಈ ಕುರಿತಂತೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ ಸ್ವತಃ ಸೈಫ್ ಅಲಿ ಖಾನ್ ಅವರೇ ಈ ಕುರಿತಂತೆ ಮಾತನಾಡಿದ್ದಾರೆ. ಜೊತೆಗೆ ಆಸ್ಪತ್ರೆಯಿಂದ ಮನೆಗೂ ಮರಳಿದ್ದಾರೆ. ಸೈಫ್ ಅವರ ಮೊಣಕಾಲಿಗೆ ಗಂಭೀರ ಗಾಯವಾಗಿ, ಭುಜದ ಮೂಳೆ ಕೂಡ ಮುರಿದಿದೆ ಎಂದು ಹೇಳಲಾಗಿತ್ತು. ಗಂಭೀರವಾಗಿಯೇ ಗಾಯವಾಗಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನುವ ವದಂತಿಗಳು ಹಬ್ಬಿದ್ದವು. ಆದರೆ, ಕೈಗೆ ಮಾತ್ರ ಪೆಟ್ಟಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಉಳಿದಂತೆ ಭುಜದ ಮೂಳೆಗೆ ಯಾವುದೇ ಸಮಸ್ಯ ಆಗಿಲ್ಲ. ದೇವರ ಸಿನಿಮಾದ ಶೂಟಿಂಗ್ ವೇಳೆ ಅಪಘಾತವಾಗಿತ್ತು. ನಂತರದ ದಿನಗಳಲ್ಲಿ ಕೈ ನೋವು ಕಾಣಿಸಿಕೊಂಡಿದ್ದರಿಂದ ಸೈಫ್ ಆಸ್ಪತ್ರೆಗೆ ದಾಖಲಾಗಿದ್ದರು.…

Read More

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ. ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಹೇಳಿದ್ದಾರೆ. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೆ ನಮಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇರುತ್ತಾ ಎಂಬ ಸಚಿವ ರಾಜಣ್ಣ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಗೆದ್ದಿದ್ದೇವೆ ಅಂತ ವಿಶ್ವಾಸ ಇದೆ. 28 ಸೀಟ್ ಗೆಲ್ಲಬೇಕೆಂದು ಬಯಸಿದ್ದೇವೆ. ಈ ಹಿಂದೆ ಕಾಂಗ್ರೆಸ್ ಪಕ್ಷ 27 ಸೀಟ್ ಗೆದ್ದಿದ್ದನ್ನು ಸ್ಮರಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಎಂಟು ತಿಂಗಳಲ್ಲಿ ಜನಪರ ಆಡಳಿತ ನೀಡಿರುವುದರಿಂದ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More

ಬೆಂಗಳೂರು: ಮುದ್ರಾ ಯೋಜನೆಯಲ್ಲಿ ಲೋನ್ ಪಡೆಯಲು ಅನ್ಲೈನ್ ನಲ್ಲಿ ಸರ್ಚ್ ಮಾಡುವವರೇ ಎಚ್ಚರ ಯಾಕಂದರೆ  ಪ್ರಧಾನಮಂತ್ರಿ ಮುದ್ರಾ ಯೋಜನೆಯ ಹೆಸರಲ್ಲಿ ಸಾಲ ನೀಡೋದಾಗಿ ಸೈಬರ್ ಫ್ರಾಡ್ ಮಾಡುತ್ತಿದ್ದಾರೆ ಆರ್ ಬಿ ಐ ಹಾಗೂ ಮುದ್ರಾಯೋಜನೆಯ ನಕಲಿ ಲೆಟರ್ ಹೆಡ್ ಬಳಸಿ ವಂಚನೆ ನಡೆಸುತ್ತಿದ್ದು  ಓರಿಜಿನಲ್ ಲೆಟರ್ ಹೆಡ್ ಗಳನ್ನೂ ಮೀರಿಸುವಂತಿದೆ ಈ ಲೆಟರ್ ಗಳು ಆಗಿದ್ದು  ಪ್ರಧಾನ ಮಂತ್ರಿ ಮುದ್ರಾಯೋಜನೆಯ ನಕಲಿ ಬಾಂಡ್ ಕಳಿಸಿ ಮೋಸ 2% ಬಡ್ಡಿಗೆ ಸಾಲ 10 ಲಕ್ಷ ಸಾಲ ನೀಡೋದಾಗಿ ಹೇಳಿ ವಂಚನೆ‌ ಮಾಡುತ್ತಿದ್ದಾರೆ. ಆರ್ ಬಿ ಐ ನಿಂದ ಲೋನ್ ಸಾಂಕ್ಷನ್ ಆಗಿದೆ ಎಂದು ನಕಲಿ ಕನ್ಪರ್ ಮೆಷನ್ ಲೆಟರ್ ಕಳುಹಿಸಿದ್ದ ವಂಚಕರು‌‌‌‌‌‌ ಮೊದಲಿಗೆ ಫೀಸ್ ಎಂದು 10 ಸಾವಿರ ಹಣ ಹಾಕಿಸಿಕೊಂಡಿದ್ದ ಖದೀಮರು ಬೈಕ್ ಮಾರಿ ಅಕೌಂಟ್ ಗೆ ಹಣ ಹಾಕಿದ್ದ ನಾರಾಯಣ ಸ್ವಾಮಿ ಹಂತ ಹಂತವಾಗಿ ಹಣ ಪಡೆದು ನೀಡಿದ್ರೂ ನಕಲಿ ಬಾಂಡ್ ಪೇಪರ್ ಗಳು ನಾರಾಯಣ ಸ್ವಾಮಿಗೆ ನಂಬಿಕೆ ಬರಲು…

Read More

ಮೈಸೂರು: ತಂಗಿ ಅನ್ಯಧರ್ಮೀಯ ಯುವಕನನ್ನು ಲವ್ ಮಾಡುತ್ತಿದ್ದಳೆಂಬ ಒಂದೇ ಕಾರಣಕ್ಕೆ ಅಣ್ಣನೊಬ್ಬ ಆಕೆಯೊಂದಿಗೆ ತನ್ನ ತಾಯಿಯನ್ನೂ ಕೆರೆಗೆ ತಳ್ಳಿ ಕೊಂದ ದಾರುಣ ಘಟನೆ ಜಿಲ್ಲೆ ಹುಣಸೂರು ತಾಲ್ಲೂಕಿನ ಮರೂರು ಗ್ರಾಮದಲ್ಲಿ ಜರುಗಿದೆ. ಕೆರೆಯಲ್ಲಿ ಮುಳುಗಿ ಸತ್ತವರನ್ನು 19-ವರ್ಷ-ವಯಸ್ಸಿನ ಯುವತಿ ಧನುಶ್ರೀ ಮತ್ತು 43-ವರ್ಷ ವಯಸ್ಸಿನ ಅನಿತಾ ಎಂದು ಗುರುತಿಸಲಾಗಿದೆ. ಅವರನ್ನು ಕೆರೆಗೆ ತಳ್ಳಿದ ಆರೋಪ ಹೊತ್ತಿರುವ ಯುವಕನ ಹೆಸರು ನಿತಿನ್. ಕಾಲೇಜಿನಲ್ಲಿ ಓದುತ್ತಿರುವ ಧನುಶ್ರೀ ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಇದು ಊರಿನಲ್ಲೂ ಸುದ್ದಿಯಾಗಿತ್ತು. ಅಣ್ಣ ನಿತಿನ್‌ ಇದನ್ನು ಆಕ್ಷೇಪಿಸಿದ್ದ. ಈ ವಿಚಾರದಲ್ಲಿ ಅಣ್ಣ ತಂಗಿಯರ ನಡುವೆ ವೈ ಮನಸ್ಸು ಬೆಳೆದಿತ್ತು. ಎಷ್ಟು ಹೇಳಿದರೂ ತನ್ನ ಮಾತನ್ನು ಕೇಳದೆ ಅನ್ಯ ಕೋಮಿನ ಯುವಕನ ಜತೆಗಿನ ಸುತ್ತಾಟವನ್ನೇ ಮುಂದುವರಿಸಿದ ತಂಗಿಯ ಮೇಲೆ ಸಿಟ್ಟುಗೊಂಡ ನಿತಿನ್‌ ಆಕೆಯ ಪಾಠ ಕಲಿಸಲು ಮುಂದಾಗಿದ್ದಾನೆ. https://ainlivenews.com/peanut-is-good-for-health-but-if-people-with-this-problem-eat-it-there-is-no-danger/ ತಾಯಿ ಹಾಗೂ ತಂಗಿಯನ್ನು ಜತೆಯಾಗಿ ಬೈಕ್‌ನಲ್ಲಿ ಕರೆದೊಯ್ದ ನಿತಿನ್ ಒಂದು ಕೆರೆ ಬಳಿ ಬೈಕ್ ನಿಲ್ಲಿಸಿದ. ಮೊದಲು ತಂಗಿಯನ್ನು ಕೆರೆಗೆ…

Read More

 ಬೆಂಗಳೂರು: ಕಾಂಗ್ರೆಸ್ಸಿಗರು ಬಾಬರ್ ಸಂತತಿಯನ್ನು ಪ್ರೀತಿಸಿದಷ್ಟು ಅವರಪ್ಪನನ್ನು ಪ್ರೀತಿಸಿದ್ದಾರೋ ಇಲ್ಲವೋ ಗೊತ್ತಿಲ್ಲ ಎಂದು ಮಾಜಿ ಸಚಿವ ಸಿಟಿ ರವಿ  ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಮಮಂದಿರ ಮೂಲಕ ಪರಕೀಯರ ಆಕ್ರಮಣದಿಂದ ಕಳೆದುಕೊಂಡ ಸಾಂಸ್ಕೃತಿಕ ಬೀಜಾಂಕುರ ಆಗಿದೆ. ಬಾಬರ್ ಮತ್ತು ಅವನ ಸಂತಾನ ಓಲೈಸುವವರಿಗೂ ವೋಟ್ ಬ್ಯಾಂಕ್ ರಾಜಕೀಯದ ಅನಿವಾರ್ಯತೆ ಉಂಟಾಗಿದೆ. ರಾಮನನ್ನು ಬಿಟ್ಟರೆ ರಾಷ್ಟ್ರ ಇಲ್ಲ, ವೋಟ್ ಇಲ್ಲ ಎನ್ನುವುದು ಗೊತ್ತಾಗಿದೆ. ರಾಮ ಹುಟ್ಟಿದ ಜಾಗದಷ್ಟೇ ಕೃಷ್ಣನ ಮಥುರಾ ಕೂಡ ನಮಗೆ ಪವಿತ್ರ. ಜ್ಞಾನ ವಾಪಿಯಲ್ಲಿನ ನಂದಿ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದ್ದಾನೆ. ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ, ಸನಾತನಿಗಳ ವಿರುದ್ಧ ಮಾಡಿದ ಪಾಪ ನೀವು ಹೊತ್ತುಕೊಳ್ಳಬೇಡಿ. ಮಾಡಿದ ತಪ್ಪನ್ನು ಪ್ರಾಯಶ್ಚಿತ ಮಾಡಲು ಅವಕಾಶ ಇದೆ ಎಂದರು. ನಾನು ದೇವಸ್ಥಾನಕ್ಕೆ ಹೋಗಲ್ಲ, ಸಂವಿಧಾನ ಮುಖ್ಯ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಸಂವಿಧಾನ ನಮಗೂ ಮುಖ್ಯ. ಅದರ ಮೊದಲ ಪುಟದಲ್ಲೇ ರಾಮ ಇದ್ದಾನೆ. ಡಿಕೆಶಿ ರಾಮ ಯಾರಪ್ಪನ ಸ್ವತ್ತೂ ಅಲ್ಲ…

Read More

ಬೆಂಗಳೂರು: ಟ್ಯೂಷನ್ ಗೆ ಹೋಗಿದ್ದ 12 ವರ್ಷದ ಬಾಲಕ ಪರಿಣವ್ ನಿಗೂಢ ನಾಪತ್ತೆಯಾಗಿದ್ದು ಈಗ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ. ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ  ನಿಗೂಢವಾಗಿ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್​ನನ್ನು ಪೊಲೀಸರು ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆ ಹಚ್ಚಿದ ನಂತರ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬುಧವಾರ ಬೆಳಗ್ಗೆ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದು, ಆತ ಸುರಕ್ಷಿತವಾಗಿದ್ದಾನೆ. ಪರಿಣವ್ ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದ. ಆತ ಟ್ಯೂಷನ್ ಸೆಂಟರ್​ನಿಂದ ಮಾರತ್ತಹಳ್ಳಿವರೆಗೆ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿರುವ ಸಿಸಿಕ್ಯಾಮರಾ ದೃಶ್ಯ ಲಭ್ಯವಾಗಿತ್ತು. ಈ ಸಂಬಂಧ ವೈಟ್​ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.

Read More

ಪ್ರಶಾಂತ್ ವರ್ಮಾ (Prashant Verma) ನಿರ್ದೇಶನ ಹನುಮಾನ್ (Hanuman) ಸಿನಿಮಾ ತನ್ನ ನಾಗಲೋಟವನ್ನು ಮುಂದುವರೆಸಿದೆ. ಬಾಕ್ಸ್ ಆಫೀಸಿನಲ್ಲಿ ಭರ್ಜರಿಯಾಗಿ ಕಮಾಯಿ (Collection) ಮಾಡಿದೆ. ಸಿನಿಮಾ ರಿಲೀಸ್ ಆಗಿ 11 ದಿನಗಳು ಕಳೆದಿದ್ದು ಬಾಕ್ಸ್ ಆಫೀಸಿನಿಂದ ನಿರ್ಮಾಪಕರ ಜೇಬಿಗೆ 218. 42 ಕೋಟಿ ರೂಪಾಯಿ ಹರಿದು ಬಂದಿದೆ ಎಂದು ಅಂದಾಜಿಸಲಾಗಿದೆ. ಹನುಮಾನ್ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಕಂಡಿರೋ ನಿರ್ದೇಶಕರಿಗೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ಹನುಮಾನ್ ಪಾರ್ಟ್ 2 ಮಾಡಲು ಅವರು ಮುಂದೆ ಬಂದಿದ್ದಾರೆ. ಕೇವಲ ಬಾಯಿ ಮಾತಲ್ಲಿ ಹೇಳದೇ ಪಾರ್ಟ್ 2 ಚಿತ್ರದ ಕೆಲಸಕ್ಕೂ ಅವರು ಮುಂದಾಗಿದ್ದಾರೆ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿತ್ತು. ಈ ಶುಭ ದಿನದಂದು, ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಜೈ ಹನುಮಾನ್’ ಸಿನಿಮಾಗಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಜೈ ಹನುಮಾನ್ ಸಿನಿಮಾದ ಸ್ಟ್ರಿಪ್ಟ್…

Read More