Author: AIN Author

ರಾಮನಗರ:- ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರ ಗ್ರಾಮದಲ್ಲಿ ಮಗು ಜೊತೆ ಲಕ್ಷ್ಮಣರೇಖೆ ಔಷಧಿ ಕುಡಿದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ ಚಿಕಿತ್ಸೆ ಫಲಿಸದೇ 3 ವರ್ಷದ ಮಗು ಸಾವನ್ನಪ್ಪಿದರೆ, ಅಸ್ವಸ್ಥ ತಾಯಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೀಕ್ಷಿತ್ ಗೌಡ‌(3) ಮೃತಪಟ್ಟ ಮಗು ಹಾಗೂ ಪೂರ್ಣಿಮಾ(24) ಮಗುವಿಗೆ ವಿಷವುಣಿಸಿದ ತಾಯಿ ಎನ್ನಲಾಗಿದೆ ಇನ್ನು ಲಕ್ಷ್ಮಣ ರೇಖೆ ಎಂಬ ಹೆಸರಿನ ಜಿರಳೆಗಿಡುವ ವಿಷ ಇದಾಗಿದ್ದು, ತಾಯಿ ಪೂರ್ಣಿಮಾ ತಾನೂ ಕುಡಿದು, ಮಗುವಿಗೂ ವಿಷವುಣಿಸಿದ್ದಾರೆ. ಸತತ ವಾಂತಿ ಹಾಗೂ ಭೇದಿಯಿಂದ ಮಗು ಕೊನೆಯುಸಿರೆಳೆದಿದೆ. ಇದೀಗ ದಯಾನಂದ ಆಸ್ಪತ್ರೆಯಲ್ಲಿ ಮಗುವಿನ ಮರೋಣೋತ್ತರ ಪರೀಕ್ಷೆ ಮಾಡಲಾಗುತ್ತಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

Read More

ಹಾಸನ:- ಜೆಡಿಎಸ್​​ ಪಕ್ಷ ದೇವೇಗೌಡರ ಕುಟುಂಬದ ಆಸ್ತಿ ಅಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.. ಈ ಸಂಬಂಧ ಮಾತನಾಡಿದ ಅವರು,ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ 14 ತಿಂಗಳ ಕಾಲ ಸಿಎಂ ಆಗಿದ್ದರು. ಯಾರಿಂದಲಾದರೂ ವರ್ಗಾವಣೆಗೆ ಹಣ ಪಡೆದಿದ್ದರೆ ಹೇಳಲಿ. ನಾನು ಕ್ಷಮೆ ಕೇಳುತ್ತೇನೆ ಎಂದರು. 13 ತಿಂಗಳಿಗೆ ಕುಮಾರಣ್ಣನನ್ನು ಸಿಎಂ ಸ್ಥಾನದಿಂದ ಯಾಕೆ ತೆಗೆದರು. 25 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದರು. ಕಾಂಗ್ರೆಸ್​ಗೆ ನನ್ನ ಒಂದು ಸಣ್ಣ ತಪ್ಪು ಕಂಡು ಹಿಡಿಯಲು ಆಗಲಿಲ್ಲ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಸ್ಥಾನದಿಂದ ನನ್ನನ್ನು ಯಾಕೆ ತೆಗೆದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದರು. ನನ್ನನ್ನು ಏಕೆ ಸೋಲಿಸಿದರು ಎಂದು ಹೇಳಲು ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಜೆಡಿಎಸ್ ಪಕ್ಷ ಹೆಚ್​.ಡಿ.ದೇವೇಗೌಡರ ಆಸ್ತಿನಾ ಎಂದು ಹೇಳುತ್ತಾರೆ. ಜೆಡಿಎಸ್​​ ಪಕ್ಷ ದೇವೇಗೌಡರ ಕುಟುಂಬದ ಆಸ್ತಿ ಅಲ್ಲ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದೇನೆ ಎಂದರು. ಏನಾಗಿದೆ ಈ ರಾಜ್ಯ ಇವತ್ತು. ಯಾವ ಸಿದ್ದರಾಮಯ್ಯ ಅವರ…

Read More

ಚಿತ್ರದುರ್ಗ:- ಬಿಹಾರದ ಮಾಜಿ ಮುಖ್ಯ ಮಂತ್ರಿ ದಿವಂಗತ ಕಸ್ತೂರಿ ಠಾಕೂರರ್ಗೆ ಕೇಂದ್ರ ಸರಕಾರ ಭಾರತ ರತ್ನ ನೀಡಿ ಸನ್ಮಾನಿಸಿದನ್ನು ಚಿತ್ರದುರ್ಗ ಜಿಲ್ಲಾ ಸವಿತಾ ಸಮಾಜ ಅದ್ಯಕ್ಷ ಚಂದ್ರಶೇಖರ್ ಸ್ವಾಗತಿಸಿದ್ದಾರೆ. ಸಮಾಜದಲ್ಲಿ ಅತೀ ಹಿಂದುಳಿಗೆ ಸಮಾಜವನ್ನು ಗುರುತಿಸಿ ದೇಶದ ಅತೀ ದೊಡ್ಡ ನಾಗರೀಕ ಗೌರವ ನೀಡಿದಕ್ಕೆ ಕೇಂದ್ರ ಸರಕಾರವನ್ನು ಸಮ್ಮ ಸಮಾಜಕ್ಕೆ ನೀಡಿದ ಸನ್ಮಾನ ಎಂದರು. ಬಿಹಾರದ ಮುಖ್ಯಮಂತ್ರಿ ಯಾಗಿ ಅವರು ಮಾಡಿದ ಕೆಲಸಗಳು ಕಟ್ಟ ಕಡೆಯ ಫಲಾನುಭವಿಗೆ ತಲುಪಿವೆ ಎಂದರು. ಮುಂದಿನ ದಿನಗಳಲ್ಲಿ‌ ಕಸ್ತೂರಿ ಠಾಕೂರ್ ಜಯಂತಿಯನ್ನು‌ ಸರಕಾರದ ವತಿಯಂದ ಆಚರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ರು.

Read More

ಬೆಂಗಳೂರು:- ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆಲ್ಲಕೆರೆಯ ಡೆಲ್ಲಿ ಪ್ರೀ ಸ್ಕೂಲ್ ನಲ್ಲಿ ಫ್ರೀ ಸ್ಕೂಲ್ ನಿರ್ಲಕ್ಷ್ಯಕ್ಕೆ ನಾಲ್ಕು ವರ್ಷದ ಕಂದಮ್ಮ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ಜರುಗಿದೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಜಿನಾ ಅನ್ನಾ ಜಿಟೋ ಎಂಬ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಜನವರಿ 22 ರ ಮಧ್ಯಾಹ್ನ ಖಾಸಗಿ ಫ್ರೀ ಸ್ಕೂಲ್ ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಈ ಹಿನ್ನಲೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಮಗು ಜಿನಾ ಚಿಂತಾಜನಕ ಸ್ಥಿತಿಯಲ್ಲಿದೆ. ಖಾಸಗಿ ಕಂಪೆನಿಯಲ್ಲಿ ಟೆಕ್ಕಿಗಳಾಗಿರುವ ಜಿನಾ ತಂದೆ ಜಿಟೋ ಟಾಮಿ ಜೋಸೆಫ್ ಮತ್ತು ತಾಯಿ ಬಿನಿಟೋ ಥಾಮಸ್, ಮೂಲತಃ ಕೇರಳದ ನಿವಾಸಿಗಳಾಗಿದ್ದಾರೆ. ಉದ್ಯೋಗದ ನಿಮಿತ್ತ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದು, ತಮ್ಮ ಮಗುವನ್ನು ಇಲ್ಲಿನ ಖಾಸಗಿ ಸ್ಕೂಲ್​ಗೆ ಸೇರಿಸಿದ್ದರು. ಈ ವೇಳೆ ಈ ಅವಘಡ ಸಂಭವಿಸಿದೆ.

Read More

ಮೈಸೂರು;- ತಮಿಳುನಾಡಿಗೆ ಅಗತ್ಯ ನೀರು ಕೊಡಲು ನಾವು ಸಿದ್ಧ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿಗೆ ಎಷ್ಟು ನೀರು ಕೊಡಬೇಕೋ ಅದನ್ನು ಕೊಡಲಿಕ್ಕೆ ನಾವು ಬದ್ಧರಿದ್ದೇವೆ. ಮೇಕೆದಾಟು ಯೋಜನೆಗೆ ಹೆಚ್.ಡಿ.ದೇವೇಗೌಡರು ಅನುಮತಿ ಕೊಡಿಸಲಿ. ಅವರು ಮೇಕೆದಾಟು ವಿಚಾರದಲ್ಲಿ ಸರ್ಕಾರ ಕೆಲಸ ಮಾಡುತ್ತಿಲ್ಲ. ಪ್ರಧಾನಿಯವರಿಗೆ ಅವರು ಹತ್ತಿರವಿದ್ದಾರೆ. ಅವರನ್ನು ತಡೆದುಕೊಂಡಿರುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮನ್ನು ಸೇರಿಸಿಕೊಂಡು ಮೇಕೆದಾಟು ಸಮಸ್ಯೆ ಬಗೆಹರಿಸಬಹುದಲ್ವ? ನಮ್ಮ ನಡಿಗೆ ನೀರಿಗೋಸ್ಕರ. ನಮ್ಮ ಅವಧಿ ಮುಗಿಯೋ ಒಳಗೆ ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತೇವೆ. ರಾಜ್ಯದ ಯಾವೊಬ್ಬ ಸಂಸದ ಕೂಡ ಮಾತನಾಡಿಲ್ಲ. ಸಂಸದ ಪ್ರತಾಪ್ ಸಿಂಹ ಮಾತನಾಡಿದ್ರ? ನಮಗೆ ನೀರೇ ಆಧಾರ ಸ್ಥಂಭ ಎಂದು ಡಿಕೆಶಿ, ದೇವೇಗೌಡರು ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಪಿರಿಯಾಪಟ್ಟಣ ಜನರಿಗೆ ಧನ್ಯವಾದ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಈ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಶಾಸಕರನ್ನ ನೀಡಿದ್ದೀರಾ. ಈ ಸರ್ಕಾರವನ್ನು ರಾಜ್ಯದಲ್ಲಿ ತಂದ ಮೇಲೆ ಒಳ್ಳೆಯ ಅಭಿವೃದ್ಧಿ ಮಾಡಿದ್ದೇವೆ.…

Read More

ಮೈಸೂರು:- ಬಿಜೆಪಿಯವರು ರಾಮನನ್ನು ಸೀತೆಯಿಂದ ಬೇರ್ಪಡಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ನಾವು ಪೂಜಿಸುವ ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಎಂದು ಕರೆಯುತ್ತೇವೆ. ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದಲೇ ಸೀತೆ, ಲಕ್ಷ್ಮ,ಣ, ಹನುಮಂತನನ್ನು ಬೇರ್ಪಡಿಸಿದ್ದಾರೆ. ರಾಮನನ್ನು ಮಾತ್ರ ಉಳಿಸಿಕೊಂಡಿದ್ದಾರೆ ಎಂದರು ಶ್ರೀರಾಮನನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿದ್ದಾರಾ? ನಮ್ಮೂರಲ್ಲಿ, ನಿಮ್ಮೂರಲ್ಲಿ ರಾಮಮಂದಿರ ಇಲ್ವಾ? ನಾವೆಲ್ಲ ರಾಮನನ್ನ ಪೂಜೆ ಮಾಡಲ್ವಾ? ನಾವೆಲ್ಲಾ ಹಿಂದೂಗಳಲ್ವಾ? ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ನಾವು ಮಹಾತ್ಮ ಗಾಂಧಿ ಹೇಳುವ ರಾಮನ ಮೇಲೆ ನಂಬಿಕೆ ಇಟ್ಟಿದ್ದೇವೆ. ರಘುಪತಿ ರಾಘವ ರಾಜಾರಾಮ್, ಪತೀತ ಪಾವನ ಸೀತಾರಾಮ್ ಎಂದು ಹೇಳಿದ್ದಾರೆ. ನಾವು ಪೂಜಿಸುವ ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಹನುಮಂತ ಇರುತ್ತಾರೆ. ಅದಕ್ಕೆ ನಾವು ಸೀತಾರಾಮ ಎಂದು ಕರೆಯುತ್ತೇವೆ. ಬಿಜೆಪಿಯವರು ರಾಮನ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದಲೇ ಸೀತೆ, ಲಕ್ಷ್ಮಣ, ಹನುಮಂತನನ್ನು ಬೇರ್ಪಡಿಸಿದ್ದಾರೆ. ರಾಮನನ್ನು ಮಾತ್ರ ಉಳಿಸಿಕೊಂಡಿದ್ದಾರೆ ಎಂದು…

Read More

ಮಂಗಳೂರು:- ನಗರದ ರಾವ್ ಆಂಡ್​​ ರಾವ್ ಸರ್ಕಲ್ ಬಳಿ ಪಾರ್ಕಿಂಗ್​​ ವಿಚಾರಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿದ್ದು, ತೀವೃ ಗಾಯಗಳಾಗಿರುವಂತಹ ಘಟನೆ ಜರುಗಿದೆ ಫಾರೂಕ್ ಮತ್ತು ಇತರೆ ಎಂಟು ಮಂದಿಯಿಂದ ಉಲ್ಲಾಸ್ ರಾವ್, ಹರ್ಷಿತ್ ರಾವ್ ಸಹೋದರರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿದೆ. ಎಂಪಾಯರ್ ಹೊಟೇಲ್​​ಗೆ ಊಟಕ್ಕೆಂದು ಸಹೋದರರು ಹೋಗಿದ್ದಾರೆ. ಹೋಟೆಲ್​​​ ಮಾಲೀಕನ ತಮ್ಮ ಹಾಗೂ ಇತರರಿಂದ ಕಲ್ಲು, ಕೈಯಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಸಹೋದರಿಬ್ಬರ ತಲೆಗೆ, ತುಟಿಗೆ ಗಾಯಗಳಾಗಿದ್ದು, ಘಟನೆ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಗದಗ:- ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಹೊರವಲಯದಲ್ಲಿ ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಚಕ್ರ ಏಕಾಏಕಿ ಕಳಚಿ ಬಿದ್ದ ಘಟನೆ ಜರುಗಿದೆ.. ಲಕ್ಷ್ಮೇಶ್ವರದಿಂದ ಮಾಗಡಿ ಮಾರ್ಗವಾಗಿ ಶಿರಹಟ್ಟಿಗೆ ಹೊರಟ್ಟಿದ್ದ ವೇಳೆ ಬಸ್​​ನ ಎಕ್ಸೆಲ್ ಕಟ್ಟಾಗಿ ಚಕ್ರ ಕಳಚಿ ಬಿದ್ದಿದೆ. ಈ ವೇಳೆ ಬಸ್​ನ ಪ್ರಯಾಣಿಕರು ಕಂಗಾಲಾಗಿದ್ದು, ಕೂಡಲೇ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಬಚಾವ್ ಆಗಿದ್ದಾರೆ.

Read More

ಬೆಂಗಳೂರು: ಕಾಂಗ್ರೆಸ್ ಪಕ್ಷದ ವರ್ತನೆಯಿಂದ ಬೇಸತ್ತು ಇಂಡಿ ಒಕ್ಕೂಟದ ಪಕ್ಷಗಳು ದೂರವಾಗುತ್ತಿದ್ದು, ಮಮತಾ ಬ್ಯಾನರ್ಜಿ ಹೊರಗೆ ಹೋಗಿದ್ದು, ಶರತ್ ಪವ್ವಾರ್, ನಿತೀಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗಿಟ್ಟಿದ್ದು, ಇಂಡಿಯಾ ಒಕ್ಕೂಟ ಛಿದ್ರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈತ್ರಿಯಿಂದ ಹೊರಗೆ ಬಂದಿದ್ದಾರೆ. ಶರತ್ ಪವಾರ್ ಕೂಡ ಹೊರ ಬರಲಿದ್ದಾರೆ. ಬಿಹಾರ ಸಿಎಂ ನಿತಿಶ್ ಕುಮಾರ್ ಕೂಡ ಒಂದು ಹೆಜ್ಜೆ ಹೊರಗೆ ಇಟ್ಟಿದ್ದಾರೆ‌. ಇಂಡಿ ಒಕ್ಕೂಟ ಮುಂದಿನ ದಿನಗಳಲ್ಲಿ ಉಳಿಯುವುದಿಲ್ಲ‌. ಕಾಂಗ್ರೆಸ್ ನವರ ಕಟಾದಿಂದ ಅವರು ಹೊರಗೆ ಬರುತ್ತಿದ್ದಾರೆ. ಮೊದಿಯವರು 3ನೇ ಬಾರಿಗೆ ಪ್ರಧಾನಿಯಾದ ಮೇಲೆ ಒಕ್ಕೂಟ ಇರುವುದಿಲ್ಲ. ಮಮತಾ ಬ್ಯಾನರ್ಜಿಯವರಿಗೆ ಭ್ರಮ‌ನಿರಸನ ಆಗಿದೆ ಎಂದು ಹೇಳಿದರು. ಹೈಕಮಾಂಡ್ ನಿರ್ಧಾರಕ್ಕೆ ಬದ್ದ:- ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಗೆ ಕರೆ ತರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್…

Read More

ಗದಗ:- ಲಾರಿ‌ ಹಾಗೂ ಬಸ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತವಾಗಿದ್ದು, ಇಬ್ಬರು ಸಾವಿಗೀಡಾದ ಘಟನೆ ಗದಗ ಜಿಲ್ಲೆಯ ‌ಮುಂಡರಗಿ ತಾಲೂಕಿನ ಹಳ್ಳಿಕೇರಿ ಬಳಿ ಜರುಗಿದೆ. ಘಟನೆಯಲ್ಲಿ ಸುಮಾರು 10 ಜನರಿಗೆ ಗಾಯವಾಗಿದೆ. ಕೊಪ್ಪಳದಿಂದ ಗದಗ ಬರುತ್ತಿದ್ದ ಬಸ್ ಹಾಗೂ ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೊರಟಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಲಾರಿ ಚಾಲಕ ಹಾಗೂ ಬಸ್‌ನಲ್ಲಿ ಮಹಿಳೆ ಸಾವು ಸ್ಥಳದಲ್ಲೇ ಸಾವಾಗಿದೆ. ಗದಗ ಜಿಲ್ಲೆಯ ‌ಮುಂಡರಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More