Author: AIN Author

ನವದೆಹಲಿ: ಮೈಸೂರು ಕೃಷ್ಣಶಿಲೆಯ ಬಾಲರಾಮನ ಎದುರು ಸೋತ ವೈಟ್‌ ಮಾರ್ಬಲ್‌ ಬಾಲರಾಮ ಮೂರ್ತಿಯ ಲುಕ್‌ ವೈರಲ್‌ ಆಗಿದೆ. ರಾಜಸ್ಥಾನದ (Rajasthan) ಶಿಲ್ಪಿ ಕೆತ್ತಿದ ಮೂರ್ತಿ ಇದು. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಕೆತ್ತಿರುವ ಕಪ್ಪು ಶಿಲೆಯ ರಾಮಲಲ್ಲಾ (Ram Lalla) ವಿಗ್ರಹ ಅಯೋಧ್ಯೆಯ ಭವ್ಯ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿದೆ. ಇನ್ನು ಎರಡು ವಿಗ್ರಹಗಳನ್ನು ದೇವಾಲಯದ ಇತರ ಭಾಗಗಳಲ್ಲಿ ಇರಿಸಲಾಗುವುದು. ಅವುಗಳಲ್ಲಿ ಒಂದು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿದ ಬಿಳಿ ಅಮೃತಶಿಲೆಯ ವಿಗ್ರಹವೂ ಇದೆ. ಈ ವಿಗ್ರಹದ ಛಾಯಾಚಿತ್ರಗಳು ವೈರಲ್‌ ಆಗಿವೆ. ರಾಜಸ್ಥಾನದ ಶಿಲ್ಪಿ ಕೆತ್ತಿರುವ ವಿಗ್ರಹವು ದೇವಾಲಯದ ‘ಗರ್ಭಗೃಹ’ಕ್ಕೆ ಬರಲು ಮೈಸೂರು ಶಿಲ್ಪಿಯ ಮೂರ್ತಿ ಎದುರು ಪೈಪೋಟಿ ನಡೆಸಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಮೂರ್ತಿಯನ್ನು ರಾಮಮಂದಿರದಲ್ಲಿ ಬೇರೆಡೆ ಇರಿಸಲಾಗುತ್ತದೆ. ಬಿಳಿ ಅಮೃತಶಿಲೆಯ ವಿಗ್ರಹವು ಪ್ರಸ್ತುತ ಟ್ರಸ್ಟ್‌ನಲ್ಲಿದೆ. ರಾಮಲಲ್ಲಾ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ವಿಗ್ರಹ ಇದಾಗಿದೆ. ಬಾಲರಾಮನ ಹಿಂದೆ ಕಮಾನಿನಂತಿರುವ ರಚನೆಯು ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ…

Read More

ಚಳಿಗಾಲ ಆರಂಭವಾದೊಡನೆ ನೆಗಡಿ, ಜ್ವರ ಮತ್ತು ಹಲವಾರು ಇತರ ಋತುಮಾನದ ಕಾಯಿಲೆಗಳು ಕಾಡ ತೊಡಗುತ್ತವೆ. ಹೀಗಾಗಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದಕ್ಕಾಗಿ ಆಂತರಿಕವಾಗಿ ನಮ್ಮನ್ನು ಪೋಷಿಸಲು ನಮಗೆ ಸಹಾಯ ಮಾಡುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಆರೋಗ್ಯ ವೃತ್ತಿಪರರು ಋತುಗಳು ಬದಲಾದಂತೆ ನಮ್ಮ ಆಹಾರಕ್ರಮವನ್ನು ಬದಲಾಯಿಸಲು ನಿರಂತರವಾಗಿ ಸಲಹೆ ನೀಡುತ್ತಾರೆ. ಚಳಿಗಾಲದ ಆಹಾರಗಳು ಯಾವಾಗಲೂ ಕಾಳುಗಳನ್ನು ಒಳಗೊಂಡ ಊಟ, ಸೊಪ್ಪು-ತರಕಾರಿಗಳು ಮತ್ತು ಸಾಮಾನ್ಯ ಆರೋಗ್ಯವನ್ನು ಉತ್ತೇಜಿಸುವ ಮಸಾಲೆ ಗಳನ್ನು ಒಳಗೊಂಡಿರಬೇಕು. ಚಳಿಗಾಲದಲ್ಲಿ ಬೆಳ್ಳುಳ್ಳಿ ಸೇವನೆಯ ಆರೋಗ್ಯ ಪ್ರಯೋಜನಗಳು ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ:ಚಳಿಗಾಲದಲ್ಲಿ ಶೀತ, ಕೆಮ್ಮು (Cough), ನೋಯುತ್ತಿರುವ ಗಂಟಲು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬೆಳ್ಳುಳ್ಳಿಯು ಆ ಕಾಲೋಚಿತ ಆರೋಗ್ಯ ಸಮಸ್ಯೆಗಳಿಂದ ನಿಮಗೆ ಪರಿಹಾರವನ್ನು ನೀಡುತ್ತದೆ. ದೆಹಲಿ ಮೂಲದ ಆರೋಗ್ಯ ಮತ್ತು ಸ್ವಾಸ್ಥ್ಯ ತಜ್ಞರಾದ ಡಾ. ಶಿಖಾ ಶರ್ಮಾ ಪ್ರಕಾರ ಬೆಳ್ಳುಳ್ಳಿ, ಸೋಂಕು ಮತ್ತು ಇತರ ಕಾಯಿಲೆಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ. ನೀವು ಸೈನುಟಿಸ್, ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು ಬಿಸಿ…

Read More

2023ರ ಅತ್ಯುತ್ತಮ ಏಕದಿನ ತಂಡವನ್ನು ಐಸಿಸಿ ಪ್ರಕಟಿಸಿದ್ದು, ಭಾರತದ 6 ಆಟಗಾರರು ಸ್ಥಾನ ಪಡೆಯುವ ಮೂಲಕ ಪಾರಮ್ಯ ಮೆರೆದಿದ್ದಾರೆ. ರೋಹಿತ್ ಶರ್ಮಾ ಏಕದಿನ ತಂಡಕ್ಕೆ ನಾಯಕರಾಗಿದ್ದು, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಕುಲ್​ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಹೀಗಿದೆ ಏಕದಿನ ತಂಡ ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ, ಡೇರಿಲ್ ಮಿಚೆಲ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಯಾನ್ಸೆನ್, ಆಡಂ ಝಂಪಾ, ಮೊಹಮ್ಮದ್ ಸಿರಾಜ್, ಕುಲ್​ದೀಪ್ ಯಾದವ್, ಮೊಹಮ್ಮದ್ ಶಮಿ. ಟಿ-20 ತಂಡದಲ್ಲಿ ನಾಲ್ವರಿಗೆ ಸ್ಥಾನ ಐಸಿಸಿಯು ವರ್ಷದ ಟಿ-20 ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ನಾಲ್ವರು ಭಾರತೀಯ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭಾರತದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವ ಪಟ್ಟ ನೀಡಲಾಗಿದೆ. ಹೀಗಿದೆ ಟಿ-20 ತಂಡ ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪುರನ್, ಮಾರ್ಕ್ ಚಾಪ್ಮನ್, ಸಿಕಂದರ್ ರಾಸ್, ಅಲ್ಪೇಶ್ ರಾಮ್ಜಾನಿ, ಮಾರ್ಕ್ ಅದೈರ್, ರವಿ ಬಿಷ್ಣೋಯ್, ರಿಚರ್ಡ್…

Read More

ದಾವಣಗೆರೆ:- ಹರಿಹರ ಗ್ರಾಮಾಂತರ ಪೊಲೀಸರು, DCRB ಪೊಲೀಸರ ಕಾರ್ಯಾಚಣೆ ಮಾಡಿ ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಓರ್ವ ಇಂಜಿನಿಯರ್ ಸೇರಿ 6 ಜನರನ್ನು ಅರೆಸ್ಟ್ ಮಾಡಿದ್ದಾರೆ. ಕುಬೇರಪ್ಪ ತಳವಾರ್, ಹರೀಶ್ ಗೌಡ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಇಂಜಿನಿಯರ್ ಜೆ.ರುದ್ರೇಶ್, ಮೈಸೂರು ಮೂಲದ ಮನೋಜ್ ಗೌಡ, ಮಂಡ್ಯ ಮೂಲದ ಸಂದೀಪ್ ಮತ್ತು ಚಿತ್ರದುರ್ಗ ಮೂಲದ ಕೃಷ್ಣ ನಾಯ್ಕನನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರಿಂದ 7.70 ಲಕ್ಷ ರೂ. ಮೌಲ್ಯದ 500, 200 ಮುಖಬೆಲೆಯ ಖೋಟಾ ನೋಟು ವಶಕ್ಕೆ ಪಡೆಯಲಾಗಿದೆ. ಖೋಟಾ ನೋಟು ತಯಾರು‌ ಮಾಡಲು ಬಳಸುತ್ತಿದ್ದ ‌ಲ್ಯಾಪ್​ಟಾಪ್ ಸೇರಿ‌, ಮೂರು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಖೋಟಾ ನೋಟು ತಯಾರಿ ಬಗ್ಗೆ ಇಂಜಿನಿಯರ್ ರುದ್ರೇಶ್ ಒಪ್ಪಿಕೊಂಡಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ

Read More

ಬೆಂಗಳೂರು:- ಕರ್ತವ್ಯ ಲೋಪ ಹಿನ್ನೆಲೆ – ಚೆಸ್ಕಾಂ ಎಂಡಿ ಸಿಎನ್​ ಶ್ರೀಧರ್​ ರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳ್ಳುಸೋಗೆ ಗ್ರಾಮದಲ್ಲಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಸಿಎಂ ಹಮ್ಮಿಕೊಂಡಿದ್ದರು. ಈ ವೇಳೆ ಬಟನ್ ಒತ್ತುವ ಮೂಲಕ ಸಿಎಂ ಯೋಜನೆಗೆ ಚಾಲನೆ ನೀಡಬೇಕಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಒತ್ತಿದ ವೇಳೆ ಬಟನ್ ಚಾಲನೆಯಾಗಿಲ್ಲವಾಗಿತ್ತು. ಹೌದು ಸಿಎಂ ಬಟನ್​ ಒತ್ತಿದ ವೇಳೆ ಅದು ಆನ್​ ಆಗಿರಲಿಲ್ಲ. ಇದು ಸಿಎಂ ಸಿದ್ದರಾಮಯ್ಯ ಅವರನ್ನು ತೀವ್ರ ಮುಜುಗರಕ್ಕೆ ಒಳಗುಳ್ಳುವಂತೆ ಮಾಡಿತ್ತು. ಸಿಎಂ ಕಾರ್ಯಕ್ರಮವಾಗಿದ್ದರೂ ವಿದ್ಯುತ್ ಬಗ್ಗೆ ಮುನ್ನೆಚ್ಚರಿಕಾ ಕ್ರಮ ವಹಿಸದ ಚೆಸ್ಕಾಂ ಎಂಡಿ ಶ್ರೀಧರ್, ಅಂದಿನ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಈ ಹಿನ್ನಲೆ ಕರ್ತವ್ಯಲೋಪ ಎಸಗಿದ ಹಿನ್ನಲೆ ಜೊತೆಗೆ ಸರ್ಕಾರ ಮುಜುಗರಕ್ಕೆ ಒಳಪಡುವ ಸನ್ನಿವೇಶ ಸೃಷ್ಟಿಸಿದ್ದಕ್ಕೆ ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.

Read More

ಬೆಂಗಳೂರು:- ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ಆಗಿದ್ದು, ವಿಚಾರಣೆಗೆ ಬಂದಿದ್ದ ಎಲ್ಲರೂ ಎಸ್​ಐಟಿ ವಶಕ್ಕೆ ಪಡೆಯಲಾಗಿದೆ. ಇದುವರೆಗೆ ನಡೆದಿದ್ದ ತನಿಖೆ ಆಧಾರದ ಮೇಲೆ ಈಗ ಸಿಐಡಿಯಲ್ಲಿಯೇ ಎಸ್​ಐಟಿ ಮತ್ತೊಂದು ಹೊಸ ಎಫ್​ಐಆರ್ ದಾಖಲಿಸಿದ್ದು, ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಗಳ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಕಸ್ಟಡೊಯಲ್ಲಿ ತಾಂತ್ರಿಕ ವಸ್ತುಗಳು ಇದ್ದಾಗ ಅದನ್ನು ಟ್ಯಾಂಪರ್ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸದ್ಯ ಹೊಸಾ ಎಫ್​ಐಆರ್ ಆದ ಬಳಿಕ ವಿಚಾರಣೆಗೆ ಆಗಮಿಸಿದ್ದ ಎಲ್ಲರನ್ನು ಎಸ್​ಐಟಿ ವಶದಲ್ಲೇ ಇಟ್ಟುಕೊಂಡಿರುವುದು ಸಂಚಲನ ಮೂಡಿಸಿದೆ. ಅಲ್ಲದೇ ಬಿಟ್ ಕಾಯಿನ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ವಶಕ್ಕೆ ಪಡೆದುಕೊಂಡವರ ವಿಚಾರಣೆ ವೇಳೆ ಏನೆಲ್ಲಾ ಮಾಹಿತಿ ಹೊರಬರುತ್ತೆ? ಆಗ ಎಸ್​ಐಟಿಯ ಮುಂದಿನ ನಡೆಯೇನು ಎನ್ನುವುದೇ ಕುತೂಹಲ ಮೂಡಿಸಿದೆ. ಶ್ರೀಕಿಯನ್ನು ಬಂಧಿಸಿ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿತ್ತು. ಸಿಸಿಬಿ ತನಿಖೆಯಲ್ಲಿ ಲೋಪ ನಡೆದಿದೆ ಎಂದು ಎಸ್‍ಐಟಿ ತನಿಖೆಯಲ್ಲಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಎಫ್‍ಐಆರ್…

Read More

ನಿಮ್ಮ ಮೊಬೈಲ್​ನಲ್ಲಿ’ಪಿಂಕ್ ವಾಟ್ಸ್ ಆ್ಯಪ್’ ಇದ್ದರೆ ಈಗಲೇ ಈಗಲೇ ಡಿಲೇಟ್ ಮಾಡಿ ಬಿಡಿ ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೌದು, ಪಿಕ್‌ ಕಲರ್​ನ ಯಾವುದೇ ವಸ್ತಗಳು ನಮ್ಮನ್ನು ತನ್ನತ್ತ ಸೆಳೆದೆಬಿಡುತ್ತವೆ. ಹಾಗೆಯೇ ಇದೀಗ ಪಿಂಕ್‌ ವ್ಯಾಟ್ಸಪ್‌ ಬಂದಿದ್ದು, ಇದನ್ನು ಬಳಕೆ ಮಾಡುವವರು ಅಪಾಯಕ್ಕೆ ಸಿಲುಕುತ್ತಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದರೆ ಈ ಬಗ್ಗೆ ಕರ್ನಾಟಕ ರಾಜ್ಯದ ಪೊಲೀಸ್‌ ಇಲಾಖೆ ಹೇಳಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿದೆ ಮುಂದೆ ಓದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಪೊಲೀಸ್, ‘ಗುಲಾಬಿ ಬಣ್ಣದ ವಾಟ್ಸ್ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ, ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಆ್ಯಪ್  ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ..’ ಎಂದು ಸಂದೇಶ ನೀಡಿದೆ. ಒಂದು ವೇಳೆ ನೀವು ಗುಲಾಬಿ ವಾಟ್ಸ್ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ ಫೋನ್‌ನಲ್ಲಿರುವ ಫೋಟೊ, ಸೇವ್ ಆಗಿರುವ ಫೋನ್ ನಂಬರ್‌ಗಳು. ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್, ಎಸ್‌ಎಂಎಸ್ ಹ್ಯಾಕ್ ಆಗಲಿದೆ ಎಂದು ಪೊಲೀಸರು…

Read More

ಭಾರತದಲ್ಲಿ ಚಿನ್ನದ ಬೆಲೆ ತುಸು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 63,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,530 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 57,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,275 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 25ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,750 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 753 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,750 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 63,000 ರೂ ಬೆಳ್ಳಿ ಬೆಲೆ 10 ಗ್ರಾಂಗೆ:…

Read More

ವಾಷಿಂಗ್ಟನ್:‌ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಇಲ್ಲ ಎಂಬುದರ ಬಗ್ಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಬೇಸರ ವ್ಯಕ್ತಪಡಿಸಿದ್ದಾರೆ. ಹೌದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಳೆದ 16 ವರ್ಷದಿಂದ ಭಾರತವು ತಾತ್ಕಾಲಿಕ ಸದಸ್ಯತ್ವ ಪಡೆದಿದೆ. ಅಮೆರಿಕ , ಬ್ರಿಟನ್‌, ರಷ್ಯಾ , ಫ್ರಾನ್ಸ್‌ ಹಾಗೂ ಚೀನಾ ಖಾಯಂ ಸದಸ್ಯತ್ವ ಪಡೆದಿವೆ. ಭಾರತಕ್ಕೆ ಖಾಯಂ ಸ್ಥಾನ ನೀಡಲು ಚೀನಾ ಮಾತ್ರ ವಿರೋಧಿಸುತ್ತಿದೆ. ಹಲವು ವರ್ಷಗಳಿಂದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಸ್ಥಾನಕ್ಕೆ ಭಾರತ ಮನವಿ ಮಾಡುತ್ತಿದ್ದರೂ ಇದಕ್ಕೆ ಇನ್ನೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ.ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ಇನ್ನೂ ಹೆಚ್ಚಿನ ಅಧಿಕಾರ ಬಳಸಲು ಪ್ರಯತ್ನಿಸುತ್ತಿರುವ ಕಾರಣ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡಲಾಗಿಲ್ಲ. ಹೀಗಾಗಿ ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. https://ainlivenews.com/peanut-is-good-for-health-but-if-people-with-this-problem-eat-it-there-is-no-danger/  ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ ಎಂದು ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.…

Read More

ಧಾರವಾಡ: ಪಂಚಾಯತಿ ನೌಕರರು ಪ್ರತಿಭಟನೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.‌ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ನಗರದ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ ಪಂಚಾಯತಿ ನೌಕರರು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ‌ ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ನಮ್ಮಗೆ ಈಗ ನೀಡುತ್ತಿರುವ ವೇತನ ಸರಿ ಹೋಗುತ್ತಿಲ್ಲ. ಗ್ರಾಮ ಪಂಚಾಯತಿ ನೌಕರರು ಸಂಕಷ್ಟಕ್ಕೆ ಸಿಲುಕುವ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಸರ್ಕಾರ ಈ ಕೂಡಲೇ ಕನಿಷ್ಠ 31 ಸಾವಿರ ರೂಪಾಯಿ ವೇತನ, ಅನಾರೋಗ್ಯ ಪೀಡಿತರಿಗೆ ಕನಿಷ್ಠ 6 ಸಾವಿರ ಪಿಂಚಣಿ ಸೇರಿ ವಿವಿಧ ಇಲಾಖೆಯ ಖಾಸಗೀಕರಣದ ಕೈ ಬೀಡಬೇಕು ಎಂದು ಅಗ್ರಹಿಸಿ. ಒಂದು ವೇಳೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಒಂದನೆ ಮಾಡದಿದ್ದಲ್ಲಿ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡುವುದಾಗಿ ಇದೇವೇಳೆ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು. ‌

Read More