Author: AIN Author

ಮಾಜಿ ನೀಲಿ ಸಿನಿಮಾಗಳ ತಾರೆ ಸನ್ನಿ ಲಿಯೋನ್ (Sunny Leone), ಈಗಾಗಲೇ ಅನೇಕ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಪಾರ್ನ್ ಪ್ರಪಂಚದಿಂದ ದೂರವಾದ ನಂತರ ಅವರು ತಮ್ಮದೇ ಆದ ಸಾಕಷ್ಟು ಬ್ರ್ಯಾಂಡ್ ಗಳನ್ನು ಹೊಂದಿದ್ದಾರೆ. ಇದೀಗ ಮತ್ತೊಂದು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದು, ಆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರೆಸ್ಟೋರೆಂಟ್ (Restaurant) ಶುರು ಮಾಡಬೇಕು ಎನ್ನುವುದು ಸನ್ನಿ ಆಸೆಯಿತ್ತಂತೆ. ಅದನ್ನು ಈಗ ಈಡೇರಸಿಕೊಂಡಿದ್ದಾರೆ. ಪತಿಯ ಜೊತೆಗೂಡಿ ದೆಹಲಿಯ ನೋಯ್ಡಾದಲ್ಲಿ ರೆಸ್ಟೊರೆಂಟ್ ಶುರು ಮಾಡಿದ್ದು, ಅದಕ್ಕೆ ಚಿಕಲೋಕ ಎಂದು ಹೆಸರಿಟ್ಟಿದ್ದಾರೆ. ರೆಸ್ಟೋರೆಂಟ್ ವಿಡಿಯೋವನ್ನು ಸನ್ನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಟಿವಿ ಕಲಾವಿದರು, ಸಿನಿಮಾ ಜಗತ್ತಿನಲ್ಲಿ ಇರೋರು, ಒಂದೇ ಕೆಲಸಕ್ಕೆ ಸೀಮಿತವಾಗಬೇಡಿ ಎಂದು ಸಲಹೆಯನ್ನೂ ನೀಡಿದ್ದಾರೆ. ನಮ್ಮನ್ನು ನಾವು ವಿಸ್ತರಿಸಿಕೊಳ್ಳುತ್ತಾ ಹೋಗಬೇಕು ಎಂದು ಸನ್ನಿ ಹೇಳಿದ್ದಾರೆ. ಕೇವಲ ಉದ್ಯಮದಲ್ಲಿ ಮಾತ್ರ ಸನ್ನಿ ಲಿಯೋನ್ ತೊಡಗಿಕೊಂಡಿಲ್ಲ. ಸಾಮಾಜಿಕ ಕಾರ್ಯಗಳಿಗಾಗಿಯೇ ಟ್ರಸ್ಟ್ ಅನ್ನು ಅವರು ಶುರು ಮಾಡಿದ್ದಾರೆ. ಅದರ ಮೂಲಕ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಅವರು ಮಾಡಿದ್ದಾರೆ.

Read More

ಟಾಟಾ ಮೋಟಾರ್ಸ್ ಮುಂದಿನ ತಿಂಗಳಿಂದ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ತನ್ನ ಎಲ್ಲಾ ಪ್ರಯಾಣಿಕ ವಾಹನಗಳ ಬೆಲೆಗಳಲ್ಲಿ ಸರಾಸರಿ ಶೇಕಡ ಏಳರಷ್ಟು ಹೆಚ್ಚಳವನ್ನು ಮಾಡಲಿದೆ ಫೆಬ್ರವರಿ ಒಂದರಿಂದ ಬೆಲೆ ಹೆಚ್ಚಳ ಅನ್ವಯವಾಗಲಿದೆ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದ್ದು ಇದನ್ನು ಭಾಗಶಹ ಸರಿದೂಗಿಸಲು ಕಂಪನಿಯು ಈ ನಿರ್ಧಾರ ತೆಗೆದುಕೊಳ್ಳುತ್ತಿದೆ ಕಂಪನಿಯು ಟಾಟಾ ಪಂಚ್ ನೆಕ್ಸನ್ ಮತ್ತು ಯಾರ್ಯಾರ್ ಸೇರಿದಂತೆ ಹಲವಾರು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತಿದೆ ಹಣದುಬ್ಬರ ಮತ್ತು ಸರಕುಗಳ ಬೆಲೆ ಏರಿಕೆಯಿಂದ ಉಂಟಾದ ಒತ್ತಡದಿಂದಾಗಿ ಕಂಪನಿಯು ಬೆಲೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳುತ್ತಿದೆ ಹಾಗೇ ವೆಚ್ಚ ಕಡಿಮೆ ಮಾಡಲು ನಾವು ಸಾಧ್ಯವಿರುವ ಎಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಕಂಪನಿಯು ತಿಳಿಸಿದೆ

Read More

ಬೆಂಗಳೂರು:- ಕರ್ನಾಟಕ ರಾಜ್ಯ ಸರಕಾರಿ ನೌಕರರು ಹಲವು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಸಿದ್ದರಾಮಯ್ಯ ಸರ್ಕಾರ ಮಣಿದಿದೆ.ಹೌದು, ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸರಕಾರಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಬಿದ್ದಿದೆ. 2006ರ ಏಪ್ರಿಲ್​ಗೆ ಮುನ್ನ ನೇಮಕಗೊಂಡ ಸರ್ಕಾರಿ ನೌಕರರು OPS ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದು ಎಲ್ಲಾ ಸರ್ಕಾರಿ ನೌಕರರಿಗೂ ಸಂಬಂಧಪಟ್ಟಿರುವುದಿಲ್ಲ. ಕೇವಲ ಏಪ್ರಿಲ್ 2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿದವರಿಗೆ ಮಾತ್ರ ಎಂದು ತಿಳಿಸಿದೆ. ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಅವರು ಹಳೆ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದಾರೆ.

Read More

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಿಕ್ಕ ಹಾಗಡೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಟೊಮೊಟೊ ಬೆಳೆ ನಾಶವಾಗಿದೆ. ರಾಜಪ್ಪ ಎಂಬವರಿಗೆ ಸೇರಿದ ಒಂದು ಎಕರೆ ಟೊಮೊಟೊ ತೋಟದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕಾಡು ಪ್ರಾಣಿಗಳು ಆಹಾರ ಹರಿಸಿಕೊಂಡು ಕಾಡಿನಿಂದ ನಾಡಿನಕಡೆ ಮುಖ ಮಾಡುತ್ತಿದೆ. ಅದರಲ್ಲೂ ತಮಿಳುನಾಡು ಗಡಿ ಭಾಗದ ವನಕನಹಳ್ಳಿ ಡೆಂಕಣಿಕೋಟೆ ಶಾಣ್ಮಾವು ಹೊಸೂರು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಕರ್ನಾಟಕದ ಗಡಿಭಾಗದಲ್ಲಿ ಕಾಣಿಸಿಕೊಂಡು ಜನರಿಗೆ ನಿದ್ದೆಗೆಡಿಸಿದೆ. ಅದು ಮಾತ್ರವಲ್ಲದೆ ಕಾಡಂಚಿನಲ್ಲಿರುವ ಗ್ರಾಮಗಳಿಗೆ ಮತ್ತು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ವರ್ಷವೆಲ್ಲ ಕಷ್ಟಪಟ್ಟು ಬೆಳೆದ ಬೆಳೆ, ಕಾಡಾನೆಗಳಿಂದಾಗಿ ರೈತನ ಬಾಳಿಗೆ ಕೊಳ್ಳಿ ಇಟ್ಟಿದೆ. ಇನ್ನು ಕಳೆದ ರಾತ್ರಿ ನಾಲ್ಕು ಕಾಡಾನೆಗಳು ತೋಟಕ್ಕೆ ಲಗ್ಗೆ ಇಟ್ಟು ಟೊಮೊಟೊ ರಾಗಿ ಮೆದೆ ದಾಂದಲೆ ನಡೆಸಿದ್ದಲ್ಲದೆ, ರೈತನಿಗೆ ಲಕ್ಷಾಂತರ ರೂಪಾಯಿ ಬೆಳೆ ಹಾನಿ ಮಾಡಿದೆ. ತೋಟಕ್ಕೆ ನುಗ್ಗಿ ಸಂಪೂರ್ಣ ಬೆಳೆನಾಶ ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟ ಆಗಿದೆ. ಇನ್ನು ಅರಣ್ಯ ಅಧಿಕಾರಿಗಳು…

Read More

ಕರಾಚಿ : ದೇಶಾದ್ಯಂತ ರಾಮಮಂದಿರ ಉದ್ಘಾಟನೆಯನ್ನು ಕಣ್ತುಂಬಿಕೊಂಡಿದ್ದಾರೆ. ಐದು ಶತಮಾನಗಳ ಕಾಲ ಭಾರತೀಯರು ಕಾಯುತ್ತಿದ್ದ ಶ್ರೀರಾಮನ ಮಂದಿರ ಸಕಾರಗೊಂಡಿದೆ. ಈ ಮದುರ ಕ್ಷಣವನ್ನು ಕೋಟ್ಯಂತರ ಭಾರತೀಯರು, ಸಿನಿಮಾ ನಟರು, ಕ್ರಿಕೆಟಿಗರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯಕ್ಕೆ ಖಂಡನೆ ವ್ಯಕ್ತಪಡಿಸಿದ್ದು, ಇದು ಪ್ರಜಾಪ್ರಭುತ್ವದ ಮೇಲೆ ಕಪ್ಪುಚುಕ್ಕೆ ಎಂದು ವಿಷ ಕಾರಿಕೊಂಡಿದೆ. ಭಾರತದ ಮುಸ್ಲಿಮರನ್ನು ಮೂಲೆಗುಂಪು ಮಾಡುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಭಾರತದಲ್ಲಿ ಬಹುಸಂಖ್ಯಾತರ ಮೇಲುಗೈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಮುಂದೆ ಕಾಶಿಯ ಜ್ಞಾನವ್ಯಾಪಿ ಮಸೀದಿ ಹಾಗೂ ಮಥುರಾದ ಶಾಹಿ ಈದ್ಗಾ ಮಸೀದಿಗೂ ಸಹ ಆತಂಕ ಶುರುವಾಗಿದೆ. ವಿಶೇಷವಾಗಿ, ವಾರಾಣಸಿ ಜ್ಞಾನವಾಪಿ ಮಸೀದಿ & ಮಥುರಾ ಶಾಹಿ ಈದ್ಗಾ ಮಸೀದಿ ಸೇರಿ ಮಸೀದಿಗಳ ಮೇಲೆ ದೇವಾಲಯ ನಿರ್ಮಿಸಲು ಉದ್ದೇಶಿಸಿರುವ ಪಟ್ಟಿಯೂ ಬೆಳೆಯುತ್ತಿದೆ. ಇದು ಅಪವಿತ್ರತೆ & ವಿನಾಶ’ ಅಂತಾ ಹೇಳಿದೆ ಪಾಕಿಸ್ತಾನ ಸರ್ಕಾರ ಹೇಳಿದೆ. https://twitter.com/ForeignOfficePk/status/1749390207630155801?ref_src=twsrc%5Etfw%7Ctwcamp%5Etweetembed%7Ctwterm%5E1749390207630155801%7Ctwgr%5E58e9fd0eeb8775f2eb6cf2beb4b92fcbf9b08d6a%7Ctwcon%5Es1_&ref_url=https%3A%2F%2Fnews.abplive.com%2Fnews%2Fworld%2Fpakistan-raises-concerns-over-ram-temple-inauguration-cites-growing-majoritarianism-in-india-1658592…

Read More

ಬೆಂಗಳೂರು:- ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಹೋಗಲ್ಲ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ. ಮಂಜುನಾಥ್ ಸೇವಾವಧಿ ಇದೇ ತಿಂಗಳ 31ರಂದು ಮುಕ್ತಾಯವಾಗಲಿದೆ. ಡಾ.ಸಿ.ಎನ್ ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಿಲ್ಲ. ಹೀಗಾಗಿ ಡಾ.ಸಿ.ಎನ್ ಮಂಜುನಾಥ್ ಅವರು ಜನವರಿ 31ರಂದು ನಿವೃತ್ತಿ ಪ್ರಕಟಿಸಲು ತಯಾರಿ ನಡೆಸಿದ್ದಾರೆ. ಅಲ್ಲದೇ, ತಮ್ಮನ್ನು ರಾಜ್ಯ ಸರ್ಕಾರ ಸರಿಯಾಗಿ ಬೀಳ್ಕೊಡದ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್, ಕಲಬುರಗಿ ಜಯದೇವ ಕಂಪ್ಲೀಟ್ ಮಾಡಿ ನಿವೃತ್ತಿ ಆಗಬೇಕು ಎಂದು ಇದ್ದೆ. ಆದರೆ ಇಷ್ಟರ ಒಳಗಡೆ ಈ ರೀತಿ ನಿರ್ಧಾರ ಆಗಿದೆ. ಜನಸಾಮಾನ್ಯರು, ಜನರು ನನಗೆ ಗೌರವ ಕೊಡುತ್ತಾ ಇದ್ದಾರೆ. ಗೌರವಯುತವಾಗಿ ಕಳಹಿಸಿಕೊಡುತ್ತಿದ್ದಾರೆ. ರಾಜಕೀಯಕ್ಕೆ ನಾನು ಹೋಗಲ್ಲ. ನನ್ನ ಮೊದಲ ಆಯ್ಕೆ ನನ್ನ ವೃತ್ತಿ. ಇಲ್ಲಿಂದ ಹೊರ ಹೋದ ಮೇಲೂ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯುತ್ತೇನೆ. ರಾಜಕೀಯ ಇದೆಲ್ಲ ಗಾಳಿ ಸುದ್ದಿ ಎಂದು ಸ್ಪಷ್ಟನೆ…

Read More

ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಆದರೆ ಆಲೂಗಡ್ಡೆಯನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಒಳ್ಳೆಯದಂತೆ. ಆಲೂಗಡ್ಡೆ 2 ಪ್ರತಿಶತದಷ್ಟು ಸಕ್ಕರೆಯಂಶವನ್ನು ಹೊಂದಿರುತ್ತದೆ. ಅಲ್ಲದೇ ಆಲೂಗಡ್ಡೆಯನ್ನು ಹೆಚ್ಚಾಗಿ ಬೇಯಿಸಿ ತಿನ್ನುತ್ತಾರೆ. ಆದರೆ ಆಲೂಗಡ್ಡೆಯನ್ನು ಬೇಯಿಸಿದಾಗ ಅದರ ಸಿಪ್ಪೆ ಕರಗುತ್ತದೆ. ಆದರೆ ಅದರಲ್ಲಿರುವ ಸಕ್ಕರೆಯ ಪ್ರಮಾಣ ಹಾಗೇ ಇರುತ್ತದೆ. ಇದನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳು ಆಲೂಗಡ್ಡೆಯನ್ನು ಬೇಯಿಸಿ ತಿನ್ನಬೇಡಿ. ಹಾಗೇ ಕೆಲವರು ಆಲೂಗಡ್ಡೆಯನ್ನು ಹುರಿದು ತಿನ್ನುತ್ತಾರೆ. ಆದರೆ ಇದನ್ನು ಹುರಿಯುವುದರಿಂದ ಇದರಲ್ಲಿರುವ ಸಕ್ಕರೆಯಂಶ ಕರಗಿ ಹೋಗುತ್ತದೆ. ಇದನ್ನು ಮಧುಮೇಹಿಗಳು ಸೇವಿಸಬಹುದು. ಆದರೆ ಎಣ್ಣೆ ಮತ್ತು ಉಪ್ಪು ಅತಿಯಾಗಿ ಸೇರಿಸಿದ ಆಲೂಗಡ್ಡೆಯನ್ನು ಸೇವಿಸಿದರೆ ಕೊಲೆಸ್ಟ್ರಾಲ್, ಬಿಪಿಯಂತಹ ಸಮಸ್ಯೆಗಳು ಕಾಡುತ್ತದೆಯಂತೆ

Read More

ಕಿಯಾ ಬ್ರಾಂಡ್‌ಗಳಲ್ಲಿ ಒಂದಾಗಿದೆ, ಅದು ಬೆಲೆಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತದೆ. Kia Sonet ಭಿನ್ನವಾಗಿಲ್ಲ ಏಕೆಂದರೆ ಬ್ರ್ಯಾಂಡ್ ಭಾರತದಲ್ಲಿ 2024 ಕ್ಕೆ ಇತ್ತೀಚಿನ ಉಪ-4 ಮೀಟರ್, Sonet ಫೇಸ್‌ಲಿಫ್ಟ್ ಅನ್ನು ಪ್ರಾರಂಭಿಸಿದೆ ಮತ್ತು ನಾವು GTX+ ರೂಪಾಂತರವನ್ನು ಚಾಲನೆ ಮಾಡಬೇಕಾಗಿದೆ, ಇದು 1.5l CRDi VGT 6AT ಎಂಜಿನ್‌ನಿಂದ 85 kW ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು 250 Nm ಟಾರ್ಕ್, ಅಲ್ಪಾವಧಿಗೆ. ಈ ಮೊದಲ ಅನಿಸಿಕೆ ಲೇಖನದಲ್ಲಿ, 2024 Kia Sonet ಅನ್ನು ಪರಿಶೀಲಿಸಲು ಯೋಗ್ಯವಾಗಿದೆಯೇ ಎಂದು ನಾನು ನಿಮಗೆ ಹೇಳುತ್ತೇನೆ. ಕಿಯಾ ಸೋನೆಟ್ 2024: ವಿನ್ಯಾಸ ಕಿಯಾ ಸೋನೆಟ್ 2024 ಅದರ ಪೂರ್ವವರ್ತಿಗಳಿಗಿಂತ ಹೆಚ್ಚು ಭಿನ್ನವಾಗಿಲ್ಲ, ಆದಾಗ್ಯೂ, ಬ್ರ್ಯಾಂಡ್ ಗ್ರಿಲ್, ಹೆಡ್‌ಲೈಟ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳನ್ನು ನವೀಕರಿಸಿದೆ ಮತ್ತು ಹೊಸ ಹಿಂದಿನ ಸ್ಪಾಯ್ಲರ್ ಅನ್ನು ಸೇರಿಸಿದೆ. ಇದು ಇನ್ನೂ ವಿಶಿಷ್ಟವಾದ ಕಿಯಾ ನೋಟವಾಗಿದೆ ಮತ್ತು ಇದು ಸೋನೆಟ್ ಎಂದು ನೀವು ಸುಲಭವಾಗಿ ಹೇಳಬಹುದು. ಹೊಸ ಸಿಗ್ನೇಚರ್ ಟೈಗರ್ ನೋಸ್ ಗ್ರಿಲ್…

Read More

ಇತ್ತೀಚಿನ ದಿನಗಳಲ್ಲಿ ನೀಡಿರುವ ಕೆಲವೇ ಹೇಳಿಕೆಗಳನ್ನು ತಿರುಚಿ ಬೇರೇಯದ್ದೇ ರೂಪ ಕೊಟ್ಟಿರುವ ಬಗ್ಗೆ ಅದರಿಂದ ತಮಗೆ ಮಾನಸಿಕ ಹಿಂಸೆ ಆಗುತ್ತಿದೆ ಎಂದು ರಕ್ಷಕ್ ಹೇಳಿಕೊಂಡಿದ್ದಾರೆ. ನಾನು ಬುಲೆಟ್ ಪ್ರಕಾಶ್ ಅವರ ಮಗ, ನನ್ನ ತಂದೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರನ್ನು ಹರಸಿ ಬೆಳೆಸಿದ್ದೀರಾ. ಅವರ ಮಗನಾಗಿ ನಾನು ಜನಸಿರೋದು ನನ್ನ ಪುಣ್ಯ ಎಂದಿದ್ದಾರೆ. ಬಳಿಕ ನನ್ನ ತಂದೆಯಲ್ಲಿರುವ ನೇರ ನುಡಿ ನನಗೂ ಬಂದಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಿದ್ದಾರೆ. ಅದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದ್ದು, ನಾನು ಯಾರ ಭಾವನೆಗೂ ಧಕ್ಕೆ ತರುವ ಹೇಳಿಕೆಯನ್ನಾಗಲಿ ನೀಡುವುದನ್ನು ಅಭ್ಯಾಸ ಮಾಡಿಕೊಂಡಿಲ್ಲ ಎಂದು ರಕ್ಷಕ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾನು ಎಲ್ಲೇ ಹೋದರೂ ಜನ ಗುರುತಿಸಿ ಪ್ರೀತಿಸಿದ್ದಾರೆ. ಒಂದು ಶುಭ ಸುದ್ದಿಯೆಂದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳಿಗೆ ಅವಕಾಶ ಬಂದಿದ್ದು, ಅದರ ಕೆಲಸದಲ್ಲಿ ಸಕ್ರಿಯನಾಗಿದ್ದೇನೆ ಎಂದು ರಕ್ಷಕ್ ತಿಳಿಸಿದ್ದಾರೆ. ನನ್ನ ಪರಿಶ್ರಮದಿಂದ ಚಿತ್ರಗಳ ಮೂಲಕ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಡಿವೈಡರ್ ಮೇಲೆ ಹಾರಿ ಮುಂದೆ ಬರುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಘಟನೆ ಜರುಗಿದೆ. ಅಪಘಾತವಾದ ಬಳಿಕ ಲಾರಿ ಚಾಲಕ ಪರಾರಿಯಾಗಿದೆ. ಟಾಟಾ ಇನ್ಸ್ಟಿಟ್ಯೂಟ್ ಬಳಿ ರಾತ್ರಿ 12 ಗಂಟೆ ಸುಮಾರಿಗೆ ಯಶವಂತಪುರದಿಂದ ಬರುತಿದ್ದ ಲಾರಿಯ ಚಾಲಕ ಡಿವೈಡರ್ ಹಾರಿಸಿ ಮಲ್ಲೇಶ್ವರಂ ಕಡೆಯಿಂದ ಬರುತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತಕ್ಕೊಳಗಾದ ಬೈಕ್ ಚಾಲಕನ ಮುಖ ಹಾಗೂ ದೇಹದ ಕೆಲ ಭಾಗಗಳಲ್ಲಿ ರಕ್ತಗಾಯ‌ಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿಯ ವೇಗದ ಚಾಲನೆ ನಡುವೆ ಮುಂದೆ ಬರುತಿದ್ದ ಎರಡು ಕಾರುಗಳು ಅಪಘಾತದಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿವೆ. ಕುಡಿದು ಲಾರಿ ಚಲಾಯಿಸಿ ಅಪಘಾತ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಅಪಘಾತವಾದ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರಿ ಠಾಣಾ ಪೊಲೀಸರು, ಲಾರಿ ವಶಕ್ಕೆ ಪಡೆದು ಚಾಲಕನ ಮಾಹಿತಿ ಕಲೆಹಾಕುತ್ತಿದ್ದಾರೆ.

Read More