Author: AIN Author

ಕೊಡಗು: ಬಿಜೆಪಿಗೆ ಜಗದೀಶ್ ಶೆಟ್ಟರ್​ ಮರು ಸೇರ್ಪಡೆಯಾದ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕೊಡಿಗಿನಲ್ಲಿ ಮಾತನಾಡಿದ ಅವರು, ನಿನ್ನೆ ನಾನು ಕರೆ ಮಾತಾಡಿದಾಗ ನಾನು ಹೋಗಲ್ಲ ಎಂದಿದ್ದರು. ನಾವು ಸೀನಿಯರ್​ ಲೀಡರ್​ ಎಂದು ಸ್ಥಾನಮಾನ ಕೊಟ್ಟಿದ್ವಿ. ಈಗ ನಾನು ಫ್ಯಾಕ್ಸ್​​ನಲ್ಲಿ ರಾಜೀನಾಮೆ ಕೊಟ್ತೇನೆ ಅಂದಿದ್ದಾರೆ. https://ainlivenews.com/amit-shah-talks-successful-former-cm-says-goodbye-to-congress/ ಒತ್ತಡದಲ್ಲಿ ಕರೆದುಕೊಂಡು ಹೋಗಿದ್ದಾರೋ ಏನೋ ಗೊತ್ತಿಲ್ಲ. ಟಿಕೆಟ್​ ತಪ್ಪಿಸಿದಾಗ ಶೆಟ್ಟರ್​ಗೆ ದೇಶದ ಹಿತ ಗೊತ್ತಿರಲಿಲ್ವಾ? ನಾವು ಅವರನ್ನ ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ. ನನಗೆ ಈವರೆಗೂ ರಾಜೀನಾಮೆ ಪತ್ರ ತಲುಪಿಲ್ಲ. ಶೆಟ್ಟರ್ ಅವರು ಮಾತಾಡಲಿ ಬಳಿಕ ಮುಂದಿನ ದಿನಗಳಲ್ಲಿ ನಾನು ಮಾತಾಡ್ತೇನೆ ಎಂದರು.

Read More

ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಈ  ಬಗ್ಗೆ ಸಚಿವ ಚೆಲುವರಾಯಸ್ವಾಮಿ  ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/amit-shah-talks-successful-former-cm-says-goodbye-to-congress/ ನಗರದಲ್ಲಿ ಮಾತನಾಡಿದ ಅವರು,   ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಗೊತ್ತಿಲ್ಲ ಆಗೊಂದು ವೇಳೆ ಹೋದರೆ ಅದು ವಿಪರ್ಯಾಸ , ಶೆಟ್ಟರ್ ಅಂತ ನಾಯಕರಿಗೆ ಸರಿ ಹೋಗಲ್ಲ ಎಂದು ಹೇಳಿದ್ದಾರೆ. ಶೆಟ್ಟರ್ ಹೋದ್ರೂ ಅದರಿಂದ ನಮಗೆ ನಷ್ಟವೇನಿಲ್ಲ ಆದರೆ ಲಕ್ಷ್ಮಣ್ ಸವದಿಯವರು‌ ಹೋಗಲ್ಲ ನಾನು ಅವರ ಬಳಿಯೂ ಮಾತನಾಡಿದ್ದೇನೆ ಅವರು ಹೋಗಲ್ಲ ಎಂದಿದ್ದಾರೆ

Read More

ರಾಮಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಿಷ್ಠಾ ಸಮಾರಂಭ ರಾಜಕೀಯಗೊಳಿಸುವುದನ್ನು ಸುಮ್ಮನೆ ನೋಡುತ್ತಾ ಕೂರಲಾಗದು ಎಂದು ನಟಿ ಶ್ರುತಿ ಹರಹರನ್ ಹೇಳಿದ್ದಾರೆ. ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಅವರು, ಧರ್ಮದ ವಿಷಯದಲ್ಲಿ ರಾಜಕೀಯ ನಡೆಯುತ್ತಿದೆ. ಇದು ಸುಮ್ಮನೆ ನೋಡುತ್ತಾ ಕೂರಬೇಕಾದ ಸಂಗತಿಯಲ್ಲ ಎಂದು ಬರೆದುಕೊಂಡಿದ್ದಾರೆ. ‘ಜೈ ಶ್ರೀರಾಮ್’ ಎಂದು ಹೇಳಲು ಯಾವುದೇ ತೊಂದರೆ ಇಲ್ಲ. ರಾಮನ ಗುಣಗಳಿಂದ ಯಾರು ತಾನೆ ಪ್ರೇರಿತರಾಗುವುದಿಲ್ಲ? ಹನುಮಂತನು ರಾಮ ತನ್ನಲ್ಲಿದ್ದಾನೆ ಎನ್ನುವುದನ್ನು ತೋರಿಸಲು ಎದೆಯನ್ನೇ ಸೀಳಿದ್ದು ಕಾಕತಾಳೀಯವಲ್ಲ. ರಾಮನನ್ನು ನಮ್ಮೊಳಗೆ ನಾವು ಹುಡುಕಿಕೊಳ್ಳಬೇಕು. ಈ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿಯೇ ರಾಮಾಯಣದೊಳಗೆ ಇದನ್ನು ಸೇರಿಸಲಾಗಿದೆಯೇ? ಪ್ರಶ್ನಿಸಿದ್ದಾರೆ. ಪ್ರಸ್ತುತ ಸಮಯದಲ್ಲಿ ಸಂವಿಧಾನ ನೆನಪಿಸಿಕೊಳ್ಳುವುದು ಏಕೆ ಮುಖ್ಯ? ಸದ್ಯದ ಪರಿಸ್ಥಿತಿಯಲ್ಲಿ ಯಾವುದು ಉತ್ತಮವೋ ಅದರಲ್ಲಿ ಸಾಗಬೇಕು. ಈ ಸಂದರ್ಭದಲ್ಲಿ ಸಂವಿಧಾನ ನೆನೆಯುವುದು ಅಗತ್ಯ. ಏಕೆಂದರೆ, ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕು. ಅಲ್ಲದೆ, ಯಾವುದೇ ನಿರ್ದಿಷ್ಟ ಧರ್ಮವನ್ನುಪೋಷಿಸುವುದು ಅಥವಾ ಅದರ ವಿರುದ್ಧ ತಾರತಮ್ಯ ಮಾಡಬಾರದು ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಂದು…

Read More

ಕೊಡಗು: ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್ʼ​ಗೆ​​​​ ಯಾವುದೇ ಅನ್ಯಾಯ ಆಗಿಲ್ಲ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ಮರು ಸೇರ್ಪಡೆಯಾಗಿರುವ ವಿಚಾರಕ್ಕೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಚುನಾವಣೆಯಲ್ಲಿ ಸೋತರೂ ಶೆಟ್ಟರನ್ನು ಎಂಎಲ್​ಸಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಒಮ್ಮೆ ಅವರು ನನಗೆ ಬಿಜೆಪಿಯಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು ಎಂದು ತಿಳಿಸಿದ್ದಾರೆ. ಇನ್ನು ನಿಗಮ‌ ಮಂಡಳಿ‌ ನೇಮಕ ವಿಚಾರ ಸಂಬಂಧ ಮಾತನಾಡಿದ ಸಿಎಂ, ನಾವೇನು ಗುಲಾಮರಾ ಎಂಬ ಸಚಿವ ಕೆ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ವೊಬ್ಬರು ಒಂದೊಂದು ಹೆಸರನ್ನ ಸಜೆಸ್ಟ್ ಮಾಡ್ತಾರೆ. https://ainlivenews.com/amit-shah-talks-successful-former-cm-says-goodbye-to-congress/ ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದು ತಿಳಿಸಿದ್ದಾರೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಈ ವಿಚಾರ ರಾಜಕೀಯ…

Read More

ಬೆಂಗಳೂರು : ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಕಾಂಗ್ರೆಸ್​ ತೊರೆದು ಮರಳಿ ಬಿಜೆಪಿಗೆ ವಾಪಾಸ್​ ಬಂದಿರುವುದು ಅತ್ಯಂತ ಸಂತೋಷ ತಂದಿದೆ, ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಅಭಿಪ್ರಾಯಪಟ್ಟರು. ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿಯ ಕಟ್ಟಾಳು ಜಗದೀಶ್​ ಶೆಟ್ಟರ್ ಅವರು ಕಾಲದಿಂದಲೂ ಸಂಘ ಪರಿವಾರದ ಶಿಸ್ತಿನ ಸಿಪಾಯಿ, ಸರ್ಕಾರದ ಅನೇಕ ಅಭಿವೃದ್ದಿಕಾರ್ಯಗಳನ್ನು ಮಾಡಿ ಸಿಎಂ ಪಟ್ಟಕ್ಕೆ ಏರಿದ್ದರು. ಸದ್ಯ, ಬಿಜೆಪಿಗೆ ಶೆಟ್ಟರ್ ವಾಪಾಸ್ ಬಂದಿದ್ದಾರೆ. ಈಗ ಯಾಕೆ ಬಂದ್ರು ಅಂತ ಕಾರಣ ಹುಡುಕೋ ಸಮಯ ಇದಲ್ಲ, ಲೋಕಸಭೆ ಚುನಾವಣೆಯಲ್ಲಿ ಈ ಭಾರಿ 28ಕ್ಕೆ 28 ಗೆಲ್ಲಬೇಕು. ಡಿಕೆಶಿ ಹೇಳ್ತಿದ್ರು ಶೆಟ್ಟರ್ ಹೋಗಲ್ಲ ಅಂತ. ಈಗ ಶೆಟ್ಟರ್ ವಾಪಸ್ ಬಂದಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಭಾರಿ ಪ್ರಧಾನಿ ಆಗಬೇಕು. INDI ಒಕ್ಕೂಟದಿಂದ ಮಮತಾ, ಪಂಜಾಬ್ ಸಿಎಂ ವಾಪಸ್ ಹೋಗಿದ್ದಾರೆ. ಒಕ್ಕೂಟ ಛಿದ್ರ, ಛಿದ್ರ ಆಗಿದೆ. ಶೆಟ್ಟರ್ ಈಗಾಗಲೇ ಬಿಜೆಪಿಗೆ ವಾಪಸ್​ ಬಂದಿದ್ದಾರೆ, ಬೇರೆ ಯಾರು…

Read More

ನವದೆಹಲಿ: ಕಾಂಗ್ರೆಸ್‌ ಪಕ್ಷದಿಂದ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಮಾತನಾಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಸಂದರ್ಭದಲ್ಲಿ ಅವರು ಕೂಡ ಒಳ್ಳೆಯ ರೀತಿಯಲ್ಲಿ ಗೌರವ ಸ್ಥಾನ-ಮಾನವನ್ನು ಕೊಟ್ಟಿದ್ದಾರೆ ಎಂದರು. ಇಲ್ಲಿಯವರೆಗೆ ಸಹಕಾರ ಕೊಟ್ಟಿದಕ್ಕಾಗಿ ಡಿ.ಕೆ ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಸಂದರ್ಭದಲ್ಲಿ ಜಗದೀಶ್‌ ಶೆಟ್ಟರ್‌ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನೂ ಎಂಎಲ್‌ಸಿ ಸ್ಥಾನಕ್ಕೆ ಇ-ಮೇಲ್ ಮೂಲಕ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೂ ರಾಜೀನಾಮೆ ಸಲ್ಲಿಸಿದ್ದೇನೆ. 8-9 ತಿಂಗಳಿನಿಂದಲೂ ಕಾಂಗ್ರೆಸ್ಸಲ್ಲಿ ಸಾಕಷ್ಟು ಒತ್ತಡವಿತ್ತು. ಇದೀಗ ನಾನು ಬಿಜೆಪಿ ಮರು ಸೇರ್ಪಡೆಯಾಗಿದ್ದಕ್ಕೆ ಬಹಳ ಸಂತಸವಾಗಿದೆ ಎಂದು ಹೇಳಿದರು.  https://ainlivenews.com/amit-shah-talks-successful-former-cm-says-goodbye-to-congress/ ಬಿಜೆಪಿಯಿಂದ ಅಸಮಾಧಾನಗೊಂಡಿದ್ದ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ಗೆ ಸೇರಿದ್ದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಇದೀಗ ಮತ್ತೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ದೆಹಲಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಸುದೀರ್ಘವಾದ ಚರ್ಚೆ…

Read More

ಕೋಲಾರ: ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಪಲಪುಷ್ಪ ಪ್ರದರ್ಶನವನ್ನು ನಾಳೆಯಿಂದ ಮೂರು ದಿನಗಳ‌ ಕಾಲ ಆರಂಭವಾಗಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಸಿರಿಧಾನ್ಯಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಮೂರು ದಿನಗಳ ಕಾಲ ಈ ಮೇಳವನ್ನು ಆಯೋಜಿಸಲಾಗಿದೆ. ಸಿರಿಧಾನ್ಯಗಳಲ್ಲಿ ವಿವಿಧ ತಿಂಡಿ ತಿನಿಸು ತಯಾರಿಸುವ ಸ್ಪರ್ಧೆ ಹಾಗೂ ಮಾರಾಟ ಇರಲಿದ್ದು ಪುಷ್ಪಗಳಿಂದ ತಯಾರಿಸಲಾದ ಡೈನೋಸರ್, ಅಂಬಾರಿ ಹೊತ್ತಿದ್ದ ಆನೆ ಅರ್ಜುನನ ಮರಳಿನ ಆಕೃತಿ ತರಾಕಾರಿಗಳಿಂದ ವಿವಿಧ ರೀತಿಯ ಕಲಾಕೃತಿಗಳು ರಾಮ ಮಂದಿರ , ಗ್ರಾಮೀಣದಲ್ಲಿ ಇರುವಂತಹ ಮನೆ ನಾನ ಜಾತಿಯ ಪ್ರಭೇದದ ಹೂವು, ಅಲಂಕಾರಿಕ ಹೂವು, ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ಇರಲಿದೆ. ಅಲ್ಲದೇ, ಹೊರಾಂಗಣ, ಒಳಾಂಗಣ ಉದ್ಯಾನ, ಕೈತೋಟದ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ. ವೈವಿಧ್ಯಮಯ ಹೂ ಕುಂಡಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ ಕೃಷಿ ಸಂಬಂಧಿಸಿದ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಯೂ ಇರಲಿದೆ. ಕೃಷಿ ಪದ್ಧತಿ ಕುರಿತು ಮಾಹಿತಿಯನ್ನು ಸಹ…

Read More

ಕಲಬುರಗಿ: ಅಯೋಧ್ಯೆಯಲ್ಲಿ ಕರ್ನಾಟಕ ಭವನ ಕಟ್ಟಲು ನಾಲ್ಕು ಎಕರೆ ಭೂಮಿ ಕೊಡುವಂತೆ ಯುಪಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಅಂತ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಕಲಬುರಗಿಯಲ್ಲಿಂದು ಮಾತನಾಡಿದ ರಾಮಲಿಂಗಾರೆಡ್ಡಿ ಈ ಹಿಂದೆ ಬೊಮ್ಮಾಯಿ ಸಹ ಪತ್ರ ಬರೆದಿದ್ದರು. ನಾನೂ ಸಹ ಪತ್ರ ಬರೆದಿರುವೆ. ಆದಷ್ಟು ಬೇಗ ಭೂಮಿ ಕೊಡುವ ವಿಶ್ವಾಸವಿದೆ.. ಭೂಮಿ ಕೊಟ್ಟ ನಂತ್ರ ಕಟ್ಟಡದ ಬ್ಲೂಪ್ರಿಂಟ್ ರೆಡಿ ಮಾಡ್ತೇವೆ ಅಂದ್ರು.

Read More

ಚಾಮರಾಜನಗರ: ರಾಜ್ಯದ ಗಮನ ಸೆಳೆಯುವ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಜಾತ್ರೆ ಇಂದು ರಾತ್ರಿ ಆರಂಭಗೊಳ್ಳಲಿದ್ದು, ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಲಿದ್ದಾರೆ. ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪೌರಾಣಿಕ, ಐತಿಹಾಸಿಕ ಕ್ಷೇತ್ರವಾದ ಚಿಕ್ಕಲ್ಲೂರಿನಲ್ಲಿ ಜ. 25 ರಿಂದ 29ರ ವರೆಗೆ ನಡೆಯುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಇಂದು ರಾತ್ರಿ ಚಂದ್ರಮಂಡಲೋತ್ಸವ ನೆರವೇರಿಸುವ ಮೂಲಕ ಚಾಲನೆ ದೊರೆಯಲಿದೆ. ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಟೆಂಟ್​ಗಳನ್ನು ಹಾಕಿ ಬಿಡಾರ ಹೂಡಲಿದ್ದು, ಒಂದೊಂದು ಸಮುದಾಯದವರು ಒಂದೊಂದು ಸೇವೆ ಸಲ್ಲಿಸಲಿದ್ದಾರೆ. 5 ಹಗಲು 5 ರಾತ್ರಿ ನಡೆಯುವ ಈ ಜಾತ್ರೆಯಲ್ಲಿ 4 ನೇ ದಿನ ಪಂಕ್ತಿ ಸೇವೆ ನಡೆಸಲಿದ್ದು, ಮಾಂಸದ ಅಡುಗೆ ಮಾಡಿ ಸಿದ್ದಪ್ಪಾಜಿ ದೇವರಿಗೆ ಎಡೆ ಇಟ್ಟು ಸಹಪಂಕ್ತಿ ಭೋಜನ ಮಾಡಲಿದ್ದಾರೆ.  

Read More

ಹುಬ್ಬಳ್ಳಿ: ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತ್ರವಲ್ಲ ಯಾರೂ ಕೂಡ ಅನಿವಾರ್ಯವಲ್ಲ. ಶೆಟ್ಟರನ್ನು ಬಿಜೆಪಿಗೆ ಕರೆತರುವ ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಶೆಟ್ಟರ್ ಬಿಜೆಪಿಗೆ ಬರುತ್ತಿದ್ದಾರೇ ಎಂಬುವಂತ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡದ ಅವರು, ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ. ನಾನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಮಾತನಾಡಿದ್ದೇನೆ. ಶೆಟ್ಟರ್ ಕರೆತರುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದಿದ್ದಾರೆ ಎಂದರು. ಇನ್ನೂ ಬಿಜೆಪಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಶೆಟ್ಟರ್ ಭೇಟಿ ಮಾಡಿರುವ ಬಗ್ಗೆ ಮಾತನಾಡಿದ ಅವರು, ಇದೆಲ್ಲಾ ಸುದ್ಧ ಸುಳ್ಳ. ಇಂತಹ ಯಾವುದೇ ಬೆಳವಣಿಗೆ ಕೂಡ ನಡೆದಿಲ್ಲ. ನಮ್ಮ ನಾಯಕರು ಕೂಡ ಎಲ್ಲಿಯೂ ಕೂಡ ಹೇಳಿಲ್ಲ. ಇಂತಹ ಬೆಳವಣಿಗೆ ನಡೆದಿದ್ದೇ ಆದರೇ ಅವರೇ ಬಹಿರಂವಾಗಿ ಹೇಳಲಿ ಎಂದು ಅವರು ಹೇಳಿದರು. ಇನ್ನೂ ಮೋದಿಯವರ ಭೇಟಿಯ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಇದೆಲ್ಲವೂ…

Read More