Author: AIN Author

ಕೊಡಗು: ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ರಾಜ್ಯದ ಮುಖ್ಯಮಂತ್ರಿಗಳು ವಿರಾಜಪೇಟೆಗೆ ಆಗಮಿಸಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕೊಡಗು ಉಸ್ತುವಾರಿ ಸಚಿವ ಬೋಸರಾಜು, ಆಗಮಿಸಿದ್ದಾರೆ. ಬಿಟ್ಟಂಗಾಲದ ಗರ್ಲ್ಸ್ ಗ್ರೌಂಡಿಗೆ ಹೆಲಿಕ್ಯಾಪ್ಟರ್ ಮೂಲಕ ಬಂದು ಇಳಿದ ಮುಖ್ಯಮಂತ್ರಿಗಳನ್ನು ಜಿಲ್ಲೆಯ ಇಬ್ಬರು ಶಾಸಕರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪುಷ್ಪಗಚ್ಛವನ್ನು ನೀಡಿ ಅವರನ್ನು ಬರಮಾಡಿಕೊಂಡರು. https://ainlivenews.com/amit-shah-talks-successful-former-cm-says-goodbye-to-congress/ ನಂತರ ನೇರವಾಗಿ ವಿರಾಜಪೇಟೆಯಲ್ಲಿರುವ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣನವರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ಹಾಗೂ ಸಚಿವರುಗಳನ್ನು ಶಾಸಕ ಪೊನ್ನಣ್ಣ ಕೊಡಗಿನ ಸಾಂಪ್ರದಾಯಿಕ ಪೇಟೆ ತೊಡಿಸಿ ಬರಮಾಡಿಕೊಂಡರು.

Read More

ಹಿರಿತೆರೆಯಲ್ಲಿ ಮೊದಲ ಚಿತ್ರ ನಿರ್ದೇಶಿಸುವವರು ಮೊದಲು ಕಿರುಚಿತ್ರದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. ಎಷ್ಟೋ ಕಿರುಚಿತ್ರಗಳು ಜನರ ಮನಸ್ಸಿಗೆ ಹತ್ತಿರವಾಗಿರುವುದು ಹೌದು. ಅಂತಹ ವಿಭಿನ್ನ ಕಿರುಚಿತ್ರ ಲವ್ ರೀಸೆಟ್ (Love Reset) ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀಗಣೇಶ್ ನಿರ್ದೇಶಿಸಿ, ಪುಟ್ಟಕ್ಕನ ಮಕ್ಕಳು ಖ್ಯಾತಿಯ ಪವನ್ ಕುಮಾರ್ (Pawan Kumar) ಹಾಗೂ ಸಂಜನಾ ಬುರ್ಲಿ (Sanjana Burli) ನಾಯಕ, ನಾಯಕಿಯಾಗಿ ನಟಿಸಿರುವ ಈ ಕಿರುಚಿತ್ರದ ಪ್ರೀಮಿಯರ್ ಹಾಗೂ ಪತ್ರಿಕಾಗೋಷ್ಠಿ ಇತ್ತೀಚಿಗೆ ನಡೆಯಿತು. ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡದವರು, ಬಿಗ್ ಬಾಸ್ ಖ್ಯಾತಿಯ ಸ್ನೇಹಿತ್, ಭೂಮಿ ಶೆಟ್ಟಿ, ರಮೇಶ್ ಪಂಡಿತ್, ಕಲಾಗಂಗೋತ್ರಿ ಮಂಜು, ಪದ್ಮಕಲಾ ಸೇರಿದಂತೆ ಅನೇಕ ಗಣ್ಯರು ಪ್ರೀಮಿಯರ್ ಗೆ ಆಗಮಿಸಿ ತಂಡಕ್ಕೆ ಶುಭ ಕೋರಿದರು. ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ಶ್ರೀಗಣೇಶ್,  ನಾನು ಮೂಲತಃ ಐಟಿ ಉದ್ಯೋಗಿ.  ಸಿನಿಮಾ ಮಾಡಬೇಕೆಂಬ ಆಸೆಯಿದೆ. ಅದರ ಪೂರ್ವಭಾವಿಯಾಗಿ ಈ ಕಿರುಚಿತ್ರ ಮಾಡಿದ್ದೇನೆ. ಇದೊಂದು ಪ್ರೇಮ ಕಥಾನಕ. ಈಗಿನ ಪ್ರೇಮಿಗಳ ಮನಸ್ಥಿತಿಯನ್ನು 25 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ…

Read More

ಮಲಯಾಳಂ ಸಿನಿಮಾ ರಂಗ ಕಂಡ ಹೆಸರಾಂತ ನಟ ಫಹಾದ್ ಫಾಸಿಲ್ (Fahad Faasil), ಇದೀಗ ಮತ್ತೊಂದು ತಮಿಳು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಮಾಮಣ್ಣಾನ್ ಸಿನಿಮಾದಲ್ಲಿ ವಡಿವೇಲು ಜೊತೆ ನಟಿಸಿದ್ದ ಫಹಾದ್, ಈ ಹೊಸ ಸಿನಿಮಾದಲ್ಲೂ ಮತ್ತೊಮ್ಮೆ ವಡಿವೇಲು ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಜೋಡಿಯ ಚಿತ್ರಕ್ಕೆ ಮಾರೀಸನ್ ಎಂದು ಟೈಟಲ್ ಇಡಲಾಗಿದೆ. ಮಾಮಣ್ಣಾನ್ ಸಿನಿಮಾದಲ್ಲಿ ವಡಿವೇಲು ತಮ್ಮ ಎಂದಿನಂತೆ ಹಾಸ್ಯ ಪಾತ್ರಬಿಟ್ಟು ಗಂಭೀರ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಕೀರ್ತಿ ಸುರೇಶ್, ಉದಯನಿಧಿ ಸ್ಟಾಲಿನ್ ಮುಖ್ಯ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿನ ಫಹಾದ್ ಪಾತ್ರ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಗೆಲುವಿನ ಬೆನ್ನಲ್ಲೇ ಫಹಾದ್ ಮಾರೀಸನ್ ಒಪ್ಪಿಕೊಂಡಿದ್ದಾರೆ. ಕೇರಳದ ಮೂಲದ ಸುಧೀಶ್ ಶಂಕರ್ ಹೊಸ ಚಿತ್ರದ ನಿರ್ದೇಶಕರು. ಸೂಪರ್ ಗುಡ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ. ತಾರಾಗಣ ಇನ್ನೂ ಆಯ್ಕೆಯಾಗಿಲ್ಲವಾದರೂ, ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಶುರುವಾಗಿದೆ.

Read More

ಬೆಂಗಳೂರು: ರಾಜ್ಯ ಕಾಂಗ್ರೆಸ್‌  ಸರಕಾರ ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ ಮುಂದುವರಿಸಿದೆ. ಗೌರವಾನ್ವಿತ ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ (OPS) ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿರುವ ಅವರು,  ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 1-4-2006ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದೆ. ನಂತರ ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ. ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ ಮೇ ತಿಂಗಳಲ್ಲಿಯೇ OPS ಜಾರಿ ಮಾಡುವ ಭರವಸೆ ನೀಡಿದ್ದರು ಸಿದ್ದರಾಮಯ್ಯ. 2023 ಮೇ 20ರಂದು ಪ್ರಮಾಣ ಸ್ವೀಕರಿಸಿದ ಅವರು, ಸರಕಾರ ಬಂದ ಎರಡೇ ದಿನಕ್ಕೆ ಈ…

Read More

ಬೆಂಗಳೂರು: ಜಗದೀಶ್‌ ಶೆಟ್ಟರ್‌ ಮತ್ತೆ ಬಿಜೆಪಿ ಸೇರಿದ್ದು ಕೇಳಿ  ನಮಗೂ ಆಶ್ಚರ್ಯ ಆಯ್ತು, ಇದೊಂದು ದುರದೃಷ್ಟಕರ ವಿಚಾರ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ ನಗರದಲ್ಲಿ ಮಾತನಾಡಿದ ಅವರು,  ಅವರ ಮತಕ್ಷೇತ್ರದಲ್ಲಿ ಪಕ್ಷಕಟ್ಟಿ ಬೆಳೆಸಿದ್ರು ಕೇವಲ ಒಂದು ಟಿಕೆಟ್ ಕೊಡಲಿಲ್ಲ ಅಂತ ಸಂದರ್ಭದಲ್ಲಿ ನಾವು ಟಿಕೆಟ್ ಕೊಟ್ವಿ ಅವ್ರು ಪರಾಭವಗೊಂಡ್ರು, ಆದ್ರೂ ಎಂಎಲ್ ಸಿ‌ ಮಾಡಿದ್ವಿ ಅವರನ್ನ ಗೌರವಿಸುವ ಕೆಲಸ ಮಾಡಿದ್ವಿ ಎಂದರು. ಪಾರ್ಲಿಮೆಂಟ್ ಎಲೆಕ್ಷನ್ ನಂತ್ರ ಅವರಿಗೆ ಒಳ್ಳೆಯ ಭವಿಷ್ಯ ಇತ್ತು ಆದ್ರೂ ಕೂಡ ತರಾತುರಿಯಲ್ಲಿ ಹೋಗಿದ್ದಾರೆ ಅವರು ಮಾಜಿ ಸಿಎಂ, ಅವರ ಮೇಲೆ ಏನ್ ಒತ್ತಡ ಇತ್ತೋ ಏನ್ ಆಮೀಷ ಒಡ್ಡಿದ್ದರೋ ಗೊತ್ತಿಲ್ಲ ಒಂದ್ವೇಳೆ ಆಮೀಷ ಒಡ್ಡಿದ್ದರೆ, ಅದಕ್ಕೆ ನಿರ್ಧಾರ ತೆಗೆದುಕೊಂಡಿದ್ರೆ ದುರದೃಷ್ಟಕರ ಅವ್ರು ಏನ್ ಹೇಳ್ತಾರೋ, ಏನ್ ಕಾರಣ ಕೊಡ್ತಾರೋ ನೋಡೋಣ ಆಮೀಷ ಒಳಗಾಗಿದ್ರೆ ಅವರ ಘನತೆಗೆ ಹಿನ್ನಡೆ ಆಗುತ್ತೆ ನಮಗೆ ಹಿನ್ನಡೆ ಅಂತಲ್ಲ ಇವರ ವೈಯಕ್ತಿಯ ನಿರ್ಧಾರಕ್ಕೆ ಲಿಂಗಾಯತರು ಒಪ್ಪಬೇಕಿಲ್ಲ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ…

Read More

ಬೆಂಗಳೂರು: ಶೆಟ್ಟರ್‌ ಬಿಜೆಪಿ ಸೇರ್ಡೆ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಕೂಡ ಬಿಜೆಪಿ ಸೇರ್ತಾರೆ ಎನ್ನುವ ಗುಮಾನಿಗಳು ಹರಡುತ್ತಿದ್ದವು ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.  ನನ್ನ ನಿಲುವು ಸ್ಪಷ್ಟ. ನಾನು ಬಿಜೆಪಿಗೆ ಹೋಗಲ್ಲ ಎಂದು ಹೇಳಿದ ಲಕ್ಷ್ಮಣ್‌ ಸವದಿ. ಪಕ್ಷ ಬಿಡಲ್ಲ ಎಂಬುಂದನ್ನ ಪದೇ ಪದೇ ಉಚ್ಚಾರಿಸಿದ ಲಕ್ಷ್ಮಣ್ ಸವದಿ ನಾನು ಅವರು ಒಟ್ಟಿಗೆ ನಿರ್ಧಾರ ಮಾಡಿ ಕಾಂಗ್ರೆಸ್ ಗೆ ಹೋಗಿರಲಿಲ್ಲ ನಾನು ಮೊದಲು ಬಂದೆ ಟಿಕೆಟ್ ಸಿಗದ ಕಾರಣ ನಂತರ ಶೆಟ್ಟರು ಬಂದರು ಯಾಕೆ ಹೋಗಿದ್ದಾರೆ ಅಂತ ಗೊತ್ತಿಲ್ಲ ಎಂದು ಹೇಳಿದರು. ನಾನು ಅವರು ಸ್ನೇಹಿತರು,ದಿನ ನಾವಿ‌ಬ್ಬರು ಮಾತನಾಡುತ್ತೇವೆ ಆದರೆ ಅವರು ಈ ನಿರ್ಧಾರ ಮಾಡ್ತಾರೆ ಅಂತ ಗೊತ್ತಿರಲಿಲ್ಲ ಲೋಕಸಭೆ ಚುನಾವಣಾ ಹಿನ್ನೆಲೆ ಅವರಿಗೆ ನಮ್ಮ ಅನಿರ್ವಾಯತೆ ಇದೆ ಹಾಗಾಗಿ ಸಂಪರ್ಕ ಮಾಡ್ತಾ ಇದ್ದಾರೆ ಸಚಿವ ಸ್ಥಾನ ನೀಡುವ ವಿಚಾರ  ಬಗ್ಗೆ ಈಗ ಮಾತನಾಡೋದು ಸೂಕ್ತ ಅಲ್ಲ ಪಕ್ಷ ಏನು ಹೇಳುತ್ತೋ ಅದನ್ನ ಮಾಡುತ್ತೇನೆ ದೆಹಲಿಗೆ ಹೋಗುವುದಾದರೆ…

Read More

ಬೆಂಗಳೂರು: ಶೆಟ್ಟರ್‌ ಮತ್ತೆ ಇಂದು ಬಿಜೆಪಿ ಸೇರಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ  ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ನಿನ್ನೆ ಬೆಳಿಗ್ಗೆ ನನ್ನ ಜೊತೆ ಮಾತನಾಡಿದ್ದರು ಆಗಲೂ ಹೇಳಿದರು ಆ ರೀತಿ ಏನು ಇಲ್ಲಾ ಅಂತ ಈಗ ಈ ತೀರ್ಮಾನ ಕೈಗೊಂಡಿದ್ದಾರೆ… ಅವರು ಮಾತನಾಡಲಿ ಮೊದಲು ಅವರು ಮಾತನಾಡಿದ ನಂತರ ನಾನು ಪ್ರತಿಕ್ರಿಯಿಸುತ್ತೇನೆ ಆದರೆ ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು. 35 ಸಾವಿರ ಮತಗಳ ಅಂತರದಲ್ಲಿ ಸೋತಾಗಲು ನಾವು ಗೌರವದಿಂದ ಅವರನ್ನ ಎಂಎಲ್ ಸಿ ಮಾಡಿದ್ದೇವೆ ಯಾವ ಕಾರಣಕ್ಕೆ ಹೋಗಿದ್ದಾರೆ ಯಾವುದಾದರೂ ಒತ್ತಡದಿಂದ ಹೋಗಿದ್ದಾರಾ…? ದೇಶದ ಹಿತಕ್ಕಾಗಿ ಹೋದರೆ, ಅವತ್ತು ಟಿಕೆಟ್ ತಪ್ಪಿದಾಗ ದೇಶದ ಹಿತ ಇರಲಿಲ್ವಾ…? ಎಂದು ಪ್ರಶ್ನೆ ಮಾಡಿದರು ಶೆಟ್ಟರ್ ಕೇಸ್ ಬೇರೆ, ಇನ್ನು ಬೇರೆ ಯಾರು ಕಾಂಗ್ರೆಸ್ ಬಿಡಲ್ಲ ಯಾರೂ ಹೋಗಲ್ಲ ಎಂದು ಹೇಳಿದರು.

Read More

ಜನವರಿ 25 ರಂದು ಹೈದರಾಬಾದ್‌ನಲ್ಲಿ ಮೊದಲನೇ ಟೆಸ್ಟ್‌ ಪಂದ್ಯ ಆರಂಭವಾಗಲಿದೆ ಈ ಟೆಸ್ಟ್‌ ಸರಣಿಯಲ್ಲಿ ಕೆಎಲ್‌ ರಾಹುಲ್‌ ವಿಕೆಟ್‌ ಕೀಪರ್ ಆಗಿ ಆಡುವುದಿಲ್ಲ. ಪೂರ್ಣ ಪ್ರಮಾಣದ ಇಬ್ಬರು ವಿಕೆಟ್‌ ಕೀಪರ್‌ಗಳ ಪೈಕಿ ಒಬ್ಬರು ವಿಕೆಟ್ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆಂದು ಟೀಮ್ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಸ್ಪಷ್ಟಪಡಿಸಿದ್ದಾರೆ. ಉಭಯ ತಂಡಗಳು ಐದು ಟೆಸ್ಟ್‌ ಸರಣಿಯಲ್ಲಿ ಕಾದಾಟ ನಡೆಸಲಿವೆ. ರಿಷಭ್‌ ಪಂತ್‌ ಅಲಭ್ಯತೆಯಿಂದಾಗಿ ಭಾರತ ಟೆಸ್ಟ್‌ ತಂಡದಲ್ಲಿ ಕೆಎಸ್‌ ಭರತ್‌, ಇಶಾನ್‌ ಕಿಶನ್‌, ಕೆಎಲ್‌ ರಾಹುಲ್ ಅವರು ಇಷ್ಟು ದಿನಗಳ ಕಾಲ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇದೀಗ ಇಂಗ್ಲೆಂಡ್‌ ಟೆಸ್ಟ್‌ ಸರಣಿಗೆ ಇಶಾನ್‌ ಕಿಶನ್ ಅವರನ್ನು ಕೈ ಬಿಟ್ಟಿದ್ದು ಪೂರ್ಣ ಪ್ರಮಾಣದ ವಿಕೆಟ್‌ ಕೀಪರ್‌ಗಳಾಗಿ ಕೆಎಸ್‌ ಭರತ್‌ ಮತ್ತು ಧೃವ್‌ ಜುರೆಲ್‌ಗೆ ಅವಕಾಶ ನೀಡಲಾಗಿದೆ. ಮೊದಲನೇ ಟೆಸ್ಟ್‌ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್‌ ದ್ರಾವಿಡ್‌, “ಕೆಎಲ್‌ ರಾಹುಲ್‌ ಈ ಟೆಸ್ಟ್‌ ಸರಣಿಯಲ್ಲಿ ವಿಕೆಟ್‌ ಕೀಪರ್‌ ಆಗಿ ಆಡುವುದಿಲ್ಲ. ವಿಕೆಟ್‌…

Read More

ಕೊಡಗು: ಬಿಜೆಪಿಗೆ ಜಗದೀಶ್ ಶೆಟ್ಟರ್​ ಮರು ಸೇರ್ಪಡೆಯಾದ ವಿಚಾರ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕೊಡಿಗಿನಲ್ಲಿ ಮಾತನಾಡಿದ ಅವರು, ನಿನ್ನೆ ನಾನು ಕರೆ ಮಾತಾಡಿದಾಗ ನಾನು ಹೋಗಲ್ಲ ಎಂದಿದ್ದರು. ನಾವು ಸೀನಿಯರ್​ ಲೀಡರ್​ ಎಂದು ಸ್ಥಾನಮಾನ ಕೊಟ್ಟಿದ್ವಿ. ಈಗ ನಾನು ಫ್ಯಾಕ್ಸ್​​ನಲ್ಲಿ ರಾಜೀನಾಮೆ ಕೊಟ್ತೇನೆ ಅಂದಿದ್ದಾರೆ. https://ainlivenews.com/amit-shah-talks-successful-former-cm-says-goodbye-to-congress/ ಒತ್ತಡದಲ್ಲಿ ಕರೆದುಕೊಂಡು ಹೋಗಿದ್ದಾರೋ ಏನೋ ಗೊತ್ತಿಲ್ಲ. ಟಿಕೆಟ್​ ತಪ್ಪಿಸಿದಾಗ ಶೆಟ್ಟರ್​ಗೆ ದೇಶದ ಹಿತ ಗೊತ್ತಿರಲಿಲ್ವಾ? ನಾವು ಅವರನ್ನ ಬಹಳ ಗೌರವದಿಂದ ನಡೆಸಿಕೊಂಡಿದ್ದೇವೆ. ನನಗೆ ಈವರೆಗೂ ರಾಜೀನಾಮೆ ಪತ್ರ ತಲುಪಿಲ್ಲ. ಶೆಟ್ಟರ್ ಅವರು ಮಾತಾಡಲಿ ಬಳಿಕ ಮುಂದಿನ ದಿನಗಳಲ್ಲಿ ನಾನು ಮಾತಾಡ್ತೇನೆ ಎಂದರು.

Read More

ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಈ  ಬಗ್ಗೆ ಸಚಿವ ಚೆಲುವರಾಯಸ್ವಾಮಿ  ಪ್ರತಿಕ್ರಿಯೆ ನೀಡಿದ್ದಾರೆ. https://ainlivenews.com/amit-shah-talks-successful-former-cm-says-goodbye-to-congress/ ನಗರದಲ್ಲಿ ಮಾತನಾಡಿದ ಅವರು,   ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಗೊತ್ತಿಲ್ಲ ಆಗೊಂದು ವೇಳೆ ಹೋದರೆ ಅದು ವಿಪರ್ಯಾಸ , ಶೆಟ್ಟರ್ ಅಂತ ನಾಯಕರಿಗೆ ಸರಿ ಹೋಗಲ್ಲ ಎಂದು ಹೇಳಿದ್ದಾರೆ. ಶೆಟ್ಟರ್ ಹೋದ್ರೂ ಅದರಿಂದ ನಮಗೆ ನಷ್ಟವೇನಿಲ್ಲ ಆದರೆ ಲಕ್ಷ್ಮಣ್ ಸವದಿಯವರು‌ ಹೋಗಲ್ಲ ನಾನು ಅವರ ಬಳಿಯೂ ಮಾತನಾಡಿದ್ದೇನೆ ಅವರು ಹೋಗಲ್ಲ ಎಂದಿದ್ದಾರೆ

Read More