Author: AIN Author

ಬೆಂಗಳೂರು: ಬಿಜೆಪಿಯಿಂದ (BJP) ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಇಂದು  ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿ ಮಾತನಾಡಿದ ಅವರು, “ವಿಧಾನಸಭಾ ಚುನಾವಣೆ ವೇಳೆ ಕೆಲವು ಕಾರಣಗಳಿಗಾಗಿ ಬಿಜೆಪಿ ತೊರೆದಿದ್ದೆ. ಮತ್ತೆ ನಮ್ಮ ನಾಯಕರು ಮರಳಿ ಪಕ್ಷಕ್ಕೆ ಬಾ ಎಂದು ವಿನಂತಿಸಿಕೊಂಡರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮರಳಿ ಪಕ್ಷಕ್ಕೆ ಬಂದಿರುವೆ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಹೀಗಾಗಿ ಪಕ್ಷಕ್ಕೆ ಮತ್ತೆ ದುಡಿಯುತ್ತೇನೆ” ಎಂದರು. ಬಿಜೆಪಿ ಪಕ್ಷಕ್ಕೆ ಮರು ಸೇರ್ಪಡೆ ಆಗುತ್ತಿರೋದು ನನಗೆ ಸಂತೋಷದ ಸಂಗತಿ. ಕಾಂಗ್ರೆಸ್‌ ವಿಧಾನಪರಿಷತ್ ಸದಸ್ಯತ್ವಕ್ಕೆ ನಾನು ಈಗಾಗಲೇ ರಾಜೀನಾಮೆ ಕೊಟ್ಟಿದ್ದೇನೆ. ಇ-ಮೇಲ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೂ ಸಹ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಮೂಲಕ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಇವತ್ತು ನಮ್ಮ ದೇಶದ ಮುಂದಿರೋದು ಎಲ್ಲರನ್ನು ಒಗ್ಗೂಡಿಸುವುದು. ರಕ್ಷಣೆ ಹಾಗೂ…

Read More

ಮಂಡ್ಯ: ಹೊಟ್ಟೆಕಿಚ್ಚಿಗೆ ಬೆಳೆದು ನಿಂತ ಅಡಿಕೆ ಮತ್ತು ತೆಂಗು ಸಸಿಗಳನ್ನು ಕಡಿದು ಹಾಕಿರುವ ಘಟನೆ ನಾಗಮಂಗಲ ತಾಲ್ಲೂಕಿನ ದೊಡ್ಡಚಿಕ್ಕನಹಳ್ಳಿ‌ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ್ ಎಂಬ ರೈತನ ಜಮೀನಿನಲ್ಲಿ ಈ ಕೃತ್ಯ ನಡೆದಿದ್ದು, 2 ತೆಂಗಿನ ಗಿಡ 39 ಅಡಿಕೆ ಸಸಿಗಳನ್ನ ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಇನ್ನೀ ಈ ಘಟನೆ ಸಂಬಂಧ ಶ್ರೀನಿವಾಸ್ ಸಹೋದರ ಕೃಷ್ಣೇಗೌಡರಿಂದ ಪೊಲೀಸ್ ಠಾಣೆಗೆ ದೂರು ನಿಡಿದ್ದು, ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲು ಮಾಡಲಾಗಿದೆ.

Read More

ಬೆಂಗಳೂರು: ಕಾಂಗ್ರೆಸ್ ನನಗೆ ಮರುಜೀವ ಕೊಟ್ಟಿದೆ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ನೆನ್ನೆ ಬೆಳಗ್ಗೆ ಸಹ ನನ್ನೊಂದಿಗೆ ಅವರು ಹೇಳಿದ್ದರು. ಹಿರಿಯ ರಾಜಕೀಯ ನಾಯಕರು ಈಗ ಈ ರೀತಿ ಮಾಡಿರುವುದು ವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ನಗರದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಜನ ಅವರನ್ನು ಮುವತ್ತು ಸಾವಿರ ಕ್ಕಿಂತ ಹೆಚ್ಚು ಮತಗಳಿಂದ ಅವರನ್ನು ತಿರಸ್ಕರಿಸಿದ್ದರು ಕಾಂಗ್ರೆಸ್​ ಪಕ್ಷದವರು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದೇವೆ. ಇದೀಗ ಅವರು ಯಾವ ಕಾರಣದಿಂದ ಬಿಜೆಪಿ ಸೇರ್ಪಡೆಯಾಗಿದ್ದಾರೆ? ಯಾವ ಒತ್ತಡಕ್ಕೆ ಒಳಗಾಗಿ ಈ ತೀರ್ಮಾನ ಕೈಗೊಂಡಿದ್ದಾರೆ? ಎನ್ನುವುದರ ಬಗ್ಗೆ ಅವರು ಮೊದಲು ತಿಳಿಸಲು ಬಳಿಕ ನಾನು ಮಾತನಾಡುತ್ತೇನೆ ಎಂದರು. ಕಾಂಗ್ರೆಸ್​ ಪಕ್ಷದ ಅಧ್ಯಕ್ಷನಾಗಿ ನನಗೆ ಇನ್ನೂ ಅವರ ರಾಜಿನಾಮೆ ಪತ್ರ ತಲುಪಿಲ್ಲ, ಕಾಂಗ್ರೆಸ್ ಪಕ್ಷದವರು ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಸದ್ಯ ಅವರು ಬಿಜೆಪಿಗೆ ಹೋಗಿದ್ದರೂ ಬೇರೆ ಯಾರು ನಮ್ಮ ಪಕ್ಷವನ್ನು ಬಿಟ್ಟುಹೋಗುವುದಿಲ್ಲ ಎಂದು ಅವರು ಹೇಳಿದರು.

Read More

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಿಜೆಪಿಗೆ ವಾಪಸಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಮಧುರಾ ಕಾಲೋನಿಯಲ್ಲಿರುವ ಜಗದೀಶ ಶೆಟ್ಟರ ನಿವಾಸದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಪಾಲಿಕೆ ಸದಸ್ಯರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಶೆಟ್ಟರ ನಿವಾಸದಲ್ಲೇ ಕುಳಿತು ಘರ್ ಪಾಪ್ಸಿಯ ದೃಷ್ಯವನ್ನು ಟಿವಿಯಲ್ಲಿ ನೋಡುತ್ತ, ಪ್ರಧಾನಿ ನರೇಂದ್ರ ಮೋದಿ, ಪ್ರಹ್ಲಾದ ಜೋಶಿ ಹಾಗೂ ಜಗದೀಶ ಶೆಟ್ಟರಗೆ ಜೈಕಾರ ಹಾಕುತ್ತ ಸಂಭ್ರಮಿಸಿದರು. ಅಲ್ಲದೆ, ಶೆಟ್ಟರ್ ಭಾವಚಿತ್ರ ಹಾಗೂ ಬಿಜೆಪಿ ಧ್ವಜ ಹಿಡಿದು ಘೋಷಣೆ ಕೂಗಿ ಕುಣಿದು ಕುಪ್ಪಳಿಸಿದರು. ಬಳಿ ಮಾತನಾಡಿದ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಗದೀಶ ಶೆಟ್ಟರ ಕಾಂಗ್ರೆಸ್ ಪಕ್ಷ ಸೇರಿದಾಗ ಬಹುತೇಕ ಅವರ ಜೊತೆಗಿದ್ದವರು ಕಾಂಗ್ರೆಸ್ ಸೇರಿದ್ದರು. ಆದರೆ, ಜಗದೀಶ ಶೆಟ್ಟರ ಪ್ರಭಾವವನ್ನು ಅರಿತ ಬಿಜೆಪಿ ಹಿರಿಯ ನಾಯಕರು ಜಗದೀಶ ಶೆಟ್ಟರ ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಂಡಿದ್ದಾರೆ. ಶೆಟ್ಟರ ಜೊತೆಗೆ ಯಾವೆಲ್ಲ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದರು ಅವರೆಲ್ಲ ಬಿಜೆಪಿಗೆ ವಾಪಸಾಗಲಿದ್ದಾರೆ. ದೇಶದ ಪ್ರಧಾನ…

Read More

ಬೆಂಗಳೂರು: ನಾಳೆಯಿಂದ ನಮ್ಮ ಮೆಟ್ರೊದ ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು 3 ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ. ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗದ ಪೂರ್ವ ನಿಯೋಜಿತ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ, ಜ.26ರಿಂದ 28ರವರೆಗೆ ಮೆಟ್ರೊ ರೈಲು ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಿದೆ. ಈ ದಿನಗಳಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವಿನ ರೈಲು ಸಂಚಾರ ಎಂದಿನಂತೆ ಇರಲಿದೆ. ನೇರಳೆ ಬಣ್ಣದ ಮಾರ್ಗದಲ್ಲೂ ಯಾವುದೇ ವ್ಯತ್ಯಯ ಇರುವುದಿಲ್ಲ. ಜ. 29ರ ಬೆಳಿಗ್ಗೆ 5 ಗಂಟೆಯಿಂದ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಸೇವೆಗಳು ಪುನರಾರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಈ ಮೂರು ದಿನ ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆ ಇರುವುದರಿಂದ, ವಾಟ್ಸ್‌ಆ್ಯಪ್, ನಮ್ಮ ಮೆಟ್ರೊ ಅಥವಾ ಇತರ ಅಪ್ಲಿಕೇಶನ್‌ಗಳ ಮೂಲಕ ಕ್ಯೂಆ‌ರ್ ಟಿಕೆಟ್‌ಗಳನ್ನು ಖರೀದಿಸಿ ಎಂದು ಪ್ರಯಾಣಿಕರಲ್ಲಿ…

Read More

ಹುಬ್ಬಳ್ಳಿ: ಅತ್ತ ಶೆಟ್ಟರ್ ಬಿಜೆಪಿ ಸೇರ್ಪಡೆ ಆಗುತ್ತಲೇ ಇತ್ತ ಡಿಕೆಶಿ ಆಪ್ತರಿಗೆ ಗಾಳ ಹಾಕಲು ಬಿ. ವೈ. ವಿಜಯೇಂದ್ರ ಮುಂದಾ ಗಿದ್ದಾರೆ. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ರಾಜೀನಾಮೆ ಪರ್ವ ಆರಂಭ ವಾಗಿದೆ. ಹೌದು.. ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಯಿಂದ ಮರ್ಮಘಾತಕ್ಕೊಳ್ಳಗಾಗಿರುವ ಕಾಂಗ್ರೆಸ್ ಧಾರವಾಡ ಪಾಳೆಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಘರ್ ವಾಪಸ್ಸಿ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭ ವಾಗಿದ್ದು, ಧಾರವಾಡ ಜಿಲ್ಲೆಯ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿರೇಶ ಉಂಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಅಪಾರ ಬೆಂಬಲಿಗರೊಂದಿಗೆ ನಾಳೆ ಬಿಜೆಪಿ ಸೇರ್ಪಡೆ ಆಗಲಿರುವ ಕಾಂಗ್ರೆಸ್ ಮುಖಂಡ ವೀರೇಶ ಉಂಡಿ. ಕಾಂಗ್ರೆಸ್ ಒಡನಾಟಕ್ಕೆ ಬ್ರೇಕ್ ಹಾಕಿ ಕಮಲ ಹಿಡಿಯಲಿದ್ದಾರೆ.

Read More

ಚಾಮರಾಜನಗರ: ಮನ್ ಕಿ ಬಾತ್‌ʼನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಕವಿ ಮಂಜುನಾಥ್‌ಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಜೋಗುಳ ಪದ ರಚಿಸಿದ್ದ ಕೊಳ್ಳೇಗಾಲದ ಕವಿ ಮಂಜುನಾಥ್ ಅವರಿಗೆ ಕೇಂದ್ರ ಸರ್ಕಾರದ ದೆಹಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಬಂದಿದೆ. ವೃತ್ತಿಯಲ್ಲಿ ಎಲ್ಐಸಿ ವಿಮಾ ಪಾಲಿಸಿದಾರರಾಗಿರುವ ಮಂಜುನಾಥ್‌, ಪ್ರವೃತ್ತಿಯಲ್ಲಿ ಕವಿಯಾಗಿದ್ದಾರೆ.  ಕೋವಿಡ್ ವೇಳೆ ‘ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ’ ಎಂಬ ಸಾಲಿನಿಂದ ಜೋಗುಳ ಪದ ರಚಿಸಿದ್ದರು. ಕೇಂದ್ರ ಸರ್ಕಾರದ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆನ್‌ಲೈನ್ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆ ಆಯೋಜಿಸಲಾಗಿತ್ತು. ಪುತ್ರನ ಒತ್ತಾಸೆಗೆ ಮಣಿದು ಜೋಗುಳದ ಹಾಡು ರಚಿಸಿದ್ದ ಕವಿ ಮಂಜುನಾಥ್.ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಪೆನ್ ಎ ಲೋರಿ ಎಂಬ ಜೋಗುಳ ಗೀತೆ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯ ಕವಿ ಮಂಜುನಾಥ್ ಪ್ರಥಮ ಸ್ಥಾನ ಪಡೆದಿದ್ದರು.

Read More

ಚಾಮರಾಜನಗರ: ಬಲೆಗೆ ಸಿಲುಕಿ ಸಾವು ಬದುಕಿನೊಡನೆ ಹೋರಾಟ ಮಾಡುತ್ತಿದ್ದ ನಾಗರಹಾವನ್ನೂ ಉರುಗಪ್ರೇಮಿ ಮಹೇಶ್ ರಕ್ಷಣೆ ಮಾಡಿದ್ದಾರೆ. ಚಾಮರಾಜನಗರ ತಾಲೋಕು ದಾಸನಹುಂಡಿ ಗ್ರಾಮದಲ್ಲಿ ಬೆಳೆ ರಕ್ಷಣೆಗೆ ಜಮೀನಿನ ಸುತ್ತ ಅಳವಡಿಸಿದ್ದ ಬಲೆ ನಾಗರಹಾವು ಸಿಲುಕಿದೆ. ಈ ವೇಳೆ ಸಾವು ಬದುಕಿನೊಡನೆ ಹೋರಾಟ ಮಾಡುತ್ತಿತ್ತು. ಸಾವಿನಂಚಿನಲ್ಲಿದ್ದ ನಾಗರಹಾವು ರಕ್ಷಣೆ ಮಾಡಿ ಉರುಗಪ್ರೇಮಿ ಮಹೇಶ್  ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Read More

ಬೆಂಗಳೂರು: ಬಿಡಿಎ ಅಂದ್ರೆ ಬೋಗಸ್,ಬಂಡಲ್ ಅಂತ ಜನ ಉಗಿಯುತ್ತಿರ್ತಾರೆ.ಈಗೇ ಇದ್ರೂ ಅಧಿಕಾರಿಗಳು ಕೊಡೋ ಬಿಲ್ಡಪ್ ಮಾತ್ರ ಬೀಡ್ತಿಲ್ಲ.ಇರೋ ಲೇಔಟ್ಗಳನ್ನ ನೆಟ್ಟಿಗೆ ಮಾಡೋಕೆ ಆಗ್ತಿಲ್ಲ.ಹೀಗಿರುವಾಗ ಮತ್ತಷ್ಟು ಹೊಸ ಲೇಔಟ್ ಗಳನ್ನ ಮಾಡ್ತೀವಿ ಅಂತ ಬಿಡಿಎ ಅಧಿಕಾರಿಗಳು ಹೊರಟಿದ್ದಾರೆ‌.ಆದ್ರೆ ಇತ್ತ ರೈತರು ಮಾತ್ರ ಪ್ರಾಣ ಕೊಟ್ಟೇವೋ ಬಿಡಿಎಗೆ ಜಾಗ ಬಿಡೋದಿಲ್ಲ ಅಂತ ಹೇಳಿದ್ರೂ ಅದೇ ಲೇಔಟ್ ಮೇಲೆ ಬಿಡಿಎ ಕಣ್ಣು ಬಿದ್ದಿದೆ. . ಬಿಡಿಎ. ಇದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ.ಬೆಂಗಳೂರು ನಗರದಲ್ಲಿ ಲೇಔಟ್ ಗಳನ್ನು ಮಾಡೋದು ಫ್ಲಾಟ್ ಗಳನ್ನ ಕಟ್ಟಿ ಬಡವರಿಗೆ ರಿಯಾಯಿತಿ ದರದಲ್ಲಿ ನೀಡೋದು ಇದರ ಕೆಲಸ. ಆದ್ರೆ ದಿನಕಳೆಂದೆ ಬಿಡಿಎ ಪ್ಲಾಟ್ ಹಾಗೂ ಬಡಾವಣೆಗಳನ್ನ ಸರಿಯಾಗಿ ನಿರ್ಮಾಣ ಮಾಡ್ತಿಲ್ಲ. ನಿರ್ಮಾಣ ಮಾಡಿರೋ ಲೇಔಟ್ ಹಾಗೂ ಫ್ಲಾಟ್ಗ ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಯೋಗ್ಯತೆ ಇಲ್ಲ. ಹೀಗಾಗಿ ಜನ ಬಿಡಿಎ ಅಧಿಕಾಇರಿಗಳು ಥೂ ಅಂತ ಉಗಿಯುತ್ತಿದ್ದಾರೆ. ಈ ನಡುವೆ ಹೊಸ ಲೇಔಟ್ ಗಳ ಮಾಡೋಕೆ ಬಿಡಿಎ ಹೊರಟಿದೆ. ಹೌದು.. ಹೌದು..ಈಗಾಗಲೇ ಡಾ.ಶಿವರಾಮ ಕಾರಂತ…

Read More

ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ (Dating)ನಲ್ಲಿ ಇರುವ ವಿಚಾರ ಹಾಗಾಗ್ಗೆ ಮುನ್ನೆಲೆಗೆ ಬರುತ್ತದೆ. ಅದರಲ್ಲೂ ಈಸ್ ಮೈಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ (Nishant Pitti) ಜೊತೆ ಕಂಗನಾ ಕಾಣಿಸಿಕೊಂಡಾಗೆಲ್ಲ ಇಬ್ಬರ ಹೆಸರೂ ತಳುಕು ಹಾಕಿಕೊಳ್ಳುತ್ತದೆ. ಈ ಬಾರಿಯೂ ಅದೇ ಆಗಿದೆ. ನಿಶಾಂತ್ ಜೊತೆ ಕಂಗನಾ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಸುದ್ದಿ ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದಂತೆಯೇ ಕಂಗನಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ನಿಶಾಂತ್ ಮದುವೆ ಆಗಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ. ನಿಶಾಂತ್ ಅವರಿಗೆ ಈಗಾಗಲೇ ಮದುವೆ ಆಗಿದೆ. ನಮ್ಮಿಬ್ಬರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಅವರ ಸಂಸಾರ ಹಾಳು ಮಾಡಬೇಡಿ. ನಾನು ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದರೂ, ಅದನ್ನು ಹೇಳುವುದಕ್ಕಾಗಿ ಸಮಯ ಕೊಡಿ ಎಂದು ಕಂಗನಾ ಹೇಳಿದ್ದಾರೆ. ಈ ನಡುವೆ  ಕಂಗನಾ ರಣಾವತ್  ಮತ್ತೊಂದು ಸುದ್ದಿಯನ್ನೂ ನೀಡಿದ್ದಾರೆ. ಕಂಗನಾ ನಟನೆಯ ‘ಎಮರ್ಜೆನ್ಸಿ’ (Emergency) ಸಿನಿಮಾ ನವೆಂಬರ್ 24ರಂದು ರಿಲೀಸ್ (Release) ಆಗಬೇಕಿತ್ತು. ಆದರೆ,…

Read More