Author: AIN Author

ಬೆಂಗಳೂರು:- ಜೆಡಿಎಸ್ ಗೆ ಮಂಡ್ಯ ಕ್ಷೇತ್ರವೇ ಯಾಕೆ ಬೇಕು!? ಎಂದು ಕೆಸಿ ನಾರಾಯಣಗೌಡ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಲ್ಲಿಂದು ಮಂಡ್ಯದ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರನ್ನು ಭೇಟಿಯಾಗಲು ಬಂದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಗೌಡರು, ಮಂಡ್ಯ ಕ್ಷೇತ್ರದಿಂದ ಸುಮಲತಾ ಮೇಡಂ ಅವರೇ ಸ್ಪರ್ಧಿಸಲಿ ಅಂತ ಅವರನ್ನು ಕೋರಲು ಇಲ್ಲಿಗೆ ಬಂದಿದ್ದೇವೆ ಎಂದರು. ಕುಮಾರಸ್ವಾಮಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಮತ್ತು ಅವರನ್ನು ಕೇಂದ್ರದಲ್ಲಿ ಸಚಿವ ಮಾಡುವ ಮಾತುಗಳು ಕೇಳಿಬರುತ್ತಿರೋದು ಸರಿ, ಅದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ. ಆದರೆ ಮಂಡ್ಯದಿಂದ ಸುಮಲತಾ ಮೇಡಂ ಅವರೇ ಸ್ಪರ್ಧಿಸಬೇಕು, ಬಿಜೆಪಿ ಟಿಕೆಟ್ ಗಾಗಿ ತಾವು ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದು ನಾರಾಯಣ ಗೌಡ ಹೇಳಿದರು.

Read More

ಕಲಬುರ್ಗಿ:- ಆಟೋ ಟಚ್​ ಆಗಿ ಬೈಕ್​ನಿಂದ ಬಿದ್ದಿದ್ದ ಸವಾರನ ಮೇಲೆ ಕೆಎಸ್​​ಆರ್​​ಟಿಸಿ ಬಸ್ ಹರಿದು ಬೈಕ್​ ಸವಾರ ಮೃತಪಟ್ಟ ಘಟನೆ ಕಲಬುರಗಿ ನಗರದ ಹುಮನಾಬಾದ್ ರಸ್ತೆಯಲ್ಲಿ ಜರುಗಿದೆ. 34 ವರ್ಷದ ಸೋಮಶೇಖರ್ ಮೃತ ದುರ್ದೈವಿ ಎನ್ನಲಾಗಿದೆ. ದಾಲ್‌ ಮೀಲ್‌ನಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ಹೊರಟಿದ್ದ ಸೋಮಶೇಖರ್, ಇತ್ತ ಬೀದರ್ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ KSRTC ಬಸ್ ನಡುವೆ ಈ ದುರಂತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಹುಬ್ಬಳ್ಳಿ:ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿರುವುದು ಖುಷಿಯಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಗದೀಶ ಶೆಟ್ಟರ್ ಪಕ್ಷವನ್ನ ತೊರೆದಿರುವುದು ನಮ್ಮ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಬಿಜೆಪಿಗರಿಗೆ ಸಂತಸವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ನಮಗೂ ಸಂತಸವಾಗಿದೆ. ಶೆಟ್ಟರ್ ಅವರಿಗೆ ನಮ್ಮ ಪಕ್ಷದಲ್ಲಿ ಉತ್ತಮ ಸ್ಥಾನಮಾನ ನೀಡಿದ್ದೆವು. ಆದರೆ ಅವರು ಈ ರೀತಿ ಏಕಾಏಕಿ ಪಕ್ಷ ತೊರೆದಿದ್ದಾರೆ. ಶೆಟ್ಟರ್ ಅವರ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಅವರೊಬ್ಬ ಅವಕಾಶವಾದಿಗಳು ಅನ್ನಿಸುತ್ತೆ ಎಂದು ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಬಿಜೆಪಿಗೂ ನಮ್ಮ ಪಕ್ಷಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶೆಟ್ಟರ್ ಅವರ ಮೇಲೆ ನನಗೆ ಅಪಾರ ಗೌರವವಿದೆ. ಆದರೆ ಅವರು ಪಕ್ಷ ಬಿಟ್ಟು ಹೋದದ್ದು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ನಮ್ಮದು ಡಬಲ್ ಡೆಕ್ಕರ್ ಬಸ್ ಎಂದು ಶೆಟ್ಟರ್ ಹೋಗಿರುವುದು ಸಂತೋಷ ಎಂದಿದ್ದಾರೆ

Read More

ರಾಯಚೂರು:- ತರಗತಿ ನಡೆಯುತ್ತಿದ್ದ ಸಂದರ್ಭದಲ್ಲೇ ಸೀಲಿಂಗ್ ಗಾರೆ ಕಿತ್ತುಬಿದ್ದ ಘಟನೆ ದೇವದುರ್ಗದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ. 7ನೇ ತರಗತಿಯ ವಿದ್ಯಾರ್ಥಿನಿ ಶ್ರೀದೇವಿ ಎಂಬುವವರ ಬಲಕಾಲಿನ ಬೆರಳು ಕಟ್ ಆಗಿದೆ. ಕೂಡಲೇ ವಿದ್ಯಾರ್ಥಿನಿಗೆ ರಾಯಚೂರಿನ ರಿಮ್ಸ್ ‌ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಟಿವಿ9 ವರದಿ ಮಾಡುತ್ತಾ ಬಂದಿದ್ದು, ಇದೀಗ ವಿದ್ಯಾರ್ಥಿನಿ ಕಾಲು ಬೆರಳೆ ಕಟ್​ ಆಗಿದೆ. ಹಾಳಾದ ಶಾಲಾ ಕಟ್ಟಡದಲ್ಲಿ ನಿತ್ಯ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದ್ದು, ಜೀವ ಭಯದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಪಾಠ ಕೇಳುವಂತಾಗಿದೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ಘಟನೆ ಬಳಿಕ ದೇವದುರ್ಗ ತಾಲ್ಲೂಕು ಬಿಇಓ ಸುಖದೇವ್ ಹಾಗೂ ಇತರೆ ಅಧಿಕಾರಿಗಳು ಓಡೋಡಿ ಬಂದಿದ್ದಾರೆ. ಈ ಕುರಿತು ಮಾತನಾಡಿದ ಬಿಇಓ ‘ಕಳೆದ ವರ್ಷವೇ ಶಾಲೆ ಸ್ಥಳಾಂತರಿಸಲು ಆದೇಶಿಸಿದ್ದೆ. ಅದರಂತೆ ಕಟ್ಟಡ ಶಿಥಿಲಗೊಂಡ ಬಳಿಕ ಉರ್ದು ಶಾಲೆ ಬಂದ್ ಆಗಿ,…

Read More

ಚನ್ನರಾಯಪಟ್ಟಣ: ಅಯೋಧ್ಯೆಯಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮ ಹಿನ್ನೆಲೆ ಪಟ್ಟಣದ ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ರಾತ್ರಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀರಾಮ ಉತ್ಸವ ದೀಪೋತ್ಸವದಲ್ಲಿ 1111 ದೀಪಗಳನ್ನು ವಿತರಿಸಲಾಯಿತು, ಬೆಳಕಿನ ಜ್ಯೋತಿಯನ್ನು ಒಬ್ಬರಿಂದ ಒಬ್ಬರಿಗೆ ಹಚ್ಚುವ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರ, ಬಾಂಧವ್ಯ ಮೆರೆದ ನಗರದ ಮಹಿಳೆಯರು ಉತ್ತರ ದಿಕ್ಕಿಗೆ ನಿಂತು ದೀಪ ಬೆಳಗುವ ಮೂಲಕ ಶ್ರೀ ರಾಮ್, ಜಯ್ ರಾಮ್ ಜಯ್ ಜಯ್ ರಾಮ್ ಎಂದು ಘೋಷಣೆಗಳನ್ನು ಕೂಗುವ ಮೂಲಕ ಗಾಂಧಿ ವೃತ್ತ ಮಾರ್ಗವಾಗಿ ದೀಪೋತ್ಸವ ಮೆರವಣಿಗೆ ಮಾಡಿ ನಂತರ ಶ್ರೀ ರಾಮ್ ದೇವರಿಗೆ ಮಹಾಮಂಗಳಾರತಿ ನಡೆಸಿ ಭಾಗವಹಿಸಿದ ಸರ್ವ ಭಕ್ತಾದಿಗಳಿಗೂ ಕಡಲೆಕಾಳು ಹಾಗೂ ಪುಳಿಯೋಗರೆ ಪ್ರಸಾದವನ್ನು ವಿತರಣೆ ಮಾಡಲಾಯಿತು, ಶ್ರೀ ರಾಮ ದೇವರ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು. ಈ ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದೆ ಹಾಗೂ ರಾಯರಂಗಮಂದಿರದ ನಿರ್ದೇಶಕಿ ಸ್ವಾತಿ ಪಿ ಭಾರದ್ವಾಜ್, ರಾಯರ ರಂಗಮಂದಿರದ ಅಧ್ಯಕ್ಷರಾದ ಶ್ರೀಮತಿ ಅನಿತಾ,…

Read More

ಚನ್ನರಾಯಪಟ್ಟಣ: ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನು ದೇವೇಗೌಡರು ಘೋಷಿಸಿದ್ದಾರೆ. ಅವರು ಸೂಚಿಸುವ ವ್ಯಕ್ತಿಯನ್ನು ಲೋಕಸಭೆಗೆ ಕಳುಹಿಸಬೇಕಿದೆ. ಇದರಿಂದ ಜಿಲ್ಲೆಯ ಸರ್ವಾಂಗೀಣ ಪ್ರಗತಿಯಾಗುತ್ತದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು. ಪಟ್ಟಣದಲ್ಲಿ ಕರಿಯಪ್ಪ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಪರವಾಗಿ ಕ್ಷೇತ್ರದ ಜನರು ನಿಂತಿದ್ದಾರೆ, ಮುಂದೆ ಬರುವ ಚುನಾವಣೆಯಲ್ಲಿಯೂ ಮತದಾರರು ಜೆಡಿಎಸ್‌ ಪರ ನಿಲ್ಲಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನ ಮಂತ್ರಿಯಾದ ಎಚ್ ಡಿ ದೇವೇಗೌಡ,ಮಾಜಿ ಮಂತ್ರಿಗಳಾದ ಎಚ್ ಡಿ ರೇವಣ್ಣ, ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಶಾಸಕ ಸಿ ಎನ್ ಬಾಲಕೃಷ್ಣ, ಮಾಜಿ ಶಾಸಕ ಲಿಂಗೇಶ್, ಜೆಡಿಎಸ್ ಮುಖಂಡರಾದ ಪರಮ ದೇವರಾಜೇಗೌಡ, ಸಿ ಕೆ ಕುಸುಮ ರಾಣಿ, ಮಮತಾ ರಮೇಶ್, ಅಂಬಿಕಾ ರಾಮಣ್ಣ, ನವಿಲು ಹೊಸೂರು ಚಂದ್ರಪ್ಪ, ಎಸ್ ಪಿ ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.

Read More

ಕಂಪ್ಲಿ : ಜ 25 ಡಾ| ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಅಪಮಾನಿಸಿ ಬಂಧನಕ್ಕೊಳಗಾದ ದುಷ್ಕರ್ಮಿಗಳಿಗೆ ಕಾನೂನು ರೀತಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ವಿದ್ಯಾರ್ಥಿ ಘಟಕ ಮುಂದಾಳತ್ವದಲ್ಲಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟಕರಿಂದ ಕರ್ನಾಟಕ ರಾಜ್ಯ ಗೃಹ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಶಿವರಾಜ್ ಮೂಲಕ ಗುರುವಾರ ಸಲ್ಲಿಸಲಾಯಿತು. ಈ ಕುರಿತು ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ರವಿ ಮಣ್ಣೂರ್ ಮಾತನಾಡಿ ದಿನಾಂಕ 22.01.2024 ರಂದು ರಾತ್ರಿ ಸಮಯದಲ್ಲಿ ಕಲಬುರಗಿ ನಗರ ಕೋಟ್ಟೂರು ಡಿ. ಬಡಾವಣೆಯಲ್ಲಿ ಸ್ಥಾಪಿತವಾಗಿರುವ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ರವರ ಮೂರ್ತಿಗೆ ಕಿಡಿಗೇಡಿಗಳು ಗುಂಪು ಕೂಡಿಕೊಂಡು ಅಂಬೇಡ್ಕರ್ ಮೂರ್ತಿಗೆ ಅಪಮಾನಗೊಳಿಸಿ ಬಂಧನಕ್ಕೊಳಗಾಗಿದ್ದಾರೆ ಇಂತಹ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದರು. ಪ್ರಗತಿಪರ ಸಂಘಟಕರಾದ ಕೆ ಲಕ್ಷ್ಮಣ, ವಸಂತ್ ರಾಜ್ ಕಹಳೆ ಮಾತನಾಡಿ ಎಲ್ಲಾ ಜಾತಿ, ಧರ್ಮವಂತಗಳಿಗೆ ತಾರತಮ್ಯ ಮಾಡದೇ ಭಾರತ ದೇಶದಲ್ಲಿ ಎಲ್ಲಾರು ಸಮಾನತ ಸ್ವತಂತ್ರ ಸ್ವಾಭೀಮಾನದಿಂದ ಬದುಕಲು ಸಂವಿಧಾನ…

Read More

ಈ ಶುಕ್ರವಾರದಿಂದ ಪ್ರಾರಂಭವಾಗುವ ವಿಸ್ತೃತ ಮೂರು ದಿನಗಳ ವಾರಾಂತ್ಯಕ್ಕೆ ಬ್ಯಾಂಕುಗಳು ಸಜ್ಜಾಗುತ್ತಿವೆ. ಈ ನಡುವೆ ನೀವು ರಜೆಯ ಬಗ್ಗೆ ತಿಳಿದಿರಬೇಕಾಗುತ್ತದೆ. ಈ ಒಟ್ಟು 16 ರಜಾದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು, ಭಾನುವಾರಗಳು ಮತ್ತು ಹೆಚ್ಚುವರಿ ಪ್ರಾದೇಶಿಕ ರಜಾದಿನಗಳು ಸೇರಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರಾಷ್ಟ್ರೀಯ ಅಥವಾ ರಾಜ್ಯ ರಜಾದಿನಗಳು, ಸಾಂಸ್ಕೃತಿಕ ಅಥವಾ ಧಾರ್ಮಿಕ ಆಚರಣೆಗಳು, ಕಾರ್ಯಾಚರಣೆಯ ಅವಶ್ಯಕತೆಗಳು, ಸರ್ಕಾರಿ ಪ್ರಕಟಣೆಗಳು ಮತ್ತು ಇತರ ಬ್ಯಾಂಕ್‌ಗಳೊಂದಿಗಿನ ಸಮನ್ವಯದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಕೆಲವು ರಾಜ್ಯಗಳಲ್ಲಿ ಮೂರು ದಿನಗಳ ಕಾಲ ರಜೆ ಇದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ಸತತವಾಗಿ ನಾಲ್ಕು ದಿನಗಳ ಕಾಲ ರಜೆ ಇರಲಿದೆ. ಉತ್ತರ ಪ್ರದೇಶ (ಯುಪಿ) ರಾಜ್ಯದಲ್ಲಿ ಹಜರತ್ ಅಲಿ ಅವರ ಜನ್ಮದಿನದ ಅಂಗವಾಗಿ ಜನವರಿ 25 ರಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲಾಗುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ…. ಈ ವಾರದ ಬ್ಯಾಂಕ್…

Read More

ರುಚಿಕರವಾದ ಮಶ್ರೂಮ್ ಕಬಾಬ್ ಮಾಡುವ ವಿಧಾನ ಇಲ್ಲಿದೆ ನೋಡಿ! ಬೇಕಾಗುವ ಪದಾರ್ಥಗಳು… ಮಶ್ರೂಮ್ – 200 ಗ್ರಾಂ ಕಬಾಬ್ ಪೌಡರ್ -ಒಂದು ಪ್ಯಾಕೆಟ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್- 1 ಚಮಚ ಖಾರದಪುಡಿ -ಅರ್ಧ ಚಮಚ ಚಿಕನ್ ಮಸಾಲ- ಅರ್ಧ ಚಮಚ ಮೊಟ್ಟೆ -ಒಂದು ಉಪ್ಪು- ರುಚಿಗೆ ತಕ್ಕಷ್ಟು ಎಣ್ಣೆ – ಸ್ವಲ್ಪ ಮಾಡುವ ವಿಧಾನ… ಮಶ್ರೂಮ್ ಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದಕ್ಕೆ ಕಬಾಬ್ ಪೌಡರ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದಪುಡಿ, ಚಿಕನ್ ಮಸಾಲೆ ಪುಡಿ, ಮೊಟ್ಟೆ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಸಾಲೆ ಹಿಡಿಯುವವರೆಗೆ ಕೈಯಾಡಿಸಿ. 10ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ನೆನೆಸಿಟ್ಟಿದ್ದ ಮಶ್ರೂಮ್ ಹಾಕಿ. ಅದು ಕೆಂಪು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿ. ಇದೀಗ ಬಿಸಿ ಬಿಸಿಯಾದ ಮಶ್ರೂಮ್ ಕಬಾಬ್ ಸವಿಯಲು ಸಿದ್ಧ.

Read More

ಬೆಂಗಳೂರು: ಲೋಕಸಭೆ ಚುನಾವಣೆ ಮುಂಚೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಮಾಣದ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಹೋಗಿರಲಿಲ್ಲ. ಬಿಜೆಪಿಯಲ್ಲಿ ಆಗಿರುವ ಬೇಸರದಿಂದ ಕಾಂಗ್ರೆಸ್ ಗೆ ಹೋಗಿದ್ದರು. ಅವರನ್ನು ನಾನು ಜನಸಂಘದಿಂದ ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಕಾಂಗ್ರೆಸ್ ಡಿಎನ್ ಎ ಒಗ್ಗುವುದಿಲ್ಲ. ಶೆಟ್ಟರ್ ಅವರ ದೇಹ ಮಾತ್ರ ಕಾಂಗ್ರೆಸ್ ಗೆ ಹೋಗಿತ್ತು. ಅವರ ಮನಸ್ಸು ಬಿಜೆಪಿಯಲ್ಲಿಯೇ ಇತ್ತು. ಅವರಿಗೆ ಕಾಂಗ್ರೆಸ್ ಸೇರಿದ ಮೇಲೆ ಅಲ್ಲಿನ ಮನಸ್ಥಿತಿ ಅರ್ಥವಾಗಿದೆ‌. ಇದು ಬಿಜೆಪಿ ಮತ್ತು ಜಗದೀಶ್ ಶೆಟ್ಟರ್ ಅವರಿಗೂ ಅನಕೂಲವಾಗಲಿದೆ ಎಂದು ಹೇಳಿದರು. https://ainlivenews.com/pakistans-stomach-starts-churning-what-did-pakistan-say-about-the-opening-of-the-ram-mandir/ ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಕೇವಲ ಬಿಜೆಪಿ ನಾಯಕರಷ್ಟೇ ಘರ್ ವಾಪಸಿ ಆಗುವುದಿಲ್ಲ. ಕಾಂಗ್ರೆಸ್ ನ…

Read More