Author: AIN Author

ಜನವರಿ 23 (ಮಂಗಳವಾರ) ರಂದು ಹೈದರಾಬಾದ್ ನಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ‌ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಪ್ರತಿಷ್ಠಿತ ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ ಏಕದಿನ ಮಾದರಿಯಲ್ಲಿ ಕಳೆದ ವರ್ಷ ಅತ್ಯಮೋಘ ಪ್ರದರ್ಶನ ತೋರಿದ್ದ ಶುಭಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧ ದ್ವಿಶತಕ (208 ರನ್) ಸಿಡಿಸಿದ್ದಲ್ಲದೆ,38 ಇನಿಂಗ್ಸ್ ನಲ್ಲಿ ವೇಗದ 2000 ಏಕದಿನ ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು. 2023ರ ಕ್ಯಾಲೆಂಡರ್ ವರ್ಷದಲ್ಲಿ ಮೂರು ಮಾದರಿ ಕ್ರಿಕೆಟ್ ನಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದ ಗಿಲ್, ಈ ಪ್ರದರ್ಶನದಿಂದಲೇ ಅವರು ಪಾಲಿ ಉಮ್ರಿಗಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. “ನಾನು ಅಂದು ಸಾಕಷ್ಟು ಉತ್ಕಂಠತೆ ಹೊಂದಿದ್ದೆ. ನಾನು ಮೊದಲ ಬಾರಿ ಇಲ್ಲಿಗೆ (ಬಿಸಿಸಿಐ ಪ್ರಶಸ್ತಿ ಸಮಾರಂಭ) ಬಂದು ನನ್ನ ಆರಾಧ್ಯದೈವ ಹಾಗೂ ಕ್ರಿಕೆಟ್ ದಿಗ್ಗಜರನ್ನು ಭೇಟಿಯಾದಾಗ ನನಗೆ 14 ವರ್ಷ ವಯಸ್ಸಾಗಿತ್ತು. ವಿರಾಟ್ ಭಾಯ್ ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ…

Read More

ಬೆಂಗಳೂರು: ಇಂದಿನಿಂದ ನಮ್ಮ ಮೆಟ್ರೊದ ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು 3 ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ. ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗದ ಪೂರ್ವ ನಿಯೋಜಿತ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ, ಇಂದಿನಿಂದ  28ರವರೆಗೆ ಮೆಟ್ರೊ ರೈಲು ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಿದೆ. ಈ ದಿನಗಳಲ್ಲಿ ಪೀಣ್ಯ ಇಂಡಸ್ಟ್ರಿ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವಿನ ರೈಲು ಸಂಚಾರ ಎಂದಿನಂತೆ ಇರಲಿದೆ. ನೇರಳೆ ಬಣ್ಣದ ಮಾರ್ಗದಲ್ಲೂ ಯಾವುದೇ ವ್ಯತ್ಯಯ ಇರುವುದಿಲ್ಲ. ಜ. 29ರ ಬೆಳಿಗ್ಗೆ 5 ಗಂಟೆಯಿಂದ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಸೇವೆಗಳು ಪುನರಾರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಈ ಮೂರು ದಿನ ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆ ಇರುವುದರಿಂದ, ವಾಟ್ಸ್‌ಆ್ಯಪ್, ನಮ್ಮ ಮೆಟ್ರೊ ಅಥವಾ ಇತರ ಅಪ್ಲಿಕೇಶನ್‌ಗಳ ಮೂಲಕ ಕ್ಯೂಆ‌ರ್ ಟಿಕೆಟ್‌ಗಳನ್ನು ಖರೀದಿಸಿ ಎಂದು ಪ್ರಯಾಣಿಕರಲ್ಲಿ…

Read More

ಸಂಗೀತಾ ಶೃಂಗೇರಿ (Sangeetha Sringeri) ಅವರು ಈ ಹೆಸರು ಕೇಳಿದರೆ ಸಾಕು ಬಿಗ್‌ ಬಾಸ್ (Bigg Boss Kannada 10) ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. ಮಾಡಿದ್ದೆ ಕೆಲವೇ ಸಿನಿಮಾ. ಆದರೆ ಬಿಗ್ ಬಾಸ್‌ಗೆ ಈ ಹುಡುಗಿ ಬಂದ ಮೇಲೆ ಮಾಡಿದ ಮೋಡಿ ಇದೆಯಲ್ಲ. ಅದನ್ನ ಮಾತ್ರ ಯಾರೂ ತಡೆಯಲು ಸಾಧ್ಯ ಇಲ್ಲ. ಹಾಗಿದ್ದರೆ ಸಂಗೀತಾಗೆ ಎಷ್ಟು ಲಕ್ಷ ಜನರು ಮೆಚ್ಚಿಕೊಂಡಿದ್ದಾರೆ? ಯಾಕೆ ಇದೇ ಹುಡುಗಿಯನ್ನು ಕರುನಾಡು ಆಯ್ಕೆ ಮಾಡಿಕೊಂಡಿದೆ? ಏನಿದರ ಹಿಂದಿನ ರಹಸ್ಯ? ಇಲ್ಲಿದೆ ಮಾಹಿತಿ. ಇನ್ನೇನು ಬಿಗ್‌ ಬಾಸ್ ಕಾರ್ಯಕ್ರಮ ಮುಗಿಯುತ್ತಿದೆ. ಕೆಲವೇ ದಿನಗಳಲ್ಲಿ ಅಂತಿಮ ಪರದೆ ಬೀಳಲಿದೆ. ಈ ಹೊತ್ತಲ್ಲಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಒಂದೇ. ಯಾರು ವಿನ್ನರ್? ಉತ್ತರಕ್ಕಾಗಿ ಇನ್ನು ಕೆಲವು ದಿನ ಕಾಯಬೇಕು. ಈ ಸಮಯದಲ್ಲಿಯೇ ಸಂಗೀತಾ ಹೆಸರು ಕೇಳಿ ಬರುತ್ತಿದೆ. ಮಾಡಿದ್ದು ಕೆಲವೇ ಸಿನಿಮಾ. ಅದರಲ್ಲೂ ‘777 ಚಾರ್ಲಿ’ ಸಿನಿಮಾ ಮಾಡಿದ ಮೇಲೆ ಇವರಿಗೆ ಹೆಸರು ಬಂತು. ಈಗ ಬಿಗ್ ಬಾಸ್‌ನಲ್ಲಿ ವಿನ್ನರ್ ಆಗುವ…

Read More

ಬಡ ಮಹಿಳೆಯರಿಗಾಗಿ ಸರ್ಕಾರ ಆರಂಭಿಸಿರುವ ಯೋಜನೆಯೇ ‘ಉದ್ಯೋಗಿನಿ ಸ್ಕೀಮ್’ . ಈ ಯೋಜನೆಯಡಿ ಮಹಿಳೆಯರು 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಪಡೆಯಬಹುದಾಗಿದೆ. ಸುಮಾರು 88 ವಿಧದ ಸಣ್ಣ ಉದ್ಯಮ ಆರಂಭಿಸಲು ಈ ಯೋಜನೆಯಡಿ ಬಡ್ಡಿರಹಿತ ಸಾಲ ದೊರೆಯುತ್ತದೆ.  ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆಯ ಲಕ್ಷಣಗಳೇನು, ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ. ಉದ್ಯೋಗಿನಿ ಯೋಜನೆ ಎಂದರೇನು? ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗಾಗಿ ಸಣ್ಣ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಮುಖ್ಯವಾಗಿ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ಸಣ್ಣ ಉದ್ಯಮ ಆರಂಭಿಸಲು ಬಂಡವಾಳಕ್ಕಾಗಿ ಈ ಯೋಜನೆಯಡಿ ಮಹಿಳೆಯರಿಗೆ 3 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಉದ್ಯೋಗಿನಿ ಯೋಜನೆ ಲಕ್ಷಣಗಳೇನು? ಉದ್ಯೋಗಿನಿ…

Read More

ಗಣರಾಜ್ಯೋತ್ಸವ ಶುಭಾಶಯಗಳು, ಸೂರ್ಯೋದಯ: 06:53, ಸೂರ್ಯಾಸ್ತ : 06:03 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯಮಾಸ , ಕೃಷ್ಣ ಪಕ್ಷ, ಉತ್ತರಾಯಣಂ, ಹೇಮಂತ ಋತು, ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಮ.12:06 ನಿಂದ ಮ.12:50 ತನಕ ಮೇಷ ರಾಶಿ: ನೌಕರರಿಗೆ ಸಿಹಿ ಸುದ್ದಿ, ಡೈವರ್ಸಾದವರಿಗೆ ಎರಡನೇ ವಿವಾಹ ಯೋಗ ಕೂಡಿ ಬರಲಿದೆ, ಸ್ವಂತ ವ್ಯವಹಾರಗಳ ವರಮಾನ ಹೆಚ್ಚಾಗಲಿದೆ, ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರವಾಸ ಯಶಸ್ವಿ,ವೃತ್ತಿ ಕ್ಷೇತ್ರದಲ್ಲಿ ಸ್ಥಾನದ ಬದಲಾವಣೆ ಸಾಧ್ಯತೆ, ಉದ್ಯೋಗದ ವರ್ಗಾವಣೆ ಕನಸು ನನಸಾಗಲಿದೆ, ಬಹುದಿನದ ಪ್ರಮೋಷನ್ ಇಂದು ತೆರೆಕಾಣಲಿದೆ, ಅವಿವಾಹಿತರಿಗೆ ಮದುವೆ ಭಾಗ್ಯ, ಉದ್ಯೋಗದ ಸಂದರ್ಶನ ನೀಡಿದ್ದು ಆ ಅಪ್ರತಿ ನಿಮ್ಮ ಕೈ ಸೇರಲಿದೆ, ಇದು ಮೊದಲಿನ ಯಶಸ್ಸಿನ ಹೆಜ್ಜೆ, ಇಲಾಖೆಯ ವೃತ್ತಿನಿರತರಿಗೆ ಅನಿರೀಕ್ಷಿತ ರೀತಿಯಲ್ಲಿ ಸಂಪಾದನೆ ಹೆಚ್ಚಾಗುವುದು, ಕೃಷಿಕರಿಗೆ…

Read More

ನವದೆಹಲಿ:- ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ದೇಶಕ್ಕೆ ಐತಿಹಾಸಿಕ ಕ್ಷಣವಾಗಿಗೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವನ್ನು ಭವಿಷ್ಯದ ಇತಿಹಾಸಕಾರರು ಭಾರತದ ನಾಗರಿಕತೆಯ ಪರಂಪರೆಯ ಮರು ಅನ್ವೇಷಣೆಯಲ್ಲಿ ಹೆಗ್ಗುರುತಾಗಿ ನೋಡುತ್ತಾರೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ದೇವಾಲಯದ ನಿರ್ಮಾಣವು ಪ್ರಾರಂಭವಾಯಿತು. ಈಗ ಅದು ಭವ್ಯ ಸೌಧವಾಗಿ ನಿಂತಿದೆ. ಇದು ಜನರ ನಂಬಿಕೆಗೆ ಸೂಕ್ತವಾದ ಅಭಿವ್ಯಕ್ತಿಯನ್ನು ನೀಡುತ್ತದೆ. ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ಅಗಾಧ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕರ್ಪೂರಿ ಜೀ ಅವರ ಕೊಡುಗೆಯಿಂದ ಸಾರ್ವಜನಿಕ ಜೀವನವನ್ನು ಶ್ರೀಮಂತಗೊಳಿಸಿದ್ದಕ್ಕಾಗಿ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ಅವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಅವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ದ್ರೌಪದಿ ಮುರ್ಮು ತಿಳಿಸಿದ್ದಾರೆ.

Read More

ಉತ್ತರ ಕನ್ನಡ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚೌಕನಗಾಳಾಯದಲ್ಲಿ ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜರುಗಿದೆ. ರಾಕೇಶ್​ ಮಹಾದೇವಪ್ಪ ಬಡಿಗೇರ, ರಿತೇಶ್ ಸುಬ್ರಹ್ಮಣ್ಯ ನಾಯರ್ ಹಾಗೂ ಕೃಷ್ಣ ವಣ್ಣುರಾಯ ಹರಿಜನ ಮೃತ ಯುವಕರು. ಅತಿವೇಗದ ಚಾಲನೆಯಿಂದ ಈ ದುರ್ಘಟನೆ ನಡೆದಿದ್ದು, ಜೊಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More

ಕೊಪ್ಪಳ;-ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಗಂಗಾವತಿಯಲ್ಲಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಶೆಟ್ಟರ್ ಬಿಜೆಪಿ ಗೆ ಸೇರ್ಪಡೆ ಯಾದ್ರೆ ಆತಂಕ ಪಡುವ ಅವಶ್ಯಕತೆ ಏನಿದೆ. ನಮಗೆ ಯಾವ ಆತಂಕವೂ ಇಲ್ಲ, ಶೆಟ್ಟರ್ ಹೋದ್ರೆ 136 ಜನರು ಹೋಗಿ ಬಿಡ್ತಾರಾ..? ಜಗದೀಶ ಅವರ ಜಾಗದಲ್ಲಿ ನಾನಿದ್ರೆ ರಾಜಕೀಯವಾಗಿ ಮನೇಲಿರ್ತಾಯಿದ್ದೆ. ಮಾಜಿ ಸಿ ಎಂ ಅಂತ ಅವರಿಗೆ ಟಿಕೇಟ್ ಕೊಟ್ಟು, ಸೋತ ಮೇಲು ಎಮ್ ಎಲ್ ಸಿ ಮಾಡಿದ್ರು. ಇಷ್ಟೆಲ್ಲ ಮಾಡಿದ್ರು ಪಕ್ಷ ಬಿಟ್ಟು ಹೋಗ್ತಾರೆ ಅಂದ್ರೆ ಅದು ಅವರ ತಪ್ಪು ನಿರ್ದಾರ. ಕಾಂಗ್ರೆಸ್ ಪಕ್ಷ ಇವರಿಗೆ ಎಷ್ಟೆಲ್ಲ ಜವಾಬ್ದಾರಿಯನ್ನ ಕೊಟ್ಟಿದ್ದಾರೆ. ಇಷ್ಟೆಲ್ಲ ಆದ ಮೇಲೆ ಪಕ್ಷ ಬಿಟ್ಟು ಹೋಗ್ತಾರೆ ಅದ್ರೆ ರಾಜ್ಯದ ಜನತೆ ಅವರ ಮೇಲೆ ಎಷ್ಟು ಗೌರವ ಇಟ್ಕೊತಾರೆ ಅಂತ ಗೊತ್ತಾಗುತ್ತೆ. ಹತ್ತು ವರ್ಷ ಆಳಿದ ಬಿಜೆಪಿ ಇಷ್ಟು ಕುಣಿಬೇಕಾದ್ರೆ 50 ವರ್ಷ ಕಾಂಗ್ರೆಸ್ ಆಳಿದೆ, ಏನೇನು ಕೊಡುಗೆ ಕೊಟ್ಟಿದೆ ಎಂದು ಜನರಿಗೆ…

Read More

ದಾವಣಗೆರೆ:- ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಯಲ್ಲಿ ಎರಡನೇ ಹೆಂಡತಿಗಾಗಿ ಮೊದಲ‌‌ ಪತ್ನಿಯನ್ನೇ ಕೊಂದು ಕೆರೆಗೆ ಹಾಕಿದ ಘಟನೆ ಜರುಗಿದೆ. ಕಾವ್ಯ ಹೀಗೆ ಕೊಲೆಯಾಗಿರುವ ಗೃಹಿಣಿಯಾಗಿದ್ದು, ಈಕೆ ಹೊಳಲ್ಕೆರೆ ತಾಲ್ಲೂಕಿನ ಕಾಗಳಗೆರೆ ಗ್ರಾಮದ ನಿವಾಸಿ ಸಚಿನ್ ಎನ್ನುವನನ್ನು ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಳು, ಅವರ ಮುದ್ದಾದ ಸಂಸಾರಕ್ಕೆ ಒಂದು ಮಗು ಕೂಡ ಇತ್ತು. ಆದರೆ, ಬೇರೆ ಮಹಿಳೆಯರ ಚಪಲ ಹೊಂದಿದ್ದ ಸಚಿನ್ ದಾವಣಗೆರೆ ತಾಲ್ಲೂಕಿನ ಕಡ್ಲೆಬಾಳು ಗ್ರಾಮದ ನಿವಾಸಿ ಚೈತ್ರ ಎಂಬಾಕೆಯ ಹಿಂದೆ ಬಿದ್ದಿದ್ದ. ಆಕೆಯನ್ನು ಕೂಡ ಎರಡನೇ ಮದುವೆಯಾಗಿದ್ದ ಎಂದು ಹೇಳಲಾಗುತ್ತಿದೆ. ಇನ್ನು ಇವರಿಬ್ಬರ ಸರಸಕ್ಕೆ ಕಾವ್ಯ ಅಡ್ಡಿಯಾದ ಹಿನ್ನಲೆ ಈಕೆಯನ್ನು ಕತ್ತು ಹಿಸುಕಿ ಸಾಯಿಸಿ ಗೋಣಿಚೀಲದಲ್ಲಿ ತುಂಬಿಕೊಂಡು ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆಗೆ ತಂದು ಹಾಕಿದ್ದಾರೆ. ಇತ್ತ ಕಾವ್ಯ ಕಾಣದೇ ಇರುವುದರಿಂದ ಅವರ ತವರು‌‌ ಮನೆಯವರು ಪೊಲೀಸರಿಗೆ‌ ದೂರು ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು ಗಂಡ ಸಚಿನ್​ನನ್ನು ಅವರ ಸ್ಟೈಲ್ ನಲ್ಲಿ ವಿಚಾರ ಮಾಡಿದಾಗ ಸತ್ಯಾಂಶ ಹೊರ‌ಬಂದಿದೆ. ಇನ್ನು ಕಾವ್ಯ…

Read More

ಬೆಂಗಳೂರು:- ರಾಜ್ಯದಲ್ಲಿ ಇಂದು 76 ಮಂದಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 5,037 ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, 76 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು ಯಾವುದೇ ಸಾವು ನೋವು ವರದಿಯಾಗಿಲ್ಲ. ಒಟ್ಟಾರೆಯಾಗಿ ರಾಜ್ಯದಲ್ಲಿ 349 ಸಕ್ರಿಯ ಪ್ರಕರಣಗಳಿವೆ. ನಿನ್ನೆಗಿಂತ ಇಂದು ಗುಣಮುಖರಾಗಿರುವವರ ಸಂಖ್ಯೆ ಹೆಚ್ಚಿದೆ. ಇನ್ನುಳಿದಂತೆ ಇಂದು ಕೋವಿಡ್‌ನಿಂದ ಗುಣಮುಖರಾಗಿ 349 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಪಾಸಿಟಿವಿಟಿ ದರ ಶೇ. 1.50 ಇದೆ. ಬೆಂಗಳೂರಿನಲ್ಲಿ ಇಂದು 25 ಪಾಸಿಟಿವ್‌ ಕೇಸ್‌ಗಳು ವರದಿಯಾಗಿದೆ. ಮೈಸೂರಿನಲ್ಲಿ 9, ಮಂಡ್ಯದಲ್ಲಿ 6, ತುಮಕೂರಿನಲ್ಲಿ 5, ದಕ್ಷಿಣ ಕನ್ನಡದಲ್ಲಿ 2 ಪ್ರಕರಣಗಳು ದಾಖಲಾಗಿದೆ.

Read More